Tag: inter district

  • ಅಂತರ್ ಜಿಲ್ಲಾ ಪ್ರಯಾಣಕ್ಕೂ ಮುನ್ನ ಎಚ್ಚರ

    ಅಂತರ್ ಜಿಲ್ಲಾ ಪ್ರಯಾಣಕ್ಕೂ ಮುನ್ನ ಎಚ್ಚರ

    – ಇದುವರೆಗೂ 15ಕ್ಕೂ ಹೆಚ್ಚು ಮಂದಿಗೆ ಕೊರೊನಾ

    ಬೆಂಗಳೂರು: ಲಾಕ್‍ಡೌನ್ ಸಡಿಲಿಕೆ ಇದೆ. ಊರಿಗೆ ಹೋಗೋಣ, ಪ್ರವಾಸ ಹೋಗೋಣ ಅಂತ ಬೇರೆ ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಪ್ರಯಾಣ ಮಾಡುವುದಕ್ಕೂ ಮುನ್ನ ಎಚ್ಚರವಾಗಿರಿ. ಯಾಕೆಂದರೆ ಅಂತರ್ ಜಿಲ್ಲಾ ಪ್ರಯಾಣ ಮಾಡಿದವರಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ.

    ಅಂತರ್ ಜಿಲ್ಲೆ ಪ್ರಯಾಣ ಮಾಡಿದ 15ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಸೋಂಕಿನ ಲಕ್ಷಣ ಇಲ್ಲದೇ ಇದ್ದವರಿಗೂ ಕೊರೊನಾ ಹಬ್ಬುತ್ತಾ ಇದೆ. ಆದರೆ ಈಗ ಅಂತರ್ ಜಿಲ್ಲಾ ಪ್ರಯಾಣ ಮಾಡಿದವರಲ್ಲೂ ಸೋಂಕು ಹಬ್ಬುತ್ತಾ ಇದೆ.

    ಅಂತರ್ ಜಿಲ್ಲಾ ಪ್ರಯಾಣ ಮಾಡಿದ ಮಹಿಳೆಯರಿಗೂ, ವೃದ್ಧರಿಗೂ, ಕೊರೊನಾ ಅಟ್ಯಾಕ್ ಆಗಿದೆ. ಆದ್ದರಿಂದ ಅಂತರ್ ಜಿಲ್ಲಾ ಪ್ರಯಾಣ ಮಾಡುವುದು ಕಡಿಮೆ ಮಾಡಿದರೆ ಒಳ್ಳೆಯದು. ಯಾಕೆಂದರೆ ರಾಜ್ಯದ ಬಹುತೇಕ ಜಿಲ್ಲೆಗಳು ಕಂಟೈನ್ಮೆಂಟ್ ಝೋನ್ ಆಗಿವೆ. ಸೋಂಕಿತ ವ್ಯಕ್ತಿಗಳು, ಕ್ವಾರಂಟೈನ್ ಮಾಡಿರುವುದರಿಂದ ಯಾವ ಪ್ರದೇಶದಲ್ಲಿ ಜನ ಓಡಾಡಿರುತ್ತಾರೋ ಗೊತ್ತಿಲ್ಲ. ಹೀಗಾಗಿ ಅಲ್ಲಿ ಓಡಾಡಿದವರಿಗೆ ಕೊರೊನಾ ಬರುವ ಸಾಧ್ಯತೆ ಇದೆ.

    ಇದುವರೆಗೂ ಅಂತರ ಜಿಲ್ಲಾ ಪ್ರಯಾಣ ಮಾಡಿದ 10ಕ್ಕೂ ಹೆಚ್ಚು ಜನರಿಗೆ ಸೋಂಕು ಹಬ್ಬಿದೆ. ಅಂತರ್ ರಾಜ್ಯ ಜಿಲ್ಲಾ ಪ್ರಯಾಣ ಮಾಡಿ ಸೋಂಕು ತಗುಲಿರುವವರ ವಿವರ ನೋಡೋದಾದರೆ…

    1. ರೋಗಿ ನಂ: 6851
    ಮಂಡ್ಯದ 65 ವರ್ಷದ ವೃದ್ಧ
    ಅಂತರಜಿಲ್ಲಾ ಪ್ರಯಾಣ: ಬೆಂಗಳೂರು ಟು ಮಂಡ್ಯ

    2. ರೋಗಿ ನಂ: 6858
    ಶಿವಮೊಗ್ಗದ 26 ವರ್ಷದ ಮಹಿಳೆ
    ಅಂತರಜಿಲ್ಲಾ ಪ್ರಯಾಣ: ಬೆಂಗಳೂರು ಟು ಶಿವಮೊಗ್ಗ

    3. ರೋಗಿ ನಂ: 6862
    ಬೆಂಗಳೂರಿನ 36 ವರ್ಷದ ಪುರುಷ
    ಅಂತರಜಿಲ್ಲಾ ಪ್ರಯಾಣ: ಮೈಸೂರು ಟು ಬೆಂಗಳೂರು

    4. ರೋಗಿ ನಂ: 6894
    ಬೆಂಗಳೂರಿನ 67 ವರ್ಷದ ವೃದ್ಧ
    ಅಂತರಜಿಲ್ಲಾ ಪ್ರಯಾಣ: ಮೈಸೂರು ಟು ಬೆಂಗಳೂರು

    5. ರೋಗಿ ನಂ: 6561 (13ನೇ ತಾರೀಖಿನದು)
    ಬೆಂಗಳೂರಿನ 20 ವರ್ಷದ ಯುವಕ
    ಅಂತರಜಿಲ್ಲಾ ಪ್ರಯಾಣ: ತುಮಕೂರು

    6. ರೋಗಿ ನಂ: 6562 (13ನೇ ತಾರೀಖಿನದು)
    ಬೆಂಗಳೂರಿನ 46 ವರ್ಷದ ಪುರುಷ
    ಅಂತರಜಿಲ್ಲಾ ಪ್ರಯಾಣ: ತುಮಕೂರು

    7. ರೋಗಿ ನಂ: 6253 (12ನೇ ತಾರೀಖಿನದು)
    ಧಾರವಾಡದ 37 ವರ್ಷದ ಪುರುಷ
    ಅಂತರಜಿಲ್ಲಾ ಪ್ರಯಾಣ: ಚಿತ್ರದುರ್ಗ

    8. ರೋಗಿ ನಂ: 6262 (12ನೇ ತಾರೀಖಿನದು)
    ಧಾರವಾಡದ 50 ವರ್ಷದ ಪುರುಷ
    ಅಂತರಜಿಲ್ಲಾ ಪ್ರಯಾಣ: ಕೋಲಾರ-ಬೆಂಗಳೂರು

    9. ರೋಗಿ ನಂ: 6267 (12ನೇ ತಾರೀಖಿನದು)
    ಧಾರವಾಡದ 75 ವರ್ಷದ ವೃದ್ಧ
    ಅಂತರಜಿಲ್ಲಾ ಪ್ರಯಾಣ: ತುಮಕೂರು

    10. ರೋಗಿ ನಂ: 6278 (12ನೇ ತಾರೀಖಿನದು)
    ಮೈಸೂರಿನ 24 ವರ್ಷದ ಮಹಿಳೆ
    ಅಂತರಜಿಲ್ಲಾ ಪ್ರಯಾಣ: ಕೆ.ಆರ್. ಪೇಟೆ

    ಅಂತರ್ ಜಿಲ್ಲಾ ಪ್ರಯಾಣದವರಿಗೆ ಕೊರೊನಾ ಬೆನ್ನೇರೆಲು ಕಾರಣ
    * ರಾಜ್ಯದ ಜಿಲ್ಲೆಗಳೆಲ್ಲ ಸೋಂಕು ಪೀಡಿತ ಜಿಲ್ಲೆಗಳು ಆಗಿರುವುದು
    * ಕಂಟೈನ್ಮೆಂಟ್ ಝೋನ್‍ಗಳಲ್ಲಿ ಓಡಾಟ ಮಾಡಿ ಜಿಲ್ಲೆಗೆ ತೆರಳಿ ಮನೆಯವರೊಂದಿಗೆ ಸಂಪರ್ಕ
    * ಜಿಲ್ಲೆಗೆ ಎಸಿ ಕಾರಿನಲ್ಲಿ ಪ್ರಯಾಣ ಮಾಡೋದು ಪ್ರಮುಖ ಕಾರಣ
    * 60 ವರ್ಷ ಮೇಲ್ಪಟ್ಟವರು ಪ್ರಯಾಣ ಮಾಡಿ, ಸೋಂಕು ಬರಲು ಕಾರಣ ರೋಗ ನಿರೋಧಕ ಶಕ್ತಿ ಕಡಿಮೆ
    * ಕ್ವಾರಂಟೈನ್ ಆದ ವ್ಯಕ್ತಿಗಳು ಓಡಾಟ ಮಾಡಿರುವುದು ಅಂತರ್ ಜಿಲ್ಲಾ ಪ್ರಯಾಣ ಮಾಡಿದವರಿಗೆ ಸೋಂಕು ಬರಲು ಕಾರಣ
    * ಜಿಲ್ಲಾ ಪ್ರಯಾಣಕ್ಕೆ ಬಸ್ಸಿನಲ್ಲಿ ಪ್ರಯಾಣ ಮಾಡೋದು ಸೋಂಕಿಗೆ ಮೂಲ ಕಾರಣ

  • ಇನ್ಮುಂದೆ ಅಂತರ್‌ಜಿಲ್ಲಾ ಓಡಾಟಕ್ಕೆ ಪಾಸ್ ಅಗತ್ಯವಿಲ್ಲ

    ಇನ್ಮುಂದೆ ಅಂತರ್‌ಜಿಲ್ಲಾ ಓಡಾಟಕ್ಕೆ ಪಾಸ್ ಅಗತ್ಯವಿಲ್ಲ

    ಬೆಂಗಳೂರು: ಇನ್ಮುಂದೆ ಅಂತರ್‌ಜಿಲ್ಲೆಗಳ ಮಧ್ಯೆ ಬಸ್ಸಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಹೇಗೆ ಪಾಸ್ ಅಗತ್ಯವಿಲ್ಲವೋ, ಅದೇ ರೀತಿ ಅಂತರ್‌ಜಿಲ್ಲೆಗಳ ನಡುವೆ ಖಾಸಗಿ ವಾಹನದಲ್ಲಿ ಸಂಚರಿಸುವ ವ್ಯಕ್ತಿಗಳಿಗೆ ಪಾಸ್ ಅಗತ್ಯವಿಲ್ಲ ಎಂದು ಡಿಜಿಪಿ ಕರ್ನಾಟಕ ಟ್ವೀಟ್ ಮಾಡಿದೆ.

    ಲಾಕ್‍ಡೌನ್ 3 ಜಾರಿಯಾದಾಗ ಯಾವೆಲ್ಲ ಷರತ್ತುಗಳು ಇತ್ತೋ ಆ ಎಲ್ಲ ಷರತ್ತುಗಳು ಅನ್ವಯವಾಗುತ್ತದೆ. ಅಂದರೆ ಖಾಸಗಿ ವ್ಯಕ್ತಿಗಳು ಸೇವಾ ಸಿಂಧು ವೆಬ್‍ಸೈಟ್ ಮೂಲಕ ದಾಖಲೆಗಳನ್ನು ಸಲ್ಲಿಸಿ ಪಾಸ್ ಪಡೆದು ತೆರಳಬೇಕಾಗುತ್ತದೆ ಎಂಬ ನಿಯಮ ಈ ಹಿಂದೆ ಇತ್ತು. ಆದರೆ ಈ ನಿಯಮವನ್ನು ಈಗ ಕೈಬಿಡಲಾಗಿದ್ದು, ಅಂತರ್‌ಜಿಲ್ಲೆಗೆ ಖಾಸಗಿ ವಾಹನದಲ್ಲಿ ಸಂಚರಿಸುವ ವ್ಯಕ್ತಿಗಳಿಗೆ ಪಾಸ್ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.

    ಈ ಹಿಂದಿನ ನಿಯಮದ ಪ್ರಕಾರ, ಸರ್ಕಾರಿ ನೌಕರರು, ಸಿಬ್ಬಂದಿಗೆ, ಕಂಪನಿಗಳ ಉದ್ಯೋಗಿಗಳಿಗೆ ಅಂತರ್‌ಜಿಲ್ಲಾ ಪಾಸ್ ಅಗತ್ಯವಿಲ್ಲ. ಈ ವ್ಯಕ್ತಿಗಳು ಪೊಲೀಸರಿಗೆ ಐಡಿ ಕಾರ್ಡ್ ತೋರಿಸಿದರೆ ಅನುಮತಿ ನೀಡಲಾಗುತ್ತದೆ. ಹಾಗೆಯೇ ಟ್ಯಾಕ್ಸಿ ಯಲ್ಲಿ ಚಾಲಕರೊಂದಿಗೆ ಇಬ್ಬರು, ಮ್ಯಾಕ್ಸಿ ಕ್ಯಾಬ್ ನಲ್ಲಿ ಮೂರು ಜನ ಮತ್ತು ಚಾಲಕರು ಪ್ರಯಾಣಿಸಲು ಅನುಮತಿ ನೀಡಲಾಗುತ್ತದೆ. ಆದರೆ ಪ್ರಯಾಣಿಕರಿಗೆ ಪಾಸ್ ಕಡ್ಡಾಯ ಎಂದು ಸೂಚಿಸಲಾಗಿತ್ತು. ಆದರೆ ಈಗ ಖಾಸಗಿ ವಾಹನದಲ್ಲಿ ಹೋಗುವವರಿಗೂ ಪಾಸ್ ಅಗತ್ಯವಿಲ್ಲ. ಆದರೆ ಲಾಕ್‍ಡೌನ್ ನಿಯಮವನ್ನು ಪಾಲಿಸಬೇಕು, ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಯಾವುದೇ ಖಾಸಗಿ ವಾಹನಗಳು ಸಂಚರಿಸುವಂತಿಲ್ಲ ಎಂದು ತಿಳಿಸಿದೆ.

  • ದರೋಡೆಕೋರರ ಬಂಧನ- 13 ದಿನಗಳಲ್ಲಿ ಪ್ರಕರಣ ಬೇಧಿಸಿದ ಪೊಲೀಸರು

    ದರೋಡೆಕೋರರ ಬಂಧನ- 13 ದಿನಗಳಲ್ಲಿ ಪ್ರಕರಣ ಬೇಧಿಸಿದ ಪೊಲೀಸರು

    ಕೊಡಗು: ಐದು ಜಿಲ್ಲೆಗಳಲ್ಲಿ 10 ದರೋಡೆ ಮಾಡಿದ್ದ ಅಂತರ್ ಜಿಲ್ಲೆ ದರೋಡೆಕೋರರನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದು, ಕೇವಲ 13 ದಿನಗಳಲ್ಲಿ ಪ್ರಕರಣ ಬೇಧಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಜೂನ್ 17ರಂದು ನಡೆದ ಹೆಬ್ಬಾಲೆಯ ಎಆರ್ ಪೆಟ್ರೋಲ್ ಬಂಕ್ ದರೋಡೆ ಮಾಡಿದ್ದ ಪ್ರಕರಣವನ್ನು ಪೊಲೀಸರು ಬೆನ್ನತ್ತಿದ್ದರು. ಈ ವೇಳೆ 5 ಜಿಲ್ಲೆಗಳ 10 ಪ್ರಕರಣಗಳು ಬಯಲಿಗೆ ಬಂದಿದ್ದು, ಅಂತರ್ ಜಿಲ್ಲೆ ಸುಲಿಗೆಕೋರರ ತಂಡವನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ರಾಮನಗರ, ಹಾಸನ, ಮೈಸೂರು ಮೂಲದ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಲಕ್ಷಾಂತರ ರೂ. ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

    ಲಾಂಗ್ ತೋರಿಸಿ ಹಲ್ಲೆ ಮಾಡಿ ಹಣ, ಮೊಬೈಲ್ ದೋಚಿ ಸುಲಿಗೆಕೋರರು ಪರಾರಿಯಾಗುತ್ತಿದ್ದರು. ಐಪಿಸಿ ಸೆಕ್ಷನ್ 420, 394, 427 ಅಡಿ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಡಗು ಎಸ್‍ಪಿ ಡಾ.ಸುಮನ್.ಡಿ.ಪನ್ನೇಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಸಿಸಿಟಿವಿ ಫೂಟೇಜ್, ಬೆರಳಚ್ಚಿನ ಆಧಾರದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ರಾಮನಗರದ ಪ್ರವೀಣ್(25), ಹಾಸನದ ಗಣೇಶ್(30), ಮೈಸೂರಿನ ಕುಮಾರ್(33) ಮತ್ತು ಅಭಿಷೇಕ್(23) ಎಂದು ಗುರುತಿಸಲಾಗಿದೆ.

    ಒಂಟಿ ಮನೆ, ಪೆಟ್ರೋಲ್ ಬಂಕ್‍ಗಳೇ ಇವರು ಟಾರ್ಗೆಟ್ ಮಾಡಿಕೊಳ್ಳುತ್ತಿದ್ದರು. ರಾಮನಗರ, ಮಂಡ್ಯ, ಮೈಸೂರು, ಹಾಸನ ಹಾಗೂ ಕೊಡಗಿನಲ್ಲಿ ಈ ಆರೋಪಿಗಳ ವಿರುದ್ಧ ದರೋಡೆ ಪ್ರಕರಣ ದಾಖಲಾಗಿವೆ. ಬಂಧಿತರಿಂದ ಒಟ್ಟು 2.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, 2 ಬೈಕ್, 2 ಲಾಂಗ್, 10ಕ್ಕೂ ಅಧಿಕ ಮೊಬೈಲ್, ಟಿವಿ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಪ್ರವೀಣ್ ಮೇಲೆ ಶನಿವಾರಸಂತೆ ಠಾಣೆಯಲ್ಲಿ ಈ ಹಿಂದೆ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ 13 ದಿನಗಳಲ್ಲಿ ಕೊಡಗು ಪೊಲೀಸರು ಪ್ರಕರಣ ಬೇಧಿಸಿದ್ದು, ಕೊಡಗು ಎಸ್‍ಪಿ ಡಾ.ಸುಮನ್.ಡಿ.ಪನ್ನೇಕರ್ ಅವರು ತನಿಖಾ ತಂಡಕ್ಕೆ ನಗದು ಬಹುಮಾನ ಘೋಷಿಸಿದ್ದಾರೆ.