Tag: INS vikramaditya

  • ಕಾರವಾರ ಅರಬ್ಬಿ ಸಮುದ್ರದಲ್ಲಿ ಏಕಕಾಲಕ್ಕೆ 35 ಯುದ್ಧ ವಿಮಾನಗಳ ಹಾರಾಟ- INS ವಿಕ್ರಮಾದಿತ್ಯ, INS ವಿಕ್ರಾಂತ್ ಸಾಮರ್ಥ್ಯ ಪ್ರದರ್ಶನ

    ಕಾರವಾರ ಅರಬ್ಬಿ ಸಮುದ್ರದಲ್ಲಿ ಏಕಕಾಲಕ್ಕೆ 35 ಯುದ್ಧ ವಿಮಾನಗಳ ಹಾರಾಟ- INS ವಿಕ್ರಮಾದಿತ್ಯ, INS ವಿಕ್ರಾಂತ್ ಸಾಮರ್ಥ್ಯ ಪ್ರದರ್ಶನ

    ಕಾರವಾರ: ಏಷ್ಯಾದ ಅತಿದೊಡ್ಡ ನೌಕಾನೆಲೆ ಎಂದೇ ಗುರುತಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆ ಇದೀಗ ಭಾರತದ ನೌಕಾಪಡೆಯ ಸಾಮರ್ಥ್ಯವನ್ನ ದುಪ್ಪಟ್ಟು ಮಾಡಿದ ಕೀರ್ತಿಗೂ ಪಾತ್ರವಾಗಿದೆ.

    ಕಾರವಾರದ ಅರಬ್ಬಿ ಸಮುದ್ರದ ನೌಕಾನೆಲೆಯಲ್ಲಿ ಶನಿವಾರ ಯುದ್ಧ ವಿಮಾನವಾಹಕ ನೌಕೆಯಾದ INS ವಿಕ್ರಮಾದಿತ್ಯ ಹಾಗೂ INS ವಿಕ್ರಾಂತ್ ಹಡಗುಗಳ ಶಕ್ತಿ ಸಾಮರ್ಥ್ಯ ಪರೀಕ್ಷಿಸಲಾಯಿತು. ಇದನ್ನೂ ಓದಿ: ಫಸ್ಟ್‌ ಟೈಂ ಕಾರವಾರಕ್ಕೆ ಬಂತು ಐಎನ್‌ಎಸ್‌ ವಿಕ್ರಾಂತ್‌ – ನಿಲುಗಡೆಯಾಗುತ್ತಿರುವುದು ಯಾಕೆ?

    ಭಾರತೀಯ ನೌಕಾಪಡೆಯ INS ವಿಕ್ರಮಾದಿತ್ಯ ಹಾಗೂ INS ವಿಕ್ರಾಂತ್ ವಿಮಾನವಾಹಕ ಹಡಗಿನಲ್ಲಿ 35ಕ್ಕೂ ಹೆಚ್ಚು ಯುದ್ಧ ವಿಮಾನಗಳು ಯಶಸ್ವಿಯಾಗಿ ಹಾರಾಟ ನಡೆಸಿದವು. ವಿಕ್ರಮಾದಿತ್ಯ ಹಾಗೂ ವಿಕ್ರಾಂತ್ ಹಡಗಿನಲ್ಲಿ ಲ್ಯಾಂಡಿಂಗ್ ಆಗುವ ಮೂಲಕ ತಡೆರಹಿತ ಯುದ್ಧ ವಾಹಕದ ಪರೀಕ್ಷೆಯನ್ನು ನೌಕಾದಳ ಯಶಸ್ವಿಗೊಳಿಸಿತು.

    ಕಾರವಾರ ಅರಬ್ಬಿ ಸಮುದ್ರದಲ್ಲಿ ಯುದ್ಧ ವಾಹಕ ಹಡಗಿನಲ್ಲಿ MiG-29K ಫೈಟರ್ ಜೆಟ್‌ಗಳು, MH60R, Kamov, ಸೀ ಕಿಂಗ್, ಚೇತಕ್ ಮತ್ತು ALH ಹೆಲಿಕಾಪ್ಟರ್‌ಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಯುದ್ಧ ವಿಮಾನಗಳ ಹಾರಾಟ ಪರೀಕ್ಷೆಗೆ ವಿಕ್ರಾಂತ್‌ ಹಾಗೂ ವಿಕ್ರಮಾದಿತ್ಯ ಅವಕಾಶ ಕಲ್ಪಿಸಿಕೊಟ್ಟು, ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿತು.

    ಕದಂಬ ನೌಕಾನೆಲೆಯಲ್ಲಿ ಸ್ಥಾನ ಪಡೆದಿರುವ INS ವಿಕ್ರಮಾದಿತ್ಯ ಹಾಗೂ INS ವಿಕ್ರಾಂತ್ ಹಡಗು ಮತ್ತೊಮ್ಮೆ ಯುದ್ಧ ಸನ್ನದ್ಧತೆಗೆ ಸಿದ್ದವಾಗಿದೆ. ಶನಿವಾರ ನಡೆದ ಸಾಮರ್ಥ್ಯ ಪರೀಕ್ಷೆ ಯಶಸ್ವಿಯಾಗಿದ್ದು, ಈ ಮೂಲಕ ಸಮುದ್ರ ಭಾಗದ ಗಡಿಯನ್ನು ಕಾಯಲು ಹಾಗೂ ಶತ್ರು ರಾಷ್ಟ್ರದ ದಾಳಿಯನ್ನು ಎರಡೂ ವಿಮಾನವಾಹಕಗಳು ಏಕ ಕಾಲದಲ್ಲಿ ಎದುರಿಸಬಲ್ಲ ವಿಶ್ವಾಸ ಮೂಡಿಸಿವೆ. ಇದನ್ನೂ ಓದಿ: ಅರಬ್ಬೀ ಸಮುದ್ರದಲ್ಲಿ ದೋಣಿ ಮುಳುಗಡೆ – 12 ಮೀನುಗಾರರ ರಕ್ಷಣೆ

    2025ಕ್ಕೆ ದೇಶಕ್ಕೆ ಸಮರ್ಪಣೆ
    ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗಾದಲ್ಲಿ ಕದಂಬ ನೌಕಾನೆಲೆಯು ಏಷ್ಯಾದಲ್ಲೇ ಅತೀ ದೊಡ್ಡ ನೌಕಾನೆಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿನ ಭೂ ಪ್ರದೇಶ ವೈರಿಗಳಿಗೆ ಚಿತ್ತ ಕಾಣದಂತೆ ಮಾಡಿ ಶತ್ರುಗಳ ಮೇಲೆ ಮುಗಿಬೀಳಲು ಸುವ್ಯವಸ್ಥಿತ ನೌಕಾ ತಾಣವಾಗಿ ಮಾರ್ಪಡುತಿದ್ದು ಇದೀಗ ನೌಕಾ ನೆಲೆಯಲ್ಲಿ ಎರಡನೇ ಹಂತದ ಕಾಮಗಾರಿಗಳು ಮುಕ್ತಾಯದ ಹಂತ ತಲುಪಿದೆ. ಒಂದು ಲಕ್ಷ ಸಿಬ್ಬಂದಿಗೆ ವಸತಿ ನಿಲಯ ,ಕಚೇರಿ ಸಂಕೀರ್ಣ, ರಿಪೇರಿ ಯಾರ್ಡ್‌ಗಳು ಈಗಾಗಲೇ ನಿರ್ಮಾಣದ ಅಂತಿಮ ಹಂತ ತಲುಪಿದ್ದು ನೌಕಾ ದಳದ ಮಾಹಿತಿ ಪ್ರಕಾರ 2025ರ ವೇಳೆಗೆ ದೇಶಕ್ಕೆ ಸಮರ್ಪಣೆಗೊಳ್ಳಲಿದೆ.

  • INS ವಿಕ್ರಮಾದಿತ್ಯ ನೌಕಾ ಸಾಮರ್ಥ್ಯ ಪರೀಕ್ಷೆಗೆ ಸಿದ್ಧ – ನೌಕಾಯಾನಕ್ಕೆ ಅಣಿಯಾದ ವಿಮಾನ ವಾಹಕ ನೌಕೆಗಳು

    INS ವಿಕ್ರಮಾದಿತ್ಯ ನೌಕಾ ಸಾಮರ್ಥ್ಯ ಪರೀಕ್ಷೆಗೆ ಸಿದ್ಧ – ನೌಕಾಯಾನಕ್ಕೆ ಅಣಿಯಾದ ವಿಮಾನ ವಾಹಕ ನೌಕೆಗಳು

    ಕಾರವಾರ: ದೇಶದ ವಿಮಾನ ವಾಹಕ ನೌಕೆಯಾಗಿರುವ INS ವಿಕ್ರಮಾದಿತ್ಯ (INS Vikramaditya) ಯುದ್ಧ ಹಡಗು ಈ ತಿಂಗಳ ಕೊನೆಯಲ್ಲಿ ಕಾರವಾರದ (Karwar) ಕದಂಬ ನೌಕಾ ನೆಲೆಯಿಂದ ಯುದ್ಧ ಸಾಮರ್ಥ್ಯ ಪರೀಕ್ಷೆಗಾಗಿ ಯಾನ ಪ್ರಾರಂಭಿಸಲಿದೆ. ಮಳೆಗಾಲಕ್ಕೂ ಮೊದಲು ಐಎನ್‌ಎಸ್‌ ವಿಕ್ರಮಾದಿತ್ಯ ಹಡಗು ಹಾಗೂ ಐಎನ್‍ಎಸ್ ವಿಕ್ರಾಂತ್ ಹಡಗಿನ ಯುದ್ಧ ಸಾಮರ್ಥ್ಯವನ್ನು ಭಾರತೀಯ ನೌಕಾಪಡೆ ಪರೀಕ್ಷಿಸಲಿದೆ.

    ಈ ಹಿಂದೆ ವಿಕ್ರಮಾದಿತ್ಯ ಹಡಗನ್ನು ದುರಸ್ತಿ ಕಾರ್ಯಕ್ಕಾಗಿ ಕಾರವಾರದ ಕದಂಬ ನೌಕಾನೆಲೆಗೆ ತರಲಾಗಿತ್ತು. ಕಳೆದ ವರ್ಷ ದುರಸ್ತಿ ಕಾರ್ಯ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದ ಬೆಂಕಿ ಅವಘಡ ಸಂಭವಿಸಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಹೀಗಾಗಿ ಇದರ ದಕ್ಷತೆ, ಕ್ಷಮತೆಯನ್ನು ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿ ಇದರ ಪರೀಕ್ಷಾರ್ಥ ವರದಿಯನ್ನು ರಕ್ಷಣಾ ಸಚಿವಾಲಯಕ್ಕೆ ಕಳುಹಿಸಲಾಗಿದೆ. ಈ ವರದಿ ಆಧರಿಸಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಈಗಾಗಲೇ ಹಡಗಿನಲ್ಲಿ ರಷ್ಯಾದ ಮಿಗ್ 29ಕೆ (MiG-29K) ವಿಮಾನಗಳನ್ನು ಸಹ ಹೊಂದಿದ್ದು ಈ ವರ್ಷದ ಅಂತ್ಯದ ವೇಳೆಗೆ ಈ ವಿಮಾನ ವಾಹಕ ನೌಕೆಗಳನ್ನು ಬಂಗಾಳ ಕೊಲ್ಲಿ ಹಾಗೂ ಅರಬ್ಬಿ ಸಮುದ್ರದ ಆಚೆ ಭದ್ರತೆಗೆ ನಿಯೋಜನೆಗೊಳ್ಳಲಿದೆ. ಇದನ್ನೂ ಓದಿ: ಕೇರಳದಲ್ಲಿ ಹಕ್ಕಿ ಜ್ವರ – ಗಡಿಯಲ್ಲಿ ಕಟ್ಟೆಚ್ಚರ

    ಯುದ್ಧ ನೌಕೆ ನಿಲುಗಡೆಗೆ ಜಟ್ಟಿ ಸಮಸ್ಯೆ:
    ಐಎನ್‍ಎಸ್ ವಿಕ್ರಮಾದಿತ್ಯ ಹಾಗೂ ಐಎನ್‍ಎಸ್ ವಿಕ್ರಾಂತ್ ವಿಮಾನ ವಾಹಕ ನೌಕೆಯನ್ನು ಪೂರ್ವ ಸಮುದ್ರ ಭಾಗದಲ್ಲಿ ನಿಲ್ಲಿಸಲು ಜಟ್ಟಿ (ಹಡಗು ನಿಲ್ಲಿಸುವ ಸ್ಥಳ) ಸಮಸ್ಯೆಗಳಿದ್ದು ಈ ಕಾರಣದಿಂದ ಈ ಎರಡು ನೌಕೆಗಳನ್ನು ನಿಲ್ಲಿಸಲು ಪಶ್ಚಿಮ ಕರಾವಳಿಯ ನೌಕಾನೆಲೆಯನ್ನು ಅವಲಂಭಿಸಿದೆ. ಈ ಕಾರಣದಿಂದ ಪೂರ್ವ ಸಮುದ್ರ ಭಾಗದ ನೌಕಾ ನೆಲೆಯಾದ ವಿಶಾಖಪಟ್ಟಣಂನಲ್ಲಿ ಬೃಹತ್ ಯುದ್ಧ ಯಂತ್ರಗಳನ್ನು ನಿಲ್ಲಿಸಲು ಭರದ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಹೀಗಾಗಿ ಭಾರತೀಯ ನೌಕಾಪಡೆಯು ಅಂಡಮಾನ್, ನಿಕೋಬಾರ್ ದ್ವೀಪಗಳ ಪ್ರದೇಶವಾದ ಕ್ಯಾಂಪ್ ಬೆಲ್ ಕೊಲ್ಲಿ ಹಾಗೂ ಉತ್ತರ ಭಾಗದ ಚೆನ್ನೈನ ಕಟ್ಟುಪಲ್ಲಿಯಲ್ಲಿನ ಬಂದರಿನಲ್ಲಿ ವಿಮಾನ ವಾಹಕ ಹಡಗನ್ನು ನಿಲ್ಲಿಸಲು ಅನುವಾಗುವಂತೆ ಜಟ್ಟಿಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ನೌಕಾದಳ ನಿರ್ಧರಿಸಿದೆ. ಇದನ್ನೂ ಓದಿ: 35 ಪ್ರಯಾಣಿಕರನ್ನು ಬಿಟ್ಟು ನಿಗದಿತ ಸಮಯಕ್ಕೂ ಮೊದಲೇ ಹಾರಿತು ವಿಮಾನ

    ಜನವರಿ ಅಂತ್ಯದ ವೇಳೆಗೆ ಈ ವಿಮಾನ ವಾಹಕ ಯುದ್ಧ ಹಡಗುಗಳು ಕದಂಬ ನೌಕಾನೆಲೆಯಿಂದ ಸಮುದ್ರ ಭಾಗದಲ್ಲಿ ಭದ್ರತೆಗೆ ತೆರಳುವ ಸಾಧ್ಯತೆ ಇದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 2ನೇ ಸ್ವದೇಶಿ ವಿಮಾನವಾಹಕ ನೌಕೆ ನಿರ್ಮಾಣಕ್ಕೆ ತಯಾರಿ ಶುರು – ಮೈಲಿಗಲ್ಲಿನತ್ತ ಭಾರತ

    2ನೇ ಸ್ವದೇಶಿ ವಿಮಾನವಾಹಕ ನೌಕೆ ನಿರ್ಮಾಣಕ್ಕೆ ತಯಾರಿ ಶುರು – ಮೈಲಿಗಲ್ಲಿನತ್ತ ಭಾರತ

    ನವದೆಹಲಿ: ಮೊದಲ ಸ್ವದೇಶಿ ನಿರ್ಮಿತ ಐಎನ್‌ಎಸ್ ವಿಕ್ರಾಂತ್ (INS Vikrant) ವಿಮಾನವಾಹಕ ಯಶಸ್ವಿಯಾದ ಬೆನ್ನಲ್ಲೇ ಭಾರತ ಮತ್ತೊಂದು ಸ್ವದೇಶಿ ವಿಮಾನವಾಹಕ ನೌಕೆ (Indigenous Aircraft) ಸಿದ್ಧಪಡಿಸುವ ಕೆಲಸ ಪ್ರಾರಂಭಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೇಳಿದ್ದಾರೆ.

    ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಐಎನ್‌ಎಸ್ ವಿಕ್ರಾಂತ್ ಕುರಿತು ಮಾತನಾಡಿದ ಅವರು, ವಿಮಾನವಾಹಕ ನೌಕೆ ನಿರ್ಮಾಣದಲ್ಲಿ ದೇಶವು ವಿಶ್ವದಲ್ಲಿ 7ನೇ ಸ್ಥಾನದಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸೆ.2ರಂದು ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ವಿಕ್ರಾಂತ್‌ ನೌಕಾಪಡೆಗೆ ಅಧಿಕೃತ ಸೇರ್ಪಡೆ

    ಭಾರತ ಸ್ವತಂತ್ರಗೊಂಡಾಗ ದೇಶದಲ್ಲಿ ಒಂದು ಸೂಜಿಯನ್ನೂ ತಯಾರಿಸಲಿಲ್ಲ. ಆದರೆ 2022ರಲ್ಲಿ ನಾವು ಐಎನ್‌ಎಸ್ ವಿಕ್ರಾಂತ್‌ನಂತಹ ಬೃಹತ್ ವಿಮಾನವಾಹಕ ನೌಕೆಯನ್ನೇ ನಿರ್ಮಿಸಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಯೊಡ್ಡುತ್ತಿರುವ ಯುಎಸ್ (US), ಯುಕೆ (UK), ಫ್ರಾನ್ಸ್, ಜರ್ಮನಿ, ಚೀನಾ ಮತ್ತು ಜಪಾನ್ ನಂತರ ಭಾರತ ಇಂದು ಸ್ವದೇಶಿ ವಿಮಾನವಾಹಕ ಹೊಂದಿದ 7ನೇ ರಾಷ್ಟ್ರವಾಗಿದೆ. ವಿಕ್ರಾಂತ್ ಯಶಸ್ವಿಯಾದ ಬೆನ್ನಲ್ಲೇ ಭಾರತದ 2ನೇ ವಿಮಾನವಾಹಕ ನೌಕೆಯ ಕೆಲಸ ಪ್ರಾರಂಭವಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸಿನಿಮಾ ರೀತಿಯಲ್ಲೇ ಮನೆಗೆ ನುಗ್ಗಿದ 50 ಗೂಂಡಾಗಳು- ವೈದ್ಯೆ ಕಿಡ್ನ್ಯಾಪ್

    ಐಎನ್‌ಐಸ್ ವಿಕ್ರಾಂತ್ ಶೇ.73-74 ರಷ್ಟು ಸ್ವದೇಶೀಕರಣವನ್ನು ಸಾಧಿಸಿದೆ. ಸದ್ಯ ಭಾರತ ರಷ್ಯಾ ನಿರ್ಮಿತ ಐಎನ್‌ಎಸ್ ವಿಕ್ರಮಾದಿತ್ಯ (INS Vikramaditya) ಹಾಗೂ ಸ್ವದೇಸಿ ನಿರ್ಮಿತ ಐಎನ್‌ಎಸ್ ವಿಕ್ರಾಂತ್ ವಿಮಾನವಾಹಕ ನೌಕೆಗಳನ್ನು ನಿರ್ವಹಿಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • INS ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ ಅವಘಡ

    INS ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ ಅವಘಡ

    ಕಾರವಾರ: ನಗರದ ಕದಂಬ ನೌಕಾನೆಲೆಯಿಂದ ಅರಬ್ಬಿ ಸಮುದ್ರದ ಮಾರ್ಗವಾಗಿ ಮುಂಬೈ ಕಡೆ ತೆರಳುತ್ತಿದ್ದ INS ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಯುದ್ಧ ನೌಕೆಯಲ್ಲಿರುವ ಅಗ್ನಿನಿರೋಧಕ ವಸ್ತುಗಳನ್ನು ಬಳಸಿ ಬೆಂಕಿ ನಂದಿಸಲಾಗಿದೆ.

    ಕ್ಯಾಪ್ಟನ್ ಸುಶೀಲ್ ಮೆನನ್ ವಿಕ್ರಮಾದಿತ್ಯದ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಕೆಲವು ತಿಂಗಳಿಂದ ಕಾರವಾರದ ಕದಂಬ ನೌಕಾನೆಲೆಯಲ್ಲಿ ಹಡಗಿನ ದುರಸ್ತಿ ಕಾರ್ಯ ಸಹ ನಡೆಸಲಾಗಿತ್ತು. ಆದರೆ ಬುಧವಾರ ಕಾರವಾರದ ಕದಂಬ ನೌಕಾ ನೆಲೆಯಿಂದ ಮುಂಬೈಗೆ ಹೋಗುವ ಮಾರ್ಗದ ಆಳ ಸಮುದ್ರದಲ್ಲಿ ಹಡಗಿಗೆ ಬೆಂಕಿ ಕಾಣಿಸಿಕೊಂಡಿದೆ. ಇದನ್ನೂ ಓದಿ: ನೂಪುರ್ ಶರ್ಮಾಗೆ ಬೆಂಬಲ, ವ್ಯಕ್ತಿ ಮೇಲೆ ಹಲ್ಲೆ- ಇಬ್ಬರ ಬಂಧನ

    ಘಟನೆಯಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ. ಅದೃಷ್ಟವಶಾತ್ ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದು, ಬೆಂಕಿ ನಂದಿಸಲಾಗಿದೆ. ಈ ಹಿಂದೆ ಸಹ ಕಾರವಾರದ ನೌಕಾನೆಲೆಯಲ್ಲಿದ್ದ ಈ ಹಡಗಿನಲ್ಲಿ ಸಿಲೆಂಡರ್ ಸ್ಫೋಟಗೊಂಡು ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದರು. ಇದಾದ ಮೂರು ವರ್ಷದ ಬಳಿಕ ಇದೀಗ ಮತ್ತೆ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನೂ ಓದಿ: ನ್ಯಾಷನಲ್‌ ಹೆರಾಲ್ಡ್‌ ಕೇಸ್‌- ಇಂದು ಇಡಿ ಮುಂದೆ ಹಾಜರಾಗಲಿದ್ದಾರೆ ಸೋನಿಯಾ

    Live Tv
    [brid partner=56869869 player=32851 video=960834 autoplay=true]

  • ಕಾರವಾರ ಬಂದರಿನಲ್ಲಿದ್ದ ವಿಕ್ರಮಾದಿತ್ಯ ನೌಕೆಯಲ್ಲಿ ಬೆಂಕಿ- ಎಲ್ಲ ಸಿಬ್ಬಂದಿ ಸುರಕ್ಷಿತ

    ಕಾರವಾರ ಬಂದರಿನಲ್ಲಿದ್ದ ವಿಕ್ರಮಾದಿತ್ಯ ನೌಕೆಯಲ್ಲಿ ಬೆಂಕಿ- ಎಲ್ಲ ಸಿಬ್ಬಂದಿ ಸುರಕ್ಷಿತ

    ಕಾರವಾರ: ಭಾರತದ ವಿಮಾನವಾಹಕ ನೌಕೆ ಐಎನ್‍ಎಸ್ ವಿಕ್ರಮಾದಿತ್ಯದಲ್ಲಿ ಇಂದು ಬೆಳಗ್ಗೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ, ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.

    ಬೆಂಕಿಯನ್ನು ನಂದಿಸಲಾಗಿದ್ದು, ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಯುದ್ಧ ನೌಕೆಯಲ್ಲಿ ನಾವಿಕರು ವಸತಿ ಇರುವ ಭಾಗದಿಂದ ಹೊಗೆ ಕಾಣಿಸಿಕೊಂಡಿದ್ದನ್ನು ಸಿಬ್ಬಂದಿ ಗಮನಿಸಿದ್ದಾರೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.

    ಹಡಗಿನ ಕರ್ತವ್ಯ ಸಿಬ್ಬಂದಿ ಬೆಂಕಿ ನಂದಿಸಲು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಬೆಂಕಿ ನಂದಿಸಿದ್ದಾರೆ. ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ದೊಡ್ಡ ಹಾನಿ ಸಂಭವಿಸಿಲ್ಲ. ಈ ಬಗ್ಗೆ ತನಿಖೆಗೆ ಆದೇಶಿಸಿದ್ದು, ಕರ್ನಾಟಕದ ಕಾರವಾರದಲ್ಲಿ ಘಟನೆ ಸಂಭವಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಹಡಗಿನ ವಿಶೇಷವೇನು?
    1978 ರಲ್ಲಿ ಈ ಹಡಗು ನಿರ್ಮಾಣಗೊಂಡು ರಷ್ಯಾದ ನೌಕಾನೆಲೆಯಲ್ಲಿ ಸೇವೆ ಸಲ್ಲಿಸಿ ನಂತರ 1996 ರಲ್ಲಿ ಇದಕ್ಕೆ ನಿವೃತ್ತಿ ನೀಡಲಾಯಿತು. ನಂತರ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರವರು 2004 ರಲ್ಲಿ ಒಪ್ಪಂದದ ಮೂಲಕ 97.4 ಕೋಟಿ ರೂಗಳನ್ನು ನೀಡಿ ಖರೀದಿಸಲು ಮಾತುಕತೆ ನಡೆದಿತ್ತು. ಇದೇ ಸಂದರ್ಭದಲ್ಲಿ ಇದರ ನವೀಕರಣ ನಡೆಸಿ ರಷ್ಯಾದ ಹೆಚ್ಚುವರಿ ಬೇಡಿಕೆಯಂತೆ ಯುಪಿಎ ಸರ್ಕಾರ 235 ಕೋ.ಡಾಲರ್(10,575 ಕೋ.ರೂಪಾಯಿ 2010ರ ದರದಲ್ಲಿ) ನೀಡಿ ನವೀಕರಣಗೊಂಡು 2013ರ ನವೆಂಬರಿನಲ್ಲಿ ಭಾರತೀಯ ನೌಕಾಪಡೆ ಸೇವೆಗೆ ಸಮರ್ಪಿಸಲಾಗಿತ್ತು.

    44,500 ಟನ್ ತೂಕ, 284 ಮೀಟರ್ ಉದ್ದ, 60 ಮೀಟರ್ ಎತ್ತರ, 34 ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್ ಗಳನ್ನು ಹೊರುವ ಸಾಮಥ್ರ್ಯ ಹೊಂದಿದೆ. 1,600 ಸಿಬ್ಬಂದಿಗಳು, 22 ಅಂತಸ್ತುಗಳಿರುವ ನೌಕೆಗೆ ಒಮ್ಮೆ ಇಂಧನ ಭರ್ತಿಯಾದರೆ 13 ಸಾವಿರ ಕಿ.ಮೀ ಕ್ರಮಿಸುವ ಸಾಮಥ್ರ್ಯ ಹೊಂದಿದೆ. ಸದ್ಯ ಅರಬ್ಬಿ ಸಮುದ್ರದ ಗಡಿಯಲ್ಲಿ ಕಾವಲುಗಾರನಾಗಿ ಸೇವೆ ಸಲ್ಲಿಸುತ್ತಿದ್ದು ಕಾರವಾರದ ಕದಂಬ ನೌಕಾ ನೆಲೆ ಇದರ ತಂಗುದಾಣವಾಗಿದೆ.

    ಈ ಹಿಂದೆ ನಡೆದಿತ್ತು ದುರಂತ!
    ಈ ಹಿಂದೆ ಸಹ ವಿಕ್ರಮಾದಿತ್ಯ ಹಡಗಿನಲ್ಲಿ ಬಾಯ್ಲರ್ ಸಿಡಿದು ಉತ್ತರ ಪ್ರದೇಶ ಮೂಲದ ಲೆಫ್ಟಿನೆಂಟ್ ಕಮಾಂಡರ್ ಚೌಹಾಣ್ ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಇದರ ನಂತರ ಮುಂಬೈನಲ್ಲಿ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿ ಗಡಿಯಲ್ಲಿ ಪಹರೆಗೆ ತೆರಳಿತ್ತು.

  • INS ವಿಕ್ರಮಾದಿತ್ಯನ ದರ್ಶನಕ್ಕೆ ಕಿಕ್ಕಿರಿದ ಜನಸ್ತೋಮ -ಆಸೆ ಹೊತ್ತು ಬಂದವರಿಗೆ ನಿರಾಸೆ!

    INS ವಿಕ್ರಮಾದಿತ್ಯನ ದರ್ಶನಕ್ಕೆ ಕಿಕ್ಕಿರಿದ ಜನಸ್ತೋಮ -ಆಸೆ ಹೊತ್ತು ಬಂದವರಿಗೆ ನಿರಾಸೆ!

    ಕಾರವಾರ: ನೌಕಾ ದಿನದ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದಂಬ ನೌಕಾನೆಲೆಯಲ್ಲಿ ದೇಶದ ಅತಿದೊಡ್ಡ ಯುದ್ಧ ವಿಮಾನ ವಾಹಕ ನೌಕೆ ವೀಕ್ಷಣೆಗೆ ಭಾರತೀಯ ನೌಕಾದಳ ಇಂದು ಅವಕಾಶ ಮಾಡಿಕೊಟ್ಟಿತ್ತು.

    ಇಂದು ಬೆಳಗ್ಗೆ 10 ಘಂಟೆಯಿಂದ ಸಂಜೆ 5 ಗಂಟೆವರೆಗೆ ಕಾರವಾರದ ಕದಂಬ ನೌಕಾ ನೆಲೆಯಲ್ಲಿ ಐ.ಎನ್.ಎಸ್ ವಿಕ್ರಮಾದಿತ್ಯ ಹಡಗಿನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ, ಹೊರ ರಾಜ್ಯದಿಂದಲೂ ವಿಕ್ರಮಾದಿತ್ಯ ಹಡಗನ್ನು ನೋಡಲು ಅರಗಾ ಗ್ರಾಮದ ಕದಂಬ ನೌಕಾನೆಲೆಯಲ್ಲಿ ಸಾವಿರಾರು ಜನರು ಸೇರಿದ್ದರು.

    ಬೆಳಗ್ಗೆಯಿಂದ ಕಿಕ್ಕಿರಿದು ತುಂಬಿದ್ದ ಜನರಿಗೆ ವಿಕ್ರಮಾದಿತ್ಯ ಹಡಗನ್ನು ನೋಡುವ ಭಾಗ್ಯ ದೊರೆಯಿತು. ಆದರೆ ಮಧ್ಯಾಹ್ನದ ನಂತರ ವೀಕ್ಷಕರ ಸಂಖ್ಯೆ ಹೆಚ್ಚಾದ್ದರಿಂದ ಭದ್ರತೆ ದೃಷ್ಟಿಯಿಂದ ಬಂದ್ ಮಾಡಲಾಯಿತು. ಇದರಿಂದಾಗಿ ರಾಜ್ಯ ಹಾಗೂ ಹೊರ ರಾಜ್ಯದಿಂದ ವೀಕ್ಷಣೆಗಾಗಿ ಬಂದಿದ್ದ ಜನರಿಗೆ ನಿರಾಸೆಯಾಗಿ ಹಿಂತಿರುಗುವಂತಾಯಿತು. .

    ಬೆಳಗ್ಗೆಯಿಂದ ಅವಕಾಶ ಪಡೆದ ವಿದ್ಯಾರ್ಥಿಗಳು ಹಾಗೂ ಜನರು ವಿಕ್ರಮಾದಿತ್ಯ ಹಡಗಿನ ವೀಕ್ಷಣೆ ಮಾಡಿದರು. ವಿಕ್ರಮಾದಿತ್ಯನ ಮೇಲ್ಭಾಗದ ಡೆಕ್‍ನಲ್ಲಿ ಮಾತ್ರ ಜನರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಈ ಭಾಗದ ರನ್ ವೇ, ರ್ಯಾಡರ್ (radar signal) ಗಳನ್ನು ಜನರು ವೀಕ್ಷಿಸಿ ಕಣ್ತುಂಬಿಕೊಂಡರು.

  • ಕಾರ್ಗಿಲ್ ವಿಜಯ್ ದಿವಸ್ – ಏಷ್ಯಾದ ಅತಿದೊಡ್ಡ ನೌಕೆ ವೀಕ್ಷಿಸಿದ ವಿದ್ಯಾರ್ಥಿಗಳು

    ಕಾರ್ಗಿಲ್ ವಿಜಯ್ ದಿವಸ್ – ಏಷ್ಯಾದ ಅತಿದೊಡ್ಡ ನೌಕೆ ವೀಕ್ಷಿಸಿದ ವಿದ್ಯಾರ್ಥಿಗಳು

    ಕಾರವಾರ: ಕಾರ್ಗಿಲ್ ವಿಜಯ್ ದಿವಸದ ಆಚರಣೆಯ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗಾದಲ್ಲಿರುವ ಕದಂಬ ನೌಕಾನೆಲೆಯಲ್ಲಿ ಇಂದು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನೌಕ ಹಡಗುಗಳನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಯಿತು.

    ಜಿಲ್ಲೆಯ ಜನರಲ್ಲದೇ ಹೊರರಾಜ್ಯದ ಜನರು ಇಂದು ಕಾರವಾರದ ಕದಂಬ ನೌಕಾನೆಲೆಗೆ ಆಗಮಿಸಿ ಐ.ಎನ್.ಎಸ್. ವಿಕ್ರಮಾದಿತ್ಯ ಹಾಗೂ ಸುವರ್ಣ ಯುದ್ಧ ನೌಕೆಯನ್ನು ವೀಕ್ಷಿಸುವ ಮೂಲಕ ಕಣ್ತುಬಿಂಕೊಂಡರು.

    ಪ್ರತಿ ವರ್ಷದಲ್ಲಿ ಒಂದು ಬಾರಿ ಮಾತ್ರ ಸಾರ್ವಜನಿಕರಿಗೆ ಏಷ್ಯಾದ ಅತಿದೊಡ್ಡ ಹಡಗು ವಿಕ್ರಮಾದಿತ್ಯ ಹಾಗೂ ನೌಕಾನೆಲೆಯನ್ನು ನೋಡಲು ಅವಕಾಶ ಕಲ್ಪಿಸಲಾಗುತ್ತದೆ. ಇಂದು ಒಂದೇ ದಿನದಲ್ಲಿ 15 ಸಾವಿರಕ್ಕೂ ಹೆಚ್ಚು ಜನರು ನೌಕಾನೆಲೆಗೆ ಭೇಟಿ ನೀಡಿದರು.

  • ಐಎನ್‍ಎಸ್ ವಿಕ್ರಮಾದಿತ್ಯದಲ್ಲಿ ಬೆಂಕಿ – ಅಧಿಕಾರಿ ಸಾವು, 7 ಮಂದಿಗೆ ಗಾಯ

    ಐಎನ್‍ಎಸ್ ವಿಕ್ರಮಾದಿತ್ಯದಲ್ಲಿ ಬೆಂಕಿ – ಅಧಿಕಾರಿ ಸಾವು, 7 ಮಂದಿಗೆ ಗಾಯ

    ಕಾರವಾರ: ದೇಶದ ಅತಿ ದೊಡ್ಡ ಯುದ್ಧ ನೌಕೆ ಐಎನ್‍ಎಸ್ ವಿಕ್ರಮಾದಿತ್ಯದ ಬಾಯ್ಲರ್ ನಲ್ಲಿ ಬೆಂಕಿ ಅವಘಡ ಸಂಭವಿಸಿ ಲೆಫ್ಟಿನೆಂಟ್ ಕಮಾಂಡರ್ ಒಬ್ಬರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗಾ ಗ್ರಾಮದ ಕದಂಬ ನೌಕಾನೆಲೆಯಲ್ಲಿ ನಡೆದಿದೆ.

    ಇಂದು ಬೆಳಗ್ಗೆ ವಿಕ್ರಮಾದಿತ್ಯದ ನೌಕಾ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿರುವ ವೇಳೆ ನೌಕೆಯ ಒಳಭಾಗದ ಬಾಯ್ಲರ್ ಕಂಪಾರ್ಟ್‌ಮೆಂಟ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನಂದಿಸುವ ಸಮಯದಲ್ಲಿ ಲೆಫ್ಟಿನೆಂಟ್ ಕಮಾಂಡರ್ ಡಿಎಸ್ ಚೌವ್ಹಾಣ್ ಮೃತಪಟ್ಟು 7 ಮಂದಿ ಸಿಬ್ಬಂದಿ ಗಂಭೀರ ಗಾಯಗೊಂಡಿದ್ದಾರೆ.

    ಗಾಯಾಳುಗಳನ್ನು ನೌಕಾನೆಲೆಯ ಪತಂಜಲಿ ಆಸ್ಪತ್ರೆಗೆ ದಾಖಲಿಸಿದ್ದು, ಬಾಯ್ಲರ್ ನಲ್ಲಿದ್ದ ಬೆಂಕಿಯನ್ನು ಸಿಬ್ಬಂದಿ ನಿಯಂತ್ರಣಕ್ಕೆ ತಂದು ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಚೌವ್ಹಾಣ್ ಅವರನ್ನು ಕೂಡಲೇ ಪತಂಜಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ನೌಕಾಸೇನೆ ತಿಳಿಸಿದೆ.

    ಐಎನ್‍ಎಸ್ ವಿಕ್ರಮಾದಿತ್ಯ ಹಡಗು ದೇಶದ ಅತಿದೊಡ್ಡ ಯುದ್ಧನೌಕೆ ಆಗಿದ್ದು, ಭಾರತ ಪಾಕ್ ಮಧ್ಯೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದರಿಂದ ಗುಜರಾತಿಗೆ ತೆರಳಿದ್ದ ಐಎನ್‍ಎಸ್ ವಿಕ್ರಮಾದಿತ್ಯ ಇಂದು ಮುಂಜಾನೆ ಕಾರವಾರದ ಸೀಬರ್ಡ್ ನೌಕಾನೆಲೆಗೆ ವಾಪಸ್ಸಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

    ಐಎನ್‍ಎಸ್ ವಿಕ್ರಮಾದಿತ್ಯ 284 ಮೀಟರ್ ಉದ್ದವಿದ್ದು 60 ಮೀಟರ್ ಎತ್ತರವಿದೆ. 40 ಸಾವಿರ ಟನ್ ತೂಕದ ಈ ನೌಕೆ 2014 ರಲ್ಲಿ ರಷ್ಯಾದಿಂದ ಭಾರತಕ್ಕೆ ಬಂದಿದೆ.