Tag: instagram

  • ಡಿವೋರ್ಸ್ ಪಡೆದು ದೀರ್ಘಕಾಲದ ಬಳಿಕ ಫ್ಯಾಷನ್‌ ಬ್ಯೂಟಿಯೊಂದಿಗೆ ಪಾಂಡ್ಯ ಲವ್ವಿ ಡವ್ವಿ – ಯಾರು ಈ ಸುಂದ್ರಿ?

    ಡಿವೋರ್ಸ್ ಪಡೆದು ದೀರ್ಘಕಾಲದ ಬಳಿಕ ಫ್ಯಾಷನ್‌ ಬ್ಯೂಟಿಯೊಂದಿಗೆ ಪಾಂಡ್ಯ ಲವ್ವಿ ಡವ್ವಿ – ಯಾರು ಈ ಸುಂದ್ರಿ?

    ನಟಿ ನತಾಶಾ (Natasa) ಅವರಿಂದ ವಿಚ್ಛೇದನ ಪಡೆದು ದೀರ್ಘಕಾಲದ ಬಳಿಕ ಮತ್ತೆ ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ (Hardik Pandya) ಲವ್‌ನಲ್ಲಿ ಬಿದ್ದಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಹುಟ್ಟಿಕೊಳ್ತಿದ್ದಂತೆ ಇನ್‌ಸ್ಟಾದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಪಾಂಡ್ಯ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಜೊತೆಗೆ ತಮ್ಮ ಹೊಸ ಗರ್ಲ್‌ಫ್ರೆಂಡ್‌ ಯಾರು ಅನ್ನೋದನ್ನೂ ಬಹಿರಂಗಪಡಿಸಿದ್ದಾರೆ.

    ಟಿ20 ಏಷ್ಯಾಕಪ್‌ ಟೂರ್ನಿ ಬಳಿಕ ರಿಲ್ಯಾಕ್ಸ್‌ ಮೂಡ್‌ನಲ್ಲಿರುವ ಪಾಂಡ್ಯ, ಹೊಸ ಗರ್ಲ್‌ಫ್ರೆಂಡ್‌ ಮಹೀಕಾ ಶರ್ಮಾ (Mahieka Sharma) ಅವರೊಂದಿಗೆ ಹಾಲಿಡೇಸ್‌ ಎಂಜಾಯ್‌ ಮಾಡ್ತಿದ್ದಾರೆ. ಈ ವೇಳೆ ಬೀಚ್‌ ಎದುರು ಹಾಗೂ ನೈಟ್‌ ಔಟ್‌ ವೇಳೆ ತೆಗೆದ ಫೋಟೋಗಳನ್ನ ಪಾಂಡ್ಯ ಹಂಚಿಕೊಂಡಿದ್ದು, ಮಹೀಕಾ ಅವರಿಗೂ ಟ್ಯಾಗ್‌ ಮಾಡಿದ್ದಾರೆ. ಇದನ್ನೂ ಓದಿ: ಎರಡೂವರೆ ಗಂಟೆ ಕಾರು ಚಲಾಯಿಸಿಕೊಂಡು ಹೋಗಿ ‘ಕಾಂತಾರ ಚಾಪ್ಟರ್‌ 1’ ನೋಡಿದ ಅಟ್ಲೀ

    ಮೊದಲ ಫೋಟೋದಲ್ಲಿ ಪಾಂಡ್ಯ, ಮಹೀಕಾ ಅವರ ಹೆಗಲ ಮೇಲೆ ರೊಮ್ಯಾಂಟಿಕ್‌ ಆಗಿ ಕೈ ಹಾಕಿಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಇಬ್ಬರು ನೈಟ್‌ಔಟ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. ಮಹೀಕಾ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ರೆ, ಪಾಂಡ್ಯ ಸಿಂಪಲ್ಲಾಗಿ ಡ್ರೆಸ್‌ ಮಾಡಿಕೊಂಡಿದ್ದಾರೆ. ಫೋಟೋಗಳಿಗೆ ಪಾಂಡ್ಯ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡಿವೋರ್ಸ್ ಬೆನ್ನಲ್ಲೇ ಬ್ರಿಟಿಷ್‌ ಬ್ಯೂಟಿಯೊಂದಿಗೆ ಪಾಂಡ್ಯ ಲವ್ವಿ ಡವ್ವಿ – ಯಾರು ಈ ಸುಂದರಿ?

    ಯಾರು ಈ ಬ್ಯೂಟಿ?
    ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿರುವ ಮಹೀಕಾ ಶರ್ಮಾ, ಫ್ಯಾಷನ್‌ ಉದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಐಎಫ್‌ಎ ಮಾಡೆಲ್‌ ಆಫ್‌ ದಿ ಇಯರ್‌ ಹಾಗೂ ಎಲ್ಲೆ ಮಾಡೆಲ್‌ ಆಫ್‌ ದಿ ಸೀಸನ್‌ ಪ್ರಶಸ್ತಿಗಳನ್ನು ಮಹೀಕಾ ಮುಡಿಗೇರಿಸಿಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಆಗಿರುವ ಮಹೀಕಾ ಶರ್ಮಾ ಇನ್‌ಸ್ಟಾದಲ್ಲಿ 1.47 ಲಕ್ಷ ಫಾಲೋವರ್ಸ್‌ ಹೊಂದಿದ್ದಾರೆ. ಇದನ್ನೂ ಓದಿ: ಹನಿಮೂನ್‌ಗೆ ಫಿಕ್ಸ್‌ ಮಾಡೋದನ್ನೂ ಕಾಯ್ತಿದ್ದೀನಿ – ಮದ್ವೆ ವದಂತಿಗೆ ತೆರೆ ಎಳೆದ ನಟಿ ತ್ರಿಶಾ

    Jasmin Walia 4

    2024ರಲ್ಲಿ ಭಾರತ ಟಿ20 ವಿಶ್ವಕಪ್‌ ಟೂರ್ನಿ ಬಳಿಕ ಹಾರ್ದಿಕ್‌ ಪಾಂಡ್ಯ ನಟಿ ನತಾಶಾ ಅವರಿಂದ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿದ್ದರು. ಇದಾದ ಬಳಿಕ ಬಾಲಿವುಡ್‌ ಬ್ಯೂಟಿ ಅನನ್ಯಾ ಪಾಂಡೆ ಅವರೊಂದಿಗೆ ಡೇಟಿಂಗ್‌ ಮಾಡ್ತಾರೆ ಅನ್ನೋ ಸುದ್ದಿ ಹರಿದಾಡ್ತಿತ್ತು. ನಂತ್ರ ಬ್ರಿಟಿಷ್‌ ಗಾಯಕಿ ಜಾಸ್ಮಿನ್ ವಾಲಿಯಾ ಅವರೊಂದಿಗೆ ಡೇಟಿಂಗ್‌ ಮಾಡ್ತಿದ್ದಾರೆ ಎನ್ನಲಾಗಿತ್ತು. ಆದ್ರೆ, ಇಬ್ಬರು ಪರಸ್ಪರ ಮಾತನಾಡ್ತಿದ್ದೆವು, ಡೇಟಿಂಗ್‌ ಹಂತಕ್ಕೆ ಬರುವ ಮೊದಲೇ ಇಬ್ಬರ ಸಂಬಂಧ ಅಂತ್ಯಗೊಂಡಿತು ಎಂದು ಪಾಂಡ್ಯ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆದ್ರೀಗ ಖುದ್ದು ಪಾಂಡ್ಯ ಅವರೇ ಮಹೀಕಾ ಅವರೊಂದಿಗೆ ರಿಲೇಷನ್‌ಶಿಪ್‌ನಲ್ಲಿರೋದನ್ನ ಬಹಿರಂಗಪಡಿಸಿದ್ದಾರೆ.

  • ಶ್ವೇತಾ ಚೆಂಗಪ್ಪ ಕ್ಲಿಕ್ ಮಾಡಿರೋ ಫೋಟೋ ಹಂಚಿಕೊಂಡ ಮೇಘನಾ ರಾಜ್

    ಶ್ವೇತಾ ಚೆಂಗಪ್ಪ ಕ್ಲಿಕ್ ಮಾಡಿರೋ ಫೋಟೋ ಹಂಚಿಕೊಂಡ ಮೇಘನಾ ರಾಜ್

    ಇನ್ಸ್‌ಸ್ಟಾಗ್ರಾಂನಲ್ಲಿ ಆ್ಯಕ್ಟೀವ್ ಆಗಿರುವ ಮೇಘನಾ ರಾಜ್ ಇದೀಗ ಸುಂದರ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಮನೆಯಲ್ಲಿ ದಸರಾ ಬೊಂಬೆಯಿಟ್ಟು ಅದರ ಮುಂದೆ ಬೊಂಬೆಯಂತೆ ಮೇಘನಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

    ಪೋಸ್ಟ್‌ನಲ್ಲಿ ಕೆಂಪು ಸಲ್ವಾರ್ ಧರಿಸಿ, ಕೈತುಂಬಾ ಬಳೆ ಹಾಕಿಕೊಂಡು ಸೊಗಸಾಗಿ ಕಾಣುತ್ತಿದ್ದಾರೆ. ಫೋಟೋ ಕರ್ಟಸಿಯನ್ನ ನಟಿ ಶ್ವೇತಾ ಚೆಂಗಪ್ಪಗೆ ಕೊಟ್ಟಿದ್ದಾರೆ ಮೇಘನಾ. ಹೀಗಾಗಿ ಮೇಘನಾರ ಈ ಸುಂದರ ಫೋಟೋಗಳ ಹಿಂದಿನ ಛಾಯಾಗ್ರಾಹಕಿ ಶ್ವೇತಾ ಚೆಂಗಪ್ಪ ಅನ್ನೋದು ರಿವೀಲ್ ಆಗಿದೆ.ಇದನ್ನೂ ಓದಿ: ಕ್ರೂ ಪಾರ್ಟ್-2 ನಲ್ಲಿ ಕರೀನಾ ನಟಿಸೋದು ಪಕ್ಕಾ

    ದಸರಾ ಹಬ್ಬಕ್ಕಾಗಿ ಮೇಘನಾ ಸುಂದರವಾಗಿ ರೆಡಿಯಾಗಿದ್ದು, ಎಷ್ಟೋ ದಿನಗಳಾದ್ಮೇಲೆ ನಗುತ್ತಿರುವ ಮೇಘನಾ ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ.

  • ಇನ್‌ಸ್ಟಾ ಪ್ರೇಮಿಯನ್ನ ಮದ್ವೆಯಾಗಿದ್ದ ಗೃಹಿಣಿ ಅನುಮಾನಾಸ್ಪದ ಸಾವು

    ಇನ್‌ಸ್ಟಾ ಪ್ರೇಮಿಯನ್ನ ಮದ್ವೆಯಾಗಿದ್ದ ಗೃಹಿಣಿ ಅನುಮಾನಾಸ್ಪದ ಸಾವು

    ಕೊಪ್ಪಳ: ಇನ್‌ಸ್ಟಾದಲ್ಲಿ (Instagram) ಪರಿಚಯವಾದ ಯುವಕನೊಂದಿಗೆ ಮದ್ವೆಯಾಗಿದ್ದ ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕೊಪ್ಪಳ (Koppala) ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಗೊಣ್ಣಾಗರ ಗ್ರಾಮದಲ್ಲಿ ನಡೆದಿದೆ.

    ಪುಷ್ಪವತಿ (23) ಅನುಮಾನಾಸ್ಪದ ಸಾವನ್ನಪ್ಪಿರುವ ಗೃಹಿಣಿಯಾಗಿದ್ದು, ಮೂರು ತಿಂಗಳ ಹಸುಗೂಸು ಇದೆ. 2ನೇ ದಿನಗಳ ಹಿಂದೆ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿದ್ದು, ಪತಿ ಕುಟುಂಬಸ್ಥರ ವಿರುದ್ಧವೇ ಕೊಲೆ ಆರೋಪ ಕೇಳಿಬಂದಿದೆ. ಇದನ್ನೂ ಓದಿ:  ಸೊಸೆಗೆ ವರದಕ್ಷಿಣೆ ಕಿರುಕುಳ ಆರೋಪ – ಎಸ್.ನಾರಾಯಣ್, ಪತ್ನಿ, ಪುತ್ರನ ವಿರುದ್ಧ ಎಫ್‌ಐಆರ್

    ಮೂಲತಃ ಹಾಸನ ಜಿಲ್ಲೆಯ ಪುಷ್ಪವತಿ ಇನ್‌ಸ್ಟಾದಲ್ಲಿ ಪರಿಚಯವಾಗಿದ್ದ ಮರಿಯಪ್ಪ ಎಂಬಾತನನ್ನ ಪ್ರೀತಿಸಿ ಮದ್ವೆಯಾಗಿದ್ದರು (Marriage). ಇದೀಗ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗ ಹಿನ್ನೆಲೆ ಪತಿ ಮನೆಯವರೇ ಹೊಡೆದು ನೇಣು ಹಾಕಿರುವುದಾಗಿ ಪುಷ್ಪವತಿ ಕುಟುಂಬಸ್ಥರು ಆರೋಪಿಸಿದ್ದಾರೆ. 2 ದಿನಗಳ ಹಿಂದೆ ಸಾವನ್ನಪ್ಪಿದ್ರು, ಶವ ಇನ್ನು ಅದೇ ಸ್ಥಳದಲ್ಲಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನೇಣು ಬಿಗಿದುಕೊಂಡು ದ್ವಿತೀಯ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ

    ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪುಷ್ಪವತಿ ಕುಟುಂಬಸ್ಥರು ನಿನ್ನೆಯಷ್ಟೇ ಹಾಸನದಿಂದ ಕೊಪ್ಪಳಕ್ಕೆ ಬಂದಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಹಸ್ತಾಂತರಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ನಟ ಪ್ರಥಮ್‌ಗೆ ಡ್ರ್ಯಾಗರ್‌ ತೋರಿಸಿ ಧಮ್ಕಿ ಹಾಕಿ ಹಲ್ಲೆಗೆ ಯತ್ನಿಸಿದ್ದ ರೌಡಿಶೀಟರ್‌ ಅರೆಸ್ಟ್‌

  • `ಕೆಲಸ ಇದೆ ಮತ್ತೆ ಸಿಗ್ತೀನಿ’ ಅಂತ ಇನ್‌ಸ್ಟಾದಿಂದ ದಿಢೀರ್ ದೂರಾದ ರಾಜ್ ಬಿ ಶೆಟ್ಟಿ

    `ಕೆಲಸ ಇದೆ ಮತ್ತೆ ಸಿಗ್ತೀನಿ’ ಅಂತ ಇನ್‌ಸ್ಟಾದಿಂದ ದಿಢೀರ್ ದೂರಾದ ರಾಜ್ ಬಿ ಶೆಟ್ಟಿ

    ಟ, ನಿರ್ದೇಶಕ, ನಿರ್ಮಾಪಕ ರಾಜ್ ಬಿ ಶೆಟ್ಟಿ (Raj B Shetty) ಇನ್ನು ಹಲವು ದಿನಗಳ ಕಾಲ ಇನ್‌ಸ್ಟಾಗ್ರಾಂನಿಂದ ದೂರ ಇರೋದಾಗಿ ಘೋಷಣೆ ಮಾಡಿದ್ದಾರೆ. ಹಾಗಂತ ಇನ್‌ಸ್ಟಾದಿಂದ ಪರ್ಮನೆಂಟ್‌ ಆಗಿ ದೂರಾಗ್ತೀನಿ ಅಂತ ಅವರು ಹೇಳಿಲ್ಲ. ಕೆಲಸದ ಮೇಲೆ ಗಮನ ಹರಿಸಬೇಕಾಗಿದೆ, ಸದ್ಯಕ್ಕೆ ಇನ್‌ಸ್ಟಾದಿಂದ ದೂರ ಇರ್ತೀನಿ, ಇನ್ಮುಂದೆ ನನ್ನ ತನ್ನ ಟೀಮ್ ಇದನ್ನು ಮುಂದುವರೆಸುತ್ತದೆ ಎಂದು ಹೇಳಿದ್ದಾರೆ.

    ಸು ಫ್ರಂ ಸೋ (Su From So) ಚಿತ್ರದ ಮೂಲಕ ಇತ್ತೀಚೆಗೆ ಭಾರಿ ಟ್ರೆಂಡ್‌ನಲ್ಲಿರೋ ಸ್ಟಾರ್ ರಾಜ್ ಬಿ ಶೆಟ್ಟಿ, ಸದಾ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಎಂಗೇಜ್ ಆಗಿರೋ ವ್ಯಕ್ತಿತ್ವದವರು ಅಲ್ಲ. ಆದರೂ ಆಗಾಗ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡ್ತಿದ್ದ ಶೆಟ್ರು ಇದೀಗ ಆ ಕಾಯಕಕ್ಕೂ ಬ್ರೇಕ್ ಹಾಕೋದಾಗಿ ಪೋಸ್ಟ್ ಮೂಲಕವೇ ತಿಳಿಸಿದ್ದಾರೆ. ಮೂಲಗಳ ಪ್ರಕಾರ ಮತ್ತೊಂದು ಚಿತ್ರದ ತಯಾರಿಯಲ್ಲಿರುವ ರಾಜ್, ಅದಕ್ಕಾಗಿ ಸ್ಕ್ರಿಪ್ಟ್ ಮಾಡಬೇಕಾದ ಕಾರಣಕ್ಕೆ ಸೋಶಿಯಲ್ ಮೀಡಿಯಾದಿಂದ ದೂರ ಉಳಿಯಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಸಭ್ಯ ಕಾಮೆಂಟ್ – 5 ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ FIR

    ಅನುಶ್ರೀ ಮದುವೆಯಲ್ಲಿ ರಾಜ್ ಬಿ ಶೆಟ್ಟಿ ಕಾಣಿಸ್ಕೊಂಡ್ರು. ಇದೀಗ ಮತ್ತೆ ಅಜ್ಞಾತ ಸ್ಥಳಕ್ಕೆ ತೆರಳಿ ಕೆಲಸದೊಂದಿಗೆ ಮರಳಲಿದ್ದಾರೆ ಎನ್ನಲಾಗ್ತಿದೆ. ಸೋಶಿಯಲ್ ಮೀಡಿಯಾದಿಂದ ದೂರ ಇರ್ತೀನಿ ಅಂತ ಅಧಿಕೃತ ಘೋಷಣೆ ಮಾಡಿರುವ ಶೆಟ್ರಿಗೆ ಭಾರೀ ಶುಭಾಷಯದ ಸುರಿಮಳೆ ಬರ್ತಿದೆ. ಮತ್ತೊಂದು ಒಳ್ಳೆಯ ಸಿನಿಮಾದೊಂದಿಗೆ ವಾಪಸ್ಸಾಗಿ ಎಂಬ ಕಾಮೆಂಟ್ಸ್ ಬಂದಿದೆ. ಜೊತೆಗೆ ಸು ಫ್ರಂ ಸೋ ನೂರು ಕೋಟಿ ಕಲೆಕ್ಷನ್ ಮಾಡಿರೋದಕ್ಕೆ ಶೆಟ್ರು ದುಡ್ಡು ಎಣಿಸೋಕೆ ಹೋಗ್ತಿರಬೇಕು ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಏನೇ ಇದ್ರೂ ರಾಜ್ ಬಿ ಶೆಟ್ಟಿ ಆಲೋಚನೆ ವಿಭಿನ್ನವಾಗಿಯೇ ಇರುತ್ತದೆ.

  • ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ವಿಕ್ಷಿಪ್ತ ದೋಷ – ಸುಪ್ರೀಂ ತೀವ್ರ ಆಕ್ಷೇಪ, ತ್ವರಿತಗತಿಯಲ್ಲಿ ಕೇಸ್ ಇತ್ಯರ್ಥಕ್ಕೆ ಸೂಚನೆ

    ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ವಿಕ್ಷಿಪ್ತ ದೋಷ – ಸುಪ್ರೀಂ ತೀವ್ರ ಆಕ್ಷೇಪ, ತ್ವರಿತಗತಿಯಲ್ಲಿ ಕೇಸ್ ಇತ್ಯರ್ಥಕ್ಕೆ ಸೂಚನೆ

    – ಆರೋಪಿಗಳು ಜೈಲು ಆವರಣದಲ್ಲಿ ಸಿಗರೇಟ್‌, ಮದ್ಯ ಸೇವಿಸಿದ್ರೆ ರಾಜ್ಯ ಸರ್ಕಾರಕ್ಕೆ ಸಮನ್ಸ್ ಗ್ಯಾರಂಟಿ
    – ಆರೋಪಿಗಳಿಗೆ ಜೈಲಲ್ಲಿ ರಾಜಾತಿಥ್ಯ ನೀಡಕೂಡದು ಅಂತ ಎಚ್ಚರಿಕೆ

    ಬೆಂಗಳೂರು: ದರ್ಶನ್, ಪವಿತ್ರಾ ಸೇರಿ ಆರೋಪಿಗಳ ಬೇಲ್ ರದ್ದು ಮಾಡಿರುವ ಸುಪ್ರೀಂ ಕೋರ್ಟ್ (Supreme Court), ಈ ಹಿಂದೆ ಕರ್ನಾಟಕ ಹೈಕೋರ್ಟ್ (Karnataka Highcourt) ಆದೇಶದ ಹುಳುಕುಗಳನ್ನು ಎತ್ತಿ ತೋರಿದೆ. ಜಾಮೀನು ನೀಡಲು ಹೈಕೋರ್ಟ್ ಆದೇಶದಲ್ಲಿ ಸಕಾರಣಗಳನ್ನು ನೀಡಿಲ್ಲ. ಯಾಂತ್ರಿಕವಾಗಿ ತನ್ನ ಅಧಿಕಾರ ಬಳಕೆ ಮಾಡಿದೆ. ವಿಚಾರಣಾ ಹಂತದಲ್ಲಿರುವ ಪ್ರಕರಣದ ಸಾಕ್ಷ್ಯಗಳನ್ನು ಬಹುಮುಖ್ಯವಾಗಿ ಪರಿಗಣಿಸಿದೆ ಅಂತ ಸುಪ್ರೀಂ ಕೋರ್ಟ್ ಪೀಠ ಹೇಳಿದೆ.

    ಸುಪ್ರೀಂ ಆಕ್ಷೇಪಣೆಗಳೇನು? (ಆದೇಶ ಓದಿದ ನ್ಯಾ. ಮಹದೇವನ್)
    * ಹೈಕೋರ್ಟ್ ಆದೇಶವು ವಿಕ್ಷಿಪ್ತ ದೋಷಗಳಿಂದ ಕೂಡಿದೆ.
    * ಹೈಕೋರ್ಟ್ ಆದೇಶವು ಗಂಭೀರ ವೈರುಧ್ಯಗಳಿಂದ ಕೂಡಿದೆ.
    * ಜಾಮೀನು ನೀಡಲು ಹೈಕೋರ್ಟ್ ಆದೇಶದಲ್ಲಿ ವಿಶೇಷ ಅಥವಾ ಸಕಾರಣಗಳನ್ನು ನೀಡಲಾಗಿಲ್ಲ.
    * ನ್ಯಾಯಾಲಯವು ಯಾಂತ್ರಿಕವಾಗಿ ತನ್ನ ಅಧಿಕಾರ ಬಳಕೆ ಮಾಡಿದೆ.
    * ಕಾನೂನಾತ್ಮಕವಾಗಿ ಬಹುಮುಖ್ಯವಾದ ವಾಸ್ತವಾಂಶಗಳನ್ನ ಕೈಬಿಟ್ಟಿದೆ.
    * ವಿಚಾರಣಾ ಹಂತದಲ್ಲಿರುವ ಪ್ರಕರಣದ ಸಾಕ್ಷ್ಯಗಳನ್ನು ಬಹುಮುಖ್ಯವಾಗಿ ಪರಿಗಣಿಸಿದೆ.
    * ಸಾಕ್ಷಿಗಳ ಪ್ರಾಮಾಣಿಕತೆ, ನಂಬಲರ್ಹತೆಯನ್ನು ನಿರ್ಧರಿಸಬೇಕಿರುವುದು ವಿಚಾರಣಾ ನ್ಯಾಯಾಲಯ ಮಾತ್ರ.
    * ಇಂಥ ಗಂಭೀರವಾದ ಪ್ರಕರಣದ ಸ್ವರೂಪ ಮತ್ತು ಆರೋಪಿಗಳ ಪಾತ್ರವನ್ನು ಪರಿಗಣಿಸಬೇಕು.
    * ಪರಿಗಣಿಸದೇ ವಿಚಾರಣೆಯಲ್ಲಿ ಮಧ್ಯಪ್ರವೇಶಿಸುವುದು ಅನಗತ್ಯವಾಗಿ ವ್ಯಾಪ್ತಿ ಮೀರಿದ ಚಟುವಟಿಕೆ.
    * ಸಕ್ಷಮ ಪ್ರಾಧಿಕಾರಿಗಳು ತಕ್ಷಣ ಆರೋಪಿಗಳನ್ನ ವಶಕ್ಕೆ ಪಡೆಯಬೇಕು.
    * ತುರ್ತಾಗಿ ವಿಚಾರಣೆ ನಡೆಸಿ, ಮೆರಿಟ್ ಮೇಲೆ ಪ್ರಕರಣವನ್ನ ವಿಚಾರಣಾ ನ್ಯಾಯಾಲಯ ನಿರ್ಧರಿಸಬೇಕು.
    * ಇಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಜಾಮೀನಿಗೆ ಸೀಮಿತವಾಗಿದೆ.

    ಹೈಕೋರ್ಟ್ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ (Karnataka Government) ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ ಪಾರ್ದಿವಾಲಾ ಮತ್ತು ಆರ್.ಮಹಾದೇವನ್ ಅವರಿದ್ದ ಪೀಠ ಹೈಕೋರ್ಟ್ ಆದೇಶವನ್ನು ಬದಿಗೆ ಸರಿಸಿದೆ. ಆರೋಪಿಗೆ ನೀಡಲಾದ ಜಾಮೀನನ್ನು ರದ್ದುಗೊಳಿಸಿರೋದಾಗಿ ಹೇಳಿದೆ. ಅಲ್ಲದೇ, ಫೈವ್ ಸ್ಟಾರ್ ಟ್ರೀಟ್‌ಮೆಂಟ್‌ಗೂ ವಾರ್ನಿಂಗ್ ಕೊಟ್ಟಿದೆ. ಮಹಾದೇವನ್ ಆದೇಶದ ಬಳಿಕ ಅದಕ್ಕೆ ಪೂರಕವಾಗಿ ನ್ಯಾ. ಪಾರ್ದಿವಾಲಾ… ನನ್ನ ಗೌರವಾನ್ವಿತ ಸಹೋದರ, ನ್ಯಾಯಮೂರ್ತಿ ಆರ್ ಮಹಾದೇವನ್ ಪ್ರೌಢಿಮೆಯಿಂದ ಕೂಡಿರುವ ತೀರ್ಪು ನೀಡಿದ್ದು, ಇದು ಅಮೋಘವಾದದ್ದಾಗಿದೆ ಅಂತ ಇದಕ್ಕೆ ಹೆಚ್ಚುವರಿ ಆದೇಶ ಸೇರ್ಪಡೆ ಮಾಡಿದ್ದಾರೆ.

    ನ್ಯಾ. ಪಾರ್ದಿವಾಲಾ ಪ್ರಸ್ತಾಪಿಸಿದ ಅಂಶಗಳೇನು…?
    * ಆರೋಪಿ ಎಷ್ಟೇ ದೊಡ್ಡವನಾಗಿದ್ದರೂ, ಅವನು/ಅವಳು ಕಾನೂನಿಗಿಂತ ಮೇಲಲ್ಲ.
    * ನಾವು ಅದನ್ನು ಪಾಲಿಸುವಾಗ ಯಾರ ಅನುಮತಿಯನ್ನೂ ಕೇಳುವುದಿಲ್ಲ.
    * ನ್ಯಾಯ ವಿತರಣಾ ವ್ಯವಸ್ಥೆಯು ಯಾವುದೇ ಹಂತದಲ್ಲಿ ಯಾವುದೇ ಬೆಲೆ ತೆತ್ತಾದರೂ ಕಾನೂನಾತ್ಮಕ ಆಡಳಿತವನ್ನು ಎತ್ತಿಹಿಡಿಯಬೇಕು.
    * ಎಲ್ಲಾ ಸಮಯದಲ್ಲೂ ಕಾನೂನಾತ್ಮಕ ಆಡಳಿತವನ್ನ ಕಾಪಾಡಿಕೊಳ್ಳುವುದು ಇಂದಿನ ಅಗತ್ಯ.
    * ಜೈಲಿನಲ್ಲಿ ಆರೋಪಿಗಳಿಗೆ ರಾಜಾತಿಥ್ಯ ನೀಡಿದ್ದು ನಮಗೆ ತಿಳಿದಿದೆ.
    * ಈ ಸಂಬಂಧ ಜೈಲು ಮೇಲ್ವಿಚಾರಕರು ಸೇರಿ ಎಲ್ಲರ ಅಮಾನತು ಕೂಡ ಗೊತ್ತಾಗಿದೆ.
    * ಇದು ಮತ್ತೆ ಪುನರಾವರ್ತನೆ ಆಗಬಾರದು.
    * ಆರೋಪಿಗಳು ಜೈಲು ಆವರಣದಲ್ಲಿ ಸಿಗರೇಟು, ಮದ್ಯಸೇವನೆ ಮಾಡಿದರೆ ರಾಜ್ಯ ಸರ್ಕಾರಕ್ಕೆ ಸಮನ್ಸ್ ಕೊಡ್ತೇವೆ

    ಇದಕ್ಕೆ ರಾಜ್ಯ ಸರ್ಕಾರಿ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ಅವರು ಪೂರಕ ತೀರ್ಪಿನಲ್ಲಿ ನೀವು ಪ್ರಸ್ತಾಪಿಸಿರುವ ವಿಚಾರಗಳು ದೇಶಾದ್ಯಂತ ಪರಿಣಾಮ ಬೀರಲಿದ್ದು, ಈ ತೀರ್ಪನ್ನ ದೇಶದ ಎಲ್ಲಾ ಜೈಲುಗಳಿಗೆ ಕಳುಹಿಸಿಕೊಡಬೇಕಿದೆ. ಗಂಭೀರ ವಿಚಾರ ಇದಾಗಿದೆ ಅಂದ್ರು. ಅದಕ್ಕೆ ಪೀಠವು ಜೈಲು ಆತಿಥ್ಯದ ಫೋಟೊ, ವಿಡಿಯೋಗಳನ್ನ ನಾವು ನೋಡಿದ್ರೆ ನಿಮಗೆ ಮೊದಲು ಸಮನ್ಸ್ ನೀಡಲಾಗುತ್ತದೆ ಅಂದರು. ಈ ಸಂಬಂಧ ಅಡ್ವೊಕೇಟ್ ಜನರಲ್ ಜೊತೆ ಮಾತನಾಡಿ, ಸಂಬಂಧಿತ ಪ್ರಾಧಿಕಾರಗಳಿಗೆ ಸೂಚನೆ ರವಾನಿಸಲಾಗುವುದು ಅಂತ ಲೂಥ್ರಾ ಪೀಠಕ್ಕೆ ಹೇಳಿದರು.

  • ವಿಡಿಯೋ ಮಾಡೋದು ಬಿಟ್ಟು ಸರಿಯಾಗಿ ಕರ್ಕೊಂಡು ಹೋಗಿ – ಪೊಲೀಸರಿಗೆ ಪವಿತ್ರಾಗೌಡ ಅವಾಜ್‌

    ವಿಡಿಯೋ ಮಾಡೋದು ಬಿಟ್ಟು ಸರಿಯಾಗಿ ಕರ್ಕೊಂಡು ಹೋಗಿ – ಪೊಲೀಸರಿಗೆ ಪವಿತ್ರಾಗೌಡ ಅವಾಜ್‌

    – ಎಲ್ಲಾ ನನ್ನ ಕರ್ಮ ಅಂತ ತಲೆ ಚಚ್ಚಿಕೊಂಡ ಪವಿತ್ರಾ

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ (Pavithra Gowda) ಅವರ ಜಾಮೀನು ರದ್ದಾದ ಬೆನ್ನಲ್ಲೇ ಪವಿತ್ರಾಗೌಡರನ್ನ ಅರೆಸ್ಟ್‌ ಮಾಡಲಾಗಿದೆ. ಬಂಧನದ ಬಳಿಕ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆತರಲಾಗಿದೆ.

    ಕೊಲೆ ಕೇಸ್‌ನಲ್ಲಿ ಕರ್ನಾಟಕ ಹೈಕೋರ್ಟ್‌ (Karnataka Highcourt) ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದ ಬೆನ್ನಲ್ಲೇ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಆದ್ರೆ ಅರೆಸ್ಟ್‌ ಮಾಡಲು ಮನೆ ಬಳಿ ಬಂದ ಪೊಲೀಸರಿಗೆ ಪವಿತ್ರಾಗೌಡ ಆವಾಜ್‌ ಹಾಕಿರುವ ದೃಶ್ಯ ಕಂಡುಬಂದಿದೆ. ಪವಿತ್ರಾರನ್ನ ಕರೆದೊಯ್ಯುವ ವೇಳೆ ಲಾಯರ್‌ ಎಡವಿದ್ದಾರೆ. ಇದರಿಂದ ಸಿಟ್ಟಾದ ಪವಿತ್ರಾ ಯಾಕ್ರಿ ಹಿಂಗೆ ತಳ್ತೀರಾ.. ಮೊಬೈಲ್‌ ಬಿಡಿ ಮೊದಲು, ಸರಿಯಾಗಿ ಕರ್ಕೊಂಡ್‌ ಹೋಗಿ ಅಯ್ಯೊ.. ಅಂತಾ ತಲೆ ಚಚ್ಚಿಕೊಂಡಿದ್ದಾರೆ. ಜೊತೆಗೆ ಮಹಿಳಾ ಸಿಬ್ಬಂದಿ ಮೇಲೂ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಕಾನೂನಿನ ಮುಂದೆ ಎಲ್ಲರೂ ಒಂದೇ – ದರ್ಶನ್ ಬೇಲ್ ರದ್ದು ಬಗ್ಗೆ ನಟಿ ರಮ್ಯಾ ಪೋಸ್ಟ್

    ಮನೆಯ ಬಳಿ ಹೋದಾಗ ಆಗಿದ್ದೇನು?
    ಸುಪ್ರೀಂ ಅರೆಸ್ಟ್‌ಗೆ ಸೂಚನೆ ಕೊಟ್ಟ ಬೆನ್ನಲ್ಲೇ ಪೊಲೀಸರು ಮೆಮೊ ಹಿಡಿದು ಮನೆ ಬಂದಿದ್ದರು. ಮನೆಯೊಳಗೆ ಪೊಲೀಸರು ಎಂಟ್ರಿ ಕೊಡ್ತಿದ್ದಂತೆ ಪವಿತ್ರಾಗೆ ದುಗುಡ ಹೆಚ್ಚಾಗಿತ್ತು, ಹಾಗಾಗಿ ಒಂದೇ ಒಂದೂ ಮಾತೂ ಆಡಲಿಲ್ಲ. ಈ ವೇಳೆ ಪವಿತ್ರಾ ಪರ ವಕೀಲರಾದ ಬಾಲನ್‌ ಮತ್ತು ನಾರಾಯಣಸ್ವಾಮಿ ಪೊಲೀಸರ ಜೊತೆ ಮಾತುಕತೆ ನಡೆಸಿದರು. ಸ್ಟೇಷನ್‌ಗೆ ಯಾಕೆ ಕೋರ್ಟ್‌ಗೆ ಹಾಜರುಪಡಿಸ್ತೀವಿ ನಡೆಯಿರಿ.. ಅಂದ್ರು. ಇದಕ್ಕೆ ಪೊಲೀಸರು ಕೋರ್ಟ್‌ನಿಂದ ಅರೆ ಸ್ಟ್‌ ಮಾಡಲೇಬೇಕೆಂದು ಸೂಚನೆ ಬಂದಿದೆ. ಅಂತ ಮೆಮೊ ಕೈಗಿತ್ತು ಪವಿತ್ರಾರರನ್ನ ಜೀಪ್‌ ಹತ್ತಿಸಿದ್ರು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ನ ಎ1 ಆರೋಪಿ ಪವಿತ್ರಾ ಗೌಡ ಬಂಧನ

    ಪವಿತ್ರಾ ಹೊರಡುವ ವೇಳೆ ಬೆನ್ನು ತಟ್ಟು ಧೈರ್ಯ ಹೇಳಿದ ವಕೀಲರು, ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮ ಪರ ಹೋರಾಡ್ತೀವಿ ಅಂದ್ರು. ಇನ್ನೂ ಪವಿತ್ರಾಗೌಡರ ತಾಯಿಯಂತು ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು. ಇದನ್ನೂ ಓದಿ: ದೇವರ ಮೇಲೆ ನಂಬಿಕೆ ಇಡಬೇಕು – ಜೈಲು ಸೇರುವ ಮುನ್ನ ಪವಿತ್ರಾ ಮತ್ತೊಂದು ಪೋಸ್ಟ್

  • ದೇವರ ಮೇಲೆ ನಂಬಿಕೆ ಇಡಬೇಕು – ಜೈಲು ಸೇರುವ ಮುನ್ನ ಪವಿತ್ರಾ ಮತ್ತೊಂದು ಪೋಸ್ಟ್

    ದೇವರ ಮೇಲೆ ನಂಬಿಕೆ ಇಡಬೇಕು – ಜೈಲು ಸೇರುವ ಮುನ್ನ ಪವಿತ್ರಾ ಮತ್ತೊಂದು ಪೋಸ್ಟ್

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಮತ್ತೆ ಜೈಲಿಗೆ ಹೋಗುವ ಟೆನ್ಷನ್ ನಡುವೆಯೂ ಪವಿತ್ರಾ ಗೌಡ (Pavithra Gowda) ಇನ್ಸ್ಟಾಗ್ರಾಂನಲ್ಲಿ (Instagram) ಮತ್ತೊಂದು ಸ್ಟೋರಿ ಹಾಕಿದ್ದಾರೆ.

    ದೇವರ ಮೇಲೆ ನಂಬಿಕೆ ಇಡಬೇಕು. ಬಹುಶಃ ಅವರ ಉತ್ತರ ‘ಕಾಯಿರಿ’ ಅನ್ನೋದಾಗಿರಬಹುದು. ಕೆಲವು ವಿಳಂಬಗಳು ದೈವಿಕ ರಕ್ಷಣೆಯಾಗಿರುತ್ತದೆ. ನಾನು ತಾಳ್ಮೆ ಮತ್ತು ನಂಬಿಕೆಯನ್ನು ಆರಿಸಿಕೊಳ್ಳುತ್ತೇನೆ ಎಂದು ಪವಿತ್ರಾ ಗೌಡ ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ನ ಎ1 ಆರೋಪಿ ಪವಿತ್ರಾ ಗೌಡ ಬಂಧನ

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ (Supreme Court) ರದ್ದುಪಡಿಸಿ ಕೂಡಲೇ ಶರಣಾಗುವಂತೆ ಸೂಚಿಸಿದೆ. ಜಾಮೀನು ಆದೇಶ ಹೊರಬೀಳುವ ಮುನ್ನವೇ ಪವಿತ್ರಾ ಗೌಡ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಸತ್ಯವು ಎಲ್ಲಕ್ಕಿಂತ ಹೆಚ್ಚು ಶಕ್ತಿಶಾಲಿ. ಅದು ಯಾವಾಗಲೂ ನ್ಯಾಯವನ್ನು ಕೊಡುತ್ತದೆ. ಈ ಜಗತ್ತಿನಲ್ಲಿರುವ ಎಲ್ಲಕ್ಕಿಂತ ಹೆಚ್ಚಿನ ಶಕ್ತಿಯನ್ನು ಸತ್ಯ ಹೊಂದಿರುತ್ತದೆ. ಎಷ್ಟೇ ಸಮಯ ತೆಗೆದುಕೊಂಡರೂ, ನ್ಯಾಯವು ಯಾವಾಗಲೂ ತನ್ನ ದಾರಿಯನ್ನು ಕಂಡುಕೊಳ್ಳುತ್ತದೆ ಎಂದು ಬರೆದಿದ್ದರು. ಇದನ್ನೂ ಓದಿ: ಜಾಮೀನು ರದ್ದು ಬೆನ್ನಲ್ಲೇ ದರ್ಶನ್‌ ಆಪ್ತ ಪ್ರದೂಷ್ ಅರೆಸ್ಟ್‌

    ಸುಪ್ರೀಂ ಕೋರ್ಟ್ ತೀರ್ಪು ಹೊರಬರುವ ಮುನ್ನ ಪವಿತ್ರಾ ಗೌಡ ದೇವರ ಮೊರೆ ಹೋಗಿದ್ದರು. ಜೊತೆಗೆ ಮನೆಯಲ್ಲಿ ತುಳಸಿ ಗಿಡಕ್ಕೆ ಪೂಜೆ ಸಲ್ಲಿಸಿದ್ದರು. ತೀರ್ಪು ಹೊರಬರುತ್ತಿದ್ದಂತೆ ಮನೆಯಲ್ಲಿ ಪವಿತ್ರಾ ಗೌಡ, ತಾಯಿ ಎದುರು ಬಿಕ್ಕಳಿಸಿ ಅತ್ತಿದ್ದಾರೆ. ಈ ವೇಳೆ ಮನೆ ಬಳಿ ಪೊಲೀಸರು ಬಂಧನಕ್ಕೆ ಕಾದು ನಿಂತಿದ್ದರು. ಮನೆಯ ಬಾಗಿಲು ತೆರೆದಂತೆ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: ತೀರ್ಪಿಗೂ ಹಿಂದಿನ ದಿನ ಬನ್ನಾರಿಗೆ ದರ್ಶನ್ ಭೇಟಿ

  • ರಾಮನಗರ | ಇನ್‌ಸ್ಟಾದಲ್ಲಿ ಪರಿಚಯವಾದ ಅಪ್ರಾಪ್ತೆಯನ್ನ ಗರ್ಭಿಣಿ ಮಾಡಿದ್ದ ಕಾಮುಕ ಅರೆಸ್ಟ್‌

    ರಾಮನಗರ | ಇನ್‌ಸ್ಟಾದಲ್ಲಿ ಪರಿಚಯವಾದ ಅಪ್ರಾಪ್ತೆಯನ್ನ ಗರ್ಭಿಣಿ ಮಾಡಿದ್ದ ಕಾಮುಕ ಅರೆಸ್ಟ್‌

    ರಾಮನಗರ: ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪರಿಚಯವಾದ ಬಾಲಕಿಗೆ ಪುಸಲಾಯಿಸಿ ಗರ್ಭಿಣಿ ಮಾಡಿದ್ದ ಯುವಕನನ್ನ ಮಾಗಡಿ ಪೊಲೀಸರು (Magadi Police) ಬಂಧಿಸಿದ್ದಾರೆ.

    ತುಮಕೂರು ಮೂಲದ ನರಸಿಂಹಮೂರ್ತಿ (25) ಬಂಧಿತ ಆರೋಪಿ. ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ನರಸಿಂಹಮೂರ್ತಿ ಸೋಷಿಯಲ್‌ ಮೀಡಿಯಾ (Social Media) ಇನ್‌ಸ್ಟಾಗ್ರಾಮ್‌ನಲ್ಲಿ ಬಾಲಕಿಯನ್ನ ಪರಿಚಯಿಸಿಕೊಂಡಿದ್ದ. ಇದನ್ನೂ ಓದಿ: ಮಹಿಳೆಯ ಬರ್ಬರ ಹತ್ಯೆ – ಕೊಲೆ ಬಳಿಕ ಆರೋಪಿಯೂ ನೇಣಿಗೆ ಶರಣು

    ಕೆಲ ದಿನಗಳ ನಂತರ ಸ್ನೇಹ ಬೆಳಸಿಕೊಂಡಿದ್ದ. ಸಲುಗೆ ಬೆಳೆದ ನಂತರ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿ ಬಾಲಕಿಯನ್ನ ಗರ್ಭಿಣಿ ಮಾಡಿದ್ದಾನೆ. ವಿಷಯ ತಿಳಿದ ಬಾಲಕಿ ಪೋಷಕರು ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಪ್ರಕರಣ ತನಿಖೆ ನಡೆಸಿದ ಪೊಲೀಸರು ಇನ್‌ಸ್ಟಾಗ್ರಾಮ್‌ ಐಡಿ ಮೂಲಕ ಆರೋಪಿಯನ್ನ ಬಂಧಿಸಿ ಪೋಕ್ಸೊ ಕೇಸ್ ದಾಖಲಿಸಿದ್ದಾರೆ. ಬಂಧಿತನನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಶವಗಳ ಹೂತಿಟ್ಟ ಕೇಸ್ – ಇಂದು ಕೊನೆಯ ಪಾಯಿಂಟ್‌ನಲ್ಲಿ ಶೋಧ

  • ಇನ್ಸ್ಟಾಗ್ರಾಂ ಲವ್, ಸೆಕ್ಸ್, ದೋಖಾ ಆರೋಪ – ಡೆತ್‌ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆ

    ಇನ್ಸ್ಟಾಗ್ರಾಂ ಲವ್, ಸೆಕ್ಸ್, ದೋಖಾ ಆರೋಪ – ಡೆತ್‌ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆ

    ಬಳ್ಳಾರಿ: ಇನ್ಸ್ಟಾಗ್ರಾಂ (Instagram) ಲವ್, ಸೆಕ್ಸ್ ದೋಖಾ, ಕೊನೆಗೆ ಮೋಸದ ಆರೋಪ ಹೊರಿಸಿ ಡೆತ್‌ನೋಟ್ (Death Note) ಬರೆದಿಟ್ಟು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರ (Vijayanagar) ಜಿಲ್ಲೆಯ ಹಡಗಲಿ ತಾಲೂಕಿನ ಮದಲಗಟ್ಟಿ ಗ್ರಾಮದ ತುಂಗಭದ್ರಾ ಸೇತುವೆ (Tunga Bhadra Bridge) ಬಳಿ ನಡೆದಿದೆ.

    ಪ್ರಿಯಕರನ ಮೋಸಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಡೆತ್‌ನೋಟ್ ಬರೆದು ಮಹಿಳೆ ತುಂಗಭದ್ರಾ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೇತುವೆಯಿಂದ ಜಿಗಿಯುತ್ತಿರುವುದನ್ನ ಬೈಕ್ ಸವಾರರು ನೋಡಿದ್ದಾರೆ. ಮಹಿಳೆ ನದಿಗೆ ಜಿಗಿದಿದ್ದನ್ನ ಯುವಕರು ನೋಡಿ ಮದಲಗಟ್ಟಿ ಗ್ರಾಮಸ್ಥರಿಗೆ ತಿಳಿಸಿದ್ದರು. ಅಕ್ಕಪಕ್ಕದಲ್ಲಿದ್ದ ಮೀನುಗಾರರು ಮಹಿಳೆಯನ್ನು ರಕ್ಷಿಸಿಲು ಪ್ರಯತ್ನಿಸಿದ್ದಾರೆ. ಆದರೆ ನೀರಿನ ರಭಸಕ್ಕೆ ಮಹಿಳೆ ಕೊಚ್ಚಿ ಹೋಗಿದ್ದಾರೆ. ಸದ್ಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಶೋಧಕಾರ್ಯ ಮುಂದುವರಿಸಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂನಿಂದ 50,000 ಕ್ಯೂಸೆಕ್ ನೀರು ಬಿಡುಗಡೆ

    ಕೆ.ಅಯ್ಯನಹಳ್ಳಿ ಗ್ರಾಮದ ವಿವಾಹಿತೆ ಮಹಿಳೆಯೊಬ್ಬರು ತನ್ನ ಸಾವಿನ ಕುರಿತು ಪತ್ರ ಬರೆದಿಟ್ಟಿದ್ದಾರೆ. ನನ್ನ ಸಾವಿಗೆ ನನ್ನ ಪ್ರಿಯತಮನೇ ಕಾರಣ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ನನ್ನ ಸಾವಿಗೆ ಸುಗೂರು ಶಿವಮೂರ್ತಿನೇ ಕಾರಣ, ಈತನಿಗೆ ಮರಣದಂಡನೆ ಶಿಕ್ಷೆ ಆಗಬೇಕು. ನನ್ನ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ, ಮದುವೆಯಾಗುವುದಾಗಿ ಹೇಳಿ ಮೋಸ ಮಾಡಿದ್ದಾನೆ. ನನ್ನ ಪ್ರೀತಿ ಮಾಡುತ್ತಾ ಸಾಕಷ್ಟು ಹುಡುಗಿಯರ ಜೊತೆ ಸುತ್ತಾಡಿ ಕೊನೆಗೆ ನನ್ನ ಬಿಟ್ಟಿದ್ದಾನೆ ಎಂದು ಉಲ್ಲೇಖಿಸಲಾಗಿದೆ. ಕಾಣೆಯಾದ ಮಹಿಳೆ ಮತ್ತು ಕೆ.ಅಯ್ಯನಹಳ್ಳಿ ಗ್ರಾಮದಲ್ಲಿ ಪತ್ರ ಬರೆದಿಟ್ಟ ಮಹಿಳೆ ಒಬ್ಬರೇ ಎಂದು ಹೇಳಲಾಗುತ್ತಿದೆ. ಹೂವಿನಹಡಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ 4,800 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

  • ಟೆನ್ಷನ್ ಹೊತ್ತಲ್ಲಿ ಬದಲಾಯ್ತು ಪವಿತ್ರಾ ಗೌಡ ಪ್ರೊಫೈಲ್

    ಟೆನ್ಷನ್ ಹೊತ್ತಲ್ಲಿ ಬದಲಾಯ್ತು ಪವಿತ್ರಾ ಗೌಡ ಪ್ರೊಫೈಲ್

    ರೇಣುಕಾಸ್ವಾಮಿ ಕೊಲೆ ಆರೋಪಿ ಪವಿತ್ರಾ ಗೌಡ (Pavithra Gowda) ಇದೇ ಮಂಗಳವಾರ (ಜುಲೈ 22) ಸುಪ್ರೀಂ ಕೋರ್ಟ್‌ನಿಂದ ಹೊರಬೀಳಲಿರುವ ಬೇಲ್ ಕ್ಯಾನ್ಸಲ್ ಕುರಿತ ಆದೇಶದ ನಿರೀಕ್ಷೆಯಲ್ಲಿದ್ದಾರೆ. ಆದರೆ ಈ ನಡುವೆಯೇ ಪವಿತ್ರಾ ಇನ್ಸ್ಟಾಗ್ರಾಂನಲ್ಲಿ (Instagram) ಪ್ರೊಫೈಲ್ ಪಿಕ್ (Profile Photo) ಬದಲಾಯಿಸೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಬಹುದಿನಗಳ ಬಳಿಕ ಪವಿತ್ರಾ ಇದೀಗ ಪ್ರೊಫೈಲ್ ಪಿಕ್ ಬದಲಾಯಿಸಿದ್ದಾರೆ. ಇದರ ಮರ್ಮ ಏನೆಂಬುದೇ ತಿಳಿಯದಾಗಿದೆ. ಕಾರಣ ಬೇಲ್ ರದ್ದಾಗುವ ಆತಂಕವೂ ಇಲ್ಲದೆ ಆದೇಶದ ಮೇಲೆ ಅಷ್ಟೊಂದು ಕಾನ್ಫಿಡೆಂಟ್ ಆಗಿದ್ದಾರಾ ಅನ್ನೋದೇ ಚರ್ಚೆಯ ವಿಷಯವಾಗುತ್ತಿದೆ.

    ರೆಡ್‌ಕಾರ್ಪೆಟ್ ಒಡತಿ ಪವಿತ್ರಾ ಇಷ್ಟು ದಿನ ಬೇರೆಯದ್ದೇ ಪ್ರೊಫೈಲ್ ಪಿಕ್ ಹೊಂದಿದ್ದರು. ಇದೇ ಇನ್ಸ್ಟಾಗ್ರಾಂನಲ್ಲಿ ಫೋಟೋ, ವೀಡಿಯೋಗಳನ್ನ ಪೋಸ್ಟ್ ಮಾಡಿದ್ದಾಗ ಬಂದ ಕಾಮೆಂಟ್ಸ್, ಮೆಸೇಜ್‌ಗಳಿಂದಲೇ ಜೀವನದಲ್ಲಿ ಅವಾಂತರ ಸೃಷ್ಟಿಸಿಕೊಂಡ ಪವಿತ್ರಾ ಇದೀಗ ದೊಡ್ಡದೊಂದು ಸವಾಲು ಎದುರಾಗುವ ಮುನ್ನಾದಿನವೇ ಇನ್ಸ್ಟಾಗ್ರಾಂನಲ್ಲಿ ಫೋಟೋ ಬದಲಿಸಿರುವುದು ಆಶ್ಚರ್ಯಕ್ಕೀಡುಮಾಡುತ್ತಿದೆ.

    ಪವಿತ್ರಾ ಸಿಂಪಲ್ ಲುಕ್‌ಗೆ ಲೈಕ್ಸ್, ಕಾಮೆಂಟ್ಸ್‌ಗಳು ಭರ್ಜರಿಯಾಗೇ ಬರ್ತಿದೆ. ಇನ್ನು, ನಾಳೆ ದರ್ಶನ್, ಪವಿತ್ರಾ ಗೌಡ ಹಾಗೂ 7 ಆರೋಪಿಗಳ ಜಾಮೀನು ಮುಂದುವರೆಯುತ್ತಾ ಇಲ್ವಾ ಅನ್ನೋದ್ರ ಕುರಿತಾದ ಭವಿಷ್ಯ ಗೊತ್ತಾಗುತ್ತೆ.