Tag: Instagram Post

  • ನನ್ನ ಕಣ್ಣಿಗೆ ಸೇಬು ಹಣ್ಣಿನಂತೆ ಕಾಣುವಿರಿ, ಚಿಯರ್ಸ್ ಪಪ್ಪಾ: ರವೀನಾ ಟಂಡನ್

    ನನ್ನ ಕಣ್ಣಿಗೆ ಸೇಬು ಹಣ್ಣಿನಂತೆ ಕಾಣುವಿರಿ, ಚಿಯರ್ಸ್ ಪಪ್ಪಾ: ರವೀನಾ ಟಂಡನ್

    ಮುಂಬೈ: ಬಾಲಿವುಡ್ ನಟಿ ರವೀನಾ ಟಂಡನ್ ತಮ್ಮ ತಂದೆ ರವಿ ಟಂಡನ್ ಅವರ ಜನ್ಮದಿನದ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಥ್ರೋಬ್ಯಾಕ್ ಪೋಸ್ಟ್‌ವೊಂದನ್ನು ಮಾಡಿದ್ದು, ಅದಕ್ಕೆ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

    ಹುಟ್ಟುಹಬ್ಬದ ಶುಭಾಶಯಗಳು ಪಪ್ಪಾ. ನನ್ನ ಜೀವನದಲ್ಲಿ ಮತ್ತೆಂದೂ ಇದೇ ರೀತಿ ನಿಮ್ಮ ಜನ್ಮದಿನದ ಆಚರಣೆಯನ್ನು ಆಚರಿಸಲು ಆಗುವುದಿಲ್ಲ. ನೀವು ಯಾವಾಗಲೂ ನನ್ನ ಕಣ್ಣಿಗೆ ಸೇಬು ಹಣ್ಣಿನಂತೆ ಕಾಣುವಿರಿ. ಚಿಯರ್ಸ್ ಎಂದು ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಜ್ಯೂ.ಎನ್‍ಟಿಆರ್ ಜೊತೆ ನಟಿಸಲು ಇಷ್ಟ ಎಂದ ಪದ್ಮಾವತಿ

    ಭಾವುಕ ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ ಈ ಚಿತ್ರವು ರವಿ ಟಂಡನ್ ಅವರ ಕಳೆದ ವರ್ಷದ ಹುಟ್ಟುಹಬ್ಬದ ಚಿತ್ರವಾಗಿದೆ. ಚಿತ್ರದಲ್ಲಿ ರವಿ ಟಂಡನ್ ಅವರು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಅವರ ಹುಟ್ಟುಹಬ್ಬದ ಕೇಕ್ ಅನ್ನು ನಾವು ಕಾಣಬಹುದು. ಅವರು ಹಲವು ದಿನಗಳಿಂದ ಶ್ವಾಸಕೋಶದ ಫೈಬ್ರೋಸಿಸ್‍ನಿಂದ ಬಳಲುತ್ತಿದ್ದು, ಉಸಿರಾಟದ ವೈಫಲ್ಯದಿಂದ 86 ವರ್ಷದ ರವಿ ಅವರು ಇದೇ ಫೆಬ್ರವರಿ 11 ರಂದು ನಿಧನರಾದರು. ಇದನ್ನೂ ಓದಿ: ರವೀನಾ ಟಂಡನ್ ತಂದೆ ಖ್ಯಾತ ನಿರ್ದೇಶಕ ‘ರವಿ ಟಂಡನ್’ ನಿಧನ

     

    ರವಿ ಟಂಡನ್ ಅವರು ಖೇಲ್ ಖೇಲ್ ಮೇ, ಅನ್ಹೋನಿ, ನಜ್ರಾನಾ, ಮಜ್ಬೂರ್, ಖುದ್-ದಾರ್ ಮತ್ತು ಜಿಂದಗಿ ಸಿನಿಮಾಗಳನ್ನು ನಿರ್ದೇಶಿಸಿದ್ದು, ಈ ಮೂಲಕ ಬಾಲಿವುಡ್ ನಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದರು. ರವೀನಾ ಟಂಡನ್ ಸಹ ಬಾಲಿವುಡ್ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ರವೀನಾ ಅವರು ಚಂದನವನದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ 2 ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಮಾಡಿದ್ದಾರೆ.

  • ವೀಡಿಯೋ: ಏರ್‌ ಪೋರ್ಟ್‍ನಲ್ಲಿ ಸ್ವಾಗತಿಸಲು ಬಂದ ಮಗನಿಗೆ ಚಪ್ಪಲಿಯಲ್ಲಿ ಹೊಡೆದ ತಾಯಿ!

    ವೀಡಿಯೋ: ಏರ್‌ ಪೋರ್ಟ್‍ನಲ್ಲಿ ಸ್ವಾಗತಿಸಲು ಬಂದ ಮಗನಿಗೆ ಚಪ್ಪಲಿಯಲ್ಲಿ ಹೊಡೆದ ತಾಯಿ!

    ವಾಷಿಂಗ್ಟ್‍ನ್: ತಾಯಿಯೊಬ್ಬರು ವಿಮಾನ ನಿಲ್ದಾಣದಲ್ಲಿ ತನ್ನ ಮಗನಿಗೆ ಚಪ್ಪಲಿಯಿಂದ ಹೊಡೆದಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

    ಈ ವೀಡಿಯೋವನ್ನು ಅನ್ವರ್ ಎಂಬವರು ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಾಕಿಕೊಂಡಿದ್ದು, ಈ ವೀಡಿಯೋಗೆ ‘ಮೈ ಮದರ್ ಈಸ್ ಬ್ಯಾಕ್’ ಎಂಬ ಶೀರ್ಷಿಕೆಯನ್ನು ಕೊಟ್ಟಿದ್ದಾರೆ.

    ವೀಡಿಯೋದಲ್ಲಿ ಏನಿದೆ?: ಮಗನೊಬ್ಬ ತಾಯಿಯನ್ನು ಕರೆದುಕೊಂಡು ಬರಲು ಏರ್‌ ಪೋರ್ಟ್‍ಗೆ ಬಂದಿದ್ದಾನೆ. ಜೊತೆಗೆ ಕೈಯಲ್ಲಿ ಹೂಗುಚ್ಛ ಹಾಗೂ ನಾವು ನಿನ್ನನ್ನು ತುಂಬಾ ನೆನಪಿಸಿಕೊಳ್ಳುತ್ತಿದ್ದೆವು ಅಮ್ಮಾ ಎನ್ನುವ ಪೊಸ್ಟರ್ ನ್ನು ಹಿಡಿದುಕೊಂಡಿದ್ದಾನೆ. ಈ ರೀತಿ ಅಮ್ಮನನ್ನು ಸ್ವಾಗತಿಸಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದನು. ಆದರೆ ಅವನ ತಾಯಿ ಏರ್‌ ಪೋರ್ಟ್‍ನಿಂದ ಹೊರ ಬಂದು ಮಗನನ್ನು ನೋಡಿದ ತಕ್ಷಣ ಅವನಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಇದನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ವೀಡಿಯೋ ಮಾಡಿಕೊಂಡಿದ್ದು, ಈ ವೀಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by Anwar Jibawi (@anwar)

    ಈ ವೀಡಿಯೋವನ್ನು 133 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಹಾಗೆಯೇ 6.2ಲಕ್ಷಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ. ಹಾಗೂ 60 ಸಾವಿರಕ್ಕೂ ಅಧಿಕ ಕಾಮೆಂಟ್‍ಗಳು ಬಂದಿವೆ. ಇದನ್ನೂ ಓದಿ:   ಉದ್ಘಾಟನೆ ವೇಳೆ ಒಡೆದ ತೆಂಗಿನಕಾಯಿಂದ ಬಿರುಕು ಬಿಟ್ಟ 1.16ಕೋಟಿ ರೂ. ವೆಚ್ಚದ ರಸ್ತೆ!

    ನೆಟ್ಟಿಗರು ಈ ವೀಡಿಯೋಕ್ಕೆ ಫನ್ನಿ ಕಾಮೆಂಟ್ ಗಳನ್ನು ನೀಡಿದ್ದಾರೆ. ಈ ವೀಡಿಯೋವನ್ನು ನೋಡಿದ ಒಬ್ಬರು ಕಾಮೆಂಟ್ ಮಾಡಿ ತಾಯಿಯು ತನ್ನ ಪ್ರೀತಿಯನ್ನು ಸರಿಯಾದ ದಾರಿಯಲ್ಲಿ ತೋರಿಸಿದ್ದಾರೆ. ಹೀಗೆ ಹಲವಾರು ರೀತಿಯ ಕಾಮೆಂಟ್ ಗಳು ಬಂದಿವೆ.  ಇದನ್ನೂ ಓದಿ: ಜನವರಿ 1 ರಿಂದ ಎಟಿಎಂ ಶುಲ್ಕ ಹೆಚ್ಚಳ

  • ಜಗತ್ತು ಸಾಧನೆಯನ್ನು ಕಂಡಿದೆ, ನಾನು ವ್ಯಕ್ತಿಯನ್ನು ನೋಡಿದ್ದೇನೆ – ಧೋನಿ ಬಗ್ಗೆ ಕೊಹ್ಲಿ ಮಾತು

    ಜಗತ್ತು ಸಾಧನೆಯನ್ನು ಕಂಡಿದೆ, ನಾನು ವ್ಯಕ್ತಿಯನ್ನು ನೋಡಿದ್ದೇನೆ – ಧೋನಿ ಬಗ್ಗೆ ಕೊಹ್ಲಿ ಮಾತು

    ನವದೆಹಲಿ: ಜಗತ್ತು ಸಾಧನೆಯನ್ನು ಕಂಡಿದೆ, ನಾನು ವ್ಯಕ್ತಿಯನ್ನು ನೋಡಿದ್ದೇನೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ ಮಾಜಿ ನಾಯಕ ಎಂಎಸ್ ಧೋನಿಯ ಬಗ್ಗೆ ಪೋಸ್ಟ್ ಹಾಕಿಕೊಂಡಿದ್ದಾರೆ.

    ಭಾರತ ಕ್ರಿಕೆಟ್ ತಂಡಕ್ಕಾಗಿ 15 ವರ್ಷಗಳ ಕಾಲ ಆಟವಾಡಿದ ಚಾಣಾಕ್ಷ ಆಟಗಾರ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ. ಈ ವಿಚಾರವಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ವಿರಾಟ್ ಕೊಹ್ಲಿ ಅವರು, ಧೋನಿಯನ್ನು ಹಾಡಿ ಹೊಗಳಿದ್ದಾರೆ.

    https://www.instagram.com/p/CD6lUbcluL6/?utm_source=ig_embed

    ಎಲ್ಲ ಕ್ರಿಕೆಟರ್ ಗಳು ಒಂದು ದಿನ ತನ್ನ ಪ್ರಯಾಣವನ್ನು ಮುಗಿಸಲೇಬೇಕು. ಆದರೆ ಕೆಲವರು ನಿವೃತ್ತಿ ಘೋಷಣೆ ಮಾಡಿದಾಗ ಬಹಳ ನೋವಾಗುತ್ತದೆ. ನೀವು ದೇಶಕ್ಕಾಗಿ ಮಾಡಿದ ಸಾಧನೆ ಮತ್ತು ಕೆಲಸ ಎಲ್ಲರ ಹೃದಯದಲ್ಲಿ ಹಾಗೇ ಉಳಿದಿದೆ. ಜೊತೆಗೆ ನೀವು ಕೊಟ್ಟ ವೈಯಕ್ತಿಕ ಗೌರವ ಮತ್ತು ಪ್ರೀತಿ ನನ್ನಲ್ಲೇ ಉಳಿದಿದೆ. ಜಗತ್ತು ಸಾಧನೆಯನ್ನು ಕಂಡಿದೆ, ನಾನು ವ್ಯಕ್ತಿಯನ್ನು ನೋಡಿದ್ದೇನೆ. ನೀವು ಮಾಡಿದ ಎಲ್ಲ ಕೆಲಸಕ್ಕೂ ಧನ್ಯವಾದಗಳು ನಾಯಕ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.

    38 ವರ್ಷದ ಎಂ.ಎಸ್.ಧೋನಿ 2019ರ ವಿಶ್ವ ಕಪ್‍ನ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋಲನುಭವಿಸಿದ ಪಂದ್ಯದಲ್ಲಿ ಕೊನೆಯದಾಗಿ ಆಟವಾಡಿದ್ದರು. 2014ರಲ್ಲಿ ಧೋನಿ ಟೆಸ್ಟ್ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು. ಧೋನಿ ಈವರೆಗೆ 350 ಏಕದಿನ ಹಾಗೂ 98 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಸದ್ಯ ಮುಂದಿನ ತಿಂಗಳು ಯುಎಇಯಲ್ಲಿ ಆರಂಭವಾಗಲಿರುವ ಐಪಿಎಲ್-2020ಯಲ್ಲಿ ಧೋನಿಯವರು ಆಡಲಿದ್ದಾರೆ.

    350 ಏಕದಿನ ಪಂದ್ಯಗಳಲ್ಲಿ ಧೋನಿ 10,773 ರನ್‍ಗಳನ್ನು ಕಲೆ ಹಾಕಿದ್ದಾರೆ. 10 ಶತಕಗಳನ್ನು ಬಾರಿಸಿದ್ದಾರೆ. ಅಲ್ಲದೆ, 73 ಅರ್ಧ ಶತಕ ಹೊಡೆದಿದ್ದಾರೆ. ಅಲ್ಲದೆ 98 ಟಿ-20 ಪಂದ್ಯಗಳಲ್ಲಿ 1,617 ರನ್‍ಗಳನ್ನು ಗಳಿಸಿದ್ದು, ಎರಡು ಅರ್ಧ ಶತಕ ಬಾರಿಸಿದ್ದಾರೆ.

  • ನಿಮ್ಮ ಸಾಧನೆಯ ಬಗ್ಗೆ ಹೆಮ್ಮೆ ಇದೆ: ಪತಿ ನಿವೃತ್ತಿಯ ಬಗ್ಗೆ ಭಾವನಾತ್ಮಕ ಸಾಲು ಬರೆದ ಸಾಕ್ಷಿ

    ನಿಮ್ಮ ಸಾಧನೆಯ ಬಗ್ಗೆ ಹೆಮ್ಮೆ ಇದೆ: ಪತಿ ನಿವೃತ್ತಿಯ ಬಗ್ಗೆ ಭಾವನಾತ್ಮಕ ಸಾಲು ಬರೆದ ಸಾಕ್ಷಿ

    ಮುಂಬೈ: ನಿಮ್ಮ ಸಾಧನೆಯ ಬಗ್ಗೆ ಹೆಮ್ಮೆ ಇದೆ ಎಂದು ಹೇಳುವ ಮೂಲಕ ಇನ್‍ಸ್ಟಾಗ್ರಾಮ್‍ನಲ್ಲಿ ಪತಿ ಧೋನಿಯ ಬಗ್ಗೆ ಸಾಕ್ಷಿ ಧೋನಿಯವರು ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

    ಶನಿವಾರ ಸಂಜೆ ಭಾರತದ ಮಾಜಿ ನಾಯಕ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿಯವರು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ತಮ್ಮ 15 ವರ್ಷದ ಸುದೀರ್ಘ ಕ್ರಿಕೆಟ್ ಜೀವನಕ್ಕೆ ಮಹಿ ಬ್ರೇಕ್ ಹಾಕಿದ್ದಾರೆ. ಭಾರತಕ್ಕಾಗಿ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದು ತಂದ ಚಾಣಾಕ್ಷ ನಾಯಕ ಧೋನಿ ವಿದಾಯ ಹೇಳಿ ಅವರ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

    https://www.instagram.com/p/CD60JnWHibP/?utm_source=ig_embed

    ಈಗ ಪತಿಯ ನಿವೃತ್ತಿಯ ನಂತರ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿರುವ ಸಾಕ್ಷಿ ಅವರು, ನಿಮ್ಮ ಸಾಧನೆಯ ಬಗ್ಗೆ ನೀವು ಹೆಮ್ಮೆ ಪಡಬೇಕು. ನಿಮ್ಮ ಆಟವನ್ನು ನೀವು ಉತ್ತಮವಾಗಿ ಆಡಿರುವುದಕ್ಕೆ ಶುಭಾಶಯಗಳು. ನೀವು ಮಾಡಿರುವ ಸಾಧನೆ ಮತ್ತು ನಿಮ್ಮ ವ್ಯಕ್ತಿತ್ವದ ಬಗ್ಗೆ ನನಗೆ ಹೆಮ್ಮೆ ಇದೆ. ನನಗೆ ಗೊತ್ತು ನೀವು ನಿಮ್ಮ ಫ್ಯಾಶನ್ ಆಗಿದ್ದ ಆಟಕ್ಕೆ ವಿದಾಯ ಹೇಳುವಾಗ ಸಂಕಟಪಟ್ಟಿದ್ದೀರಾ. ಕಣ್ಣೀರನ್ನು ಹಿಡಿದಿಟ್ಟುಕೊಂಡು ನಿವೃತ್ತಿ ಘೋಷಣೆ ಮಾಡಿದ್ದೀರಾ. ನಿಮಗೆ ಮುಂದೆ ಖುಷಿ, ಆರೋಗ್ಯ ಸಿಗಲಿ ಎಂದು ಬರೆದುಕೊಂಡಿದ್ದಾರೆ.

    ಜೊತೆಗೆ ಎಂಎಸ್ ಧೋನಿ ಅವರು ಸೂರ್ಯ ಮುಳುಗುವ ವೇಳೆ ಹಿಂಭಾಗವಾಗಿ ಕುಳಿತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅಮೆರಿಕಾದ ಕವಯತ್ರಿ ಮಾಯಾ ಏಂಜೆಲೊ ಬರೆದ ಒಂದು ಸಾಲನ್ನು ಕೂಡ ಬರೆದುಕೊಂಡಿದ್ದಾರೆ. “ನೀವು ಹೇಳಿದ್ದನ್ನು ಜನರು ಮರೆತುಬಿಡುತ್ತಾರೆ. ನೀವು ಮಾಡಿದ್ದನ್ನು ಜನರು ಮರೆತುಬಿಡುತ್ತಾರೆ. ಆದರೆ ನೀವು ಅವರಿಗೆ ಫೀಲ್ ಮಾಡಿಸಿದ್ದನ್ನು ಜನರು ಎಂದಿಗೂ ಮರೆಯುವುದಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.

    ಕಳೆದ ವಿಶ್ವಕಪ್ ಸೈಮಿ ಫೈನಲ್ ಪಂದ್ಯದ ನಂತರ ಕ್ರಿಕೆಟ್‍ನಿಂದ ದೂರ ಉಳಿದಿದ್ದ ಧೋನಿಯವರು, ವಿದಾಯ ಘೋಷಿಸುವ ಯಾವುದೇ ಸುಳಿವನ್ನು ನೀಡಿರಲಿಲ್ಲ. ಆದರೆ ಶನಿವಾರ ಸಂಜೆ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ವಿದಾಯ ಸುದ್ದಿ ನೀಡಿದ್ದಾರೆ. ಈ ಮೂಲಕ ಧೋನಿಯನ್ನು ಮತ್ತೆ ನೀಲಿ ಜೆರ್ಸಿಯಲ್ಲಿ ನೋಡ ಬಯಸಿದ್ದ ಅವರ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಆದರೆ ಅವರು ಈ ಬಾರಿಯ ಐಪಿಎಲ್‍ನಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಅಭಿಮಾನಿಗಳು ಧೋನಿಯನ್ನು ಮೈದಾನದಲ್ಲಿ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

  • 2 ದಿನ ಸೋಶಿಯಲ್ ಮೀಡಿಯಾ ಓಪನ್ ಮಾಡಲು ಹಿಂಜರಿದೆ: ಅನುಶ್ರೀ

    2 ದಿನ ಸೋಶಿಯಲ್ ಮೀಡಿಯಾ ಓಪನ್ ಮಾಡಲು ಹಿಂಜರಿದೆ: ಅನುಶ್ರೀ

    ಬೆಂಗಳೂರು: ಈ ಎರಡು ದಿನ ಸೋಶಿಯಲ್ ಮೀಡಿಯಾ ಓಪನ್ ಮಾಡಲು ಹಿಂಜರಿದೆ. ನ್ಯೂಸ್ ನೋಡಲು ಅಂಜಿದೆ ಎಂದು ಕನ್ನಡದ ನಟಿ ಮತ್ತು ನಿರೂಪಕಿ ಅನುಶ್ರೀ ಅವರು ಹೇಳಿದ್ದಾರೆ.

    ಹೃದಯಾಘಾತದಿಂದ ಭಾನುವಾರ ಸಾವನ್ನಪ್ಪಿದ ನಟ ಚಿರಂಜೀವಿ ಸರ್ಜಾ ಅವರ ಬಗ್ಗೆ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಅನುಶ್ರೀ, ಚಿರು ಸಾವಿನ ನಂತರ ನನಗೆ ಸೋಶಿಯಲ್ ಮೀಡಿಯಾ ನೋಡಲು ಆಗುತ್ತಿರಲಿಲ್ಲ. ನ್ಯೂಸ್ ಕೂಡ ನೋಡಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಚಿರು ಸ್ವಭಾವದ ಬಗ್ಗೆ ಮಾತನಾಡಿದ್ದಾರೆ.

    https://www.instagram.com/p/CBMsVaLHTYL/

    ಚಿರು ವಿಚಾರವಾಗಿ ತಮ್ಮ ಇನ್‍ಸ್ಟಾದಲ್ಲಿ ಬರೆದುಕೊಂಡಿರುವ ಅನುಶ್ರೀ, ಈ ಎರಡು ದಿನ ಸೋಶಿಯಲ್ ಮೀಡಿಯಾ ಓಪನ್ ಮಾಡಲು ಹಿಂಜರಿದೆ. ನ್ಯೂಸ್ ನೋಡಲು ಅಂಜಿದೆ. ಕಾರಣ ಚಿರ ನಿದ್ರೆಗೆ ಜಾರಿದ ಚಿರು ನೋಡಲು ಆಗದೆ. ದೇವರ ಆಟ ಬಲ್ಲವರಾರು. ಹೌದು ಆದರೆ ಈ ಆಟಗಾರ ಬಹಳ ಬೇಗ ಅಗಲಿದ. ಸದಾ ನಗುವ ನಗಿಸುವ, ಕಿಂಚಿತ್ತೂ ಬೇರೆಯವರ ಬಗ್ಗೆ ಅಸೂಯೆ ಪಡದ ಚಿರುವನ್ನು ಆ ಬಾಕ್ಸ್ ನಲ್ಲಿ ನೋಡಿದಾಗ ವಿವರಿಸಲಾಗದ ಸಂಕಟ ಎಂದು ಬರೆದುಕೊಂಡಿದ್ದಾರೆ.

    ಜೊತೆಗೆ ಈಗ ಎಲ್ಲೆಡೆ ಹಾಗೆ ಮಾಡಿದ್ದರೆ ಹೀಗೆ ಆಗುತಿತ್ತು ಹೀಗೆ ಮಾಡಬೇಕಿತ್ತು ಅನ್ನೋ ನೂರಾರು ಊಹಾಪೋಹಗಳು. ಆದರೆ ಅವನನ್ನು ಅರಿತವರು ಈ ಭಾವಚಿತ್ರದಲ್ಲಿರೋ ಗೆಳೆಯರೆಲ್ಲರಿಗೂ ಗೊತ್ತು ಆತ ಎಷ್ಟು ಕೂಲ್ ಹುಡುಗ ಅಂತ. ಯಾವ ಕಾರಣಗಳು ಅವನನ್ನು ಮತ್ತೆ ತರಲು ಸಾಧ್ಯವೇ? ಅವನ ಆತ್ಮಕ್ಕೆ ಶಾಂತಿ ಸಿಗಲಿ. ಮೇಘನಾ ಹಾಗೂ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಆ ದೇವರು ಧೈರ್ಯ ಕೊಡಲಿ. ದೇವರೇ ಇನ್ನೆಂದು ಇಂತ ಸ್ನೇಹ ಜೀವಿಯನ್ನ ಇಷ್ಟು ಬೇಗ ಕರೆಯಬೇಡ ಎಂದು ನೋವಿನಲ್ಲಿ ಹೇಳಿದ್ದಾರೆ.

    ಭಾನುವಾರ ಮಧ್ಯಾಹ್ನದ ವೇಳೆಯಲ್ಲೂ ಚೆನ್ನಾಗಿದ್ದ ಚಿರು 2 ಗಂಟೆಯ ಸಮಯಕ್ಕೆ ಉಸಿರಾಟದ ತೊಂದರೆ ಮತ್ತು ಎದೆನೋವು ಎಂದು ಮನೆಯಲ್ಲಿ ಕುಸಿದು ಬಿದ್ದಿದ್ದರು. ಅವರನ್ನು ತಕ್ಷಣ ಅಪೊಲೋ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ವೈದ್ಯರು ಎಷ್ಟೇ ಪ್ರಯತ್ನಿಸಿದ್ದರು ಚಿರು ಚಿಕಿತ್ಸೆಗೆ ಸ್ಪಂದಿಸಿರಲ್ಲಿ. ಹೀಗಾಗಿ 3.48ರ ಸುಮಾರಿಗೆ ಚಿರು ಇಹಲೋಕ ತ್ಯಜಿಸಿದ್ದರು. ರಾಮನಗರದ ಧ್ರುವ ಸರ್ಜಾ ತೋಟದ ಮನೆಯಲ್ಲಿ ಸೋಮವಾರ ಮಣ್ಣಲ್ಲಿ ಮಣ್ಣಾಗಿ ಹೋದರು.

    ತನ್ನ 39ನೇ ವಯಸ್ಸಿಗೆ ಬಾರದ ಲೋಕಕ್ಕೆ ತೆರಳಿದ ಚಿರಂಜೀವಿ ಸರ್ಜಾ ಅವರ ಸಾವಿಗೆ ಇಡೀ ಕನ್ನಡ ಚಿತ್ರರಂಗವೇ ಕಂಬನಿ ಮಿಡಿದಿತ್ತು. ಚಂದವನದ ಹಿರಿಯ-ಕಿರಿಯ ಕಲಾವಿದರೆಲ್ಲ ಯುವ ಸಾಮ್ರಾಟನ ಸಾವಿಗೆ ಸಂತಾಪ ಸೂಚಿಸಿದ್ದರು. ಜೊತೆಗೆ ಬೇರೆ ಭಾಷೆಯ ಕಲಾವಿದರೂ ಕೂಡ ಚಿರು ಸಾವಿಗೆ ಮರುಗಿದ್ದರು. ಸ್ಯಾಂಡಲ್‍ವುಡ್‍ನಲ್ಲಿ 22ಕ್ಕೂ ಅಧಿಕ ಚಿತ್ರದಲ್ಲಿ ನಟಿಸಿ ಭರವಸೆಯ ನಾಯಕನಾಗಿ ಗುರುತಿಸಿಕೊಂಡಿದ್ದ ಚಿರು ವಿಧಿಯಾಟಕ್ಕೆ ಸೋತು ಬಾರದ ಲೋಕಕ್ಕೆ ತೆರಳಿದ್ದಾರೆ.

  • ಪ್ರೀತಿ ಒಪ್ಪಿಕೊಂಡ ಗೊಂಬೆಗೆ ಥ್ಯಾಂಕ್ಸ್ ಹೇಳಿದ ಚಂದನ್ ಶೆಟ್ಟಿ

    ಪ್ರೀತಿ ಒಪ್ಪಿಕೊಂಡ ಗೊಂಬೆಗೆ ಥ್ಯಾಂಕ್ಸ್ ಹೇಳಿದ ಚಂದನ್ ಶೆಟ್ಟಿ

    ಬೆಂಗಳೂರು: ಯುವ ದಸರಾ ವೇದಿಕೆ ಮೇಲೆ ನಿವೇದಿತಾ ಗೌಡ ತಮ್ಮ ಪ್ರೀತಿಯನ್ನು ಒಪ್ಪಿಕೊಂಡಿದ್ದಕ್ಕೆ ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ಫುಲ್ ಖುಷಿಯಲ್ಲಿದ್ದು, ನನ್ನ ಪ್ರೀತಿಯನ್ನು ಒಪ್ಪಿಕೊಂಡಿದ್ದಕ್ಕೆ ಧನ್ಯವಾದ ಎಂದು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

    ನಾನು ಎಂದೆಂದಿಗೂ ನಿನ್ನನ್ನು ಪ್ರೀತಿಸುತ್ತೇನೆ, ನನ್ನ ಪ್ರೀತಿಯನ್ನು ಒಪ್ಪಿಕೊಂಡಿದ್ದಕ್ಕೆ ಧನ್ಯವಾದ. ಜೊತೆಗೆ ನಮ್ಮ ಪ್ರೀತಿಗೆ ಬೆಂಬಲಿಸಿ, ಆಶೀರ್ವದಿಸಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತಿದ್ದೇನೆ ಎಂದು ಬರೆದು ತಾವು ಯುವ ದಸರಾ ವೇದಿಕೆ ಮೇಲೆ ನಿವೇದಿತಾಗೆ ಪ್ರಪ್ರೋಸ್ ಮಾಡುತ್ತಿರುವ ಫೋಟೋ ಹಾಕಿ ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದನ್ನೂ ಓದಿ: ಯುವದಸರಾ ವೇದಿಕೆಯಲ್ಲಿ ಒಂದಾದ ಬಿಗ್‍ಬಾಸ್ ಜೋಡಿ – ನಿವೇದಿತ ಗೌಡಗೆ ಉಂಗುರ ತೊಡಿಸಿದ ಚಂದನ್ ಶೆಟ್ಟಿ

    https://www.instagram.com/p/B3RqeK7FNMR/

    ಈ ಪೋಸ್ಟ್ ಗೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಅಭಿಮಾನಿಗಳು ಕಮೆಂಟ್ ಮಾಡಿ ಕ್ಯೂಟ್ ಜೋಡಿಗೆ ಶುಭಕೋರಿದ್ದಾರೆ. ಕೆಲವರು ಯಾರು ಏನೇ ಹೇಳಿದರು ತಲೆಕೆಡಿಸಿಕೊಳ್ಳಬೇಡಿ, ನಿಮ್ಮ ಜೋಡಿ ಸೂಪರ್ ಎಂದು ಕಮೆಂಟ್ ಮಾಡಿ ಸಪೋರ್ಟ್ ಮಾಡಿದ್ದಾರೆ. ಇದನ್ನೂ ಓದಿ: ವೇದಿಕೆ ಮೇಲೆ ಮದುವೆ ಆಗಿದ್ರೆ ತಪ್ಪು ಅಂತ ಒಪ್ಪಿಕೊಳ್ಳುತ್ತಿದ್ದೆ: ನಿವೇದಿತಾ ಗೌಡ

    ಯುವ ದಸರಾ ವೇದಿಕೆಯಲ್ಲೇ ಗಾಯಕ ಚಂದನ್ ಶೆಟ್ಟಿ-ನಿವೇದಿತಾಗೌಡ ಎಂಗೇಜ್ ಆಗಿದ್ದು, ಝಗಮಗಿಸುವ ವೇದಿಕೆಯಲ್ಲಿ ನಿವೇದಿತಾಗೆ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ ಬೆರಳಿಗೆ ಉಂಗುರ ತೊಡಿಸಿ ನಿನ್ನನ್ನೇ ಮದುವೆಯಾಗುತ್ತೇನೆಂದು ಘೋಷಿಸಿಕೊಂಡಿದ್ದರು. ಸಾವಿರಾರು ಪ್ರೇಕ್ಷಕರ ಸಮ್ಮುಖದಲ್ಲಿ ಪ್ರೇಮ ನಿವೇದನೆ ಮಾಡಿದ್ದು ಯುವಜನತೆ ಬಿಗ್‍ಬಾಸ್ ಜೋಡಿಗೆ ಜೈಕಾರ ಹಾಕಿದ್ದರು.

    ವೇದಿಕೆಯಲ್ಲಿ ಚಂದನ್ ಅವರು ನಿವೇದಿತಾಗೆ ಪ್ರಪೋಸ್ ಮಾಡಿದ ಬಳಿಕ ಈ ವಿಚಾರ ಭಾರೀ ವಿವಾದಕ್ಕಿಡಾಗಿತ್ತು. ದಸರಾ ಕಾರ್ಯಕ್ರಮದ ವೇದಿಕೆಯಲ್ಲೇ ಇದು ಬೇಡವಾಗಿತ್ತು ಎಂದು ಅನೇಕರು ಖಂಡಿಸಿದ್ದರು. ಇನ್ನೂ ಕೆಲವರು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು. ಈ ಸಂಬಂಧ ಪ್ರತಿಕ್ರಿಯಿಸಿದ ಚಂದನ್, ನಾನು ಮಾಡಿರುವುದು ತಪ್ಪಾಗಿದ್ದರೆ ಕ್ಷಮಿಸಿ ಬಿಡಿ ಅಂದಿದ್ದರು. ಇತ್ತ ನಾವು ವೇದಿಕೆಯಲ್ಲಿ ಮದುವೆಯಾಗಿಲ್ಲ. ಒಂದು ವೇಳೆ ನಾವು ಅಲ್ಲಿ ಮದುವೆಯಾಗುತ್ತಿದ್ದರೆ ಅದನ್ನು ನಾನು ತಪ್ಪು ಅಂತ ಒಪ್ಪಿಕೊಳ್ಳುತ್ತಿದ್ದೆ ಎಂದು ನಿವೇದಿತಾ ಸಮರ್ಥಿಸಿಕೊಂಡಿದ್ದರು. ಇದನ್ನೂ ಓದಿ: ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಬಾರದೆಂಬ ರೂಲ್ಸ್ ಇದ್ಯಾ? ಪ್ರಮೋದ್ ಮುತಾಲಿಕ್

    ಇನ್ನೊಂದೆಡೆ ಇದು ನಮಗೆ ಸರ್ಪ್ರೈಸ್ ತಂದಿದೆ. ನಾವು ಕಾರ್ಯಕ್ರಮ ನೋಡಲೆಂದು ಹೋಗಿದ್ದೇವು ಅಷ್ಟೇ. ಅಲ್ಲಿ ಈ ರೀತಿ ಆಗಿರೋದು ಆಶ್ಚರ್ಯದ ಜೊತೆಗೆ ಖುಷಿಯನ್ನು ಕೂಡ ತಂದಿದೆ ಎಂದು ನಿವೇದಿತಾ ಪೋಷಕರು ಹೇಳಿದ್ದರು.

  • ಯೋಧರಿಗಾಗಿ ಚಪಾತಿ ಮಾಡಿಕೊಟ್ಟ ‘ಉರಿ’ ಚಿತ್ರದ ನಟ

    ಯೋಧರಿಗಾಗಿ ಚಪಾತಿ ಮಾಡಿಕೊಟ್ಟ ‘ಉರಿ’ ಚಿತ್ರದ ನಟ

    ಇಟಾನಗರ: ಬಾಲಿವುಡ್ ನಟ ವಿಕ್ಕಿ ಕೌಶಾಲ್ ಯೋಧರಿಗಾಗಿ ಚಪಾತಿ ಮಾಡಿಕೊಟ್ಟು ಅವರ ಜೊತೆ ಕಾಲ ಕಳೆದಿದ್ದಾರೆ.

    ವಿಕ್ಕಿ ಅರುಣಾಚಲ ಪ್ರದೇಶದಲ್ಲಿರುವ ತವಾಂಗ್‍ನ ಇಂಡೋ-ಚೀನಾ ಬಾರ್ಡರ್ ಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಯೋಧರಿಗಾಗಿ ಚಪಾತಿ ಮಾಡುತ್ತಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಕಿ ಅದಕ್ಕೆ, “ಮೊದಲ ಬಾರಿಗೆ ಚಪಾತಿ ಮಾಡುತ್ತಿದ್ದೇನೆ. ಅದು ಸೇನೆಗಾಗಿ ಮಾಡುತ್ತಿರುವುದು ಖುಷಿ ಇದೆ” ಎಂದು ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    The first ever roti I made… glad it was for the army.

    A post shared by Vicky Kaushal (@vickykaushal09) on

    ಗುರುವಾರ ವಿಕ್ಕಿ ಕೌಶಾಲ್ ಯೋಧರ ಜೊತೆ ಕ್ಲಿಕ್ಕಿಸಿಕೊಂಡ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕಿ ತವಾಂಗ್‍ಗೆ ಆಗಮಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಸದ್ಯ ವಿಕ್ಕಿ ಚಪಾತಿ ಮಾಡುತ್ತಿರುವ ಫೋಟೋ ನೋಡಿ ‘ಪರ್ಫೆಕ್ಟ್ ಪತಿ’, ‘ನನ್ನನ್ನು ಮದುವೆಯಾಗಿ’ ಎಂದು ಕಮೆಂಟ್ ಮಾಡುತ್ತಿದ್ದಾರೆ.

    ಕೊನೆಯದಾಗಿ ವಿಕ್ಕಿ ಕೌಶಾಲ್ ‘ಉರಿ- ದಿ ಸರ್ಜಿಕಲ್ ಸ್ಟೈಕ್’ ಚಿತ್ರದಲ್ಲಿ ನಟಿಸಿದ್ದರು. ಈಗ ಅವರು ಭಾರತೀಯ ಸೇನೆಯ ಮೇಜರ್ ವಿಹಾನ್ ಸಿಂಗ್ ಶೇರ್‍ಗಿಲ್ ಅವರ ಜೀವನಚರಿತ್ರೆಯಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಯಾಮಿ ಗೌತಮ್, ಪರೇಶ್ ರವಲ್ ಹಾಗೂ ಮೋಹಿತ್ ರೈನಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.