Tag: instagram

  • `ನೀವು ತುಂಬಾ ದಪ್ಪ’ – ಮಹಿಳೆಗೆ ವಿಮಾನ ಹತ್ತಲು ನಿರಾಕರಿಸಿದ ಕತಾರ್‌ ಏರ್‌ವೇಸ್‌ಗೆ 3 ಲಕ್ಷ ದಂಡ

    `ನೀವು ತುಂಬಾ ದಪ್ಪ’ – ಮಹಿಳೆಗೆ ವಿಮಾನ ಹತ್ತಲು ನಿರಾಕರಿಸಿದ ಕತಾರ್‌ ಏರ್‌ವೇಸ್‌ಗೆ 3 ಲಕ್ಷ ದಂಡ

    ಕತಾರ್: `ನೀವು ತುಂಬಾ ದಪ್ಪಗಿದ್ದೀರಾ (ಯುವರ್ ಟೂ ಫ್ಯಾಟ್)’ ಎಂದು ಸ್ಥೂಲಕಾಯದ ಮಹಿಳೆಯೊಬ್ಬರಿಗೆ (Brazil Women) ಬೋರ್ಡಿಂಗ್ ನೀಡಲು ನಿರಾಕರಿಸಿದ ಕತಾರ್ ಏರ್‌ವೇಸ್‌ಗೆ (Qatar Airways) 3 ಲಕ್ಷ ರೂ. ದಂಡ ವಿಧಿಸಿದ ಘಟನೆ ನಡೆದಿದೆ.

     

    View this post on Instagram

     

    A post shared by Juliana Nehme (@juliananehme)

    ಬೈರುತ್‌ನಿಂದ ದೋಹಾಗೆ ಹೊರಟಿದ್ದ 38 ವರ್ಷದ ಮಹಿಳೆಯೊಬ್ಬರು ತನ್ನನ್ನು ವಿಮಾನ ಹತ್ತಲು ಬಿಡದೆ ಸ್ಥೂಲಕಾಯವಿದ್ದ ಕಾರಣಕ್ಕೆ ಅಪಮಾನ ಎಸಗಿದ್ದಾರೆ ಎಂದು ವಿಮಾನಯಾನ ಸಂಸ್ಥೆ ವಿರುದ್ಧ ಸಂತ್ರಸ್ತೆ ಜುಲಿಯಾನಾ ನೆಹ್ಮಿ ನ್ಯಾಯಾಲಯದ (Brazil court) ಮೊರೆ ಹೋಗಿದ್ದರು. ಇದನ್ನೂ ಓದಿ: ಮದ್ಯ ಪ್ರಿಯರಿಗೆ 1 ಲಕ್ಷದ ಇನ್ಷೂರೆನ್ಸ್‌ ಸೌಲಭ್ಯ ಕಲ್ಪಿಸಿ – ಸರ್ಕಾರಕ್ಕೆ ಮದ್ಯಪಾನ ಪ್ರಿಯರ ಹೋರಾಟ ಸಂಘದ ಬೇಡಿಕೆಗಳೇನು?

    ಸಂತ್ರಸ್ತ ಮಹಿಳೆ ಜೂಲಿಯಾನ ತನ್ನ ಕುಟುಂಬದೊಂದಿಗೆ ಲೆಬನಾನ್‌ನಲ್ಲಿ ಪ್ರವಾಸಕ್ಕೆ ಬಂದಿದ್ದಳು. ಏರ್ ಫ್ರಾನ್ಸ್ ಮೂಲಕ ವಿದೇಶಕ್ಕೆ ಬಂದಿದ್ದಳು. ಪುನಃ ಬ್ರೆಜಿಲ್‌ಗೆ ಹಿಂದಿರುಗಲು ಮುಂದಾದಾಗ ಕತಾರ್ ಏರ್‌ವೇಸ್ ಸಿಬ್ಬಂದಿ, ʻನೀವು ತುಂಬಾ ದಪ್ಪಗಿದ್ದೀರಾʼ ಎಂದು ತಡೆದಿದ್ದಾರೆ. ಅಲ್ಲದೇ ತಾನು ಟಿಕೆಟ್‌ಗಾಗಿ ಪಾವತಿಸಿದ್ದ 1 ಸಾವಿರ ಡಾಲರ್ (82 ಸಾವಿರ ರೂಪಾಯಿ) ಹಣವನ್ನೂ ಮರುಪಾವತಿಸಲು ನಿರಾಕರಿಸಿದೆ. ಬದಲಿಗೆ 3 ಸಾವಿರ ಡಾಲರ್ (2.47 ಲಕ್ಷ ರೂ.) ನೀಡಿ ಬಿಸಿನೆಸ್ ಟಿಕೆಟ್ ಖರೀದಿಸುವಂತೆ ಕೇಳಿಕೊಂಡಿದೆ. ದೊಡ್ಡ ಹಾಸನಗಳಿಗೆ ಹೊಂದಿಕೊಳ್ಳಬಹುದು ಎಂದು ಹೇಳಿತು.

    ಇದರಿಂದ ಅಸಮಾಧಾನಗೊಂಡ ಜುಲಿಯಾನಾ, ವಿಮಾನದ ಸಿಬ್ಬಂದಿಯ ವರ್ತನೆಯಿಂದ ಮಾನಸಿಕ ಯಾತನೆಗೆ ಒಳಗಾಗಿದ್ದೇನೆ. ಸಂಸ್ಥೆ ನನ್ನ ವಿರುದ್ಧ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಜುಲಿಯಾನಾಳ ದೂರನ್ನು ಪರಿಗಣಿಸಿದ ಬ್ರೆಜಿಲ್ ಕೋರ್ಟ್ ನ್ಯಾಯಮೂರ್ತಿ ರೆನಾಟ ಮಾರ್ಟಿನ್ಸ್ ಡಿ ಕರ್ವಾಲ್ಹೊ, ವಾರಕ್ಕೊಂದು ಅಥವಾ ಎರಡರಂತೆ ಮಾನಸಿಕ ಪುನಶ್ಚೇತನ ಚಿಕಿತ್ಸೆಯನ್ನು ಕೊಡಿಸುವಂತೆ ವಿಮಾನಯಾನ ಸಂಸ್ಥೆಗೆ ಆದೇಶಿಸಿದೆ.

    ಪ್ರಸ್ತುತ ಮಹಿಳೆ ಪಡೆಯುತ್ತಿದ್ದ ಚಿಕಿತ್ಸೆ ದುಬಾರಿಯಾಗಿದೆ. ಪ್ರತಿ ಚಿಕಿತ್ಸೆಗೆ 400 ರಿಯಾಸ್ (6,389 ರೂ.) ತಗುಲುತ್ತದೆ. ಹಾಗೆಯೇ ಒಂದು ವರ್ಷದಲ್ಲಿ 19,200 ರಿಯಾಸ್ (3.07 ಲಕ್ಷ) ವೆಚ್ಚ ತಗುಲಲಿದೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ಸ್ಟಾರ್ ನಟ ಕಮಲ್ ಹಾಸನ್ ಭಾಗಿ

    Live Tv
    [brid partner=56869869 player=32851 video=960834 autoplay=true]

  • ಮುದ್ದಿನ ಸಾಕು ನಾಯಿಗೆ ಸೀಮಂತ ಮಾಡಿದ ಮಹಿಳೆ – ಹೃದಯಸ್ಪರ್ಶಿ ವೀಡಿಯೋ ವೈರಲ್

    ಮುದ್ದಿನ ಸಾಕು ನಾಯಿಗೆ ಸೀಮಂತ ಮಾಡಿದ ಮಹಿಳೆ – ಹೃದಯಸ್ಪರ್ಶಿ ವೀಡಿಯೋ ವೈರಲ್

    ನವದೆಹಲಿ: ಬಹುತೇಕ ಜನರು ಸಾಕು ಪ್ರಾಣಿಗಳನ್ನು (Animals) ತಮ್ಮ ಕುಟುಂಬದ ಸದಸ್ಯರಂತೆಯೇ ಭಾವಿಸುತ್ತಾರೆ. ಅದರಲ್ಲೂ ಮುದ್ದಿನ ನಾಯಿಗಳೆಂದರೇ (Dog) ಎಲ್ಲರಿಗೂ ಅಚ್ಚುಮೆಚ್ಚು.

    `ಚಾರ್ಲಿ-777′ (Charlie777 Movie) ಸಿನಿಮಾ ರಿಲೀಸ್ ಆದ್ಮೇಲೆ ಸಾಕು ನಾಯಿಗಳ (Dog) ಮೇಲಿನ ಪ್ರೀತಿ ಮಾಲೀಕರಲ್ಲಿ ಇನ್ನಷ್ಟು ಹೆಚ್ಚಾಗಿದೆ. ಕೆಲವರು ತಮ್ಮ ಶ್ವಾನಗಳಿಗೆ ಆಧಾರ್ ಕಾರ್ಡ್ ಮಾಡಿಸಿದ್ದೂ ಉಂಟು. ಹಾಗೆಯೇ ಇಲ್ಲೊಬ್ಬರು ಮಹಿಳೆ ತಮ್ಮ ಮುದ್ದಿನ ಸಾಕು ನಾಯಿಗೆ ಸೀಮಂತ ಮಾಡಿ ಸಂತಸ ಪಟ್ಟಿದ್ದಾರೆ. ಇದನ್ನೂ ಓದಿ: ನಿಮ್ಮ ಸಾಧನೆ ಎಲ್ಲರಿಗೂ ಗೊತ್ತು – ರೊನಾಲ್ಡೊಗೆ ಭಾವನಾತ್ಮಕ ಸಂದೇಶ ರವಾನಿಸಿದ ಕೊಹ್ಲಿ

     

    View this post on Instagram

     

    A post shared by Sujatha Bharathi (@suja_housemate)

    ತನ್ನ ನೆಚ್ಚಿನ ಸಾಕು ನಾಯಿಗೆ ಸೀಮಂತ ಮಾಡಿರುವ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರ ಮನಗೆದ್ದಿದೆ. ಸುಜಾ ಹೌಸ್‌ಮೇಟ್ ಎನ್ನುವ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಮಹಿಳೆ, ಶ್ವಾನದ ಕುತ್ತಿಗೆಗೆ ಹಾರ ಹಾಕಿ, ಹಣೆಗೆ ಸಿಂಧೂರವಿಟ್ಟು, ಮಿರಿ ಮಿರಿ ಮಿಂಚುವ ಬಟ್ಟೆ ತೊಡಿಸಿ ಖುಷಿ ಪಟ್ಟಿದ್ದಾರೆ. ವೀಡಿಯೋ ಕಂಡು ಫಿದಾ ಆಗಿರುವ ನೆಟ್ಟಿಗರು ದೇವರು ನಿಮ್ಮನ್ನು ಆಶೀರ್ವದಿಸಲಿ ಎಂದು ಮನದುಂಬಿ ಹಾರೈಸಿದ್ದಾರೆ.

    ಈಗಾಗಲೇ 3 ಲಕ್ಷಕ್ಕೂ ಅಧಿಕ ಮಂದಿ ಇನ್ಸ್ಟಾಗ್ರಾಮ್‌ ಗ್ರಾಮ್‌ನಲ್ಲಿ ವೀಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಮ್ಮನ್ನು ಬೇರ್ಪಡಿಸಬೇಡಿ- ಡೆತ್‍ನೋಟ್ ಬರೆದಿಟ್ಟು ಪ್ರೇಮಿಗಳು ಆತ್ಮಹತ್ಯೆ

    Live Tv
    [brid partner=56869869 player=32851 video=960834 autoplay=true]

  • ನಾಯಿ ಮರಿಗಳನ್ನು ಕೊಂದು ವೀಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡ್ದ – ವ್ಯಕ್ತಿ ಅರೆಸ್ಟ್

    ನಾಯಿ ಮರಿಗಳನ್ನು ಕೊಂದು ವೀಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡ್ದ – ವ್ಯಕ್ತಿ ಅರೆಸ್ಟ್

    ಹೈದರಾಬಾದ್: 2 ನಾಯಿಮರಿಗಳನ್ನು (Puppies) ಕೊಂದು, ಕೃತ್ಯದ ವೀಡಿಯೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಹೈದರಾಬಾದ್‌ನ (Hyderabad) ವ್ಯಕ್ತಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

    ಮೂಕ ಪ್ರಾಣಿಗಳ ಮೇಲೆ ಕ್ರೂರ ಕೃತ್ಯ ಎಸಗಿದ ವ್ಯಕ್ತಿ ಮೊದಲ ನಾಯಿಮರಿಯನ್ನು ಮರಕ್ಕೆ ನೇತುಹಾಕಿ, ಎರಡನೆಯದನ್ನು ಕಟ್ಟಡದ 4ನೇ ಮಹಡಿಯಿಂದ ಎಸೆದು ಕೊಂದಿದ್ದಾನೆ. ಬಳಿಕ ಅದು ಜೀವಂತವಾಗಿದೆಯೇ ಎಂಬುದನ್ನು ನೋಡಲು ಕಾಲಿನಿಂದ ಒದ್ದಿದ್ದಾನೆ. ಕೃತ್ಯದ ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ ವ್ಯಕ್ತಿಯನ್ನು ಕಟ್ಟೇಡನ್ ಪ್ರದೇಶದ ನಿವಾಸಿ ರೇ ಎಂದು ಪೊಲೀಸರು ಗುರುತಿಸಿದ್ದಾರೆ. ಇದನ್ನೂ ಓದಿ: ಚಿರತೆ ಕಣ್ಣಾಮುಚ್ಚಾಲೆ, 15 ದಿನಗಳಿಂದ ಬೃಂದಾವನ ಕ್ಲೋಸ್ – ಅರಣ್ಯ ಇಲಾಖೆ ವಿರುದ್ಧ ಜನರ ಆಕ್ರೋಶ

     

    ನವೆಂಬರ್ 15ರಂದು ವೀಡಿಯೋವನ್ನು ಆರೋಪಿ ಅಪ್ಲೋಡ್ ಮಾಡಿದ್ದಾನೆ. ಕೃತ್ಯ ಬೆಳಕಿಗೆ ಬಂದಂತೆ ಮೈಲಾರ್‌ದೇವಪಲ್ಲಿ ಪೊಲೀಸರು ವ್ಯಕ್ತಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

    ಪೊಲೀಸರು ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 429 (ಪ್ರಾಣಿಗಳನ್ನು ಕೊಲ್ಲುವ ಮೂಲಕ ದುಷ್ಕೃತ್ಯಕ್ಕೆ ಶಿಕ್ಷೆ) ಮತ್ತು ಸೆಕ್ಷನ್ 11 (ಎಲ್) ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ (ಪಿಸಿಎಎ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ವೈಯಕ್ತಿಕ ಟೀಕೆ ಮಾಡುತ್ತಿದ್ರೆ ಚಪ್ಪಲಿಯಲ್ಲಿ ಹೊಡಿತೀನಿ – ಬಿಜೆಪಿ ಸಂಸದರಿಗೆ ಕವಿತಾ ವಾರ್ನ್

    Live Tv
    [brid partner=56869869 player=32851 video=960834 autoplay=true]

  • ಇನ್ಸ್ಟಾಗ್ರಾಂ ವಿರುದ್ಧ ಗರಂ ಆದ ಕಂಗನಾ ರಣಾವತ್: ಇನ್ಸ್ಟಾ ವೇಸ್ಟ್ ಅಂದ ನಟಿ

    ಇನ್ಸ್ಟಾಗ್ರಾಂ ವಿರುದ್ಧ ಗರಂ ಆದ ಕಂಗನಾ ರಣಾವತ್: ಇನ್ಸ್ಟಾ ವೇಸ್ಟ್ ಅಂದ ನಟಿ

    ಸಾಮಾಜಿಕ ಜಾಲತಾಣಗಳ ಬಗ್ಗೆ ಆಗಾಗ್ಗೆ ಕಿಡಿಕಾರುತ್ತಲೇ ಇರುತ್ತಾರೆ ಬಾಲಿವುಡ್ ನಟಿ ಕಂಗನಾ ರಣಾವತ್. ಮನಸ್ಸಿಗೆ ಬಂದಿದ್ದನ್ನು ಹಾಕುತ್ತಾ, ವಿವಾದಿತ ಪೋಸ್ಟ್ ಗಳನ್ನು ಮಾಡುತ್ತಾ ಒಂದಿಲ್ಲೊಂದು ಎಡವಟ್ಟು ಮಾಡಿಕೊಳ್ಳುವ ಕಂಗನಾ,  ಈ ಬಾರಿ ಇನ್ಸ್ಟಾಗ್ರಾಂ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅದನ್ನೂ ಇನ್ಸ್ಟಾದಲ್ಲೇ ಬರೆದು ಅಚ್ಚರಿ ಮೂಡಿಸಿದ್ದಾರೆ.

    ಇನ್ಸ್ಟಾದಿಂದ ಸಾಕಷ್ಟು ತಾರೆಯರು ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಜನರಿಗೆ ಇದು ವರವಾಗಿದೆ. ಆದರೆ, ಈ ಜಾಲತಾಣವನ್ನೇ ಕಂಗನಾ ವೇಸ್ಟ್ ಎಂದು ಕರೆದಿದ್ದಾರೆ. ಇದೊಂದು ಕೆಲಸಕ್ಕೆ ಬಾರದ ಜಾಲತಾಣವೆಂದು ಮೂದಲಿಸಿದ್ದಾರೆ. ಇಲ್ಲಿ ಹೊತ್ತು ಕಳೆಯುವುದನ್ನು ಬಿಟ್ಟು ಮೈಮುರಿದು ಕೆಲಸ ಮಾಡಿ ಎಂದು ಪುಕ್ಕಟೆ ಸಲಹೆಯನ್ನೂ ಅವರು ನೀಡಿದ್ದಾರೆ. ಇದನ್ನೂ ಓದಿ:ನನ್ನ ಮೊಮ್ಮಗ ಸೂಪರ್ ಸ್ಟಾರ್ ಆಗ್ತಾನೆ ಎಂದು ಭವಿಷ್ಯ ನುಡಿದ ಸುಂದರ್ ರಾಜ್

    ಈ ಹಿಂದೆ ಟ್ವಿಟರ್ ಬಗ್ಗೆಯೂ ಕಂಗನಾ ಮಾತನಾಡಿದ್ದರು. ವಿವಾದಿತ ಪೋಸ್ಟ್ ಗಳನ್ನು ಹಾಕಿದ ಕಾರಣಕ್ಕಾಗಿ ಅವರನ್ನು ಟ್ವಿಟರ್ ನಿಂದ ಬ್ಯಾನ್ ಮಾಡಲಾಗಿತ್ತು. ಆ ನಂತರ ಟ್ವಿಟರ್ ಬಗ್ಗೆ ಸಾಕಷ್ಟು ಕಾಮೆಂಟ್ ಗಳನ್ನು ಅವರು ಮಾಡಿದ್ದರು. ಇದೀಗ ಇನ್ಸ್ಟಾ ಮೇಲೆ ಗೂಬೆ ಕೂರಿಸಿದ್ದಾರೆ. ಅದಕ್ಕೆ ಕಾರಣ ಬೇರೆಯೇ ಇದೆ ಎನ್ನುತ್ತಾ ಹಲವರು. ಟ್ವಿಟರ್ ಖರೀದಿಸಿರುವ ಎಲನ್ ಮಸ್ಕ್ ಅನ್ನು ಮೆಚ್ಚಿಸುವುದಕ್ಕಾಗಿ ಇಂಥದ್ದೊಂದು ಪೋಸ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮಾಡೆಲ್ ಆಗಲು ಪೊಲೀಸ್ ಉದ್ಯೋಗ ಬಿಡಲ್ಲ ಎಂದ ವಿಶ್ವಸುಂದರಿ ಡಯಾನಾ

    ಮಾಡೆಲ್ ಆಗಲು ಪೊಲೀಸ್ ಉದ್ಯೋಗ ಬಿಡಲ್ಲ ಎಂದ ವಿಶ್ವಸುಂದರಿ ಡಯಾನಾ

    ಬೊಗೋಟಾ: ಕೊಲಂಬಿಯಾದ (Colombia) ಮಹಿಳಾ ಪೊಲೀಸ್ (Women Police) ಅಧಿಕಾರಿಯೊಬ್ಬರು ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ (Social Media) ಭಾರೀ ಸದ್ದು ಮಾಡ್ತಿದ್ದಾರೆ. ಈಕೆಯ ಮಾಡೆಲಿಂಗ್ (Model) ಫೋಟೋಗಳು ಹಾಗೂ ಚಟುವಟಿಕೆಗಳನ್ನು ನೋಡಿ, ಅಭಿಮಾನಿಗಳು ಈಕೆಯನ್ನ ವಿಶ್ವದ ಅತ್ಯಂತ ಸುಂದರ ಮಹಿಳಾ ಪೊಲೀಸ್ (World Beautiful Cop) ಎಂದು ಕರೆದಿದ್ದಾರೆ.

    ಆದ್ರೆ ಇಂದಿಗೂ ರಾಷ್ಟ್ರೀಯ ಪೊಲೀಸ್ ಪಡೆಗೆ ಸೇವೆ ಸಲ್ಲಿಸುವುದ್ನು ಗೌರವವೆಂದೇ ಪರಿಗಣಿಸುವ ಮಹಿಳಾ ಪೊಲೀಸ್ ಡಯಾನಾ ರಾಮಿರೆಜ್ (Diana Ramirez) ತನ್ನ ಇನ್ಸ್ಟಾಗ್ರಾಮ್‌ನಲ್ಲಿ 4 ಲಕ್ಷ ಫಾಲೋವರ್ಸ್ಗಳನ್ನ ಹೊಂದಿದ್ದಾರೆ. ಇದನ್ನೂ ಓದಿ: ಯಾರಿಗೂ ಭಯಪಡಬೇಡಿ, ದೇಶದಲ್ಲಿ ಪ್ರೀತಿ, ಭ್ರಾತೃತ್ವವನ್ನು ಹರಡಿ – ಯುವ ಜನತೆಗೆ ರಾಹುಲ್ ಸಂದೇಶ

    ಮಾಹಿತಿಗಳ ಪ್ರಕಾರ, ವಿಶ್ವದಲ್ಲೇ ಅತ್ಯಂತ ಅಪಾಯಕಾರಿ ನಗರವೆಂದು ಪರಿಗಣಿಸುವ ಕೊಲಂಬಿಯಾದ (Colombia) ಮೆಡಿಲಿನ್‌ನಲ್ಲಿ ಗಸ್ತು ತಿರುಗುವ ರಾಮಿರೇಜ್ ಆಗಾಗ್ಗೆ ಕೆಲವು ಮಾಡೆಲಿಂಗ್ ಚಟುವಟಿಗಳನ್ನೂ ಮಾಡುತ್ತಾ ಅದನ್ನು ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಅಭಿಮಾನಿಗಳು ಈಕೆಯನ್ನು ಸಂಪೂರ್ಣ ಮಾಡೆಲಿಂಗ್ ಆಗಿ ಬದಲಾಗುವಂತೆ ಸಲಹೆಗಳು ಕೇಳಿ ಬರುತ್ತಿದ್ದಂತೆ ನಾನು ಮಾಡೆಲ್ ಆಗಲು ಅಥವಾ ಆನ್‌ಲೈನ್‌ನಲ್ಲಿ ಫೇಮಸ್ ಆಗಲು ನನ್ನ ಪೊಲೀಸ್ ಉದ್ಯೋಗ(Police Job) ಬಿಟ್ಟುಕೊಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಮೋದಿಯಿಂದ ಏಷ್ಯಾದ ಮೊದಲ ಗಾರ್ಡನ್‌ ಟರ್ಮಿನಲ್‌ ಉದ್ಘಾಟನೆ – ವಿಶೇಷತೆ ಏನು?

    ನಾನು ಯಾವುದಕ್ಕೂ ಹಿಂಜರಿಯುವುದಿಲ್ಲ, ಏಕೆಂದರೆ ನನಗೆ ಮತ್ತೆ ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಆದರೂ ನಾನು ಪೊಲೀಸ್ ಅಧಿಕಾರಿಯಾಗಿ ಇರುತ್ತೇನೆ. ಏಕೆಂದರೆ ನಾನು ನಾನಾಗಿ ಇದ್ದೇನೆ, ಅದಕ್ಕಾಗಿ ನನ್ನ ಸಂಸ್ಥೆಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.

    ಹೆಚ್ಚಿನ ಡಿಜಿಟಲ್ ಫಾಲೋವರ್ಸ್ಗಳನ್ನು ಹೊಂದಿರುವ ಡಯಾನಾ ವರ್ಷದ ಅತ್ಯುತ್ತಮ ಪೊಲೀಸ್ ಅಥವಾ ಮಿಲಿಟರಿ ಪ್ರಭಾವಿ ಎಂದು ನಾಮನಿರ್ದೇಶನಗೊಂಡಿದ್ದಾರೆ. ಇದರೊಂದಿಗೆ ಪೊಲೀಸ್ ಪಡೆ ಪ್ರತಿನಿಧಿಸುವುದು ನನ್ನ ಗೌರವ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

    ಇದಕ್ಕೆ ಅಭಿಮಾನಿಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಡಯಾನಾ ರಾಮಿರೆಜ್ ಅತ್ಯಂತ ಸುಂದರ ಪೊಲೀಸ್ ಅಧಿಕಾರಿ, ಅಸಾಧಾರಣ ಸುಂದರಿ, ನಾನು ಅವರನ್ನು ಪ್ರೀತಿಸುತ್ತೇನೆ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಡಯಾನಾ ಅವರ ಅಭಿಪ್ರಾಯಗಳನ್ನು ಸಂತೋಷದಿಂದಲೇ ಸ್ವೀಕರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉಜ್ಜಯಿನಿ ದೇವಾಲಯದಲ್ಲಿ ರೀಲ್ಸ್ ಮಾಡಿದ್ದ ಯುವತಿಗೆ ಕಂಟಕ – ಕ್ರಮಕ್ಕೆ ಸೂಚಿಸಿದ ಗೃಹ ಸಚಿವ

    ಉಜ್ಜಯಿನಿ ದೇವಾಲಯದಲ್ಲಿ ರೀಲ್ಸ್ ಮಾಡಿದ್ದ ಯುವತಿಗೆ ಕಂಟಕ – ಕ್ರಮಕ್ಕೆ ಸೂಚಿಸಿದ ಗೃಹ ಸಚಿವ

    ಭೋಪಾಲ್: ಉಜ್ಜಯಿನಿಯ ದೇವಸ್ಥಾನದ ಆವರಣದಲ್ಲಿ ಇನ್‍ಸ್ಟಾಗ್ರಾಮ್ ರೀಲ್ ( Instagram reel) ಮಾಡಿದ್ದ ಯುವತಿಯ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಧ್ಯಪ್ರದೇಶದ (Madhya Pradesh) ಗೃಹ ಸಚಿವ ನರೋತ್ತಮ್ ಮಿಶ್ರಾ (Home Minister Narottam Mishra) ಸೂಚಿಸಿದ್ದಾರೆ.

    ಉಜ್ಜಯಿನಿಯ ಮಹಾಕಾಲ್ ದೇವಸ್ಥಾನದ ಗರ್ಭಗುಡಿ ಮತ್ತು ದೇವಸ್ಥಾನದ ಆವರಣದಲ್ಲಿ ಬಾಲಿವುಡ್ ಹಾಡಿಗೆ ಯುವತಿಯೊಬ್ಬಳು ಇನ್‍ಸ್ಟಾಗ್ರಾಮ್ ರೀಲ್ಸ್ ಮಾಡಿದ್ದಳು. ನಂತರ ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಳು. ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ನರೋತ್ತಮ್ ಮಿಶ್ರಾ ಅವರ ಗಮನಕ್ಕೆ ಬಂದಿದೆ.

    ಈ ಸಂಬಂಧ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಮತ್ತು ಎಸ್‍ಪಿಗೆ ಸೂಚಿಸಿದ್ದೇನೆ. ಅಲ್ಲದೇ ಯಾವುದೇ ರೀತಿಯ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟಾಗುವುದನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: 7 ತಿಂಗಳು ಕಳೆದರೂ ಸ್ಮಾರ್ಟ್, ಹೈಟೆಕ್ ಮೀನು ಮಾರುಕಟ್ಟೆಗೆ ಸಿಕ್ಕಿಲ್ಲ ಉದ್ಘಾಟನೆ ಭಾಗ್ಯ

    ಯುವತಿ ಮಹಾಕಾಲ್ ದೇವಸ್ಥಾನದ ಗರ್ಭಗುಡಿಯಲ್ಲಿ ಜಲಾಭಿಷೇಕ ಮಾಡುವುದನ್ನು ರೀಲ್ಸ್ ಮಾಡಿದ್ದಳು. ಅಲ್ಲದೇ ದೇವಸ್ಥಾನದ ಆವರಣದಲ್ಲಿ ಸುತ್ತುತ್ತಾ ರೀಲ್ಸ್ ಮಾಡಿರುವುದನ್ನು ಕಾಣಬಹುದಾಗಿದೆ. ಈ ಎರಡು ವೀಡಿಯೋಗಳನ್ನು ಮತ್ತೋರ್ವ ಯುವತಿ ಚಿತ್ರೀಕರಿಸಿದ್ದಾಳೆ. ಇದನ್ನೂ ಓದಿ: ಕಾಲ್ಕೆರೆಯುತ್ತಾ ಜಗಳಕ್ಕೆ ಬಂದವನನ್ನು ಚಲಿಸುತ್ತಿದ್ದ ರೈಲಿನಿಂದ ಹೊರ ತಳ್ಳಿದ ಸಹ ಪ್ರಯಾಣಿಕ

    ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಯುವತಿಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಾಕಾಲ್ ದೇವಸ್ಥಾನದ ಅರ್ಚಕ ಮಹೇಶ್ ಗುರು ಒತ್ತಾಯಿಸಿದ್ದಾರೆ. ಈ ವೀಡಿಯೋ ಅವಹೇಳನಕಾರಿ ಮತ್ತು ಸನಾತನ ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಈ ರೀತಿಯ ವೀಡಿಯೊವು ದೇವಾಲಯದ ಪಾವಿತ್ರ್ಯತೆಯನ್ನು ಹಾಳುಮಾಡಿದೆ. ಮಹಾಕಾಲ್ ದೇವಾಲಯದ ನೌಕರರು ತಮ್ಮ ಕಾರ್ಯವನ್ನು ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇನ್‍ಸ್ಟಾಗ್ರಾಮ್‍ನಲ್ಲಿ ಲೈಕ್, ಕಾಮೆಂಟ್ ವಿಚಾರಕ್ಕೆ ಜಗಳ – ಇಬ್ಬರ ಕೊಲೆಯಲ್ಲಿ ಅಂತ್ಯ

    ಇನ್‍ಸ್ಟಾಗ್ರಾಮ್‍ನಲ್ಲಿ ಲೈಕ್, ಕಾಮೆಂಟ್ ವಿಚಾರಕ್ಕೆ ಜಗಳ – ಇಬ್ಬರ ಕೊಲೆಯಲ್ಲಿ ಅಂತ್ಯ

    ನವದೆಹಲಿ: ಇನ್‍ಸ್ಟಾಗ್ರಾಮ್‍ನಲ್ಲಿ ಲೈಕ್ಸ್ ಮತ್ತು ಕಾಮೆಂಟ್ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನವದೆಹಲಿಯಲ್ಲಿ (Delhi) ನಡೆದಿದೆ.

    ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಮಹಿಳೆ ವಿಚಾರಕ್ಕೆ ದೆಹಲಿಯ ಹೊರಭಾಗದಲ್ಲಿರುವ ಭಾಲ್ಸ್ವಾ ಡೈರಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ಚಾಕುವಿನಿಂದ ಇರಿದು ಹತ್ಯೆಗೈಯ್ಯಲಾಗಿದೆ. ಘಟನೆ ಬಳಿಕ ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಶೇ.50 ಪೂರ್ಣ – ಯೋಗಿ ಆದಿತ್ಯನಾಥ್‌

    ಮುಕುಂದಪುರ ಭಾಗ-2 (Mukundpur Part 2)ಪ್ರದೇಶದಲ್ಲಿ ತನ್ನನ್ನು ಭೇಟಿಯಾಗುವಂತೆ ಮಹಿಳೆ ಇಬ್ಬರಿಗೂ ಹೇಳಿದ್ದಳು. ಆದರೆ ಅಲ್ಲಿಗೆ ಬಂದಾಗ ವ್ಯಕ್ತಿಗಳ ಮೇಲೆ ದಾಳಿ ನಡೆದಿದೆ. ಅನೇಕ ಬಾರಿ ಚಾಕುವಿನಿಂದ ಇರಿದಿದ್ದರಿಂದ ವ್ಯಕ್ತಿ ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಚಾಕುವಿನಿಂದ ಚುಚ್ಚುವುದಕ್ಕೂ ಮುನ್ನ ಕೂಡ ಆರೋಪಿಗಳು ಬೆದರಿಕೆಯೊಡ್ಡಿ ಎಸ್ಕೇಪ್ ಆಗಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೊಬೈಲ್ ಕಳ್ಳನ ಕಾಲಿಗೆ ಪೊಲೀಸರಿಂದ ಫೈರಿಂಗ್ – ದ್ವಿಚಕ್ರ ವಾಹನ, ಮೂರು ಮೊಬೈಲ್ ವಶಕ್ಕೆ

    Live Tv
    [brid partner=56869869 player=32851 video=960834 autoplay=true]

  • ಇನ್‍ಸ್ಟಾಗ್ರಾಮ್ ಸರ್ವರ್ ಡೌನ್ – ಫೋಟೋ, ವೀಡಿಯೋ ಅಪ್‍ಲೋಡ್ ಮಾಡಲಾಗದೇ ಜನರ ಪರದಾಟ

    ನವದೆಹಲಿ: ಜನಪ್ರಿಯ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ ಇನ್‍ಸ್ಟಾಗ್ರಾಮ್ (Instagram) ಗುರುವಾರ ವಿಶ್ವದ ವಿವಿಧ ಭಾಗಗಳಲ್ಲಿ ಸರ್ವರ್ ಡೌನ್ (Server down) ಆಗಿತ್ತು. ಇದರಿಂದ ಇನ್‍ಸ್ಟಾಗ್ರಾಮ್ ಬಳಕೆದಾರರು (Instagram users) ಫೋಟೋ, ವೀಡಿಯೋ ಪೋಸ್ಟ್ ಮಾಡಲಾಗದೇ ಪರದಾಡಿದ್ದಾರೆ. ಬಳಕೆದಾರರು ಇನ್‍ಸ್ಟಾಗ್ರಾಮ್ ಅಪ್ಲಿಕೇಶನ್ ಅನ್ನು ಮತ್ತೆ ಮೊದಲಿನಿಂದ ಓಪನ್ ಮಾಡಿದರೂ ಕ್ರ್ಯಾಶ್ (Crash) ಆಗುತ್ತಿತ್ತು ಎಂದು ವರದಿಯಾಗಿದೆ.

    ಬಳಕೆದಾರರು ಎದುರಿಸುತ್ತಿರುವ ಸಮಸ್ಯೆಯನ್ನು ಒಪ್ಪಿಕೊಂಡ ಇನ್‍ಸ್ಟಾಗ್ರಾಮ್, ಕೆಲವು ಬಳಕೆದಾರರು ಇನ್‍ಸ್ಟಾಗ್ರಾಮ್ ಅಪ್ಲಿಕೇಶನ್ ಓಪನ್ ಮಾಡಲು ಆಗದೇ ಸಮಸ್ಯೆ ಎದುರಿಸುತ್ತಿರುವುದು ನಮಗೆ ತಿಳಿದುಬಂದಿದೆ. ನಾವು ಸಾಧ್ಯವಾದಷ್ಟು ಶೀಘ್ರದಲ್ಲಿಯೇ ಪರಿಸ್ಥಿತಿಯನ್ನು ಸಾಮಾನ್ಯ ಸ್ಥಿತಿಗೆ ತರಲು ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿತ್ತು. ಈ ರೀತಿಯ ಅಡಚಣೆಗೆ ಕ್ಷಮಿಸಿ ಎಂದು ಟ್ವೀಟ್ ಮಾಡಿ ಕ್ಷಮೆ ಕೋರಿದೆ. ಇದನ್ನೂ ಓದಿ: ರಾಜ್ಯದ ಜನರಿಗೆ ಶುಲ್ಕದ ಬರೆ – ಅಕ್ಟೋಬರ್‌ನಿಂದ ವಿದ್ಯುತ್ ದರ ಏರಿಕೆ

    ಹೀಗಿದ್ದರೂ ಅನೇಕ ಇನ್‍ಸ್ಟಾಗ್ರಾಮ್ ಬಳಕೆದಾರರು ಈಗ ಸುಮಾರು ಒಂದು ಗಂಟೆಯವರೆಗೂ ಇನ್‍ಸ್ಟಾಗ್ರಾಮ್ ಸ್ಥಗಿತಗೊಂಡಿದೆ ಮತ್ತು ವೈಬ್‍ಸೈಟ್ (website) ಮೂಲಕ ಇನ್‍ಸ್ಟಾಗ್ರಾಮ್‍ಗೆ ಲಾಗ್ ಇನ್ (Login) ಆಗಲು ಸಾಧ್ಯವಾಗುತ್ತಿಲ್ಲ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. ಇದನ್ನೂ ಓದಿ: NIA ಮಿಡ್‌ನೈಟ್ ಆಪರೇಷನ್- ಬೆಂಗ್ಳೂರಿನಲ್ಲಿ ಶಂಕಿತ ಉಗ್ರ ಯಾಸಿರ್ ಅರೆಸ್ಟ್

    ಸಾಮಾಜಿಕ ಮಾಧ್ಯಮ ಸೈಟ್‍ನಲ್ಲಿ #Instagram ಟ್ರೆಂಡಿಂಗ್ ಹ್ಯಾಶ್‍ಟ್ಯಾಗ್‍ನೊಂದಿಗೆ ಹಲವಾರು ಬಳಕೆದಾರರು ಸೇವೆಯ ಅಡಚಣೆಯ ಕುರಿತು ನವೀಕರಣಗಳು ಮತ್ತು ಮೀಮ್‍ಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇರಾನ್‌ನಲ್ಲಿ ಹಿಜಬ್ ಹೋರಾಟ- ವಾಟ್ಸಪ್, ಇನ್‌ಸ್ಟಾಗ್ರಾಮ್ ಬಳಕೆ ಸ್ಥಗಿತ

    ಇರಾನ್‌ನಲ್ಲಿ ಹಿಜಬ್ ಹೋರಾಟ- ವಾಟ್ಸಪ್, ಇನ್‌ಸ್ಟಾಗ್ರಾಮ್ ಬಳಕೆ ಸ್ಥಗಿತ

    ತೆಹ್ರಾನ್: ಹಿಜಬ್ (Hijab) ಧರಿಸದ್ದಕ್ಕೆ ನೈತಿಕ ಪೊಲೀಸ್‌ಗಿರಿಗೆ (Police) ಯುವತಿ ಬಲಿಯಾದ ಪ್ರಕರಣ ವಿರೋಧಿಸಿ ಇರಾನ್‌ನಲ್ಲಿ ಪ್ರತಿಭಟನೆ (Iran Protest) ಭುಗಿಲೆದ್ದಿದ್ದು, ಇಂಟರ್‌ನೆಟ್ (Internet) ಬಳಕೆಯೊಂದಿಗೆ ವಾಟ್ಸಪ್‌ (WhatsApp), ಇನ್‌ಸ್ಟಾಗ್ರಾಮ್ (Instagram) ಬಳಕೆಯನ್ನೂ ನಿಷೇಧಿಸಲಾಗಿದೆ.

    ಇರಾನ್ ಮಹಿಳೆಯರ (Women) ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆಯುತ್ತಿದ್ದಂತೆ ಅದನ್ನು ಹತ್ತಿಕ್ಕಲು ಪೊಲೀಸರು (Police) ಪ್ರಯತ್ನಿಸುತ್ತಿದ್ದಾರೆ. ಈ ವೇಳೆ ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

    ಇತ್ತೀಚೆಗೆ ಇರಾನ್‌ನಲ್ಲಿ ಫೇಸ್‌ಬುಕ್ (FaceBook), ಟ್ವಿಟರ್ (Twitter), ಟೆಲಿಗ್ರಾಮ್, ಯೂಟ್ಯೂಬ್ (Youtube) ಮತ್ತು ಟಿಕ್‌ಟಾಕ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣದ (Social Media) ವೇದಿಕೆಗಳ ಮೇಲೆ ನಿರ್ಬಂಧ ವಿಧಿಸಿದ ನಂತರ ವಾಟ್ಸಪ್ ಹಾಗೂ ಇನ್‌ಸ್ಟಾಗ್ರಾಮ್ ವ್ಯಾಪಕವಾಗಿ ಬಳಕೆಯಾಗಿವೆ. ಹಾಗಾಗಿ ತುರ್ತು ಪರಿಸ್ಥಿತಿಯಲ್ಲಿ ಇಂಟರ್‌ನೆಟ್ (Internet) ಬಳಕೆಯನ್ನು ಹೊರತುಪಡಿಸಿ ಉಳಿದೆಲ್ಲ ಕಡೆಗಳಲ್ಲೂ ಇಂಟರ್‌ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ.

    ಸತತ 7ನೇ ದಿನ ಇರಾನ್‌ನ ಬಹುತೇಕ ನಗರ, ಪಟ್ಟಣಗಳಲ್ಲಿ ಮಹಿಳೆಯರ ಪ್ರತಿಭಟನೆಗಳು ಮುಂದುವರಿದಿವೆ. ಸಾವಿರ ಸಾವಿರ ಮಂದಿ ಮಹಿಳೆಯರು ಹಗಲು ರಾತ್ರಿ ಎನ್ನದೇ ಕೆರ್ಮಾನ್‌ನ ಆಜಾದಿ ವೃತ್ತದಲ್ಲಿ, ಸರ್ವಾಧಿಕಾರ ನಶಿಸಲಿ. ಹಿಜಬ್ ಕಟ್ಟುಪಾಡು ನಶಿಸಲಿ ಎಂದು ಘೋಷಣೆ ಕೂಗುತ್ತಿದ್ದಾರೆ. ಕತ್ತರಿ ಹಿಡಿದು ಕೂದಲು ಕತ್ತರಿಸಿಕೊಳ್ಳುವ ಅಭಿಯಾನವನ್ನು ಮುಂದುವರಿಸಿದ್ದಾರೆ. ಹಿಜಬ್ ಸುಟ್ಟು ಆಕ್ರೋಶ ಹೊರಹಾಕುತ್ತಿದ್ದಾರೆ. ನಾವು ಯುದ್ಧ ಭೂಮಿಯಲ್ಲಿ ಹುಟ್ಟಿದವರು. ಬನ್ನಿ ನಮ್ಮನ್ನು ಎದುರಿಸಿ ಎಂದು ಸರ್ಕಾರಕ್ಕೆ ಸವಾಲು ಹಾಕುತ್ತಿದ್ದಾರೆ.

    ಪ್ರತಿಭಟನೆ ದಮನಿಸಲು ರೈಸಿ ಸರ್ಕಾರ ಬಲಪ್ರಯೋಗ ಮಾಡುತ್ತಿದೆ. ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದೆ. ಈವರೆಗೂ ಪೊಲೀಸರ ಗುಂಡಿಗೆ ದೇಶದ ವಿವಿಧೆಡೆ 8 ಮಂದಿ ಬಲಿಯಾಗಿದ್ದಾರೆ. ಪ್ರತಿಭಟನಾಕಾರರು ಮಾತ್ರ ಹಿಂದೆ ಸರಿಯಲು ಸಿದ್ಧರಿಲ್ಲ. ಇದು ಇರಾನ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಈಗ ಗ್ರೌಂಡ್ ಹೊರಗಡೆಯೂ ದಾಖಲೆ ಬರೆದ ಕೊಹ್ಲಿ

    ಈಗ ಗ್ರೌಂಡ್ ಹೊರಗಡೆಯೂ ದಾಖಲೆ ಬರೆದ ಕೊಹ್ಲಿ

    ಮುಂಬೈ: ಬ್ಯಾಟಿಂಗ್ ಲಯಕ್ಕೆ ಮರಳಿರುವ ಟೀಂ ಇಂಡಿಯಾದ ರನ್ ಮಷಿನ್ ಕೊಹ್ಲಿ (Virat Kohli)ಒಂದಿಲ್ಲೊಂದು ದಾಖಲೆ ಬರೆಯುತ್ತಲೇ ಇದ್ದಾರೆ. ಏಷ್ಯಾಕಪ್‌ನಲ್ಲಿ (Asia Cup) ಚೊಚ್ಚಲ ಶತಕ ಬಾರಿಸಿ ಅಬ್ಬರಿಸಿದ ಕೊಹ್ಲಿಗೆ ಈಗ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದು ದಾಖಲೆ ಬರೆದಿದ್ದಾರೆ.

    ಏಷ್ಯಾಕಪ್ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನದ (Afghanistan) ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದ ಕಿಂಗ್ ಕೊಹ್ಲಿ ಇದೀಗ ಟ್ವಿಟರ್‌ನಲ್ಲಿ (Twitter) ಅತಿ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಮೊದಲ ಕ್ರಿಕೆಟಿಗ (Cricketer)ನಾಗಿದ್ದಾರೆ.‌

    ವಿರಾಟ್ ಕೊಹ್ಲಿ (Virat Kohli) ತಮ್ಮ ಅಧಿಕೃತ ಟ್ವಿಟರ್ (Twitter) ಖಾತೆಯಲ್ಲಿ 5 ಕೋಟಿ ಹಿಂಬಾಲಕರನ್ನು ತಲುಪಿದ್ದಾರೆ. ಆ ಮೂಲಕ ಟ್ವಿಟರ್‌ನಲ್ಲಿ 5 ಕೋಟಿ ಹಿಂಬಾಲಕರನ್ನು ಹೊಂದಿದ ವಿಶ್ವದ ಮೊದಲ ಕ್ರಿಕೆಟಿಗನಾಗಿ ಕೊಹ್ಲಿ ಹೊರಹೊಮ್ಮಿದ್ದಾರೆ.  ಇದನ್ನೂ ಓದಿ: ಭಾರತ-ಪಾಕಿಸ್ತಾನ ಪಂದ್ಯದ ವೇಳೆ ನನ್ನ ಮಗಳು ಭಾರತದ ಧ್ವಜವನ್ನೇ ಹಿಡಿದಿದ್ದಳು – ಶಾಹಿದ್ ಅಫ್ರಿದಿ

    ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈಗಾಗಲೇ 21.1 ಕೋಟಿ ಫಾಲೋವರ್ಸ್‌ಗಳನ್ನು ಹೊಂದಿರುವ ಕೊಹ್ಲಿ ವಿಶ್ವದ ಮೊದಲ ಕ್ರಿಕೆಟಿಗ ಹಾಗೂ ವಿಶ್ವದ 3ನೇ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಮತ್ತೊಂದೆಡೆ ವಿರಾಟ್ ಕೊಹ್ಲಿ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ 4.9 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಒಟ್ಟಾರೆಯಾಗಿ ಕಿಂಗ್ ಕೊಹ್ಲಿ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ 31 ಕೋಟಿ ಫಾಲೋವರ್ಸ್ಗಳನ್ನ ಹೊಂದಿದ್ದಾರೆ. ಇದನ್ನೂ ಓದಿ: ಕೊಹ್ಲಿಗೆ ಈ ಸಮಯ ಕಳೆದು ಹೋಗುತ್ತದೆ ಎಂದಿದ್ದ ಬಾಬರ್‌ಗೆ ಟಾಂಗ್ – ಈ ಸಮಯ ಕಳೆದು ಹೋಗಲ್ಲ ಎಂದ ಫ್ಯಾನ್ಸ್

    ಲಯಕ್ಕೆ ಮರಳಿರುವ ಕೊಹ್ಲಿ ಏಷ್ಯಾಕಪ್ ಟೂರ್ನಿಯಲ್ಲಿ ಆರಂಭದಲ್ಲೇ ಬ್ಯಾಕ್ ಟು ಬ್ಯಾಕ್ ಫಿಫ್ಟಿ ಸಿಡಿದರು. ಬಳಿಕ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿ ನಿರ್ಮಿಸಿದರು. ಅಫ್ಘಾನಿಸ್ತಾನದ ವಿರುದ್ಧ ನಡೆದ ಕೊನೆಯ ಪಂದ್ಯದಲ್ಲಿ ಕೇವಲ 61 ಎಸೆತಗಳಲ್ಲಿ 122 ರನ್‌ಗಳಿಸಿ ಅಜೇಯರಾಗುಳಿದರು.

    ಮ್ಯಾಂಚೆಸ್ಟರ್ ಫುಟ್‌ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಟ್ವಿಟ್ಟರ್‌ನಲ್ಲಿ 10.3 ಕೋಟಿ ಫಾಲೋವರ್ಸ್ಗಳನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಲಾಸ್ ಏಂಜಲೀಸ್‌ನ ಬಾಸ್ಕೆಟ್ ಬಾಲ್ ತಾರೆ ಲೆಬ್ರಾನ್ ಜೇಮ್ಸ್ 5.2 ಕೋಟಿಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]