Tag: interest

  • Tumakuru| 4.66 ಲಕ್ಷಕ್ಕೆ 7.20 ಲಕ್ಷ ಬಡ್ಡಿ – ಹೃದಯಾಘಾತದಿಂದ ವ್ಯಕ್ತಿ ಸಾವು

    Tumakuru| 4.66 ಲಕ್ಷಕ್ಕೆ 7.20 ಲಕ್ಷ ಬಡ್ಡಿ – ಹೃದಯಾಘಾತದಿಂದ ವ್ಯಕ್ತಿ ಸಾವು

    ತುಮಕೂರು: ಮೈಕ್ರೋ ಫೈನಾನ್ಸ್‌ನಿಂದ (Micro Finance) ಸಾಲ ಪಡೆದಕ್ಕಿಂತ ಹೆಚ್ಚು ಬಡ್ಡಿಯನ್ನೇ (Interest) ಕಟ್ಟಿ ಹೃದಯಾಘಾತದಿಂದ (Heart Attack) ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.

    ತುಮಕೂರು ನಗರದ ಲೇಬರ್ ಕಾಲೋನಿಯ ಸೈಯದ್ ಸಮಿವುಲ್ಲಾ ಸಾವಿಗಿಡಾದ ವ್ಯಕ್ತಿ. ಇವರು ಫೈಸ್ ಸ್ಟಾರ್ ಫೈನಾನ್ಸ್‌ನಿಂದ 2019ರಲ್ಲಿ 4.66 ಮನೆ ಸಾಲ ಪಡೆದಿದ್ದರು. 2024 ಮೇವರೆಗೆ ಬರೊಬ್ಬರಿ 7.20 ಲಕ್ಷ ಬಡ್ಡಿ ಕಟ್ಟಿದ್ದರು. ಆದರೆ ಅಸಲು ಹಾಗೆಯೇ ಉಳಿದಿತ್ತು. ಮತ್ತೆ ಅಸಲು ಕಟ್ಟುವಂತೆ ಫೈನಾನ್ಸ್‌ನವರು ಕಿರುಕುಳ ಕೊಡುತ್ತಿದ್ದರು. ಈ ಕಿರುಕುಳ ತಾಳಲಾರದೆ ಹೃದಯಾಘಾತದಿಂದ ಸಮೀವುಲ್ಲಾ ಮೇ ತಿಂಗಳಲ್ಲಿ ಸಾವಿಗೀಡಾಗಿದ್ದಾರೆ. ಇವರಿಗೆ ಸುಮಾರು 24.55 % ಬಡ್ಡಿ ಹಾಕಲಾಗಿತ್ತು. ಇದನ್ನೂ ಓದಿ: Kolar| ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಾ ಸರ್ಕಾರಿ ಬಸ್ ಚಾಲನೆ – ವೀಡಿಯೋ ವೈರಲ್

    ಈಗ ಫೈನಾನ್ಸ್‌ನವರು ಸಮೀವುಲ್ಲಾ ಮನೆಗೆ ಬಂದು ಅವರ ಪತ್ನಿ ಬಳಿ ಸಾಲ ಮರುಪಾವತಿ ಮಾಡುವಂತೆ ಕಿರುಕುಳ ನೀಡುತ್ತಿದ್ದಾರೆ. ಪತಿಯಂತೆ ನಾನೂ ಮಕ್ಕಳೊಂದಿಗೆ ಸಾಯಬೇಕಾಗುತ್ತದೆ ಎಂದು ಪತ್ನಿ ತಬಸಮ್ ಬಾನು ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ಮಂಗಳೂರು| ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ಬೆಂಕಿ ಅವಘಡ

     

  • 100 ಕೋಟಿ ರೂ. ಆಸೆಗೆ ಒಂದು ಮುಕ್ಕಾಲು ಕೋಟಿ ಹಣ ಕಳ್ಕೊಂಡ

    100 ಕೋಟಿ ರೂ. ಆಸೆಗೆ ಒಂದು ಮುಕ್ಕಾಲು ಕೋಟಿ ಹಣ ಕಳ್ಕೊಂಡ

    ಬೆಂಗಳೂರು: ನೂರಾರು ಕೋಟಿ ವ್ಯವಹಾರ ಮಾಡುವ ಉದ್ಯಮಿಯೊಬ್ಬರು ಕಡಿಮೆ ಬಡ್ಡಿಯಲ್ಲಿ ನೂರು ಕೋಟಿ ಸಾಲ ಸಿಗುತ್ತದೆ ಎಂಬ  ಆಸೆಗೆ ಬರೋಬ್ಬರಿ ಒಂದು ಮುಕ್ಕಾಲು ಕೋಟಿ ಹಣ ಕಳೆದುಕೊಂಡಿದ್ದಾರೆ.

    ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನಲ್ಲಿರುವ ಆಂಧ್ರ ಮೂಲದ ಉದ್ಯಮಿ ಮಂತೇನಾ ವರುಣ್ ಗಾಂಧಿ ಅವರಿಗೆ ಹಣದ ಅವಶ್ಯಕತೆ ಇತ್ತು. ಇದೇ ವೇಳೆ ಎಚ್‍ಎಸ್‍ಆರ್ ಲೇಔಟ್ ನಲ್ಲಿರುವ ಫ್ಯೂಚರ್ ಕ್ರೆಸ್ಟ್ ವೆಂಚರ್ಸ್ ಕಂಪನಿ ಕಡಿಮೆ ಬಡ್ಡಿಗೆ ಸಾಲ ನೀಡುವ ವಿಚಾರ ತಿಳಿದ ಉದ್ಯಮಿ ಆ ಕಂಪನಿಯನ್ನು ಭೇಟಿ ಮಾಡಿದರು. ಇದನ್ನೂ ಓದಿ: ಸೈನಿಕರ ತವರು ಜಿಲ್ಲೆ ಕೊಡಗಿಗೆ ಅಮೋಘ ಕೊಡುಗೆ ನೀಡಿದ್ದರು ಬಿಪಿನ್ ರಾವತ್

    ಈ ವೇಳೆ ನಮ್ಮದು ಇಂಟರ್ ನ್ಯಾಷನಲ್ ಕಂಪನಿ ನೂರು ಕೋಟಿ ಸಾಲ ನೀಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ನೂರು ಕೋಟಿ ಸಾಲ ತೆಗೆದುಕೊಳ್ಳುವ ಮುನ್ನ ಮೂರು ತಿಂಗಳ ಬಡ್ಡಿಯನ್ನು ಮುಂಗಡವಾಗಿ ನೀಡಬೇಕು ಎಂದು ಕಂಡಿಷನ್ ಹಾಕಿತ್ತು. ನೂರು ಕೋಟಿ ಸಾಲ ಕೊಡುತ್ತಿದ್ದಾರೆ, ಕೇವಲ ಮೂರು ತಿಂಗಳ ಬಡ್ಡಿ ತಾನೇ ಅಂತ ಮೂರು ತಿಂಗಳ ಬಡ್ಡಿ ಹಣ ಒಂದು ಕೋಟಿ ಎಂಬತ್ತೊಂದು ಲಕ್ಷ ಹಣವನ್ನು ಉದ್ಯಮಿ ವರುಣ್ ಗಾಂಧಿ ಆ ಕಂಪನಿಗೆ ಕಟ್ಟಿದ್ದರು.  ಇದನ್ನೂ ಓದಿ: ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದ ಕ್ಯಾಪ್ಟನ್ ವರುಣ್ ಸಿಂಗ್ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ

    POLICE JEEP

    ಹಣ ತೆಗೆದುಕೊಂಡ ಫ್ಯೂಚರ್ ಕ್ರೆಸ್ಟ್ ವೆಂಚರ್ಸ್ ಕೆಲ ದಿನಗಳ ನಂತರ ಏಕಾಏಕಿ ಬಾಗಿಲು ಹಾಕಿದ್ದು, ಉದ್ಯಮಿಗೆ ಶಾಕ್ ನೀಡಿದೆ. ಈ ಸಂಬಂಧ ಎಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವಂಚಕರಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ.

  • ಇನ್ನೂ ತಪ್ಪಿಲ್ಲ ರೈತರಿಗೆ ಬ್ಯಾಂಕ್ ನೋಟಿಸ್ ಕಾಟ- ಗಗನಕ್ಕೇರುತ್ತಲಿದೆ ಬಡ್ಡಿ

    ಇನ್ನೂ ತಪ್ಪಿಲ್ಲ ರೈತರಿಗೆ ಬ್ಯಾಂಕ್ ನೋಟಿಸ್ ಕಾಟ- ಗಗನಕ್ಕೇರುತ್ತಲಿದೆ ಬಡ್ಡಿ

    ಹುಬ್ಬಳ್ಳಿ: ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಘೋಷಿಸಿದ್ದ ರೈತರ ಸಾಲ ಮನ್ನಾ ಯೋಜನೆ ಹುಟ್ಟುಹಾಕಿರುವ ಗೊಂದಲ ಇನ್ನೂ ಬಗೆಹರಿದಿಲ್ಲ. ಬ್ಯಾಂಕ್‍ಗಳಿಂದ ರೈತರಿಗೆ ಇನ್ನೂ ನೋಟಿಸ್ ಬರುತ್ತಿದ್ದು, ಇದರಿಂದ ಹೊಸ ಸರ್ಕಾರ ಬಂದರೂ ಬ್ಯಾಂಕ್‍ಗಳಿಂದ ನೋಟಿಸ್ ನೀಡುವುದು ಮಾತ್ರ ನಿಂತಿಲ್ಲ ಎಂದು ರೈತರು ಆತಂಕಕ್ಕೊಳಗಾಗಿದ್ದಾರೆ.

    ಕಳೆದ ಮೂರ್ನಾಲ್ಕು ವರ್ಷದಿಂದ ಮಳೆ ಕೈ ಕೊಟ್ಟಿತ್ತು, ಈ ವರ್ಷ ಪ್ರವಾಹದಿಂದ ಅತೀವೃಷ್ಠಿ ಉಂಟಾಗಿದೆ. ಇಂತಹ ಸಂದರ್ಭದಲ್ಲೇ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸುತ್ತಮುತ್ತಲ ಗ್ರಾಮಗಳ ಹತ್ತಾರು ರೈತರಿಗೆ ಬ್ಯಾಂಕ್ ನೋಟಿಸ್ ಬರುತ್ತಿದ್ದು, ರೈತರು ಕಂಗಾಲಾಗಿದ್ದಾರೆ.

    ಸಾಲಮನ್ನಾ ಆಗುವ ಸಂತಸದಲ್ಲಿದ್ದ ರೈತರೀಗ ಬ್ಯಾಂಕ್ ನೋಟಿಸ್ ನೋಡಿ ಆತಂಕಗೊಂಡಿದ್ದು, ಒಂದು ಕಡೆ ಸಾಲ ಮನ್ನಾ ಆಗಿಲ್ಲ, ಇನ್ನೊಂದೆಡೆ ಬಡ್ಡಿ ದುಪ್ಪಟ್ಟಾಗಿದೆ. ರೈತರೆಲ್ಲ ಪ್ರತಿ ವರ್ಷ ತಾವು ಪಡೆದ ಬೆಳೆಸಾಲದ ಬಡ್ಡಿ ತುಂಬಿ ನವೀಕರಣ ಮಾಡಿಕೊಳ್ಳುತ್ತಿದ್ದರು. ಸರ್ಕಾರದ ಸಾಲಮನ್ನಾ ಘೋಷಣೆ ನಂಬಿ ಕಳೆದ ವರ್ಷದಿಂದ ಸಾಲ ನವೀಕರಣ ಮಾಡಿಕೊಂಡಿರಲಿಲ್ಲ. ಅಲ್ಲದೇ ನವೀಕರಣ ಮಾಡಲು ಬಡ್ಡಿಯನ್ನು ಸಹ ಬ್ಯಾಂಕ್ ಸಿಬ್ಬಂದಿ ತುಂಬಿಸಿಕೊಂಡಿರಲಿಲ್ಲ.

    ರೈತರು ಪಡೆದ ಸಾಲದಲ್ಲಿ ಕೇವಲ 25 ಸಾವಿರ ರೂ. ಮಾತ್ರ ಮನ್ನಾ ಆಗಿದ್ದು, ಉಳಿದ ಬೆಳೆ ಸಾಲಕ್ಕೆ ಬ್ಯಾಂಕ್‍ಗಳು ಶೇ.14ರಷ್ಟು ಬಡ್ಡಿ ವಿಧಿಸಿ ನೋಟಿಸ್ ನೀಡುತ್ತಿವೆ. ಯಾರು ಬೆಳೆ ಸಾಲ ನವೀಕರಣ ಮಾಡಿಕೊಳ್ಳುತ್ತಿದ್ದರೋ ಅಂಥವರಿಗೆ 25 ಸಾವಿರ ರು. ಮನ್ನಾ ಮಾಡಲಾಗಿದೆ. ಈ ಕುರಿತು ಬಹುತೇಕ ರೈತರಿಗೆ ಸರಿಯಾದ ಮಾಹಿತಿಯೇ ಇಲ್ಲ. ಜೊತೆಗೆ ಆ ರೀತಿಯ ನಿಯಮಾವಳಿ ಇದ್ದರೆ ಋಣಮುಕ್ತ ಪತ್ರ ಮನೆಗೆ ಕಳುಹಿಸಿ ಯಾಕೆ ಮೋಸ ಮಾಡಬೇಕಿತ್ತು ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಬಡ್ಡಿ ಶೇ.4 ರಿಂದ 14ಕ್ಕೆ ಏರಿಕೆ: ಪ್ರತಿ ವರ್ಷದಂತೆ ಬೆಳೆಸಾಲ ನವೀಕರಣ ಮಾಡಿಕೊಂಡಿದ್ದರೆ ರೈತರು ಶೇ.4ರ ಪ್ರಮಾಣದಲ್ಲಿ ಬಡ್ಡಿ ತುಂಬಬೇಕಾಗಿತ್ತು. ಇದೀಗ ಕಟ್ಟಬಾಕಿ ಇರುವ ಹಿನ್ನೆಲೆ ಶೇ.14 ರಷ್ಟು ಡ್ಡಿ ತುಂಬಬೇಕು. ಇದೀಗ ಕೇವಲ 25 ಸಾವಿರ ರೂ. ಮಾತ್ರ ಸಾಲಮನ್ನಾ ಮಾಡಿದ್ದಾರೆ. ಈ ಬಗ್ಗೆ ಬ್ಯಾಂಕ್‍ನಲ್ಲಿ ವಿಚಾರಿಸಿದರೆ ಸರ್ಕಾರವನ್ನೇ ಕೇಳಿ ಎನ್ನುತ್ತಾರೆ. 5 ಲಕ್ಷ ರೂ. ಸಾಲ ಪಡೆದಿದ್ದು ಅದೀಗ 6,08,642 ರೂ. ಆಗಿದೆ. 1.80 ಲಕ್ಷ ರೂ. ಬಡ್ಡಿ ರೂಪದಲ್ಲಿದ್ದು, ಸರ್ಕಾರ ಸಾಲ ಮನ್ನಾ ಮಾಡಿರುವುದು ಯಾರ ಲಾಭಕ್ಕೆ ಎಂದು ರೈತರು ಪ್ರಶ್ನಿಸಿದ್ದಾರೆ.

  • ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಕೇಂದ್ರ ಸರ್ಕಾರದ ಬಂಪರ್ ಗಿಫ್ಟ್

    ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಕೇಂದ್ರ ಸರ್ಕಾರದ ಬಂಪರ್ ಗಿಫ್ಟ್

    ನವದೆಹಲಿ: ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಭಾರತವನ್ನು ಗ್ಲೋಬಲ್ ಹಬ್ ಮಾಡುವತ್ತ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಮುಖ್ಯಾಂಶಗಳು:
    – ಕಡಿಮೆ ದರದಲ್ಲಿ ಜನರಿಗೆ ಎಲೆಕ್ಟ್ರಿಕ್ ವಾಹನ ದೊರೆಯುವಂತಾಗಲು ಈಗ ಇರುವ ಶೇ.12 ತೆರಿಗೆ ವ್ಯಾಪ್ತಿಯ ಬದಲು ಶೇ.5ರ ತೆರಿಗೆ ವ್ಯಾಪ್ತಿ ಒಳಗಡೆ ತರಲು ಜಿಎಸ್‍ಟಿ ಕೌನ್ಸಿಲ್ ಬಳಿ ಮನವಿ ಮಾಡಲಾಗಿದೆ.

    – 2023ರ ಮಾರ್ಚ್ 31ರ ಒಳಗಡೆ ಸಾಲ ಮಾಡಿ 1.50 ಲಕ್ಷ ರೂ. ಮೌಲ್ಯದ ವಾಹನದ ಖರೀದಿಸಿದರೆ ಅದಕ್ಕೆ ಯಾವುದೇ ಬಡ್ಡಿ ಇಲ್ಲ.

    – ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಹೆಚ್ಚಿಸುವ ಸಂಬಂಧ 2018ರಲ್ಲಿ ಫೇಮ್ ಯೋಜನೆಯನ್ನು ಪರಿಚಯಿಸಿರುವ ಕೇಂದ್ರ ಸರ್ಕಾರವು 2019-21ರ ಅವಧಿಗೆ 2ನೇ ಹಂತದ ಯೋಜನೆಯನ್ನು ಘೋಷಣೆ ಮಾಡಿದ್ದು, ಇದಕ್ಕೆ 10 ಸಾವಿರ ಕೋಟಿ ಅನುದಾನ ನೀಡಲಾಗಿದೆ.

    – ಹೆಚ್ಚಿನ ಸುಧಾರಿತ ಬ್ಯಾಟರಿ ಮತ್ತು ನೋಂದಾಯಿತ ಇ-ವಾಹನಗಳಿಗೆ ಯೋಜನೆಯಡಿ ಪ್ರೋತ್ಸಾಹ. ಜನ ಸಾಮಾನ್ಯರಿಗೆ ಕೈಗೆಟುಕುವ ಮತ್ತು ಪರಿಸರ ಸ್ನೇಹಿ ಸಾರ್ವಜನಿಕ ಸಾರಿಗೆ ಆಯ್ಕೆ ಮಾಡಲು ಒತ್ತು.

    – ಆರ್ಥಿಕ ಬೆಳವಣಿಗೆ ಮತ್ತು ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ಕ್ಷೇತ್ರದಲ್ಲಿ ಲಿಥಿಯಂ ಬ್ಯಾಟರಿ, ಸೌರ ವಿದ್ಯುತ್ ಚಾರ್ಜಿಂಗ್ ಉತ್ಪಾದನೆ ಕ್ಷೇತ್ರಗಳಲ್ಲಿ ಹೂಡಿಕೆ ಸಂಬಂಧಿತವಾಗಿ ಆದಾಯ ತೆರಿಗೆ ವಿನಾಯಿತಿಗಳನ್ನು ನೀಡುವುದು.

  • ಐಎಂಎ ಹಣ ಹೂಡಿದ್ದ ವಿಷಯ ತಿಳಿದು ಮನೆ ಬಿಟ್ಟ ಪತ್ನಿ

    ಐಎಂಎ ಹಣ ಹೂಡಿದ್ದ ವಿಷಯ ತಿಳಿದು ಮನೆ ಬಿಟ್ಟ ಪತ್ನಿ

    ಬೆಂಗಳೂರು: ಐಎಂಎ ನಲ್ಲಿ ಹಣ ಹೂಡಿದವರ ಎಲ್ಲರದ್ದೂ ವಿಭಿನ್ನ ಕಥೆಗಳು. ಮಕ್ಕಳ ಶಾಲಾ ಫೀ, ಮಗಳ ಮದುವೆ, ತಂದೆಯ ಪಿಂಚಣಿ, ತಾಯಿಯಡ ಹಣ ಹೀಗೆ ಅಲ್ಪಾವಧಿಯಲ್ಲಿ ಹೆಚ್ಚು ಗಳಿಸಬಹುದೆಂಬ ಒಂದೇ ಒಂದು ಆಸೆಯಿಂದ ಕನಸನ್ನು ಐಎಂಎ ನಲ್ಲಿ ಹೂಡಿಕೆ ಮಾಡಿದ್ದರು. ತನ್ನ ಪತಿ ಐಎಂಎ ನಲ್ಲಿ 25 ಲಕ್ಷ ರೂ. ಹೂಡಿರುವ ವಿಷಯ ತಿಳಿದಿರುವ ಪತ್ನಿ ತವರು ಮನೆ ಸೇರಿಕೊಂಡಿದ್ದಾರೆ.

    ಬೆಂಗಳೂರಿನ ಅರಕೆರೆ ನಿವಾಸಿಯಾಗಿರೋ ಶಬ್ಬೀರ್ ಎಂಬವರು ತಮ್ಮ ಚಿಕ್ಕಮಗಳೂರಿನಲ್ಲಿದ್ದ ಆಸ್ತಿಯನ್ನು ಮಾರಾಟ ಮಾಡಿ, ಕಳೆದ 6 ತಿಂಗಳ ಹಿಂದೆ ಐಎಂಎಗೆ ಬರೋಬ್ಬರಿ 25 ಲಕ್ಷ ಹೂಡಿಕೆ ಮಾಡಿದ್ದರು. ಈ ವಿಚಾರ ಪತ್ನಿಗೆ ಗೊತ್ತಿರಲಿಲ್ಲ. ಮೊದಲ ಮೂರು ತಿಂಗಳು ತಲಾ 50 ಸಾವಿರ ಲಾಭದ ಹಣ ಪಡೆದ ಶಬ್ಬೀರ್‍ಗೆ ನಂತರ ಒಂದು ನಯಾಪೈಸೆಯೂ ಬಂದಿಲ್ಲ. ಇದನ್ನೂ ಓದಿ:    ಐಎಂಎ ಬೆನ್ನಲ್ಲೇ ಮತ್ತೊಂದು ವಂಚನೆ ಪ್ರಕರಣ ಬಯಲು

    ಯಾವಾಗ ಮನ್ಸೂರ್ ವಂಚನೆ ಬೆಳಕಿಗೆ ಬಂತೋ ಶಬ್ಬೀರ್ ಶಾಕ್ ಆಗಿದ್ದರು. ಕೊನೆಗೆ ಈ ವಿಚಾರ ಶಬ್ಬೀರ್ ಪತ್ನಿಗೂ ಗೊತ್ತಾಗಿದೆ. ನನ್ನ ಗಮನಕ್ಕೂ ತರದೆ ಇಷ್ಟೊಂದು ಮೊತ್ತದ ಹಣ ಹೇಗೆ ಹಾಕಿದೆ ಅಂತಾ ಗಲಾಟೆ ಮಾಡಿದ ಪತ್ನಿ, ರಾತ್ರಿ ಮುಗಿದು, ಬೆಳಗಾಗೋಷ್ಟರಲ್ಲಿ ಎರಡು ವರ್ಷದ ಮಗು ಜೊತೆ ಮನೆಬಿಟ್ಟು ಹೋಗಿದ್ದಾರೆ.  ಇದನ್ನೂ ಓದಿ: ಕೊನೆಗೂ ದುಬೈನಲ್ಲಿ ಐಎಂಎ ಮಾಲೀಕ ಮನ್ಸೂರ್ ಖಾನ್ ಪತ್ತೆ

    ಐಎಂಎ ಕಂಪನಿಯನ್ನು ನಂಬಿ 25 ಲಕ್ಷ ಹಣ ಹಾಕಿದ ತಪ್ಪಿಗೆ ಹಣದ ಜೊತೆಗೆ ಹೆಂಡ್ತಿ, ಮಗುವನ್ನು ಕಳೆದುಕೊಂಡು ಶಬ್ಬೀರ್ ಅನಾಥವಾಗಿದ್ದಾರೆ. ಈ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಬಹುತೇಕರು ಜೀವಮಾನದ ಸಂಪಾದನೆಯನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಬೀದಿ ಬದಿ ವ್ಯಾಪಾರಿಗಳಿಗೆ ಇನ್ಮುಂದೆ ಸಿಗಲಿದೆ ಬಡ್ಡಿಯೇ ಇಲ್ಲದ ದಿನದ ಸಾಲ: ಏನಿದು ಬಡವರ ಬಂಧು ಯೋಜನೆ? ಯಾರು ಅರ್ಹರು?

    ಬೀದಿ ಬದಿ ವ್ಯಾಪಾರಿಗಳಿಗೆ ಇನ್ಮುಂದೆ ಸಿಗಲಿದೆ ಬಡ್ಡಿಯೇ ಇಲ್ಲದ ದಿನದ ಸಾಲ: ಏನಿದು ಬಡವರ ಬಂಧು ಯೋಜನೆ? ಯಾರು ಅರ್ಹರು?

    ಬೆಂಗಳೂರು: ಮೀಟರ್ ಬಡ್ಡಿ ದಂಧೆಗೆ ಶಾಶ್ವತ ಪರಿಹಾರ ನೀಡುವ ಕ್ರಮಕ್ಕೆ ಮುಂದಾಗಿರುವ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ, ಬಡ್ಡಿ, ಸಾಲದ ಶೂಲಕ್ಕೆ ಸಿಲುಕಿರುವ ಜನರ ನೆರವಿಗೆ ಬರಲು `ಬಡವರ ಬಂಧು’ ಯೋಜನೆ ಶೀಘ್ರವೇ ಜಾರಿ ಮಾಡಲು ಸಿದ್ಧತೆ ನಡೆಸಿದೆ.

    ಸರ್ಕಾರದ ಈ ಯೋಜನೆ ಇಂದ ಬೀದಿ ಬದಿ ವ್ಯಾಪಾರಿಗಳಿಗೆ ಇನ್ನು ಮುಂದೆ ಬಡ್ಡಿಯೇ ಇಲ್ಲದ ದಿನದ ಸಾಲ ಲಭ್ಯವಾಗಲಿದೆ. ಬಡವರ ಬಂಧು ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 53 ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ಕಿರುಸಾಲ ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

    ಎಲ್ಲಿ, ಎಷ್ಟು ಮಂದಿಗೆ ಸಾಲ?
    ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯ 10 ಮಹಾನಗರ ಪಾಲಿಕೆಗಳು ಹಾಗೂ ಜಿಲ್ಲಾ ಕೇಂದ್ರದ ಪ್ರಮುಖ ನಗರಗಳಲ್ಲಿ ಸಾಲ ಸೌಲಭ್ಯ ಸಿಗಲಿದೆ. ಪ್ರಮುಖವಾಗಿ ಬೆಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ 5 ಸಾವಿರ ರೂ., 10 ಮಹಾನಗರ ಪಾಲಿಕೆಗಳಲ್ಲಿ 3 ಸಾವಿರ ರೂ., ಜಿಲ್ಲಾ ನಗರ ಪ್ರದೇಶ 1 ಸಾವಿರ ರೂ. ಸಾಲ ಸೌಲಭ್ಯ ಲಭ್ಯವಾಗಲಿದೆ.

    ರಾಜ್ಯ ಪ್ರಮುಖ ಮಹಾನಗರ ಪಾಲಿಕೆಗಳಾದ ಬಳ್ಳಾರಿ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯಪುರ ನಗರಗಳಲ್ಲಿ 3 ಸಾವಿರ ರೂ. ಸಾಲ ಸೌಲಭ್ಯವಾಗಲಿದೆ. ಬಾಗಲಕೋಟೆ, ಬೀದರ್, ಚಾಮರಾಜನಗರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದೊಡ್ಡಬಳ್ಳಾಪುರ, ಹಾಸನ, ಹಾವೇರಿ, ಕಾರವಾರ, ಕೋಲಾರ, ಕೊಪ್ಪಳ, ಮಡಿಕೇರಿ, ಮಂಡ್ಯ, ರಾಯಚೂರು, ರಾಮನಗರ, ಉಡುಪಿ, ಯಾದಗಿರಿ ಜಿಲ್ಲಾ ಕೇಂದ್ರಗಳ ನಗರಗಳಲ್ಲಿ 1 ಸಾವಿರ ರೂ. ಸಾಲ ಸೌಲಭ್ಯ ಪಡೆಯಬಹುದಾಗಿದೆ.

    ಯಾರಿಗೆ ಅನ್ವಯ.?
    ತಳ್ಳುಬಂಡಿ ಹಾಗೂ ಮೋಟಾರು ವಾಹನಗಳಲ್ಲಿ ಪಾನೀಯ, ತಿಂಡಿ, ಊಟ ಮಾರಾಟ ಮಾಡುವವರು, ಮನೆ ಮನೆಗೆ ತೆರಳಿ ಹೂವು, ಹಣ್ಣ, ತರಕಾರಿ ವಿತರಿಸುವವರು ಹಾಗೂ ಬುಟ್ಟಿಯಲ್ಲಿ ವಸ್ತುಗಳನ್ನು ಮಾರಾಟ ಮಾಡುವವರು, ಪಾದರಕ್ಷೆ, ಚರ್ಮ ಉತ್ಪನ್ನ ರಿಪೇರಿ ಮತ್ತು ಮಾರಾಟ ಮಾಡುವವರು, ಆಟದ ಸಾಮಾನು, ಗೃಹೋಪಯೋಗಿ ವಸ್ತು ಮಾರಾಟ ಮಾಡುವವರು ಈ ಯೋಜನೆ ವ್ಯಾಪ್ತಿಯಲ್ಲಿ ಬರುತ್ತಾರೆ.

    ಯಾರಿಗೆ ಅನ್ವಯಿಸಲ್ಲ?
    ದುಡಿಯುವ ಕೈಗಳಿಗೆ ಹಣ ನೀಡುವುದು ಮಾತ್ರವಲ್ಲದೇ ಯೋಜನೆಯಲ್ಲಿ ಕೆಲ ನಿಯಮಗಳನ್ನ ಅಳವಡಿಸಿದ್ದು, ರಸ್ತೆ ಬದಿ ಸ್ವಚ್ಛತೆ ಹಾಳು ಮಾಡುವವರಿಗೆ ಹಾಗೂ ಪರಿಸರಕ್ಕೆ ಹಾನಿಯುಂಟು ಮಾಡುವ ವಸ್ತುಗಳನ್ನು ಮಾರಾಟ ಮಾಡುವವರಿಗೆ ಯೋಜನೆ ಅನ್ವಯಿಸುವುದಿಲ್ಲ ಎಂಬ ನಿಯಮ ರೂಪಿಸಲಾಗಿದೆ.

    ಸಾಲ ವಿತರಣೆ ಹೇಗೆ?
    ಮಹತ್ವದ ಯೋಜನೆಯನ್ನು ಜಾರಿ ಮಾಡಲು ಈಗಾಗಲೇ ಸಿದ್ಧತೆಯನ್ನು ನಡೆಸಿರುವ ಸರ್ಕಾರ ಸಾಲ ವಿತರಣೆಯನ್ನು ಸಹಕಾರಿ ಬ್ಯಾಂಕ್ ಗಳ ಮೂಲಕ ಮಾಡಲು ನಿರ್ಧರಿಸಿದೆ. ಪ್ರಮುಖವಾಗಿ ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕುಗಳು, ಮಹಿಳಾ ಸಹಕಾರಿ ಬ್ಯಾಂಕುಗಳು, ಪಟ್ಟಣ ಸಹಕಾರ ಬ್ಯಾಂಕು ಇದರಲ್ಲಿ ಸೇರಿದೆ.

    ಸರ್ಕಾರದ ನೀಡುವ ಹಣಕ್ಕೆ ಸಮಯ ಮೀತಿಯಲ್ಲಿ ಬಡ್ಡಿಯನ್ನು ವಿಧಿಸಲು ತೀರ್ಮಾನ ಮಾಡಲಾಗಿದ್ದು, 2 ಸಾವಿರದಿಂದ 10 ಸಾವಿರ ಸಾಲ ಪಡೆದರೆ 3 ತಿಂಗಳ ಅವಧಿಗೆ ಶೇ.4ರಷ್ಟು ಬಡ್ಡಿ ವಿಧಿಸಲಿದೆ. ಸಾಲ ವಿತರಣೆ ಪ್ರತ್ಯೇಕ 8 ರೂಪೇ ಕಾರ್ಡ್ ನೀಡಲಿದೆ. ಯೋಜನೆ ಲಾಭ ಪಡೆಯಲು ಬಿಪಿಎಲ್ ಕಾರ್ಡ್ ಕಡ್ಡಾಯ ಮಾಡಿದ್ದು, ಗುರುತಿನಚೀಟಿ ಇಲ್ಲದವರಿಗೆ ಸಾಲ ವಿತರಿಸಲು ಅವಕಾಶ ನೀಡಿಲ್ಲ.

    ಫಲಾನುಭವಿಗಳ ಶೂನ್ಯ ಬಾಲೆನ್ಸ್ ಉಳಿತಾಯ ಖಾತೆ ತೆರೆದು, ಸಾಲ ಅರ್ಜಿಗಳನ್ನು ಸ್ವೀಕಾರ ಮಾಡಲಿದೆ. ಯೋಜನೆ ಅಡಿ ಸಾಲ ಪಡೆದು ಸಮರ್ಪಕವಾಗಿ ಮರುಪಾವತಿಸಿದರೆ, ಸಾಲ ನವೀಕರಿಸಲು ಮತ್ತು ಶೇ.10ರಷ್ಟು ಮಿತಿ ಅಂದರೆ 15 ಸಾವಿರ ರೂ.ಗೆ ಹೆಚ್ಚಿಸಲು ಅವಕಾಶ ನೀಡಲಾಗಿದೆ. ಅಲ್ಲದೇ ಸಾಲ ಸೌಲಭ್ಯ ಹೆಚ್ಚು ಮಂದಿಗೆ ಲಭ್ಯವಾಗುವಂತೆ ಮಾಡಲು ಬೀದಿಬದಿ ವ್ಯಾಪಾರಿಗಳು ಹೆಚ್ಚು ಇರುವ ಮಾರುಕಟ್ಟೆ ಪ್ರದೇಶದಲ್ಲಿ ಮೊಬೈಲ್ ಘಟಕ ಸ್ಥಾಪನೆ ಮಾಡಲು ನಿರ್ಧಾರಿಸಿದೆ. ಉಳಿದಂತೆ ಜಿಲ್ಲಾಮಟ್ಟದ ಸಮಿತಿ ಸಭೆ ಸೇರಿ ನಗರ ಪ್ರದೇಶಕ್ಕೆ ಒಂದು ಬ್ಯಾಂಕ್ ರಚನೆ ಹಾಗೂ ಈ ಬ್ಯಾಂಕ್‍ನವರಿಗೆ ಬೀದಿಬದಿ ವ್ಯಾಪಾರಿಗಳ ಪಟ್ಟಿ ಸಿದ್ಧಪಡಿಸುವ ಹೊಣೆ ನೀಡಲಾಗುತ್ತದೆ. ಸಾಲ ವಾಪಸ್ ಸಂಗ್ರಹಿಸಲು ಪಿಗ್ಮಿ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯನ್ನು ಮಾಡಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಡ್ಡಿ ಕಟ್ಟು, ಇಲ್ಲ ಹೆಂಡ್ತಿನ ಕಳಿಸು ಎಂದ ದಂಧೆಕೋರ- ಮನನೊಂದು ಆ್ಯಸಿಡ್ ಕುಡಿದು ಪತಿ ಆತ್ಮಹತ್ಯೆ

    ಬಡ್ಡಿ ಕಟ್ಟು, ಇಲ್ಲ ಹೆಂಡ್ತಿನ ಕಳಿಸು ಎಂದ ದಂಧೆಕೋರ- ಮನನೊಂದು ಆ್ಯಸಿಡ್ ಕುಡಿದು ಪತಿ ಆತ್ಮಹತ್ಯೆ

    ಶಿವಮೊಗ್ಗ: ಬಡ್ಡಿ ಕಟ್ಟು, ಇಲ್ಲ ನಿನ್ನ ಹೆಂಡತಿಯನ್ನ ಕಳಿಸು ಎಂಬ ಮೀಟರ್ ಬಡ್ಡಿ ಮಾಫಿಯಾದವನ ಮಾತಿಗೆ ಮನನೊಂದ ವ್ಯಾಪಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ರಿಪ್ಪನ್ ಪೇಟೆಯಲ್ಲಿ ನಡೆದಿದೆ.

    ರಾಜಸ್ಥಾನ ಮೂಲದ ಕಲ್ಯಾಣ್ ಸಿಂಗ್ ಚೌಧರಿ ಆತ್ಮಹತ್ಯೆ ಮಾಡಿಕೊಂಡ ಬಟ್ಟೆ ವ್ಯಾಪಾರಿ. ಕಲ್ಯಾಣ್ ಸಿಂಗ್ ಹದಿನೈದು ವರ್ಷದಿಂದ ರಿಪ್ಪನ್‍ ಪೇಟೆಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಇವರು ಆತ್ಮಹತ್ಯೆ ಮಾಡಿಕೊಳ್ಳಲು ಮಹ್ಮದ್ ರಫಿ ಆಲಿಯಾಸ್ ಬಡ್ಡಿ ಮಾಮು ಕಾರಣ ಎಂದು ಕಲ್ಯಾಣ್ ಸಿಂಗ್ ಚೌಧರಿ ಪತ್ನಿ ರೇಖಾ ಚೌಧರಿ ರಿಪ್ಪನ್‍ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಕಲ್ಯಾಣ್ ಸಿಂಗ್ ತಮ್ಮ ವ್ಯವಹಾರಕ್ಕಾಗಿ ಮೀಟರ್ ಬಡ್ಡಿಯಂತೆ ಹಣ ಪಡೆದಿದ್ದರು. ಆದರೆ ಬಡ್ಡಿ ಹಣ ಹಿಂತಿರುಗಿಸುವಲ್ಲಿ ವಿಳಂಬವಾಗಿತ್ತು. ಇದರಿಂದಾಗಿ ಅಂಗಡಿಗೆ ಬಂದ ಬಡ್ಡಿ ಮಾಮು ಮತ್ತು ಇನ್ನಿತರರು ಗ್ರಾಹಕರ ಎದುರೇ ಅವಾಚ್ಯ ಪದಗಳಿಂದ ನಿಂದಿಸಿದ್ದರು. ಅಲ್ಲದೆ ನಾಳೆಯೊಳಗಾಗಿ ಬಡ್ಡಿ ಕಟ್ಟು, ಇಲ್ಲದಿದ್ದರೆ ಹೆಂಡತಿ ಕಳಿಸು ಅಂತ ಹೇಳಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ.

    ಬಡ್ಡಿ ಮಾಮುವಿನ ಚುಚ್ಚು ಮಾತುಗಳಿಂದ ಮನನೊಂದ ಕಲ್ಯಾಣ್ ಸಿಂಗ್ ಚೌಧರಿ ಮನೆಗೆ ಬಂದು ಟೈಲ್ಸ್ ಸ್ವಚ್ಛ ಮಾಡುವ ಆ್ಯಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲ್ಯಾಣ್ ಸಿಂಗ್ ಶವ ಪರೀಕ್ಷೆ ಮಾಡಿಸಿ, ಅಂತ್ಯ ಸಂಸ್ಕಾರಕ್ಕಾಗಿ ರಾಜಸ್ಥಾನಕ್ಕೆ ಕಳುಹಿಸಲಾಗಿದೆ.

    ಇದನ್ನೂ ಓದಿ: ಸಾಲ ಮಾಡ್ಬೇಡಿ ಫ್ರೆಂಡ್ಸ್- ವಿಡಿಯೋ ರೆಕಾರ್ಡ್ ಮಾಡಿ ಕ್ಯಾಬ್ ಚಾಲಕ ಆತ್ಮಹತ್ಯೆ