Tag: Intelligence Agency

  • ಗಣರಾಜ್ಯೋತ್ಸವಕ್ಕೆ ಉಗ್ರರ ಸಂಚು- ಮೋದಿ, ವಿದೇಶಿ ಅತಿಥಿಗಳ ಜೀವಕ್ಕೆ ಅಪಾಯ

    ಗಣರಾಜ್ಯೋತ್ಸವಕ್ಕೆ ಉಗ್ರರ ಸಂಚು- ಮೋದಿ, ವಿದೇಶಿ ಅತಿಥಿಗಳ ಜೀವಕ್ಕೆ ಅಪಾಯ

    ನವದೆಹಲಿ: ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ಮೋದಿ ಹಾಗೂ ಇತರ ಗಣ್ಯರ ಜೀವಕ್ಕೆ ಅಪಾಯವಿರುವದಾಗಿ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

    ಗುಪ್ತಚರ ಇಲಾಖೆ ನೀಡಿರುವ 9 ಪುಟಗಳ ಮಾಹಿತಿಯಲ್ಲಿ, ಪ್ರಧಾನಿ ಮೋದಿ ಹಾಗೂ ಇತರ ಗಣ್ಯರ ಜೀವಕ್ಕೆ ಅಪಾಯ ಇದೆ. ಈ ಬಾರಿಯ 75ನೇ ಗಣರಾಜ್ಯೋತ್ಸವಕ್ಕೆ 5 ಮಧ್ಯ ಏಷ್ಯಾ ದೇಶಗಳಾದ ಕಜಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ನ ಮುಖ್ಯಸ್ಥರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಲಾಗಿದೆ. ಇದನ್ನೂ ಓದಿ: ರಜನಿಕಾಂತ್ ಪುತ್ರಿಗೆ ಡಿವೋರ್ಸ್ ನೀಡಿದ ಧನುಷ್

    ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಮೂಲದ ಉಗ್ರಗಾಮಿಗಳಿಂದ ಈ ಬೆದರಿಕೆಯಿದೆ. ಗಣರಾಜ್ಯೋತ್ಸವದಂದು ಪ್ರಧಾನಿ ಮೋದಿ, ವಿಶೇಷ ಗಣ್ಯರು, ಹಾಗೂ ಸಾರ್ವಜನಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ಮಾಡುವ ಸಂಭವವಿದೆ ಎಂದು ಗುಪ್ತಚರ ಇಲಾಖೆ ನೀಡಿರುವ 9 ಪುಟಗಳ ಮಾಹಿತಿ ನೀಡಿದೆ. ಮಾಹಿತಿಯ ಬೆನ್ನಲ್ಲೇ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕ್ಯೂನಲ್ಲಿ ನಿಂತೆ 16 ಸಾವಿರ ರೂಪಾಯಿ ಸಂಪಾದಿಸುತ್ತಾನೆ

    ಅತ್ಯಾಧುನಿಕ ಡ್ರೋನ್ ಬಳಸಿ ದಾಳಿ ನಡೆಸುವ ಸಾಧ್ಯತೆಯಿದ್ದು, ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್, ಹರ್ಕತ್-ಉಲ್-ಮುಜಾಹಿದ್ದೀನ್ ಹಾಗೂ ಹಿಜ್ಬ್-ಉಲ್-ಮುಜಾಹಿದ್ದೀನ್, ಭಯೋತ್ಪಾದಕ ಸಂಘಟನೆಗಳು ದಾಳಿ ನಡೆಸುವ ಸಂಚು ರೂಪಿಸಿದೆ ಎಂದಿದೆ.

    ಪಾಕಿಸ್ತಾನದಲ್ಲಿ ನೆಲೆಯೂರಿರುವ ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ಕೂಡಾ ಪಂಜಾಬ್ ಮತ್ತು ಇತರ ರಾಜ್ಯಗಳ ಮೇಲೆ ದಾಳಿ ನಡೆಸುವ ಸಂಚು ರೂಪಿಸಿದೆ ಎಂದು ತಿಳಿಸಿದೆ.

  • ಉದ್ದೇಶಪೂರ್ವಕವಾಗಿ ಚೀನಾದಿಂದ ಸುಳ್ಳು ಮಾಹಿತಿ – 5 ದೇಶಗಳ ಗುಪ್ತಚರ ವರದಿಯಲ್ಲಿದೆ ಸ್ಫೋಟಕ ವಿಷಯ

    ಉದ್ದೇಶಪೂರ್ವಕವಾಗಿ ಚೀನಾದಿಂದ ಸುಳ್ಳು ಮಾಹಿತಿ – 5 ದೇಶಗಳ ಗುಪ್ತಚರ ವರದಿಯಲ್ಲಿದೆ ಸ್ಫೋಟಕ ವಿಷಯ

    ನ್ಯೂಯಾರ್ಕ್: ಇಲ್ಲಿಯವರೆಗೆ ಅಮೆರಿಕ ಚೀನಾ ವಿರುಧ್ಧ ಧ್ವನಿ ಎತ್ತುತ್ತಿತ್ತು. ಆದರೆ ಈಗ ಚೀನಾ ವಿರೋಧಿ ದೇಶಗಳ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಿದೆ.

    ಕೊರೊನಾ ವೈರಸ್ ವಿಚಾರದಲ್ಲಿ ಚೀನಾ ಉದ್ದೇಶಪೂರ್ವಕವಾಗಿ ಸುಳ್ಳು ಹೇಳಿದೆ. ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳದ ಕಾರಣ ಲಸಿಕೆ ಕಂಡುಹಿಡಿಯುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ ಎಂದು ಐದು ದೇಶಗಳ ಗುಪ್ತಚರ ಸಂಸ್ಥೆಗಳ ವರದಿ ತಿಳಿಸಿದೆ.

    ಅಮೆರಿಕ, ಕೆನಡಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ದೇಶಗಳ ಗುಪ್ತಚರ ಸಂಸ್ಥೆಗಳು 15 ಪುಟಗಳ ವರದಿಯನ್ನು ತಯಾರಿಸಿದೆ.

    ವರದಿಯಲ್ಲಿ ಏನಿದೆ?
    ಚೀನಾ ಆರಂಭದಲ್ಲೇ ಕೊರೊನಾ ವೈರಸ್ ವಿಚಾರವನ್ನು ಮುಚ್ಚಿಟ್ಟಿತ್ತು. ಜನರಿಂದ ಜನರಿಗೆ ವೈರಸ್ ಹರಡುವುದಿಲ್ಲ ಎಂದು ತಿಳಿಸಿತ್ತು. ಚೀನಾದ ಈ ವಾದವನ್ನೇ ವಿಶ್ವ ಆರೋಗ್ಯ ಸಂಸ್ಥೆ ಟ್ವೀಟ್ ಮಾಡಿ ಪ್ರಕಟಿಸಿತ್ತು. ಇದಾದ 2 ವಾರಗಳ ನಂತರ ವೈರಸ್ ಮನುಷ್ಯನಿಂದ ಮನುಷ್ಯನಿಗೆ ಹರಡುತ್ತದೆ ಎಂದು ತಿಳಿಸಿತ್ತು.

    ಚೀನಾ ಆರಂಭದಲ್ಲಿ ವಿಚಾರ ಮುಚ್ಚಿಟ್ಟದ್ದರಿಂದ ವೈರಸ್ ಸುಲಭವಾಗಿ ವಿಶ್ವದೆಲ್ಲೆಡೆ ಹರಡಿತು. ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ವೈರಸ್ ಬಗ್ಗೆ ಮಾತನಾಡದಂತೆ ನೋಡಿಕೊಂಡಿತು.

    ಚೀನಾದ ವುಹಾನ್ ಪ್ರಯೋಗಾಲಯದಲ್ಲಿ ಕೊರೊನಾ ವೈರಸ್ ಸಂಬಂಧಿಸಿದಂತೆ ಪ್ರಯೋಗ ನಡೆಯುತಿತ್ತು. ಆ ಲ್ಯಾಬ್‍ನಲ್ಲಿದ್ದ ಎಲ್ಲ ಸಾಕ್ಷ್ಯಗಳನ್ನು ಉದ್ದೇಶಪೂರ್ವಕಜವಾಗಿ ನಾಶ ಮಾಡಲಾಯಿತು.

    ಸರ್ಚ್ ಎಂಜಿನ್ ನಲ್ಲಿ ಕೊರೊನಾ ವೈರಸ್ ಕೀವರ್ಡ್ ಗಳನ್ನು ತೆಗೆದು ಹಾಕಿತು. ಇದರ ಬೆನ್ನಲ್ಲೇ ಸೋಂಕಿಗೆ ಔಷಧಿ ಪತ್ತೆ ಹಚ್ಚಲು ವಿಶ್ವದ ವಿಜ್ಞಾನಿಗಳಿಗೆ ವೈರಸ್ ಮಾದರಿಯನ್ನು ನೀಡಲು ಚೀನಾ ನಿರಾಕರಿಸಿತು.

    ರಾಜಧಾನಿ ಬೀಜಿಂಗ್ ನಲ್ಲಿ ಜ.23ರಂದೇ ಲಾಕ್‍ಡೌನ್ ಘೋಷಿಸಿತ್ತು. ಇದರ ಜೊತೆ ತನ್ನ ದೇಶದ ಪ್ರಜೆಗಳಿಗೆ ಪ್ರಯಾಣ ನಿರ್ಬಂಧ ಹೇರಿತ್ತು. ಬೇರೆ ದೇಶಗಳಿಗೆ ಈ ರೀತಿಯ ಲಾಕ್‍ಡೌನ್ ಅಗತ್ಯವಿಲ್ಲ ಎಂಬುದಾಗಿ ಹೇಳಿತ್ತು. ಕೊರೊನಾ ವೈರಸ್ ಮಾಹಿತಿ ಹಂಚುವ ವಿಚಾರದಲ್ಲಿ ಸುಳ್ಳು ಹೇಳಿದ ಪರಿಣಾಮ ವಿಶ್ವದ ಇತರ ದೇಶಗಳು ಈ ಆರಂಭದಲ್ಲೇ ಸೋಂಕನ್ನು ಗಂಭೀರವಾಗಿ ಸ್ವೀಕರಿಸಲಿಲ್ಲ ಎಂಬ ಸ್ಫೋಟಕ ವಿಚಾರಗಳು ವರದಿಯಲ್ಲಿವೆ.

  • ನಿಷೇಧಗೊಂಡ ನೋಟುಗಳನ್ನು ಖರೀದಿಸುತ್ತಿದೆ ಪಾಕಿಸ್ತಾನ!

    ನಿಷೇಧಗೊಂಡ ನೋಟುಗಳನ್ನು ಖರೀದಿಸುತ್ತಿದೆ ಪಾಕಿಸ್ತಾನ!

    ನವದೆಹಲಿ: ಭಾರತದಲ್ಲಿ ನಿಷೇಧಗೊಂಡ ನೋಟುಗಳನ್ನು ಪಾಕಿಸ್ತಾನ ಸಂಗ್ರಹಿಸುತ್ತಿದ್ದು, ಅವುಗಳನ್ನು ಪುನರ್ಬಳಕೆ ಮಾಡಿ ಹೊಸ ನಕಲಿ ನೋಟುಗಳನ್ನು ಮುದ್ರಿಸುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಪಾಕಿಸ್ತಾನದ ಗೂಢಾಚಾರ ಸಂಸ್ಥೆ ಐಎಸ್‍ಐ ಭಾರತದಲ್ಲಿ ಅಮಾನ್ಯೀಕರಣಗೊಂಡ 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಭಾರೀ ಪ್ರಮಾಣದಲ್ಲಿ ಸಂಗ್ರಹಿಸುತ್ತಿದೆ. ತನ್ನ ಏಜೆಂಟರ್ ಮೂಲಕ ಭಾರತದ ವಿವಿಧ ರಾಜ್ಯಗಳಿಂದ ಲಕ್ಷಗಟ್ಟಲೆ ಹಳೆಯ ನೋಟುಗಳನ್ನು ಸಂಗ್ರಹ ಮಾಡುತ್ತಿದೆ ಎಂದು ಗುಪ್ತಚರ ಇಲಾಖೆಗ ಮೂಲಗಳನ್ನು ಆಧಾರಿಸಿ ವಾಹಿನಿಯೊಂದು ವರದಿ ಮಾಡಿದೆ.

    ಹಳೆಯ ನೋಟುಗಳನ್ನು ನೇಪಾಳ ಮೂಲಕ ಪಾಕಿಸ್ತಾನಕ್ಕೆ ಕಳ್ಳಸಾಗಾಣೆ ಮಾಡುತ್ತಿದೆ. ಬಳಿಕ ಅಲ್ಲಿಂದ ಈ ನೋಟುಗಳನ್ನು ಕರಾಚಿ ಮತ್ತು ಪೇಶಾವರದಲ್ಲಿರುವ ಪ್ರಿಂಟಿಂಗ್ ಪ್ರೆಸ್‍ಗಳಿಗೆ ರವಾನಿಸಿ, ನೋಟುಗಳಲ್ಲಿರುವ ಆರ್‍ಬಿಐನ ನೋಟಿನಲ್ಲಿ ಹಾಕಿರುವ ಭದ್ರತಾ ವಿಶೇಷತೆಗಳ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ ಎಂದು ಹೇಳಿದೆ.

    ಹಳೆಯ ನೋಟುಗಳ ಬಳಸಿಕೊಂಡು 500, 2000 ಹಾಗೂ 50 ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸುತ್ತಿದೆ. ಭೂಗತಪಾತಕಿ ದಾವೂದ್ ಇಬ್ರಾಹಿಂನ ಸಹಾಯದಿಂದ ಈ ನಕಲಿ ನೋಟುಗಳನ್ನು ಬಾಂಗ್ಲಾ ಮತ್ತು ದುಬೈಗೆ ರಫ್ತು ಮಾಡುತ್ತಿವೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.

    ಭಾರತದಲ್ಲಿ ಲಕ್ಷಗಟ್ಟಲೆ ಅಮಾನ್ಯೀಕರಣಗೊಂಡ ನೋಟುಗಳು ದಾಳಿಯಲ್ಲಿ ಸಿಕ್ಕಿದ್ದವು. ಈ ಕುರಿತು ತನಿಖೆ ನಡೆಸಿದಾಗ ಪಾಕಿಸ್ತಾನದ ಐಎಸ್‍ಐ ತನ್ನ ಏಜೆಂಟರುಗಳು ಮೂಲಕ ಅಮಾನ್ಯೀಕರಗೊಂಡ ನೋಟುಗಳನ್ನು ಸಂಗ್ರಹಿಸುತ್ತಿರುವ ಮಾಹಿತಿ ಬಯಲಾಗಿದೆ. ಈ ನೋಟುಗಳು ಭಾರತದ ಗಡಿ ದಾಟಿ, ನೇಪಾಳ ತಲುಪುತ್ತಿದಂತೆಯೇ ಏಜೆಂಟರ ಮೂಲಕ ಹಣ ಪಾವತಿ ಮಾಡುತ್ತಿರುವ ವಿಚಾರ ತನಿಖೆ ವೇಳೆ ತಿಳಿದುಬಂದಿದೆ. ಈಗಾಗಲೇ ಭಾರೀ ಪ್ರಮಾಣದಲ್ಲಿ ನೋಟುಗಳು ಕಳ್ಳಸಾಗಾಣಿಕೆಯ ಮೂಲಕ ಪಾಕಿಸ್ತಾನಕ್ಕೆ ಸರಬರಾಜಾಗಿರುವುದು ತಿಳಿದು ಬಂದಿದೆ ಎಂದು ಗೂಢಾಚಾರ ಸಂಸ್ಥೆ ವರದಿ ಮಾಡಿದೆ.

    ಈ ನಕಲಿ ನೋಟುಗಳನ್ನು ಬಾಂಗ್ಲಾ ಮತ್ತು ದುಬೈ ದೇಶಗಳ ಮೂಲಕ ಭಾರತಕ್ಕೆ ಕಳ್ಳಸಾಗಣಿಕೆ ಮಾಡುತ್ತಿದೆ. ಈ ನೋಟುಗಳನ್ನು ಈಗಾಗಲೇ ಭಾರತದಲ್ಲಿ ಚಲಾವಣೆ ನಡೆಸುತ್ತಿರುವುದು ತಿಳಿದು ಬಂದಿದೆ. ಈ ನಕಲಿ ನೋಟಿನ ಜಾಲದ ಹಿಂದೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕೈಜೋಡಿಸಿದ್ದಾನೆ ಎಂದು ಹೇಳಿದೆ.

    ಕೆಲವು ನಕಲಿ ನೋಟುಗಳನ್ನು ವಶಪಡಿಸಿಕೊಂಡು, ಪರೀಕ್ಷೆ ನಡೆಸಿದಾಗ ಮೂಲ ನೋಟಿನಲ್ಲಿರುವ ಎಲ್ಲಾ ಭದ್ರತಾ ಅಂಶಗಳನ್ನು ಇವು ಒಳಗೊಂಡಿವೆ. ಅಲ್ಲದೆ ಯಾವುದು ನಕಲಿ, ಯಾವುದು ಅಸಲಿ ಎಂದು ತಿಳಿಯುವುದು ಕಷ್ಟವಾಗಿದೆ. ಈ ನೋಟುಗಳನ್ನು ಸಾಮಾನ್ಯ ವ್ಯಕ್ತಿ ಪತ್ತೆ ಹಚ್ಚುವುದು ತುಂಬಾ ಕಷ್ಟದ ವಿಷಯವಾಗಿದೆ ಎಂದು ತಿಳಿಸಿದೆ.