Tag: instagram

  • ನಂಬಿದ್ರೆ ನಂಬಿ… ಒಂದು ವರ್ಷಕ್ಕೆ 8.26 ಕೋಟಿ ಸಂಪಾದಿಸುತ್ತೆ ಈ ನಾಯಿ

    ನಂಬಿದ್ರೆ ನಂಬಿ… ಒಂದು ವರ್ಷಕ್ಕೆ 8.26 ಕೋಟಿ ಸಂಪಾದಿಸುತ್ತೆ ಈ ನಾಯಿ

    ವಾಷಿಂಗ್ಟನ್‌: ಜನರು ನಾಯಿಗಳನ್ನ (Dog) ಸಾಕುಪ್ರಾಣಿಗಳನ್ನಾಗಿ ಸಾಕಲು ಇಷ್ಟಪಡುತ್ತಾರೆ. ಬಹುತೇಕರು ತಮ್ಮ ಮನೆ ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿ ನೋಡಿಕೊಳ್ಳುತ್ತಾರೆ. ಆದ್ರೆ ಇಲ್ಲೊಬ್ಬರು ಮಹಿಳೆ ನಾಯಿಯನ್ನು ನೋಡಿಕೊಳ್ಳುವುದಕ್ಕಾಗಿಯೇ ಇದ್ದ ಸಿವಿಲ್‌ ಎಂಜಿನಿಯರ್‌ (Civil Enginee) ಕೆಲಸ ತೊರೆದಿದ್ದರು. ಈಗ ಅದೇ ನಾಯಿಯಿಂದ ವರ್ಷಕ್ಕೆ 8 ಕೋಟಿ ಗಿಂತಲೂ ಅಧಿಕ ಹಣ ಸಂಪಾದಿಸುತ್ತಿದ್ದಾರೆ. ಅದು ಹೇಗೆ ಅಂತೀರಾ ಮುಂದೆ ನೋಡಿ…

    ಇತ್ತೀಚೆಗೆ ಹೆಚ್ಚಿನ ಯುವಜನ ಸಾಮಾಜಿಕ ಮಾಧ್ಯಮವನ್ನೇ ಬಳಸಿಕೊಂಡು ಹಣ ಗಳಿಸುತ್ತಿದ್ದಾರೆ. ಅದೇ ರೀತಿ ದಂಪತಿಯೊಬ್ಬರು ತಾವು ಸಾಕಿದ ಟಕ್ಕರ್‌ ಹೆಸರಿನ ಗೋಲ್ಡನ್‌ ರಿಟ್ರೈವರ್‌ (Golden Retriever) ಶ್ವಾನದಿಂದ ವರ್ಷಕ್ಕೆ 1 ಮಿಲಿಯನ್‌ ಡಾಲರ್‌ (8.26 ಕೋಟಿ ರೂ.) ಗಳಿಸುತ್ತಿದ್ದು, ನೆಟ್ಟಿಗರನ್ನ ಬೆರಗಾಗುವಂತೆ ಮಾಡಿದೆ. ಇದನ್ನೂ ಓದಿ: ಸಾಂಪ್ರದಾಯಿಕ ಸ್ವಾಗತ ಕೊಟ್ಟು ಮೋದಿಯನ್ನು ʻಬಾಸ್‌ʼ ಎಂದು ಕರೆದ ಆಸ್ಟ್ರೇಲಿಯಾ ಪ್ರಧಾನಿ

    ಪೋರ್ಟ್ರೇಟ್ ಕಂಪನಿ ಪ್ರಿಂಟೆಡ್ ಪೆಟ್ ಮೆಮೊರೀಸ್‌ನ ಸಂಶೋಧನೆಯ ಪ್ರಕಾರ, ವರ್ಷಕ್ಕೆ 8.26 ಕೋಟಿ ರೂ. ಗಳಿಸುವ ಈ ಗೋಲ್ಡನ್‌ ರಿಟ್ರೈವರ್‌ ವಿಶ್ವದ ನಂ.1 ಸಾಮಾಜಿಮ ಮಾಧ್ಯಮ ಪ್ರಭಾವಶಾಲಿಗಳಲ್ಲಿ ಒಂದಾಗಿದೆ. ಜೊತೆಗೆ ಯೂಟ್ಯೂಬ್‌ನಲ್ಲಿ ಪ್ರತಿ 30 ನಿಮಿಷದ ಪ್ರೀ ರೋಲ್‌ಗೆ 40 ಸಾವಿರ ಡಾಲರ್‌ (33 ಲಕ್ಷ ರೂ.) ನಿಂದ 60 ಸಾವಿರ ಡಾಲರ್‌ (49.61 ಲಕ್ಷ ರೂ.) ಸಂಪಾದಿಸಿಕೊಡುತ್ತೆ. ಇನ್ಸ್ಟಾಗ್ರಾಮ್‌ನಲ್ಲಿ ಪ್ರತಿ 3 ರಿಂದ 8 ಸ್ಟೋರಿಗಳಿಗೆ 20 ಸಾವಿರ ಡಾಲರ್‌ (16.54 ಲಕ್ಷ ರೂ.) ಸಂಪಾದಿಸಿಕೊಡುತ್ತೆ ಎಂದು ಟಕ್ಕರ್‌ನ ಮಾಲೀಕ ಕರ್ಟ್ನಿ ಬಡ್ಜಿನ್ ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್‌ಗಿಂತಲೂ ಭಯಾನಕ – ಮುಂದಿನ ಸಾಂಕ್ರಾಮಿಕ ಎದುರಿಸಲು ಸಿದ್ಧರಾಗಿ: WHO ಎಚ್ಚರಿಕೆ

    ನಾಯಿ ನೋಡಿಕೊಳ್ಳೋದಕ್ಕೆ ಎಂಜಿನಿಯರ್‌ ಕೆಲಸ ಬಿಟ್ಟರು:
    ಕರ್ಟ್ನಿ ಬಡ್ಜಿನ್‌ನ ಪತ್ನಿ ಮೈಕ್‌ ವೃತ್ತಿಯಲ್ಲಿ ಸಿವಿಲ್‌ ಎಂಜಿನಿಯರ್‌ ಆಗಿದ್ದರು. ಈಕೆ ತಾನು ಸಾಕುತ್ತಿದ್ದ ಟಕ್ಕರ್‌ ಮತ್ತು ಟಾಡ್‌ ನಾಯಿಮರಿಗಳನ್ನ ನೋಡಿಕೊಳ್ಳುವ ಸಲುವಾಗಿಯೇ ಇದ್ದ ಕೆಲಸವನ್ನ ಬಿಟ್ಟರು. 2018ರ ಜೂನ್‌ನಲ್ಲಿ ಟಕ್ಕರ್‌ 8 ವಾರಗಳ ಪುಟ್ಟ ಮರಿಯಾಗಿದ್ದಾಗ ಟಕ್ಕರ್‌ ಹೆಸರಿನಲ್ಲಿ ಇನ್ಸ್ಟಾಗ್ರಾಮ್‌ ಪುಟವೊಂದನ್ನ ತೆರೆದರು. ಬಳಿಕ ಟಕ್ಕರ್‌ನ ಮೊದಲ ವೀಡಿಯೋ ಸಖತ್‌ ಸದ್ದು ಮಾಡಿತ್ತು. ಟಕ್ಕರ್‌ಗೆ 6 ತಿಂಗಳು ತುಂಬುವುದರೊಳಗೆ ಫಾಲೋವರ್ಸ್‌ಗಳ ಸಂಖ್ಯೆ 60 ಸಾವಿರಕ್ಕೆ ತಲುಪಿತ್ತು.

    ಇದೀಗ‌ ವಿಶ್ವದಾದ್ಯಂತ ವಿವಿಧೆಡೆ ಫೇಮಸ್‌ ಆಗಿರುವ ಟಕ್ಕರ್‌ ಟಿಕ್‌ಟಾಕ್‌ನಲ್ಲಿ 1.10 ಕೋಟಿ, ಯೂಟ್ಯೂಬ್‌ನಲ್ಲಿ 51 ಲಕ್ಷ, ಫೇಸ್‌ ಬುಕ್‌ನಲ್ಲಿ 43 ಲಕ್ಷ, ಇನ್ಸ್ಟಾಗ್ರಾಮ್‌ನಲ್ಲಿ 34 ಲಕ್ಷ ಹಾಗೂ ಟ್ವಿಟ್ಟರ್‌ನಲ್ಲಿ 62,400 ಫಾಲೋವರ್ಸ್‌ಗಳನ್ನ ಹೊಂದಿದೆ.

  • ಕರ್ನಾಟಕದಲ್ಲಿ ಪ್ರಿಯಾಂಕಾ ಗಾಂಧಿಗೆ ಸಿಕ್ಕ ಹೊಸ ಸ್ನೇಹಿತ

    ಕರ್ನಾಟಕದಲ್ಲಿ ಪ್ರಿಯಾಂಕಾ ಗಾಂಧಿಗೆ ಸಿಕ್ಕ ಹೊಸ ಸ್ನೇಹಿತ

    ಬೆಂಗಳೂರು: ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election) ಪ್ರಚಾರಕ್ಕೆ ಆಗಮಿಸಿದ್ದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಹೊಸ ಸ್ನೇಹಿತರನ್ನ ಪರಿಚಯ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.

    ತಮ್ಮ ಇನ್ಸ್ಟಾಗ್ರಾಮ್‌ (Instagram) ಖಾತೆಯಲ್ಲಿ ಆನೆಯೊಂದಿಗಿನ ಫೋಟೋವೊಂದನ್ನು ಹಂಚಿಕೊಂಡಿರುವ ಅವರು, ಕರ್ನಾಟಕ ಪ್ರಚಾರದ ಸಮಯದಲ್ಲಿ ಹೊಸ ಸ್ನೇಹಿತರನ್ನು (Karnataka Friends) ಮಾಡಿಕೊಂಡಿರುವುದಾಗಿ ಬರೆದುಕೊಂಡಿದ್ದಾರೆ. ಇದರೊಂದಿಗೆ ಆನೆ, ಹೃದಯ ಹಾಗೂ ಮೇಕೆಯೊಂದರ ಎಮೋಜಿಯನ್ನು ಬಳಸಿದ್ದಾರೆ. ಇದನ್ನೂ ಓದಿ: ಬರೋಬ್ಬರಿ 9 ವರ್ಷಗಳ ಬಳಿಕ ದೇಗುಲದಲ್ಲಿ ಕದ್ದ ಆಭರಣ ವಾಪಸ್ ನೀಡಿದ ಕಳ್ಳ!

    ಫೋಟೋದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ತಲೆಯ ಮೇಲೆ ಆನೆಯೊಂದು ತನ್ನ ಸೊಂಡಿಲನ್ನು ಇರಿಸಿ, ಆಶೀರ್ವದಿಸುತ್ತಿದೆ. ಈ ಫೋಟೋವನ್ನು ಹಂಚಿಕೊಂಡ ಒಂದು ಗಂಟೆಯಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಲಯಾಳಂ ಚಿತ್ರೋದ್ಯಮದಲ್ಲಿ ಡ್ರಗ್ಸ್: ಸಿಡಿದೆದ್ದ ಪೊಲೀಸ್ ಕಮಿಷನರ್

    ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ 66, ಜೆಡಿಎಸ್‌ 19 ಹಾಗೂ ಪಕ್ಷೇತರ 4‌ ಸ್ಥಾನಗಳು ಬಂದಿವೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದಕ್ಕಾಗಿ ಪ್ರಿಯಾಂಕಾ ಗಾಂಧಿ ಅಭಿನಂದನೆಯನ್ನೂ ಸಲ್ಲಿಸಿದ್ದಾರೆ.

  • ದೇವಸ್ಥಾನದ ಮರದ ಕೆಳಗೆ ಮಹಿಳೆ ನಗ್ನ ಫೋಟೋಶೂಟ್ – ಇಂಡೋನೇಷ್ಯಾದಿಂದ ಗಡಿಪಾರು

    ದೇವಸ್ಥಾನದ ಮರದ ಕೆಳಗೆ ಮಹಿಳೆ ನಗ್ನ ಫೋಟೋಶೂಟ್ – ಇಂಡೋನೇಷ್ಯಾದಿಂದ ಗಡಿಪಾರು

    ಜಕಾರ್ತ: ಪ್ರವಾಸಕ್ಕೆ ಬಂದಿದ್ದ ರಷ್ಯಾದ (Russia) ಇನ್ಸ್ಟಾಗ್ರಾಮ್ (Instagram) ತಾರೆಯೊಬ್ಬಳು, ದೇವಸ್ಥಾನದ ಮರದ ಕೆಳಗೆ ನಗ್ನ ಫೋಟೋಶೂಟ್ ಮಾಡಿಸಿದ್ದಕ್ಕಾಗಿ ಇಂಡೋನೇಷ್ಯಾದ (Indonesia) ಬಾಲಿಯಿಂದ ಗಡಿಪಾರಾಗಿದ್ದಾಳೆ. ಮಹಿಳೆ ನಗ್ನ ಫೋಟೋಶೂಟ್ ಮಾಡಿಸಿರುವುದು, ಬಾಲಿಯ ಹಿಂದೂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿ, ತೀವ್ರ ಪ್ರತಿಭಟನೆಯ ನಂತರ ಇಂಡೋನೇಷ್ಯಾ ಸರ್ಕಾರ ಮಹಿಳೆಯನ್ನು ಗಡಿಪಾರು ಮಾಡಿದೆ.

    ರಷ್ಯಾದ 40ರ ಹರೆಯದ ಮಹಿಳೆ ಲೂಯ್ಜಾ ಕೊಶ್ಯಾಕ್ ಬಾಲಿ ಪ್ರವಾಸ ಕೈಗೊಂಡಿದ್ದರು. ಬಾಲಿಯ (Bali) ಸುಂದರ ತಾಣಗಳಲ್ಲಿ ಕೆಲ ದಿನಗಳ ಕಾಲ ಕಳೆದ ಕೋಶ್ಯಾಕ್, ಬಾಲಿಯ ತಬನನ್ ದೇವಸ್ಥಾನ ವೀಕ್ಷಣೆಗೆ ಆಗಮಿಸಿದ್ದಳು. ಈ ವೇಳೆ ಭಾರೀ ಗಾತ್ರದ ಮರ ಈಕೆಯ ಕಣ್ಣಿಗೆ ಬಿದ್ದಿದೆ. ಇದೇ ಮರದ ಬಳಿ ನಗ್ನವಾಗಿ ನಿಂತು ಫೋಟೋಶೂಟ್ ಮಾಡಿಸಿಕೊಂಡಿದ್ದಾಳೆ. ಹಲವು ಫೋಟೋಗಳನ್ನು ತೆಗೆಸಿರುವ ಕೋಶ್ಯಾಕ್ ಅದನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಇದನ್ನೂ ಓದಿ: ಪ್ರವಾಸಕ್ಕೆ ತೆರಳಿದ್ದ ಮೂವರು ಯುವತಿಯರ ಭೀಕರ ಹತ್ಯೆ – ಈಕ್ವೆಡಾರ್‌ ಬೀಚ್‌ನಲ್ಲಿ ನಡೆದಿದ್ದೇನು?

    ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆ, ಬಾಲಿಯ ಹಿಂದೂ ಸಮುದಾಯದ ಜನ ಮಹಿಳೆ ವಿರುದ್ಧ ತಿರುಗಿಬಿದ್ದಿದ್ದಾರೆ. ಬಾಲಿ ಉದ್ಯಮಿ ನಿಲುಡಿಜೆಲಾಂಟಿಕ್ ತಮ್ಮ ಖಾತೆಯಲ್ಲಿ ಮಹಿಳೆಯ ನಗ್ನ ಫೋಟೋವನ್ನ ಹಂಚಿಕೊಂಡಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಿಯನ್ನು ಅಗೌರವಿಸುವ ಎಲ್ಲಾ ವಿದೇಶಿಗರೇ ಗಮನಿಸಿ, ?ಬಾಲಿ ನಮ್ಮ ನೆಲ, ನಿಮ್ಮದಲ್ಲ. ದೇವಸ್ಥಾನದ ಪವಿತ್ರ ಮರದ ಬುಡದಲ್ಲಿ ನಗ್ನ ಚಿತ್ರ ಪ್ರದರ್ಶಿಸಿ ನೀವು ಆರಾಮಾಗಿ ಇಲ್ಲಿ ಕಳೆಯಬಹುದು ಎಂದು ಭಾವಿಸಿದ್ದೀರಾ? ನಮ್ಮ ಸಂಸ್ಕೃತಿ, ಪದ್ಧತಿ, ದೇಶವನ್ನು ಗೌರವಿಸಲು ಸಾಧ್ಯವಿಲ್ಲ ಎಂದಾದರೆ ಹೊರನಡೆಯಿರಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಹಿಳೆಯ ಫೋಟೋಶೂಟ್ ಖಂಡಿಸಿ ಬಾಲಿಯ ಹಿಂದೂ ಸಮುದಾಯ ತೀವ್ರ ಪ್ರತಿಭಟನೆ ನಡೆಸಿದ ಬಳಿಕ ಕಾರ್ಯಪ್ರವೃತ್ತರಾದ ಇಂಡೋನೇಷ್ಯಾ ಅಧಿಕಾರಿಗಳು, ಲೂಯ್ಜಾ ಕೋಶ್ಯಾಕ್ ಬಂಧಿಸಿದ್ದಾರೆ. ಇಷ್ಟೇ ಅಲ್ಲ ಮತ್ತೆ ಇಂಡೋನೇಷ್ಯಾ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ: ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಸೆಕ್ಸ್‌ – 6 ಮಂದಿ US ಶಿಕ್ಷಕಿಯರು ಅರೆಸ್ಟ್‌

    ತಬನನ್ ದೇವಸ್ಥಾನದ ಆವರಣದಲ್ಲಿರುವ ಈ ಪವಿತ್ರ ಮರ ಸುಮಾರು 700 ವರ್ಷಗಳಷ್ಟು ಹಳೆಯ ಮರವಾಗಿದೆ. ಕಳೆದ ವರ್ಷ ರಷ್ಯಾದ ಯೋಗಪಟು ಇದೇ ಮರದ ಬುಡದಲ್ಲಿ ಫೋಟೋ ತೆಗೆದು ವಿವಾದ ಸೃಷ್ಟಿಸಿದ್ದರು.

  • ಕ್ರಿಕೆಟಿಗ ಪೃಥ್ವಿ ಶಾ ಕಾರಿನ ಮೇಲೆ ದಾಳಿ – ಸಿನಿ ತಾರೆ ಸಪ್ನಾ ಗಿಲ್ ಅರೆಸ್ಟ್

    ಕ್ರಿಕೆಟಿಗ ಪೃಥ್ವಿ ಶಾ ಕಾರಿನ ಮೇಲೆ ದಾಳಿ – ಸಿನಿ ತಾರೆ ಸಪ್ನಾ ಗಿಲ್ ಅರೆಸ್ಟ್

    ಮುಂಬೈ: ಟೀಂ ಇಂಡಿಯಾ (Team India) ಕ್ರಿಕೆಟಿಗ ಪೃಥ್ವಿ ಶಾ (Prithvi Shaw) ಅವರ ಕಾರಿನ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ ಸೋಷಿಯಲ್ ಮೀಡಿಯಾ (Social Media) ಸ್ಟಾರ್ ಹಾಗೂ ಸಿನಿ ತಾರೆ ಸಪ್ನಾ ಗಿಲ್ (Sapna Gill) ಅವರನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ಚಂಡೀಗಢ ಮೂಲದ ಸಪ್ನಾ ಗಿಲ್ ಮುಂಬೈನಲ್ಲಿ ವಾಸವಾಗಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ (Instagram) ಡಾನ್ಸ್, ವೀಡಿಯೋ, ಫ್ಯಾಷನ್ ಫೋಟೋಗಳಿಂದಲೇ ಗಮನ ಸೆಳೆದಿದ್ದ ಸಪ್ನಾ ಗಿಲ್ 2.19 ಲಕ್ಷ ಫಾಲೋವರ್ಸ್ (ಹಿಂಬಾಲಕರು) ಹೊಂದಿದ್ದಾರೆ. ರವಿ ಕಿಶನ್ ಮತ್ತು ದಿನೇಶ್ ಲಾಲ್ ಯಾದವ್ ಅವರಂತಹ ತಾರೆಯರೊಂದಿಗೆ ಭೋಜ್‌ಪುರಿ ಚಲನಚಿತ್ರಗಳಲ್ಲಿ ನಟಿಸಿರುವ ಸಪ್ನಾ ಗಿಲ್, ಕಾಶಿ ಅಮರನಾಥ್, ನಿರ್ಹುವಾ ಚಲಾಲ್ ಲಂಡನ್ ಹಾಗೂ 2021ರಲ್ಲಿ ಬಿಡುಗಡೆಯಾದ ಮೇರಾ ವತನ್ ಸಿನಿಮಾದಲ್ಲೂ ನಟಿಸಿದ್ದಾರೆ.

    ಫೆ.15ರ ರಾತ್ರಿ ಪೃಥ್ವಿ ಶಾ ಅವರ ಕಾರಿನ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ ಇದೀಗ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಸೆಲ್ಫಿ ಕೊಡದಿದ್ದಕ್ಕೆ ಟೀಂ ಇಂಡಿಯಾ ಆಟಗಾರ ಪೃಥ್ವಿ ಶಾ ಕಾರಿನ ಮೇಲೆ ಅಟ್ಯಾಕ್

    ಏನಿದು ಘಟನೆ?
    ಪೃಥ್ವಿ ಶಾ ಮುಂಬೈನ ಸಾಂತ್ರಾಕ್ರೂಜ್‌ನಲ್ಲಿರುವ ಪಂಚತಾರಾ ಹೋಟೆಲ್‌ಗೆ ಊಟಕ್ಕೆ ಹೋಗಿದ್ದರು. ಈ ವೇಳೆ ಸಪ್ನಾ ಗಿಲ್ ಮತ್ತು ಅವರ ತಂಡ ಪೃಥ್ವಿ ಶಾ ಅವರೊಂದಿಗೆ ಸೆಲ್ಫಿಗೆ ಒತ್ತಾಯಿಸಿದ್ದರು. ಈ ವೇಳೆ ಪೃಥ್ವಿ ಶಾ ನಿರಾಕರಿಸಿದ್ದು, ನಾನು ಸ್ನೇಹಿತರೊಂದಿಗೆ ಊಟಕ್ಕೆ ಬಂದಿದ್ದೇನೆ. ಯಾರಿಗೂ ತೊಂದರೆ ಕೊಡಲು ಬಯಸುವುದಿಲ್ಲ ಎಂದು ಹೇಳಿದ್ದರು. ಆದರೂ ಸೆಲ್ಫಿಗೆ ಒತ್ತಾಯಿಸಿದ್ದರಿಂದ ಹೋಟೆಲ್ ವ್ಯವಸ್ಥಾಪಕರಿಗೆ ಪೃಥಿ ಶಾ ತಿಳಿಸಿದ್ದರು.

    ಬಳಿಕ ಹೋಟೆಲ್‌ನವರು ಆ ಗುಂಪನ್ನು ಹೊರಗೆ ಕಳಿಸಿದ್ದರು. ಇದರಿಂದ ಕೆರಳಿದ ಆ ಗುಂಪು, ಅವರು ಊಟ ಮುಗಿಸಿ ಹೊರಗೆ ಬರುತ್ತಿದ್ದಂತೆ ಬೇಸ್‌ಬಾಲ್ ಬ್ಯಾಟ್‌ಗಳಿಂದ ಬಿಎಂಡಬ್ಲ್ಯೂ ಕಾರಿನ ಮೇಲೆ ಅಟ್ಯಾಕ್ ಮಾಡಿದ್ದರು. ಕಾರಿನ ಹಿಂಭಾಗ, ಮುಂಭಾಗದ ಗಾಜುಗಳನ್ನು ಚಚ್ಚಿ ಪುಡಿಪುಡಿ ಮಾಡಿದ್ದರು. ಅಷ್ಟೇ ಅಲ್ಲ, ಪೃಥ್ವಿ ಸ್ನೇಹಿತನಿಂದ 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಅಷ್ಟರಲ್ಲಿ ಪೃಥ್ವಿ ಶಾ ಅವರನ್ನು ಬೇರೆ ಕಾರಿನಲ್ಲಿ ಕಳುಹಿಸಲಾಗಿತ್ತು. ಈ ಸಂಬಂಧ ಓಶಿವಾರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ದೀಪ್ತಿ ಶರ್ಮಾ ದಾಖಲೆ- ಭಾರತಕ್ಕೆ 6 ವಿಕೆಟ್‌ಗಳ ಸುಲಭ ಜಯ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಮುಕ ಟೆಕ್ಕಿ ಮೊಬೈಲ್‌ನಲ್ಲಿ ತನ್ನ ಪ್ರಿಯತಮೆಯದ್ದೂ ಸೇರಿ 208 ಖಾಸಗಿ ವೀಡಿಯೊಗಳು ಪತ್ತೆ..!

    ಕಾಮುಕ ಟೆಕ್ಕಿ ಮೊಬೈಲ್‌ನಲ್ಲಿ ತನ್ನ ಪ್ರಿಯತಮೆಯದ್ದೂ ಸೇರಿ 208 ಖಾಸಗಿ ವೀಡಿಯೊಗಳು ಪತ್ತೆ..!

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ (Social Media) ಯುವತಿಯರ ಪರಿಚಯ ಮಾಡಿಕೊಂಡು ವಂಚನೆ ಮಾಡಿರೋ ಪ್ರಕರಣದ ತನಿಖೆ (Investigation) ವೇಳೆ ಮತ್ತಷ್ಟು ಸ್ಫೋಟಕ ಮಾಹಿತಿಗಳು ಬಯಲಾಗಿವೆ.

    ಆರೋಪಿ ಕನ್ನಪಲ್ಲಿ ದಿಲ್ಲಿ ಪ್ರಸಾದ್‌ನ ನಿಜ ಬಣ್ಣ ಬಯಲಾಗಿದ್ದು, ಆರೋಪಿ ಮೊಬೈಲ್‌ನಲ್ಲಿ (Mobile) ಯುವತಿಯರ 208 ಖಾಸಗಿ ವೀಡಿಯೋಗಳು (Private Video) ಪತ್ತೆಯಾಗಿವೆ. ಅದರಲ್ಲಿ ಪ್ರಸಾದ್ ತಾನೇ ವೀಡಿಯೋ ಕಾಲ್ ಮಾಡಿ ರೆಕಾರ್ಡ್ ಮಾಡಿದ್ದಾನೆ ಎನ್ನಲಾದ 60 ವೀಡಿಯೋಗಳು ಇವೆ ಎಂದು ಪೊಲೀಸರು ತಿಳಿಸಿದ್ದಾರೆ. 

    ಇನ್ಸ್ಟಾಗ್ರಾಮ್‌ (Instagram) ಮೂಲಕ ಯುವತಿಯರನ್ನ ಪರಿಚಯ ಮಾಡಿಕೊಳ್ಳುತ್ತಿದ್ದ ಆಸಾಮಿ ನಂತರ ತನ್ನ ಅವಶ್ಯಕತೆಗಳನ್ನು ಪೂರೈಸುವಂತೆ ಬ್ಲಾಕ್‌ಮೇಲ್ ಮಾಡ್ತಿದ್ದ. ತನ್ನ ಪ್ರಿಯತಮೆ ಹಾಗೂ 6 ಯುವತಿಯರನ್ನ ಲೈಂಗಿಕ ಕ್ರಿಯೆಗಾಗಿ ಬಳಸಿಕೊಂಡಿದ್ದಾನೆ. ಲೈಂಗಿಕವಾಗಿ ಬಳಸಿಕೊಂಡ ನಂತರ ಯುವತಿಯರನ್ನ ಅವಾಯ್ಡ್ ಮಾಡಲು ಮುಂದಾಗಿದ್ದಾನೆ ಅನ್ನೋದು ತನಿಖೆಯಲ್ಲಿ ಗೊತ್ತಾಗಿದೆ. ಇದನ್ನೂ ಓದಿ: ವಿಡಿಯೋ ಕಾಲ್ ಮಾಡಿ ಹೆಂಡತಿ ತೋರಿಸದಿದ್ದಕ್ಕೆ ಸ್ನೇಹಿತನಿಗೆ ಚಾಕು ಇರಿತ

    ಪ್ರಚೋದನೆ ಮಾಡ್ತಿದ್ದ: ಟೆಕ್ಕಿ ಕಾಮುಕ ಯುವತಿಯರಿಗೆ ಸೆಕ್ಸ್ ವೀಡಿಯೋಗಳನ್ನ ಕಳುಹಿಸಿ ಅದೇ ರೀತಿ ವೀಡಿಯೋ ಮಾಡಿ ಕಳಿಸುವಂತೆ ಪ್ರಚೋದಿಸುತ್ತಿದ್ದ. ವಿವಿಧ ಆಂಗಲ್‌ನಲ್ಲಿ ವೀಡಿಯೋ ಕಳಿಸಲು ಹೇಳ್ತಿದ್ದ. ವೀಡಿಯೊ ಕಳಿಸದಿದ್ರೆ ಸೋಷಿಯಲ್ ಮೀಡಿಯಾದಲ್ಲಿ ನಗ್ನ ಫೋಟೋ, ವೀಡಿಯೋ ಹಾಕುವುದಾಗಿ ಬ್ಲಾಕ್ ಮೇಲ್ ಮಾಡ್ತಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪಾಗಲ್ ಪ್ರೇಮಿ ಕಾಟಕ್ಕೆ ಬೇಸತ್ತು UP ಮೂಲದ ದಂತ ವೈದ್ಯೆ ಆತ್ಮಹತ್ಯೆ

    ಇನ್ಸ್ಟಾಗ್ರಾಮ್‌ ನಲ್ಲಿ ಯುವತಿಯ ಹೆಸರಲ್ಲಿ ಅಕೌಂಟ್ ತೆರೆದು ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ಟೆಕ್ಕಿ ಪ್ರಸಾದ್, ತಾನು ಕೆಲಸ ಗಿಟ್ಟಿಸಲು ಮೈ ಮಾರಿಕೊಂಡಿದ್ದೇನೆ ಎಂದು ಹೇಳಿ ನಂಬಿಸ್ತಿದ್ದ. ಯುವತಿಯರ ರೀತಿ ಚಾಟ್ ಮಾಡಿ ನಗ್ನ ವೀಡಿಯೋ ಕಳಿಸಿಕೊಂಡು ಲೈಂಗಿಕ ಕ್ರಿಯೆಗೆ ಆಹ್ವಾನ ನೀಡ್ತಿದ್ದ. ಓಯೋ ರೂಂ ಗೆ ಕರೆಸಿ ಬಲವಂತವಾಗಿ ಅತ್ಯಾಚಾರ ಮಾಡಿರೋದು ಸೌತ್ ಈಸ್ಟ್ ಸೆನ್ ಪೊಲೀಸರ ವಿಚಾರಣೆಯಲ್ಲಿ ಗೊತ್ತಾಗಿದ್ದು, ತನಿಖೆ ಮುಂದುವರಿದಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Delhi Crimeː ಮಹಿಳೆಯರ ನಗ್ನ ವೀಡಿಯೋ ಸೆರೆ ಹಿಡಿದು ಬ್ಲ್ಯಾಕ್‌ಮೇಲ್ ಮಾಡ್ತಿದ್ದ ಕಾಮುಕ ಅರೆಸ್ಟ್

    Delhi Crimeː ಮಹಿಳೆಯರ ನಗ್ನ ವೀಡಿಯೋ ಸೆರೆ ಹಿಡಿದು ಬ್ಲ್ಯಾಕ್‌ಮೇಲ್ ಮಾಡ್ತಿದ್ದ ಕಾಮುಕ ಅರೆಸ್ಟ್

    ನವದೆಹಲಿ: ಜಾಲತಾಣದ (Social Media) ಮೂಲಕ ಸುಂದರ ಮಹಿಳೆಯರ ಪರಿಚಯ ಮಾಡ್ಕೊಂಡು ಪುಸಲಾಯಿಸಿ ಆಕೆಯ ನಗ್ನ ವೀಡಿಯೋ ಮಾಡಿ, ಬ್ಲ್ಯಾಕ್‌ಮೇಲ್ (Blackmail) ಮಾಡುತ್ತಿದ್ದ ಕಾಮುಕನನ್ನು ದೆಹಲಿ ಪೊಲೀಸರು (Delhi Police) ಬಂಧಿಸಿದ್ದಾರೆ.

    ಹುಡ್ಗೀರಿಗೆ ಬ್ಲ್ಯಾಕ್‌ಮೇಲ್‌ ಮಾಡ್ತಿದ್ದ 17ರ ಹುಡುಗ - ಮಗನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ತಂದೆ

    ಹೌದು, ಆರೋಪಿಯು ಸಾಮಾಜಿಕ ಜಾಲತಾಣಗಳ ಮೂಲಕ ಮಹಿಳೆಯರನ್ನ (Women) ಪರಿಚಯ ಮಾಡಿಕೊಂಡು ಸಂಪರ್ಕಿಸಿ, ಅವರ ನಂಬಿಕೆ ಗಳಿಸಿದ ಬಳಿಕ ವೀಡಿಯೋ ಕಾಲ್ ಮಾಡುತ್ತಿದ್ದ. ಈ ವೇಳೆ ತನ್ನ ಬಣ್ಣದ ಮಾತುಗಳಿಂದ ಮರುಳು ಮಾಡಿ ಬಟ್ಟೆಬಿಚ್ಚಲು ಹೇಳುತ್ತಿದ್ದ. ನಂತರ ಅದನ್ನು ವೀಡಿಯೋ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡಲು ಶುರು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: India-China Border Row: 1962ರಲ್ಲೇ ಚೀನಾ ಭೂಪ್ರದೇಶ ಆಕ್ರಮಿಸಿತ್ತು – ರಾಗಾ ಟೀಕೆಗೆ ಜೈಶಂಕರ್ ತಿರುಗೇಟು

    ಹುಡ್ಗೀರಿಗೆ ಬ್ಲ್ಯಾಕ್‌ಮೇಲ್‌ ಮಾಡ್ತಿದ್ದ 17ರ ಹುಡುಗ - ಮಗನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ತಂದೆ

    ಏನಿದು ವೀಡಿಯೋ ಸೀಕ್ರೆಟ್?
    ಇದೇ ತಿಂಗಳ ಜನವರಿ 12ರಂದು ದೆಹಲಿ ಮಹಿಳೆಯೊಬ್ಬರು ಸೈಬರ್ ಕ್ರೈಂ (Cyber Crime) ಆನ್‌ಲೈನ್ ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ರಾಘವ್ ಚೌಹಾಣ್ ಎಂಬ ಹುಡುಗ ಮಹಿಳೆಯನ್ನು ಜಾಲತಾಣದ ಮೂಲಕ ಸಂಪರ್ಕಿಸಿದ್ದಾನೆ. ನಂತರ ನಡೆದ ಸಂಭಾಷಣೆ ಸಮಯದಲ್ಲಿ ಇಬ್ಬರೂ ಸ್ನೇಹಿತರಾಗಿ ವಾಟ್ಸಾಪ್‌ನಲ್ಲಿ ಚಾಟಿಂಗ್ ಶುರು ಮಾಡಿದ್ದಾರೆ. ಆತ ಆಕೆಯೊಂದಿಗೆ ಮಾತನಾಡಲು ಶುರು ಮಾಡಿದ್ದಾನೆ. ಪ್ರತಿದಿನ ಮೆಸೇಜ್ ಮಾಡುತ್ತಾ ವಿಶ್ವಾಸ ಗಳಿಸಿದ್ದಾನೆ. ಇದಾದ ಬಳಿಕ ಒಂದು ದಿನ ಆಕೆಗೆ ವಿಡಿಯೋ ಕಾಲ್ ಮಾಡಿ ಬಟ್ಟೆ ಬಿಚ್ಚುವಂತೆ ಪ್ರಚೋದಿಸಿದ್ದಾನೆ. ತುಂಬಾ ನಂಬಿಕೆ ಬರುವಂತೆ ನಡೆದುಕೊಂಡಿದ್ದರಿಂದ ಆಕೆ ತನ್ನ ನಗ್ನತೆಯನ್ನ ಪ್ರದರ್ಶಿಸಿದ್ದಾಳೆ. ನಂತರ ಕಾಮುಕ ತನ್ನ ನಿಜರೂಪ ತೋರಿಸಿದ್ದಾನೆ.

    CRIME COURT

    ರಾಘವ್ ಆಕೆಯ ಬೆತ್ತಲೆ ವೀಡಿಯೋ ಚಿತ್ರೀಕರಿಸಿಕೊಂಡು ಹಣಕ್ಕೆ ಬೇಡಿಕೆಯಿಟಿದ್ದಾನೆ. ಮಹಿಳೆ ಭಯದಿಂದ 1.25 ಲಕ್ಷ ರೂ. ನೀಡಿದ್ದಾಳೆ. ಸಾಲದಿದ್ದಕ್ಕೆ ಆಕೆಯ ನಗ್ನ ವೀಡಿಯೋವನ್ನ ಪತಿಗೆ ಕಳುಹಿಸಿ ಅವನಿಂದಲೂ 70 ಸಾವಿರ ರೂ. ಪೀಕಿದ್ದಾನೆ. ನಂತರವೂ ವೀಡಿಯೋ ಜಾಲತಾಣದಲ್ಲಿ ಹರಿಯಬಿಡುವುದಾಗಿ ಹಣಕ್ಕಾಗಿ ಒತ್ತಾಯಿಸಿದ್ದಾನೆ. ಕೊನೆಗೆ ಬೇಸತ್ತ ಮಹಿಳೆ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾಳೆ. ಇದನ್ನೂ ಓದಿ: ದೆಹಲಿಯಲ್ಲಿ ಖಲಿಸ್ತಾನಿ ಉಗ್ರರ ಸ್ಲೀಪರ್ ಸೆಲ್ – ದಾಳಿಗೆ ಸಂಚು ರೂಪಿಸಿರುವ ಶಂಕೆ

    ಸಂತ್ರಸ್ತೆಯ ದೂರಿನ ಮೇರೆಗೆ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಇಂದೋರ್ ನಿವಾಸಿ ಸನ್ನಿ ಚೌಹಾಣ್ ಅಲಿಯಾಸ್ ರಾಘವ್ ಚೌಹಾಣ್ (25) ನನ್ನ ಬಂಧಿಸಿದ್ದಾರೆ. ಬಳಿಕ ಅವನನ್ನ ವಿಚಾರಣೆಗೆ ಒಳಪಡಿಸಿದಾಗ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಇದೇ ರೀತಿ ಅನೇಕ ಮಹಿಳೆಯರನ್ನ ವಂಚಿಸಿರುವುದಾಗಿ ಬಾಯ್ಬಿಟ್ಟಿದ್ದಾನೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹುಡ್ಗೀರಿಗೆ ಬ್ಲ್ಯಾಕ್‌ಮೇಲ್‌ ಮಾಡ್ತಿದ್ದ 17ರ ಹುಡುಗ – ಮಗನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ತಂದೆ

    ಹುಡ್ಗೀರಿಗೆ ಬ್ಲ್ಯಾಕ್‌ಮೇಲ್‌ ಮಾಡ್ತಿದ್ದ 17ರ ಹುಡುಗ – ಮಗನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ತಂದೆ

    ನವದೆಹಲಿ: ಇನ್ಸ್ಟಾಗ್ರಾಮ್‌ (Instagram) ಮೂಲಕ ಸ್ನೇಹ ಬೆಳೆಸಿ ನಂತರ ಅವರ ಖಾಸಗಿ ಫೋಟೋಗಳನ್ನು ಬಹಿರಂಗಪಡಿಸುವುದಾಗಿ ಹುಡುಗಿಯರಿಗೆ ಬ್ಲ್ಯಾಕ್‌ಮೇಲ್‌ (BlackMail) ಮಾಡುತ್ತಿದ್ದ 17 ವರ್ಷದ ಹುಡುಗನನ್ನು ದೆಹಲಿ ಪೊಲೀಸರು (Delhi Police) ಬಂಧಿಸಿದ್ದಾರೆ.

    14 ವರ್ಷದ ಬಾಲಕಿ ತಾನು ಬೇರೆ ಹುಡುಗನೊಂದಿಗೆ ಹಂಚಿಕೊಂಡಿರುವ ಫೋಟೋ (Private Photos) ಮತ್ತು ವೀಡಿಯೋಗಳು ಲೀಕ್ ಆಗಬಹುದು ಎಂಬ ಭಯದಿಂದ ತನ್ನ ತಂದೆಗೆ ವಿಷಯ ತಿಳಿಸಿದ್ದಾಳೆ. ನಂತರ ಬಾಲಕಿಯ ತಂದೆ ಉತ್ತರ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ವೃದ್ಧ ಮಹಿಳೆಯರನ್ನೇ ರೇಪ್ ಮಾಡಿ, ಕೊಲೆ ಮಾಡ್ತಿದ್ದ 20ರ ಯುವಕ- ಸೈಕೋ ಕಿಲ್ಲರ್ ಅರೆಸ್ಟ್

    ಇನ್ಸ್ಟಾಗ್ರಾಮ್‌ ಪ್ರೊಫೈಲ್ ವಿವರಗಳನ್ನು ಪಡೆದ ನಂತರ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ನಂತರ ಆರೋಪಿಯ ಗುರುತು ಪತ್ತೆ ಹಚ್ಚಲು ಐಪಿ ವಿಳಾಸ ಹಾಗೂ ಮೊಬೈಲ್ ನಂಬರ್ ಟ್ರೇಸ್ ಮಾಡಿದ್ದಾರೆ. ಇದನ್ನೂ ಓದಿ: ಭವಾನಿಯವರಿಗೆ ಬಿಜೆಪಿ ಸೇರಲು ಆಹ್ವಾನಿಸಿದ್ದು ತಮಾಷೆಗೆ; ಅವರಿಗೆ ಹಾಸನ ಸುರಕ್ಷಿತ ಅಲ್ಲ – ಸಿ.ಟಿ.ರವಿ

    ಆರೋಪಿಯನ್ನು ಗುರುತಿಸಿದ ನಂತರ ಪೊಲೀಸರು ಆತನ ಮನೆಗೆ ತಲುಪಿದ್ದರು. ಅಷ್ಟರಲ್ಲಿ ಹುಡುಗ ಮನೆಯಿಂದ ಎಸ್ಕೇಪ್ ಆಗಿದ್ದ. ಇದರಿಂದ ಪೊಲೀಸರು ತಮ್ಮ ಮಗನನ್ನು ಠಾಣೆಗೆ ಹಾಜರುಪಡಿಸುವಂತೆ ತಂದೆಗೆ ಸೂಚಿಸಿದ್ದರು. ನಂತರ ಏನೂ ಗೊತ್ತಿಲ್ಲದವನಂತೆ ಮಗ ಮನೆಗೆ ಬರುತ್ತಿದ್ದಂತೆ ತಂದೆಯೇ ಆತನನ್ನು ಹಿಡಿದು ಪೊಲೀಸರ ಮುಂದೆ ಹಾಜರುಪಡಿಸಿದ್ದಾರೆ. ನಂತರ ಆತನನ್ನು ಬಂಧಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಎರಡು ವರ್ಷಗಳ ನಿಷೇಧದ ಬಳಿಕ ಟ್ರಂಪ್ ಫೇಸ್‍ಬುಕ್, ಇನ್‍ಸ್ಟಾಗ್ರಾಂ ಖಾತೆ ಮರುಸ್ಥಾಪನೆ

    ಎರಡು ವರ್ಷಗಳ ನಿಷೇಧದ ಬಳಿಕ ಟ್ರಂಪ್ ಫೇಸ್‍ಬುಕ್, ಇನ್‍ಸ್ಟಾಗ್ರಾಂ ಖಾತೆ ಮರುಸ್ಥಾಪನೆ

    ವಾಷಿಂಗ್ಟನ್: ಅಮೆರಿಕದ (America) ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಫೇಸ್‍ಬುಕ್ (Facebook) ಮತ್ತು ಇನ್‍ಸ್ಟಾಗ್ರಾಂ (Instagram) ಖಾತೆಯನ್ನು ಬ್ಯಾನ್ ಮಾಡಿದ್ದ ಮೇಟಾ (Meta) ಸಂಸ್ಥೆ ಇದೀಗ 2 ವರ್ಷಗಳ ನಿಷೇಧದ ಬಳಿಕ ಮರುಸ್ಥಾಪನೆಗೆ ಅವಕಾಶ ನೀಡುವುದಾಗಿ ತಿಳಿಸಿದೆ.

    ಅಮೆರಿಕ ಸಂಸತ್ ಭವನದ ಮೇಲೆ 2021ರ ಜನವರಿ 6 ರಂದು ನಡೆದ ದಂಗೆಗೆ ಸಂಬಂಧಿಸಿದಂತೆ ಟ್ರಂಪ್ ಮಾಡಿದ್ದ ಫೇಸ್‍ಬುಕ್ ಪೋಸ್ಟ್‌ಗಳು ಪ್ರಚೋದನಕಾರಿಯಾಗಿದ್ದವು ಎಂಬ ಕಾರಣಕ್ಕೆ ಫೇಸ್‍ಬುಕ್ ಸಂಸ್ಥೆ ಟ್ರಂಪ್ ಖಾತೆಯನ್ನು 2 ವರ್ಷಗಳ ಕಾಲ ಬ್ಯಾನ್ ಮಾಡಿತ್ತು. ಇದರೊಂದಿಗೆ ಇನ್‍ಸ್ಟಾಗ್ರಾಂ ಖಾತೆಯನ್ನು ಬ್ಯಾನ್ ಮಾಡಿತ್ತು. ಡೊನಾಲ್ಡ್ ಟ್ರಂಪ್ ಫೇಸ್‍ಬುಕ್ ಖಾತೆ 2 ವರ್ಷ ಬ್ಯಾನ್

    ಇದೀಗ ನಾವು ಮುಂದಿನ ಕೆಲ ದಿನಗಳಲ್ಲಿ ಟ್ರಂಪ್ ಅವರ ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಂ ಖಾತೆಗಳನ್ನು ಮರುಸ್ಥಾಪಿಸಲು ಅವಕಾಶ ನೀಡುತ್ತಿದ್ದೇವೆ ಎಂದು ಮೆಟಾದ ಜಾಗತಿಕ ವ್ಯವಹಾರಗಳ ಅಧ್ಯಕ್ಷ ನಿಕ್ ಕ್ಲೆಗ್ (Nick Clegg) ತಿಳಿಸಿದ್ದಾರೆ. ಪುನರಾವರ್ತಿತ ಅಪರಾಧಗಳನ್ನು ತಡೆಯಲು ಹೊಸ ಮಾನದಂಡಗಳೊಂದಿಗೆ ಖಾತೆಯನ್ನು ಮರಸ್ಥಾಪಿಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ತನ್ನದೇ ಹೊಸ ಸಾಮಾಜಿಕ ಮಾಧ್ಯಮ ‘TRUTH Social’ ಆರಂಭಿಸಿದ ಟ್ರಂಪ್

    ಹಿಂಸಾಚಾರಕ್ಕೆ ಪ್ರಚೋದನಕಾರಿಯಾಗಿ ಮಾಡಿದ ಪೋಸ್ಟ್‌ಗೆ ಸಂಬಂಧಿಸಿದಂತೆ ಸಂಸ್ಧೆಯು ತೆಗೆದುಕೊಂಡಿರುವ ನಿರ್ಧಾರದ ಪ್ರಕಾರ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು 2023ರ ಜನವರಿವರೆಗೆ ಬ್ಯಾನ್ ಮಾಡಲಾಗಿದೆ ಎಂದು 2 ವರ್ಷಗಳ ಹಿಂದೆ ನಿಕ್ ಕ್ಲೆಗ್ ಬ್ಲಾಗ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು. ಇದೀಗ ಮತ್ತೆ ಮರುಸ್ಥಾಪಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ತಿಳಿಸಿದ್ದಾರೆ.

    ಟ್ರಂಪ್ ಅವರ ಫೇಸ್‍ಬುಕ್ ಖಾತೆಯನ್ನು 2 ವರ್ಷ ಬ್ಯಾನ್ ಮಾಡಿದ್ದರೆ, ಟ್ವಿಟ್ಟರ್ (Twitter) ಮಾತ್ರ ಶಾಶ್ವತವಾಗಿ ಖಾತೆಯನ್ನು ರದ್ದುಮಾಡಿದೆ. 88 ಮಿಲಿಯನ್ ಫಾಲೋವರ್ಸ್ ಹೊಂದಿದ ಟ್ವಿಟ್ಟರ್ ಖಾತೆ ಈಗಾಗಲೇ ಬ್ಯಾನ್ ಆಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದ್ರೌಪದಿಗೆ ಕೃಷ್ಣ ಸಹಾಯ ಮಾಡಿದಂತೆ ನಮಗೆ ಸಹಾಯ ಮಾಡಿ: ಮೋದಿಗೆ ಕಂಗನಾ ಮನವಿ

    ದ್ರೌಪದಿಗೆ ಕೃಷ್ಣ ಸಹಾಯ ಮಾಡಿದಂತೆ ನಮಗೆ ಸಹಾಯ ಮಾಡಿ: ಮೋದಿಗೆ ಕಂಗನಾ ಮನವಿ

    ಮುಂಬೈ: ನಟಿ ತುನಿಷಾ ಶರ್ಮಾ (Tunisha Sharma) ಅವರ ಸಾವಿನ ಪ್ರಕರಣದಲ್ಲಿ ಈಗಾಗಲೇ ಅನೇಕ ರೋಚಕ ಸತ್ಯಗಳು ಹೊರಬಿದ್ದಿವೆ. ತನಿಖೆ ನಡೆಯುವ ಸಂದರ್ಭದಲ್ಲಿ ತುನಿಷಾ ಗರ್ಭಿಣಿ (Pregnant Women) ಎಂದು ಹೇಳಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವರು ಗರ್ಭಿಣಿ ಆಗಿರಲಿಲ್ಲ ಎಂದು ಸಾಬೀತಾಯಿತು. ಈ ಕುರಿತು ಮತ್ತೆ ತುನಿಷಾ ಸ್ನೇಹಿತೆ ರಯ್ಯಾ ಲಬೀಬ್ ಅಚ್ಚರಿಯ ಹೇಳಿಕೆ ನೀಡಿದ್ದು, ಆಕೆ ಗರ್ಭಿಣಿಯಾಗಿದ್ದು ನಿಜ. ಅಬಾರ್ಷನ್ ಮಾಡಿಸಿಕೊಂಡಿದ್ದಳು ಎಂದು ಹೇಳಿಕೆ ನೀಡಿದ್ದ.

    ನಟಿ ತುನಿಷಾ ಶರ್ಮಾ ಆತ್ಮಹತ್ಯೆ (Suicide) ಮಾಡಿಕೊಳ್ಳುವ ಹದಿನೈದು ದಿನ ಮುನ್ನ ಬಾಯ್ ಫ್ರೆಂಡ್ ಶಿಜಾನ್ ಜೊತೆ ಲವ್ ಬ್ರೇಕ್ ಅಪ್ ಮಾಡಿಕೊಂಡಿದ್ದಳು ಎಂದು ಹೇಳಲಾಗಿದ್ದು, ಈ ಲವ್ ಬ್ರೇಕ್ ಅಪ್ ಗೆ ಕಾರಣ ಲವ್ ಜಿಹಾದ್ (Love Jihad) ಭಯ ಮತ್ತು ಶ್ರದ್ಧಾ ವಾಕರ್ ಕೊಲೆಯಿಂದ ಬೇಸತ್ತು ದೂರವಾಗಿದ್ದನು ಎಂದು ಹೇಳಿಕೊಂಡಿದ್ದ. ಈ ಪ್ರಕರಣದ ಕುರಿತಾಗಿ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಹಲವೆಡೆ ಸ್ಫೋಟ – 5 ಸಾವು, 10 ಮಂದಿಗೆ ಗಾಯ

    ಈ ಬೆನ್ನಲ್ಲೇ ನಟಿ ಕಂಗನಾ ರಣಾವತ್ (Kangana Ranaut) ಸಹ ಅಸಮಾಧಾನ ಹೊರಹಾಕಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು ಭಾವುಕ ಪೋಸ್ಟ್ ವೊಂದನ್ನು ಬರೆದುಕೊಂಡಿದ್ದಾರೆ. `ಮಹಿಳೆ ಎಲ್ಲವನ್ನೂ ನಿಭಾಯಿಸಬಲ್ಲಳು, ಕಳೆದುಕೊಂಡ ಪ್ರೀತಿ, ಮದುವೆ, ಸಂಬಂಧ ಹೀಗೆ ಎಲ್ಲವನ್ನೂ ನಿಭಾಯಿಸಬಹುದು. ಆದರೆ ಅವಳ ಲವ್ ಸ್ಟೋರಿ ಎಂದಿಗೂ ಪ್ರೀತಿಯನ್ನು ಹೊಂದಿಲ್ಲ ಎಂಬ ಅಂಶವನ್ನು ಅವಳು ಎಂದಿಗೂ ನಿಭಾಯಿಸಲು ಸಾಧ್ಯವಿಲ್ಲ. ನಾನು ಗೌರವಾನ್ವಿತ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರಲ್ಲಿ ವಿನಂತಿಸುತ್ತೇನೆ. ಕೃಷ್ಣ ದ್ರೌಪದಿಗೆ ಸಹಾಯ ಮಾಡಿದಂತೆ, ನಾವು ನಿಮ್ಮಲ್ಲಿ ಒಪ್ಪಿಗೆ ಇಲ್ಲದ ಬಹುಪತ್ನಿತ್ವ ವಿರುದ್ಧ ಬಲವಾದ ಕಾನೂನು ಮಾಡುತ್ತೀರಿ ಎಂದು ನಿರೀಕ್ಷೆ ಇಟ್ಟಿದ್ದೀವಿ. ಮಹಿಳೆಯರ ಮೇಲೆ ಆ ಸಿಡ್ ದಾಳಿ, ಮಹಿಳೆಯನ್ನು ಅನೇಕ ತುಂಡು ತುಂಡುಗಳಾಗಿ ಕತ್ತರಿಸುವುದು ಇಂತವರಿಗೆ ತಕ್ಷಣ ಮರಣದಂಡನೆ ಶಿಕ್ಷೆ ವಿಧಿಸಬೇಕು’ ಎಂದು ಮನವಿ ಮಾಡಿದ್ದಾರೆ.

    ಇತ್ತೀಚೆಗಷ್ಟೇ 20 ವರ್ಷದ ತುನಿಷಾ ಶರ್ಮಾ ಶೂಟಿಂಗ್ ಸೆಟ್‌ನಲ್ಲೇ ಮೇಕಪ್ ರೂಮ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿನ ಬಳಿಕ ಆಕೆಯ ಬಾಯ್‌ಫ್ರೆಂಡ್ ಶೀಜಾನ್ ಖಾನ್ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣ ಈಗ ಲವ್ ಜಿಹಾದ್ ಆಯಾಮ ಪಡೆದುಕೊಳ್ಳುತ್ತಿದೆ. ಈ ನಡುವೆ ಕಂಗನಾ ಟ್ವೀಟ್ ವೈರಲ್ ಆಗಿದೆ. ಇದನ್ನೂ ಓದಿ: ಲವ್ ಜಿಹಾದ್’ ಗೆ ಹೆದರಿಕೊಂಡು ತುನಿಷಾ ಶರ್ಮಾಳಿಂದ ದೂರವಾಗಿದ್ದ ಬಾಯ್ ಫ್ರೆಂಡ್

    Live Tv
    [brid partner=56869869 player=32851 video=960834 autoplay=true]