Tag: innocence

  • ಮ್ಯೂಸಿಕ್ ರಿಯಾಲಿಟಿ ಶೋಗಳು ಮಕ್ಕಳ ಮುಗ್ಧತೆಯನ್ನು ಬಳಸಿಕೊಳ್ಳುತ್ತಿವೆ: ಗಾಯಕಿ ರೇಖಾ

    ಮ್ಯೂಸಿಕ್ ರಿಯಾಲಿಟಿ ಶೋಗಳು ಮಕ್ಕಳ ಮುಗ್ಧತೆಯನ್ನು ಬಳಸಿಕೊಳ್ಳುತ್ತಿವೆ: ಗಾಯಕಿ ರೇಖಾ

    ಮುಂಬೈ: ಮ್ಯೂಸಿಕ್ ರಿಯಾಲಿಟಿ ಶೋಗಳು ಚಿಕ್ಕ ಮಕ್ಕಳ ಮುಗ್ಧತೆಯನ್ನು ಬಳಸಿಕೊಳ್ಳುತ್ತಿವೆ ಎಂದು ಗಾಯಕಿ ರೇಖಾ ಭಾರದ್ವಾಜ್ ಅವರು ಅಸಮಾಧಾನ ಹೊರ ಹಾಕಿದ್ದಾರೆ.

    ಖಾಸಗಿ ಚಾನೆಲ್‍ಗಳಲ್ಲಿ ಬರುವ ಕೆಲ ಮ್ಯೂಸಿಕ್ ರಿಯಾಲಿಟಿ ಶೋಗಳು ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಹೊರಹಾಕಲು ಉತ್ತಮ ವೇದಿಕೆ ಆಗಿವೆ. ಆದರೆ ಈ ರೀತಿಯ ಶೋಗಳ ಮೇಲೆ ಕೆಲವರು ಸ್ಫರ್ಧಿಗಳನ್ನು ಮಾಧ್ಯಮಗಳು ಟಿ.ಆರ್‍.ಪಿಗಾಗಿ ಬಳಸಿಕೊಳ್ಳುತ್ತವೆ ಎಂದು ದೂರುತ್ತಾರೆ. ಈಗ ಈ ವಿಚಾರವಾಗಿ ಟ್ವೀಟ್ ಮಾಡಿರುವ ಗಾಯಕಿ ರೇಖಾ ಅವರು ರಿಯಾಲಿಟಿ ಶೋ ಮೇಲೆ ಕಿಡಿ ಕಾಡಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ರೇಖಾ ಭಾರದ್ವಾಜ್, ರಿಯಾಲಿಟಿ ಶೋಗಳು ಮಕ್ಕಳ ಕೈಯಲ್ಲಿ ಇಷ್ಟು ನಾಟಕವನ್ನು ಏಕೆ ಆಡಿಸುತ್ತವೆ ಎಂದು ನನಗೆ ಅರ್ಥವಾಗುತ್ತಿಲ್ಲ. ಈ ರಿಯಾಲಿಟಿ ಶೋಗಳು ಮಕ್ಕಳ ಮುಗ್ಧತೆಯನ್ನು ಬಳಸಿಕೊಳ್ಳುತ್ತಿವೆ ಎಂದು ಹೇಳುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

    ನನಗೆ ನಿರಾಶೆ ಮತ್ತು ದುಃಖದ ಸಂಗತಿಯೆಂದರೆ. ನಾವು ಮಕ್ಕಳಿಗೆ ಸಂಗೀತವನ್ನು ಹೇಳಿಕೊಡುವುದನ್ನು ಪ್ರಾರ್ಥನೆ ಎಂದು ಪರಿಗಣಿಸಬೇಕು. ಆದರೆ ಅದನ್ನು ನಾವು ಮಕ್ಕಳಲ್ಲಿ ಸ್ಪರ್ಧೆಯನ್ನು ಹುಟ್ಟು ಹಾಕಲು, ಮತ ಕೇಳಲು ಬಳಸಿಕೊಳ್ಳಬಾರದು. ಗುರು ಶಿಷ್ಯರ ಪರಂಪರೆಯ ಹೆಸರಿನಲ್ಲಿ ನಾವು ಮಕ್ಕಳ ವಯಸ್ಸನ್ನು ಬಳಸಿಕೊಂಡು ಅವರ ಮುಗ್ಧತೆಯನ್ನು ಹಾಳು ಮಾಡುತ್ತಿದ್ದೇವೆ ಎಂದು ರೇಖಾ ಭಾರದ್ವಾಜ್ ಹೇಳಿದ್ದಾರೆ.

    ಇದರ ಜೊತೆಗೆ ಈ ರೀತಿಯ ರಿಯಾಲಿಟಿ ಶೋಗಳಲ್ಲಿ ನಾನು ಎಂದಿಗು ಭಾಗವಹಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ಗೆ ರೀಟ್ವೀಟ್ ಮಾಡಿರುವ ರೇಖಾ ಅವರ ಅಭಿಮಾನಿಯೊಬ್ಬರು, ಯಾರು ಮಕ್ಕಳ ಕಾಳಜಿಯ ಬಗ್ಗೆ ಯೋಜನೆ ಮಾಡುವುದಿಲ್ಲ. ಕೇವಲ ಟಿ.ಆರ್‍.ಪಿ ಮತ್ತು ವ್ಯವಹಾರವನ್ನು ಮಾಡುತ್ತಾರೆ. ಶೋಗಳಲ್ಲಿ ದುಃಖದಿಂದ ನಾಟಕೀಯ ಕಥೆ ಹೇಳುವರು, ತೆರೆ ಮೇಲೆ ಅಳುವ ಪೋಷಕರು ಮತ್ತು ನಿರೂಪಕರು ಅದಕ್ಕೆ ಸಾಂತ್ವನ ಹೇಳುವ ತೀರ್ಪುಗಾರರು ಎಲ್ಲಾ ನಕಲಿ ಎಂದು ಹೇಳಿದ್ದಾರೆ.

    ರೇಖಾ ಭಾರದ್ವಾಜ್ ಅವರು ಟ್ವೀಟ್‍ಗೆ ಇನ್ನೊಬ್ಬರು ಕಮೆಂಟ್ ಮಾಡಿದ್ದು, ನಾನು ಈ ರೀತಿಯ ಸಂಗತಿಯನ್ನು ರಿಯಾಲಿಟಿ ಶೋಗಳಲ್ಲಿ ನೋಡಿದ್ದೇನೆ. ಅದ್ದರಿಂದ ಕೆಳೆದ 3-4 ವರ್ಷದಿಂದ ರಿಯಾಲಿಟಿ ಶೋ ನೋಡುವುದನ್ನೇ ಬಿಟ್ಟಿದ್ದೇನೆ. ಅವರು ಜನಪ್ರಿಯತೆಗಾಗಿ ಸ್ಪರ್ಧಿಗಳ ಭಾವನೆಯನ್ನು ಮಾರಾಟ ಮಾಡುತ್ತಿದ್ದಾರೆ. ಕ್ಷಣಿಕ ಜನಪ್ರಿಯತೆಗಾಗಿ ಚಿಕ್ಕ ಮಕ್ಕಳ ಭವಿಷ್ಯವನ್ನು ಕೊಲ್ಲುತ್ತಿದ್ದಾರೆ ಎಂದು ಹೇಳಿದ್ದಾರೆ.