Tag: instagram

  • ಕೊಹ್ಲಿ ಇನ್ ಸ್ಟಾಗ್ರಾಂನಲ್ಲಿ ಜಸ್ಟ್ 1 ಪೋಸ್ಟ್ ಮಾಡಿದ್ರೆ ಸಿಗುತ್ತೆ ಇಷ್ಟು ಕೋಟಿ ರೂ.

    ಕೊಹ್ಲಿ ಇನ್ ಸ್ಟಾಗ್ರಾಂನಲ್ಲಿ ಜಸ್ಟ್ 1 ಪೋಸ್ಟ್ ಮಾಡಿದ್ರೆ ಸಿಗುತ್ತೆ ಇಷ್ಟು ಕೋಟಿ ರೂ.

    ನವದೆಹಲಿ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ವಿಶ್ವದ 7ನೇ ಶ್ರೀಮಂತ ಕ್ರೀಡಾಪಟು ಆಗಿದ್ದು, ಈಗ ಅವರು ಇನ್ ಸ್ಟಾಗ್ರಾಮ್ ನಲ್ಲಿ ಮಾಡುವ ಒಂದು ಪೋಸ್ಟ್ ಗೆ ಎಷ್ಟು ಹಣ ಸಿಗುತ್ತೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಕೊಹ್ಲಿ ಇನ್ ಸ್ಟಾಗ್ರಾಮ್ ಒಂದು ಪೋಸ್ಟ್ ಮಾಡಿದ್ರೆ ಅವರಿಗೆ 3.2 ಕೋಟಿ ರೂ. ಹಣ ಸಿಗುತ್ತೆ ಎಂದು ನಿಯತಕಾಲಿಕೆ ವರದಿ ಮಾಡಿದೆ.

    ಸದ್ಯ ಈಗ ಇನ್ ಸ್ಟಾಗ್ರಾಮ್ ನಲ್ಲಿ ಕೊಹ್ಲಿಯನ್ನು 1.67 ಲಕ್ಷ ಮಂದಿ ಫಾಲೋ ಮಾಡುತ್ತಿದ್ದರೆ, ಟ್ವಿಟ್ಟರ್ ನಲ್ಲಿ 1.99 ಕೋಟಿ ಜನ ಫಾಲೋ ಮಾಡುತ್ತಿದ್ದಾರೆ. ಫೇಸ್‍ಬುಕ್ ನಲ್ಲಿ ಕೊಹ್ಲಿ ಅವರ ಅಧಿಕೃತ ಪೇಜನ್ನು 3.60 ಕೋಟಿ ಜನ ಲೈಕ್ ಮಾಡಿದ್ದಾರೆ.

    ಕೊಹ್ಲಿ ಪ್ರಸ್ತುತ ಐಸಿಸಿಯ ಏಕದಿನ ಮತ್ತು ಟಿ 20 ಶ್ರೇಯಾಂಕ ಪಟ್ಟಿಯಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಏಕದಿನದಲ್ಲಿ 889 ರೇಟಿಂಗ್ ಪಡೆದುಕೊಂಡಿದ್ದರೆ, ಟಿ 20ಯಲ್ಲಿ 824 ರೇಟಿಂಗ್ ಪಡೆದುಕೊಂಡಿದ್ದಾರೆ.

    ಇದನ್ನೂ ಓದಿ: ನಂಬರ್ ಒನ್ ಸ್ಥಾನಕ್ಕೆ ಏರಿ ಸಚಿನ್ ದಾಖಲೆ ಮುರಿದ ಕೊಹ್ಲಿ

    ಇದನ್ನೂ ಓದಿ: ಲೆಯೋನೆಲ್ ಮೆಸ್ಸಿಯನ್ನು ಹಿಂದಿಕ್ಕಿದ ವಿರಾಟ್ ಕೊಹ್ಲಿ

     

  • ನೋಟ್ ಬ್ಯಾನ್ ಬಳಿಕ ಮತ್ತೊಂದು ಬ್ರಹ್ಮಾಸ್ತ್ರ ಪ್ರಯೋಗಿಸಲಿದ್ದಾರೆ ಮೋದಿ

    ನೋಟ್ ಬ್ಯಾನ್ ಬಳಿಕ ಮತ್ತೊಂದು ಬ್ರಹ್ಮಾಸ್ತ್ರ ಪ್ರಯೋಗಿಸಲಿದ್ದಾರೆ ಮೋದಿ

    ನವದೆಹಲಿ: ನೀವು ಹೊಸ ಕಾರು ಖರೀದಿಸಿ ಫೇಸ್ ಬುಕ್‍ಗೆ ಫೋಟೋ ಹಾಕ್ತೀರಾ. ಹಾಗಾದ್ರೆ ಮುಂದಿನ ದಿನಗಳಲ್ಲಿ ನಿಮ್ಮ ಮನೆಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬಂದರೆ ಅಚ್ಚರಿಯಿಲ್ಲ.

    ಹೌದು. ಕಪ್ಪು ಕುಳಗಳನ್ನು ಮಣಿಸಲು ನೋಟ್ ನಿಷೇಧ ಕೈಗೊಂಡ ಮೋದಿ ಸರ್ಕಾರ ಈಗ ಆದಾಯ ತೆರಿಗೆಯನ್ನು ಕಟ್ಟದೇ ಶೋಕಿ ಮಾಡೋ ಕುಳಗಳನ್ನು ಹಿಡಿಯಲು ಪ್ಲಾನ್ ಮಾಡಿದೆ.

    ಇಲ್ಲಿಯವರೆಗೆ ಆದಾಯ ತೆರಿಗೆ ಇಲಾಖೆ ಬ್ಯಾಂಕ್ ಮೂಲಗಳನ್ನು ಮಾತ್ರ ಪರಿಶೀಲನೆ ನಡೆಸಿ ತೆರಿಗೆ ವಂಚಿಸುತ್ತಿದ್ದ ಕುಳಗಳನ್ನು ಪತ್ತೆ ಹಚ್ಚುತಿತ್ತು. ಈಗ ಇವುಗಳ ಜೊತೆ ಸಾಮಾಜಿಕ ಜಾಲತಾಣಗಳ ಮೂಲಕ ಶೋಕಿ ಮಾಡು ಮಂದಿಯನ್ನು ಪತ್ತೆ ಹಚ್ಚಲು ಮುಂದಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಹೇಗೆ?
    ನೀವು ಎಲ್ಲಿ ಹೋಗಿದ್ದೀರಿ..? ಎಷ್ಟು ಖರ್ಚು ಮಾಡಿದ್ದೀರಿ..? ಏನು ಖರೀದಿ ಮಾಡಿದ್ದೀರಿ ಎನ್ನುವ ಮಾಹಿತಿ ಸಂಗ್ರಹಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ರೂಪಿಸಿದ್ದು ಆಗಸ್ಟ್ ನಿಂದ ಕಾರ್ಯಾರಂಭ ಮಾಡಲಿದೆ. ಒಂದು ಸಾವಿರ ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು ಫೇಸ್‍ಬುಕ್, ಇನ್‍ಸ್ಟಾ ಗ್ರಾಮ್‍ನಿಂದ ಫೋಟೋ, ವಿಡಿಯೋಗಳ ಮಾಹಿತಿಯನ್ನು ಮಾಹಿತಿಯನ್ನು ಸಂಗ್ರಹಿಸಲಿದೆ.

    ಕಾರ್ಯಾಚರಣೆ ಹೀಗೆ ಇರುತ್ತೆ:
    ಮೊದಲ ಹಂತದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ, ಆಸ್ತಿ ಮತ್ತು ಸ್ಟಾಕ್ ಗಳಲ್ಲಿ ಹೂಡಿಕೆ, ಹಣವನ್ನು ಖರ್ಚು ಮಾಡಿದ್ದು ಮತ್ತು ಠೇವಣಿ ಇಟ್ಟ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ. ಎರಡನೇ ಹಂತ ಡಿಸೆಂಬರ್ ನಿಂದ ಆರಂಭವಾಗಲಿದ್ದು, ತೆರಿಗೆಯನ್ನು ವಂಚಿಸಿ ವ್ಯವಹಾರ ನಡೆಸುತ್ತಾರೋ ಅವರ ಮಾಹಿತಿಯನ್ನು ಸಂಗ್ರಹಿಸಲು ವೈಯಕ್ತಿಕ ಪ್ರೊಫೈಲ್ ಕ್ರಿಯೆಟ್ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಫೇಸ್ ಬುಕ್, ಇನ್ ಸ್ಟಾಗ್ರಾಮ್ ನಲ್ಲಿ ಹಾಕಿರುವ ಕಾರುಗಳು, ವಿದೇಶ ಪ್ರವಾಸದ ಫೋಟೋ, ಶಾಪಿಂಗ್ ಫೋಟೋ ಇತ್ಯಾದಿ. ಎಲ್ಲ ಮಾಹಿತಿ ಸಂಗ್ರಹಿಸಿದ ಬಳಿಕ 2018ರ ಮೇ ತಿಂಗಳಿನಲ್ಲಿ ಆದಾಯ ತೆರಿಗೆ ಅಧಿಕಾರಿಗಳು ನೇರವಾಗಿ ಕಾರ್ಯಾಚರಣೆಗೆ ಇಳಿಯಲಿದ್ದಾರೆ.

    ನವೆಂಬರ್ 8ರಂದು ನೋಟ್ ಬ್ಯಾನ್ ಮಾಡಿದ ಬಳಿಕ ಡಿಸೆಂಬರ್ 31 ರಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದರು. ಈ ಸಂದರ್ಭದಲ್ಲಿ ದೇಶದಲ್ಲಿ 2 ಕೋಟಿಗೂ ಅಧಿಕ ಮಂದಿ ಕಳೆದ ವರ್ಷ ವಿದೇಶ ಪ್ರವಾಸವನ್ನು ಕೈಗೊಂಡಿದ್ದಾರೆ. ಆದರೆ ಕೇವಲ 32 ಲಕ್ಷ ಮಂದಿ ಮಾತ್ರ ತಮ್ಮ ಬಳಿಕ 10 ಲಕ್ಷಕ್ಕೂ ಹೆಚ್ಚು ಅಧಿಕ ಆದಾಯವಿದೆ ಎಂದು ಘೋಷಿಸಿದ್ದಾರೆ. ಹೀಗಾಗಿ ತೆರಿಗೆ ವಂಚಿಸುವ ಜನರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಮೋದಿ ಎಚ್ಚರಿಕೆ ನೀಡಿದ್ದರು.

  • ವೈರಲ್ ಆಯ್ತು ಹರ್ಭಜನ್ ಸಿಂಗ್ ಮಗಳ ಜೊತೆಗಿನ ಕೊಹ್ಲಿಯ ಕ್ಯೂಟ್ ಸೆಲ್ಫೀ

    ವೈರಲ್ ಆಯ್ತು ಹರ್ಭಜನ್ ಸಿಂಗ್ ಮಗಳ ಜೊತೆಗಿನ ಕೊಹ್ಲಿಯ ಕ್ಯೂಟ್ ಸೆಲ್ಫೀ

    ನವದೆಹಲಿ: ಸೋಮವಾರದಂದು ವಾಂಖೇಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಎದುರು ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ 5 ವಿಕೆಟ್‍ಗಳ ಸೋಲನುಭವಿಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಹರ್ಭಜನ್ ಸಿಂಗ್ ಅವರ ಕುಟುಂಬದೊಂದಿಗೆ ಸಮಯ ಕಳೆದು, ಸಿಂಗ್ ಮಗಳ ಜೊತೆ ಒಂದು ಕ್ಯೂಟ್ ಸೆಲ್ಫೀ ಕ್ಲಿಕ್ಕಿಸಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಇದನ್ನೂ ಓದಿ: ಗಡ್ಡ ತೆಗೆಯುವಂತೆ ಕೊಹ್ಲಿಗೆ ಜಡೇಜಾ ಚಾಲೆಂಜ್- ಅನುಷ್ಕಾ ಹೀಗಂದ್ರು

    ಹರ್ಭಜನ್ ಸಿಂಗ್ ಅವರ ಪುಟ್ಟ ಮಗಳು ಹಿನಾಯಾ ಜೊತೆ ಸೆಲ್ಫೀ ಕ್ಲಿಕ್ಕಿಸಿರೋ ಕೊಹ್ಲಿ, ಬೇಬಿ ಹಿನಾಯಾ ನನ್ನ ಗಡ್ಡದಲ್ಲಿ ಏನೋ ಹುಡುಕುತ್ತಿದ್ದಾಳೆ. ಯಾರಾದ್ರೂ ಇಷ್ಟು ಕ್ಯೂಟ್ ಹಾಗೂ ಸುಂದರವಾಗಿರಲು ಹೇಗೆ ಸಾಧ್ಯ ಎಂದು ನನಗೆ ಅಚ್ಚರಿಯಾಗ್ತಿದೆ. ಹರ್ಭಜನ್ ಸಿಂಗ್ ಹಾಗೂ ಗೀತಾ ಬಸ್ರಾ ನಿಜಕ್ಕೂ ಧನ್ಯರು. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಪೋಸ್ಟ್ ಮಾಡಿದ್ದಾರೆ.

    ಈ ಹಿಂದೆ ಮಹೇಂದ್ರ ಸಿಂಗ್ ಧೋನಿ ಅವರ ಮಗಳು ಝೀವಾ ಜೊತೆಗೆ ಕೂಡ ಕೊಹ್ಲಿ ಸೆಲ್ಫೀ ಕ್ಲಿಕ್ಕಿಸಿ ಪೋಸ್ಟ್ ಮಾಡಿದ್ದರು. ಈ ಫೋಟೋ ಕೂಡ ವೈರಲ್ ಆಗಿತ್ತು.


    ಐಪಿಎಲ್‍ನ ಕಳೆದ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿದ್ದ ರಾಯಲ್ ಚಾಲೆಂಜರ್ಸ್ ತಂಡ, ಈ ಬಾರಿ ಪಾಯಿಂಟ್ಸ್ ಟೇಬಲ್‍ನಲ್ಲಿ 7 ಸ್ಥಾನದಲ್ಲಿದೆ. 11 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಮಾತ್ರ ಗೆದ್ದಿದ್ದು, 5 ಅಂಕ ಗಳಿಸಿದೆ.

  • ಗಡ್ಡ ತೆಗೆಯುವಂತೆ ಕೊಹ್ಲಿಗೆ ಜಡೇಜಾ ಚಾಲೆಂಜ್- ಅನುಷ್ಕಾ ಹೀಗಂದ್ರು

    ಗಡ್ಡ ತೆಗೆಯುವಂತೆ ಕೊಹ್ಲಿಗೆ ಜಡೇಜಾ ಚಾಲೆಂಜ್- ಅನುಷ್ಕಾ ಹೀಗಂದ್ರು

    ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಜೋಡಿ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಈ ಇಬ್ಬರೂ ನಾವು ಪ್ರೇಮಿಗಳೆಂದು ಬಹಿರಂಗವಾಗಿ ಹೇಳಿಲ್ಲವಾದ್ರೂ ಇಬ್ಬರ ಕೆಮಿಸ್ಟ್ರಿ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತವೆ. ಕೊಹ್ಲಿ ಕೂಡ ಆಗಾಗ ಇದಕ್ಕೆ ಪುಷ್ಟಿ ನೀಡುವಂತಹ ಪೋಸ್ಟ್ ಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಾಕ್ತಿರ್ತಾರೆ.

    ಈಗ ವಿಷಯ ಏನಪ್ಪಾ ಅಂದ್ರೆ ಕೊಹ್ಲಿ ಗಡ್ಡ ತೆಗೆಯಲು ನಿರಾಕರಿಸಿದ್ದಾರೆ. ಇವಾಗ್ಯಾಕೆ ಈ ಪ್ರಶ್ನೆ ಬಂತು ಅಂದ್ರಾ? ಕ್ರಿಕೆಟಿಗ ರವೀಂದ್ರ ಜಡೇಜಾ ಕೊಹ್ಲಿಗೆ ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಹಾಕಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ ಗಡ್ಡ ಬಿಟ್ಟಿರೋ ಒಂದು ಫೋಟೋವನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿ, ಜಡೇಜಾ, ಹಾರ್ದಿಕ್ ಪಾಂಡ್ಯ ಹಾಗೂ ರೋಹಿತ್ ಶರ್ಮಾ ಅವರಿಗೆ ಟ್ಯಾಗ್ ಮಾಡಿ, ಸಾರಿ ಬಾಯ್ಸ್. ಆದ್ರೆ ನಾನು ಸದ್ಯಕ್ಕೆ ಗಡ್ಡ ತೆಗೆಯಲು ಸಿದ್ಧವಿಲ್ಲ. ಆದ್ರೂ ಮೇಕ್‍ಓವರ್ ಮೇಲೆ ಭಾರೀ ಕೆಲಸವೇ ನಡೆಯುತ್ತಿದೆ ಅಂತ ಪೋಸ್ಟ್ ಹಾಕಿದ್ರು.

    ಈ ಫೋಟೋಗೆ ಅನುಷ್ಕಾ ಶರ್ಮಾ ಕಮೆಂಟ್ ಮಾಡಿದ್ದು, you cannot- ನೀನಿದನ್ನು ಮಾಡಲು ಸಾಧ್ಯವೇ ಇಲ್ಲ(ಗಡ್ಡ ತೆಗೆಯುವಂತಿಲ್ಲ) ಎಂದಿದ್ದಾರೆ. ಇದಕ್ಕೆ ಕೊಹ್ಲಿ ‘ಒಕೆ’ ಅಂತ ಕಮೆಂಟ್ ಹಾಕಿ ಸ್ಮೈಲಿ ಮತ್ತು ಹಾರ್ಟ್ ಎಮೋಜಿ ಕೂಡ ಹಾಕಿದ್ದಾರೆ.

    ಕೊಹ್ಲಿ ಹಾಗೂ ಅನುಷ್ಕಾ ಜೋಡಿ ಇಂತಹ ಸಿಹಿ ಸಂಗತಿಗಳನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರೋದು ಇದೇ ಮೊದಲೇನಲ್ಲ. ಪ್ರೇಮಿಗಳ ದಿನದಂದು ಕೊಹ್ಲಿ ಅನುಷ್ಕಾ ಜೊತೆಗಿನ ಫೋಟೋವನ್ನ ಹಾಕಿದ್ರು. ಅಲ್ಲದೆ ಇತ್ತೀಚೆಗೆ ಕೊಹ್ಲಿ ಇನ್‍ಸ್ಟಾಗ್ರಾಮ್‍ನ ಪ್ರೊಫೈಲ್ ಪಿಕ್ಚರ್‍ಗೆ ಅನುಷ್ಕಾ ಜೊತೆಗಿರುವ ಫೋಟೋವನ್ನ ಹಾಕಿದ್ದಾರೆ.

    https://www.youtube.com/watch?v=nNvbvyREHvI&feature=youtu.be