Tag: Insurance Money

  • ವಿಮೆ ಹಣಕ್ಕಾಗಿ ಪತ್ನಿಯನ್ನು ಕೊಲೆಗೈದ ಪತಿ

    ವಿಮೆ ಹಣಕ್ಕಾಗಿ ಪತ್ನಿಯನ್ನು ಕೊಲೆಗೈದ ಪತಿ

    ಟೆಹರಾನ್: ಹಣಕ್ಕಾಗಿ ತುಂಬು ಗರ್ಭಿಣಿ ಪತ್ನಿಯನ್ನು ಬೆಟ್ಟದ ತುದಿಗೆ ಕರೆದುಕೊಂಡು ಹೋದ ಪತಿ ಆಕೆಯನ್ನು ತಳ್ಳಿ ಕೊಂದಿರುವ ಘಟನೆ ಇರಾನ್‍ನಲ್ಲಿ ನಡೆದಿದೆ.

    ಮ್ರಾ ಅಯ್ಸಲ್ (32)ಪತಿಯಿಂದ ಕೊಲೆಯಾದ ತುಂಬು ಗರ್ಭಿಣಿ. ಈಕೆಯನ್ನು ಪತಿ ಹಕನ್‍ಅಯ್ಸಲ್ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಟರ್ಕಿಯ ಮುಗ್ಲಾ ನಗರ ಬಟರ್‍ಫ್ಲೈ ವ್ಯಾಲಿಯಲ್ಲಿ ಈ ಘಟನೆ ನಡೆದಿದೆ.

    ಬೆಟ್ಟದ ತುದಿಗೆ ಕರೆದುಕೊಂಡು ಹೋದ ಪತಿ ತುತ್ತ ತುದಿಯಲ್ಲಿ ನಿಂತು ರೋಮ್ಯಾಂಟಿಕ್ ಆಗಿ ಫೋಟೋಗೆ ಪೋಸ್ ಕೊಟ್ಟು ನಂತರ ಬೆಟ್ಟದ ತುದಿಯಿಂದ ತಳ್ಳಿಕೊಂದು ಹಾಕಿದ್ದಾನೆ. 2018ರಲ್ಲಿ ಈ ಘಟನೆ ನಡೆದಿದ್ದು, ವಿಮೆ ಹಣಕ್ಕಾಗಿ ಪತ್ನಿಯನ್ನು ಕೊಂದಿದ್ದಾನೆ ಎಂಬ ಶಂಕೆ ಮೇಲೆ ತನಿಖೆ ನಡೆಯುತ್ತಿತ್ತು.

    2018ರಲ್ಲಿ ಈ ಘಟನೆ ನಡೆದಿದ್ದು, ಏಳು ತಿಂಗಳ ಗರ್ಭಿಣಿ ಸೆಮ್ರಾ ಸಾವನ್ನಪ್ಪಿದ್ದಾಳೆ. ಈ ಘಟನೆ ಕುರಿತು ವಾದ ಮಾಡಿರುವ ವಕೀಲರು, ಅಯ್ಸಲ್ ಅಪಘಾತದಿಂದ ಸಾವನ್ನಪ್ಪಿದ ಕೆಲವೇ ದಿನಗಳಲ್ಲಿ ವಿಮೆ ಹಣವನ್ನು ಗಂಡ ತೆಗೆದುಕೊಂಡಿದ್ದಾನೆ. ಇದೊಂದು ಉದ್ದೇಶ ಪೂರ್ವಕವಾದ ಕೊಲೆಯಾಗಿದೆ. ಇದಾದ ಬಳಿಕ 400,000 ಟರ್ಕಿಶ್ ಲಿರಾ ವಿಮೆ ಹಣವನ್ನು ಪಡೆಯಲು ಸಂಚು ರೂಪಿಸಿದ್ದಾನೆ ಎಂದು ಹೇಳಿದ್ದಾರೆ.

    ಘಟನೆ ಕುರಿತು ವಿವರಿಸಿರುವ ಅಯ್ಸಲ್, ಫೋಟೋ ತೆಗೆದುಕೊಂಡ ಬಳಿಕ ನನ್ನ ಹೆಂಡತಿ ಮೊಬೈಲ್‍ನನ್ನು ಬ್ಯಾಗ್‍ನಲ್ಲಿ ಇಟ್ಟಿದ್ದಳು. ಇದಾದ ಬಳಿಕ ಮೊಬೈಲ್ ನೀಡುವಂತೆ ಆಕೆ ಕೇಳಿದಳು. ಮೊಬೈಲ್ ತರಲು ಒಂದೆರಡು ಹೆಜ್ಜೆ ಮುಂದಿದೆ. ನಾನು ಹೋದಾಗ ಆಕೆ ಕಿರುಚಿದ ಸದ್ದಾಯಿತು, ಅಷ್ಟರಲ್ಲಿ ಆಕೆ ಕೆಳಗೆ ಬಿದ್ದಿದ್ದಳು. ನಾನು ಆಕೆಯನ್ನು ತಳ್ಳಿಲ್ಲ ಎಂದಿದ್ದಾನೆ.

    ಘಟನೆ ಕುರಿತು ಪ್ರತಿಕ್ರಿಯಿಸಿರುವ ಸೆಮ್ರಾ ಸಹೋದರ, ತನ್ನ ಸಹೋದರಿಗೆ ಎತ್ತರದ ಸ್ಥಳದ ಬಗ್ಗೆ ಭಯ ಇತ್ತು. ಅಲ್ಲದೇ ಘಟನೆ ನಡೆದ ಬಳಿಕ ಅಯ್ಸಲ್ ದುಃಖಿತನಂತೆ ಕಂಡು ಬಂದಿರಲಿಲ್ಲ ಎಂದಿದ್ದಾನೆ.

    ಅಷ್ಟೇ ಅಲ್ಲದೇ ಆಕೆಯನ್ನು ಕೊಲ್ಲುವ ಉದ್ದೇಶಕ್ಕಾಗಿ ಮೂರು ಗಂಟೆಗಳ ಕಾಲ ಬೆಟ್ಟದ ತುತ್ತ ತುದಿಯಲ್ಲಿ ಕುಳಿತಿದ್ದಾರೆ. ನಂತರ ಯಾರು ಇಲ್ಲದ ಸಮಯ ನೋಡಿಕೊಂಡು ಈ ಕೃತ್ಯ ಎಸಗಿದ್ದಾನೆ. ಇದೊಂದು ಪೂರ್ವಭಾವಿ ಕೃತ್ಯವಾಗಿದ್ದು, ಕೊಲೆ ಮಾಡಿದ ಅಯ್ಸಲ್‍ನನ್ನು ಬಂಧಿಸಬೇಕು ಎಂದು   ಕ್ರಿಮಿನಲ್ ಕೋರ್ಟ್ ತೀರ್ಪು ನೀಡಿದೆ.

  • ಪ್ರೇಮಿ ಜೊತೆ ಸೇರಿ ಗಂಡನ ಮರ್ಮಾಂಗಕ್ಕೆ ಆ್ಯಸಿಡ್ ಎರಚಿದ್ಳು!

    ಪ್ರೇಮಿ ಜೊತೆ ಸೇರಿ ಗಂಡನ ಮರ್ಮಾಂಗಕ್ಕೆ ಆ್ಯಸಿಡ್ ಎರಚಿದ್ಳು!

    – ಸತ್ತನೆಂದು ಪತಿಯನ್ನ ಕಾಡಿನಲ್ಲಿ ಎಸೆದು ಬಂದ್ಳು!
    – ಮೂರು ದಿನದ ಬಳಿಕ ಬಂದ ಪತಿ ಹೇಳಿದ್ದು ಹಣದ ಕಥೆ

    ಲಕ್ನೋ: ಪ್ರೇಮಿ ಜೊತೆ ಸೇರಿ ಪತಿಯ ಮರ್ಮಾಂಗಕ್ಕೆ ಆ್ಯಸಿಡ್ ಎರಚಿ ಕೊಲೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಬಾಂದನಲ್ಲಿ ನಡೆದಿದೆ. ಆ್ಯಸಿಡ್ ದಾಳಿ ಬಳಿಕ ಪತಿ ಸತ್ತನೆಂದು ತಿಳಿದು ಅರಣ್ಯದಲ್ಲಿ ಎಸೆದು ಮನೆ ಸೇರಿದ್ದಳು.

    ಗಿರೀಶ್ (ಹೆಸರು ಬದಲಾಯಿಸಲಾಗಿದೆ) ಬಾಂದಾ ನಗರದಲ್ಲಿ ದಿನಗೂಲಿ ಕೆಲಸ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ಆದ್ರೆ ಎರಡು ದಿನಗಳಿಂದ ದಿಢೀರ್ ನಾಪತ್ತೆಯಾದ ಗಿರೀಶ್ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಇತ್ತ ಗಿರೀಶ್ ಪೋಷಕರು ಮಗ ಕಾಣದಿದ್ದಾಗ ಆತಂಕಗೊಂಡ ಸೊಸೆಯನ್ನ ಪ್ರಶ್ನಿಸಿದ್ದಾಗ ತನಗೇನೂ ಗೊತ್ತಿಲ್ಲ ಎಂದು ಹೇಳಿದ್ದಾಳೆ. ಇದನ್ನೂ ಓದಿ: ಇನಿಯನ ಜೊತೆ ಸೇರಿ ಗಂಡನ ಮರ್ಮಾಂಗಕ್ಕೆ ಆ್ಯಸಿಡ್ ಹಾಕಿದ ಪತ್ನಿ-  ಕಾಮದಾಟದಲ್ಲಿ ತೊಡಗಿದ್ದ ಪತ್ನಿಯನ್ನ ಹಿಡಿದಿದ್ದ ಪತಿ

    ಮೂರನೇ ದಿನ ಚಿತ್ರಕೂಟ ಅರಣ್ಯ ಪ್ರದೇಶದಲ್ಲಿ ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿ ಪತ್ತೆಯಾಗಿರುವ ಮಾಹಿತಿ ಗಿರೀಶ್ ಪೋಷಕರಿಗೆ ಲಭ್ಯವಾಗಿದೆ. ಸ್ಥಳಕ್ಕೆ ತೆರಳಿದಾಗ ಗಾಯಗೊಂಡಿರುವ ವ್ಯಕ್ತಿ ಗಿರೀಶ್ ಎಂಬ ವಿಚಾರ ತಿಳಿದಿದೆ. ಸದ್ಯ ಗಿರೀಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    ಪತ್ನಿ ಕಾನ್ಪುರದ ದೇಹಾತ್ ನಿವಾಸಿ ಪ್ರಧಾನ್ ಗುಪ್ತಾ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಅಕ್ರಮ ಸಂಬಂಧ ವಿಷಯ ತಿಳಿದ ಕೂಡಲೇ ತಪ್ಪು ಎಂದು ತಿಳಿ ಹೇಳಿದ್ದೆ. ಆದ್ರೆ ಪ್ರಧಾನ್ ಗುಪ್ತಾ ನಾನು ಸತ್ತರೆ ಎಲ್‍ಐಸಿ ಹಣ ಸಿಗುತ್ತೆ ಎಂದು ಆಸೆ ತೋರಿಸಿದ್ದನು. ಹಣದ ಆಸೆಗಾಗಿ ಆತನ ಜೊತೆ ಸೇರಿ ಕೃತ್ಯ ಎಸಗಿದ್ದಾಳೆ ಎಂದು ಗಿರೀಶ್ ಆರೋಪಿಸಿದ್ದಾರೆ.

    ಮೂರು ದಿನಗಳ ಹಿಂದೆ ಗಿರೀಶ್ ನನ್ನು ಪ್ರಿಯಕರನ ಊರಿಗೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ಆತನ ಜೊತೆ ಸೇರಿ ನನ್ನನ್ನ ಥಳಿಸಿ, ಮರ್ಮಾಂಗಕ್ಕೆ ಆ್ಯಸಿಡ್ ಎರಚಿದರು. ನಾನು ಸತ್ತಿರಬಹುದು ಎಂದು ತಿಳಿದು ಅರಣ್ಯ ಪ್ರದೇಶದಲ್ಲಿ ನನ್ನನ್ನು ಎಸೆದು ಬಂದಿದ್ದರು ಎಂದು ಗಿರೀಶ್ ಹೇಳಿದ್ದಾರೆ.

    ಗಿರೀಶ್ ಹೇಳಿಕೆಯನ್ನಾಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಓರ್ವ ಯುವಕ ಮತ್ತು ಮಹಿಳೆಯನ್ನ ಬಂಧಿಸಿದ್ದಾರೆ. ಆದ್ರೆ ಮಹಿಳೆ ಪ್ರಿಯಕರ ಎಸ್ಕೇಪ್ ಆಗಿದ್ದಾನೆ.

  • 2 ಕೋಟಿ ವಿಮೆಗಾಗಿ ತನ್ನ ಕೊಲೆಯ ವ್ಯೂಹ ರಚಿಸಿದ ಉದ್ಯಮಿ

    2 ಕೋಟಿ ವಿಮೆಗಾಗಿ ತನ್ನ ಕೊಲೆಯ ವ್ಯೂಹ ರಚಿಸಿದ ಉದ್ಯಮಿ

    – ಕಾರಿನಲ್ಲಿ ಶವ ಸುಟ್ಟು ಕಥೆ ಕಟ್ಟಿದವ ಅರೆಸ್ಟ್

    ಚಂಡೀಗಢ: ಎರಡು ಕೋಟಿ ರೂ. ವಿಮೆಯ ಹಣಕ್ಕಾಗಿ ತನ್ನ ಕೊಲೆಯ ಸುಳ್ಳು ವ್ಯೂಹ ರಚಿಸಿದ್ದ ಉದ್ಯಮಿಯನ್ನ ಪೊಲೀಸರು ಬಂಧಿಸಿದ್ದಾರೆ. ಸುಳ್ಳು ಕೊಲೆಯ ಕಥೆ ಕಟ್ಟಿದ್ದ ಉದ್ಯಮಿ ಎರಡು ಕೋಟಿ ರೂಪಾಯಿ ಲಪಾಟಿಯಿಸುವ ಪ್ಲಾನ್ ಮಾಡಿ ಜೈಲುಪಾಲಾಗಿದ್ದಾನೆ.

    ರಾಮ್ ಮೆಹ್ರಾ ಜೈಲು ಸೇರಿರುವ ಉದ್ಯಮಿ. ಬರ್ವಾಲ್ ದಲ್ಲಿ ಗ್ಲಾಸ್ ಡಿಸ್ಪೋಸಲ್ ವ್ಯವಹಾರ ಮಾಡಿಕೊಂಡಿದ್ದ ರಾಮ್ ನಷ್ಟದಲ್ಲಿದ್ದನು. ಮಂಗಳವಾರ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ತನ್ನ ಬಳಿಯಲ್ಲಿದ್ದ 11 ಲಕ್ಷ ನಗದು ದೋಚಿ, ಕಾರಿನಲ್ಲಿ ಶವವೊಂದನ್ನು ಇರಿಸಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಕಥೆ ಕಟ್ಟಿದ್ದ. ಮೇಲ್ನೋಟಕ್ಕೆ ತನ್ನ ಸಾವು ಆಗಿದೆ ಅನ್ನೋ ರೀತಿ ಘಟನೆಯನ್ನ ಸೃಷ್ಟಿಸಿದ್ದ ರಾಮ್ ಕಣ್ಮರೆಯಾಗಿದ್ದನು. ಛತ್ತೀಸಗಢ್ ನಲ್ಲಿದ್ದ ರಾಮ್ ಮೆಹ್ರಾನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಅಕ್ಟೋಬರ್ 7ರಂದು ಕುಟುಂಬಸ್ಥರಿಗೆ ಕರೆ ಮಾಡಿದ್ದ ರಾಮ್ ಮೆಹ್ರಾ, ನನ್ನ ಕಾರನ್ನು ಕೆಲವರು ಬೈಕಿನಲ್ಲಿ ಹಿಂಬಾಲಿಸುತ್ತಿದ್ದಾರೆ. ನನ್ನ ಬಳಿ 11 ಲಕ್ಷ ಹಣವಿದ್ದು, ಜೀವಕ್ಕೆ ಅಪಾಯವಿದೆ ಅಂತ ಹೇಳಿದ್ದನು. ಕುಟುಂಬಸ್ಥರು ಘಟನಾ ಸ್ಥಳಕ್ಕೆ ತೆರಳುವಷ್ಟರಲ್ಲಿ ಕಾರು ಬೆಂಕಿಗಾಹುತಿ ಆಗಿತ್ತು, ಒಳಗೆ ಸುಟ್ಟು ಕರಕಲಾದ ಶವ ದೊರಕಿತ್ತು. ಹಣ ದೋಚಿರುವ ದುಷ್ಕರ್ಮಿಗಳು ಕೊಲೆಗೈದು ಶವವನ್ನ ಸುಟ್ಟು ಹಾಕಿದ್ದಾರೆ ಎಂದು ತಿಳಿದಿದ್ದರು.

    ಹಿಸ್ಸಾರ್ ಠಾಣೆಯ ಪೊಲೀಸರಿಗೆ ಪ್ರಕರಣದಲ್ಲಿ ಅನುಮಾನಗಳು ಕಾಡಿದ್ದವು. ಅನುಮಾನ ಬೆನ್ನತ್ತಿದ್ದಾಗ ರಾಮ್ ಮೆಹ್ರಾ ಆರ್ಥಿಕ ಸಂಕಷ್ಟದಲ್ಲಿರುವ ವಿಚಾರ ತಿಳಿದಿದೆ. 2 ಕೋಟಿ ರೂ. ವಿಮೆಯ ವಿಷಯ ಸಹ ತಿಳಿದಿದೆ. ಒಂದು ವೇಳೆ ರಾಮ್ ನಿಧನವಾದ್ರೆ ಆ ಹಣ ಆತನ ಕುಟುಂಬಸ್ಥರಿಗೆ ಸೇರಲಿದೆ ಎಂಬ ಅಂಶಗಳ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದರು. ಛತ್ತೀಸ್‍ಗಢದಲ್ಲಿದ್ದ ಆರೋಪಿಯನ್ನ ಹಿಸ್ಸಾರ್ ಗೆ ಕರೆತಂದು ವಿಚಾರಣೆಗೆ ಒಳಪಡಿಸಲಾಗಿದೆ. ಕಾರಿನಲ್ಲಿ ಶವ ಯಾರದ್ದು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

  • ವಿಮೆ ಹಣಕ್ಕಾಗಿ ಡ್ರೆಜ್ಜಿಂಗ್ ಹಡಗು ಮುಳಗಲು ಬಿಟ್ಟರಾ?

    ವಿಮೆ ಹಣಕ್ಕಾಗಿ ಡ್ರೆಜ್ಜಿಂಗ್ ಹಡಗು ಮುಳಗಲು ಬಿಟ್ಟರಾ?

    ಮಂಗಳೂರು: ಕೆಲಸಕ್ಕೆ ಬಾರದ ಡ್ರೆಜ್ಜಿಂಗ್ ಹಡಗೊಂದನ್ನು ಮಂಗಳೂರು ಬಳಿಯ ಸಮುದ್ರದಲ್ಲಿ ಮುಳುಗಿಸಿ ವಿಮೆ ಪರಿಹಾರ ಪಡೆಯುವ ಹುನ್ನಾರ ಕೇಳಿಬಂದಿದೆ.

    ಮಂಗಳೂರಿನ ಸುರತ್ಕಲ್ ಬಳಿಯ ಸಮುದ್ರ ಮಧ್ಯೆ ಕಳೆದ ಆರು ತಿಂಗಳಿಂದ ಮುಂಬೈ ಮೂಲದ ದಿ ಮರ್ಕೇಟರ್ ಲಿಮಿಟೆಡ್ ಕಂಪನಿಗೆ ಸೇರಿದ ಭಗವತಿ ಪ್ರೇಮ್ ಹೆಸರಿನ ಡ್ರೆಜ್ಜಿಂಗ್ ಹಡಗು ಲಂಗರು ಹಾಕಿದೆ. ಈ ಬಗ್ಗೆ ಮಂಗಳೂರಿನ ಎನ್‍ಎಂಪಿಟಿ ಬಂದರು ಅಧಿಕಾರಿಗಳು ಹಡಗು ತೆರವು ಮಾಡುವಂತೆ ಸೂಚನೆ ನೀಡಿದ್ದರೂ ಕಂಪನಿ ನಿರ್ಲಕ್ಷ್ಯ ತೋರಿತ್ತು.

    ಮಳೆಗಾಲದಲ್ಲಿ ಅರಬ್ಬಿ ಸಮುದ್ರ ಪ್ರಕ್ಷುಬ್ಧವಾಗುವ ಬಗ್ಗೆಯೂ ಎಚ್ಚರಿಕೆ ನೀಡಲಾಗಿತ್ತು. ಎರಡು ದಿನಗಳ ಹಿಂದೆ ಹಡಗಿನಲ್ಲಿ ಸೋರಿಕೆ ಆಗುತ್ತಿದ್ದು ಅಪಾಯಕ್ಕೀಡಾಗಿರುವ ಬಗ್ಗೆ ಎನ್‍ಎಂಪಿಟಿ ಅಧಿಕಾರಿಗಳಿಗೆ ರಕ್ಷಣೆಗೆ ಕರೆ ಬಂದಿತ್ತು. ಇದೀಗ ಹಡಗಿನಲ್ಲಿದ್ದ 15 ಮಂದಿ ಕಾರ್ಮಿಕರನ್ನು ರಕ್ಷಿಸಿ, ಹಡಗನ್ನು ಸಮುದ್ರ ಮಧ್ಯದಿಂದ ಸುರತ್ಕಲ್ ಕಡಲ ತೀರಕ್ಕೆ ತಂದು ನಿಲ್ಲಿಸಲಾಗಿದೆ.

    ಒಂದು ವೇಳೆ ಹಡಗು ಒಡೆದು ಸಮುದ್ರ ಪಾಲಾದರೆ ಅಪಾರ ಪ್ರಮಾಣದ ಮಾಲಿನ್ಯವಾಗುತ್ತದೆ. ಹಾಗಿದ್ದರೂ ಎನ್‍ಎಂಪಿಟಿ ಅಧಿಕಾರಿಗಳು ಹಡಗಿನಿಂದ ಯಾವುದೇ ಅಪಾಯ ಇಲ್ಲವೆಂದು ಪ್ರಕಟಣೆ ನೀಡಿದ್ದಾರೆ. ಹೀಗಾಗಿ ಕಂಪನಿ ಮತ್ತು ಎನ್‍ಎಂಪಿಟಿ ಅಧಿಕಾರಿಗಳು ಸೇರಿ ಹಡಗನ್ನು ಮುಳುಗಿಸಿ ಕೋಟ್ಯಂತರ ವಿಮಾ ಹಣವನ್ನು ದೋಚಲು ಪ್ಲಾನ್ ಮಾಡಿರುವ ಶಂಕೆ ವ್ಯಕ್ತವಾಗಿದೆ.