Tag: instagram

  • ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ ವಿದ್ಯಾರ್ಥಿನಿಯರಿಗೆ ಬೆದರಿಕೆ – ಇಬ್ಬರು ವಿದ್ಯಾರ್ಥಿಗಳು ಅರೆಸ್ಟ್

    ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ ವಿದ್ಯಾರ್ಥಿನಿಯರಿಗೆ ಬೆದರಿಕೆ – ಇಬ್ಬರು ವಿದ್ಯಾರ್ಥಿಗಳು ಅರೆಸ್ಟ್

    ಹುಬ್ಬಳ್ಳಿ: ಖಾಸಗಿ ಕಾಲೇಜುವೊಂದರ ವಿದ್ಯಾರ್ಥಿನಿಯ ಹೆಸರಲ್ಲಿ ನಕಲಿ ಇನ್‌ಸ್ಟಾಗ್ರಾಂ (Instagram) ಖಾತೆ ಸೃಷ್ಟಿಸಿ ವಿದ್ಯಾರ್ಥಿನಿಯರಿಗೆ ಹಾಗೂ ಪೊಲೀಸರಿಗೆ ಬೆದರಿಕೆ (Threat) ಹಾಕಿದ ಪ್ರಕರಣ ತಿರುವು ಪಡೆದಿದ್ದು, ಮೂಲ ಆರೋಪಿಗಳಿಬ್ಬರನ್ನು ಸೈಬರ್ ಕ್ರೈಂ (Cyber Crime) ಪೊಲೀಸರು ಏಳು ದಿನದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಶಂಕಿತ ಆರೋಪಿ ಹಾಗೂ ಖಾಸಗಿ ಕಾಲೇಜಿನ ಹಳೇ ವಿದ್ಯಾರ್ಥಿ ರಜನಿಕಾಂತ್ ತಳವಾರ ಎಂಬಾತನನ್ನು ಸಂಶಯದ ಮೇಲೆ ಬಂಧಿಸಿ ಏಳು ದಿನ ವಿಚಾರಣೆಗೆ ಒಳಪಡಿಸಿದ್ದರು. ಅಷ್ಟೇ ಅಲ್ಲದೆ ಈ ಪ್ರಕರಣದ ಹಿಂದೆ ಇನ್ನೂ ಕೆಲವರು ಇದ್ದಾರೆ ಎಂಬ ಸಂಶಯದ ಮೇರೆಗೆ ತನಿಖೆ ಮುಂದುವರಿಸಿದ್ದರು. ಇದನ್ನೂ ಓದಿ: ವೇಗವಾಗಿ ಸೈಕಲ್ ಚಾಲನೆ – ಟೆಂಪೋ ಚಕ್ರದಡಿಗೆ ಸಿಲುಕಿ ಬಾಲಕ ಸಾವು

    ಜಾಲತಾಣದ ಅಧಿಕೃತ ಮಾಹಿತಿಯ ಹಿಂದೆ ಬಿದ್ದಾಗ ರಜನಿಕಾಂತ್ ಆರೋಪಿ ಅಲ್ಲ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿದೆ. ಶಂಕಿತ ಆರೋಪಿಯಾಗಿದ್ದ ರಜನಿಕಾಂತ್‌ನ ಇನ್‌ಸ್ಟಾಗ್ರಾಂ ಖಾತೆ, ಇ-ಮೇಲ್ (E-Mail) ಐಡಿ ಹಾಗೂ ಸಾಮಾಜಿಕ ಜಾಲತಾಣದ ವಿವವರಗಳನ್ನು ಪೊಲೀಸರು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಆದರೆ ಈ ವರದಿ ಬರುವವರೆಗೂ ಉಳಿದ ಆರೋಪಿಗಳನ್ನು ಪತ್ತೆ ಮಾಡುವುದು ಪೊಲೀಸರಿಗೆ ಕಷ್ಟವಾಗಿತ್ತು. ಪ್ರಕರಣ ಗಂಭೀರವಾಗಿದ್ದರಿಂದ ಸೈಬರ್ ಠಾಣಾ ಪೊಲೀಸರು ಹ್ಯಾಕ್ ಮಾಡಲಾದ ವಿದ್ಯಾರ್ಥಿನಿಯರ ಇನ್‌ಸ್ಟಾಗ್ರಾಂ ಖಾತೆ ವಿವರ ಸಂಗ್ರಹಿಸಿ ಫೇಸ್‌ಬುಕ್ ಸಂಸ್ಥೆಗೆ ಮಾಹಿತಿ ನೀಡಲು ಪತ್ರ ಬರೆದಿದ್ದರು. ಇದನ್ನೂ ಓದಿ: ಬಾರ್‌ನಲ್ಲಿ ಗಲಾಟೆ – ಯುವಕನ ಮರ್ಮಾಂಗಕ್ಕೆ ಹೊಡೆದು ಹತ್ಯೆ

    ಅಲ್ಲಿಂದ ದೊರೆತ ಅಧಿಕೃತ ಮಾಹಿತಿಯೇ ಆರೋಪಿಗಳ ಪತ್ತೆಗೆ ಸಹಕಾರಿಯಾಗಿದೆ. ಬಂಧನಕ್ಕೆ ಒಳಗಾದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಓದುತ್ತಿರುವ ಕಾಲೇಜಿನಲ್ಲಿಯೇ ಅಧ್ಯಯನ ಮಾಡುತ್ತಿದ್ದು, ಒಬ್ಬ ವಿದ್ಯಾರ್ಥಿನಿ ಇನ್ನೊಬ್ಬ ವಿದ್ಯಾರ್ಥಿಯ ಜೊತೆ ಸಲುಗೆಯಿಂದ ಇದ್ದಳು. ಅದನ್ನು ಸಹಿಸದ ಆರೋಪಿ ತಮ್ಮ ಊರಿನ ಮತ್ತೊಂದು ಕಾಲೇಜಿನಲ್ಲಿ ಓದುತ್ತಿದ್ದ ಸ್ನೇಹಿತನ ಸಹಾಯ ಪಡೆದು, ಆ ವಿದ್ಯಾರ್ಥಿನಿಯ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್ ಮಾಡಿಸಿದ್ದಾನೆ. ತನ್ನ ಹೆಸರು ಎಲ್ಲಿಯೂ ಬರಬಾರದು ಎಂದು ದಿಕ್ಕು ತಪ್ಪಿಸಲು ಪೊಲೀಸ್ ಬಗ್ಗೆ ಅವಹೇಳನ ಪದ ಬಳಸಿ ಪೋಸ್ಟ್ ಮಾಡಿದ್ದ. ಎಲ್ಲಾ ವಿಚಾರ ತಿಳಿದ ಬೆನ್ನಲ್ಲೇ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕೊಂಬಿನಿಂದ ತಿವಿದು ಬಾಲಕಿಯನ್ನು ಬಿಸಾಕಿದ ಹಸು- ತಮಿಳುನಾಡಿನ ದೃಶ್ಯ ಭಾರೀ ವೈರಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇನ್ಸ್ಟಾದಿಂದ ಅತಿ ಹೆಚ್ಚು ಹಣ – ಜಸ್ಟ್ 1 ಪೋಸ್ಟ್‌ಗೆ ಕೊಹ್ಲಿಗೆ ಸಿಗುತ್ತೆ ಕೋಟಿ ಕೋಟಿ

    ಇನ್ಸ್ಟಾದಿಂದ ಅತಿ ಹೆಚ್ಚು ಹಣ – ಜಸ್ಟ್ 1 ಪೋಸ್ಟ್‌ಗೆ ಕೊಹ್ಲಿಗೆ ಸಿಗುತ್ತೆ ಕೋಟಿ ಕೋಟಿ

    ನವದೆಹಲಿ: ಭಾರತದ ಖ್ಯಾತ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಕ್ರಿಕೆಟ್ ಹೊರತಾಗಿ ಇನ್ಸ್ಟಾಗ್ರಾಂನಲ್ಲಿ (Instagram) ಫೋಟೋ ಮತ್ತು ವಿಡಿಯೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಭಾರತದಲ್ಲೇ ಅತೀ ಹೆಚ್ಚು ಹಣ ಗಳಿಸುತ್ತಿರುವ ಭಾರತೀಯ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

    ವರದಿಯೊಂದರ ಪ್ರಕಾರ, 2023ರಲ್ಲಿ ಕೊಹ್ಲಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಪ್ರತಿಯೊಂದು ಪ್ರಾಯೋಜಿತ  ಪೋಸ್ಟ್‌ಗೆ (Sponsored Post) 11.45 ಕೋಟಿ ರೂ.ಗಳನ್ನು ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ (Cristiano Ronaldo) ಅಗ್ರಸ್ಥಾನವನ್ನು ಪಡೆದಿದ್ದು, ಮುಂದಿನ ಸ್ಥಾನವನ್ನು ಲಿಯೋನೆಲ್ ಮೆಸ್ಸಿ (Lionel Messi) ಅವರು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: Asia Cup 2023: ಟೀಂ ಇಂಡಿಯಾ ಜೆರ್ಸಿಯಲ್ಲಿ ಪಾಕ್ ಹೆಸರು – ಫೋಟೋ ವೈರಲ್

    ರೊನಾಲ್ಡೊ ಪೋಸ್ಟ್ ಮಾಡುವ ಪ್ರಾಯೋಜಿತ ಪೋಸ್ಟ್‌ಗೆ ಸುಮಾರು 3.23 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು ಪಡೆಯುತ್ತಾರೆ. ಅಂದರೆ ಪ್ರತಿ ಪೋಸ್ಟ್‌ಗೆ ಸುಮಾರು 26.75 ಕೋಟಿ ರೂಗಳನ್ನು ಪಡೆಯುತ್ತಾರೆ. ಅಂತೆಯೇ ಮೆಸ್ಸಿ ಪ್ರತಿ ಇನ್ಸ್ಟಾಗ್ರಾಂ ಪೋಸ್ಟ್‌ಗೆ ಸುಮಾರು 2.56 ಮಿಲಿಯನ್ (21.49 ಕೋಟಿ ರೂ.) ನಗದನ್ನು ಪಡೆಯುತ್ತಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಹೊಸ ಇನ್ನಿಂಗ್ಸ್ ಆರಂಭ – ಧಾರವಾಡದಲ್ಲಿ 900 ಕೋಟಿ ಹೂಡಿಕೆ

    ವಿರಾಟ್ ಕೊಹ್ಲಿ ಜಾಗತಿಕವಾಗಿ ಟಾಪ್ 20 ಪಟ್ಟಿಯಲ್ಲಿ ಸ್ಥಾನವನ್ನು ಪಡೆದ ಏಕೈಕ ಭಾರತೀಯನಾಗಿದ್ದು, ಇನ್ಸ್ಟಾಗ್ರಾಂ ಪ್ಲಾಟ್‌ಫಾರ್ಮ್‌ನಲ್ಲಿ 25.6 ಕೋಟಿ ಅನುಯಾಯಿಗಳನ್ನು ಹೊಂದಿದ್ದಾರೆ. ಇವರನ್ನು ಹೊರತುಪಡಿಸಿ ಬಾಲಿವುಡ್ ಮತ್ತು ಹಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ (Priyanka Chopra) ಈ ಪಟ್ಟಿಯಲ್ಲಿ 29ನೇ ಸ್ಥಾನವನ್ನು ಪಡೆದುಕೊಂಡಿದ್ದು, ಪ್ರತಿ ಪೋಸ್ಟ್‌ಗೆ 532,000 ಅಮೆರಿಕನ್ ಡಾಲರ್ (4.40 ಕೋಟಿ ರೂ.) ಹಣವನ್ನು ಪಡೆಯುತ್ತಾರೆ. ಇದನ್ನೂ ಓದಿ: ಒಂದು ವರ್ಷದಲ್ಲಿ BCCI ಪಾವತಿಸಿದ ಟ್ಯಾಕ್ಸ್ ಎಷ್ಟು ಗೊತ್ತೆ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇನ್‍ಸ್ಟಾದಲ್ಲಿ ವಿದ್ಯಾರ್ಥಿನಿಯರ ಅಶ್ಲೀಲ ಫೋಟೋ ಅಪ್ಲೋಡ್ ಪ್ರಕರಣ – ಆರೋಪಿ ಅರೆಸ್ಟ್

    ಇನ್‍ಸ್ಟಾದಲ್ಲಿ ವಿದ್ಯಾರ್ಥಿನಿಯರ ಅಶ್ಲೀಲ ಫೋಟೋ ಅಪ್ಲೋಡ್ ಪ್ರಕರಣ – ಆರೋಪಿ ಅರೆಸ್ಟ್

    – ಪ್ರಕರಣದ ರೂವಾರಿ ಅದೇ ಕಾಲೇಜಿನ ಹಳೇ ವಿದ್ಯಾರ್ಥಿ

    ಹುಬ್ಬಳ್ಳಿ: ಇನ್‍ಸ್ಟಾಗ್ರಾಮ್‍ನಲ್ಲಿ (Instagram) ವಿದ್ಯಾರ್ಥಿನಿಯರ ಅಶ್ಲೀಲ ಫೋಟೋ ಅಪ್ಲೋಡ್ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಹುಬ್ಬಳ್ಳಿ (Hubballi) ಧಾರವಾಡ ಪೊಲೀಸರು (Police) ಬಂಧಿಸಿದ್ದಾರೆ. ಪ್ರಕರಣದ ರೂವಾರಿ ಅದೇ ಕಾಲೇಜಿನ  (College) ಹಳೇ ವಿದ್ಯಾರ್ಥಿ ಎಂಬ ವಿಚಾರ ತಿಳಿದು ಬಂದಿದೆ.

    ಬಂಧಿತ ಆರೋಪಿಯನ್ನು ರಜನಿಕಾಂತ್ (21) ಎಂದು ಗುರುತಿಸಲಾಗಿದೆ. ಈತ ಕಳೆದ ಕೆಲವು ದಿನಗಳ ಹಿಂದೆ ಹುಬ್ಬಳ್ಳಿಯ ಕಾಲೇಜ್ ಒಂದರ ವಿದ್ಯಾರ್ಥಿನಿಯರ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ. ಇದೇ ವಿಚಾರವಾಗಿ ವಿದ್ಯಾರ್ಥಿನಿಯರು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನೂ ಓದಿ: ಕರ್ಣಾಟಕ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಪೊಳಲಿ ಜಯರಾಂ ಭಟ್‌ ಹೃದಯಾಘಾತದಿಂದ ನಿಧನ

    ಈತನೊಂದಿಗೆ ವಿದ್ಯಾರ್ಥಿನಿಯರು ಮಾತನಾಡುತ್ತಿರಲಿಲ್ಲ ಎಂಬ ಕಾರಣಕ್ಕೆ ಅವರನ್ನು ಟಾರ್ಗೆಟ್ ಮಾಡಿದ್ದ. ಯಾರಿಗೆಲ್ಲ ಬಾಯ್‍ಫ್ರೆಂಡ್ ಇದ್ದಾರೆ ಎಂದು ನೋಡಿಕೊಂಡು ಅಂಥವರನ್ನೇ ಗುರಿಯಾಗಿಸಿ ಆರೋಪಿ ಈ ಕೃತ್ಯ ಎಸಗಿದ್ದಾನೆ. ಆರೋಪಿಗೆ ಕಡಿಮೆ ಹಾಜರಾತಿ ಇದ್ದ ಕಾರಣ ಈ ಬಾರಿ ಆತನಿಗೆ ಅಡ್ಮಿಶನ್ ಕೊಟ್ಟಿರಲಿಲ್ಲ. ಈ ಎಲ್ಲಾ ಕಾರಣಗಳನ್ನು ಇಟ್ಟುಕೊಂಡು ಇಂತಹ ಕೃತ್ಯ ನಡೆಸಿದ್ದಾನೆ ಎನ್ನಲಾಗಿದೆ.

    ಆರೋಪಿ ಈ ಕೃತ್ಯ ಎಸಗಿರುವುದಕ್ಕೆ ಕೆಲವು ದಾಖಲೆಗಳು ಸಿಕ್ಕಿವೆ. ಬ್ರೇನ್ ಮ್ಯಾಪಿಂಗ್‍ಗಾಗಿ ಎಫ್‍ಎಸ್‍ಐಎಲ್‍ಗೆ‌ (FSIL) ಪತ್ರ ಬರೆಯಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯಬೇಕಿದೆ ಎಂದು ಪೊಲೀಸ್ ಕಮಿಷನರ್ ಸಂತೋಷ ಬಾಬು ತಿಳಿಸಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ಖುದ್ದಾಗಿ ತೆರಳಿ ಗೌರವ ಸಲ್ಲಿಸಿದ ರಾಜ್ಯಪಾಲರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೆಕ್ಸ್ ತಂಪಾಗಿದೆ – ಆಕ್ಷೇಪಾರ್ಹ ಬರಹ ಟ್ವೀಟ್ ಮಾಡಿದಕ್ಕೆ ಮಹಿಳೆಗೆ ಬಿತ್ತು ಭಾರೀ ದಂಡ

    ಸೆಕ್ಸ್ ತಂಪಾಗಿದೆ – ಆಕ್ಷೇಪಾರ್ಹ ಬರಹ ಟ್ವೀಟ್ ಮಾಡಿದಕ್ಕೆ ಮಹಿಳೆಗೆ ಬಿತ್ತು ಭಾರೀ ದಂಡ

    ಮಾಸ್ಕೋ: `ಸೆಕ್ಸ್ ತಂಪಾಗಿದೆ, ಆದ್ರೆ ಪುಟಿನ್ (Vladimir Putin) ಹತ್ಯೆ ಇನ್ನೂ ಉತ್ತಮವಾಗಿದೆ’ ಎನ್ನುವ ಬರಹ ಹೊಂದಿದ ಫೋಟೋ ಟ್ವೀಟ್ ಮಾಡಿದ್ದಕ್ಕೆ ಮಹಿಳೆಯೊಬ್ಬಳಿಗೆ ಭಾರೀ ದಂಡ ವಿಧಿಸಿರುವ ಘಟನೆ ರಷ್ಯಾದಲ್ಲಿ (Russia) ನಡೆದಿದೆ.

    `ಸೆಕ್ಸ್ ಇಸ್ ಕೂಲ್, ಬಟ್ ಪುಟಿನ್ಸ್ ಡೆತ್ ಇಸ್ ಬೆಟರ್’ ಆಕ್ಷೇಪಾರ್ಹ ಬರಹ ಹೊಂದಿದ್ದ ಕ್ಯಾರಿ ಬ್ಯಾಗ್ ಫೋಟೋವನ್ನ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಕ್ಕಾಗಿ ಅಲೆಕ್ಸಾಂಡ್ರಾ ಎಂಬ ರಷ್ಯಾದ ಮಹಿಳೆಗೆ 30 ಸಾವಿರ ರುಬೆಲ್ಸ್ (ಅಂದಾಜು 25 ಸಾವಿರ ರೂ.) ದಂಡ ವಿಧಿಸಲಾಗಿದೆ.

    ಆಕೆ ತನ್ನ ಇನ್‌ಸ್ಟಾಗ್ರಾಮ್ (Instagram) ಖಾತೆಯ ಬಹುತೇಕ ಪೋಸ್ಟ್ಗಳು ಸ್ಕ್ರೀನ್‌ಶಾಟ್ ಆಧರಿಸಿದ ಪೋಸ್ಟ್‌ಗಳಾಗಿವೆ ಎಂದು ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: Pakistan Train Accident: ಭೀಕರ ರೈಲು ದುರಂತ – 20 ಮಂದಿ ಸಾವು, 80 ಮಂದಿಗೆ ಗಾಯ

    ಕಳೆದ ಜೂನ್ 28ರಂದು ಅಲೆಕ್ಸಾಂಡ್ರಾಳನ್ನ ಆಂತರಿಕ ವ್ಯವಹಾರಗಳ ಸಚಿವಾಲಯದ ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಆಕೆಯ ಇನ್ಸ್ಟಾಗ್ರಾಮ್‌ ಖಾತೆಯನ್ನ ಪರಿಶೀಲಿಸಿದಾಗ ಪುಟಿನ್ ವಿರುದ್ಧ ಹಾಕಲಾದ ಈ ಪೋಸ್ಟ್ನೊಂದಿಗೆ `ಯುದ್ಧ ಬೇಡ’ ಎಂಬ ಸಂದೇಶ ಹೊಂದಿರುವ ಬರಹಗಳೂ ಇದ್ದವು. ಅಲ್ಲದೇ ನಿರಂತರವಾಗಿ ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಆಕ್ರಮಣವನ್ನು ನಿಲ್ಲಿಸುವಂತೆ ಬರಹಗಳನ್ನ ಹಂಚಿಕೊಂಡಿರುವುದು ಕಂಡುಬಂದಿತ್ತು. ಇದನ್ನೂ ಓದಿ: ಪಾಕಿಸ್ತಾನದ ಮಾಜಿ ಪ್ರಧಾನಿ ಅರೆಸ್ಟ್ – ಇಮ್ರಾನ್ ಖಾನ್‌ಗೆ 3 ವರ್ಷ ಜೈಲು, 5 ವರ್ಷ ರಾಜಕೀಯದಿಂದ ಬ್ಯಾನ್

    ವಿಚಾರಣೆ ಸಂದರ್ಭದಲ್ಲಿ ಆಕೆಯ ಕೈ ತೋಳುಗಳ ಮೇಲೆ ಹಾಕಿಸಿಕೊಂಡಿದ್ದ ಅಚ್ಚೆ ಗುರುತುಗಳನ್ನು ಪರಿಶೀಲಿಸುವ ಜೊತೆಗೆ ಅಧಿಕಾರಿಗಳು ಅದರ ಫೋಟೋಗಳನ್ನೂ ತೆಗೆದುಕೊಂಡಿದ್ದರು. ಆಕೆಯನ್ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಒಳಪಡಿಸಿದಾಗ ಲೈಂಗಿಕ ಸಂಬಂಧಗಳ ಪ್ರಚಾರ ಹಾಗೂ ಮಾನಹಾನಿ ಆರೋಪದ ಮೇಲೆ ಅಲ್ಲಿಯೂ ಆಕೆಗೆ 2 ಸಾವಿರ ಡಾಲರ್ (1.65 ಲಕ್ಷ ರೂ.) ದಂಡ ವಿಧಿಸಲಾಯಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇನ್‌ಸ್ಟಾ ಸ್ನೇಹಿತನ ಭೇಟಿಗಾಗಿ ಪಾಕಿಸ್ತಾನಕ್ಕೆ ಹೊರಟಿದ್ದ ಅಪ್ರಾಪ್ತೆ ಪೊಲೀಸರ ವಶಕ್ಕೆ

    ಇನ್‌ಸ್ಟಾ ಸ್ನೇಹಿತನ ಭೇಟಿಗಾಗಿ ಪಾಕಿಸ್ತಾನಕ್ಕೆ ಹೊರಟಿದ್ದ ಅಪ್ರಾಪ್ತೆ ಪೊಲೀಸರ ವಶಕ್ಕೆ

    – ಜೈಪುರ ವಿಮಾನ ನಿಲ್ದಾಣದಲ್ಲಿ ಹೈಡ್ರಾಮಾ

    ಜೈಪುರ: ಇನ್ಸ್ಟಾಗ್ರಾಂ (Instagram) ಸ್ನೇಹಿತನನ್ನು ಭೇಟಿ ಮಾಡುವ ಸಲುವಾಗಿ ಪಾಸ್‌ಪೋರ್ಟ್ (Passport) ಮತ್ತು ವೀಸಾ (Visa) ಇಲ್ಲದೆ ಪಾಕಿಸ್ತಾನಕ್ಕೆ (Pakistan) ತೆರಳಲು ಮುಂದಾಗಿದ್ದ 16 ವರ್ಷದ ಅಪ್ರಾಪ್ತ (Minor) ಬಾಲಕಿಯನ್ನು ಜೈಪುರ (Jaipur) ವಿಮಾನ ನಿಲ್ದಾಣದಲ್ಲಿ (Airport) ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ವಶಕ್ಕೆ ಪಡೆದ ಬಾಲಕಿಯನ್ನು ಗಜಲ್ ಪರ್ವಿನ್ ಎಂದು ಗುರುತಿಸಲಾಗಿದೆ. ಈಕೆ ರಾಜಸ್ಥಾನದ ಸಿಕಾರ್‌ನ ಶ್ರೀಮಧೋಪುರದ ನಿವಾಸಿಯಾಗಿದ್ದು, ಪಾಕಿಸ್ತಾನಕ್ಕೆ ತೆರಳಲು ಬೇಕಾದ ಅಗತ್ಯ ದಾಖಲೆಗಳನ್ನು ಆಕೆ ಹೊಂದಿರಲಿಲ್ಲ ಎಂದು ವಿಮಾನ ನಿಲ್ದಾಣದ ಠಾಣಾಧಿಕಾರಿ ದಿಗ್ಪಾಲ್ ಸಿಂಗ್ ಹೇಳಿದ್ದಾರೆ. ತನ್ನ ಇನ್ಸ್ಟಾಗ್ರಾಂ ಸ್ನೇಹಿತನನ್ನು ಭೇಟಿ ಮಾಡಲು ಪಾಕಿಸ್ತಾನದ ಲಾಹೋರ್‌ಗೆ ತೆರಳಲು ನಿರ್ಧರಿಸಿ ವಿಮಾನ ನಿಲ್ದಾಣಕ್ಕೆ ಬಂದಿರುವುದಾಗಿ ವಿಚಾರಣೆ ವೇಳೆ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಮಣಿಪುರ ಹಿಂಸಾಚಾರದಲ್ಲಿ ವಿದೇಶಿ ಏಜೆನ್ಸಿಗಳ ಹಸ್ತಕ್ಷೇಪ: ಮಾಜಿ ಸೇನಾ ಮುಖ್ಯಸ್ಥ

    ಈ ಕುರಿತು ಆಕೆಯ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಆಕೆಯನ್ನು ಅವರಿಗೆ ಒಪ್ಪಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನಕ್ಕೆ ಟಿಕೆಟ್ ಪಡೆಯುವ ಸಲುವಾಗಿ ಈಕೆ ಸುಳ್ಳು ಕಥೆಯೊಂದನ್ನು ಹೆಣೆದಿದ್ದು, ವಿಚಾರಣೆ ವೇಳೆ ನಿಜಾಂಶ ಹೊರಬಿದ್ದಿದೆ. ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ಸಿಲುಕಿದ್ದ 36 ಭಾರತೀಯ ಮೀನುಗಾರರ ರಕ್ಷಣೆ

    ವಿಮಾನ ನಿಲ್ದಾಣಕ್ಕೆ ಇಬ್ಬರು ಹುಡುಗರೊಂದಿಗೆ ಬಂದ ಬಾಲಕಿ ತಾನು ಪಾಕಿಸ್ತಾನದ ನಿವಾಸಿಯಾಗಿದ್ದು, ಮೂರು ವರ್ಷಗಳ ಹಿಂದೆ ಚಿಕ್ಕಮ್ಮನೊಂದಿಗೆ ಭಾರತಕ್ಕೆ ಬಂದು ಸಿಕಾರ್‌ನ ಶ್ರೀಮಧೋಪುರದಲ್ಲಿ ನೆಲೆಸಿದ್ದೆ. ಇದೀಗ ಆಕೆಯ ಜೊತೆ ಹೊಂದಾಣಿಕೆಯಾಗದೆ ವಾಪಸ್ ಪಾಕಿಸ್ತಾನಕ್ಕೆ ತೆರಳುವ ಸಲುವಾಗಿ ಇಲ್ಲಿಗೆ ಬಂದಿದ್ದೇನೆ ಎಂದು ವಿಮಾನ ನಿಲ್ದಾಣದಲ್ಲಿ ಬಾಲಕಿ ಹೈಡ್ರಾಮ ಮಾಡಿದ್ದಳು. ಆದರೆ ಆಕೆಯ ಬಳಿ ಯಾವುದೇ ವೀಸಾ ಮತ್ತು ಪಾಸ್‌ಪೋರ್ಟ್ ಇಲ್ಲದ ಹಿನ್ನೆಲೆ ಆಕೆಯನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು. ಇದನ್ನೂ ಓದಿ: ಪಟಾಕಿ ಗೋದಾಮಿನಲ್ಲಿ ಸ್ಫೋಟ – ಒಂದೇ ಕುಟುಂಬದ ನಾಲ್ವರು ಸೇರಿ 9 ಮಂದಿ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೈತ್ಯ ಟ್ವಿಟ್ಟರ್‌, ಇನ್ಸ್ಟಾಗ್ರಾಮ್‌ಗೆ ಸೆಡ್ಡು ಹೊಡೆಯಲು TikTok ಮಾಸ್ಟರ್‌ ಪ್ಲ್ಯಾನ್‌!

    ದೈತ್ಯ ಟ್ವಿಟ್ಟರ್‌, ಇನ್ಸ್ಟಾಗ್ರಾಮ್‌ಗೆ ಸೆಡ್ಡು ಹೊಡೆಯಲು TikTok ಮಾಸ್ಟರ್‌ ಪ್ಲ್ಯಾನ್‌!

    ಬೀಜಿಂಗ್‌: ಯುವಜನರ ನೆಚ್ಚಿನ ತಾಣವಾಗಿ ಗುರುತಿಸಿಕೊಂಡಿರುವ ಟಿಕ್‌ಟಾಕ್‌ (TikTok) ಇದೀಗ ಎಲೋನ್‌ ಮಸ್ಕ್‌ ನೇತೃತ್ವದ ಟ್ವಿಟ್ಟರ್‌ (Twitter) ಹಾಗೂ ಇನ್ಸ್ಟಾಗ್ರಾಮ್‌ (Instagram) ಅಪ್ಲಿಕೇಷನ್‌ಗಳಿಗೆ ಸೆಡ್ಡು ಹೊಡೆಯಲು ಮಾಸ್ಟರ್‌ ಪ್ಲ್ಯಾನ್‌ ಮಾಡಿದೆ. ಅದಕ್ಕಾಗಿಯೇ ಇನ್ಮುಂದೆ ಟಿಕ್‌ಟಾಕ್‌ನಲ್ಲಿ ವೀಡಿಯೋ ರೀಲ್ಸ್‌ ಮಾತ್ರವಲ್ಲದೇ ಪಠ್ಯ ಸಂದೇಶಗಳನ್ನೂ ಪೋಸ್ಟ್‌ ಮಾಡುವ ಅವಕಾಶವನ್ನ ಬಳಕೆದಾರರಿಗೆ ನೀಡುವುದಾಗಿ ಘೋಷಿಸಿದೆ.

    ಇನ್ಸ್ಟಾಗ್ರಾಮ್‌ (Instagram) ಖಾತೆಗೆ ಲಿಂಕ್‌ ಹೊಂದಿರುವ ಥ್ರೆಡ್ಸ್‌ ಈ ತಿಂಗಳ ಆರಂಭದಲ್ಲಿ ಚಾಲ್ತಿಗೆ ಬಂದಿತು. ಟ್ವಿಟ್ಟರ್‌ ಆಯ್ಕೆಗಳನ್ನ ಒಳಗೊಂಡ ಹಾಗೂ ಇನ್ಸ್ಟಾಗ್ರಾಮ್‌ ರೀತಿಯನ್ನೇ ಹೋಲುವ ಥ್ರೆಡ್ಸ್‌ ಅನ್ನು ಟಿಟ್ಟರ್‌ಗೆ ಪರ್ಯಾಯವಾಗಿ ಬಳಸಲು ಜಾರಿಗೆ ತರಲಾಯಿತು. ಇನ್ನೂ ಈ ಹಿಂದೆ ಟ್ವಿಟ್ಟರ್‌ ಲೋಗೋವನ್ನ ನಾಯಿ ಮರಿಯಾಗಿ ಬದಲಾಯಿಸಿದ್ದ ಮಸ್ಕ್‌ ಇದೀಗ ನೀಲಿ ಹಕ್ಕಿಗೆ ಗುಡ್‌ಬೈ ಹೇಳಿ ʻX’ ಎಂದು ಮರುನಾಮಕರಣ ಮಾಡಿದ್ದಾರೆ.

    ಈ ನಡುವೆ ಮೆಟಾ ಮಾಲೀಕತ್ವದ ಥ್ರೆಡ್ಸ್‌ ಹಾಗೂ ಟ್ವಿಟ್ಟರ್‌ ನಂತೆಯೇ 1.4 ಶತಕೋಟಿ ಬಳಕೆದಾರರನ್ನ ಒಳಗೊಂಡಿರುವ ಟಿಕ್‌ ಟಾಕ್‌ ಪಠ್ಯಸಂದೇಶ ಪೋಸ್ಟ್‌ ಹಂಚಿಕೊಳ್ಳುವ ಆಯ್ಕೆ ಕಲ್ಪಿಸಲು ಮುಂದಾಗಿದೆ. ಆದ್ರೆ ಥ್ರೆಡ್ಸ್‌ನಂತೆ ಇದಕ್ಕಾಗಿ ಪ್ರತ್ಯೇಕ ಆ್ಯಪ್ ಸಿದ್ಧ ಮಾಡುವ ಬದಲಿಗೆ ಅದೇ ಆ್ಯಪ್ನಲ್ಲಿ ಪಠ್ಯ ವೈಶಿಷ್ಟ್ಯವನ್ನು ಒಳಗೊಳ್ಳುವ ಆಯ್ಕೆ ಸಂಯೋಜಿಸಲಿದೆ. ಇದು ಟ್ವಿಟ್ಟರ್‌ ಮತ್ತು ಥ್ರೆಡ್ಸ್‌ ಗಿಂತಲೂ ಭಿನ್ನವಾಗಿ ಕಾಣುತ್ತದೆ. ಜೊತೆಗೆ ಬಳಕೆದಾರರು ಬರಹದ ಹಿನ್ನೆಲೆಗೆ ಕಲರ್‌ ಮತ್ತು ಮ್ಯೂಸಿಕ್‌ ಅನ್ನು ಸೇರಿಸಿ ಸಂದೇಶವನ್ನ ಹಂಚಿಕೊಳ್ಳಬಹುದು ಎಂದು ಚೀನಾ-ಮಾಲೀಕತ್ವದ ಕಂಪನಿ ಹೇಳಿದೆ.

    ಸದ್ಯ ಚೀನಾ ಮಾಲೀಕತ್ವದ ಟಿಕ್‌ಟಾಕ್‌ ಆ್ಯಪ್ ಅನ್ನು ಭಾರತದಲ್ಲಿ ಬ್ಯಾನ್‌ ಮಾಡಲಾಗಿದೆ. ಜನಪ್ರಿಯ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನ ಲೋಗೋ ಇದೀಗ ಅಧಿಕೃತವಾಗಿ ಬದಲಾವಣೆಯಾಗಿದೆ. ವರ್ಷಗಳ ಐಕಾನಿಕ್ ನೀಲಿ ಬಣ್ಣದ ಹಕ್ಕಿ ಮಾಯವಾಗಿದ್ದು, ಎಕ್ಸ್ ಲೋಗೋ ಇದೀಗ ಕಾಣಿಸಿಕೊಳ್ಳುತ್ತಿದೆ. ಈ ನಡುವೆ ವೆರಿಫೈಡ್‌ ಟ್ವಿಟ್ಟರ್‌ ಖಾತೆಗಳನ್ನು ಹೊಂದಿರುವ ಕಂಟೆಂಟ್‌ ಕ್ರಿಯೇಟರ್ಸ್‌ಗಳಿಗೆ ಜಾಹೀರಾತು ಆದಾಯದಲ್ಲಿ ಹಣ ನೀಡುವುದಾಗಿ ಟ್ವಿಟ್ಟರ್‌ ಸಂಸ್ಥೆ ಘೋಷಣೆ ಮಾಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಿಯಕರನಿಗಾಗಿ 6 ವರ್ಷದ ಮಗಳೊಂದಿಗೆ ಭಾರತಕ್ಕೆ ಹಾರಿಬಂದ 49ರ ಪೋಲೆಂಡ್‌ ಮಹಿಳೆ

    ಪ್ರಿಯಕರನಿಗಾಗಿ 6 ವರ್ಷದ ಮಗಳೊಂದಿಗೆ ಭಾರತಕ್ಕೆ ಹಾರಿಬಂದ 49ರ ಪೋಲೆಂಡ್‌ ಮಹಿಳೆ

    ರಾಂಚಿ: ಪ್ರೀತಿಗೆ ವಯಸ್ಸು, ಗಡಿ ಅನ್ನೋದೇ ಇಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಇದೆ. ಇತ್ತೀಚೆಗೆ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್‌ ಪಬ್‌ಜೀ ಪ್ರೇಮಿಗಾಗಿ (PUBG Lover) ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವುದು ಇದಕ್ಕೆ ತಾಜಾ ಉದಾಹರಣೆಯಾಗಿದೆ. ಈ ಬೆನ್ನಲ್ಲೇ ಬಾಂಗ್ಲಾದೇಶದ ಯುವತಿಯು ಭಾರತದ ಪ್ರೇಮಿಗಾಗಿ ಭಾರತಕ್ಕೆ ಬಂದಿದ್ದಳು. ಇದೀಗ ಪೋಲೆಂಡಿನ ಮಹಿಳೆ (Polish Woman) ಸುದ್ದಿಯಲ್ಲಿದ್ದಾಳೆ.

    ಇನ್ಸ್ಟಾಗ್ರಾಮ್‌ನಲ್ಲಿ (Instagram) ಪರಿಚಯವಾದ ಬಾಯ್‌ಫ್ರೆಂಡ್‌ಗಾಗಿ 49 ವರ್ಷದ ಮಹಿಳೆಯೊಬ್ಬಳು ಭಾರತಕ್ಕೆ ಬಂದಿದ್ದಾಳೆ. ತನ್ನ ಪ್ರೇಮಿಯನ್ನು ಮದುವೆಯಾಗಿ ಭಾರತದಲ್ಲೇ ಹೊಸ ಜೀವನ ಶುರು ಮಾಡಲು ಜಾರ್ಖಂಡ್‌ನ (Jharkhand) ಹಜಾರಿಬಾಗ್‌ಗೆ ಹಾರಿ ಬಂದಿದ್ದಾಳೆ. ಇದನ್ನೂ ಓದಿ: ಮತ್ತೊಂದು ಕೇಸ್‌ – ಪಬ್ಜಿ ಪ್ರೇಮಿಗಾಗಿ ಭಾರತಕ್ಕೆ ಹಾರಿ ಬಂದ ಬಾಂಗ್ಲಾದೇಶದ ಯುವತಿ!

    ಇನ್ಸ್ಟಾಗ್ರಾಮ್‌ ಪ್ರೀತಿ ಶುರುವಾದ ರೀತಿ: ಪೋಲೆಂಡಿನ ಮಹಿಳೆ ಬಾರ್ಬಾರಾ ಪೊಲಾಕ್ ಹಾಗೂ ಜಾರ್ಖಂಡ್‌ನ ಹಜಾರಿಬಾಗ್‌ನ ಶಾದಾಬ್ ಮಲಿಕ್ 2021 ರಲ್ಲಿ ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿ‌ ಸ್ನೇಹಿತರಾಗಿದ್ದಾರೆ. ಕೆಲವು ದಿನಗಳಲ್ಲೇ ಸ್ನೇಹ ಪ್ರೀತಿಗೆ ತಿರುಗಿದೆ. ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾಗದಷ್ಟೂ ಪ್ರೀತಿಸಲು ಶುರು ಮಾಡಿದ್ದಾರೆ. ಬಳಿಕ ಪೊಲಾಕ್‌ ತನ್ನ 6 ವರ್ಷದ ಮಗಳು ಅನನ್ಯಾಳೊಂದಿಗೆ ಭಾರತಕ್ಕೆ ಹಾರಿಬಂದಿದ್ದು, ಹಜಾರಿಬಾಗ್‌ನಲ್ಲಿ ಪ್ರಿಯಕರ ಶಾದಾಬ್ ಜೊತೆ ನೆಲೆಸಿದ್ದಾಳೆ. ಪೊಲಾಕ್‌ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದು, ಅದು 2027ರ ವರೆಗೆ ಮಾನ್ಯವಾಗಿರುತ್ತದೆ.

    ಮದುವೆಗೆ ತಯಾರಿ: ಪೊಲಾಕ್‌ ಮತ್ತು ಮಲಿಕ್‌ ಇಬ್ಬರು ಮದುವೆಯಾಗಲು ತಯಾರಿ ಶುರು ಮಾಡಿದ್ದಾರೆ. ಹಜಾರಿಬಾಗ್ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ನ್ಯಾಯಾಲಯದಲ್ಲಿ ಮದುವೆಗೆ ಅರ್ಜಿ ಸಲ್ಲಿಸಿದ್ದಾರೆ. ಆಕೆ ಪತಿಯಿಂದ ವಿಚ್ಛೇದನ ಪಡೆದಿದ್ದಾಳೆ. ಬಾರ್ಬಾರಾ ಅವರ ಮಗಳು ಈಗಾಗಲೇ ಶಾದಾಬ್ ಅನ್ನು ʻಅಪ್ಪʼ ಎಂದು ಕರೆಯಲು ಶುರು ಮಾಡಿದ್ದಾಳೆ ಎನ್ನಲಾಗಿದೆ. ಇದನ್ನೂ ಓದಿ: ಬೇಗ ಬಂದುಬಿಡು ಸೀಮಾ, ಹೊಸ ಜೀವನ ಶುರು ಮಾಡೋಣ – ಸೌದಿಯಲ್ಲಿ ಮೊದಲ ಪತಿಯ ಗೋಳಾಟ

    ಈ ಸಂತಸವನ್ನು ಹಂಚಿಕೊಂಡಿರುವ ಪೊಲಾಕ್‌, ಶಾದಾಬ್ ತುಂಬಾ ಒಳ್ಳೆಯ ವ್ಯಕ್ತಿ ಎಂದಿದ್ದಲ್ಲದೇ, ಭಾರತವನ್ನು ಸುಂದರ ದೇಶ ಎಂದು ಹೊಗಳಿದ್ದಾಳೆ. ‘ನಾನು ಹಜಾರಿಬಾಗ್‌ಗೆ ಬಂದಾಗ, ಅನೇಕ ಜನರು ನನ್ನನ್ನು ನೋಡಲು ಬಂದರು. ನಾನು ಸೆಲೆಬ್ರಿಟಿ ಎಂದು ಭಾವಿಸಿದೆ. ನನಗೆ ಸ್ವಂತ ಮನೆ, ಕಾರು ಮತ್ತು ಒಳ್ಳೆಯ ಕೆಲಸವಿದೆ. ಆದ್ರೆ ನಾನು ಶಾದಾಬ್‌ಗಾಗಿ ಭಾರತಕ್ಕೆ ಬಂದಿದ್ದೇನೆ. ನಾನು ಅವನೊಂದಿಗೆ ತುಂಬಾ ಸಂತೋಷವಾಗಿದ್ದೇನೆ. ನಾವು ಶೀಘ್ರದಲ್ಲೇ ಮದುವೆಯಾಗಲಿದ್ದೇವೆ ಎಂದು ಬಾರ್ಬಾರಾ ಹೇಳಿಕೊಂಡಿದ್ದಾಳೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದ್ವೆಯಾಗೋಕೆ ಹುಡ್ಗನ್ನ ಹುಡುಕಿಕೊಡಿ, 4 ಲಕ್ಷ ಬಹುಮಾನ ಗೆಲ್ಲಿ – ಆಫರ್‌ ಕೊಟ್ಟ US ಮಹಿಳೆ

    ಮದ್ವೆಯಾಗೋಕೆ ಹುಡ್ಗನ್ನ ಹುಡುಕಿಕೊಡಿ, 4 ಲಕ್ಷ ಬಹುಮಾನ ಗೆಲ್ಲಿ – ಆಫರ್‌ ಕೊಟ್ಟ US ಮಹಿಳೆ

    ವಾಷಿಂಗ್ಟನ್‌: ಒಂಟಿ ಜೀವನ ಬೇಸರವಾಗಿದೆ, ನನಗೂ ಮದುವೆಯಾಗ್ಬೇಕು ಅಂತಾ ಅನ್ನಿಸಿದೆ, ಹುಡುಗನನ್ನ ಹುಡುಕಿ ಕೊಡಿ ಪ್ಲೀಸ್‌, ನನಗೆ ಹುಡುಗನನ್ನ ಹುಡುಕಿ ಕೊಟ್ರೆ 5 ಸಾವಿರ ಡಾಲರ್‌ (4.10 ಲಕ್ಷ ರೂ.) ಬಹುಮಾನ ಕೊಡ್ತೀನಿ… ಇದು ಅಮೆರಿಕದ ಮಹಿಳೆಯೊಬ್ಬರ (US Woman) ಮಾತು.

     

    View this post on Instagram

     

    A post shared by Eve Tilley-Coulson (@ebtilley)

    ಒಂಟಿ ಜೀವನದಿಂದ ಬೇಸರಗೊಂಡ ಲಾಸ್ ಏಂಜಲೀಸ್‌ನ ಈವ್ ಟಿಲ್ಲಿ-ಕೊಲ್ಸನ್ (35) ಮಹಿಳೆ ದಾಂಪತ್ಯ ಜೀವನಕ್ಕೆ ಕಾಲಿಡಲು ಕಾತುರರಾಗಿದ್ದಾರೆ. ತನಗೆ ಹುಡುಗನನ್ನ ಹುಡುಕಿಕೊಡುವಂತೆ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ವೊಂದನ್ನ ಹಂಚಿಕೊಂಡಿದ್ದಾರೆ. 10 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿರುವ ಕೋಲ್ಸನ್‌ ವೀಡಿಯೋ ಮೂಲಕವೂ ಹುಡುಗನನ್ನ ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ದಾನ ಮಾಡಿದ್ರೆ ನನ್ನ ನಗ್ನ ಚಿತ್ರ ಬಹುಮಾನ ಕೊಡ್ತೀನಿ – ಫ್ಯಾನ್ಸ್‌ಗೆ ಬಂಪರ್ ಆಫರ್ ಕೊಟ್ಟ ನೀಲಿ ತಾರೆ

    ಈ ಹಿಂದೆ ಅವರು ತಮ್ಮ ಸ್ನೇಹಿತರಲ್ಲೇ ಒಬ್ಬರನ್ನ ಅಥವಾ ತಾನು ಕೆಲಸ ಮಾಡುವ ಕಂಪನಿಯ ಬಾಸ್‌ ಅವರನ್ನೇ ಮದುವೆಯಾಗುವುದಾಗಿ ಒಪ್ಪಂದ ಮಾಡಿಕೊಂಡಿದ್ದರು. ಇದೀಗ ಸಾರ್ವಜನಿಕ ಜೀವನಕ್ಕೆ ತೆರೆದುಕೊಂಡಿದ್ದಾರೆ.

    ನನಗೆ ನನ್ನ ಗಂಡನಾಗುವನನ್ನ ಪರಿಚಯಿಸಿದ್ರೆ, ನಾನು ಅವನನ್ನ ಮದುವೆಯಾದ್ರೆ ಹುಡುಕಿ ಕೊಟ್ಟವರಿಗೆ 5 ಸಾವಿರ ಡಾಲರ್‌ ಕೊಡುತ್ತೇನೆ. ಆದ್ರೆ ನಾನು ಅವನೊಂದಿಗೆ ಹೆಚ್ಚುಕಾಲ ಇರುವುದು ಅನುಮಾನ. 20 ವರ್ಷಗಳಲ್ಲಿ ವಿಚ್ಛೇದನ ನೀಡಬಹುದು. ಸದ್ಯಕ್ಕೆ ಒಬ್ಬ ಹುಡ್ಗನನ್ನ ಹುಡುಕಿಕೊಟ್ಟರೆ ಮದುವೆಯಾಗುತ್ತೇನೆ ಎಂದು ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: ನಿಧನಕ್ಕೂ ಮುನ್ನ 33 ವರ್ಷದ ಗೆಳತಿಯ ಹೆಸರಲ್ಲಿ 900 ಕೋಟಿ ಆಸ್ತಿ ಬರೆದಿಟ್ಟ ಇಟಲಿ ಮಾಜಿ ಪ್ರಧಾನಿ

    ಒಂಟಿ ಜೀವನದಿಂದ ಬೇಸತ್ತಿದ್ದ ಕೋಲ್ಸನ್‌ ಡೇಟಿಂಗ್‌‌ನಿಂದ ಬೇಸರಗೊಂಡಿದ್ದರು. ಡೇಟಿಂಗ್‌ ಆ್ಯಪ್‌ ನಲ್ಲಿ ಹುಡುಕಾಡಿದ್ರೂ ಒಬ್ಬ ಹುಡುಗನೂ ಸಿಕ್ಕಿರಲಿಲ್ಲ. ಹಾಗಾಗಿ ಡೇಟಿಂಗ್‌ ಸಂಸ್ಕೃತಿಗೆ ಗುಡ್‌ಬೈ ಹೇಳಿ, ತನ್ನ ಅಗತ್ಯತೆಗಳನ್ನು ಪೂರೈಸಲು ಸಿದ್ಧವಿರುವ ವ್ಯಕ್ತಿಯನ್ನ ಗಂಡನಾಗಿ ಹುಡುಕಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟ್ವಿಟ್ಟರ್‌ಗಿಂತ ಥ್ರೆಡ್ಸ್‌ ಭಿನ್ನ ಹೇಗೆ? ವಿಶೇಷತೆ ಏನು?

    ಟ್ವಿಟ್ಟರ್‌ಗಿಂತ ಥ್ರೆಡ್ಸ್‌ ಭಿನ್ನ ಹೇಗೆ? ವಿಶೇಷತೆ ಏನು?

    ಫೇಸ್‌ಬುಕ್‌ (Facebook) ಮಾತೃಸಂಸ್ಥೆ ಮೆಟಾ (Meta) ಈಗ ಟ್ವಿಟ್ಟರ್‌ಗೆ (Twitter) ಪರ್ಯಾಯವಾಗಿ ಥ್ರೆಡ್ಸ್‌ ಬಿಡುಗಡೆ ಮಾಡಿದೆ. ಇಂದು ಬಿಡುಗಡೆಯಾದ ಮೊದಲ 7 ಗಂಟೆಯಲ್ಲಿ  1 ಕೋಟಿ ಮಂದಿ ಥ್ರೆಡ್ಸ್‌ (Threads) ಜಾಯಿನ್ ಆಗಿದ್ದಾರೆ ಎಂದು ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ತಿಳಿಸಿದ್ದಾರೆ.

    ಟ್ವಿಟ್ಟರ್‌ಗಿಂತ ಥ್ರೆಡ್ಸ್‌ ಭಿನ್ನ ಹೇಗೆ?
    ಥ್ರೆಡ್ಸ್‌ ಖಾತೆ ತೆರೆಯಬೇಕಾದರೆ ಇನ್‌ಸ್ಟಾಗ್ರಾಮ್‌ (Instagram) ಖಾತೆ ಬೇಕಾಗುತ್ತದೆ. ಥ್ರೆಡ್ಸ್‌ ಆಪ್‌ ಡೌನ್‌ಲೋಡ್‌ ಮಾಡಿದ ಕೂಡಲೇ ಇನ್‌ಸ್ಟಾದಿಂದ ಬಯೋ ಸೇರಿದಂತೆ ಫಾಲೋವರ್ಸ್‌ಗಳನ್ನು Import ಮಾಡಬೇಕಾ ಅಂತ ಕೇಳುತ್ತದೆ. ಬಳಕೆದಾರರು ಅನುಮತಿ ನೀಡಿದರೆ ಇನ್‌ಸ್ಟಾ ಬಯೋ ನಿಮ್ಮ ಪ್ರೊಫೈಲಿನಲ್ಲಿ ಬಂದಿರುತ್ತದೆ. ಇನ್‌ಸ್ಟಾ ಸ್ನೇಹಿತರ ಪೈಕಿ ಯಾರು ಥ್ರೆಡ್ಸ್‌ಗೆ ಜಾಯಿನ್‌ ಆಗಿದ್ದಾರೋ ಅವರನ್ನು ಇಲ್ಲಿ ಫಾಲೋ ಮಾಡಬಹುದು.

    ಥ್ರೆಡ್ಸ್‌ನಲ್ಲಿ ಎಲ್ಲಾ ಬಳಕೆದಾರರು 5 ನಿಮಿಷ ಉದ್ಧದ ವೀಡಿಯೋಗಳನ್ನು ಪೋಸ್ಟ್‌ ಮಾಡಬಹುದು. ನೀಲಿ ಬ್ಯಾಡ್ಜ್‌ ಇಲ್ಲದ ಟ್ವಿಟ್ಟರ್‌ ಬಳಕೆದಾರರು ಗರಿಷ್ಠ 2 ನಿಮಿಷ 20 ಸೆಕೆಂಡ್‌ ಉದ್ದದ ವೀಡಿಯೋ ಪೋಸ್ಟ್‌ ಮಾಡಲು ಅನುಮತಿ ನೀಡುತ್ತದೆ.

     

    ಥ್ರೆಡ್ಸ್‌ನಲ್ಲಿ ಗರಿಷ್ಠ  500 ಪದಗಳನ್ನು ಬಳಸಿ ಪೋಸ್ಟ್‌ ಮಾಡಬಹುದು. ಟ್ವಿಟ್ಟರ್‌ನಲ್ಲಿ 280 ಪದಗಳಿಗೆ ಮಿತಿಯನ್ನು ನಿಗದಿ ಮಾಡಲಾಗಿದೆ.

    ಇನ್‌ಸ್ಟಾದಲ್ಲಿರುವ ಅಧಿಕೃತ ಖಾತೆಗಳಿಗೆ ನೀಲಿ ಬ್ಯಾಡ್ಜ್‌ ಇರುವಂತೆ ಇಲ್ಲೂ ಅದೇ ಖಾತೆಗಳಿಗೆ ನೀಲಿ ಬ್ಯಾಡ್ಜ್‌ ಅಟೋಮ್ಯಾಟಿಕ್‌ ಆಗಿ ಬಂದಿರುತ್ತದೆ. ಟ್ವಿಟ್ಟರ್‌ನಲ್ಲಿ ನೀಲಿ ಟಿಕ್‌ ಮಾರ್ಕ್‌ ಬೇಕಾದರೆ ದುಡ್ಡು ಪಾವತಿಸಬೇಕಾಗುತ್ತದೆ.

    ಸದ್ಯಕ್ಕೆ ಥ್ರೆಡ್ಸ್‌ನಲ್ಲಿ ಯಾವುದೇ ಜಾಹೀರಾತು ಪ್ರಕಟವಾಗುವುದಿಲ್ಲ. ಇನ್‌ಸ್ಟಾದಲ್ಲಿ ಯಾವೆಲ್ಲ ವಿಷಯಗಳಿಗೆ ಸೆನ್ಸರ್‌ ಮಾಡಲಾಗುತ್ತದೋ ಆ ಎಲ್ಲಾ ವಿಷಯಗಳನ್ನು ಇಲ್ಲೂ ಸೆನ್ಸರ್‌ ಮಾಡಲಾಗುತ್ತದೆ.  ಇದನ್ನೂ ಓದಿ: ಲೇಸರ್ ಇಂಟರ್ನೆಟ್ ತಂತ್ರಜ್ಞಾನ – ಭಾರತದಲ್ಲಿ ಇದರ ಬಳಕೆ ಹೇಗೆ?

    ಥ್ರೆಡ್ಸ್‌ಗೆ ಒಮ್ಮೆ ಸೇರ್ಪಡೆಯಾದರೆ ಆ ಖಾತೆಯನ್ನು ಡಿಲೀಟ್‌ ಮಾಡಲು ಸಾಧ್ಯವಿಲ್ಲ. ಥ್ರೆಡ್ಸ್‌ ಖಾತೆ ಡಿಲೀಟ್‌ ಮಾಡಬೇಕಾದರೆ ಇನ್‌ಸ್ಟಾ ಖಾತೆಯನ್ನೇ ಡಿಲೀಟ್‌ ಮಾಡಬೇಕಾಗುತ್ತದೆ. ಬಳಕೆದಾರರು ಯಾವಾಗ ಬೇಕಾದರೂ ಥ್ರೆಡ್ಸ್‌ ಖಾತೆಯನ್ನು ನಿಷ್ಕ್ರಿಯ ಮಾಡಬಹುದು. ಆದರೆ ಇನ್‌ಸ್ಟಾದ ಖಾತೆ ಡಿಲೀಟ್‌ ಮಾಡಿದರೆ ಮಾತ್ರ ಥ್ರೆಡ್ಸ್‌ ಖಾತೆಯನ್ನು ಶಾಶ್ವತವಾಗಿ ಡಿಲೀಟ್‌ ಮಾಡಲು ಸಾಧ್ಯ ಎಂದು ಪ್ರೈವೆಸಿ ಪಾಲಿಸಿಯಲ್ಲಿ ತಿಳಿಸಲಾಗಿದೆ.

     

    ಟ್ವಿಟ್ಟರ್‌ನಲ್ಲಿ ಬಳಕೆದಾರರು ಬೇರೆ ಟ್ವೀಟ್‌ ಲೈಕ್‌ ಮಾಡಿದರೆ ಅದು ಪ್ರತ್ಯೇಕ ಟ್ಯಾಬ್‌ನಲ್ಲಿ ಕಾಣುತ್ತದೆ. ಆದರೆ ಥ್ರೆಡ್ಸ್‌ನಲ್ಲಿ ಲೈಕ್‌ ಮಾಡಿದ್ದನ್ನು ನೋಡಲು ಸಾಧ್ಯವಿಲ್ಲ.

    ಥ್ರೆಡ್ಸ್‌ ಪ್ರೊಫೈಲ್‌ ಫೋಟೋದ ಮೇಲ್ಭಾಗದಲ್ಲಿ ಇನ್‌ಸ್ಟಾಖಾತೆ ಕಾಣುತ್ತದೆ. ಇನ್‌ಸ್ಟಾ ಪ್ರೊಫೈಲ್‌ ಫೋಟೋದ ಕೆಳಭಾಗದಲ್ಲಿ ಥ್ರೆಡ್ಸ್‌  ಲಿಂಕ್‌ ಕಾಣುತ್ತದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಾನ್ ಸೀನಾ ಸೈಲ್‌ನಲ್ಲಿ ಮೋದಿ – ಫೋಟೋ ಹಂಚಿಕೊಂಡ WWE ಸೂಪರ್ ಸ್ಟಾರ್

    ಜಾನ್ ಸೀನಾ ಸೈಲ್‌ನಲ್ಲಿ ಮೋದಿ – ಫೋಟೋ ಹಂಚಿಕೊಂಡ WWE ಸೂಪರ್ ಸ್ಟಾರ್

    – ಮೋದಿ ರಿಯಲ್ ಚಾಂಪಿಯನ್ ಅಂದ್ರು ಫ್ಯಾನ್ಸ್

    ವಾಷಿಂಗ್ಟನ್: 16 ಬಾರಿ WWE ವಿಶ್ವ ಚಾಂಪಿಯನ್ ಆಗಿ ವಿಶ್ವದೆಲ್ಲೆಡೆ ಜನಪ್ರಿಯತೆ ಗಳಿಸಿರುವ ಜಾನ್ ಸೀನಾ (John Cena) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಫೋಟೋವನ್ನ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by John Cena (@johncena)

    ಅಧ್ಯಕ್ಷ ಜೋ ಬೈಡನ್ (Joe Biden) ಅವರ ಆಹ್ವಾನದ ಮೇರೆಗೆ ಅಮೆರಿಕ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ, ಜೋ ಬೈಡನ್ ಹಾಗೂ ಜಿಲ್ ಬೈಡನ್ ಅವರೊಂದಿಗೆ ಮಾತನಾಡುತ್ತಿದ್ದ ವೇಳೆ ಜಾನ್ ಸೀನಾ ಸ್ಟೈಲ್‌ನಲ್ಲಿ ಆಕ್ಷನ್ ಮಾಡಿರುವುದು ಕಂಡುಬಂದಿದೆ. ಈ ಫೋಟೋವನ್ನ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಸೀನಾ `ನೀವು ನನ್ನನ್ನ ನೋಡಲು ಸಾಧ್ಯವಿಲ್ಲ’ ಎಂದು ಬರೆದುಕೊಂಡಿದ್ದಾರೆ.

    ಜಾಲತಾಣದಲ್ಲಿ ಈ ಫೋಟೋ ಭಾರೀ ಸದ್ದು ಮಾಡುತ್ತಿದ್ದು, 4 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಈ ಫೋಟೋಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು `ಮೋದಿ ರಿಯಲ್ ಚಾಂಪಿಯನ್’ ಎಂದು ಹೊಗಳಿದ್ದಾರೆ. ಇದನ್ನೂ ಓದಿ: ಮೋದಿಗಾಗಿ ಬೃಹತ್‌ ಔತಣ ಕೂಟ – ಮುಖೇಶ್‌ ಅಂಬಾನಿ, ಸುಂದರ್‌ ಪಿಚೈ ಸೇರಿ ಹಲವು VIP ಗಣ್ಯರು ಭಾಗಿ: ಇಲ್ಲಿದೆ ಫುಲ್‌ ಲಿಸ್ಟ್‌

    ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದರು. ಅದಕ್ಕೂ ಮುನ್ನಾ ದಿನ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದರ ಗೌರವಾರ್ಥವಾಗಿ ಅಧ್ಯಕ್ಷ ಜೋ ಬೈಡನ್ ಆಯೋಜಿಸಿದ್ದ ಬೃಹತ್ ಔತಣ ಕೂಟದಲ್ಲಿ ಭಾಗಿಯಾಗಿದ್ದರು. ಈ ಔತಣ ಕೂಟದಲ್ಲಿ ಭಾರತ ಮೂಲದ ಗೂಗಲ್ ಸಿಇಒ ಸುಂದರ್ ಪಿಚೈ, ಉದ್ಯಮಿ ಮುಕೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ, ಆನಂದ್ ಮಹೀಂದ್ರಾ ಸೇರಿದಂತೆ ಘಟಾನುಘಟಿ ಉದ್ಯಮಿಗಳು ಭಾಗಿಯಾಗಿದ್ದರು. ಇದನ್ನೂ ಓದಿ: ಬೆಂಗಳೂರಲ್ಲೇ ಸಿಗಲಿದೆ ಅಮೆರಿಕ ವೀಸಾ – ಸಿಲಿಕಾನ್ ಸಿಟಿಯಲ್ಲಿ ರಾಯಭಾರ ಕಚೇರಿ ತೆರೆಯಲು US ನಿರ್ಧಾರ