Tag: interest rate

  • ರೈತರಿಗೆ ಸಿಹಿ ಸುದ್ದಿ: ಸಹಕಾರಿ ಸಾಲದ ಮೇಲಿನ‌ ಬಡ್ಡಿ ಮನ್ನಾ

    ರೈತರಿಗೆ ಸಿಹಿ ಸುದ್ದಿ: ಸಹಕಾರಿ ಸಾಲದ ಮೇಲಿನ‌ ಬಡ್ಡಿ ಮನ್ನಾ

    ಬೆಳಗಾವಿ: ರಾಜ್ಯದ ರೈತರಿಗೆ (Farmers) ಸರ್ಕಾರ ಗುಡ್‌ನ್ಯೂಸ್‌ ನೀಡಿದ್ದು ಸಹಕಾರಿ ಸಾಲದ (Cooperative Bank Loans) ಮೇಲಿನ‌ ಬಡ್ಡಿಯನ್ನು (Interest) ಮನ್ನಾ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ (CM Siddaramaiah) ಘೋಷಣೆ ಮಾಡಿದ್ದಾರೆ.

    ಮಧ್ಯಮ ಅವಧಿ, ದೀರ್ಘಾವಧಿ ಸಾಲ ಕಟ್ಟಿದರೆ ಅದರ ಮೇಲಿನ ಬಡ್ಡಿಯನ್ನು ಪೂರ್ಣವಾಗಿ ಮನ್ನಾ ಮಾಡಲಾಗುವುದು ಎದು ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಘೋಷಿಸಿದ್ದಾರೆ.  ಸರ್ಕಾರದ ಬಡ್ಡಿ ಮನ್ನಾ ಅವಧಿಯೊಳಗೆ ಸಾಲ ಮರುಪಾವತಿ ಮಾಡಿದ ರೈತರಿಗೆ ಮಾತ್ರ ಅನ್ವಯವಾಗುತ್ತದೆ. ಇದನ್ನೂ ಓದಿ: ಈ ಯತ್ನಾಳ್‌ ಪೆದ್ದ ಜಾಣ: ಬಿಜೆಪಿ ನಾಯಕರ ಕಾಲೆಳೆದ ಸಿದ್ದರಾಮಯ್ಯ

     

    ಸಿದ್ದರಾಮಯ್ಯ ಹೇಳಿದ್ದೇನು?
    ಸಹಕಾರ ಬ್ಯಾಂಕುಗಳಲ್ಲಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಅಸಲನ್ನು ಕಟ್ಟಿದರೆ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡಲಾಗುವುದು ಎಂದು ನಮ್ಮ ಸರ್ಕಾರ ತೀರ್ಮಾನಿಸಿದೆ. ಇದರಿಂದ ಸಾಲಮನ್ನಾ ಮಾಡುವ ಕುರಿತು ನಾವು ನಮ್ಮ ಪ್ರಣಾಳಿಕೆಯಲ್ಲಿ  ಹೇಳಿಲ್ಲ.

    ಬಿಜೆಪಿಯವರು 2018 ರ ತಮ್ಮ ಪ್ರಣಾಳಿಕೆಯಲ್ಲಿ ನಮ್ಮ ಸರಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ರಾಷ್ಟ್ರಿಕೃತ ಬ್ಯಾಂಕ್‌ ಮತ್ತು ಸಹಕಾರಿ ಸಂಘಗಳಲ್ಲಿ ಇರುವ 1 ಲಕ್ಷದವರೆಗೆ ರೈತರ ಬೆಳೆ ಸಾಲ ಮನ್ನಾ ಮಾಡಲಾಗುವುದು ಎಂದು ಹೇಳಿದ್ದರು. ಆದರೆ ಬಿಜೆಪಿಯವರು ಈ ಕುರಿತು ಏನಾದರೂ ಮಾಡಿದರಾ? ನಯಾಪೈಸೆ ಬಿಡುಗಡೆ ಮಾಡಿದರಾ? ಹೇಳಿ. ಯಡಿಯೂರಪ್ಪನವರು 2019 ರ ಆಗಸ್ಟ್‌ನಲ್ಲಿ ಅತಿವೃಷ್ಟಿಯ ಕಾರಣಕ್ಕೆ ಬೆಳೆ ಹಾನಿಯಾಗಿತ್ತು. ಆಗ ಶಿವಮೊಗ್ಗದಲ್ಲಿ ಯಡಿಯೂರಪ್ಪನವರು ಏನು ಹೇಳಿದರು ಗೊತ್ತಾ? “ಕೇಳಿದಷ್ಟು ಹಣ ಕೊಡಲು ಸರ್ಕಾರದಲ್ಲಿ ನೋಟ್ ಪ್ರಿಂಟ್ ಮಾಡುವ ಯಂತ್ರವಿಲ್ಲ” ಎಂದು ಹೇಳಿದ್ದರು.  ಇದನ್ನೂ ಓದಿ: ಪ್ರತಾಪ್ ಸಿಂಹ ಭಯೋತ್ಪಾದಕ – ಮೈಸೂರು ಮಹಾರಾಜ ವೃತ್ತ ಬಳಿ ಫ್ಲೆಕ್ಸ್ 

     

    ಯಡಿಯೂರಪ್ಪನವರು ಈ ರೀತಿ ಹೇಳಿದ್ದು ಇದೇ ಮೊದಲಲ್ಲ. 2009 ರಲ್ಲಿ ವಿಧಾನಪರಿಷತ್ತಿನಲ್ಲಿ ನಮ್ಮ ವಿರೋಧ ಪಕ್ಷದ ನಾಯಕರಾಗಿದ್ದ ವಿ ಎಸ್ ಉಗ್ರಪ್ಪ ಮುಂತಾದ ನಮ್ಮ ಪಕ್ಷದವರು ಸಾಲ ಮನ್ನಾ ಮಾಡಿ ಎಂದು ಆಗ್ರಹಿಸಿದ್ದಾಗಲೂ ಯಡಿಯೂರಪ್ಪನವರು ಇದೇ ಮಾತುಗಳನ್ನಾಡಿದ್ದರು.

    “ಮತಕ್ಕಾಗಿ ಇತರ ಪಕ್ಷಗಳವರು ಹೇಳಿದಂತೆ ನಾನು ಕೂಡ ರೈತರ ಕೃಷಿ ಮನ್ನಾ ಮಾಡುತ್ತೇನೆಂದು ಚುನಾವಣೆಯ ಸಂದರ್ಭದಲ್ಲಿ ಆಶ್ವಾಸನೆ ನೀಡಿದ್ದೆ. ಆದರೆ ಇದು ಸಾಧ್ಯವಿಲ್ಲ ಎಂಬುದು ಈಗ ಅರ್ಥವಾಗುತ್ತಿದೆ, ಸಾಲ ಮನ್ನಾ ಮಾಡಲು ಹಣ ಎಲ್ಲಿದೆ?” ಎಂದು ವಿರೋಧ ಪಕ್ಷದ ಸದಸ್ಯರನ್ನೇ ಯಡಿಯೂರಪ್ಪ ಪ್ರಶ್ನಿಸಿದ್ದರು. “ರೈತರ ಸಾಲ ಮನ್ನಾ ಮಾಡಲು ನಾನು ಸಿದ್ಧನಿದ್ದೇನೆ. ಆದರೆ ಬೊಕ್ಕಸದಲ್ಲಿ ಹಣದ ಕೊರತೆ ಇದೆ. ಆದುದರಿಂದ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ” ಎಂದಿದ್ದರು ಜೊತೆಗೆ “ವಿಧಾನಸೌಧದಲ್ಲಿ ಕೂತು ನಾನು ನೋಟ್ ಪ್ರಿಂಟ್ ಮಾಡುತ್ತಿಲ್ಲ” ಎಂದು ಉತ್ತರ ಹೇಳಿದ್ದರು.

     

  • ದಿಢೀರ್‌ ಭಾರೀ ಪ್ರಮಾಣದಲ್ಲಿ ಬಡ್ಡಿದರ ಏರಿಸಿದ ರಷ್ಯನ್‌ ಬ್ಯಾಕ್‌

    ದಿಢೀರ್‌ ಭಾರೀ ಪ್ರಮಾಣದಲ್ಲಿ ಬಡ್ಡಿದರ ಏರಿಸಿದ ರಷ್ಯನ್‌ ಬ್ಯಾಕ್‌

    ಮಾಸ್ಕೋ: ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದಾಗಿನಿಂದ ವಿದೇಶೀ ವಿನಿಮಯಕ್ಕೆ ಭಾರೀ ಹೊಡೆತ ಬಿದ್ದಿದೆ. ಹೀಗಾಗಿ ರಷ್ಯಾ ಸೆಂಟ್ರಲ್ ಬ್ಯಾಂಕ್ ತನ್ನ ಆರ್ಥಿಕತೆಯನ್ನು ಕಾಪಾಡಲು ಬಡ್ಡಿ ದರದಲ್ಲಿ ಭಾರೀ ಏರಿಕೆ ಮಾಡಿದೆ.

    ರಷ್ಯಾ ಸೆಂಟ್ರಲ್ ಬ್ಯಾಂಕ್‍ನ ಬಡ್ಡಿ ದರ ಈ ಹಿಂದೆ ಶೇ.9.5 ಇದ್ದು, ಇದೀಗ ಶೇ.20 ಕ್ಕೆ ಏರಿಕೆ ಮಾಡಿದೆ. ಈ ಮೂಲಕ ರಷ್ಯಾ ತನ್ನ ಹೂಡಿಕೆದಾರರನ್ನು ಕಾಪಾಡಲು ಪ್ರಯತ್ನಿಸುತ್ತಿದೆ.

    ರಷ್ಯಾ ಸೆಂಟ್ರಲ್ ಬ್ಯಾಂಕ್ ಸೋಮವಾರ ಪ್ರಮುಖ ಬಡ್ಡಿ ದರವನ್ನು ಶೇ.9.5 ರಿಂದ ಶೇ.20ಕ್ಕೆ ಏರಿಸುವುದಾಗಿ ಘೋಷಿಸಿದೆ. ರಷ್ಯಾದಲ್ಲಿ ಯುದ್ಧದ ಹಿನ್ನೆಲೆ ವಿದೇಶೀ ವಹಿವಾಟು ಕುಂಠಿತಗೊಂಡಿದ್ದು, ರೂಬೆಲ್(ರಷ್ಯಾ ಕರೆನ್ಸಿ) ಬೆಲೆ ಕುಸಿಯುತ್ತಿದೆ. ಈ ಹಣದುಬ್ಬರವನ್ನು ಸರಿದೂಗಿಸಲು ಬಡ್ಡಿ ದರದಲ್ಲಿ ಏರಿಕೆ ಮಾಡಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಬಿಕ್ಕಟ್ಟನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಿ: ದಲೈಲಾಮಾ

    ರಷ್ಯಾದಲ್ಲಿ ಸಂಭವಿಸುತ್ತಿರುವ ನಾಟಕೀಯ ಬೆಳವಣಿಗೆಯಿಂದ ಜನರು ಭಯಬೀತರಾಗಿ ತಮ್ಮ ಹಣವನ್ನು ಹಿಂಪಡೆಯಲು ಎಟಿಎಂನಲ್ಲಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಈ ಬೆಳವಣಿಗೆಯಿಂದ ರಷ್ಯಾ ಹೂಡಿಕೆದಾರರು ಕೈಜಾರಿ ಹೋಗಬಾರದೆಂಬ ಕಾರಣಕ್ಕೆ ಬಡ್ಡಿ ದರವನ್ನು ದ್ವಿಗುಣಗೊಳಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದನ್ನೂ ಓದಿ: ಭಾರತೀಯರನ್ನು ತಾಯ್ನಾಡಿಗೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಮೋದಿ ಸರ್ಕಾರ ಮಾಡುತ್ತಿದೆ: ಖೂಬಾ


    ಯುದ್ಧ ಪ್ರಾರಂಭವಾದಾಗಿನಿಂದ ರೂಬೆಲ್ ಮೌಲ್ಯ ಕುಸಿಯತೊಡಗಿದೆ. ಪ್ರತಿ ಡಾಲರ್‍ಗೆ ರೂಬೆಲ್ ಬೆಲೆ 119.50 ರಷ್ಟು ಕುಸಿದಿದೆ. ಶುಕ್ರವಾರದ ದಿಂದ ರೂಬೆಲ್ ಬೆಲೆ ಶೇ.30% ರಷ್ಟು ಕಡಿಮೆಯಾಗಿದೆ.

  • ಗ್ರಾಹಕರಿಗೆ ಎಸ್‍ಬಿಐನಿಂದ ಗುಡ್ ನ್ಯೂಸ್: ಬಡ್ಡಿದರದಲ್ಲಿ ಹೆಚ್ಚಳ

    ಗ್ರಾಹಕರಿಗೆ ಎಸ್‍ಬಿಐನಿಂದ ಗುಡ್ ನ್ಯೂಸ್: ಬಡ್ಡಿದರದಲ್ಲಿ ಹೆಚ್ಚಳ

    ನವದೆಹಲಿ: ಭಾರತೀತ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೊಂದು ಗುಡ್ ನ್ಯೂಸ್ ನೀಡಿದೆ. ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್)ಯ ಮೇಲಿನ ಬಡ್ಡಿ ದರವನ್ನು ಹೆಚ್ಚಳ ಮಾಡಿದೆ. ಹೊಸ ಬಡ್ಡಿ ದರಗಳು ಇದೇ ಜುಲೈ 30ರಿಂದ ಅನ್ವಯವಾಗಲಿದೆ ಎಂದು ಎಸ್‍ಬಿಐ ತಿಳಿಸಿದೆ.

    ಹೊಸ ಬಡ್ಡಿ ದರಗಳು 1 ಕೋಟಿ ರೂ. ಗಿಂತಲೂ ಕಡಿಮೆಯುಳ್ಳ ನಿಶ್ಚಿತ ಠೇವಣಿಗಳಿಗೆ ಮಾತ್ರ ಅನ್ವಯಿಸಲಿದೆ. ಒಂದು ವರ್ಷಕ್ಕಿಂತ ಮೇಲ್ಪಟ್ಟ ಮತ್ತು 10 ವರ್ಷದೊಳಗಿನ ನಿಶ್ಚಿತ ಠೇವಣಿಗಳ ಮೇಲೆ ಹೊಸ ಬಡ್ಡಿ ದರಗಳು ಅನ್ವಯಿಸಲಿವೆ.

    ಸಾಮಾನ್ಯ ಗ್ರಾಹಕರಿಗೆ:
    ಒಂದು ವರ್ಷದಿಂದ ಎರಡು ವರ್ಷದ ಒಳಗಿನ ಠೇವಣಿಗಳ ಮೇಲಿನ ಶೇಖಡವಾರು ಬಡ್ಡಿದರ 6.65 ರಿಂದ 6.7ಕ್ಕೆ (0.5) ಹೆಚ್ಚಳವಾಗಿದೆ. ಎರಡು ವರ್ಷಗಳ ಮೇಲ್ಪಟ್ಟ 3 ವರ್ಷದೊಳಗಿನ ಠೇವಣಿ ಮೇಲೆ 6.65ರಿಂದ 6.75 (0.10), ಮೂರು ವರ್ಷಕ್ಕಿಂತ ಮೇಲ್ಪಟ್ಟ ಐದು ವರ್ಷದೊಳಗಿನ ಠೇವಣಿ ದರ 6.70ರಿಂದ 6.80 (0.10) ಮತ್ತು ಐದು ವರ್ಷಕ್ಕಿಂತ ಮೇಲ್ಟಟ್ಟ ಹತ್ತು ವರ್ಷದೊಳಗಿನ ಠೇವಣಿಗೆ 6.75ರಿಂದ 6.85 (0.10) ವರಗೆ ಬಡ್ಡಿದರವನ್ನು ಏರಿಕೆ ಮಾಡಲಾಗಿದೆ.

    ಹಿರಿಯ ನಾಗರಿಕರು:
    ಹಿರಿಯ ನಾಗರಿಕ ಗ್ರಾಹಕರಿಗೆ 1 ರಿಂದ 2 ವರ್ಷದೊಳಗಿನ ಠೇವಣಿ ಬಡ್ಡಿ ದರ 7.15 ರಿಂದ 7.20 (0.10), ಎರಡು ವರ್ಷ ಮೇಲ್ಪಟ್ಟ 3 ವರ್ಷದೊಳಗಿನ ಠೇವಣಿಗೆ 7.15ರಿಂದ 7.25 (0.10), ಮೂರು ವರ್ಷಕ್ಕಿಂತ ಮೇಲ್ಪಟ್ಟ 5 ವರ್ಷದೊಳಗಿನ ಠೇವಣಿಗೆ 7.20 ರಿಂದ 7.30 (0.10) ಮತ್ತು ಐದು ವರ್ಷಕ್ಕಿಂತ ಮೇಲ್ಪಟ್ಟ 10 ವರ್ಷದೊಳಗಿನ ಠೇವಣಿಗೆ ಶೇಕಡವಾರು 7.25ರಿಂದ 7.35 (0.10)ಕ್ಕೆ ಹೆಚ್ಚಳ ಮಾಡಲಾಗಿದೆ.