Tag: Inspector Vikram

  • ಅಭಿಮಾನಿ ದೇವರುಗಳು ಕನ್ನಡ ಸಿನಿಮಾಗಳ ಕೈ ಬಿಡಲ್ಲ: ಪ್ರಜ್ವಲ್ ದೇವರಾಜ್

    ಅಭಿಮಾನಿ ದೇವರುಗಳು ಕನ್ನಡ ಸಿನಿಮಾಗಳ ಕೈ ಬಿಡಲ್ಲ: ಪ್ರಜ್ವಲ್ ದೇವರಾಜ್

    ಬೆಂಗಳೂರು: ನಮ್ಮ ಅಭಿಮಾನಿ ದೇವರುಗಳು ಖಂಡಿತವಾಗಿ ಕನ್ನಡ ಸಿನಿಮಾಗಳ ಕೈ ಬಿಡುವುದಿಲ್ಲ. ಕೇವಲ ನನ್ನ ಸಿನಿಮಾಕ್ಕೆ ಮಾತ್ರವಲ್ಲದೇ ಇತರೆ ನಟರ ಸಿನಿಮಾಗಳಿಗೂ ಹೀಗೆ ಬೆಂಬಲ ನೀಡಿ ಪ್ರೋತ್ಸಾಹಿಸಿ ಎಂದು ನಟ ಪ್ರಜ್ವಲ್ ದೇವರಾಜ್ ಹೇಳಿದರು.

    ಇಂದಿನಿಂದ ರಾಜ್ಯದಲ್ಲಿ ಹೌಸ್ ಫುಲ್ ಪ್ರದರ್ಶನಗಳು ಕಾಣುತ್ತಿವೆ. ಇಂದು ಕನ್ನಡದ 4 ಸಿನಿಮಾಗಳು ತೆರೆ ಮೇಲೆ ಅಪ್ಪಳಿಸಿವೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾವೆಲ್ಲರೂ ಒಂದು ರೀತಿಯ ಕಷ್ಟಕರವಾದ ದಿನದ ಸವಾಲನ್ನು ಹೆದರಿಸಿ ಕೊರೊನಾ ಗೆದ್ದು ಬಂದಿದ್ದೇವೆ. ಇದೀಗ ವ್ಯಾಕ್ಸಿನ್ ಕೂಡ ಬಂದಿದೆ. ಇನ್ನು ಮುಂದೆ ಕನ್ನಡ ಚಿತ್ರರಂಗದ ಹಬ್ಬ ಮತ್ತೆ ಶುರುವಾಗಿದೆ ಅಂತಾನೇ ಹೇಳಬಹುದು. ಸಿನಿಮಾ ವೀಕ್ಷಿಸಲು ಇಷ್ಟೊಂದು ಮಂದಿ ಸೇರಿರುವುದನ್ನು ಕಂಡು ನನಗೆ ಬಹಳ ಖುಷಿಯಾಗುತ್ತಿದೆ. ನಮ್ಮ ಅಭಿಮಾನಿ ದೇವರುಗಳು ಖಂಡಿತವಾಗಿ ಕನ್ನಡ ಸಿನಿಮಾಗಳ ಕೈ ಬಿಡುವುದಿಲ್ಲ ಎಂದು ತಿಳಿದಿದೆ. ಕೇವಲ ನನ್ನ ಸಿನಿಮಾಕ್ಕೆ ಮಾತ್ರವಲ್ಲದೇ ಇತರೆ ನಟರ ಸಿನಿಮಾಗಳಿಗೂ ಹೀಗೆ ಬೆಂಬಲ ನೀಡಿ ಪ್ರೋತ್ಸಹಿಸಿ ಎಂದು ತಿಳಿಸಿದರು.

    ಸಿನಿಮಾ ಕುರಿತಂತೆ ಮಾತನಾಡಿದ ಪ್ರಜ್ವಲ್, ನಮಗೆ ಯಾವಾಗಲಾದರೂ ಬೇಸರವಾದರೆ ನಮ್ಮ ಮೂಡ್ ಬದಲಾಯಿಸಿಕೊಳ್ಳಲು ನಾವು ಮೊದಲು ಹಾಸ್ಯ ಅಥವಾ ಮನರಂಜನೆಯ ಕಡೆಗೆ ವಾಲುತ್ತೇವೆ. ಹಾಗೆಯೇ ಹಾಸ್ಯ ಹಾಗೂ ಮನರಂಜನೆ ಖುಷಿಗೆ ಮೆಡಿಸಿನ್ ‘ಇನ್ಸ್‍ಪೆಕ್ಟರ್ ವಿಕ್ರಮ್’. ಈ ಸಿನಿಮಾವನ್ನು ವೀಕ್ಷಿಸಿದರೆ ನೀವು ಎಲ್ಲಾ ನೋವನ್ನು ಮರೆಯುವುದರ ಜೊತೆಗೆ ಮತ್ತೊಮ್ಮೆ ಈ ಸಿನಿಮಾವನ್ನು ನೋಡಬೇಕು ಎಂದು ಅನಿಸುವಂತಿದೆ ಎಂದು ಹೇಳಿದರು.

    ಸ್ಯಾಂಡಲ್‍ವುಡ್ ಡೈನಾಮಿಕ್ ಪ್ರಿನ್ಸ್ ನಟ ಪ್ರಜ್ವಲ್ ದೇವ್‍ರಾಜ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಇನ್ಸ್ ಪೆಕ್ಟರ್ ವಿಕ್ರಮ್ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಇನ್ನೂ ನಟ ಪ್ರಜ್ವಲ್ ಪತ್ನಿ ಹಾಗೂ ಸಹೋದರನೊಂದಿಗೆ ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳೊಂದಿಗೆ ಸಿನಿಮಾ ವೀಕ್ಷಿಸಿದರು. ಮೊದಲ ದಿನವೇ ಉತ್ತಮ ರೆಸ್ಪಾನ್ಸ್ ಪಡೆಯುತ್ತಿರುವ ಇನ್ಸ್ ಪೆಕ್ಟರ್ ವಿಕ್ರಮ್ ಸಿನಿಮಾದಲ್ಲಿ ಪ್ರಜ್ವಲ್‍ಗೆ ಜೋಡಿಯಾಗಿ ನಟಿ ಭಾವನಾ ನಟಿಸಿದ್ದಾರೆ. ಈ ಚಿತ್ರಕ್ಕೆ ಸಹಾನ ಮೂರ್ತಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾಕ್ಕೆ ಅನೂಪ್ ಸೀಲಿನ್ ಸಂಗೀತ ಸಂಯೋಜಿಸಿದ್ದು, ವಿಕ್ಯಂತ್ ಬಂಡವಾಳ ಹೂಡಿದ್ದಾರೆ.

  • ಅಭಿಮಾನಿಗಳಿಗೆ ಪ್ರಜ್ವಲ್ ದೇವರಾಜ್ ಸಿಹಿ ಸುದ್ದಿ

    ಅಭಿಮಾನಿಗಳಿಗೆ ಪ್ರಜ್ವಲ್ ದೇವರಾಜ್ ಸಿಹಿ ಸುದ್ದಿ

    ಬೆಂಗಳೂರು: ನಟ ಪ್ರಜ್ವಲ್ ದೇವರಾಜ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು, ಮನರಂಜನೆ ನೀಡಲು ಮತ್ತೊಂದು ಸಿನಿಮಾ ತೆರೆಗೆ ಬರುತ್ತಿರುವುದನ್ನು ಖಚಿತಪಡಿಸಿದ್ದಾರೆ.

    ನಟ ಪ್ರಜ್ವಲ್ ದೇವರಾಜ್ ಅಭಿನಯದ ಇನ್‍ಸ್ಪೆಕ್ಟರ್ ವಿಕ್ರಮ್ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದ್ದು, ಕೊರೊನಾ ಬಳಿಕ ಮತ್ತೊಂದು ಸಿನಿಮಾ ತೆರೆಗೆ ಅಪ್ಪಳಿಸುತ್ತಿದೆ. ಈಗಾಗಲೇ ಹಲವು ಸಿನಿಮಾಗಳು ತೆರೆ ಕಂಡಿದ್ದು, ಇದೀಗ ಇನ್‍ಸ್ಪೆಕ್ಟರ್ ವಿಕ್ರಮ್ ಮೂಲಕ ಪ್ರಜ್ವಲ್ ದೇವರಾಜ್ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

    ಫೆಬ್ರವರಿ 5ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, ನಿರ್ದೇಶಕ ಶ್ರೀನರಸಿಂಹ ಸಾಮಾಜಿಕ ಜಾಲತಾಣಗಳ ಮೂಲಕ ಈ ಕುರಿತು ಸ್ಪಷ್ಟಪಡಿಸಿದ್ದಾರೆ. ಮೂರು ವರ್ಷಗಳಿಂದ ಇನ್‍ಸ್ಪೆಕ್ಟರ್ ವಿಕ್ರಮ್ ಚಿತ್ರವನ್ನು ತಯಾರಿಸಲಾಗಿದ್ದು, ಇದೀಗ ಬಿಡುಗಡೆ ಭಾಗ್ಯ ಸಿಕ್ಕಿದೆ. ಕೊರೊನಾದಿಂದಾಗಿ ಸ್ಯಾಂಡಲ್‍ವುಡ್ ಹಲವು ಸಿನಿಮಾಗಳ ಬಿಡುಗಡೆ ತಡವಾಗಿದ್ದು, ಇನ್‍ಸ್ಪೆಕ್ಟರ್ ವಿಕ್ರಮ್ ಸಹ ತಡವಾಗಿ ತೆರೆಗೆ ಅಪ್ಪಳಿಸುತ್ತಿದೆ.

     

    View this post on Instagram

     

    A post shared by Sri Narasimha (@sri_narasimha)

    ಚಿತ್ರದಲ್ಲಿ ಭಾವನಾ ಮೆನನ್, ರಘು ಮುಖರ್ಜಿ ಹಾಗೂ ಅತಿಥಿ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಶ್ರೀನರಸಿಂಹ ಚಿತ್ರ ನಿರ್ದೇಶಿಸಿದ್ದು, ವಿಖ್ಯಾತ್ ಎ.ಆರ್. ನಿರ್ಮಿಸಿದ್ದಾರೆ.

    ಮತ್ತೊಂದೆಡೆ ಪ್ರಜ್ವಲ್ ದೇವರಾಜ್ ಈಗಾಗಲೇ ಹಲವು ದೊಡ್ಡ ಪ್ರಾಜೆಕ್ಟ್‍ಗಳಲ್ಲಿ ಬ್ಯುಸಿಯಾಗಿದ್ದು, ಶೀಘ್ರವೇ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಸದ್ಯ ಅರ್ಜುನ್ ಗೌಡ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಪ್ರಜ್ವಲ್, ಕಿಕ್ ಬಾಕ್ಸರ್ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಇದೇ ವೇಳೆ ವೀರಂ ಸಿನಿಮಾ ಚಿತ್ರೀಕರಣಕ್ಕೆ ಸಹ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಶೀಘ್ರ ಸೆಟ್ಟೇರಲಿದೆ. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಪ್ರಜ್ವಲ್ ದೇವರಾಜ್ ತೊಡಗಿಸಿಕೊಂಡಿದ್ದಾರೆ.

    ಇದೆಲ್ಲದರ ನಡುವೆ ಪಿ.ಸಿ.ಶಂಕರ್ ಅವರ ಇನ್ನೂ ಹೆಸರಿಡದ ಥ್ರಿಲ್ಲರ್ ಚಿತ್ರ ಸಹ ಸಾಲಿನಲ್ಲಿದೆ. ಹೀಗಾಗಿ ಪ್ರಜ್ವಲ್ ದೇವರಾಜ್ ಅವರಿಗೆ 2021 ಸಖತ್ ಬ್ಯುಸಿ, ಹಾರ್ಡ್ ವರ್ಕ್ ಮಾಡುವ ವರ್ಷವಾಗಿದೆ ಎಂದರೆ ತಪ್ಪಾಗಲಾರದು. ಜೆಂಟಲ್‍ಮೆನ್ ಸಕ್ಸಸ್ ಬಳಿಕ ಇದೀಗ ಇನ್‍ಸ್ಪೆಕ್ಟರ್ ವಿಕ್ರಂ ಚಿತ್ರದ ಕುರಿತು ನಿರೀಕ್ಷೆ ಹೆಚ್ಚಿದ್ದು, ಯಾವ ರೀತಿ ಮೂಡಿ ಬರಲಿದೆ ಕಾದು ನೋಡಬೇಕಿದೆ.

  • ಪ್ರಜ್ವಲ್ ಬರ್ತ್ ಡೇಗೆ ಇನ್‌ಸ್ಪೆಕ್ಟರ್‌ ವಿಕ್ರಮ್ ಸ್ಪೆಷಲ್ ಟೀಸರ್!

    ಪ್ರಜ್ವಲ್ ಬರ್ತ್ ಡೇಗೆ ಇನ್‌ಸ್ಪೆಕ್ಟರ್‌ ವಿಕ್ರಮ್ ಸ್ಪೆಷಲ್ ಟೀಸರ್!

    ಬೆಂಗಳೂರು: ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಇನ್‌ಸ್ಪೆಕ್ಟರ್‌ ವಿಕ್ರಂ ಚಿತ್ರವೀಗ ಟೀಸರ್ ಕಾರಣದಿಂದ ಸಖತ್ ಸುದ್ದಿ ಮಾಡುತ್ತಿದೆ. ಈ ಸಿನಿಮಾ ಮೂಲಕವೇ ಪ್ರಜ್ವಲ್ ವೃತ್ತಿ ಬದುಕಿನ ಮಹತ್ವದ ಮೈಲಿಗಲ್ಲಾಗುವಂಥಾ ಸೂಚನೆಗಳೇ ದಟ್ಟವಾಗಿವೆ. ಇತ್ತೀಚೆಗಷ್ಟೇ ಈ ಚಿತ್ರದ ಟೀಸರ್ ಬಿಡುಗಡೆಯಾಗಿ ಹೆಚ್ಚಿನ ವೀಕ್ಷಣೆಯೊಂದಿಗೆ ಪ್ರೇಕ್ಷಕರನ್ನ ತಲುಪಿಕೊಂಡಿತ್ತು. ಇದೀಗ ಜುಲೈ ಮೂರನೇ ತಾರೀಕು ಮಧ್ಯರಾತ್ರಿ ಮತ್ತೊಂದು ವಿಶೇಷ ಟೀಸರ್ ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ.

    ಹೀಗೆ ಇನ್‌ಸ್ಪೆಕ್ಟರ್‌ ವಿಕ್ರಂ ಚಿತ್ರತಂಡ ತರಾತುರಿಯಿಂದ ಮತ್ತೊಂದು ಟೀಸರ್ ಬಿಡುಗಡೆಗೆ ಮುಂದಾಗಿರೋದರ ಹಿಂದೆ ಪ್ರಜ್ವಲ್ ದೇವರಾಜ್ ಅವರಿಗೆ ಬರ್ತ್‍ಡೇ ಗಿಫ್ಟು ಕೊಡುವ ಇರಾದೆ ಇದೆ. ಜೂನ್ 4ನೇ ತಾರೀಕು ಪ್ರಜ್ವಲ್ ಹುಟ್ಟಿದ ದಿನ. ಆದ್ದರಿಂದ ಜುಲೈ 3ನೇ ತಾರೀಕಿನ ನಡು ರಾತ್ರಿಯೇ ಈ ವಿಶೇಷವಾದ ಟೀಸರ್ ಬಿಡುಗಡೆಗೊಳ್ಳಲಿದೆಯಂತೆ.

    ವಿಖ್ಯಾತ್ ನಿರ್ಮಾಣ ಮಾಡಿರೋ ಈ ಚಿತ್ರವನ್ನು ಶ್ರೀ ನರಸಿಂಹ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಜಾಕಿ ಖ್ಯಾತಿಯ ಭಾವನಾ ಈ ಚಿತ್ರದ ಮೂಲಕ ಮೊದಲ ಸಲ ಪ್ರಜ್ವಲ್ ಜೋಡಿಯಾಗಿ ನಟಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಅತಿಥಿ ಪಾತ್ರವೊಂದರ ಮೂಲಕ ಸಾಥ್ ಕೊಟ್ಟಿರೋದು ಈ ಸಿನಿಮಾ ಬಗೆಗಿನ ನಿರೀಕ್ಷೆ ಮತ್ತಷ್ಟು ಗರಿಗೆದರುವಂತೆ ಮಾಡಿದೆ.

    ಇದೇ ಹೊತ್ತಿನಲ್ಲಿ ಪ್ರಜ್ವಲ್ ದೇವರಾಜ್ ಅವರ ಮುಂದೆ ಅಪರೂಪ ಅನ್ನಿಸುವಂಥಾ ಸಾಲು ಸಾಲು ಅವಕಾಶಗಳಿವೆ. ಒಂದು ಚಿತ್ರ ಚಿತ್ರೀಕರಣದ ಹಂತದಲ್ಲಿರುವಾಗಲೇ ಮತ್ತೊಂದು ಹೊಸಾ ಆಫರ್ ಅವರನ್ನು ಅರಸಿ ಬರುತ್ತಿದೆ. ಹೀಗೆ ಮದುವೆಯ ನಂತರದಲ್ಲಿ ಅವರ ವೃತ್ತಿ ಜೀವನ ಅಚ್ಚರಿದಾಯಕವಾಗಿ ಟೇಕಾಫ್ ಆಗಿದೆ. ಅವರ ಹಿಟ್ ಯಾನ ಇನ್‌ಸ್ಪೆಕ್ಟರ್‌ ವಿಕ್ರಂ ಚಿತ್ರದಿಂದಲೇ ಶುರುವಾಗೋ ಲಕ್ಷಣಗಳೇ ಢಾಳಾಗಿವೆ.

  • ಪ್ರಜ್ವಲ್ ದೇವರಾಜ್ ಜೊತೆ ನಟಿಸಲಿದ್ದಾರಾ ಮಡದಿ ರಾಗಿಣಿ?

    ಪ್ರಜ್ವಲ್ ದೇವರಾಜ್ ಜೊತೆ ನಟಿಸಲಿದ್ದಾರಾ ಮಡದಿ ರಾಗಿಣಿ?

    ಬೆಂಗಳೂರು: ಪ್ರಜ್ವಲ್ ದೇವರಾಜ್ ಇದೀಗ ಇನ್ಸ್ ಪೆಕ್ಟರ್ ವಿಕ್ರಮ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಮಾಸ್ ಕಥಾ ಹಂದರ ಹೊಂದಿರೋ ಈ ಚಿತ್ರದ ಬಗ್ಗೆ ಭಾರೀ ಹೋಪ್ ಇಟ್ಟುಕೊಂಡಿರೋ ಪ್ರಜ್ವಲ್ ಪಾಲಿಗಿದು ಟರ್ನಿಂಗ್ ಪಾಯಿಂಟಿನಂಥಾ ಚಿತ್ರ. ಇದೀಗ ಈ ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಪ್ರಜ್ವಲ್ ಮಡದಿ ರಾಗಿಣಿ ಚಂದ್ರನ್ ನಟಿಸಲಿದ್ದಾರೆಂಬ ಸುದ್ದಿ ಹೊರ ಬಿದ್ದಿದೆ!

    ಈ ಚಿತ್ರದಲ್ಲಿ ಇಡೀ ಕಥೆಯ ಮುಖ್ಯಬಿಂದುವಿನಂತಿರೋ ಅತಿಥಿ ಪಾತ್ರವೊಂದಿದೆಯಂತೆ. ಆದರೆ ಈ ಪಾತ್ರಕ್ಕಾಗಿ ನಿರ್ದೇಶಕ ವಿಖ್ಯಾತ್ ಯಾರನ್ನೂ ಆಯ್ಕೆ ಮಾಡಿಕೊಂಡಿರಲಿಲ್ಲ. ಇದೀಗ ಈ ಪಾತ್ರದಲ್ಲಿ ಪ್ರಜ್ವಲ್ ದೇವರಾಜ್ ಮಡದಿ ರಾಗಿಣಿ ನಟಿಸೋದೇ ಸೂಕ್ತ ಎಂಬ ತೀರ್ಮಾನಕ್ಕೆ ವಿಖ್ಯಾತ್ ಬಂದಿದ್ದಾರೆ.

    ಈ ಬಗ್ಗೆ ಪ್ರಜ್ವಲ್‍ಗೆ ಸಣ್ಣ ಸುಳಿವನ್ನೂ ಕೊಡದೇ ವಿಖ್ಯಾತ್ ಚಿತ್ರ ತಂಡದ ಜೊತೆ ಮಾತಾಡಿದ್ದಾರೆ. ಅತ್ತಲಿಂದಲೂ ರಾಗಿಣಿಯೇ ಸೂಕ್ತ ಎಂಬ ಅಭಿಪ್ರಾಯವೇ ಕೇಳಿ ಬಂದಿದೆ. ಇದಾದಾಕ್ಷಣವೇ ನೇರವಾಗಿ ರಾಗಿಣಿಯವರನ್ನೇ ಸಂಪರ್ಕಿಸಿದ್ದಾರೆ. ಬಳಿಕ ರಾಗಿಣಿ ಪ್ರಜ್ವಲ್ ಜೊತೆ ಮಾತಾಡಿ ನಟಿಸಲು ಒಪ್ಪಿಕೊಂಡಿದ್ದಾರಂತೆ.

    ರಾಗಿಣಿ ಕೂಡಾ ಮೂಲತಃ ಮಾಡೆಲಿಂಗ್ ಕ್ಷೇತ್ರದಿಂದ ಬಂದವರು. ಡ್ಯಾನ್ಸರ್ ಕೂಡಾ ಆಗಿರೋ ರಾಗಿಣಿಗೆ ಒಂದು ಹಂತದಲ್ಲಿಯಾದರೂ ನಟಿಯಾಗಬೇಕೆಂಬ ಆಸೆ ಮೊಳೆತಿರುತ್ತದೆ. ಆದರೀಗ ಅವರಿಗೆ ತಮ್ಮ ಪತಿ ಪ್ರಜ್ವಲ್ ಜೊತೆಗೇ ನಟಿಸೋ ಯೋಗ ಕೂಡಿ ಬಂದಿದೆ. ಈ ಮೂಲಕ ಅವರು ಮೊದಲ ಸಲ ಕ್ಯಾಮೆರಾ ಮುಂದೆ ನಿಲ್ಲಲಿದ್ದಾರೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/BkupBJPFAP-/?taken-by=prajwaldevaraj