ಜುಲೈ 4 ರಂದು ತಮ್ಮ ಡಾಕ್ಯುಮೆಂಟರಿ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿ ಭಾರೀ ವಿವಾದಕ್ಕೆ ಕಾರಣವಾಗಿದ್ದರು ತಮಿಳಿನ ನಿರ್ದೇಶಕಿ ಲೀನಾ ಮಣಿಮೇಕಲೈ. ತಮ್ಮ ನಿರ್ದೇಶನದಲ್ಲಿ ಮೂಡಿ ಬಂದ ಕಾಳಿ ಸಾಕ್ಷ್ಯಚಿತ್ರದ ಪೋಸ್ಟರ್ ನಲ್ಲಿ ಅವರು ಕಾಳಿಯ ಒಂದು ಕೈಲಿ ಸಿಗರೇಟು ಮತ್ತೊಂದು ಕೈಯಲ್ಲಿ ಲೈಂಗಿಕ ಅಲ್ಪ ಸಂಖ್ಯಾತರ ಧ್ವಜ ಹಿಡಿಸಿ ಹಿಂದೂ ಭಾವನೆಗಳಿಗೆ ಧಕ್ಕೆ ಮಾಡಿದ್ದರು. ಈ ಕಾರಣಕ್ಕಾ ಅವರ ಮೇಲೆ ಸಾಕಷ್ಟು ದೂರುಗಳನ್ನು ಸಲ್ಲಿಸಲಾಗಿತ್ತು.

ತಮ್ಮ ಡಾಕ್ಯುಮೆಂಟರಿಯ ಪೋಸ್ಟರ್ ನಲ್ಲಿ ಲೀನಾ ಕಾಳಿಯನ್ನು ಅವಮಾನಿಸಲಾಗಿದೆ ಎನ್ನುವ ಕಾರಣಕ್ಕಾಗಿ ಸಾಕಷ್ಟು ದೂರುಗಳು ಸಲ್ಲಿಕೆಯಾಗಿದ್ದವು. ಈ ದೂರುಗಳನ್ನು ಆಧರಿಸಿ ದೆಹಲಿಯ ತೀಸ್ ಹಜಾರಿ ಕೋರ್ಟ್ ನಿಂದ ಸಮನ್ಸ್ ಜಾರಿ ಮಾಡಲಾಗಿದೆ. ನವೆಂಬರ್ 1 ರಂದು ಲೀನಾ ಮಣಿಮೇಕಲೈ ವಿಚಾರಣೆ ಎದುರಿಸಬೇಕಿದೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

ಸಾಕ್ಷ್ಯ ಚಿತ್ರದ ಪೋಸ್ಟರ್ ನಲ್ಲಿ ಕಾಳಿ ದೇವತೆಯನ್ನು ಆಕ್ಷೇಪಾರ್ಹ ರೀತಿಯಲ್ಲಿ ಚಿತ್ರಿಸಲಾಗಿತ್ತು. ಹಿಂದೂ ಭಾವನೆಗಳಿಗೆ ಧಕ್ಕೆ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ದೇಶಾದ್ಯಂತ ಹಲವು ಕಡೆ ಲೀನಾ ಮಣಿಮೇಕಲೈ ಅವರ ವಿರುದ್ಧ ದೂರುಗಳನ್ನು ಸಲ್ಲಿಸಲಾಗಿತ್ತು. ಪ್ರಕರಣ ಗಂಭೀರ ಸ್ವರೂಪವನ್ನೂ ಪಡೆದುಕೊಂಡಿತ್ತು. ಹೀಗಾಗಿ ಲೀನಾ ವಿರುದ್ಧ ಕ್ರಮಕ್ಕೆ ಸಾಕಷ್ಟು ಜನರು ಆಗ್ರಹ ಮಾಡಿದ್ದರು. ಅವರು ಈ ದೇಶದಲ್ಲಿ ಇರದೇ ಇರುವ ಕಾರಣಕ್ಕಾಗಿ ಕ್ರಮ ತಗೆದುಕೊಳ್ಳಲು ಪೊಲೀಸರಿಂದ ಸಾಧ್ಯವಾಗಿರಲಿಲ್ಲ. ಇದೀಗ ಕೋರ್ಟ್ ಸಮನ್ಸ್ ಜಾರಿ ಮಾಡಿ ಕೋರ್ಟಿಗೆ ಹಾಜರಾಗುವಂತೆ ಹೇಳಿದೆ.




















