Tag: Intelligence Department

  • ಕನ್ನಡದ ಸರಿಗಮಪ ಗ್ರ್ಯಾಂಡ್ ಫಿನಾಲೆ ರದ್ದು: ಸಚಿವರ ಸಭೆಯಲ್ಲಿ ನಡೆದಿದ್ದೇನು?

    ಕನ್ನಡದ ಸರಿಗಮಪ ಗ್ರ್ಯಾಂಡ್ ಫಿನಾಲೆ ರದ್ದು: ಸಚಿವರ ಸಭೆಯಲ್ಲಿ ನಡೆದಿದ್ದೇನು?

    ನಿನ್ನೆ ಯಾದಗಿರಿಯಲ್ಲಿ (Yadagiri) ನಡೆಯಬೇಕಿದ್ದ ಜೀ ಕನ್ನಡ ವಾಹಿನಿಯ ಸಂಗೀತ ರಿಯಾಲಿಟಿ ಶೋ ‘ಸರಿಗಮಪ’ (Saregamappa) ಕಾರ್ಯಕ್ರಮ ಶುರುವಾಗುವ ಅರ್ಧ ಗಂಟೆ ಮುಂಚೆಯೇ ರದ್ದಾಗಿದೆ. ಸಂಜೆ 6 ಗಂಟೆಗೆ ಫಿನಾಲೆ ಶೋ ನಡೆಯಬೇಕಿತ್ತು. ಅದಕ್ಕೂ ಅರ್ಧಗಂಟೆ ಮುಂಚೆ ವೇದಿಕೆಗೆ ಬಂದ ವಾಹಿನಿಯ ಪ್ರತಿನಿಧಿ, ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮವು ರದ್ದಾದ (Canceled) ಬಗ್ಗೆ ಮಾಹಿತಿ ನೀಡಿದರು. ಸಹಜವಾಗಿಯೇ ಅಭಿಮಾನಿಗಳಿಗೆ ಈ ನಡೆ ನಿರಾಸೆ ಮೂಡಿಸಿತು.

    ಯಾದರಿಗಿ ಜಿಲ್ಲಾ ಮೈದಾನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಅಂದಾಜು 35 ಸಾವಿರ ಜನರು ನೆರೆದಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, (Dinesh Gundurao) ಕಾರ್ಯಕ್ರಮಕ್ಕೂ ಮುನ್ನ ಜಿಲ್ಲೆಯ ಅಧಿಕಾರಿಗಳ ಜೊತೆ ಕೆಡಿಪಿ ಸಭೆ ಮಾಡುತ್ತಿದ್ದರು. ಅದೇ ವೇಳೆಯಲ್ಲೇ  ಕಾರ್ಯಕ್ರಮ ನಡೆಸದಂತೆ ಗುಪ್ತಚರ ಇಲಾಖೆಯಿಂದ (Intelligence Department) ಮಾಹಿತಿ ಬಂದಿದೆ ಎಂದು ಹೇಳಲಾಗುತ್ತಿದೆ. ಗೃಹ ಸಚಿವರು ಹಾಗೂ ಪೊಲೀಸ್ ಹಿರಿಯ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿ, ಕಾರ್ಯಕ್ರಮ ರದ್ದು ಮಾಡುವಂತೆ ಸೂಚಿಸಿದ್ದಾರೆ.

    ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟದ ತಲೆಬಿಸಿಯಲ್ಲಿರುವ ಪೊಲೀಸ್ ಇಲಾಖೆಯು, ಕಾರ್ಯಕ್ರಮ ನೋಡಲು ಈ ಪ್ರಮಾಣದಲ್ಲಿ ಜನರು ಸೇರಿದ್ದರಿಂದ ಏನಾದರೂ ಸಣ್ಣ ಅವಘಡ ನಡೆದರೂ, ಅನಾಹುತ ತಪ್ಪಿದ್ದಲ್ಲ ಎಂದರಿತು ಕಾರ್ಯಕ್ರಮವನ್ನು ರದ್ದು ಮಾಡುವಂತೆ ಸೂಚಿಸಿದ್ದಾರೆ.

    ಜಿಲ್ಲಾಡಳಿತಕ್ಕೆ ಇಂಥದ್ದೊಂದ ಸಂದೇಶ ಬಂದ ತಕ್ಷಣವೇ ಜೀ ವಾಹಿನಿಯ ಆಯೋಜಕರಿಗೆ ಮಾಹಿತಿ ನೀಡಿ, ಕಾರ್ಯಕ್ರಮವನ್ನು ರದ್ದು ಮಾಡುವಂತೆ ತಿಳಿಸಿದ್ದಾರೆ. ಅನಿವಾರ್ಯವಾಗಿ ಕಾರ್ಯಕ್ರಮ ರದ್ದು ಮಾಡಿದೆ ವಾಹಿನಿ. ಗುಪ್ತಚರ ಮಾಹಿತಿಯನ್ನು ಬಹಿರಂಗ ಪಡಿಸದೇ ತಾಂತ್ರಿಕ ಕಾರಣವನ್ನು ನೀಡಿ, ಮೈದಾನವನ್ನು ಖಾಲಿ ಮಾಡಿಸಲಾಗಿದೆ.

    ಕಾರ್ಯಕ್ರಮ ರದ್ದಾದ ಕುರಿತಂತೆ ನಾನಾ ರೆಕ್ಕೆಪುಕ್ಕಗಳನ್ನೂ ಕಟ್ಟಲಾಗುತ್ತಿದೆ. ರಾಜಕೀಯ ಬಣ್ಣವನ್ನೂ ಬಳೆಯಲಾಗುತ್ತಿದೆ. ರಾಜಕಾರಣಿಗಳ ಸಣ್ಣತನದಿಂದಾಗಿ ಈ ಕಾರ್ಯಕ್ರನ ನಡೆಯಲಿಲ್ಲ ಎಂದು ಚರ್ಚಿಸಲಾಗುತ್ತಿದೆ. ಆದರೆ, ಅದೆಲ್ಲವೂ ಸುಳ್ಳು ಅಂತಿದ್ದಾರೆ ವಾಹಿನಿಯ ಪ್ರತಿನಿಧಿ.

  • ಕನ್ನಡದ ಸರಿಗಮಪ ಗ್ರ್ಯಾಂಡ್ ಫಿನಾಲೆ ದಿಢೀರ್ ರದ್ದು: ಕಾರಣ ಹಲವು

    ಕನ್ನಡದ ಸರಿಗಮಪ ಗ್ರ್ಯಾಂಡ್ ಫಿನಾಲೆ ದಿಢೀರ್ ರದ್ದು: ಕಾರಣ ಹಲವು

    ನ್ನಡದ ಹೆಸರಾಂತ ಜೀ ಕನ್ನಡ ವಾಹಿನಿಯ ಜನಪ್ರಿಯ ಸಂಗೀತ ಶೋ ಸರಿಗಮಪ (Saregamapa)ಗ್ರ್ಯಾಂಡ್ ಫಿನಾಲೆ ತಲುಪಿದೆ. ಈ ಬಾರಿಯ ಫಿನಾಲೆಯಲ್ಲಿ ಯಾದಗಿರಿ (Yadagiri) ಜಿಲ್ಲಾ ಮೈದಾನದಲ್ಲಿ ನಡೆಸಲು ವಾಹಿನಿ ತೀರ್ಮಾನ ತಗೆದುಕೊಂಡಿತ್ತು. ಅಂದುಕೊಂಡಂತೆ ಆಗಿದ್ದರೆ, ನಿನ್ನೆ ರಾತ್ರಿ ಫಿನಾಲೆ ಮುಗಿದು, ವಿಜೇತರ ಕೈಯಲ್ಲಿ ಟ್ರೋಫಿ ಇರಬೇಕಿತ್ತು. ಇನ್ನೇನು ಕಾರ್ಯಕ್ರಮ ಶುರುವಾಗಬೇಕು ಆಗ ವಾಹಿನಿಯ ಪ್ರತಿನಿಧಿ ಕಾರ್ಯಕ್ರಮ ರದ್ದಾಗಿರುವ ಕುರಿತು ಪ್ರಕಟನೆ ನೀಡಿ ಅಭಿಮಾನಿಗಳನ್ನು ನಿರಾಸೆ ಮಾಡಿದ್ದಾರೆ.

    ಅಷ್ಟಕ್ಕೂ ಕಾರ್ಯಕ್ರಮ ದಿಢೀರ್ ಅಂತ ರದ್ದಾಗಲು ತಾಂತ್ರಿಕ ಕಾರಣವನ್ನು ನೀಡಲಾಗುತ್ತಿದೆ. ವಾಹಿನಿಯ ಪ್ರತಿನಿಧಿಯು ವೇದಿಕೆಯ ಮೇಲೆ ತಾಂತ್ರಿಕ ಕಾರಣವನ್ನೇ ನೀಡಿದ್ದಾರೆ. ಆದರೆ, ಕಾರ್ಯಕ್ರಮ ರದ್ಧಾಗಲು ಬೇರೆಯದ್ದೇ ಕಾರಣವನ್ನು ನೀಡಲಾಗುತ್ತಿದೆ. ಕಾರ್ಯಕ್ರಮವನ್ನು ಯಾದಗಿರಿಯಲ್ಲಿ ನೆಡೆಸಲು ಪೊಲೀಸರು ಪರ್ಮಿಷನ್ ಕೊಟ್ಟ ನಂತರವೂ ರದ್ಧಾದ ಕಾರಣದಿಂದಾಗಿ ಸಾಕಷ್ಟು ಅನುಮಾನ ಮೂಡಿದೆ.

    ಈ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವರು ಸೇರಿದಂತೆ ಅನೇಕ ಗಣ್ಯರು ಭಾಗಿ ಆಗಬೇಕಿತ್ತು. ಕಾರ್ಯಕ್ರಮದಲ್ಲಿ ಭಾಗಿ ಆಗುವುದಕ್ಕಾಗಿಯೇ ಸಚಿವ ದಿನೇಶ್ ಗುಂಡೂರಾವ್ ಯಾದಗಿರಿಗೆ ಬಂದಿಳಿದಿದ್ದರು. ವಾಹಿನಿಯ ಮುಖ್ಯಸ್ಥರು, ಸಂಗೀತ ನಿರ್ದೇಶಕ ಹಂಸಲೇಖ ಮತ್ತು ಅರ್ಜುನ್ ಜನ್ಯ ಗಾಯಕರಾದ ವಿಜಯ್ ಪ್ರಕಾಶ್, ನಿರೂಪಕಿ ಅನುಶ್ರೀ, ಶೋ ಸ್ಪರ್ಧಿಗಳು, ಹೆಸರಾಂತ ಗಾಯಕ ಗಾಯಕಿಯರ ತಂಡವೇ ಕಾರ್ಯಕ್ರಮದಲ್ಲಿ ಭಾಗಿ ಆಗಬೇಕಿತ್ತು. ಮೂವತ್ತು ಸಾವಿರಕ್ಕೂ ಹೆಚ್ಚು ಜನರು ಮೈದಾನದಲ್ಲಿ ಸೇರಿದ್ದರು. ಈ ಅಪಾರ ಪ್ರಮಾಣದಲ್ಲಿ ಸೇರಿದ ಜನರೇ ಕಾರ್ಯಕ್ರಮ ರದ್ದಿಗೆ ಕಾರಣರಾದರು ಎನ್ನುವುದು ಇನ್ ಸೈಡ್ ಸ್ಟೋರಿ.

    ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟದಿಂದ ಬೆಚ್ಚಿ ಬಿದ್ದಿರುವ ಪೊಲೀಸ್ ಇಲಾಖೆ, ಆತನ ಹುಡುಕಾಟದಲ್ಲಿ ತಲೆ ಕೆಡಿಸಿಕೊಂಡು ಕೂತಿದೆ. ಶಂಕಿತ ವ್ಯಕ್ತಿಯು ಬಳ್ಳಾರಿಯಿಂದ ಯಾದಗಿರಿಯತ್ತ ಪ್ರಯಾಣ ಬೆಳೆಸಿದ್ದಾರೆ ಎನ್ನುವ ಮಾಹಿತಿ ಕೂಡ ಹರಿದಾಡುತ್ತಿದೆ. ಈ ಕಾರಣದಿಂದಾಗಿ ರಾಜ್ಯ ಗುಪ್ತಚರ ( Intelligence Department)  ಇಲಾಖೆಯು ಕಾರ್ಯಕ್ರಮ ರದ್ದು ಮಾಡುವಂತೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿತ್ತು ಎಂದು ಹೇಳಲಾಗುತ್ತಿದೆ. ಇದೇ ಕಾರಣದಿಂದಾಗಿ ದಿಢೀರ್ ಅಂತ ಕಾರ್ಯಕ್ರಮ ನಿಲ್ಲಿಸಲಾಗಿದೆ ಎನ್ನುವುದು ಪೊಲೀಸ್ ಮೂಲಗಳ ಮಾಹಿತಿ.

  • ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಅಧಿಕಾರಿ, ಕಚೇರಿಗೆ ಜೀವ ಬೆದರಿಕೆ- ಭದ್ರತೆ ಹೆಚ್ಚಿಸಿದ ಪೊಲೀಸರು

    ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಅಧಿಕಾರಿ, ಕಚೇರಿಗೆ ಜೀವ ಬೆದರಿಕೆ- ಭದ್ರತೆ ಹೆಚ್ಚಿಸಿದ ಪೊಲೀಸರು

    ನವದೆಹಲಿ: ಇಸ್ರೇಲ್-ಹಮಾಸ್ ನಡುವೆ ಯುದ್ಧ ಮುಂದುವರಿದಿದ್ದು, ಈ ನಡುವೆ ದೆಹಲಿಯಲ್ಲಿರುವ  (New Delhi) ಇಸ್ರೇಲ್ ರಾಯಭಾರಿ ಅಧಿಕಾರಿ (Ambassador of Israel) ನೌರ್ ಗಿಲೋನ್ ಮೇಲೆ ಮಾರಣಾಂತಿಕ ದಾಳಿ ಸಂಭವಿಸಬಹುದು ಮತ್ತು ಕಚೇರಿ (Embassy of Israel) ಮೇಲೆ ದಾಳಿ ನಡೆಯಬಹುದು ಎಂದು ಗುಪ್ತಚರ ಇಲಾಖೆ (Intelligence Department) ದೆಹಲಿ ಪೊಲೀಸರಿಗೆ ಎಚ್ಚರಿಕೆ ನೀಡಿದೆ.

    ರಾಯಭಾರಿ ಮೇಲಿನ ದಾಳಿಯ ಬಗ್ಗೆ ದೇಶದ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿದೆ. ಇದಲ್ಲದೆ ಇಸ್ರೇಲ್ ರಾಯಭಾರ ಕಚೇರಿಗೂ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆಗಳು ಬರುತ್ತಿವೆ. ಈ ಬಗ್ಗೆ ಮಾಹಿತಿ ಆಧರಿಸಿ ದೆಹಲಿಯ ರಾಯಭಾರಿ ಕಚೇರಿಗೆ ಭದ್ರತೆ ಹೆಚ್ಚಿಸಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ತಗ್ಗಿದ ವಾಯು ಮಾಲಿನ್ಯ – ಶಾಲೆ, ಕಾಲೇಜುಗಳು ಪುನಾರಂಭ

    ಎರಡು ದಿನಗಳ ಹಿಂದೆ ಕೇಂದ್ರ ಗೃಹ ಸಚಿವಾಲಯವು ದೆಹಲಿ ಪೊಲೀಸರಿಗೆ ಪತ್ರ ಬರೆದಿದ್ದು, ಇಸ್ರೇಲ್ ರಾಯಭಾರ ಕಚೇರಿಯಿಂದ ಪತ್ರ ಬಂದಿದೆ. ಇಸ್ರೇಲ್ ರಾಯಭಾರಿ ಮೇಲೆ ಉಗ್ರರ ದಾಳಿಯ ಬೆದರಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬರುತ್ತಿವೆ ಎಂದು ರಾಯಭಾರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಉಲ್ಲೇಖಿಸಿದೆ. ದೆಹಲಿ ಪೊಲೀಸರಿಗೆ ಸೂಕ್ತ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಲಾಗಿದೆ. ಇದನ್ನೂ ಓದಿ: ವಿಶಾಖಪಟ್ಟಣಂ ಬಂದರಿನಲ್ಲಿ ಬೆಂಕಿ ಅವಘಡ- 40 ದೋಣಿಗಳು ಭಸ್ಮ

    ಇಸ್ರೇಲ್ ಅಬೆನ್ಸಿ ನವೆಂಬರ್ 16 ರಂದು ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಈ ಪತ್ರದ ಮೂಲಕ ಇಸ್ರೇಲ್ ರಾಯಭಾರಿಯ ಭದ್ರತೆಯನ್ನು ಕೂಡಲೇ ಹೆಚ್ಚಿಸುವಂತೆ ಗೃಹ ಸಚಿವಾಲಯಕ್ಕೆ ಆಗ್ರಹಿಸಲಾಗಿದೆ. ಗೃಹ ಸಚಿವಾಲಯದ ಪತ್ರದ ನಂತರ, ನವದೆಹಲಿ ಜಿಲ್ಲಾ ಪೊಲೀಸ್ ಉಪ ಆಯುಕ್ತ ಪ್ರವನ್ ತಾಯಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಇಸ್ರೇಲ್ ರಾಯಭಾರಿಗೆ ಬರುತ್ತಿರುವ ಬೆದರಿಕೆಗಳ ಬಗ್ಗೆ ವಿವರವಾಗಿ ತನಿಖೆ ನಡೆಸಬೇಕು ಎಂದು ಆದೇಶಿಸಿದ್ದಾರೆ. ಇದನ್ನೂ ಓದಿ: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಮಿಚೆಲ್ ಮಾರ್ಷ್- ಭಾರೀ ಟ್ರೋಲ್

    ಗೃಹ ಸಚಿವಾಲಯದ ಪತ್ರದ ನಂತರ ನವದೆಹಲಿ ಜಿಲ್ಲಾ ಪೊಲೀಸ್ ಉಪ ಆಯುಕ್ತ ಪ್ರವನ್ ತಾಯಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಇಸ್ರೇಲ್ ರಾಯಭಾರಿಗೆ ಬರುತ್ತಿರುವ ಬೆದರಿಕೆಗಳ ಬಗ್ಗೆ ವಿವರವಾಗಿ ತನಿಖೆ ನಡೆಸಬೇಕು ಎಂದು ಆದೇಶಿಸಿದ್ದಾರೆ. ರಾಯಭಾರಿ ಮತ್ತು ಇಸ್ರೇಲ್ ರಾಯಭಾರಿ ಕಚೇರಿಯ ಭದ್ರತೆಯನ್ನು ಹೆಚ್ಚಿಸುವಂತೆ ಪೊಲೀಸ್ ಉಪ ಆಯುಕ್ತರು ಕೇಳಿಕೊಂಡಿದ್ದಾರೆ. ಅಲ್ಲದೆ ಈ ಭಾಗದಲ್ಲಿ ಬೀಟ್ ಮತ್ತು ಗಸ್ತು ಸಿಬ್ಬಂದಿ ಜಾಗರೂಕರಾಗಿರಲು ಆದೇಶಿಸಲಾಗಿದೆ. ಇದನ್ನೂ ಓದಿ: ಕೋಚ್ ಆಗಿ ಮುಂದುವರಿಯೋ ನಿರ್ಧಾರ ಕೈಗೊಳ್ಳಲು ಸಮಯಬೇಕು: ರಾಹುಲ್ ದ್ರಾವಿಡ್

  • ರಾಜ್ಯದ 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ

    ರಾಜ್ಯದ 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ

    ಬೆಂಗಳೂರು: ಕಲಬುರಗಿ (Kalaburagi), ಬೆಳಗಾವಿ (Belagavi), ಬಳ್ಳಾರಿ ಹಾಗೂ ಬೆಂಗಳೂರು (Bengaluru) ಸೇರಿದಂತೆ ರಾಜ್ಯದ 11 ಐಪಿಎಸ್ (IPS) ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ (Government Of Karnataka) ಆದೇಶ ಹೊರಡಿಸಿದೆ.

    ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಪ್ರಿನ್ಸಿಪಲ್ ಸೆಕ್ರೇಟರಿ ಆಗಿದ್ದ ಮಾಲಿನಿ ಕೃಷ್ಣ ಮೂರ್ತಿ ಅವರನ್ನು ಐಎಸ್‌ಡಿ ಹೆಚ್ಚುವರಿ ಪೊಲೀಸ್ (Police) ಮಹಾ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ. ಎಸಿಬಿ (ACB) ಸೀಮಂತ್ ಕುಮಾರ್ ಸಿಂಗ್ ಅವರನ್ನ ಕೆಎಸ್‌ಆರ್‌ಪಿ (KSRP) ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಇದನ್ನೂ ಓದಿ: ಮತ್ತೆ ಟೀಂ ಇಂಡಿಯಾ ಸೇರಲಿದ್ದಾರೆ ಜಡೇಜಾ

    ಕೆಎಸ್‌ಆರ್‌ಪಿ ಐಜಿಪಿ (IGP) ಆಗಿದ್ದ ಎಸ್.ರವಿ ಅವರನ್ನು ಪೊಲೀಸ್ ಅಂಡ್ ಪ್ರಿನ್ಸಿಪಲ್ ಸೆಕ್ರಟೆರಿ ಆಗಿ ವರ್ಗಾಯಿಸಲಾಗಿದೆ. ಅಜಯ್ ಹಿಲೋರಿ ಅವರನ್ನ ಡಿಸಿಆರ್‌ಇ (DCRE) ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆ ಮಾಡಿದೆ. ಇದನ್ನೂ ಓದಿ: ಮೋರ್ಬಿ ಸೇತುವೆ ದುರಂತ, 9 ಮಂದಿ ಅರೆಸ್ಟ್‌ – ಟೆಂಡರ್‌ ಪಡೆದು ಇನ್ನೊಂದು ಕಂಪನಿಯಿಂದ ರಿಪೇರಿ

    ಸಾಂದರ್ಭಿಕ ಚಿತ್ರ

    ಇನ್ನುಳಿದಂತೆ ಎಸಿಬಿ ಪೊಲೀಸ್ ಅಧೀಕ್ಷಕರಾಗಿದ್ದ ಯತೀಶ್ ಚಂದ್ರ ಅವರನ್ನ ಡಿಸಿಪಿ-2 ಅಪರಾಧ ವಿಭಾಗಕ್ಕೆ, ಕಲಬುರಗಿ ಜಿಲ್ಲೆಯ ಎಸಿಬಿ ಎಸ್ಪಿ ಆಗಿದ್ದ ವೈ ಅಮರನಾಥ ರೆಡ್ಡಿ ಅವರನ್ನ ಗುಪ್ತಚರ ದಳದ ಅಧೀಕ್ಷಕರಾಗಿ, ಎಸಿಬಿ ಎಸ್ಪಿ ಆಗಿದ್ದ ಡಾ.ಶೋಭಾರಾಣಿ ಅವರನ್ನ ಬೆಂಗಳೂರಿನ ಬಿಎಂಟಿಎಫ್ ಆಗಿ, ಎಸಿಬಿ ಎಸ್ಪಿ ಆಗಿದ್ದ ವಿ.ಜಿ ಸುಜೀತ್, ಬಳ್ಳಾರಿ ಎಸಿಬಿ ಎಸ್ಪಿ ಆಗಿದ್ದ ಬಿ.ಎಲ್. ಶ್ರೀಹರಿ ಬಾಬು ಹಾಗೂ ವಿಜಯಪುರದ ಹೆಚ್ಚುವರಿ ಎಸ್ಪಿ ಆಗಿದ್ದ ರಾಮ್ ಎಲ್ ಅರಸಿದ್ದಿ ಅವರನ್ನ ಲೋಕಾಯುಕ್ತ ಎಸ್ಪಿ ಆಗಿ ವರ್ಗಾಯಿಸಿದರೆ, ಬೆಳಗಾವಿ ಎಸಿಬಿ ಎಸ್ಪಿ ಆಗಿದ್ದ ಬಾಬಸಾಬ್ ನೇಮಗೌಡ್ ಅವರನ್ನು ಬೆಳಗಾವಿ ಗುಪ್ತಚರ ದಳದ ಅಧೀಕ್ಷರಾಗಿ ನೇಮಿಸಿ ಆದೇಶ ಹೊರಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಇಷ್ಟು ತಡವಾಗಿ ಪಿಎಫ್‌ಐ ಬ್ಯಾನ್ ಮಾಡಿರುವುದು ಗುಪ್ತಚರ ಇಲಾಖೆಯ ವೈಫಲ್ಯ: ಪ್ರಿಯಾಂಕ್ ಖರ್ಗೆ

    ಇಷ್ಟು ತಡವಾಗಿ ಪಿಎಫ್‌ಐ ಬ್ಯಾನ್ ಮಾಡಿರುವುದು ಗುಪ್ತಚರ ಇಲಾಖೆಯ ವೈಫಲ್ಯ: ಪ್ರಿಯಾಂಕ್ ಖರ್ಗೆ

    ಬೆಂಗಳೂರು: ದೇಶಾದ್ಯಂತ ಪಿಎಫ್‌ಐ (PFI) ಅನ್ನು 5 ವರ್ಷ ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಒಳ್ಳೆಯ ನಿರ್ಧಾರವನ್ನೇ ಕೈಗೊಂಡಿದೆ. ಆದರೆ ಇಷ್ಟು ತಡವಾಗಿ ಬ್ಯಾನ್ ಮಾಡಿರುವುದು ಗುಪ್ತಚರ ಇಲಾಖೆಯ (Intelligence Department) ದೊಡ್ಡ ವೈಫಲ್ಯವಾಗಿದೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ.

    ಕರ್ನಾಟಕ, ಗುಜರಾತ್, ಅಸ್ಸಾಂ, ಮಧ್ಯಪ್ರದೇಶ, ಸೇರಿದಂತೆ ಇದು ದೇಶವ್ಯಾಪಿ ಇದ್ದಂತಹ ಜಾಲ. ಇಷ್ಟು ವರ್ಷ ಜಾರಿ ನಿರ್ದೆಶನಾಲಯ (ED), ಗುಪ್ತಚರ ಇಲಾಖೆ ಹಾಗೂ ಸ್ಟೇಟ್ ಡಿಪಾರ್ಟ್ಮೆಂಟ್‌ಗಳಿಗೆ ಅವರ ಭಯೋತ್ಪಾದನಾ ಚಟುವಟಿಕೆ, ಅಕ್ರಮ ಹಣ ವರ್ಗಾವಣೆಗಳು ಗಮನಕ್ಕೆ ಬಂದಿರಲಿಲ್ಲವೇ ಎಂದು ಪ್ರಶ್ನಿಸಿದರು.

    ಈ ಸಂಘಟನೆ ದೇಶಾದ್ಯಂತ ಇದ್ದರೂ ಇಷ್ಟು ದಿನ ಯಾಕೆ ಹೀಗೇ ಬಿಟ್ಟಿದ್ದರು ಎಂಬ ಪ್ರಶ್ನೆ ಮೂಡುತ್ತದೆ. ಇಷ್ಟು ತಡವಾಗಿ ಪಿಎಫ್‌ಐಯನ್ನು ಬ್ಯಾನ್ ಮಾಡಿರುವುದು ಅಧಿಕಾರಿಗಳ ದೊಡ್ಡ ವೈಫಲ್ಯ ಎಂದು ಹೇಳಿದರು. ಇದನ್ನೂ ಓದಿ: ಉಗ್ರ ಸಂಘಟನೆಗಳ ಜೊತೆ ಲಿಂಕ್‌ – ಈ ಕ್ಷಣದಿಂದಲೇ PFI, 8 ಅಂಗ ಸಂಸ್ಥೆಗಳು ಬ್ಯಾನ್‌

    ಇಂದು ಕೇಂದ್ರ ಸರ್ಕಾರ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಪಿಎಫ್‌ಐ ಸಂಘಟನೆ ಹಾಗೂ ಅದರ ಅಂಗಸಂಸ್ಥೆಗಳಾದ ರಿಹಬ್ ಇಂಡಿಯಾ ಫೌಂಡೇಶನ್ (RIF), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI), ಆಲ್ ಇಂಡಿಯಾ ಇಮಾನ್ಸ್ ಕೌನ್ಸಿಲ್(AIIC), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್(NCHRO), ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಫೌಂಡೇಶನ್ ಕೇರಳವನ್ನು ನಿಷೇಧಿಸಿದೆ. ಇದನ್ನೂ ಓದಿ: ಸಂಪೂರ್ಣ ನಿಷೇಧವಾಗುತ್ತಾ PFI – ಕೇಂದ್ರ ಸರ್ಕಾರದ ಮುಂದಿನ ಪ್ಲ್ಯಾನ್ ಏನು?

    Live Tv
    [brid partner=56869869 player=32851 video=960834 autoplay=true]

  • ಬಿಎಸ್‍ಎಫ್ ಯೋಧರ ಮೇಲೆ ದಾಳಿ – ಓರ್ವ ಸ್ಮಗ್ಲರ್‌ನ ಹತ್ಯೆ

    ಬಿಎಸ್‍ಎಫ್ ಯೋಧರ ಮೇಲೆ ದಾಳಿ – ಓರ್ವ ಸ್ಮಗ್ಲರ್‌ನ ಹತ್ಯೆ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಅಂತಾರಾಷ್ಟ್ರೀಯ ಗಡಿಯ ಬಳಿ ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಸಿಬ್ಬಂದಿಯು ನಡೆಸಿದ ಎನ್‍ಕೌಂಟರ್‌ನಲ್ಲಿ ಕಳ್ಳಸಾಗಣೆದಾರನೊಬ್ಬನನ್ನು ಹತ್ಯೆಗೈಯಲಾಗಿದೆ.

    ಮೃತ ಕಳ್ಳಸಾಗಾಣಿಕೆದಾರನನ್ನು ಮುರ್ಷಿದಾಬಾದ್ ನಿವಾಸಿ ಭಾರತೀಯ ಪ್ರಜೆ ರೋಹಿಲ್ ಮಂಡಲ್ ಎಂದು ಗುರುತಿಸಲಾಗಿದೆ. ಈ ಕುರಿತು ಬಿಎಸ್‍ಎಫ್ ಅಧಿಕಾರಿಯೊಬ್ಬರು ಮಾತನಾಡಿ, ಕಳ್ಳಸಾಗಣೆದಾರರ ಗುಂಪೋಂದು ನಮ್ಮ ಸಿಬ್ಬಂದಿಯೊಬ್ಬರ ಮೇಲೆ ದಾಳಿ ನಡೆಸಿತ್ತು. ಅದಕ್ಕೆ ಪ್ರತೀಕಾರವಾಗಿ ಪಡೆಗಳು ಓರ್ವ ಕಳ್ಳಸಾಗಣೆದಾರನೊಬ್ಬನನ್ನು ಹತ್ಯೆಗೈದಿದ್ದಾರೆ. 141 ಬೆಟಾಲಿಯನ್‍ನ ಬಾರ್ಡರ್ ಔಟ್ ಪೋಸ್ಟ್ ಸಾಗರಪಾರಾ ಪ್ರದೇಶದಲ್ಲಿ ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಬಿಎಸ್‍ಎಫ್‍ನ ಗುಪ್ತಚರ ಇಲಾಖೆಯಿಂದ ವಿಶ್ವಾಸಾರ್ಹ ಮಾಹಿತಿ ಪಡೆದ ನಂತರ ಗಸ್ತು ತಿರುಗುತ್ತಿದ್ದ ಸಿಬ್ಬಂದಿ ಅಲರ್ಟ್ ಆಗಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಟೋಲ್ ಪ್ಲಾಜಾ ನೌಕರರ ಮೇಲೆ ಬಿಜೆಪಿ ಮುಖಂಡನ ಗೂಂಡಾ ವರ್ತನೆ

    ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಪ್ರದೇಶದಲ್ಲಿ 10-15 ಕಳ್ಳಸಾಗಾಣಿಕೆದಾರರ ಚಲನವಲನವನ್ನು ಗಮನಿಸಿದ ಪಡೆಗಳು ಗಸ್ತು ತಿರುಗುತ್ತಿದ್ದವರಿಗೆ ಮಾಹಿತಿ ನೀಡಿವೆ. ಸ್ವಲ್ಪ ಸಮಯದ ನಂತರ, ಕಳ್ಳಸಾಗಣೆದಾರರು ಕಲ್ಲುಗಳು ಮತ್ತು ಚೂಪಾದ ಆಯುಧಗಳನ್ನು ಬಳಸಿ ಜವಾನರ ಮೇಲೆ ದಾಳಿ ಮಾಡಿದರು. ಬಳಿಕ ಯೋಧರೂ ಪ್ರತಿದಾಳಿ ಆರಂಭಿಸಿದ್ದಾರೆ. ಇದನ್ನೂ ಓದಿ: ಸಂಬಂಧದ ವಿಚಾರ ಗೊತ್ತಾಗಿ ನೋವಿನಿಂದ ಗಲಾಟೆ ಮಾಡಿದ್ದು ನಿಜ, ಆದ್ರೆ ಕೊಲೆ ಮಾಡಿಲ್ಲ: ಅನಂತರಾಜು ಪತ್ನಿ

    ಬಿಎಸ್‍ಎಫ್ ಸಿಬ್ಬಂದಿ ಮೊದಲು ಕಳ್ಳಸಾಗಣೆದಾರರನ್ನು ಓಡಿಸಲು ಪ್ರಯತ್ನಿಸಿದರು. ಬಳಿಕ, ಆತ್ಮರಕ್ಷಣೆಗಾಗಿ ತಮ್ಮ ಕೈಯಲ್ಲಿದ್ದ ಆಯುಧವನ್ನು ಬಳಸಲು ಮುಂದಾಗಿದ್ದಾರೆ ಎಂದು ಬಿಎಸ್‍ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇತರ ಕಳ್ಳಸಾಗಣೆದಾರರು ಓಡಿಹೋಗಿದ್ದು, ಸ್ಥಳದಿಂದ 532 ಬಾಟಲ್ ಫೆನ್ಸೆಡಿಲ್ ಅನ್ನು ಯೋಧರು ವಶಪಡಿಸಿಕೊಂಡಿದ್ದಾರೆ.

  • ಸಿಎಂ ಎಚ್‍ಡಿಕೆ ನೆಮ್ಮದಿ ಕೆಡಿಸಿದ 3 ಸಿಕ್ರೇಟ್ ರಿಪೋರ್ಟ್!

    ಸಿಎಂ ಎಚ್‍ಡಿಕೆ ನೆಮ್ಮದಿ ಕೆಡಿಸಿದ 3 ಸಿಕ್ರೇಟ್ ರಿಪೋರ್ಟ್!

    ಬೆಂಗಳೂರು: ಲೋಕಸಭಾ ಚುನಾವಣೆಯ ಬಳಿಕ ವಿಶ್ರಾಂತಿಗೆ ಜಾರಿದ್ದ ಸಿಎಂ ಕುಮಾರಸ್ವಾಮಿ ಅವರು ಅಸಮಾಧಾನಗೊಂಡಿದ್ದು, ಗುಪ್ತಚರ ಇಲಾಖೆಗಳಿಂದ ಸಲ್ಲಿಕೆಯಾದ ವರದಿಗಳೇ ಅವರ ನೆಮ್ಮದಿಗೆ ಭಂಗ ತಂದಿದೆ ಎಂಬ ಮಾಹಿತಿ ಲಭಿಸಿದೆ.

    ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳು ಮಂಡ್ಯ ಕ್ಷೇತ್ರದ ಚುನಾವಣೆಯ ಬಗ್ಗೆ ಮೂರು ಭಿನ್ನ ರಿಪೋರ್ಟ್ ನೀಡಿದ್ದಾರೆ. ಚುನಾವಣೆಯವರೆಗೂ ಆತ್ಮವಿಶ್ವಾಸದಿಂದಲೇ ಇದ್ದ ಸಿಎಂ ಆ ಬಳಿಕ ಅಸಮಾಧಾನಗೊಳ್ಳಲು ಈ ವರದಿಗಳೇ ಕಾರಣ ಎನ್ನಲಾಗಿದೆ. ಈ ಕಾರಣದಿಂದಲೇ ವಿಶ್ರಾಂತಿಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.

    ಗುಪ್ತಚರ ಇಲಾಖೆ ಮೊದಲ ವರದಿಯಲ್ಲಿ ನಿಖಿಲ್ ಭಾರೀ ಅಂತರದಿಂದ ಗೆಲುವು ಪಡೆಯಲಿದ್ದಾರೆ ಎಂದು ಹೇಳಿತ್ತು. ಆ ಬಳಿಕ ನೀಡಿದ 2ನೇ ವರದಿಯಲ್ಲಿ ಸುಮಲತಾ ಅವರು ಡೇಂಜರ್ ಝೋನ್‍ಗೆ ಹೋಗಲಿದ್ದು, ನಿಖಿಲ್ ಕಡಿಮೆ ಅಂತರದಲ್ಲಿ ಗೆಲುವು ಪಡೆಯಲಿದ್ದಾರೆ ಎಂದು ತಿಳಿಸಿತ್ತು. ಆದರೆ 3ನೇ ವರದಿಯಲ್ಲಿ ನಿಖಿಲ್ ಗೆಲುವು ಕಷ್ಟ ಆಗಲಿದ್ದು, ಗೆಲ್ಲುವ ಅವಕಾಶ ಶೇ.50 ರಷ್ಟು ಇದೆ. ಯಾರೇ ಗೆದ್ದರೂ ಟಫ್ ಫೈಟ್ ಇರಲಿದೆ ಎಂದು ಹೇಳಿತ್ತು.

    ಗುಪ್ತಚರ ಇಲಾಖೆಯೇ 3 ಭಿನ್ನ ವರದಿಗಳನ್ನು ನೀಡಿರುವುದು ಸಿಎಂ ಎಚ್‍ಡಿಕೆ ಅವರು ಅಸಮಾಧಾನಗೊಳ್ಳುವಂತೆ ಮಾಡಿದ್ದು, ಕಾಂಗ್ರೆಸ್ ನಾಯಕರ ವಿರುದ್ಧವೂ ದೂರು ನೀಡಲು ಕಾರಣ ಎನ್ನಲಾಗಿದೆ.

    ಪ್ರಮುಖವಾಗಿ ನಿಖಿಲ್ ರಾಜಕೀಯ ಭವಿಷ್ಯದ ಮೇಲೆ ಇದು ಹೆಚ್ಚು ಪ್ರಭಾವ ಉಂಟು ಮಾಡುವ ಕಾರಣದಿಂದ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಆದರೆ ಗುಪ್ತಚರ ಇಲಾಖೆ ಕೆಲ ಸ್ಯಾಂಪಲ್‍ಗಳ ಮೇಲೆಯೇ ವರದಿ ಸಿದ್ಧಪಡಿಸಿದೆ ಎನ್ನಲಾಗಿದ್ದು, ಫಲಿತಾಂಶ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

    ಇತ್ತ ಈ ವರದಿಗಳ ಬೆನ್ನಲ್ಲೇ ಸಚಿವ ಜಿಡಿ ದೇವೇಗೌಡ ಅವರ ಹೇಳಿಕೆ ಹಾಗೂ ಮಂಡ್ಯ ರೆಬೆಲ್ ಶಾಸಕರು ಸುಮಲತಾ ಆಯೋಜಿಸಿದ್ದ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದು ಸಿಎಂ ಅಸಮಾಧಾನಕ್ಕೆ ಕಾರಣವಾಗಿದೆ ಎಂಬ ಚರ್ಚೆ ಕೇಳಿ ಬಂದಿದೆ. ರೆಬೆಲ್ ಮಂಡ್ಯ ಮುಖಂಡರ ವಿರುದ್ಧ ಕಾಂಗ್ರೆಸ್ ಕ್ರಮಕೈಗೊಳ್ಳಲು ಸಿಎಂ ದೂರು ನೀಡಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಮಂಡ್ಯ ರೆಬೆಲ್ ನಾಯಕರ ಪರವಾಗಿ ಬ್ಯಾಟಿಂಗ್ ಮಾಡಿದ್ದರಿಂದ ಸಿಎಂ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

  • ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟಕ್ಕೆ 160 ಬಲಿ – 10 ದಿನದ ಮೊದಲೇ ಸಿಕ್ಕಿತ್ತು ಸುಳಿವು

    ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟಕ್ಕೆ 160 ಬಲಿ – 10 ದಿನದ ಮೊದಲೇ ಸಿಕ್ಕಿತ್ತು ಸುಳಿವು

    ಕೊಲಂಬೋ: ದೇಶದಲ್ಲಿ ಬಾಂಬ್ ದಾಳಿ ನಡೆಯುವ 10 ದಿನದ ಮೊದಲೇ ಶ್ರೀಲಂಕಾ ಪೊಲೀಸ್ ಮುಖ್ಯಸ್ಥರು ದೇಶದ ವಿವಿಧೆಡೆ ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎನ್ನುವ ಮಾಹಿತಿಯನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಹಂಚಿಕೊಂಡಿದ್ದರು.

    ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿರುವ ಪುನೀತ್ ಜಯಸುಂದರ ಅವರು ಏ.11 ರಂದು ಎಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ನು ಹಂಚಿಕೊಂಡು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದರು ಎಂಬುದಾಗಿ ಮಾಧ್ಯಮವೊಂದು ವರದಿ ಪ್ರಕಟಿಸಿದೆ.

    “ವಿದೇಶಿ ಗುಪ್ತಚರ ಇಲಾಖೆಯೊಂದು ಶ್ರೀಲಂಕಾದಲ್ಲಿ ನ್ಯಾಷನಲ್ ಥೌಹೀತ್ ಜಮಾತ್ (ಎನ್‍ಟಿಜೆ) ಸಂಘಟನೆ ಸ್ಫೋಟ ನಡೆಸಲು ಸಿದ್ಧತೆ ನಡೆಸಿದೆ. ಅಲ್ಲದೇ ಚರ್ಚ್‍ಗಳು ಹಾಗೂ ಭಾರತದ ಧೂತವಾಸ ಕಚೇರಿಯೇ ಉಗ್ರರ ಗುರಿ” ಈ ಮಾಹಿತಿಯನ್ನು ಹಂಚಿಕೊಂಡಿದ್ದರು. ದಾಳಿಯ ಬಗ್ಗೆ 10 ದಿನಗಳ ಮುನ್ನವೇ ಮಾಹಿತಿ ಲಭಿಸಿದ್ದರೂ ಕೃತ್ಯ ತಡೆಯಲು ಶ್ರೀಲಂಕಾ ವಿಫಲವಾಗಿದೆ.

    ಎನ್‍ಟಿಜೆ ಸಂಘಟನೆ ಮೂಲಭೂತವಾದಿ ಮುಸ್ಲಿಂ ಸಂಘಟನೆಯಯಾಗಿದ್ದು, ಕಳೆದ ವರ್ಷ ಈ ಸಂಘಟನೆ ದೇಶದಲ್ಲಿ ಕಾರ್ಯಪ್ರವೃತ್ತಿ ಆಗಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಬುದ್ಧನ ಪ್ರತಿಮೆಗಳನ್ನು ಧ್ವಂಸಗೊಳಿಸಿದ ಘಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ಸಂಘಟನೆ ಹೆಸರು ಬೆಳಕಿಗೆ ಬಂದಿತ್ತು.

    ಇಂದು ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕನಿಷ್ಟ 160 ಮಂದಿ ಮೃತ ಪಟ್ಟಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಕೊಲಂಬೋದ ಪ್ರಮುಖ ಚರ್ಚ್ ಮೂರು ಚರ್ಚ್ ಹಾಗೂ 2 ಹೋಟೆಲ್ ಗಳ ಮೇಲೆ ನಡೆದ ದಾಳಿ ಇದಾಗಿದೆ. ಹಲವು ವರ್ಷಗಳ ಬಳಿಕ ಶ್ರೀಲಂಕಾದಲ್ಲಿ ನಡೆದ ಭೀಕರ ದಾಳಿ ಇದಾಗಿದ್ದು, ಸ್ಫೋಟದ ಬಗ್ಗೆ ಯಾವುದೇ ಸಂಸ್ಥೆ ಹೊಣೆ ಹೊತ್ತುಕೊಂಡಿಲ್ಲ.

    ಇತ್ತ ದಾಳಿಯಲ್ಲಿ ತೊಂದರೆಗೆ ಸಿಲುಕಿರುವ ಭಾರತೀಯರ ಸಹಾಯಕ್ಕಾಗಿ ಭಾರತ ರಾಯಭಾರ ಕಚೇರಿ ಸಹಾಯವಾಣಿಯನ್ನು ಆರಂಭಿಸಿದ್ದು, ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಸಹಾಯವಾಣಿ ಸಂಖ್ಯೆ: +94777 903082, +94112 422789

  • ಮೈತ್ರಿಯಿಂದ ಜೆಡಿಎಸ್‍ಗೆ ಲಾಭವಿಲ್ಲ- ಸಿಎಂ ಕೈ ಸೇರಿದೆ ಗುಪ್ತಚರ ವರದಿ!

    ಮೈತ್ರಿಯಿಂದ ಜೆಡಿಎಸ್‍ಗೆ ಲಾಭವಿಲ್ಲ- ಸಿಎಂ ಕೈ ಸೇರಿದೆ ಗುಪ್ತಚರ ವರದಿ!

    ಬೆಂಗಳೂರು: ಲೋಕಸಭಾ ಚುನಾವಣಾ ಪ್ರಚಾರದ ಬ್ಯುಸಿ ಮಧ್ಯೆಯೇ ಗುಪ್ತಚರ ಇಲಾಖೆಯ ವರದಿಯೊಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕೈ ಸೇರಿದ್ದು, ಮಾಹಿತಿಯಿಂದ ದೋಸ್ತಿ ಪಕ್ಷದ ವಿರುದ್ಧವೇ ಸಿಎಂ ಅನುಮಾನ ಪಡುವಂತಾಯ್ತಾ ಅನ್ನೋ ಪ್ರಶ್ನೆಯೊಂದು ಮೂಡಿದೆ.

    ಹೌದು. ಮೈತ್ರಿಯಿಂದ ಜೆಡಿಎಸ್‍ಗೆ ಹೆಚ್ಚಿನ ಲಾಭವಿಲ್ಲ ಎಂಬ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಮಾಹಿತಿಯು ಮುಖ್ಯಮಂತ್ರಿಯವರ ಕೈ ಸೇರಿದೆ ಎನ್ನಲಾಗಿದೆ.


    ಕಾಂಗ್ರೆಸ್ ಸ್ಪರ್ಧೆ ಮಾಡಿರುವ ಕಡೆಗಳಲ್ಲಿ ಜೆಡಿಎಸ್‍ನಿಂದ ಸಣ್ಣ ಮಟ್ಟದ ಬೆಂಬಲ ಸಿಗಲಿದೆ. ಆದ್ರೆ ಜೆಡಿಎಸ್ ಸ್ಪರ್ಧಿಸಿರೋ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಿಂದ ಹೆಚ್ಚಿನ ನೆರವು ಸಿಗೋದು ಅನುಮಾನ ಎಂದು ಗುಪ್ತಚರ ವರದಿಯಿಂದ ತಿಳಿದುಬಂದಿದೆ.ವಿಶೇಷವಾಗಿ ಮಂಡ್ಯ, ಹಾಸನ, ತುಮಕೂರಿನಲ್ಲೇ ಮೈತ್ರಿ ನೆರವು ಸಿಗೋದು ಅನುಮಾನವಾಗಿದೆ. ಈ ಮೂಲಕ ದೊಡ್ಡ ದೊಡ್ಡ ನಾಯಕರುಗಳು ಸ್ಪರ್ಧೆ ಮಾಡಿದ್ರೂ ಮುನಿಸು ಮರೆಯಾಗಿಲ್ಲ ಎನ್ನಲಾಗುತ್ತಿದ್ದು, ಕೈ ಕಾರ್ಯಕರ್ತರು ಜೆಡಿಎಸ್ ಪರವಾಗಿ ಕೆಲಸ ಮಾಡಲು ಮಾನಸಿಕವಾಗಿ ಸಿದ್ಧರಾಗಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

    ಒಟ್ಟಿನಲ್ಲಿ ಗುಪ್ತಚರ ಇಲಾಖೆ ವರದಿ ಪ್ರಕಾರ ಜೆಡಿಎಸ್‍ಗೆ ದೋಸ್ತಿಯಿಂದ ಪ್ರಯೋಜನ ಇಲ್ಲವೆಂಬುದು  ಜೆಡಿಎಸ್ ಪಾಲಿಗೆ ಗಂಟಲಲ್ಲಿ ಸಿಕ್ಕ ಬಿಸಿ ತುಪ್ಪದಂತಾಗಿದೆ.

  • ಗುಪ್ತಚರ ಇಲಾಖೆ ವರದಿ ಸಿಗಲು ನಿಖಿಲ್ ಕುಮಾರಸ್ವಾಮಿ ಯಾರು: ಸುರೇಶ್ ಕುಮಾರ್ ಪ್ರಶ್ನೆ

    ಗುಪ್ತಚರ ಇಲಾಖೆ ವರದಿ ಸಿಗಲು ನಿಖಿಲ್ ಕುಮಾರಸ್ವಾಮಿ ಯಾರು: ಸುರೇಶ್ ಕುಮಾರ್ ಪ್ರಶ್ನೆ

    ಬೆಂಗಳೂರು: ಗುಪ್ತಚರ ಇಲಾಖೆಯ ವರದಿ ಸಿಗಲು ನಿಖಿಲ್ ಕುಮಾರಸ್ವಾಮಿ ಯಾರು ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.

    ಮಂಗಳವಾರ ನಿಖಿಲ್ ಕುಮಾರಸ್ವಾಮಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡುತ್ತಾ, ನಮಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದಿದೆ. ರೈತರು ಯಾರೂ ಈ ರೀತಿ ಗೂಂಡಾ ವರ್ತನೆ ಮಾಡಲ್ಲವೆಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಸುರೇಶ್ ಕುಮಾರ್ ಖಂಡಿಸಿದ್ದು, ಗುಪ್ತಚರ ಇಲಾಖೆಯ ವರದಿ ಸಿಗಲು ನಿಖಿಲ್ ಯಾರು ಎಂದು ಪ್ರಶ್ನಿಸಿದ್ದಾರೆ.

    ಈ ಬಗ್ಗೆ ತಮ್ಮ ಟ್ವಿಟ್ಟರ್‍ನಲ್ಲಿ ವಿಡಿಯೋ ಸಹಿತ, ರಾಜ್ಯ ಗುಪ್ತಚರ ಇಲಾಖೆ ಅಷ್ಟೊಂದು ಸಸ್ತಾ ಆಗಿದೇಯ? ಗುಪ್ತಚರ ಇಲಾಖೆ ವರದಿಯನ್ನು ಪಡೆಯಲು ನಿಖಿಲ್ ಕುಮಾರಸ್ವಾಮಿ ಯಾವ ಅಧಿಕಾರದಲ್ಲಿದ್ದಾರೆ? ನಿಖಿಲ್ ಸಿಎಂ ಪುತ್ರ ಎನ್ನುವ ಕಾರಣಕ್ಕೆ ಗುಪ್ತಚರ ಇಲಾಖೆ ಮಹಾದವಕಾಶ ನೀಡಿತೆ? ಈ ಕೂಡಲೇ ಸಿಎಂ ಕುಮಾರಸ್ವಾಮಿಯವರು ಇದಕ್ಕೆ ಸ್ಪಷ್ಟನೆ ನೀಡಬೇಕೆಂದು ಬರೆದುಕೊಂಡಿದ್ದಾರೆ.

    ಕೇವಲ ಮುಖ್ಯಮಂತ್ರಿಗಳ ಪುತ್ರನಾಗಿದ್ದಕ್ಕೆ, ನಿಖಿಲ್ ಗೆ ಗುಪ್ತಚರ ಇಲಾಖೆಗಳು ವರದಿಗಳು ಹೇಗೆ ಸಿಗುತ್ತಿವೆ. ಈ ಬಗ್ಗೆ ಇಲಾಖೆಯೇ ಅವರಿಗೆ ಮಾಹಿತಿ ನೀಡುತ್ತಿದ್ದೆಯೇ ಎಂದು ಪ್ರಶ್ನಿಸುವ ಸಿಎಂ ಕುಮಾರಸ್ವಾಮಿ ಹಾಗೂ ನಿಖಿಲ್ ವಿರುದ್ಧ ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ ನಿಖಿಲ್ ಕುಮಾರಸ್ವಾಮಿ ಮಾತನಾಡಿದ ವಿಡಿಯೋ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews