Tag: international criminal court

  • ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯನ್ನು ವಾಂಟೆಡ್ ಲಿಸ್ಟ್‌ಗೆ  ಸೇರಿಸಿದ ರಷ್ಯಾ

    ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯನ್ನು ವಾಂಟೆಡ್ ಲಿಸ್ಟ್‌ಗೆ ಸೇರಿಸಿದ ರಷ್ಯಾ

    ಮಾಸ್ಕೋ: ಉಕ್ರೇನ್ (Ukraine) ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯವರ (Volodymyr Zelensky) ವಿರುದ್ಧ ರಷ್ಯಾ  (Russia) ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದು, ಅವರನ್ನು ವಾಂಟೆಡ್ ಪಟ್ಟಿಗೆ ಸೇರಿಸಲಾಗಿದೆ ಎಂದು ವರದಿಯಾಗಿದೆ.

    ಫೆಬ್ರವರಿ 2022 ರಲ್ಲಿ ಉಕ್ರೇನ್‍ನೊಂದಿಗೆ ಯುದ್ಧ ಪ್ರಾರಂಭವಾದಾಗಿನಿಂದ ರಷ್ಯಾ, ಉಕ್ರೇನ್ ಮತ್ತು ಇತರ ಯುರೋಪಿಯನ್ ರಾಜಕಾರಣಿಗಳ ಬಂಧನಕ್ಕೆ ವಾರಂಟ್‍ಗಳನ್ನು ಹೊರಡಿಸಿದೆ. ಈಗಾಗಲೇ ಎಸ್ಟೋನಿಯಾದ ಪ್ರಧಾನಿ ಕಾಜಾ ಕಲ್ಲಾಸ್, ಲಿಥುವೇನಿಯಾದ ಸಂಸ್ಕೃತಿ ಮಂತ್ರಿ ಮತ್ತು ಹಿಂದಿನ ಲಟ್ವಿಯನ್ ಸಂಸತ್ತಿನ ಸದಸ್ಯರನ್ನು ವಾಂಟೆಡ್ ಪಟ್ಟಿಗೆ ಸೇರಿಸಿದ್ದಾರೆ.

    ಕಳೆದ ವರ್ಷ ಯುದ್ಧಾಪರಾಧದ ಆರೋಪದ ಮೇಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‍ಗೆ (Vladimir Putin) ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (International Criminal Court) ಬಂಧನದ ವಾರಂಟ್ ಹೊರಡಿಸಿತ್ತು.

    ಇಲ್ಲಿಯವರೆಗೂ ಎರಡು ದೇಶಗಳ ನಡುವಿನ ಯುದ್ಧದಲ್ಲಿ 1,12,000 ರಷ್ಯಾದ ಸೈನಿಕರು ಸಾವಿಗೀಡಾಗಿದ್ದಾರೆ. 1,70,000 ದಿಂದ 1,80,000 ವರೆಗೆ ಸೈನಿಕರು ಗಾಯಗೊಂಡಿದ್ದಾರೆ ಎಂದು ಯುನೈಟೆಡ್ ಸ್ಟೇಟ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಉಕ್ರೇನ್‍ನಲ್ಲಿ 70,000 ದಿಂದ 1,00,000 ವರೆಗೆ ಸೈನಿಕರು ಹತರಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ ಅಮೆರಿಕದ ಅಂಕಿ ಅಂಶಗಳನ್ನು ರಷ್ಯಾ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ.

  • ರಷ್ಯಾ ಅಧ್ಯಕ್ಷ ಪುಟಿನ್ ಬಂಧನಕ್ಕೆ ವಾರೆಂಟ್ ಹೊರಡಿಸಿದ ICC

    ರಷ್ಯಾ ಅಧ್ಯಕ್ಷ ಪುಟಿನ್ ಬಂಧನಕ್ಕೆ ವಾರೆಂಟ್ ಹೊರಡಿಸಿದ ICC

    ಮಾಸ್ಕೋ: ಉಕ್ರೇನ್‌ನಲ್ಲಿ (Ukraine) ನಡೆದ ಮಕ್ಕಳ ಅಪಹರಣ ಹಾಗೂ ಯುದ್ಧ ಅಪರಾಧಗಳ ಆರೋಪದ ಮೇಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರನ್ನು ಬಂಧಿಸಲು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ICC) ವಾರೆಂಟ್ ಹೊರಡಿಸಿದೆ.

    ನ್ಯಾಯಾಲಯವು ತನ್ನ ವಾರೆಂಟ್‌ನಲ್ಲಿ, ಉಕ್ರೇನಿನಿಂದ ಮಕ್ಕಳನ್ನು ಅಕ್ರಮವಾಗಿ ಗಡಿಪಾರು ಮಾಡುವ ಮತ್ತು ರಷ್ಯಾದ ಒಕ್ಕೂಟಕ್ಕೆ ಜನರನ್ನು ಅಕ್ರಮವಾಗಿ ವರ್ಗಾಯಿಸಿದ ಯುದ್ಧಾಪರಾಧಕ್ಕೆ (War Crimes) ಪುಟಿನ್ ಜವಾಬ್ದಾರಿಯಾಗಿದ್ದಾರೆ. ಜನರನ್ನು ಕಾನೂನು ಬಾಹಿರವಾಗಿ ವರ್ಗಾಯಿಸಿರುವುದಕ್ಕೆ ಸಮಂಜಸವಾದ ಆಧಾರಗಳಿವೆ ಎಂದು ಹೇಳಿದೆ. ಇದನ್ನೂ ಓದಿ: ಗ್ಲಾಮರಸ್‌ ಲುಕ್‌ನ ಕವಾಸಕಿ Versys 1000 ಭಾರತದಲ್ಲಿ ಬಿಡುಗಡೆ – ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ?

    ರಷ್ಯಾದ ಒಕ್ಕೂಟದ ಅಧ್ಯಕ್ಷರ ಕಚೇರಿಯಲ್ಲಿ ಮಕ್ಕಳ ಹಕ್ಕುಗಳ ಆಯುಕ್ತರಾದ ಮಾರಿಯಾ ಅಲೆಕ್ಸೆಯೆವ್ನಾ ಎಲ್ವೊವಾ-ಬೆಲೋವಾ ಅವರನ್ನೂ ಬಂಧಿಸಲು ವಾರೆಂಟ್ ಹೊರಡಿಸಿದೆ. ಆದರೆ ಈ ಆರೋಪವನ್ನು ಮಾಸ್ಕೋ ತಳ್ಳಿಹಾಕಿದೆ. ರಷ್ಯಾದ ಸೇನಾಪಡೆಗಳು ದೌರ್ಜನ್ಯ ಎಸಗಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಉತ್ತರ ಕೊರಿಯಾ ಕೇವಲ 33 ಸೆಕೆಂಡ್‌ಗಳಲ್ಲಿ ಅಮೆರಿಕವನ್ನ ನಾಶ ಮಾಡುತ್ತೆ – ಚೀನಾ ತಜ್ಞರ ಸ್ಫೋಟಕ ಹೇಳಿಕೆ

  • ತಾಲಿಬಾನ್‌ ವಿರುದ್ಧ ಅಂತಾರಾಷ್ಟ್ರೀಯ ಕೋರ್ಟ್‌ಗೆ ದೂರು ಕೊಟ್ಟ ಫೋಟೋ ಜರ್ನಲಿಸ್ಟ್‌ ಡ್ಯಾನಿಶ್‌ ಸಿದ್ಧಿಕಿ ಪೋಷಕರು

    ತಾಲಿಬಾನ್‌ ವಿರುದ್ಧ ಅಂತಾರಾಷ್ಟ್ರೀಯ ಕೋರ್ಟ್‌ಗೆ ದೂರು ಕೊಟ್ಟ ಫೋಟೋ ಜರ್ನಲಿಸ್ಟ್‌ ಡ್ಯಾನಿಶ್‌ ಸಿದ್ಧಿಕಿ ಪೋಷಕರು

    ನವದೆಹಲಿ: ಪುಲಿಟ್ಜರ್‌ ಪ್ರಶಸ್ತಿ ಪುರಸ್ಕೃತ ಭಾರತದ ಫೋಟೋ ಜರ್ನಲಿಸ್ಟ್‌ ಡ್ಯಾನಿಶ್‌ ಸಿದ್ಧಿಕಿ ಸಾವಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ತಾಲಿಬಾನ್‌ ವಿರುದ್ಧ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯಕ್ಕೆ ಸಿದ್ಧಿಕಿ ಪೋಷಕರು ದೂರು ನೀಡಿದ್ದಾರೆ.

    ಡ್ಯಾನಿಶ್ ಸಿದ್ಧಿಕಿಯ ಪೋಷಕರಾದ ಪ್ರೊ. ಅಖ್ತರ್ ಸಿದ್ಧಿಕಿ ಮತ್ತು ಶಾಹಿದಾ ಅಖ್ತರ್ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯಕ್ಕೆ (ICC) ದೂರು ಸಲ್ಲಿಸಿದ್ದಾರೆ. ಹತ್ಯೆ ಕುರಿತು ತನಿಖೆ ಆಗಬೇಕು. ತಾಲಿಬಾನ್‌ನ ನಾಯಕರು ಮತ್ತು ಉನ್ನತ ಮಟ್ಟದ ಕಮಾಂಡರ್‌ಗಳು ಸೇರಿದಂತೆ ಹತ್ಯೆಗೆ ಕಾರಣರಾದವರನ್ನು ನ್ಯಾಯಾಲಯಕ್ಕೆ ಕರೆತರಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಲಾಲೂ ಪ್ರಸಾದ್ ಯಾದವ್ ಆರೋಗ್ಯದಲ್ಲಿ ಏರುಪೇರು – ದೆಹಲಿಯ ಏಮ್ಸ್‌ಗೆ ಶಿಫ್ಟ್‌

    2021ರ ಜುಲೈ 16 ರಂದು ಡ್ಯಾನಿಶ್ ಸಿದ್ಧಿಕಿಯನ್ನು ತಾಲಿಬಾನ್ ಅಕ್ರಮವಾಗಿ ಬಂಧಿಸಿ, ಚಿತ್ರಹಿಂಸೆ ನೀಡಿ ಕೊಂದಿದೆ. ಅವರ ದೇಹವನ್ನು ವಿರೂಪಗೊಳಿಸಲಾಗಿತ್ತು. ಇದು ಪ್ರತ್ಯೇಕ ಘಟನೆಯಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಕೀಲ ಅವಿ ಸಿಂಗ್ ಕೋರಿದ್ದಾರೆ.

    ಸಿದ್ಧಿಕಿ ಮಾನವೀಯತೆಯ ವಿರುದ್ಧದ ಅಪರಾಧಗಳು ಮತ್ತು ಸರ್ಕಾರಿ ವಿರೋಧಿ ಶಕ್ತಿಗಳ ಕೈಗೆ ಬಲಿಯಾಗಿದ್ದಾನೆ ಎಂದು ಕುಟುಂಬದವರು ನೋವು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಇನ್ಮುಂದೆ 60 ಕಿ.ಮೀ. ವ್ಯಾಪ್ತಿಯೊಳಗೆ ಟೋಲ್ ತೆರಿಗೆ ಇರಲ್ಲ: ನಿತಿನ್‌ ಗಡ್ಕರಿ

    ನಮ್ಮ ಪ್ರೀತಿಯ ಮಗ ತನ್ನ ಪತ್ರಿಕೋದ್ಯಮ ಕರ್ತವ್ಯ ನಿರ್ವಹಿಸುತ್ತಿದ್ದಾಗ ತಾಲಿಬಾನ್‌ನಿಂದ ಹತ್ಯೆಗೀಡಾಗಿದ್ದಾನೆ. ತಾಲಿಬಾನ್‌ ವಶದಲ್ಲಿದ್ದಾಗ ಚಿತ್ರಹಿಂಸೆಗೆ ಒಳಪಡಿಸಲಾಗಿತ್ತು. ಸಿದ್ಧಿಕಿ ಯಾವಾಗಲೂ ತನ್ನ ಕೆಲಸದಲ್ಲಿ ಪ್ರಾಮಾಣಿಕವಾಗಿರುತ್ತಿದ್ದ. ತನ್ನ ಛಾಯಾಚಿತ್ರಗಳ ಮೂಲಕ ಜನರ ನೋವನ್ನು ಬಿಂಬಿಸುತ್ತಿದ್ದ ಎಂದು ಸಿದ್ದಿಕಿ ತಾಯಿ ಶಾಹಿದಾ ಅಖ್ತರ್‌ ಹೇಳಿಕೊಂಡಿದ್ದಾರೆ.

    ಸಂಘರ್ಷ ವಲಯಗಳಿಂದ ವರದಿ ಮಾಡುವಲ್ಲಿ ಪತ್ರಕರ್ತರು ಎದುರಿಸುತ್ತಿರುವ ತೀವ್ರ ಸವಾಲುಗಳು ಮತ್ತು ಬೆದರಿಕೆಗಳನ್ನು ಜಗತ್ತು ಗಮನಿಸುತ್ತದೆ ಎಂದು ನಾವು ಭಾವಿಸುತ್ತೇವೆ. ನಮ್ಮ ಮಗ ಹಿಂದಿರುಗಿ ಬಾರದಿದ್ದರೂ, ಎಂದಾದರೂ ನ್ಯಾಯ ಸಿಗುತ್ತದೆ ಎಂಬ ಭರವಸೆಯಲ್ಲಿ ಈ ಮನವಿ ಮಾಡಿದ್ದೇವೆ ಎಂದು ಸಿದ್ಧಿಕಿ ತಂದೆ ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜನರೇ ಬಿಜೆಪಿ ಆಡಳಿತ ಮೆಚ್ಚಿದ್ದಾರೆ, ಅದ್ಕೆ ನಾವು ಜಾಸ್ತಿ ಮಾತಾಡಲ್ಲ: ಡಿ.ಕೆ ಸುರೇಶ್ ವ್ಯಂಗ್ಯ

    ಅಫ್ಗಾನಿಸ್ತಾನದ ಸೇನೆ ಮತ್ತು ತಾಲಿಬಾನಿಗಳ ನಡುವೆ ಸಂಘರ್ಷ ನಡೆಯುತ್ತಿರುವ ಪ್ರದೇಶಗಳ ಸ್ಥಿತಿಗತಿ ಕುರಿತು ವರದಿ ಮಾಡಲು ತೆರಳಿದ್ದ ಪುಲಿಟ್ಜರ್‌ ಪ್ರಶಸ್ತಿ ಪುರಸ್ಕೃತ ಭಾರತೀಯ ಫೋಟೊ ಜರ್ನಲಿಸ್ಟ್‌, ರಾಯಿಟರ್ಸ್‌ ಸುದ್ದಿ ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದ ಡ್ಯಾನಿಶ್‌ ಸಿದ್ಧಿಕಿ (40) ಹತ್ಯೆಯಾಗಿದ್ದರು.