Tag: instagram

  • ರೀಲ್ಸ್ ಚಟ – ಟೆನ್ನಿಸ್ ಆಟಗಾರ್ತಿ ಮಗಳನ್ನು ಗುಂಡಿಕ್ಕಿ ಕೊಂದ ತಂದೆ

    ರೀಲ್ಸ್ ಚಟ – ಟೆನ್ನಿಸ್ ಆಟಗಾರ್ತಿ ಮಗಳನ್ನು ಗುಂಡಿಕ್ಕಿ ಕೊಂದ ತಂದೆ

    ಚಂಡೀಗಢ: ಮಗಳ ರೀಲ್ಸ್ (Reels) ಚಟದಿಂದ ಬೇಸತ್ತ ತಂದೆ ಟೆನ್ನಿಸ್ ಆಟಗಾರ್ತಿ (Tennis Player) ಮಗಳನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಗುರುಗ್ರಾಮದ (Gurugram) ಸುಶಾಂತ್ ಲೋಕ್‌ನಲ್ಲಿ ನಡೆದಿದೆ.

    ರಾಧಿಕಾ ಯಾದವ್ (25) ಮೃತ ಟೆನ್ನಿಸ್ ಆಟಗಾರ್ತಿ. ರಾಧಿಕ ಸುಶಾಂತ್ ಲೋಕ್‌ನ ಫೇಸ್-2 ನಿವಾಸಿಯಾಗಿದ್ದು, ರಾಜ್ಯಮಟ್ಟದ ಟೆನ್ನಿಸ್ ಆಟಗಾರ್ತಿಯಾಗಿದ್ದರು. ಅಲ್ಲದೇ ಹಲವಾರು ಸ್ಪರ್ಧೆಗಳಲ್ಲೂ ವಿಜೇತರಾಗಿದ್ದರು. ಇದನ್ನೂ ಓದಿ: ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ – ಕೈ ಕೊಯ್ದುಕೊಂಡ ಲಿವ್‌-ಇನ್‌ ಪಾರ್ಟ್ನರ್‌

    ಮಗಳು ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಚಟ ಬೆಳೆಸಿಕೊಂಡಿದ್ದರಿಂದ ಅಸಮಾಧಾನಗೊಂಡಿದ್ದ ತಂದೆ ಇಂದು ಮಧ್ಯಾಹ್ನದ ವೇಳೆಗೆ ರಾಧಿಕಾ ಮೇಲೆ ಐದು ಗುಂಡುಗಳನ್ನು ಹಾರಿಸಿದ್ದಾರೆ. ಈ ಪೈಕಿ ಮೂರು ಗುಂಡುಗಳು ರಾಧಿಕಾಗೆ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ʻಕೈʼ ಸರ್ಕಾರದಿಂದ ಬೀದಿ ನಾಯಿಗಳಿಗೂ ಗ್ಯಾರಂಟಿ – ಬಾಡೂಟಕ್ಕಾಗಿ ಬಿಬಿಎಂಪಿಯಿಂದ 2.80 ಕೋಟಿ ಟೆಂಡರ್

    ಸದ್ಯ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದು, ಗುಂಡು ಹಾರಿಸಿದ್ದ ಬಂದೂಕನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ತಾಯಿಯನ್ನು ಬಿಟ್ಟು ವಸತಿ ನಿಲಯದಲ್ಲಿ ಇರಲಾರೆ ಎಂದ ಬಾಲಕ ನೇಣಿಗೆ ಶರಣು!

  • ಬಾತ್‌ರೂಮಲ್ಲೇ ವ್ಯಕ್ತಿಯ ಬರ್ಬರ ಹತ್ಯೆ – ಕೊಲೆ ಫೋಟೋ ಇನ್ಸ್ಟಾದಲ್ಲಿ ಹಾಕಿ ‘ಜಾಲಿ ಜಾಲಿ’ ಎಂದು ಬರೆದ ಆರೋಪಿ

    ಬಾತ್‌ರೂಮಲ್ಲೇ ವ್ಯಕ್ತಿಯ ಬರ್ಬರ ಹತ್ಯೆ – ಕೊಲೆ ಫೋಟೋ ಇನ್ಸ್ಟಾದಲ್ಲಿ ಹಾಕಿ ‘ಜಾಲಿ ಜಾಲಿ’ ಎಂದು ಬರೆದ ಆರೋಪಿ

    ಚಿತ್ರದುರ್ಗ: ಬಾತ್‌ರೂಮಲ್ಲೇ (Bathroom) ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹೊಸದುರ್ಗ (Hosadurga) ತಾಲೂಕಿನ ಹುಣುವಿನಡು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರಾಜೇಂದ್ರ ಶ್ರೀನಿವಾಸ್ (30) ಹತ್ಯೆಗೀಡಾದ ದುರ್ದೈವಿಯಾಗಿದ್ದು, ಬಾತ್‌ರೂಮಲ್ಲಿ ಸ್ನಾನ ಮಾಡುವ ವೇಳೆ ಮನೆಗೆ ನುಗ್ಗಿರುವ ಮೂವರ ಗುಂಪೊಂದು ಮಾರಕಾಸ್ತ್ರಗಳಿಂದ ರಾಜೇಂದ್ರನನ್ನು ಕೊಚ್ಚಿ ಕೊಲೆಗೈದು ರಕ್ತದ ಕೋಡಿ ಹರಿಸಿದ್ದಾರೆ. ಈ ಸಂಬಂಧ ರಾಜೇಂದ್ರ ಶ್ರೀನಿವಾಸನ ತಾಯಿ ಸುಜಾತಾ ಹೊಸದುರ್ಗ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದನ್ನೂ ಓದಿ: ಆಪರೇಷನ್ ಸಿಂಧೂರದಲ್ಲಿ ಭಾಗಿಯಾಗಿದ್ದ ಮಾತ್ರಕ್ಕೆ ವಿನಾಯ್ತಿ ಇಲ್ಲ: ಪತ್ನಿ ಕೊಂದಿದ್ದ ಕಮಾಂಡೋಗೆ ಸುಪ್ರೀಂ ತರಾಟೆ

    ರಾಜೇಂದ್ರ ಕೆಲ ತಿಂಗಳ ಹಿಂದೆ ಕಿರಣಾ ಎಂಬ ಮಹಿಳೆ ಜೊತೆ ಮದುವೆಯಾಗಿದ್ದ. ಈ ವಿಚಾರದಲ್ಲಿ ಆಗಾಗ ಗಲಾಟೆ ನಡೆಯುತ್ತಿತ್ತು. ಆದರೆ ಇಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ರಾಜೇಂದ್ರನ ಮೇಲೆ ದಾಳಿ ನಡೆಸಿದ ಕಿರಣಾಳ ಸಹೋದರ ಸಾಗರ್ ಮತ್ತು ಇಬ್ಬರು ಈ ಕೊಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಮಾವು ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರ – ಪ್ರತಿ ಕ್ವಿಂಟಲ್‌ಗೆ 1,616 ರೂ. ದರ ನಿಗದಿ

    ಮನಸೋ ಇಚ್ಛೆ ಮಾರಕಾಸ್ತ್ರದಿಂದ ಹೊಡೆದು ಕೊಲೆಗೈದು ಆರೋಪಿಗಳು ಪರಾರಿಯಾಗಿದ್ದಾರೆ. ಸಹೋದರಿ ಕಿರಣಾಳ ಸುದ್ದಿಗೆ ಬರಬೇಡ ಎಂದರೂ ಬಿಡುತ್ತಿಲ್ಲ ಎಂಬ ಆಕ್ರೋಶದಿಂದ ಈ ಕೊಲೆಗೈದಿದ್ದಾರೆಂದು ಆರೋಪಿಸಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯನವರೇ ತಪ್ಪಿಯೂ ಕರ್ನಾಟಕವನ್ನು ಡಿಕೆಶಿ ಕೈಗೆ ಕೊಡಬೇಡಿ, ಮಾರಿಕೊಂಡು ಹೋಗ್ತಾರೆ – ಯತ್ನಾಳ್

    ಕಿರಣಾ ಈ ಮೊದಲು ಬೇರೊಬ್ಬನ ಜೊತೆ ಮದುವೆ ಆಗಿದ್ದು, ಬಳಿಕ ಕಿರಣಾ ಹಾಗೂ ರಾಜೇಂದ್ರ ಮದುವೆಯಾಗಿದ್ದ ಹಿನ್ನೆಲೆ ಸಾಗರ್ ದ್ವೇಷ ಸಾಧಿಸುತ್ತಿದ್ದ. ಈ ಕೊಲೆಗೆ ಕಿರಣಾಳ ಸೋದರಮಾವ ಕೃಷ್ಣಮೂರ್ತಿ ಕೂಡ ಪ್ರಚೋದಿಸಿದ್ದು, ಸಾಗರ್ ಹಾಗೂ ಇಬ್ಬರು ಅಪರಿಚಿತರಿಂದ ಕೃತ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಆರೋಪಿಗಳನ್ನು ಬಂಧಿಸಿ ರಾಜೇಂದ್ರ ಶ್ರೀನಿವಾಸನ ಸಾವಿಗೆ ನ್ಯಾಯ ಒದಗಿಸುವಂತೆ ಮೃತನ ತಾಯಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರೋಡ್ ರೇಜ್ ಕೇಸ್ – ಮಾಜಿ ಎಂಪಿ ಅನಂತಕುಮಾರ್ ಹೆಗಡೆ ಗನ್‌ಮ್ಯಾನ್, ಡ್ರೈವರ್‌ಗೆ ಜಾಮೀನು

    ಇನ್ಸ್ಟಾದಲ್ಲಿ ಜಾಲಿ ಜಾಲಿ ಎಂದು ಬರೆದು ವಿಕೃತಿ:
    ಇನ್ನು ಕೊಲೆಯ ಬೆನ್ನಲ್ಲೇ ರಾಜೇಂದ್ರ ಶ್ರೀನಿವಾಸ್ ಕೊಲೆಯ ಆರೋಪಿ ಸಾಗರ್ ತನ್ನ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಕೊಲೆಯ ರಕ್ತಸಿಕ್ತ ಫೋಟೊವನ್ನು ಹಾಕಿಕೊಂಡು ವಿಕೃತಿ ಮೆರೆದಿದ್ದಾನೆ. ಕೊಲೆಯಾದ ರಾಜೇಂದ್ರ ಶವದ ಫೋಟೋ ಮೇಲೆ ಜಾಲಿ ಜಾಲಿ ಎಂದು ಬರೆದು ವಿಕೃತಿ ತೋರಿದ್ದು, ಆರೋಪಿ ಸಾಗರ್ ಹಾಗೂ ಮತ್ತೋರ್ವ ಆರೋಪಿ ಮಾರಕಾಸ್ತ್ರ ಹಿಡಿದ ಫೋಟೋ ಶೇರ್ ಮಾಡಿದ್ದಾನೆ. ಈ ಸಂಬಂಧ ಹೊಸದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಶಾಲೆಯಲ್ಲಿ ಆಟವಾಡುತ್ತಿದ್ದ ವೇಳೆ ಹೃದಯಾಘಾತ – ವಿದ್ಯಾರ್ಥಿನಿ ಸಾವು

  • ದರ್ಶನ್ ಪತ್ನಿಯ ಹೊಸ ಲುಕ್ ವೈರಲ್

    ದರ್ಶನ್ ಪತ್ನಿಯ ಹೊಸ ಲುಕ್ ವೈರಲ್

    ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijaylakshmi Darshan) ಇನ್ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಕಡು ನೀಲಿ ಬಣ್ಣದ ಉಡುಗೆಯಲ್ಲಿ ವಿಜಯಲಕ್ಷ್ಮಿ ಮಿಂಚಿದ್ದಾರೆ. ದರ್ಶನ್ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ವಿಜಯಲಕ್ಷ್ಮಿಯವರನ್ನ ಭೂಮಿ ತೂಕದ ಹೆಣ್ಣು ಎಂದು ವರ್ಣಿಸುತ್ತಿದ್ದಾರೆ ಫ್ಯಾನ್ಸ್.ಇದನ್ನೂ ಓದಿ: ಸ್ಯಾಂಡಲ್‌ವುಡ್‌ಗೆ ದಕ್ಷಿಣದ ಹೆಸರಾಂತ ನಟ ಶ್ರೀಮನ್ ಎಂಟ್ರಿ

    ಇನ್ಸ್ಟಾಗ್ರಾಂನಲ್ಲಿ ಹೊಸ ಫೋಟೋ ಶೇರ್ ಮಾಡಿರುವ ವಿಜಯಲಕ್ಷ್ಮಿ ಮಗನೊಟ್ಟಿಗೆ ಕೂಡ ಪೋಸ್ ಕೊಟ್ಟಿದ್ದಾರೆ. ಪುತ್ರ ವಿನೀಶ್ ಕೈಯಲ್ಲಿ ಸಾಕುನಾಯಿಯನ್ನು ಎತ್ತಿಕೊಂಡಿದ್ದು, ನಾಯಿಗೆ ತೊಡಿಸಿರುವ ಉಡುಗೆ ಮೇಲೆ `ಬಾಸ್’ ಎಂದು ಹೆಸರು ಇರುವುದು ವಿಶೇಷ. ಈ ಮೂಲಕ ದರ್ಶನ್‌ರಂತೆ ಮಗ ವಿನೀಶ್ ಕೂಡ ಪ್ರಾಣಿಪ್ರೇಮಿ ಎನ್ನುವುದು ಗೊತ್ತಾಗಿದೆ. ಸದ್ಯ ಫೋಟೋಸ್ ಸಕತ್ ವೈರಲ್ ಆಗುತ್ತಿದೆ.

    ಜೈಲು ಸೇರಿದ್ದ ದರ್ಶನ್‌ರನ್ನು (Actor Darshan) ಜಾಮೀನು ಕೊಡಿಸಿ ಬಿಡಿಸಿಕೊಂಡು ಬರುವಲ್ಲಿ ವಿಜಯಲಕ್ಷ್ಮಿಯವರ ಪಾತ್ರ ಮಹತ್ವದ್ದು. ಹೀಗಾಗಿ ದರ್ಶನ್ ಅಭಿಮಾನಿಗಳಂತೂ ವಿಜಯಲಕ್ಷ್ಮಿಯವರನ್ನು ದೇವತೆ ಎಂದು ಹೊಗಳುತ್ತಾರೆ. ಅದೇ ರೀತಿಯಾಗಿ ವಿಜಯಲಕ್ಷ್ಮಿಯವರ ಹೊಸ ಪೋಸ್ಟ್‌ಗೆ ಹೊಗಳಿಕೆಯ ಕಾಮೆಂಟ್ಸ್ ಬರುತ್ತಿವೆ. ಅದರಲ್ಲೊಂದು ಕಾಮೆಂಟ್‌ನಲ್ಲಿ `ಭೂಮಿ ತೂಕದ ಹೆಣ್ಣು’ ಎಂದು ಬಿರುದು ನೀಡಲಾಗಿದೆ. ಒಟ್ನಲ್ಲಿ ಇನ್ಸ್ಟಾಗ್ರಾಂನಲ್ಲಿ ಆಕ್ವೀವ್ ಆಗಿರುವ ವಿಜಯಲಕ್ಷ್ಮಿ ಆಗಾಗ ಹೊಸ ಫೋಟೋಶೂಟ್‌ಗಳನ್ನ ಹಂಚಿಕೊಳ್ಳುತ್ತಲೇ ಇರುತ್ತಾರೆ.ಇದನ್ನೂ ಓದಿ: ರಾಷ್ಟ್ರಪತಿ ಭೇಟಿ ವೇಳೆ ಸಿದ್ದರಾಮಯ್ಯ, ಆಮೀರ್ ಖಾನ್ ಮುಖಾಮುಖಿ

  • ನಮ್ಮ ಮೆಟ್ರೋದಲ್ಲಿ ಯುವತಿಯರ ಆಕ್ಷೇಪಾರ್ಹ ವಿಡಿಯೋ ಸೆರೆಹಿಡಿದು ವೈರಲ್‌ ಮಾಡ್ತಿದ್ದವ ಅರೆಸ್ಟ್‌

    ನಮ್ಮ ಮೆಟ್ರೋದಲ್ಲಿ ಯುವತಿಯರ ಆಕ್ಷೇಪಾರ್ಹ ವಿಡಿಯೋ ಸೆರೆಹಿಡಿದು ವೈರಲ್‌ ಮಾಡ್ತಿದ್ದವ ಅರೆಸ್ಟ್‌

    ಬೆಂಗಳೂರು: ನಮ್ಮ ಮೆಟ್ರೋ ಟ್ರೈನ್‌ನಲ್ಲಿ (Namma Metro Train) ಯುವತಿಯರ ವಿಡಿಯೋ ಸೆರೆಹಿಡಿದು ತನ್ನ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದ ಆರೋಪಿಯೊಬ್ಬನನ್ನ ಬನಶಂಕರಿ ಪೊಲೀಸರು (Banashankari Police) ಬಂಧಿಸಿರುವ ಘಟನೆ ಬೆಂಗಳೂರಿನ ಪೀಣ್ಯ ಬಳಿ ನಡೆದಿದೆ.

    ಹಾಸನ (Hassan) ಹೊಳೆನರಸೀಪುರ ಮೂಲದ ದಿಗಂತ್ ಬಂಧಿತ ಆರೋಪಿ. ಇದನ್ನೂ ಓದಿ: ಅಮ್ಮಾ, ನಾನು ಚಿಪ್ಸ್ ಕದ್ದಿಲ್ಲಮ್ಮಾ – ಅವಮಾನಗೊಂಡಿದ್ದರಿಂದ ಡೆತ್‌ನೋಟ್ ಬರೆದು 7ನೇ ಕ್ಲಾಸ್ ವಿದ್ಯಾರ್ಥಿ ಆತ್ಮಹತ್ಯೆ

    ಹೊಳೆನರಸೀಪುರ ಮೂಲದ ದಿಗಂತ್‌ ಮೆಟ್ರೋದಲ್ಲಿ ಯುವತಿಯರ ಆಕ್ಷೇಪಾರ್ಹ ವಿಡಿಯೋ ರೆಕಾರ್ಡ್‌ ಮಾಡಿ ತನ್ನ ʻಮೆಟ್ರೋ ಚಿಕ್ಸ್ʼ ಹೆಸರಿನ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿದ್ದ. 5,538 ಫಾಲೋವರ್ಸ್‌ಗಳನ್ನ ಹೊಂದಿದ್ದ ಈ ಖಾತೆಯಲ್ಲಿ 13ಕ್ಕೂ ಹೆಚ್ಚು ವಿಡಿಯೋಗಳನ್ನ ಅಪ್‌ಲೋಡ್‌ ಮಾಡಿ ವೈರಲ್‌ ಮಾಡಿದ್ದ. ಅಲ್ಲದೇ ಯುವತಿಯರ ಬಗ್ಗೆ ವಿಶ್ಲೇಷಣೆ ಮಾಡುತ್ತಾ ವಿಕೃತಿ ಮೆರೆಯುತ್ತಿದ್ದ.

    ಇದರ ವಿರುದ್ಧ ಸಾರ್ವಜನಿಕರಿಂದಲೂ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ದಿಗಂತ್ ಕೆಲ ವಿಡಿಯೋಗಳನ್ನ ಡಿಲೀಟ್‌ ಕೂಡ ಮಾಡಿದ್ದ. ‌ಈ ಸಂಬಂಧ ಇನ್‌ಸ್ಟಾಗ್ರಾಮ್‌ ಪೇಜ್‌ ವಿರುದ್ಧ ಬನಶಂಕರಿ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಆರೋಪಿಯನ್ನ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಇದನ್ನೂ ಓದಿ: ಅಪ್ಪಂಗೂ, ತಾತನಿಗೂ ಇಬ್ರೂ ಹೆಂಡ್ತಿರು, ನಿನ್ನ ಮದ್ವೆ ಆಗ್ತೀನಿ ಅಂತ ಕಥೆ ಕಟ್ಟಿದ್ದ- ಮನು ಕರ್ಮಕಾಂಡ ಬಿಚ್ಚಿಟ್ಟ ಸಂತ್ರಸ್ತೆ

    ತಿಗಳಪಾಳ್ಯದಲ್ಲಿ ವಾಸವಾಗಿದ್ದ ದಿಗಂತ್ ಖಾಸಗಿ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ. ಕೆಲಸದ ದಿನಗಳಲ್ಲಿ ತಿಗಳಪಾಳ್ಯದಿಂದ ಮುರುಗೇಶ್‌ಪಾಳ್ಯದವರೆಗೆ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದ. ಈ ಸಂದರ್ಭದಲ್ಲೇ ಯುವತಿಯರ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ. ಇದನ್ನೂ ಓದಿ: ಸೂಕ್ಷ್ಮ ಮಾಹಿತಿ ಸೋರಿಕೆ – 600 ಪಾಕಿಸ್ತಾನಿಯರ ಸಂಪರ್ಕದಲ್ಲಿದ್ದ ಬೇಹುಗಾರ ವಾರಣಾಸಿಯಲ್ಲಿ ಅರೆಸ್ಟ್‌

  • ಇನ್‌ಸ್ಟಾ ಫಾಲೋವರ್ಸ್ ಕುಸಿತ – ಮನನೊಂದು ಕಂಟೆಂಟ್ ಕ್ರಿಯೇಟರ್ ಯುವತಿ ಆತ್ಮಹತ್ಯೆ

    ಇನ್‌ಸ್ಟಾ ಫಾಲೋವರ್ಸ್ ಕುಸಿತ – ಮನನೊಂದು ಕಂಟೆಂಟ್ ಕ್ರಿಯೇಟರ್ ಯುವತಿ ಆತ್ಮಹತ್ಯೆ

    ಮುಂಬೈ: ಇನ್‌ಸ್ಟಾಗ್ರಾಂನಲ್ಲಿ (Instagram) ಫಾಲೋವರ್ಸ್ ಕಡಿಮೆಯಾಗುತ್ತಿದ್ದಾರೆ ಎಂದು ಮಾನಸಿಕ ಖಿನ್ನತೆಗೊಳಗಾಗಿ ಕಂಟೆಂಟ್ ಕ್ರಿಯೇಟರ್ (Content Creator) ಮಿಶಾ ಅಗರ್ವಾಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಈ ಕುರಿತು ಮೃತಳ ಸಹೋದರಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ತನ್ನ 25ನೇ ಹುಟ್ಟುಹಬ್ಬ ಸಮೀಪಿಸುತ್ತಿರುವಾಗ ಇನ್‌ಸ್ಟಾಗ್ರಾಂನಲ್ಲಿ ಫಾಲೋವರ್ಸ್ ಕಡಿಮೆಯಾಗಿರುವುದು ಆಕೆಯನ್ನು ಮಾನಸಿಕ ಖಿನ್ನತೆ ಒಳಗಾಗುವಂತೆ ಮಾಡಿತ್ತು. ಏಪ್ರಿಲ್ ತಿಂಗಳ ಆರಂಭದಿಂದಲೂ ಆಕೆ ತೀವ್ರ ಒತ್ತಡದಲ್ಲಿದ್ದಳು. 1 ಮಿಲಿಯನ್ ಫಾಲೋವರ್ಸ್ ಗಳಿಸಬೇಕೆನ್ನುವುದು ಆಕೆಯ ಗುರಿಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಫಾಲೋವರ್ಸ್ ಸಂಖ್ಯೆಯಲ್ಲಿ ಕುಸಿತ ಕಂಡಿದ್ದು, ಇದೇ ಬೇಸರದಿಂದ ಆತ್ಮಹತ್ಯೆ ಶರಣಾಗಿದ್ದಾಳೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ದಿನ ಭವಿಷ್ಯ 01-05-2025

     

    View this post on Instagram

     

    A post shared by Misha Agrawal (@themishaagrawalshow)

    ಮಿಶಾ ಇನ್‌ಸ್ಟಾಗ್ರಾಂನಲ್ಲಿ ತನ್ನ ಭವಿಷ್ಯವನ್ನು ಕಂಡಿದ್ದಳು. ಜೊತೆಗೆ ಅದರಲ್ಲಿಯೇ ತನ್ನದೊಂದು ಪ್ರಪಂಚವನ್ನು ಕಟ್ಟಿಕೊಂಡಿದ್ದಳು. ಆಗಾಗ ನನ್ನನ್ನು ತಬ್ಬಿಕೊಂಡು ನನ್ನ ಫಾಲೋವರ್ಸ್ ಕಡಿಮೆಯಾದರೆ ನಾನೇನು ಮಾಡಲಿ? ಅಲ್ಲಿಗೆ ನನ್ನ ವೃತ್ತಿ ಜೀವನವೇ ಮುಗಿಯುತ್ತದೆ ಎಂದು ಅಳುತ್ತಿದ್ದಳು. ಆದರೆ ನಾನು ಹಲವು ಬಾರಿ ಅವಳಿಗೆ, ಇದು ನಿನ್ನ ಇಡೀ ಪ್ರಪಂಚವಲ್ಲ, ಇದು ಕೇವಲ ಒಂದು ಹವ್ಯಾಸ ಮತ್ತು ಅದಿಲ್ಲದಿದ್ದರೆ ಜೀವನ ಮುಗಿಯುವುದಿಲ್ಲ ಎಂದು ಸಮಾಧಾನಪಡಿಸಲು ಪ್ರಯತ್ನಿಸಿದ್ದೆ. ಜೊತೆಗೆ ನೀನು LLB ಮುಗಿಸಿದ್ದೀಯಾ, ನಿನ್ನಲ್ಲಿರುವ ಪ್ರತಿಭೆ, ಪಿಸಿಎಸ್‌ಜೆ ಪರೀಕ್ಷೆಗೆ ತಯಾರಿ ಮಾಡು, ಒಂದು ದಿನ ನ್ಯಾಯಾಧೀಶಳಾಗುತ್ತೀಯಾ ಎಂದು ವೃತ್ತಿಜೀವನದ ಬಗ್ಗೆ ನೆನಪಿಸುತ್ತಿದ್ದೆ ಎಂದು ಹೇಳಿದರು.

    ಇನ್‌ಸ್ಟಾಗ್ರಾಮ್‌ನ್ನು ಕೇವಲ ಮನರಂಜನೆಯಾಗಿ ನೋಡು, ನಿನ್ನನ್ನು ಬಲಿ ಪಡೆಯುವಂತೆ ಮಾಡಿಕೊಳ್ಳಬೇಡ ಎಂದು ಹೇಳಿದ್ದೆ. ಆದರೆ ಅವಳು ಕೇಳಲಿಲ್ಲ. ತುಂಬಾ ಒತ್ತಡಕ್ಕೊಳಗಾಗಿ ತನ್ನ ಪ್ರಾಣವನ್ನೇ ಕಳೆದುಕೊಂಡಳು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಭಾರತದ ವಾಯುಸೀಮೆ ಬಂದ್‌ – ಪಾಕ್‌ಗೆ ಮತ್ತೊಂದು ಶಾಕ್‌

  • ಇನ್‌ಸ್ಟಾ ಲವ್ವರ್‌ ಮದುವೆಯಾಗಲು ಭಾರತದ ಹಳ್ಳಿಗೆ ಬಂದ ಅಮೆರಿಕ ಮಹಿಳೆ

    ಇನ್‌ಸ್ಟಾ ಲವ್ವರ್‌ ಮದುವೆಯಾಗಲು ಭಾರತದ ಹಳ್ಳಿಗೆ ಬಂದ ಅಮೆರಿಕ ಮಹಿಳೆ

    ವಾಷಿಂಗ್ಟನ್‌: ಇನ್‌ಸ್ಟಾಗ್ರಾಂ (Instagram) ಲವ್ವರ್‌ ಮದುವೆಯಾಗಲು ಅಮೆರಿಕದ ಮಹಿಳೆಯೊಬ್ಬರು ಭಾರತಕ್ಕೆ ಆಗಮಿಸಿದ್ದಾರೆ. ಪ್ರೇಮಿಗಾಗಿ ಅಮೆರಿಕದಿಂದ (America) ಸಾವಿರಾರು ಮೈಲುಗಳಷ್ಟು ದೂರ ಪ್ರಯಾಣಿಸಿ ಆಂಧ್ರಪ್ರದೇಶದ ಹಳ್ಳಿಗೆ ಬಂದು ತಲುಪಿಸಿದ್ದಾರೆ.

    ಛಾಯಾಗ್ರಾಹಕಿ ಜಾಕ್ಲಿನ್ ಫೊರೆರೊ ಎಂಬಾಕೆಗೆ ಭಾರತದ ಚಂದನ್ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಿತರಾದರು. ಚಂದನ್‌ ಸರಳತೆಗೆ ಆಕರ್ಷಿತಳಾಗಿದ್ದರು. ನಂತರ ಪರಸ್ಪರರು ಪ್ರೀತಿಯಲ್ಲಿ ಬಿದ್ದಿದ್ದರು. ಇದನ್ನೂ ಓದಿ: ದೇಶ ತೊರೆಯಿರಿ ಅಥವಾ ಜೈಲು ಶಿಕ್ಷೆ ಅನುಭವಿಸಿ: ವಿದೇಶಿ ಭಯೋತ್ಪಾದಕರಿಗೆ ಅಮೆರಿಕ ಎಚ್ಚರಿಕೆ

     

    View this post on Instagram

     

    A post shared by Jaclyn Forero (@jaclyn.forero)

    ಇನ್‌ಸ್ಟಾದಲ್ಲಿ ‘ಹಾಯ್‌’ ಎಂದು ಪರಿಚಿತರಾದ ಇವರು, ಸತತ 14 ತಿಂಗಳು ಚಾಟ್‌ ಮಾಡಿಕೊಂಡಿದ್ದರು. ಹೃದಯಸ್ಪರ್ಶಿ ಸಂಭಾಷಣೆಯೊಂದಿಗೆ ಪ್ರೀತಿಯಲ್ಲಿ ಬಿದ್ದರು. ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು.

    ಸಂಗೀತ, ಕಲೆ ಮತ್ತು ಛಾಯಾಗ್ರಹಣದಲ್ಲಿ ಚಂದನ್‌ಗೆ ಇದ್ದ ಉತ್ಸಾಹಕ್ಕೆ ನಾನು ಆಕರ್ಷಿತಳಾದೆ. 8 ತಿಂಗಳ ಕಾಲ ಆನ್‌ಲೈನ್‌ನಲ್ಲಿ ಡೇಟಿಂಗ್ ಮಾಡಿದ್ದೆವು. ನನ್ನ ತಾಯಿಯ ಅನುಮತಿ ಪಡೆದು ನಾನು ಭಾರತಕ್ಕೆ ಬಂದಿದ್ದೇನೆ ಎಂದು ಫೊರೆರೊ ತಿಳಿಸಿದ್ದಾರೆ. ಇದನ್ನೂ ಓದಿ: ನೈಟ್‌ಕ್ಲಬ್‌ನ ಛಾವಣಿ ಕುಸಿದು 79 ಮಂದಿ ದುರ್ಮರಣ

    ಈ ಜೋಡಿ ಈಗ ಅಮೆರಿಕದಲ್ಲಿ ತಮ್ಮ ಜೀವನವನ್ನು ಒಟ್ಟಿಗೆ ಪ್ರಾರಂಭಿಸಲು ಚಂದನ್ ವೀಸಾಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ. ದೊಡ್ಡ ಸಾಹಸಗಳೊಂದಿಗೆ ಹೊಸ ಅಧ್ಯಾಯಕ್ಕಾಗಿ ನಾವಿಬ್ಬರೂ ಉತ್ಸುಕರಾಗಿದ್ದೇವೆಂದು ಹೇಳಿಕೊಂಡಿದ್ದಾರೆ.

  • ಬಿಗ್‌ ಬಾಸ್‌ ಮಾಜಿ ಸ್ವರ್ಧಿಗಳಾದ ರಜತ್, ವಿನಯ್ ಗೌಡ ವಿರುದ್ಧ ಎಫ್‌ಐಆರ್

    ಬಿಗ್‌ ಬಾಸ್‌ ಮಾಜಿ ಸ್ವರ್ಧಿಗಳಾದ ರಜತ್, ವಿನಯ್ ಗೌಡ ವಿರುದ್ಧ ಎಫ್‌ಐಆರ್

    ಬೆಂಗಳೂರು: ಬಿಗ್ ಬಾಸ್ ಸೀಸನ್ 11ರ ಸ್ವರ್ಧಿಗಳಾದ ವಿನಯ್ ಗೌಡ ಮತ್ತು ರಜತ್ ವಿರುದ್ಧ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

     

    View this post on Instagram

     

    A post shared by Rajath kishan G (@bujjjjii)

    ಹೌದು. ರಜತ್ ಕಿಶನ್ ಜೊತೆ ನಟ ವಿನಯ್ ಗೌಡ ಒಂದು ಮಸ್ತ್ ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್‌ನಲ್ಲಿ ವಿನಯ್ ಗೌಡ ಲಾಂಗು ಹಿಡಿದು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ದರ್ಶನ್ ಅವರ ‘ಕರಿಯ’ ಸಿನಿಮಾದ ಸ್ಟೈಲ್‌ನಲ್ಲಿ ಸ್ಲೋ ಮೋಷನ್‌ನಲ್ಲಿ ನಡೆಯುತ್ತಿರುತ್ತಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಇದರ ಬೆನ್ನಲ್ಲೇ ಇಬ್ಬರ ಸ್ಪರ್ಧಿಗಳ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಇದನ್ನೂ ಓದಿ: ಹೆಂಡ, ಸಿಗರೇಟು ನೀಡಿದ್ರೆ ಇಷ್ಟಾರ್ಥ ಸಿದ್ಧಿ – ಕಾರವಾರದಲ್ಲೊಂದು ವಿಶಿಷ್ಟ ದೈವ ಜಾತ್ರೆ!

    ಬಸವೇಶ್ವರ ನಗರದಲ್ಲಿ ಸಾರ್ವಜನಿಕವಾಗಿ ಲಾಂಗ್ ಹಿಡಿದು ಭಯದ ವಾತಾವರಣ ಸೃಷ್ಟಿಸುವ ರೀಲ್ಸ್ ಮಾಡಿದ್ದು ಈಗ ಸಮಸ್ಯೆಗೆ ಕಾರಣವಾಗಿದೆ. ಅಲ್ಲದೇ ಈ ರೀಲ್ಸ್‌ ಅನ್ನು ʻಬುಜ್ಜಿʼ ಅನ್ನೋ ಇನ್‌ಸ್ಟಾ ಖಾತೆಯಲ್ಲಿ ಶೇರ್‌ ಮಾಡಿದ್ದಾರೆ. ಇದನ್ನೂ ಓದಿ: IPL 2025: ಗಾಯಕ್ವಾಡ್‌, ರಚಿನ್‌ ಫಿಫ್ಟಿ ಆಟ – ಮುಂಬೈ ವಿರುದ್ಧ ಚೆನ್ನೈಗೆ 4 ವಿಕೆಟ್‌ಗಳ ಜಯ

    ಈ ವಿಡಿಯೋ ಗಮನಿಸಿದ ಬಸವೇಶ್ವರ ನಗರ ಪೊಲೀಸರು, ಇಬ್ಬರ ವಿರುದ್ಧ ಆರ್ಮ್ಸ್ ಆಕ್ಟ್ ಆಡಿ ಕೇಸ್ ದಾಖಲಿಸಿದ್ದಾರೆ. ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನು ಹಿಡಿದು ರಿಲ್ಸ್ ಮಾಡುವುದು, ಭಯದ ವಾತಾವರಣ ಸೃಷ್ಟಿಸೋದು ಕಾನೂನು ಪ್ರಕಾರ ಅಪರಾಧವಾಗಿದೆ. ಈ ನಿಟ್ಟಿನಲ್ಲಿ ಈ ಇಬ್ಬರ ಸ್ವರ್ಧಿಗಳ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.

  • ಈ ಕೆಲ್ಸ ಮಾಡಿ ನನಗೆ ಹತ್ತಿರವಾಗಬಹುದು ಅಂದುಕೊಂಡಿದ್ರೆ ಬಿಟ್ಟುಬಿಡಿ – ಫ್ಯಾನ್ಸ್‌ಗೆ ಹೀಗ್ಯಾಕೆ ಹೇಳಿದ್ರು ದರ್ಶನ್‌?

    ಈ ಕೆಲ್ಸ ಮಾಡಿ ನನಗೆ ಹತ್ತಿರವಾಗಬಹುದು ಅಂದುಕೊಂಡಿದ್ರೆ ಬಿಟ್ಟುಬಿಡಿ – ಫ್ಯಾನ್ಸ್‌ಗೆ ಹೀಗ್ಯಾಕೆ ಹೇಳಿದ್ರು ದರ್ಶನ್‌?

    – ಡೆವಿಲ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಬೇಕಿದ್ದ ಚಂದು ಹೊರಕ್ಕೆ

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕೊಲೆ ಆರೋಪಿಯಾಗಿರುವ ನಟ ದರ್ಶನ್‌ (Darshan) ಈಗ ಮತ್ತೆ ʻಡೆವಿಲ್ʼ (The Devil) ಶೂಟಿಂಗ್‌ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಬುಧವಾರದಿಂದಲೇ (ಮಾ.12) ಮೈಸೂರಿನಲ್ಲಿ ಶೂಟಿಂಗ್‌ಗೆ ಚಾಲನೆ ನೀಡಲಾಗುತ್ತಿದೆ. ಈ ಬೆನ್ನಲ್ಲೇ ಅಭಿಮಾನಿಗಳಿಗೆ ಇನ್‌ಸ್ಟಾ ಮೂಲಕ ಖಡಕ್‌ ಸಂದೇಶವೊಂದನ್ನು ನೀಡಿದ್ದಾರೆ.

    ಹೌದು. ಡೆವಿಲ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಬೇಕಿದ್ದ ದರ್ಶನ್‌ ಸಂಬಂಧಿ ಚಂದು ಅವರ ಕಾಲಿಗೆ ದರ್ಶನ್‌ ಅಭಿಮಾನಿಯೊಬ್ಬರು ನಮಸ್ಕರಿಸಲು ಮುಂದಾಗಿದ್ದಾರೆ. ಈ ವೀಡಿಯೋ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ. ಇದು ದರ್ಶನ್‌ ಅವರ ಗಮನಕ್ಕೆ ಬರುತ್ತಿದ್ದಂತೆ ಅಸಮಾಧಾನಗೊಂಡಿರುವ ನಟ ಇನ್‌ಸ್ಟಾದಲ್ಲಿ ವಿಸ್ತೃತ ಸಂದೇಶ ಹಂಚಿಕೊಳ್ಳುವ ಮೂಲಕ ಫ್ಯಾನ್ಸ್‌ಗೆ ಖಡಕ್‌ ಸಂದೇಶ ಕೊಟ್ಟಿದ್ದಾರೆ.

    ದರ್ಶನ್‌ ಇನ್‌ಸ್ಟಾದಲ್ಲಿ ಏನಿದೆ?
    ಎಲ್ಲಾ ನನ್ನ ಸೆಲೆಬ್ರಿಟಿಸ್‌ ಗಳಿಗೆ ಈ ಮೂಲಕ ತಿಳಿಸುವುದೇನೆಂದರೆ.. ನೀವು ನನ್ನ ಮತ್ತು ನಮ್ಮ ಕುಟುಂಬದ ಮೇಲಿಟ್ಟಿರುವ ಪ್ರೀತಿ ಅಭಿಮಾನಕ್ಕೆ ನಾವು ಸದಾ ಚಿರಋಣಿ. ಆದರೆ, ಈ ವೀಡಿಯೊದಲ್ಲಿ ನಮ್ಮ ಮೇಲಿರುವ ಅಭಿಮಾನದಿಂದ ಇನ್ನೂ ಏನು ಸಾಧನೆ ಮಾಡದಿರುವ ನನ್ನ ಅಕ್ಕನ ಮಗನಾದ ಚಂದುಗೆ ಅಭಿಮಾನಿಯೊಬ್ಬರು ಕಾಲಿಗೆ ಬೀಳುವುದನ್ನು ನೋಡಿ ನನ್ನ ಮನಸಿಗೆ ತುಂಬಾ ನೋವಾಗಿದೆ. ಅದರಿಂದ ಡೆವಿಲ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಬೇಕಿದ್ದ ಚಂದುನನ್ನು ಈ ಚಿತ್ರದಿಂದ ಹೊರಗಿಡಲಾಗಿದೆ. ಚಂದು ಅಥವಾ ನನ್ನ ಮಗ ವಿನೀಶ್‌ಗೆ ನೀವು ಅಭಿಮಾನದಿಂದಲೋ ಅಥವಾ ಅವರೊಂದಿಗೆ ಚೆನ್ನಾಗಿ ಗುರುತಿಸಿಕೊಂಡರೆ ನನಗೆ ಹತ್ತಿರವಾಗಬಹುದು ಎಂದು ನೀವು ಭಾವಿಸಿದರೆ ಅದನ್ನು ನಿಮ್ಮ ಮನಸಿನಿಂದ ತೆಗೆದು ಹಾಕಿ ನೀವು ಹೀಗೆ ಮಾಡುವುದು ನನಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ..

    ಇನ್ನೂ ಮಾರ್ಚ್ 12ರಿಂದ 15ರ ವರೆಗೆ ಮೈಸೂರಿನಲ್ಲಿ ‘ದಿ ಡೆವಿಲ್’ ಚಿತ್ರದ ಶೂಟಿಂಗ್ ಮಾಡಲು ಅನುಮತಿ ಸಿಕ್ಕಿದೆ. ಮಾ.12ರಿಂದ ಮಾ.14ರವರೆಗೆ ಸರ್ಕಾರಿ ಅಥಿತಿ ಗೃಹದಲ್ಲಿ ಚಿತ್ರತಂಡ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಶೂಟಿಂಗ್ ಮಾಡಲಿದ್ದಾರೆ. ಮಾ.15ರಂದು ಲಲಿತಮಹಲ್ ಪ್ಯಾಲೆಸ್‌ನಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಲಾಗಿದೆ.

    ಕಾನೂನು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದಾರೆ. ಒಂದು ಪಾಳಿಯಲ್ಲಿ 10 ಮಂದಿ ಪೊಲೀಸ್ ಸಿಬ್ಬಂದಿಯಂತೆ ಒಟ್ಟು 32 ಸಿಬ್ಬಂದಿ ಶೂಟಿಂಗ್ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ನಟನ ಭದ್ರತೆಗಾಗಿ ಸಿಬ್ಬಂದಿ ನಿಯೋಜಿಸಲು 1,64,785 ರೂ. ‘ದಿ ಡೆವಿಲ್’ ಚಿತ್ರತಂಡ ಪಾವತಿಸಿದೆ.

  • ಡೆವಿಲ್ ಚಿತ್ರೀಕರಣ ಶುರುವಾಗೋ ಹೊತ್ತಲ್ಲೇ ಆಪ್ತರನ್ನ ಇನ್‌ಸ್ಟಾದಿಂದ ಅನ್‌ಫಾಲೋ ಮಾಡಿದ ʻದಾಸʼ

    ಡೆವಿಲ್ ಚಿತ್ರೀಕರಣ ಶುರುವಾಗೋ ಹೊತ್ತಲ್ಲೇ ಆಪ್ತರನ್ನ ಇನ್‌ಸ್ಟಾದಿಂದ ಅನ್‌ಫಾಲೋ ಮಾಡಿದ ʻದಾಸʼ

    ನಟ ದರ್ಶನ್‌ ಮತ್ತೆ ʻದಿ ಡೆವಿಲ್ʼ (The Devil) ಶೂಟಿಂಗ್‌ಗೆ ಎಂಟ್ರಿ ಕೊಡಲಿದ್ದಾರೆ. ಮೈಸೂರಿನಲ್ಲಿ ಸ್ಥಗಿತಗೊಂಡಿದ್ದ ಶೂಟಿಂಗ್ ಮತ್ತೆ ಚಾಲನೆ ನೀಡಲಾಗುತ್ತಿದೆ. ಆದ್ರೆ ಡೆವಿಲ್ ಚಿತ್ರೀಕರಣ ಶುರುವಾಗುವ ಹೊತ್ತಿನಲ್ಲೇ ಆಪ್ತರಿಗೆ ಇನ್‌ಸ್ಟಾದಿಂದ ದರ್ಶನ್‌ (Darshan) ಕೊಕ್‌ ಕೊಟ್ಟಿದ್ದಾರೆ.

    ಹೌದು. ತಮ್ಮ ಇನ್‌ಸ್ಟಾಗ್ರಾಮ್‌ (Instagram) ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ದರ್ಶನ್‌ 6 ಜನರನ್ನ ಫಾಲೋ ಮಾಡ್ತಾ ಇದ್ದರು. ಮದರ್‌ ಇಂಡಿಯಾ ಸುಮಲತಾ ಅಂಬರೀಶ್, ಸಹೋದರ ಸಮಾನರಾದ ಅಭಿಷೇಕ್ ಅಂಬರೀಶ್, ಅಭಿಷೇಕ್ ಪತ್ನಿ ಅವಿವಾ, ಅಧಿಕೃತ ಫ್ಯಾನ್ಸ್ ಪೇಜ್ ಡಿ ಕಂಪೆನಿ ಮತ್ತು ಸಹೋದರ ದಿನಕರ್ ಮತ್ತು ಪುತ್ರ ವಿನೀಶ್ ಅವರನ್ನು ಫಾಲೋ ಮಾಡ್ತಿದ್ದರು. ಈಗ ಯಾರನ್ನೂ ದರ್ಶನ್ ಫಾಲೋ ಮಾಡ್ತಿಲ್ಲ. ಫಾಲೋ ಮಾಡುವವರ ಸಂಖ್ಯೆ ʻ0ʼ ಆಗಿದೆ. ಆದ್ರೆ ಇಂಥ ನಿರ್ಧಾರಕ್ಕೆ ಕಾರಣ ಏನು ಅಂತ ದರ್ಶನ್‌ ಫ್ಯಾನ್ಸ್‌ ತಲೆ ಕೆಡಿಸಿಕೊಂಡಿದ್ದಾರೆ.

    ಮಾರ್ಚ್ 12ರಿಂದ 15ರ ವರೆಗೆ ಮೈಸೂರಿನಲ್ಲಿ ‘ದಿ ಡೆವಿಲ್’ ಚಿತ್ರದ ಶೂಟಿಂಗ್ ಮಾಡಲು ಅನುಮತಿ ಸಿಕ್ಕಿದೆ. ಮಾ.12ರಿಂದ ಮಾ.14ರವರೆಗೆ ಸರ್ಕಾರಿ ಅಥಿತಿ ಗೃಹದಲ್ಲಿ ಚಿತ್ರತಂಡ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಶೂಟಿಂಗ್ ಮಾಡಲಿದ್ದಾರೆ. ಮಾ.15ರಂದು ಲಲಿತಮಹಲ್ ಪ್ಯಾಲೆಸ್‌ನಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಲಾಗಿದೆ.

    ಕಾನೂನು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದಾರೆ. ಒಂದು ಪಾಳಿಯಲ್ಲಿ 10 ಮಂದಿ ಪೊಲೀಸ್ ಸಿಬ್ಬಂದಿಯಂತೆ ಒಟ್ಟು 32 ಸಿಬ್ಬಂದಿ ಶೂಟಿಂಗ್ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ನಟನ ಭದ್ರತೆಗಾಗಿ ಸಿಬ್ಬಂದಿ ನಿಯೋಜಿಸಲು 1,64,785 ರೂ. ‘ದಿ ಡೆವಿಲ್’ ಚಿತ್ರತಂಡ ಪಾವತಿಸಿದೆ.

  • ಇನ್‌ಸ್ಟಾಗ್ರಾಂ ಪ್ರೇಯಸಿ ಆತ್ಮಹತ್ಯೆ ಕೇಸ್ – ಪ್ರಿಯಕರ ಅರೆಸ್ಟ್

    ಇನ್‌ಸ್ಟಾಗ್ರಾಂ ಪ್ರೇಯಸಿ ಆತ್ಮಹತ್ಯೆ ಕೇಸ್ – ಪ್ರಿಯಕರ ಅರೆಸ್ಟ್

    ದಾರವಾಡ: ಇನ್‌ಸ್ಟಾಗ್ರಾಂ (Instagram) ಲವ್‍ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ಗೃಹಿಣಿಯ ಪ್ರಿಯಕರನನ್ನು ಧಾರವಾಡ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಧಾರವಾಡದ (Dharwad) ಶಿವಳ್ಳಿ ಗ್ರಾಮದ ವಿಜಯ್ ನಾಯ್ಕರ್ ಎಂದು ಗುರುತಿಸಲಾಗಿದೆ. ಈತ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಶ್ವೇತಾ (23) ವಿಚ್ಛೇದನಕ್ಕೆ (Divorce) ಕಾರಣನಾಗಿದ್ದ. ಮಹಿಳೆ ಪತಿಯನ್ನು ಬಿಟ್ಟು ಬಂದು ಧಾರವಾಡದ ಶ್ರೀನಗರದಲ್ಲಿ ರೂಮ್ ಮಾಡಿಕೊಂಡಿದ್ದಳು. ಆಕೆ ಕಳೆದ ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದನ್ನೂ ಓದಿ: ಇನ್‌ಸ್ಟಾಗ್ರಾಂ ಪ್ರೀತಿ ತಂದ ಫಜೀತಿ – ಪತಿ ಬಿಟ್ಟು ಬಂದಿದ್ದ ಗೃಹಿಣಿ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ

    ಶ್ವೇತಾ ನೇಣಿಗೆ ಶರಣಾಗುವ ಮುನ್ನ, ನನ್ನ ಸಾವಿಗೆ ನಾನೇ ಕಾರಣ ಎಂದು ಕೈಯಲ್ಲಿ ಬರೆದುಕೊಂಡಿದ್ದಳು. ಆಕೆಯನ್ನು ಆರೋಪಿ ಮದುವೆಯಾಗುವುದಾಗಿ ನಂಬಿಸಿದ್ದ. ಆದರೆ ವಿಜಯ್ ಕುಟುಂಬ ಒಪ್ಪದ ಕಾರಣ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಧಾರವಾಡ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

    ಶ್ವೇತಾ ಕುಟುಂಬದವರು ಧಾರವಾಡ ಉಪನಗರ ಠಾಣೆಯಲ್ಲಿ ವಿಜಯ್ ನಾಯ್ಕರ್ ವಿರುದ್ಧ ದೂರು ದಾಖಲಿಸಿದ್ದರು. ಇದನ್ನೂ ಓದಿ: ಹುಬ್ಬಳ್ಳಿ | ಬೀಗ ಮುರಿದು ರಾಷ್ಟ್ರೀಕೃತ ಬ್ಯಾಂಕ್ ದರೋಡೆಗೆ ಯತ್ನ