Tag: Insta

  • ವಿಚಿತ್ರವಾಗಿ ಕುಳಿತು ‘ನಾನು ಮಹಿಳೆಯರಂತೆ ಕೂರುವುದಿಲ್ಲ’ ಎಂದ ಇಲಿಯಾನಾ

    ವಿಚಿತ್ರವಾಗಿ ಕುಳಿತು ‘ನಾನು ಮಹಿಳೆಯರಂತೆ ಕೂರುವುದಿಲ್ಲ’ ಎಂದ ಇಲಿಯಾನಾ

    ಮುಂಬೈ: ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಸ್ ತಮ್ಮ ಇನ್‍ಸ್ಟಾದಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿ ನಾನು ಮಹಿಳೆಯರಂತೆ ಕೂರುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

    ಇಲಿಯಾನಾ ತಮ್ಮ ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿರುವ ಫೋಟೋದಲ್ಲಿ ವಿಚಿತ್ರವಾಗಿ ಕಾರಿನಲ್ಲಿ ಕುಳಿತಿದ್ದಾರೆ. ಅಲ್ಲದೆ ನಾಲಿಗೆ ಹೊರ ತೆಗೆದು ವಿಭಿನ್ನವಾಗಿ ಪೋಸ್ ನೀಡಿದ್ದಾರೆ. ಈ ಫೋಟೋ ಫನ್ನಿ ಎಮೋಜಿ ಹಾಕಿ ಅದಕ್ಕೆ, “ಅವರು, ಮಹಿಳೆಯರಂತೆ ಕುಳಿತುಕೋ” ಎಂದು ಹೇಳುತ್ತಾರೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇನ್‍ಸ್ಟಾದಲ್ಲಿ ಇಲಿಯಾನಾ ಯಾವಾಗಲೂ ಸಕ್ರಿಯರಾಗಿರುತ್ತಾರೆ. ಅಲ್ಲದೆ ಆಗಾಗ ತಮ್ಮ ಬಿಕಿನಿ ಫೋಟೋಗಳನ್ನು ಕೂಡ ಹಂಚಿಕೊಳ್ಳುತ್ತಿರುತ್ತಾರೆ.

     

    View this post on Instagram

     

    Them: sit like a lady. Me: ????????‍♀️

    A post shared by Ileana D’Cruz (@ileana_official) on

    ಕಳೆದ ವರ್ಷ ಇಲಿಯಾನಾ ತಮ್ಮ ಬಹುಕಾಲದ ಆಸ್ಟ್ರೇಲಿಯಾ ಗೆಳೆಯನ ಜೊತೆ ಬ್ರೇಕಪ್ ಮಾಡಿಕೊಂಡಿದ್ದರು ಎಂಬ ಸುದ್ದಿ ಬಿ-ಟೌನ್‍ನಲ್ಲಿ ಹರಿದಾಡುತ್ತಿತ್ತು. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಇಲಿಯಾನಾ ಹಾಗೂ ಅವರ ಗೆಳೆಯ ಆ್ಯಂಡ್ರ್ಯೂ ನೀಬೋನ್ ಪರಸ್ಪರ ಅನ್‍ಫಾಲೋ ಮಾಡಿದ್ದಾರೆ. ಬಳಿಕ ಸ್ವತಃ ಇಲಿಯಾನಾ ಅವರೇ ಬ್ರೇಕಪ್ ಮಾಡಿಕೊಂಡಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದರು.

    ಸದ್ಯ ಇಲಿಯಾನಾ ಕೊನೆಯಾದಾಗಿ ‘ಪಾಗಲ್ ಪಂತಿ’ ಚಿತ್ರದಲ್ಲಿ ನಟಿಸಿದ್ದರು. ಆದರೆ ಇದೀಗ ಅವರು ನಟ ಅಭಿಷೇಕ್ ಬಚ್ಚನ್ ಜೊತೆ ‘ದಿ ಬಿಗ್ ಬುಲ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ನಟ ಅಜಯ್ ದೇವ್‍ಗನ್ ನಿರ್ಮಿಸುತ್ತಿದ್ದು, ಅಕ್ಟೋಬರ್ 23ರಂದು ಚಿತ್ರ ಬಿಡುಗಡೆಯಾಗಲಿದೆ.

  • ‘ತಮ್ಮನ ಜೊತೆ ಈ ರೀತಿಯ ಡ್ರೆಸ್ ಹಾಕಲು ನಾಚಿಕೆಯಾಗಲ್ವಾ?’- ನೆಟ್ಟಿಗರಿಂದ ಸಾರಾಗೆ ಕ್ಲಾಸ್

    ‘ತಮ್ಮನ ಜೊತೆ ಈ ರೀತಿಯ ಡ್ರೆಸ್ ಹಾಕಲು ನಾಚಿಕೆಯಾಗಲ್ವಾ?’- ನೆಟ್ಟಿಗರಿಂದ ಸಾರಾಗೆ ಕ್ಲಾಸ್

    ಮುಂಬೈ: ಬಾಲಿವುಡ್ ನಟಿ ಸಾರಾ ಅಲಿ ಖಾನ್ ತನ್ನ ತಮ್ಮನ ಜೊತೆಗಿರುವ ಬಿಕಿನಿ ಫೋಟೋ ಹಂಚಿಕೊಂಡಿದ್ದು, ಇದನ್ನು ನೋಡಿದ ನೆಟ್ಟಿಗರು ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಗುರುವಾರ ಸಾರಾ ಅಲಿ ಖಾನ್ ಇನ್‍ಸ್ಟಾದಲ್ಲಿ ತನ್ನ ತಮ್ಮ ಇಬ್ರಾಹಿಂ ಅಲಿ ಖಾನ್ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದರು. ಈ ಹಿಂದೆ ಸಾರಾ ಮಾಲ್ಡೀವ್ಸ್ ಗೆ ಹೋಗಿದ್ದಾಗ ಬಿಕಿನಿ ಧರಿಸಿ ಇಬ್ರಾಹಿಂ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಇದೇ ಫೋಟೋವನ್ನು ಸಾರಾ ಗುರುವಾರ ಇನ್‍ಸ್ಟಾದಲ್ಲಿ ಹಾಕಿ, ತನ್ನ ತಮ್ಮನಿಗೆ ಹುಟ್ಟುಹಬ್ಬದ ಶುಭ ಕೋರಿದ್ದರು.

    ಸಾರಾ ಇನ್‍ಸ್ಟಾದಲ್ಲಿ ಬಿಕಿನಿ ಫೋಟೋ ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ಅವರನ್ನು ಟ್ರೋಲ್ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡರು. ಕೆಲವರು ತಮ್ಮನ ಜೊತೆ ಬಿಕಿನಿ ಧರಿಸಿ ನಿಲ್ಲಲ್ಲು ನಾಚಿಕೆ ಆಗಲ್ವಾ ಎಂದು ಕಮೆಂಟ್ ಮಾಡಿದ್ದರು. ಮತ್ತೆ ಕೆಲವರು, ಧರ್ಮದ ಬಗ್ಗೆ ಮಾತನಾಡಿ ಸಾರಾ ಅವರಿಗೆ ಕ್ಲಾಸ್ ತೆಗೆದುಕೊಂಡರು.

    ಮತ್ತೆ ಕೆಲವರು, ‘ಲವ್ ಆಜ್ ಕಲ್’ ಚಿತ್ರದಲ್ಲಿ ನಿಮ್ಮ ನಟನೆ ನೋಡಲು ಆಗುತ್ತಿರಲಿಲ್ಲ. ಇದೀಗ ಈ ಫೋಟೋ ನೋಡಲು ಆಗುತ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ‘ನಿಮ್ಮ ತಮ್ಮನ ಮುಂದೆ ನಿಮಗೆ ಹೇಗೆ ಬಿಕಿನಿ ಧರಿಸಲು ಸಾಧ್ಯವಾಗುತ್ತೆ ಎಂದು ಪ್ರಶ್ನಿಸಿದ್ದಾರೆ.

    ಸದ್ಯ ಸಾರಾ ತಮ್ಮ ಮುಂಬರುವ ‘ಅತರಂಗಿ ರೇ’ ಸಿನಿಮಾದ ಶೂಟಿಂಗ್‍ಗಾಗಿ ಬನಾರಸ್‍ನಲ್ಲಿ ಇದ್ದಾರೆ. ಈ ಚಿತ್ರವನ್ನು ನಿರ್ದೇಶಕ ಆನಂದ್ ಎಲ್ ರಾಯ್ ನಿರ್ದೇಶನ ಮಾಡುತ್ತಿದ್ದು, ಸಾರಾ ಜೊತೆ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಹಾಗೂ ತಮಿಳು ನಟ ಧನುಶ್ ನಟಿಸುತ್ತಿದ್ದಾರೆ.

  • ಜಾಕಿ ಚಾನ್‍ಗೆ ಕೊರೊನಾ – ನಟ ಸ್ಪಷ್ಟನೆ

    ಜಾಕಿ ಚಾನ್‍ಗೆ ಕೊರೊನಾ – ನಟ ಸ್ಪಷ್ಟನೆ

    ಬೀಜಿಂಗ್: ಹಾಲಿವುಡ್ ಆ್ಯಕ್ಷನ್ ಕಿಂಗ್, ಸೂಪರ್ ಸ್ಟಾರ್ ಜಾಕಿ ಚಾನ್ ಕೊರೊನಾ ವೈರಸ್ಸಿನಿಂದ ಬಳಲುತ್ತಿದ್ದಾರೆ ಎಂಬ ಮಾತುಗಳು ಎಲ್ಲೆಡೆ ಹರಿದಾಡುತ್ತಿತ್ತು. ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ವತಃ ಜಾಕಿ ಚಾನ್ ಸ್ಪಷ್ಟನೆ ನೀಡಿದ್ದಾರೆ.

    ಜಾಕಿ ಚಾನ್ ಅವರಿಗೆ ಕೊರೊನಾ ವೈರಸ್ ತಗುಲಿದೆ ಎಂಬ ಸುದ್ದಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಬಗ್ಗೆ ಜಾಕಿ ಚಾನ್ ಇನ್‍ಸ್ಟಾದಲ್ಲಿ ತಮ್ಮ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ತಾವು ಕ್ಷೇಮವಾಗಿ ಇರುವುದ್ದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ತಮ್ಮ ಇನ್‍ಸ್ಟಾದಲ್ಲಿ ಜಾಕಿ, “ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು. ನಾನು ಆರೋಗ್ಯವಾಗಿ ಹಾಗೂ ಕ್ಷೇಮವಾಗಿದ್ದೇನೆ. ದಯವಿಟ್ಟು ಯಾರು ನನ್ನ ಆರೋಗ್ಯದ ಬಗ್ಗೆ ಆತಂಕಪಡಬೇಡಿ. ಎಲ್ಲರೂ ಕ್ಷೇಮವಾಗಿ ಹಾಗೂ ಆರೋಗ್ಯವಾಗಿರಲಿ ಎಂದು ನಾನು ಬಯಸುತ್ತೇನೆ” ಎಂದು ಪೋಸ್ಟ್ ಹಾಕಿದ್ದಾರೆ.

    ಸದ್ಯ ವಿಶ್ವದ್ಯಂತ ಅಭಿಮಾನಿಗಳು ಜಾಕಿ ಚಾನ್ ಅವರಿಗೆ ಮಾಸ್ಕ್‍ಗಳು ಸೇರಿದಂತೆ ಹಲವು ವಿಶೇಷ ಉಡುಗೊರೆಗಳನ್ನು ನೀಡುತ್ತಿದ್ದಾರೆ. ಅಭಿಮಾನಿಗಳು ನೀಡಿದ ಮಾಸ್ಕ್ ಗಳನ್ನು ಬೇರೆ ಬೇರೆ ಸಂಸ್ಥೆಗಳಿಗೆ ದಾನ ಮಾಡುವಂತೆ ಜಾಕಿ ಚಾನ್ ತಮ್ಮ ಸಿಬ್ಬಂದಿ ಬಳಿ ಹೇಳಿದ್ದಾರೆ.

    65 ವರ್ಷದ ಜಾಕಿ ಚಾನ್ ಹಾಂಗ್‍ಕಾಂಗ್‍ನಲ್ಲಿ ಜನಿಸಿದ್ದು, ಅಲ್ಲಿ ಈಗ 90ಕ್ಕೂ ಹೆಚ್ಚು ಮಂದಿ ಕೊರೊನಾ ವೈರಸ್‍ಗೆ ತುತ್ತಾಗಿದ್ದಾರೆ. ಚೀನಾದಲ್ಲಿ ಇದುವೆರಗೂ ಕೊರೊನಾ ವೈರಸ್‍ಗೆ 2,924 ಮಂದಿ ಮೃತಪಟ್ಟಿದ್ದು, 85,469 ಮಂದಿಗೆ ಕೊರೊನಾದಿಂದ ಬಳಲುತ್ತಿದ್ದಾರೆ.

  • ದೇಶ ಬಿಟ್ಟು ಹೋಗು – ದಿಶಾ ಬಿಕಿನಿ ಫೋಟೋ ನೋಡಿ ರೊಚ್ಚಿಗೆದ್ದ ನೆಟ್ಟಿಗರು

    ದೇಶ ಬಿಟ್ಟು ಹೋಗು – ದಿಶಾ ಬಿಕಿನಿ ಫೋಟೋ ನೋಡಿ ರೊಚ್ಚಿಗೆದ್ದ ನೆಟ್ಟಿಗರು

    ಮುಂಬೈ: ಬಾಲಿವುಡ್ ನಟಿ ದಿಶಾ ಪಠಾಣಿ ತಮ್ಮ ಇನ್‍ಸ್ಟಾದಲ್ಲಿ ಬಿಕಿನಿ ಫೋಟೋವೊಂದು ಶೇರ್ ಮಾಡಿದ್ದಾರೆ. ಈ ಫೋಟೋ ನೋಡಿ ನೆಟ್ಟಿಗರು ದೇಶ ಬಿಟ್ಟು ಹೋಗು ಎಂದು ಹೇಳುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ದಿಶಾ ತಮ್ಮ ಇನ್‍ಸ್ಟಾದಲ್ಲಿ ಯಾವಾಗಲೂ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಹಾಗೆಯೇ ಈ ಬಾರಿಯೂ ಕೂಡ ಅವರ ಬಿಕಿನಿ ಫೋಟೋ ಹಂಚಿಕೊಂಡಿದ್ದು, ಇದನ್ನು ನೋಡಿದ ನೆಟ್ಟಿಗರು ದೇಶ ಬಿಟ್ಟು ಹೋಗು ಎಂದು ಹೇಳುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

     

    View this post on Instagram

     

    ???? #MYCALVINS @calvinklein

    A post shared by disha patani (paatni) (@dishapatani) on

    ಒಳಉಡುಪಿನ ಬ್ಯ್ರಾಂಡ್‍ನ ರಾಯಭಾರಿ ಆಗಿರುವ ದಿಶಾ ಆಗಾಗ ಬಿಕಿನಿ ಧರಿಸಿದ ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ. ಶುಕ್ರವಾರ ದಿಶಾ ನೀಲಿ ಬಣ್ಣದ ಫೋಟೋ ಹಾಕಿದ್ದರು. ಈ ಫೋಟೋ ನೋಡಿ ಜನರು ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದರು. ಅಲ್ಲದೆ ದೇಶದಲ್ಲಿ ಆಗುತ್ತಿರುವ ಗಂಭೀರ ಸಮಸ್ಯೆ ನಡುವೆ ದಿಶಾ ಈ ರೀತಿಯ ಫೋಟೋ ಹಂಚಿಕೊಂಡಿದ್ದಕ್ಕೆ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಈ ಪೋಸ್ಟ್ ಗೆ ಕೆಲವರು, ಇದು ಸರಿನಾ? ದೇಶದ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಇದೇ ವೇಳೆ ನಿಮಗೆ ಈ ಫೋಟೋ ಬೇಕಿತ್ತು. ನಿಮಗಾಗಿ ಚಪ್ಪಾಳೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, ನಿನ್ನನ್ನು ಈ ರೀತಿ ನೋಡಿದರೆ ನೀವು ದೇಶ ಬಿಟ್ಟು ಹೋಗಬೇಕು ಎಂದು ಕಮೆಂಟ್ ಮಾಡಿದ್ದಾರೆ.

  • ಐರಾ ಹುಟ್ಟುಹಬ್ಬದ ಎಕ್ಸ್‌ಕ್ಲೂಸಿವ್ ವಿಡಿಯೋ ಹಂಚಿಕೊಂಡ ಯಶ್

    ಐರಾ ಹುಟ್ಟುಹಬ್ಬದ ಎಕ್ಸ್‌ಕ್ಲೂಸಿವ್ ವಿಡಿಯೋ ಹಂಚಿಕೊಂಡ ಯಶ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಮ್ಮ ಇನ್‍ಸ್ಟಾದಲ್ಲಿ ಮಗಳ ಹುಟ್ಟುಹಬ್ಬದ ಎಕ್ಸ್‌ಕ್ಲೂಸಿವ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

    ಇತ್ತೀಚೆಗೆ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮಗಳ ಹುಟ್ಟುಹಬ್ಬವನ್ನು ಫನ್ ವರ್ಲ್ಡ್ ನಲ್ಲಿ ಅದ್ಧೂರಿಯಾಗಿ ಆಚರಿಸಿದ್ದರು. ಈ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಇಡೀ ತಾರಾಲೋಕವೇ ಒಂದೆಡೆ ಸೇರಿತ್ತು. ಅಲ್ಲದೆ ಐರಾಳ ಹುಟ್ಟುಹಬ್ಬದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಕಿಂಗ್ ದಂಪತಿಯ ಪುತ್ರಿ

    ಇದೀಗ ಐರಾ ಹುಟ್ಟುಹಬ್ಬದ ಸಂತಸದ ಕ್ಷಣಗಳಿಂದ ಕೂಡಿರುವ ವಿಡಿಯೋವನ್ನು ಯಶ್ ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, “ನಿಮ್ಮೆಲ್ಲರ ಮನವಿಗೆ ನಾನು ಹೇಗೆ ಇಲ್ಲ ಎಂದು ಹೇಳಲು ಸಾಧ್ಯ. ನಮ್ಮ ಪುಟ್ಟ ರಾಜಕುಮಾರಿಯ ಹುಟ್ಟುಹಬ್ಬದ ಝಲಕ್ ಇಲ್ಲಿದೆ. ಹಾಗೆಯೇ ಐರಾ ನಿಮ್ಮ ಪ್ರೀತಿ ಹಾಗೂ ಶುಭಾಶಯಕ್ಕೆ ಧನ್ಯವಾದ ತಿಳಿಸುತ್ತಿದ್ದಾಳೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.  ಇದನ್ನೂ ಓದಿ: ಐರಾಳ ಹುಟ್ಟುಹಬ್ಬದ ಪಾರ್ಟಿಯಲ್ಲಿ ದರ್ಶನ್, ಪುನೀತ್

    ಐರಾ ತನ್ನ ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾಳೆ. ಐರಾಳ ಮೊದಲ ಹುಟ್ಟುಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ಸೇರಿದಂತೆ ಸ್ಯಾಂಡಲ್‍ವುಡ್‍ನ ಹಲವು ಕಲಾವಿದರು ಭಾಗಿಯಾಗಿದ್ದರು. ಐರಾಳ ಹುಟ್ಟುಹಬ್ಬಕ್ಕಾಗಿ ವಿಶೇಷವಾದ ದೊಡ್ಡ ಕೇಕ್ ತಯಾರಿಸಲಾಗಿತ್ತು. ಐರಾ ಈ ಕೇಕ್ ಅನ್ನು ಕಟ್ ಮಾಡಿ ತನ್ನ ಮೊದಲ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಳು.

    ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ನಟಿ ಭಾರತಿ ವಿಷ್ಣುವರ್ಧನ್, ಸಂಸದೆ ಸುಮಲತಾ ಅಂಬರೀಶ್, ನಟರಾದ ದರ್ಶನ್, ಪುನೀತ್ ರಾಜ್‍ಕುಮಾರ್, ಧ್ರುವ ಸರ್ಜಾ, ಅನಿರುದ್ಧ, ಅಭಿಷೇಕ್ ಅಂಬರೀಶ್ ಹಾಗೂ ಉದ್ಯಮಿಯಾದ ಅಶೋಕ್ ಖೇಣಿ ಭಾಗಿಯಾಗಿದ್ದಾರೆ. ಇವರ ಹೊರತಾಗಿ ಐರಾ ಹುಟ್ಟುಹಬ್ಬಕ್ಕೆ ಯಶ್ ಹಾಗೂ ರಾಧಿಕಾ ಕುಟುಂಬಸ್ಥರು ಆಗಮಿಸಿದ್ದರು.

  • ‘ಪೋಸ್ ಕೊಡೋದು ಬಿಟ್ಟು, ಬ್ಯಾಟಿಂಗ್ ಕಡೆ ಗಮನ ಕೊಡು’: ರೋಹಿತ್ ಶರ್ಮಾ

    ‘ಪೋಸ್ ಕೊಡೋದು ಬಿಟ್ಟು, ಬ್ಯಾಟಿಂಗ್ ಕಡೆ ಗಮನ ಕೊಡು’: ರೋಹಿತ್ ಶರ್ಮಾ

    ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ತಂಡದಲ್ಲಿ ಆಡಲು ಅವಕಾಶ ಪಡೆದರೂ, ಶಾಶ್ವತ ಸ್ಥಾನ ಪಡೆಯಲು ಕೇದಾರ್ ಜಾಧವ್ ವಿಫಲರಾಗಿದ್ದು, 2019ರ ವಿಶ್ವಕಪ್ ನಲ್ಲೂ ಕೇದಾರ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಈ ನಡುವೆ ಕೇದಾರ್ ಜಾಧವ್‍ರ ಇನ್‍ಸ್ಟಾ ಪೋಸ್ಟ್ ಗೆ ರೋಹಿತ್ ಶರ್ಮಾ ಆಸಕ್ತಿದಾಯಕ ಕಾಮೆಂಟ್ ಮಾಡಿ ಗಮನ ಸೆಳೆದಿದ್ದಾರೆ.

    ಕೇದಾರ್ ಜಾಧವ್ ತಮ್ಮ ಇನ್‍ಸ್ಟಾದಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುವ ವೇಳೆ ತೆಗೆದಿರುವ ಫೋಟೋವನ್ನು ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ರೋಹಿತ್ ಶರ್ಮಾ, ‘ಪೋಸ್ ಕೊಡೋದು ಬಿಟ್ಟು, ಬ್ಯಾಟಿಂಗ್ ಕಡೆ ಗಮನ ಕೊಡು’ ಎಂದಿದ್ದಾರೆ. ರೋಹಿತ್ ಶರ್ಮಾ, ಕೇದಾರ್ ಜಾಧವ್ ಅವರೊಂದಿಗೆ ಇರುವ ಸ್ನೇಹದ ಕಾರಣ ಈ ರೀತಿ ಕಾಮೆಂಟ್ ಮಾಡಿದ್ದಾರೆ. ಜಾಧವ್ ಪೋಸ್ಟ್ ಗೆ ರೋಹಿತ್ ನೀಡಿರುವ ಪ್ರತಿಕ್ರಿಯೆ ಇನ್‍ಸ್ಟಾದಲ್ಲಿ ಹೆಚ್ಚು ಪಾಪ್ಯುಲರ್ ಆಗಿದೆ.

    https://www.instagram.com/p/B5o_AZ_F0iz/

    ಇತ್ತೀಚೆಗೆ ನಡೆದ ಸೈಯ್ಯದ್ ಅಲಿ ಮುಷ್ತಾಕ್ ಟಿ-20 ಟ್ರೋಫಿಯಲ್ಲೂ ಜಾಧವ್ ಕಳಪೆ ಪ್ರದರ್ಶನ ತೋರಿದ್ದರು. ಏಕದಿನ ಕ್ರಿಕೆಟ್‍ನಲ್ಲಿ 2 ಶತಕ, 6 ಅರ್ಧ ಶತಕ ಗಳಿಸಿರುವ ಜಾಧವ್‍, ಟಿ-20 ಮಾದರಿಯಲ್ಲಿ 9 ಪಂದ್ಯಗಳಿಂದ 122 ರನ್ ಗಳಿಸಿದ್ದಾರೆ.

    ವೆಸ್ಟ್ ಇಂಡೀಸ್ ವಿರುದ್ಧ ಡಿ.15 ರಿಂದ ಆರಂಭವಾಗುವ 3 ಪಂದ್ಯಗಳ ಏಕದಿನ ಕೇದಾರ್ ಜಾಧವ್ ಹಾಗೂ ರೋಹಿತ್ ಶರ್ಮಾ ಇಬ್ಬರೂ ಸ್ಥಾನ ಪಡೆದಿದ್ದು, ಏಕದಿನ ಸರಣಿಗೂ ಮುನ್ನ ಡಿ.06 ಶುಕ್ರವಾರ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟಿ-20 ಪಂದ್ಯವನ್ನು ಆಡಲಿದೆ.