Tag: Intercaste marriage

  • ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಮಗಳ ಮುಂದೆಯೇ ಅಳಿಯನನ್ನ ಗುಂಡಿಕ್ಕಿ ಕೊಂದ ಮಾವ

    ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಮಗಳ ಮುಂದೆಯೇ ಅಳಿಯನನ್ನ ಗುಂಡಿಕ್ಕಿ ಕೊಂದ ಮಾವ

    – ಹೆಂಡತಿ ಮಡಿಲಲ್ಲೇ ಪ್ರಾಣ ಬಿಟ್ಟ ಗಂಡ

    ಪಾಟ್ನಾ: ಅಂತರ್ಜಾತಿ ವಿವಾಹ (Intercaste Marriage) ಆಗಿದ್ದಕ್ಕೆ ವ್ಯಕ್ತಿಯೊಬ್ಬ ಮಗಳ ಮುಂದೆಯೇ ಅಳಿಯನನ್ನ ಗುಂಡಿಕ್ಕಿ ಕೊಂದಿರುವ ಘಟನೆ ಬಿಹಾರದ ದರ್ಭಾಂಗಾದಲ್ಲಿರುವ (Darbhanga) ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ.

    ರಾಹುಲ್ ಕುಮಾ‌ರ್ (25) ಹತ್ಯೆಯಾದ ವ್ಯಕ್ತಿ. ದರ್ಭಾಂಗಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (Medical College Hospital) 2ನೇ ವರ್ಷದ ಬಿಎಸ್ಸಿ ನರ್ಗಿಂಗ್‌ ವ್ಯಾಸಂಗ ಮಾಡುತ್ತಿದ್ದ. 4 ತಿಂಗಳ ಹಿಂದಷ್ಟೇ ಅದೇ ಕಾಲೇಜಿನಲ್ಲಿ ಮೊದಲ ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ತನ್ನು ಎಂಬಾಕೆಯನ್ನ ಪ್ರೀತಿಸಿ ಮದುವೆಯಾಗಿದ್ದ. ರಾಹುಲ್‌ ಅಂತರ್ಜಾತಿ ಅನ್ನೋ ಕಾರಣಕ್ಕೆ ಕುಟುಂಬದವರಿಂದ ಭಾರೀ ವಿರೋಧ ಇತ್ತು ಅಂತ ತಿಳಿದುಬಂದಿದೆ.

    ಇನ್ನೂ ಗುಂಡಿಕ್ಕಿ ಹತ್ಯೆಗೈದ ಬೆನ್ನಲ್ಲೇ ರಾಹುಲ್‌ನ ಸ್ನೇಹಿತರು ತನ್ನುವಿನ ತಂದೆ ಆರೋಪಿ ಪ್ರೇಮ್‌ಶಂಕ‌ರ್‌ ಝಾಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದಂತಹ ಬಲಿಷ್ಠ ಮಿತ್ರ ರಾಷ್ಟ್ರದೊಂದಿಗೆ ಸಂಬಂಧವನ್ನ ಹದಗೆಡಿಸಬೇಡಿ – ಟ್ರಂಪ್‌ಗೆ ತಿವಿದ ನಿಕ್ಕಿ ಹ್ಯಾಲಿ

    ಹೆಂಡತಿ ಮಡಿಲಲ್ಲೇ ಪ್ರಾಣಬಿಟ್ಟ ಗಂಡ
    ಮಂಗಳವಾರ (ಆ.5) ಸಂಜೆ ಹೂಡಿ (ಪುಲೋವರ್‌ ಮಾದರಿಯ ಜೆರ್ಸಿ) ಧರಿಸಿದ್ದ ವ್ಯಕ್ತಿಯೊಬ್ಬ ರಾಹುಲ್‌ನ ಬಳಿಗೆ ಬಂದಿದ್ದ. ಹತ್ತಿರ ಬಂದಾಗ ಅದು ನನ್ನ ತಂದೆ ಅನ್ನೋದು ಗೊತ್ತಾಯ್ತ. ಅವರ ಕೈಯಲ್ಲಿ ಬಂದೂಕು ಇತ್ತು. ನನ್ನ ಕಣ್ಮುಂದೆಯೇ ನನ್ನ ಗಂಡನ ಎದೆಗೆ ಗುಂಡು ಹಾರಿಸಿದ್ರು. ನನ್ನ ಗಂಡ ನನ್ನ ಮಡಿಲಲ್ಲಿ ಪ್ರಾಣ ಬಿಟ್ಟರು ಅಂತ ತನ್ನು ಕಣ್ಣೀರಿಟ್ಟಿದ್ದಾಳೆ. ಇದನ್ನೂ ಓದಿ: ಟ್ರಂಪ್‌ ಬೆದರಿಕೆಗೆ ಡೋಂಟ್‌ ಕೇರ್‌ – ಸಂಬಂಧ ಬಲಪಡಿಸಲು ರಷ್ಯಾಗೆ ಅಜಿತ್ ದೋವಲ್ ಭೇಟಿ

    ನನ್ನ ಇಡೀ ಕುಟುಂಬ ಈ ಸಂಚಿನಲ್ಲಿ ಭಾಗಿಯಾಗಿದೆ. ನನ್ನ ಸಹೋದರ ಮತ್ತು ತಂದೆಯಿಂದ ನಮ್ಮ ಜೀವಕ್ಕೆ ಬೆದರಿಕೆಯಿದೆ ಎಂದು ದೂರು ನೀಡಿ ನ್ಯಾಯಾಲಯಕ್ಕೂ ಹೋಗಿದ್ದೆವು ಎಂದು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದು ಮರ್ಯಾದೆಗೇಡು ಹತ್ಯೆ ಎಂದು ತಿಳಿದುಬಂದಿದೆ ಎಂದು ವದರಿಯಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: 24 ಗಂಟೆಗಳಲ್ಲಿ ಭಾರತದ ಎಲ್ಲ ಆಮದುಗಳ ಮೇಲೆ ಸುಂಕ ಗಣನೀಯ ಏರಿಕೆ – ಟ್ರಂಪ್‌ ಮತ್ತೆ ಬೆದರಿಕೆ

  • ಅಂತರ್ಜಾತಿ ಪ್ರೇಮ ವಿವಾಹವಾಗಿದ್ದಕ್ಕೆ ಯುವಕನ ಕಡೆಯವರ ಆಟೋಗೆ ಬೆಂಕಿ ಹಚ್ಚಿದ ಹುಡುಗಿ ಕಡೆಯವರು

    ಅಂತರ್ಜಾತಿ ಪ್ರೇಮ ವಿವಾಹವಾಗಿದ್ದಕ್ಕೆ ಯುವಕನ ಕಡೆಯವರ ಆಟೋಗೆ ಬೆಂಕಿ ಹಚ್ಚಿದ ಹುಡುಗಿ ಕಡೆಯವರು

    ಚಿಕ್ಕಬಳ್ಳಾಪುರ: ಒಂದೇ ಗ್ರಾಮದಲ್ಲಿ ಅಂತರ್ಜಾತಿಯ ಯುವಕ ಮತ್ತು ಯುವತಿ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಕ್ಕೆ (Intercaste Marriage) ರೊಚ್ಚಿಗೆದ್ದ ಯುವತಿ ಕಡೆಯವರು ಯುವಕನ ಸಂಬಂಧಿಕರ ಆಟೋಗೆ (Auto) ಬೆಂಕಿ (Fire) ಹಚ್ಚಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯಲ್ಲಿ ನಡೆದಿದೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಮೇಲಿನ ಅಪ್ಪಿರೆಡ್ಡಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಸುರೇಶ್ ಕುಮಾರ್ ಹಾಗೂ ಮೊನಿಕಾ ಪ್ರೀತಿಸಿ ಪರಾರಿಯಾಗಿ ಮದುವೆಯಾಗಿದ್ದರು. ಸುರೇಶ್ ಕುಮಾರ್ ಕಂಬಿ ಕೆಲಸ ಮಾಡುತ್ತಿದ್ದು, ಮೊನಿಕಾ ಪಿಯುಸಿ ಫೈಲ್ ಆಗಿ ಮನೆಯಲ್ಲೇ ಇದ್ದಳು. ಇದನ್ನೂ ಓದಿ: ಆಂಗ್ಲ ಭಾಷೆಯಲ್ಲಿದ್ದ ಜಾಹೀರಾತು ಫಲಕ ಹರಿದು ಆಕ್ರೋಶ; 50 ಕರವೇ ಕಾರ್ಯಕರ್ತರ ಬಂಧನ

    ಎದುರು ಬದುರು ಮನೆಯಲ್ಲಿದ್ದ ಸುರೇಶ್ ಹಾಗೂ ಮೊನಿಕಾ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು. ಈ ಹಿನ್ನೆಲೆ ಸುರೇಶ್ ಹಾಗೂ ಮೋನಿಕಾ ಹಿರಿಯರ ಒಪ್ಪಿಗೆಯಿಲ್ಲದೇ ಓಡಿಹೋಗಿ ಮದುವೆಯಾಗಿದ್ದರು. ಇದರಿಂದ ರೊಚ್ಚಿಗೆದ್ದ ಹುಡುಗಿಯ ಪೋಷರು ಹುಡುಗನ ಸಂಬಂಧಿಕರಾದ ಮೋಹನ್ ಎಂಬುವವರಿಗೆ ಸೇರಿದ ಆಟೋಗೆ ಬೆಂಕಿ ಹಚ್ಚಿರುವುದಾಗಿ ಆರೋಪಿಸಲಾಗಿದೆ. ಇದನ್ನೂ ಓದಿ: ಮತದಾನ ಮಾಡಲು ಮೈಸೂರಿನಿಂದ ಹೊರಟ ರಾಮ್ ಚರಣ್

  • ಅಂತರ್ಜಾತಿ ವಿವಾಹವಾದ ವಿಕಲಚೇತನ ಜೋಡಿಗೆ ಬಹಿಷ್ಕಾರ – ಹಸುಗೂಸಿನೊಂದಿಗೆ ಬೀದಿಗೆ ಬಿದ್ದ ದಂಪತಿ

    ಅಂತರ್ಜಾತಿ ವಿವಾಹವಾದ ವಿಕಲಚೇತನ ಜೋಡಿಗೆ ಬಹಿಷ್ಕಾರ – ಹಸುಗೂಸಿನೊಂದಿಗೆ ಬೀದಿಗೆ ಬಿದ್ದ ದಂಪತಿ

    ಚಿತ್ರದುರ್ಗ: ದೇಶದಲ್ಲಿ ಅಂತರ್ಜಾತಿಯ ವಿವಾಹಗಳು ಹೆಚ್ಚಾಗಿ ಆಗುವುದರಿಂದ ಜಾತೀಯತೆ ವ್ಯವಸ್ಥೆ ತೊಲಗಿಸಬಹುದು ಎಂದು ಹಿರಿಯರು ಮಾತನಾಡುತ್ತಾರೆ. ಆದರೆ ಈ ಆಧುನಿಕ ಯುಗದಲ್ಲಿ ಅಂತರ್ಜಾತಿ ವಿವಾಹವಾದ ವಿಕಲಚೇತನ ಜೋಡಿಗೆ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಎನ್ ದೇವರಹಳ್ಳಿಯಲ್ಲಿ (Devarahalli) ಬೆಳಕಿಗೆ ಬಂದಿದೆ.

    ವಾಕ್, ಶ್ರವಣ ಇಲ್ಲದ ಎನ್ ದೇವರಹಳ್ಳಿ ಗ್ರಾಮದ ಸಾವಿತ್ರಮ್ಮ ಹಾಗೂ ಆಂಧ್ರ ಮೂಲದ ಮಣಿಕಂಠ ಕಳೆದ 3 ವರ್ಷದ ಹಿಂದೆ ಬೆಂಗಳೂರಿನಲ್ಲಿ ಪ್ರೀತಿಸಿ ಮದುವೆ ಆಗಿದ್ದರು. 3 ವರ್ಷದ ಬಳಿಕ ಸಾವಿತ್ರಮ್ಮ ತವರು ಮನೆ ಎನ್ ದೇವರಹಳ್ಳಿಗೆ ಬಂದಿದ್ದ ಜೋಡಿಗೆ ಆ ಗ್ರಾಮದ ಜೋಗಿ ಜನಾಂಗದ ಮಹಾನ್ ಪುರುಷರು ಅಂತರ್ ಜಾತಿ ವಿವಾಹ ಆಗಿದ್ದೀರಿ ಅಂತ ಅವರನ್ನು ನಿಂದಿಸಿ, 30,000 ಸಾವಿರ ರೂ. ದಂಡ ವಿಧಿಸಿದ್ದಾರೆ. ಅಲ್ಲದೇ ಗ್ರಾಮದಿಂದ ಬಹಿಷ್ಕಾರ ಹಾಕಿ ಅಮಾನವೀಯತೆ ಮೆರೆದಿದ್ದಾರೆ.

    ಆಕೆ ಬಾಣಂತಿ ಎಂಬುದನ್ನು ಲೆಕ್ಕಸದೇ ಗ್ರಾಮದಲ್ಲಿ ಜನರು ಈ ರೀತಿ ಮಾನವೀಯತೆ ಮರೆತು ಅನಾಗರೀಕತೆ ತೋರಿರೋದು ನಿಜಕ್ಕೂ ತುಂಬಾ ನೋವಿನ ಸಂಗತಿ. ಈ ಮುದ್ದಾದ ಜೋಡಿಗೆ ಗ್ರಾಮದಿಂದ ಬಹಿಷ್ಕಾರ ಹಾಕಿದ್ರು ಯಾವುದೇ ಪೊಲೀಸ್ ಠಾಣೆ ಮೆಟ್ಟಿಲೇರದೇ ಮತ್ತೆ ಬೆಂಗಳೂರಿಗೆ ತೆರಳಿದ್ದರು. ಬಳಿಕ ಚಳ್ಳಕೆರೆ ತಾಲೂಕಿನಲ್ಲಿ ನಡೆದ ಪ್ರಸಿದ್ಧ ಗೌರಸಂದ್ರ ಮಾರಮ್ಮ ಜಾತ್ರೆಗೆಂದು ಆಗಮಿಸಿದ್ದಾಗಲೂ ಗ್ರಾಮದ ಅನೇಕ ಮುಖಂಡರು ಅವರಿಗೆ ಕಿರುಕುಳ ಕೊಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಕರ್ನಾಟಕ ಬಂದ್ : ಸಿನಿಮಾ ಬಿಡುಗಡೆ ಮುಂದೂಡಲು ಮನವಿ

    ಪುಟ್ಟ ಮಗುವಿನೊಂದಿಗೆ ದಂಪತಿ ಆಗಮಿಸಿದ್ದನ್ನೂ ಲೆಕ್ಕಿಸದ ಗ್ರಾಮಸ್ಥರು ಮನೆ ಬಿಟ್ಟು ಹೋಗುವಂತೆ ಒತ್ತಡ ಹಾಕಿದ್ದಲ್ಲದೇ ಮತ್ತೆಯೂ ದಂಡ ವಿಧಿಸಲು, ಬಹಿಷ್ಕಾರ ಹಾಕಲು ಮುಂದಾಗಿದ್ದಾರೆ. ಇದರಿಂದಾಗಿ ಬೇಸರಗೊಂಡ ಜೋಡಿ ತಮ್ಮ ಪುಟ್ಟ ಮಗುವಿನೊಂದಿಗೆ ಚಳ್ಳಕೆರೆ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಸದ್ಯ ಸಂತ್ರಸ್ತ ಜೋಡಿಯ ಪರ ನಿಂತಿರುವ ಸಾಮಾಜಿಕ ಹೋರಾಟಗಾರರಿಂದ ಬಹಿಷ್ಕಾರ ಹಾಕಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ. ಇದನ್ನೂ ಓದಿ: ಶುಕ್ರವಾರ ಕರ್ನಾಟಕ ಬಂದ್- ಇಂದು ರಾತ್ರಿಯಿಂದ್ಲೇ ತಮಿಳುನಾಡಿಗೆ ಬಸ್ ಸಂಚಾರ ಬಂದ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಂತರ್ಜಾತಿ ಮದ್ವೆಯಾದ ತಂಗಿ – 11 ವರ್ಷದ ಬಳಿಕ ಸೋದರಿ ಪತಿ ಮೇಲೆ ಅಣ್ಣಂದಿರಿಂದ ಹಲ್ಲೆ

    ಅಂತರ್ಜಾತಿ ಮದ್ವೆಯಾದ ತಂಗಿ – 11 ವರ್ಷದ ಬಳಿಕ ಸೋದರಿ ಪತಿ ಮೇಲೆ ಅಣ್ಣಂದಿರಿಂದ ಹಲ್ಲೆ

    ಯಾದಗಿರಿ: ತಂಗಿ ಅಂತರ್ಜಾತಿ ವಿವಾಹವಾದ ಹಳೆ ದ್ವೇಷ ಹಿನ್ನೆಲೆ 11 ವರ್ಷದ ಬಳಿಕ ತಂಗಿ ಪತಿಯ ಮೇಲೆ ಅಣ್ಣಂದಿರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಜಿಲ್ಲೆಯ ಹಳಿಗೇರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. 11 ವರ್ಷದ ಹಿಂದೆ ಗ್ರಾಮದ ಶರಣಮ್ಮ ಮತ್ತು ವಿಶ್ವನಾಥ್ ಅಂತರ್ಜಾತಿ ವಿವಾಹವಾಗಿದ್ದರು. ಈಗಾಗಲೇ ಈ ಇಬ್ಬರಿಗೆ ಎರಡು ಮಕ್ಕಳಿದ್ದಾರೆ. ಆದರೆ ಮೊದಲಿಂದಲೂ ಶರಣಮ್ಮ ಮತ್ತು ವಿಶ್ವನಾಥ್ ಮೇಲೆ ಶರಣಮ್ಮನ ಮನೆಯವರು ದ್ವೇಷ ಸಾಧಿಸುತ್ತಿದ್ದರು ಎನ್ನಲಾಗಿದೆ.

    ಬುಧವಾರ ವಿನಾಕಾರಣ ವಿಶ್ವನಾಥ್‍ನ ಜೊತೆಗೆ ಜಗಳ ಮಾಡಿದ ಶರಣಮ್ಮನ ಅಣ್ಣಂದಿರು ಹಿಗ್ಗಾ-ಮುಗ್ಗ ಥಳಿಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಸದ್ಯ ತೀವ್ರವಾಗಿ ಗಾಯಗೊಂಡಿದ್ದ ವಿಶ್ವನಾಥ್‍ನನ್ನು ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಈ ಸಮಯದಲ್ಲೂ ಕೂಡ ಜಿಲ್ಲಾಸ್ಪತ್ರೆಗೆ ಬಂದ ಶರಣಮ್ಮ ಅಣ್ಣಂದಿರು ಮತ್ತೊಮ್ಮೆ ಹಿಗ್ಗಾ ಮುಗ್ಗಾ ವಿಶ್ವನಾಥ್‍ನಿಗೆ ಥಳಿಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ಅಂತರ್ಜಾತಿ ಮದ್ವೆಯಾದ ಪ್ರೇಮಿಗಳು- ಯುವತಿಗೆ ಗ್ರಾಮಸ್ಥರಿಂದ ವಿಚಿತ್ರ ಶಿಕ್ಷೆ!

    ಅಂತರ್ಜಾತಿ ಮದ್ವೆಯಾದ ಪ್ರೇಮಿಗಳು- ಯುವತಿಗೆ ಗ್ರಾಮಸ್ಥರಿಂದ ವಿಚಿತ್ರ ಶಿಕ್ಷೆ!

    ಭೋಪಾಲ್: ಯುವತಿಯೊಬ್ಬಳು ಬೇರೆ ಜಾತಿ ಯುವಕನನ್ನು ಮದುವೆಯಾದ ಹಿನ್ನೆಲೆಯಲ್ಲಿ ಸಿಟ್ಟುಗೊಂಡ ಗ್ರಾಮಸ್ಥರು, ಒತ್ತಾಯವಾಗಿ ಪತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವ ಶಿಕ್ಷೆಯನ್ನು ಆಕೆಗೆ ನೀಡಿದ ವಿಚಿತ್ರ ಘಟನೆ ಮಧ್ಯಪ್ರದೇಶದ ದೇವಿಘರ್ ನಲ್ಲಿ ನಡೆದಿದೆ.

    ಜಾಬುವ ಜಿಲ್ಲೆಯ ದೇವಿಘರ್ ನಿವಾಸಿಯಾದ 20 ವರ್ಷದ ಯುವತಿಯೊಬ್ಬಳು ಅಂತರ್ಜಾತಿ ವಿವಾಹವಾಗಿದ್ದಳು. ಈ ವಿಷಯ ತಿಳಿಯುತ್ತಿದ್ದಂತೆ ಸಿಟ್ಟಿಗೆದ್ದ ಗ್ರಾಮಸ್ಥರು ಮದುವೆಯಾದ ಯುವಕ, ಯುವತಿಗೆ ವಿಚಿತ್ರ ಶಿಕ್ಷೆ ನೀಡಿದ್ದಾರೆ. ಅದೇನಪ್ಪಾ ಅಂದ್ರೆ ಮದುವೆಯಾದ ತಪ್ಪಿಗೆ ಯುವತಿ ತನ್ನ ಪತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವಂತೆ ಒತ್ತಾಯಿಸಿ ಶಿಕ್ಷೆ ವಿಧಿಸಿದ್ದಾರೆ.

    ಈ ದೃಶ್ಯವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಈ ರೀತಿ ಯುವತಿಗೆ ಗ್ರಾಮಸ್ಥರು ಶಿಕ್ಷೆ ನೀಡಿದ್ದು ತಪ್ಪು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಮಾಹಿತಿ ಕಲೆ ಹಾಕಿದ ಜಾಬುವ ಪೊಲೀಸರು ಈಗಾಗಲೇ ಘಟನೆಯಲ್ಲಿ ಶಾಮೀಲಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಪಟ್ಟ ಐಪಿಸಿ ಸೆಕ್ಷನ್ ಕಾಯ್ದೆ ಅಡಿಯಲ್ಲಿ ಆರೋಪಿಗಳ ಮೇಲೆ ಕೇಸ್ ದಾಖಲಿಸಲಾಗಿದ್ದು, ಇನ್ನುಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.