Tag: international airport

  • ಮಂಗ್ಳೂರು ವಿಮಾನ ನಿಲ್ದಾಣದ ಟಾಯ್ಲೆಟ್ ನಲ್ಲಿ 34 ಲಕ್ಷ ರೂ. ಮೌಲ್ಯದ ಚಿನ್ನದ ಬಿಸ್ಕೆಟ್ ಪತ್ತೆ!

    ಮಂಗ್ಳೂರು ವಿಮಾನ ನಿಲ್ದಾಣದ ಟಾಯ್ಲೆಟ್ ನಲ್ಲಿ 34 ಲಕ್ಷ ರೂ. ಮೌಲ್ಯದ ಚಿನ್ನದ ಬಿಸ್ಕೆಟ್ ಪತ್ತೆ!

    ಮಂಗಳೂರು: ಇಲ್ಲಿನ ವಿಮಾನ ನಿಲ್ದಾಣದ ಟಾಯ್ಲೆಟ್ ನಲ್ಲಿ ಚಿನ್ನದ ಬಿಸ್ಕೆಟ್ ಪತ್ತೆಯಾಗಿದೆ. 34 ಲಕ್ಷ ಮೌಲ್ಯದ 1 ಕೆಜಿ 100 ಗ್ರಾಮ್ ತೂಕದ 10 ಚಿನ್ನದ ಗಟ್ಟಿಯನ್ನ ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ದುಬೈನಿಂದ ಸ್ಪೈಸ್ ಜೆಟ್ ವಿಮಾನದಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಟಾಯ್ಲೆಟ್‍ನಲ್ಲಿ ಚಿನ್ನದ ಬಿಸ್ಕಟ್ ಇರುವ ಪ್ಯಾಕೆಟ್ ಎಸೆದುಹೋಗಿದ್ದಾನೆ ಎಂದು ಹೇಳಲಾಗಿದೆ. ಟಾಯ್ಲೆಟ್ ಕ್ಲೀನಿಂಗ್ ವೇಳೆ ಸಂಶಯದಲ್ಲಿ ತಪಾಸಣೆ ನಡೆಸಿದಾಗ ಚಿನ್ನ ಪತ್ತೆಯಾಗಿದೆ.

    ಆರೋಪಿ ಬಗ್ಗೆ ಇನ್ನೂ ಗುರುತು ಸಿಕ್ಕಿಲ್ಲ. ಸದ್ಯ ಡಿಆರ್‍ಐ ಅಧಿಕಾರಿಗಳು ಚಿನ್ನದ ಬಿಸ್ಕೆಟ್ ವಶಕ್ಕೆ ಪಡೆದಿದ್ದಾರೆ.

     

  • ಸಡನ್ ಬ್ರೇಕ್ ಹಾಕಿದ BMTC ಬಸ್, ಬಸ್ ಗೆ ಗುದ್ದಿದ ಬೊಲೆರೊ, ಬೊಲೆರೋಗೆ ಡಿಕ್ಕಿ ಹೊಡೆದ ಲಾರಿ

    ಸಡನ್ ಬ್ರೇಕ್ ಹಾಕಿದ BMTC ಬಸ್, ಬಸ್ ಗೆ ಗುದ್ದಿದ ಬೊಲೆರೊ, ಬೊಲೆರೋಗೆ ಡಿಕ್ಕಿ ಹೊಡೆದ ಲಾರಿ

    ಬೆಂಗಳೂರು: ಶನಿವಾರ ರಾತ್ರಿ ಬೆಂಗಳೂರಿನ ಅಂತಾರರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ ಸರಣಿ ಅಪಘಾತವಾಗಿದೆ. ಬಿಎಂಟಿಸಿ ಬಸ್, ಬೊಲೆರೊ ಗೂಡ್ಸ್ ಗಾಡಿ ಮತ್ತು ಲಾರಿಯ ನಡುವೆ ಅಪಘಾತವಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.

    ಬಿಎಂಟಿಸಿ ಬಸ್ ಸಡನ್ ಆಗಿ ಬ್ರೇಕ್ ಹಾಕಿದ ಕಾರಣ ಬಸ್ ಹಿಂದೆ ಬರುತ್ತಿದ್ದ ಬೊಲೆರೋ ಬಸ್ಸಿಗೆ ಡಿಕ್ಕಿ ಹೊಡೆದ್ರೇ, ಲಾರಿ ಬೊಲೆರೋಗೆ ಡಿಕ್ಕಿ ಹೊಡೆದಿದೆ. ಬೊಲೆರೋ ವಾಹನದಲ್ಲಿದ್ದ ಇಬ್ಬರಿಗೆ ಗಾಯಾಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಘಟನಾ ಸ್ಥಳಕ್ಕೆ ಯಲಹಂಕ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಫೆ.19ರಿಂದ ಬೆಂಗಳೂರು ಏರ್‍ಪೋರ್ಟ್ ಬಂದ್- ಟ್ಯಾಕ್ಸಿ, ಹೋಟೆಲ್ ಉದ್ಯಮದಾರರಿಗೆ ಬೀಳಲಿದೆ ಭಾರೀ ಹೊಡೆತ

    ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಫೆ. 19ರಿಂದ 2 ತಿಂಗಳ ಕಾಲ ತಾತ್ಕಾಲಿಕವಾಗಿ ಬಂದ್ ಆಗಲಿದೆ.

    ಬೆಳಗ್ಗೆ 10.30 ರಿಂದ ಸಂಜೆ 5ರವರೆಗೂ ಬಂದ್ ಆಗಲಿದ್ದು, ಇದರಿಂದ ವಿಮಾನ ನಿಲ್ದಾಣವನ್ನೇ ಅವಲಂಬಿಸಿ ಬದುಕು ಕಟ್ಟಿಕೊಂಡಿದ್ದ 4000 ಟ್ಯಾಕ್ಸಿಗಳಿಗೆ ಕೆಲಸ ಇಲ್ಲದಂತಾಗಲಿದೆ.

    ಹೋಟೆಲ್ ಉದ್ಯಮ, ವಾಣಿಜ್ಯ ಚಟುವಟಿಕೆಗಳಿಗೂ 2ತಿಂಗಳ ಕಾಲ ಏರ್‍ಪೋರ್ಟ್ ಬಂದ್ ಬಿಸಿ ತಟ್ಟಲಿದೆ. ನಷ್ಟದ ಭಯದಲ್ಲಿ ಬೆಂಗಳೂರು ಪ್ರವಾಸಿ ವಾಹನ ಮಾಲೀಕರು ಹೆಚ್‍ಎಎಲ್ ಏರ್‍ಪೋರ್ಟ್ ಬಳಸಿ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

    ನಂಬರ್ 1 ಸ್ಥಾನದಲ್ಲಿರುವ ನಗರವಾಗಿರುವ ಬೆಂಗಳೂರಿನಲ್ಲಿ ಇಮದು ನಮಗೆ ಆಲ್ಟರ್‍ನೇಟಿವ್ ವ್ಯವಸ್ಥೆನೇ ಇಲ್ಲ. ಇದರಂದಾಗಿ ಪ್ರವಾಸಿಗರನ್ನು ನಂಬಿಕೊಂಡು ಟ್ಯಾಕ್ಸಿ ಓಡಿಸುವವರಿಗೆ ಹಾಗೂ ಹೋಟೇಲ್ ಉದ್ಯಮ ನಡೆಸುವವರಿಗೆ ತುಂಬಾನೇ ತೊಂದರೆಯಗುತ್ತಿದೆ. 70 ದಿನಗಳ ಕಾಲ ಹೆಚು ಅಂದ್ರೆ 6 ಗಂಟೆ ವಿಮಾನ ಹಾರಾಟ ವ್ಯವಸ್ಥೆ ಇಲ್ಲ ಅಂದ್ರೆ ನಮ್ಮ ಪ್ರವಾಸೋದ್ಯಮ ಕ್ಷೇತ್ರಕ್ಕೆ ದೊಡ್ಡ ಕಂಟಕ ಎದುರಾಗುವುದರಲ್ಲಿ ಸಂಶಯವಿಲ್ಲ ಅಂತಾ ಟ್ಯಾಕ್ಸಿ ಮಾಲೀಕರ ಸಂಘದ ರಾಧಾಕೃಷ್ಣ ಹೊಳ್ಳ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

    ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾರ್ಯ, ಮತ್ತು ರನ್ ವೇ ಕಾಮಗಾರಿ ನಡೆಯುವುದರಿಂದ ಫೆಬ್ರವರಿ 19ರಿಂದ ಬೆಳಗ್ಗೆ 10.30ರಿಂದ ಸಂಜೆ 5 ಗಂಟೆಯವರೆಗೆ ಹಗಲು ಸಮಯದಲ್ಲಿ ವಿಮಾನ ಆಗಮನ ಮತ್ತು ನಿರ್ಗಮನ ಸ್ಥಗಿತಗೊಳ್ಳಲಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್(ಬಿಐಎಎಲ್) ಪ್ರಕಟಣೆಯಲ್ಲಿ ತಿಳಿಸಿದೆ.