Tag: innova car

  • ಹಾಸನಾಂಬೆ ದರ್ಶನ ಪಡೆದು ತೆರಳುತ್ತಿದ್ದ ವೇಳೆ ಭೀಕರ ಅಪಘಾತ – ಇಬ್ಬರು ದುರ್ಮರಣ

    ಹಾಸನಾಂಬೆ ದರ್ಶನ ಪಡೆದು ತೆರಳುತ್ತಿದ್ದ ವೇಳೆ ಭೀಕರ ಅಪಘಾತ – ಇಬ್ಬರು ದುರ್ಮರಣ

    ಹಾಸನ: ಹಾಸನಾಂಬ ದೇವಿಯ (Hasanamba Temple) ದರ್ಶನ ಪಡೆದು ತೆರಳುತ್ತಿದ್ದ ವೇಳೆ ಎರಡು ಬೈಕ್‌ಗಳಿಗೆ (Bike) ಇನ್ನೋವಾ ಕಾರು (Innova Car0 ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾಸನ (Hassan) ಜಿಲ್ಲೆ, ಚನ್ನರಾಯಪಟ್ಟಣ (Channarayapatna) ತಾಲೂಕಿನ ಕಗ್ಗಲಿಕಾವಲು ಫಾರೆಸ್ಟ್ ಬಳಿ ನಡೆದಿದೆ.

    ಭಾನುವಾರ ತಡರಾತ್ರಿ ಅಪಘಾತ ಸಂಭವಿಸಿದ್ದು, ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ನೇಹಿತ ಬಸವರಾಜು ಜೊತೆಯಲ್ಲಿ ಬೆಂಗಳೂರಿನಿಂದ ಯಮಹಾ ಬೈಕ್‌ನಲ್ಲಿ ಅನು (19) ಹಾಗೂ ಛಾಯಾ (20) ಬಂದಿದ್ದರು. ಹಾಸನಾಂಬ ದೇವಿ ದರ್ಶನ ಮುಗಿಸಿ ಒಂದೇ ಬೈಕ್‌ನಲ್ಲಿ ಮೂವರು ತೆರಳುತ್ತಿದ್ದರು. ಈ ವೇಳೆ ಚನ್ನರಾಯಪಟ್ಟಣ ಕಡೆಯಿಂದ ಬರುತ್ತಿದ್ದ ಇನ್ನೋವಾ ಕಾರು ಹೌಸಿಂಗ್ ಬೋರ್ಡ್ ಬಳಿ ವೇಗವಾಗಿ ಬಂದು ಮೊದಲು ಆಕ್ಟಿವಾಗೆ ಡಿಕ್ಕಿ ಹೊಡೆದು ಬಳಿಕ ಬೈಕ್‌ಗೆ ಡಿಕ್ಕಿ ಹೊಡೆದು ರಸ್ತೆ ಬದಿಯ ಅರಣ್ಯಕ್ಕೆ ನುಗ್ಗಿದೆ. ಇದನ್ನೂ ಓದಿ: ನಾಡಿನಾದ್ಯಂತ ದೀಪಾವಳಿ ಸಂಭ್ರಮ – ಕೆಆರ್ ಮಾರ್ಕೆಟ್‌ನಲ್ಲಿ ಹೂ, ಹಣ್ಣು ಖರೀದಿಗೆ ಮುಗಿಬಿದ್ದ ಜನ

    ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನಲ್ಲಿದ್ದ ಬಸವರಾಜು ಹಾಗೂ ಅನುಶ್ರೀ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮತ್ತೋರ್ವ ಯುವತಿ ಛಾಯಾ ಸ್ಥಿತಿ ಚಿಂತಾಜನಕವಾಗಿದ್ದು, ಚನ್ನರಾಯಪಟ್ಟಣ ತಾಲೂಕು ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಅಪಘಾತದಲ್ಲಿ ಆಕ್ಟಿವಾ ಸವಾರ ಮೊಹಮ್ಮದ್ ಶಾಹಿದ್‌ಗೂ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ: ಊರಿಗೆ ತೆರಳಿದ ಜನ – ಮೆಜೆಸ್ಟಿಕ್‌ ಬಸ್‌ನಿಲ್ದಾಣ ಖಾಲಿ ಖಾಲಿ

  • ನಡುರಸ್ತೆಯಲ್ಲಿ ಲಾಂಗ್ ತೆಗೆದು ಗೂಂಡಾವರ್ತನೆ – ಇನ್ನೋವಾ ಕಾರು ಪುಡಿಗಟ್ಟಿದ ಸಾರ್ವಜನಿಕರು

    ನಡುರಸ್ತೆಯಲ್ಲಿ ಲಾಂಗ್ ತೆಗೆದು ಗೂಂಡಾವರ್ತನೆ – ಇನ್ನೋವಾ ಕಾರು ಪುಡಿಗಟ್ಟಿದ ಸಾರ್ವಜನಿಕರು

    ಬೆಂಗಳೂರು: ಕಾರು ಟಚ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಟ್ಯಾಕ್ಸಿ ಚಾಲಕನ (Taxi Driver) ಮೇಲೆ ಇನ್ನೋವಾ ಕಾರು (Innova Car) ಚಾಲಕ ಲಾಂಗ್‌ನಿಂದ ಹಲ್ಲೆಗೆ ಯತ್ನಿಸಿದ ಹಿನ್ನೆಲೆ ಸಾರ್ವಜನಿಕರು ಇನ್ನೋವಾ ಕಾರು ಪುಡಿಗಟ್ಟಿದ ಘಟನೆ ಬೆಂಗಳೂರಿನ (Bengaluru) ಓಕಳಿಪುರಂ (Okalipuram) ಜಂಕ್ಷನ್‌ನಲ್ಲಿ ನಡೆದಿದೆ.

    ಮೆಜೆಸ್ಟಿಕ್ ಸಮೀಪದಲ್ಲಿರುವ ರೈಲ್ವೇ ಗೇಟ್ ಹಿಂಭಾಗದ ರಸ್ತೆಯಲ್ಲಿ ಕ್ಯಾಬ್ ಚಾಲಕ ಕುಮಾರ್ ಪ್ಯಾಸೆಂಜರ್ ಕರೆದುಕೊಂಡು ವಿಜಯನಗರದಿಂದ ಬರುತ್ತಿದ್ದ. ಇದೇ ವೇಳೆ ಹಿಂಬದಿಯಿಂದ ಬಂದ ಇನ್ನೋವಾ ಕಾರು ಇಟಿಯೋಸ್ ಕ್ಯಾಬ್‌ಗೆ ಟಚ್ ಆಗಿದೆ. ಈ ವೇಳೆ ಇಬ್ಬರು ಚಾಲಕರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಕಾರಿಂದ ಇಳಿದು ಬಂದ ಇನ್ನೋವಾ ಕಾರು ಚಾಲಕ ಕ್ಯಾಬ್ ಚಾಲಕನಿಗೆ ಥಳಿಸಿದ್ದಾನೆ. ಕಾರಲ್ಲಿ ಪ್ಯಾಸೆಂಜರ್ ಇದ್ದಿದ್ದರಿಂದ ಇಟಿಯೋಸ್ ಕಾರು ಚಾಲಕ ಸುಮ್ಮನಿದ್ದ. ಇಷ್ಟಾದರೂ ಸುಮ್ಮನಾಗದ ಇನ್ನೋವ ಕಾರು ಚಾಲಕ ಕಾರಿನಿಂದ ಮಚ್ಚು ತಂದು ಇಟಿಯೋಸ್ ಕಾರು ಚಾಲಕನ ಕುತ್ತಿಗೆಗೆ ಇಟ್ಟು ಬೆದರಿಕೆ ಹಾಕಿದ್ದಾನೆ. ಇದರಿಂದ ಆತ ಭಯಗೊಂಡರೇ, ಅಲ್ಲೇ ಇದ್ದ ಜನರು ರೊಚ್ಚಿಗೆದ್ದರು. ಇನ್ನೋವಾ ಕಾರು ಚಾಲಕನ ಅಟ್ಟಹಾಸ ಕಂಡ ಜನರು ಆತನನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕಲ್ಲಿನಿಂದ ಕಾರಿನ ಗಾಜುಗಳನ್ನ ಪುಡಿಪುಡಿ ಮಾಡಿದ್ದಾರೆ. ಜನರ ಆಕ್ರೋಶಕ್ಕೆ ಹೆದರಿದ ಆಸಾಮಿ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿ ಆಗಿದ್ದಾನೆ. ಇದನ್ನೂ ಓದಿ: ಮಾಟ ಮಾಡ್ತಾರೆ ಅಂತ ಒಂದೇ ಕುಟುಂಬದ ಐವರನ್ನು ಜೀವಂತವಾಗಿ ಸುಟ್ಟು ಹತ್ಯೆ

    ಸ್ಥಳಕ್ಕೆ ಬಂದ ಶೇಷಾದ್ರಿಪುರಂ ಸಂಚಾರ ಪೊಲೀಸರು ಕಾರನ್ನು ಸ್ಥಳಾಂತರಗೊಳಿಸಿದರು. ಇನ್ನು ಕ್ಯಾಬ್ ಚಾಲಕ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಇನ್ನೋವಾ ಕಾರು ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಪಾಕ್ ಬೇಹುಗಾರ್ತಿಗೆ ಕೇರಳ ಸರ್ಕಾರ ಧನಸಹಾಯ – ಸರ್ಕಾರದ ಖರ್ಚಿನಲ್ಲಿ ವ್ಲಾಗರ್ ಜ್ಯೋತಿ ಪ್ರವಾಸ

  • ಬೊಮ್ಮಸಂದ್ರದಲ್ಲಿ ಸರಣಿ ಅಪಘಾತ – ದ್ವಿಚಕ್ರ ವಾಹನ ಸವಾರರಿಗೆ ಗಾಯ

    ಬೊಮ್ಮಸಂದ್ರದಲ್ಲಿ ಸರಣಿ ಅಪಘಾತ – ದ್ವಿಚಕ್ರ ವಾಹನ ಸವಾರರಿಗೆ ಗಾಯ

    – ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್

    ಬೆಂಗಳೂರು: ಇನ್ನೋವಾ ಕಾರೊಂದು ಗೂಡ್ಸ್ ಆಟೋ ಹಾಗೂ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ (Serial Accident) ಉಂಟಾದ ಘಟನೆ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಬೊಮ್ಮಸಂದ್ರ (Bommasandra) ಸರ್ವಿಸ್ ರಸ್ತೆಯಲ್ಲಿ (Service Road) ನಡೆದಿದೆ.

    ಇನ್ನೋವಾ ಕಾರು ಬೆಂಗಳೂರು (Bengaluru) ಕಡೆಯಿಂದ ಚಂದಾಪುರ ಮಾರ್ಗವಾಗಿ ಬರುತ್ತಿತ್ತು. ಈ ವೇಳೆ ಚಾಲಕನ ಅತಿಯಾದ ವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ಮುಂದೆ ಬರುತ್ತಿದ್ದ ಗೂಡ್ಸ್ ಆಟೋ, ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಜಮ್ಮು, ಕಾಶ್ಮೀರದಲ್ಲಿ ಪ್ರವಾಹ- ಐವರ ದುರ್ಮರಣ

    ಘಟನೆಯಿಂದ ಹೆದ್ದಾರಿಯಲ್ಲಿದ್ದ ಬ್ಯಾರಿಕೇಡ್ ಮುರಿದು ಬಿದ್ದು ವಾಹನಗಳು ಜಖಂ ಆಗಿದ್ದು, ದ್ವಿಚಕ್ರ ವಾಹನ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಅಪಘಾತ ಹಿನ್ನೆಲೆ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಛತ್ತೀಸ್‍ಗಢದಲ್ಲಿ ಎನ್‍ಕೌಂಟರ್ – ಇಬ್ಬರು ಮಹಿಳೆಯರು ಸೇರಿ 9 ಮಂದಿ ನಕ್ಸಲರ ಹತ್ಯೆ

  • ಖಾಸಗಿ ಬಸ್, ಇನ್ನೋವಾ ಮುಖಾಮುಖಿ ಡಿಕ್ಕಿ – ಅತ್ತೆ, ಸೊಸೆ ಸ್ಥಳದಲ್ಲೇ ಸಾವು

    ಖಾಸಗಿ ಬಸ್, ಇನ್ನೋವಾ ಮುಖಾಮುಖಿ ಡಿಕ್ಕಿ – ಅತ್ತೆ, ಸೊಸೆ ಸ್ಥಳದಲ್ಲೇ ಸಾವು

    ರಾಯಚೂರು: ಖಾಸಗಿ ಬಸ್ (Private Bus) ಹಾಗೂ ಇನ್ನೋವಾ (Innova Car) ಮುಖಾಮುಖಿ ಡಿಕ್ಕಿಯಾದ ಪರಿಣಾಮ ಅತ್ತೆ, ಸೊಸೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರು ಗಾಯಗೊಂಡ ಘಟನೆ ರಾಯಚೂರಿನ  (Raichur) ಕಸಬೆ ಕ್ಯಾಂಪ್ ಬಳಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

    ಭೀಕರ ಅಪಘಾತದ ಪರಿಣಾಮ ಇನ್ನೋವಾ ಕಾರ್‌ನಲ್ಲಿದ್ದ ಮಾರಿಯಾ ಗೀತಾ (38) ಹಾಗೂ ಅಮಲ್ ಪಾಲ್ ಮೇರಿ (64) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೈದರಾಬಾದ್‌ನಿಂದ ಸಿಂಧನೂರು ಮಾರ್ಗವಾಗಿ ಹೊರಟಿದ್ದ ಖಾಸಗಿ ಬಸ್, ಗದಗದಿಂದ ರಾಯಚೂರು ಮಾರ್ಗವಾಗಿ ಬರುತ್ತಿದ್ದ ಇನ್ನೋವಾ ಕಾರ್‌ಗೆ ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ. ಇದನ್ನೂ ಓದಿ: ತಂಗಿಯ ನಿಶ್ಚಿತಾರ್ಥಕ್ಕೆ ಬಂದಿಲ್ಲವೆಂದು ಪತ್ನಿಗೇ ಚಾಕು ಇರಿದ!

    ಕಾರ್‌ನಲ್ಲಿ ಒಟ್ಟು ಏಳು ಜನ ಪ್ರಯಾಣಿಸುತ್ತಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಗಾಯಗೊಂಡ ಉಳಿದ ಐದು ಜನರನ್ನು ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಂಧಾನಕ್ಕೆ ಹೋಗಿದ್ದ ಗರ್ಭಿಣಿ ಮೇಲೆ ಗ್ಯಾಂಗ್‌ ರೇಪ್‌; ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ದುರುಳರು!

  • ಟಯರ್ ಬ್ಲಾಸ್ಟ್- ಆಟೋಗೆ ಇನ್ನೋವಾ ಗುದ್ದಿದ ರಭಸಕ್ಕೆ ಕಾಂಪೌಂಡ್ ಪುಡಿಪುಡಿ

    ಟಯರ್ ಬ್ಲಾಸ್ಟ್- ಆಟೋಗೆ ಇನ್ನೋವಾ ಗುದ್ದಿದ ರಭಸಕ್ಕೆ ಕಾಂಪೌಂಡ್ ಪುಡಿಪುಡಿ

    ಬೆಂಗಳೂರು: ಅತಿ ವೇಗವಾಗಿ ಬರುತ್ತಿದ್ದ ಇನ್ನೋವಾ ಕಾರಿನ ಟಯರ್ ಬ್ಲಾಸ್ಟ್ (Tyre Blast) ಆಗಿ ನೋಡು ನೋಡುತ್ತಿದ್ದಂತೆ ಪಾರ್ಕ್ ಮಾಡಿದ್ದ ಆಟೋಗೆ ಗುದ್ದಿದೆ. ಕಾರು ಗುದ್ದಿದ ರಭಸಕ್ಕೆ ಮನೆಯ ಕಾಂಪೌಂಡ್ ಪುಡಿ ಪುಡಿ ಆಗಿ ಬಿದ್ದಿದೆ.

    ಬೆಂಗಳೂರಿನ ಲಾಲ್‍ಬಾಗ್ ರಸ್ತೆಯಲ್ಲಿ ಘಟನೆ ನಡೆದಿದೆ. ಅಪಘಾತದ ಭಯನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಖಾಲಿ ರಸ್ತೆಯಲ್ಲಿ ಅತಿ ವೇಗವಾಗಿ ಲಾಲ್‍ಬಾಗ್ ರಸ್ತೆ ಮೂಲಕ ಜಯ ನಗರದ ಕಡೆ ಹೋಗುತ್ತಿದ್ದ ಕಾರ್ ನ ಟಯರ್ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಗಿದೆ. ಬ್ಲಾಸ್ಟ್ ಆದ ಕ್ಷಣದಲ್ಲೇ ಯಮ ಸ್ವರೂಪಿಯಂತೆ ಕಾರು ನುಗ್ಗಿದ್ದು, ಕೂದಲೆಳೆ ಅಂತರಲ್ಲಿ ವೃದ್ಧ ಪಾರಾಗಿದ್ದಾರೆ.

    ಘಟನೆಯಲ್ಲಿ ಕಾಂಪೌಂಡ್ ನೆಲಕ್ಕುರುಳಿದ್ದು, ಆಟೋ (Innova Car and Auto) ಹಾಗೂ ಕಾರು ಜಖಂಗೊಂಡಿದೆ. ಘಟನೆ ಸಂಬಂಧ ವಿವಿಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ (VV Puram Traffic Police) ಕೇಸ್ ದಾಖಲಾಗಿದೆ. ಇದನ್ನೂ ಓದಿ: ಮದ್ಯ ಸೇವಿಸಲು ಹಣ ಕೊಡದ್ದಕ್ಕೆ ತಲೆ ಮೇಲೆ ಕಲ್ಲು ಎತ್ತಾಕಿದ ಪತಿ- ಕೋಮಾಗೆ ಜಾರಿದ ಪತ್ನಿ

    ಇನ್ನು ಬೆಂಗಳೂರಿನಲ್ಲಿ ಓನ್‍ವೇನಲ್ಲಿ ಬಂದವ ಹಿಟ್ ಅಂಡ್ ರನ್ ಮಾಡಿ ಪರಾರಿ ಆಗಿದ್ದಾನೆ. ಜನವರಿ 26ರಂದು ಬೆಳಗ್ಗೆ 11 ಗಂಟೆಗೆ  ಈ ಘಟನೆ ನಡೆದಿದೆ. ಬಸವೇಶ್ವರ ನಗರದ ಲೇ ಅರೇಬಿಯಾ ಹೋಟೆಲ್ ಬಳಿ ರಸ್ತೆ ದಾಟುತ್ತಿದ ಮಹಿಳೆಗೆ ಗುದ್ದಿದ್ದಾನೆ.. ಮಹಿಳೆ ಒದ್ದಾಡಿದ್ರೂ ಸಹಾಯಕ್ಕೆ ಬಾರದೇ ಎಸ್ಕೇಪ್ ಆಗಿದ್ದಾನೆ. ಪೊಲೀಸರು ಆರೋಪಿ ಪತ್ತೆಗಿಳಿದಿದ್ದಾರೆ.

  • ಮೈಸೂರಿನಲ್ಲಿ ನಡೆದ ಅಪಘಾತ ಪ್ರಕರಣ- ಗಾಯಾಳುಗಳಲ್ಲಿ ಓರ್ವನ ಸ್ಥಿತಿ ಗಂಭೀರ

    ಮೈಸೂರಿನಲ್ಲಿ ನಡೆದ ಅಪಘಾತ ಪ್ರಕರಣ- ಗಾಯಾಳುಗಳಲ್ಲಿ ಓರ್ವನ ಸ್ಥಿತಿ ಗಂಭೀರ

    – ಚಿಕಿತ್ಸೆಗೆ ಸ್ಪಂದಿಸುತ್ತಿರೋ ಮಕ್ಕಳು

    ಮೈಸೂರು: ಜಿಲ್ಲೆಯ ಕುರುಬೂರು (Kuruburu Accident) ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಾಯಗೊಂಡವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ. ಉಳಿದಂತೆ ಇಬ್ಬರು ಮಕ್ಕಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ. ಗಾಯಾಳು ಶಶಿಕುಮಾರ್ ಹಾಗೂ ಜನಾರ್ಧನ್‍ಗೆ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದರಲ್ಲಿ ಶಶಿಕುಮಾರ್ ಸ್ಥಿತಿ ಗಂಭೀರವಾಗಿದೆ. ಇನ್ನು ಕಾರಿನಲ್ಲಿದ್ದ ಮಗು ಪುನೀತ್ ಹಾಗೂ ಬಸ್‍ನಲ್ಲಿದ್ದ ಮಗುವಿಗೆ ಕೂಡ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಮಕ್ಕಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ.

    ಘಟನೆಯಲ್ಲಿ ಸಾವನ್ನಪ್ಪಿದ 10 ಮಂದಿಯ ಮೃತದೇಹಗಳನ್ನು ಆಸ್ಪತ್ರೆ ಸಿಬ್ಬಂದಿ ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಬಳ್ಳಾರಿಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಅಂಬುಲೆನ್ಸ್ ಮೂಲಕ ರವಾನಿಸಲಾಗಿದೆ. ಮಂಜುನಾಥ್ (35), ಪೂರ್ಣಿಮಾ (30), ಪವನ್ (10), ಕಾರ್ತಿಕ್ (8), ಸಂದೀಪ್ (24), ಸುಜಾತ (40), ಕೊಟ್ರೇಶ್ (45), ಗಾಯಿತ್ರಿ (35), ಶ್ರೇಯಾ (3) ಮೃತದೇಹ ಕುಟುಬಸ್ಥರಿಗೆ ಹಸ್ತಾಂತರ ಮಾಡಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

    ನಡೆದಿದ್ದೇನು..?: ಮೈಸೂರಿಗೆ ರೈಲಿನಲ್ಲಿ ಬಂದಿದ್ದ ಸಂಗನಕಲ್ಲು ಗ್ರಾಮದ ಮೂರು ಕುಟುಂಬಗಳ ಮಂದಿ ಬೆಳಗ್ಗೆ ಇನ್ನೋವಾ ಕಾರು (Innova Car) ಬಾಡಿಗೆ ಮಾಡಿಕೊಂಡು ಚಾಮುಂಡಿ ಬೆಟ್ಟ, ಬಿಆರ್ ಹಿಲ್ಸ್‍ಗೆ ತೆರಳಿದ್ರು. ಅಲ್ಲಿಂದ 5 ಗಂಟೆಯ ರೈಲು ಹತ್ತಲು ಮೈಸೂರಿಗೆ ವಾಪಸ್ ಆಗುವಾಗ ಪಿಂಜಾರಪೋಲ್ ಸಮೀಪದ ತಿರುವಿನಲ್ಲಿ ಈ ದುರಂತ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಇಡೀ ಇನ್ನೋವಾ ಕಾರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪ್ಪಚ್ಚಿಯಾದ ಕಾರಿನಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹರಸಾಹಸ ಮಾಡಿ ಹೊರತೆಗೆಯಬೇಕಾಯಿತು. ಇದನ್ನೂ ಓದಿ: ಮೈಸೂರು ಬಳಿ ರಸ್ತೆ ಅಪಘಾತಕ್ಕೆ 10 ಬಲಿ – ಪರಿಹಾರ ಘೋಷಿಸಿದ ಸಿಎಂ

    ಅಪಘಾತದ ದೃಶ್ಯ ಬಸ್‍ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದುರಂತಕ್ಕೆ ಟೋಲ್ ಮತ್ತು ಲೋಕೋಪಯೋಗಿ ಇಲಾಖೆಯೇ ನೇರ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಟೋಲ್ ವಸೂಲಿ ಮಾಡ್ತಾರೆ. ಆದರೆ ತಿರುವಿನಲ್ಲಿ ಒಂದು ಸೂಚನಾ ಫಲಕವನ್ನು ಅಳವಡಿಸಿಲ್ಲ. ಗಿಡಗಂಟೆಗಳನ್ನು ತೆರವು ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಸಂಗನಕಲ್ಲಿನಲ್ಲಿ ಮೃತರ ಬಂಧುಗಳ ಆಕ್ರಂದನ ಮುಗಿಲುಮುಟ್ಟಿದೆ. ಈ ಮಧ್ಯೆ, ದುರಂತಕ್ಕೆ ಪ್ರಧಾನಿ ಮೋದಿ (Narendra Modi) ಸಿಎಂ ಸಿದ್ದರಾಮಯ್ಯ (Siddaramaiah) ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ ಘೋಷಿಸಿದ್ದಾರೆ. ರಾಷ್ಟ್ರಪತಿ ಮುರ್ಮು (Droupadi Murmu) ಅವರು ಸಂತಾಪ ಸೂಚಿಸಿದ್ದಾರೆ.

     

  • ರಸ್ತೆ ಕಾಣದೇ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ – ಮಳೆಯ ಆರ್ಭಟಕ್ಕೆ ಮತ್ತೊಂದು ಬಲಿ

    ರಸ್ತೆ ಕಾಣದೇ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ – ಮಳೆಯ ಆರ್ಭಟಕ್ಕೆ ಮತ್ತೊಂದು ಬಲಿ

    ಮಡಿಕೇರಿ: ಜಿಟಿಜಿಟಿ ಮಳೆಯೊಂದಿಗೆ ಮಂಜು ಕವಿದ ವಾತಾವರಣದ ಹಿನ್ನೆಲೆಯಲ್ಲಿ 2 ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕುಶಾಲನಗರ ತಾಲ್ಲೂಕಿನ ಕೊಡಗರಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಸುಂಟಿಕೊಪ್ಪ ಪನ್ಯದ ಆನಂದ ಬಸಪ್ಪ ತೋಟದ ವ್ಯವಸ್ಥಾಪಕ ಜಾವಮನೆ ಮುಸ್ತಾಫ (47) ಎಂಬವರೇ ಮೃತಪಟ್ಟವರು. ಸುಂಟಿಕೊಪ್ಪದಿಂದ ಕುಶಾಲನಗರ ಕಡೆಗೆ ಇನ್ನೋವಾ ಕಾರು ಹಾಗೂ ಕುಶಾಲನಗರದಿಂದ ಸುಂಟಿಕೊಪ್ಪ ಕಡೆಗೆ ಬರುತ್ತಿದ್ದ ಎಕ್ಸ್-ಯುವಿ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರಣಮಳೆಗೆ ಇಬ್ಬರು ಕಾರ್ಮಿಕರು ಬಲಿ

    ACCIDENT MDK

    ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ಕಾರುಗಳು ಜಖಂಗೊಂಡಿವೆ. ಇನ್ನೋವಾ ಕಾರಿನಲ್ಲಿದ್ದ ಜಾವಮನೆ ಮುಸ್ತಫಾ ಅವರ ತಲೆಗೆ ಪೆಟ್ಟಾಗಿ ಮೃತಪಟ್ಟಿದ್ದಾರೆ. ರಸ್ತೆ ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆಯಾಗಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಇದನ್ನೂ ಓದಿ: ಟ್ರ್ಯಾಕ್ಟರ್ ಸ್ಪೀಕರ್‌ ಸೌಂಡ್ ಕಡಿಮೆ ಮಾಡಿ ಎಂದಿದ್ದಕ್ಕೆ ಸ್ವಾಮೀಜಿ ಮೇಲೆಯೇ ಹಲ್ಲೆ

    ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಸುರಿದ ಭಾರೀ ಮಳೆಗೆ ವಾಹನ ಸವಾರರು ಹೈರಾಣಾಗಿದ್ದಾರೆ.

  • ನಿಂತಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ- ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ನಿಂತಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ- ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಝೆನ್ ಕಾರೊಂದು ರಸ್ತೆ ಮಧ್ಯೆಯೇ ಪಲ್ಟಿಯೊಡೆದು, ಸುಮಾರು 50 ಮೀಟರ್‌ನಷ್ಟು ದೂರ ಹೋಗಿ ಬಿದ್ದಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹ್ಯಾಂಡ್‍ಪೋಸ್ಟ್ ಸಮೀಪದ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ.

    ಬಾಂಬ್ ಬ್ಲಾಸ್ಟ್ ಆದಂತೆ ಶಬ್ಧ ಬಂದು ಧೂಳೆದ್ದಿರೋದನ್ನ ಗಮನಿಸಿದರೆ ನೋಡುಗರಿಗೆ ಎದೆ ಝಲ್ ಎನ್ನುವಂತಿದೆ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಝೆನ್ ಕಾರು ಪಲ್ಟಿಯಾದ ರಭಸಕ್ಕೆ ಉರುಳಿಕೊಂಡು ಹೋಗಿ ನಿಂತಿದ್ದ ಇನ್ನೊವಾ ಕಾರಿ ಡಿಕ್ಕಿಯೊಡೆದಿದೆ. ಎರಡು ಕಾರು ಕೂಡ ಬಹುತೇಕ ಜಖಂ ಆಗಿವೆ.

    ಹ್ಯಾಂಡ್ ಪೋಸ್ಟ್ ಸಮೀಪದ ಕೃಷ್ಣಾಪುರ ಗ್ರಾಮದ ಹಾರ್ಡ್‍ವೇರ್ ಅಂಗಡಿ ಬಳಿ ನಿಂತಿದ್ದ ಇನೋವಾ ಕಾರಿಗೆ ಝೆನ್ ಡಿಕ್ಕಿಯೊಡೆದಿದೆ. ಇನೋವಾ ಕಾರು ಹಾರ್ಡ್‍ವೇರ್ ಮಾಲೀಕನಿಗೆ ಸೇರಿದ್ದು. ರಸ್ತೆ ಪಕ್ಕದಲ್ಲಿ ನಿಂತಿದ್ದ ಕಾರಿನ ಅಕ್ಕಪಕ್ಕ ಅದೃಷ್ಟವಶಾತ್ ಯಾರೂ ಇರಲಿಲ್ಲ. ಇದ್ದಿದ್ದರೆ ಭಾರೀ ದೊಡ್ಡ ಪ್ರಮಾಣದ ಅನಾಹುತ ಸಂಭವಿಸಿರುತ್ತಿತ್ತು. ಇದನ್ನೂ ಓದಿ: ಡಿಕೆಶಿ ಗೂಂಡಾ, ಸಿದ್ದರಾಮಯ್ಯ ಜಾತಿವಾದಿ: ಈಶ್ವರಪ್ಪ

    ಸಿಸಿಟಿವಿಯಲ್ಲಿ ಸೆರೆಯಾಗಿರೋ ಈ ಭಯಾನಕ ದೃಶ್ಯವನ್ನ ನೋಡಿದರೆ ಸಿನಿಮಾ ಚಿತ್ರೀಕರಣದ ವೇಳೆ ಡೂಪ್ ಮಾಡುವಂತೆ ಕಾಣುತ್ತದೆ. ಕಾರು ಪಲ್ಟಿಯಾದ ರಭಸಕ್ಕೆ ಕಾರಿನ ಚಾಲಕನಿಗೆ ತುಸು ಹೆಚ್ಚಾಗಿ ಗಾಯವಾಗಿದ್ದು, ಆತನನ್ನ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗಂಡನ ವೀರ್ಯವನ್ನು ಕೇಕ್‍ನಲ್ಲಿ ಮಿಕ್ಸ್ ಮಾಡಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಶಿಕ್ಷಕಿಗೆ 40 ವರ್ಷ ಜೈಲು

  • ಕಾರು ಪಾರ್ಕಿಂಗ್‌ ಸ್ಥಳ ಈಗ ಟೂರಿಸ್ಟ್‌ ಸ್ಪಾಟ್‌ – ವೈರಲ್‌ ವಿಡಿಯೋ ಸೆರೆಗೆ ಒಂದು ಕಮೆಂಟ್‌ ಕಾರಣ

    ಕಾರು ಪಾರ್ಕಿಂಗ್‌ ಸ್ಥಳ ಈಗ ಟೂರಿಸ್ಟ್‌ ಸ್ಪಾಟ್‌ – ವೈರಲ್‌ ವಿಡಿಯೋ ಸೆರೆಗೆ ಒಂದು ಕಮೆಂಟ್‌ ಕಾರಣ

    – ಇದು ದೊಡ್ಡ ಸಾಧನೆ ಅಲ್ಲ
    – ಯಾರೇ ಅನುಭವಿ ಚಾಲಕ ಪಾರ್ಕ್‌ ಮಾಡಬಹುದು

    ಕಣ್ಣೂರು: ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಇನ್ನೋವಾ ಪಾರ್ಕಿಂಗ್‌ ಸ್ಥಳ ಈಗ ಟೂರಿಸ್ಟ್‌ ಸ್ಪಾಟ್‌ ಆಗಿ ಬದಲಾಗಿದೆ.

    ಕೇರಳದ ವಯನಾಡ್‌ ನಿವಾಸಿ ಪಿ.ಜೆ ಬಿಜು ಅವರು ಮಾಹೆ ರೈಲ್ವೇ ನಿಲ್ದಾಣದ ಬಳಿ ಇರುವ ರಸ್ತೆಯ ಕಿರುದಾಗಿರುವ ಜಾಗದಲ್ಲಿ ಪಾರ್ಕ್‌ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    https://twitter.com/nandu79/status/1302612571002871813

    ಈಗ ಕಾರು ಪಾರ್ಕಿಂಗ್‌ ಮಾಡಿದ ಜಾಗ ಪ್ರವಾಸಿ ತಾಣವಾಗಿ ಪರಿವರ್ತನೆಯಾಗಿದೆ. ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿ ಕಾರು ನಿಲ್ಲಿಸಿದ ಜಾಗವನ್ನು ಪರಿಶೀಲನೆ ಮಾಡಿ ಹೋಗುತ್ತಿದ್ದಾರೆ ಎಂದು ವರದಿಯಾಗಿದೆ.

    ವಿಡಿಯೋ ವೈರಲ್‌ ಆದ ಬಗ್ಗೆ ಪ್ರತಿಕ್ರಿಯಿಸಿದ 42 ವರ್ಷದ ಬಿಜು, ನನ್ನ ಪತ್ನಿ ಮಾಡಿರುವ ವಿಡಿಯೋ ಇದು. ಆಕೆಗೂ ಸಹ ವಿಡಿಯೋ ಈ ಪ್ರಮಾಣದಲ್ಲಿ ವೈರಲ್‌ ಆಗುತ್ತದೆ ಎಂದು ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.

    ಬಿಜು ಹೇಳುವುಂತೆ ಮನೆಯ ಈ ಜಾಗದಲ್ಲಿ ಪಾರ್ಕ್‌ ಮಾಡಿದ ನಾಲ್ಕನೇ ಕಾರು ಇನ್ನೋವಾ. ಈ ಮೊದಲು ಮಾರುತಿ ಅಲ್ಟೋ, ನಂತರ ಸ್ನೇಹಿತ ನೀಡಿದ ವಾಗನ್‌ ಆರ್‌, ಅಷ್ಟೇ ಅಲ್ಲದೇ ಜೀಪ್‌ ಸಹ ಈ ಜಾಗದಲ್ಲಿ ಪಾರ್ಕ್‌ ಮಾಡಿದ್ದರು. ಈ ಎಲ್ಲ ವಾಹನಗಳನ್ನು ಪಾರ್ಕ್‌ ಮಾಡಿದ್ದರೂ ಯಾರೂ ಗಮನ ಹರಿಸಿರಲಿಲ್ಲ ಎಂದು ಹೇಳುತ್ತಾರೆ.

    ಕಮೆಂಟ್‌ನಿಂದ ವೈರಲ್‌:
    ಆರಂಭದಲ್ಲಿ ಫೇಸ್‌ಬುಕ್‌ನಲ್ಲಿ ಫೋಟೋ ಹಾಕಿದಾಗ ಯಾರೊ ಒಬ್ಬರು ಎಡಿಟ್‌ ಮಾಡಿದ ಫೋಟೋ ಎಂದು ಹೇಳಿ ಕಮೆಂಟ್‌ ಮಾಡಿದ್ದರಂತೆ. ಈ ಕಾರಣಕ್ಕೆ ಅನುಮಾನ ಪರಿಹರಿಸಲು ಸಂಪೂರ್ಣವಾಗಿ ಪಾರ್ಕ್‌ ಮಾಡುತ್ತಿರುವ ವಿಡಿಯೋವನ್ನು  ಪತ್ನಿ ಮನೆಯಿಂದ ಸೆರೆ ಹಿಡಿದಳು. ಪತ್ನಿ ಆ ವಿಡಿಯೋವನ್ನು ಸ್ನೇಹಿತೆಗೆ ಕಳುಹಿಸಿದಳು. ಆಕೆ ಈ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಹಾಕಿದ ಬಳಿಕ ವೈರಲ್‌ ಆಗಿದೆ ಎಂದು ಬಿಜು ತಿಳಿಸಿದರು.

    ಇನ್ನೋವಾ ಕಾರು ನನ್ನ ಸ್ನೇಹಿತನದ್ದು. ಓಣಂ ಸಮಯದಲ್ಲಿ ನಾನು ಊರಿನಲ್ಲಿ ಇರುವುದಿಲ್ಲ. ಕಾರನ್ನು ಸರ್ವಿಸ್‌ ಮಾಡಿಕೊಡು ಎಂದು ಹೇಳಿದ್ದ. ಹೀಗಾಗಿ ಕೆಲ ದಿನ ನಾನು ಮನೆಯ ಮುಂಭಾಗ ಪಾರ್ಕ್‌ ಮಾಡಿದ್ದೆ. ಓಣಂ ಮುಗಿದು ವರ್ಕ್‌ ಶಾಪ್‌ ಆರಂಭಗೊಂಡ ಬಳಿಕ ನಾನು ಕಾರು ತೆಗೆದಿದ್ದೆ. ಕಾರನ್ನು ತೆಗೆಯುವ ವೇಳೆ ಪತ್ನಿ ವಿಡಿಯೋ ಮಾಡಿದಳು ಎಂದು ಅವರು ವಿವರಿಸಿದರು.

    ಲಿಕ್ಕರ್‌ ಕಂಪನಿಯೊಂದರ ಉದ್ಯೋಗಿ ಮತ್ತು ಡ್ರೈವರ್‌ ಆಗಿರುವ ಬಿಜು ಅವರು ಕಳೆದ 12 ವರ್ಷಗಳಿಂದ ಮಾಹೆಯಲ್ಲಿ ಕುಟುಂಬದ ಜೊತೆ ವಾಸವಾಗಿದ್ದಾರೆ. 1996ರಲ್ಲಿ ಡ್ರೈವಿಂಗ್‌ ಲೈಸೆನ್ಸ್‌ ಪಡೆದಿರುವ ಇವರು ಬಸ್‌ ಸೇರಿದಂತೆ ಹಲವು ವಾಹನಗಳನ್ನು ಚಲಾಯಿಸಿದ ಅನುಭವವನ್ನು ಹೊಂದಿದ್ದಾರೆ.

    ಇಷ್ಟು ಸಣ್ಣ ಜಾಗದಲ್ಲಿ ಹೇಗೆ ಸುಲಭವಾಗಿ ಪಾರ್ಕ್‌ ಮಾಡಿದ್ದೀರಿ ಎಂದು ಕೇಳಿದ ಪ್ರಶ್ನೆಗೆ, ಇದು ಸಣ್ಣ ಜಾಗವೇ? ನಾನು ಎರ್ನಾಕುಲಂ ಮತ್ತು ಕಣ್ಣೂರು ಮಧ್ಯೆ ಹಲವು ವರ್ಷಗಳ ಕಾಲ ಬಸ್‌ ಓಡಿಸಿದ್ದೇನೆ. ಈ ಬಸ್ಸು 12 ಮೀಟರ್‌ ಉದ್ದವನ್ನು ಹೊಂದಿತ್ತು. ಹೀಗಿರುವ ಇನ್ನೋವಾದ ಗಾತ್ರ ಬಸ್ಸಿಗೆ ಹೋಲಿಸಿದರೆ ಬಹಳ ಚಿಕ್ಕದು. ಯಾವುದೇ ಕಾರಿನ ಗಾತ್ರವನ್ನು ಮನಸ್ಸಿನಲ್ಲೇ ಯೋಚಿಸಿಕೊಂಡು ಆತ್ಮವಿಶ್ವಾಸದಿಂದ ಪಾರ್ಕ್‌ ಮಾಡಿದರೆ ಇದು ಕಷ್ಟದ ಕೆಲಸವಲ್ಲ ಎಂದು ಉತ್ತರಿಸಿದರು.

    ಕಳೆದ ಮೂರು ದಿನಗಳಿಂದ ಹಲವು ವರದಿಗಾರರು ನನಗೆ ಕರೆ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ಇದು ದೊಡ್ಡ ವಿಷಯವೇ ಇಲ್ಲ. ಯಾರೇ ಉತ್ತಮ ಚಾಲಕ ನಾನು ಪಾರ್ಕ್‌ ಮಾಡಿದಂತೆ ಮಾಡಬಹುದು ಎಂದು ಹೇಳಿದರು.

    ಸಾಮಾಜಿಕ ಜಾಲತಾಣದಲ್ಲಿ, ಕಿರಿದಾದ ಜಾಗದಲ್ಲಿ ಇಷ್ಟು ದೊಡ್ಡ ಕಾರನ್ನು ಯಾರ ಸಹಾಯ ಇಲ್ಲದೇ, ಬೇರೆ ವಾಹನಗಳಿಗೂ ತೊಂದರೆ ನೀಡದೇ ತೆಗೆದಿದ್ದಾನೆ. ಆತನ ಡ್ರೈವಿಂಗ್‌ ಪವರ್‌ ನಿಜವಾಗಿಯೂ ಗ್ರೇಟ್‌ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

  • ಗಾಲಿ ಸ್ಫೋಟಗೊಂಡು ಡಿವೈಡರ್ ಹಾರಿದ ಕಾರಿಗೆ ಲಾರಿ ಡಿಕ್ಕಿ- ನಾಲ್ವರ ದೇಹ ಛಿದ್ರ ಛಿದ್ರ

    ಗಾಲಿ ಸ್ಫೋಟಗೊಂಡು ಡಿವೈಡರ್ ಹಾರಿದ ಕಾರಿಗೆ ಲಾರಿ ಡಿಕ್ಕಿ- ನಾಲ್ವರ ದೇಹ ಛಿದ್ರ ಛಿದ್ರ

    ಚಿತ್ರದುರ್ಗ: ನಗರದ ಹೊರವಲಯದಲ್ಲಿ ಭಾರೀ ದುರ್ಘಟನೆ ನಡೆದಿದ್ದು, ಚಾಲಕ ಸೇರಿದಂತೆ ನಾಲ್ವರು ಘಟನಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

    ಬೆಂಗಳೂರಿನ ನಿವಾಸಿಗಳಾದ ಇನ್ನೋವಾ ಕಾರು ಚಾಲಕ ಅಶೋಕ (34), ಪತ್ನಿ ಪ್ರವಿತಾ (33), ಮಂಜುಳಾ (42) ಹಾಗೂ ಓರ್ವ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಶ್ಯಾಮಲಾ (43) ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಶೋಭಾ (53) ಹಾಗೂ ಸುಕನ್ಯಾ (53) ಅವರಲ್ಲಿ ಮೃತಪಟ್ಟವರು ಯಾರು, ಆಸ್ಪತ್ರೆಗೆ ದಾಖಲಾಗಿದ್ದು ಯಾರು ಎನ್ನುವುದು ಸ್ಪಷ್ಟವಾಗಿಲ್ಲ.

    ಆಗಿದ್ದೇನು?:
    ಅಶೋಕ ಪತ್ನಿ ಪ್ರವಿತಾ ಸೇರಿದಂತೆ ಒಟ್ಟು 6 ಜನರು ಇನ್ನೋವಾ ಕಾರಿನಲ್ಲಿ ಬೆಂಗಳೂರಿನಿಂದ ಬದಾಮಿಯ ಬನಶಂಕರಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಚಿತ್ರದುರ್ಗ ನಗರದ ಹೊರವಲಯದಲ್ಲಿ ಕಾರಿನ ಮುಂದಿನ ಗಾಲಿ ಏಕಾಏಕಿ ಸ್ಫೋಟಗೊಂಡಿದೆ. ಪರಿಣಾಮ ಕಾರು ಡಿವೈಡರ್ ಹಾರಿ ಎದುರಿನ ರಸ್ತೆಗೆ ಬಿದ್ದಿದೆ. ಇದೇ ವೇಳೆ ಚಿತ್ರದುರ್ಗದಿಂದ ಹಿರೀಯೂರು ಕಡೆಗೆ ಹೋಗುತ್ತಿದ್ದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.

    ಗಾರಿ ಸ್ಫೋಟಗೊಂಡು ಹಾರಿ ನೆಲಕ್ಕೆ ಬಿದ್ದಿದ್ದರಿಂದ ಹಾಗೂ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಕಾರು ಸಂಪೂರ್ಣವಾಗಿ ರಕ್ತದ ಮಡುವಿನಲ್ಲಿ ಮುಳುಗಿತ್ತು. ಮೃತ ಪೈಕಿ ಓರ್ವ ಮಹಿಳೆ ಕಾರಿನಿಂದ ಹಾರಿ ನಡು ರಸ್ತೆಯ ಮೇಲೆ ಬಿದ್ದಿದ್ದರು.

    ಅಪಘಾತವನ್ನು ನೋಡಿದ ಸವಾರರು ಹಾಗೂ ಸ್ಥಳೀಯರು ತಕ್ಷಣವೇ ರಕ್ಷಣೆಗೆ ಮುಂದಾಗಿದ್ದಾರೆ. ತಕ್ಷಣವೇ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಮೃತರ ದೇಹಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

    ಚಿತ್ರದುರ್ಗದ ಬಡಾವಣೆ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಲಾರಿ ಚಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.