Tag: Innerwear

  • ಮಹಿಳಾ ಮಾಡೆಲ್‌ಗಳಿಗೆ ನಿಷೇಧ – ಒಳ ಉಡುಪು ಜಾಹೀರಾತಿಗೆ ಎಂಟ್ರಿ ಕೊಟ್ಟ ಪುರುಷರು

    ಮಹಿಳಾ ಮಾಡೆಲ್‌ಗಳಿಗೆ ನಿಷೇಧ – ಒಳ ಉಡುಪು ಜಾಹೀರಾತಿಗೆ ಎಂಟ್ರಿ ಕೊಟ್ಟ ಪುರುಷರು

    ಬೀಜಿಂಗ್: ಚೀನಾ ಸರ್ಕಾರವು (China Government) ಮಹಿಳಾ ಮಾಡೆಲ್‌ಗಳು (Women Modeling) ಆನ್‌ಲೈನ್‌ನಲ್ಲಿ ಒಳ ಉಡುಪು ಪ್ರದರ್ಶಿಸುವುದನ್ನ ನಿಷೇಧಿಸಿದೆ. ಹೀಗಾಗಿ ದೇಶದ ಲೈವ್‌ಸ್ಟ್ರೀಮ್‌ ಫ್ಯಾಶನ್ (LiveStream Fashion) ಕಂಪನಿಗಳು ಈ ಕೆಲಸಕ್ಕಾಗಿ ಪುರುಷರನ್ನ ನಿಯೋಜಿಸುತ್ತಿವೆ.

    ಬ್ರಾ ದಿಂದ ನೈಟ್‌ಗೌನ್ ವರೆಗಿನ ಎಲ್ಲ ರೀತಿಯ ಒಳ ಉಡುಪುಗಳ ಜಾಹೀರಾತಿಗೆ ಪುರುಷರನ್ನ ನಿಯೋಜನೆ ಮಾಡಲಾಗುತ್ತಿದೆ. ಮಹಿಳೆಯರ ಒಳ ಉಡುಪುಗಳನ್ನ ಧರಿಸಿರುವ ಚೀನಿ ಪುರುಷರ ಚಿತ್ರಗಳು, ಫ್ಯಾಷನ್ ಕಂಪನಿಗಳ ಲೈವ್‌ಸ್ಟ್ರೀಮ್ ಪ್ರಸಾರದ ವೀಡಿಯೋಗಳು ಜಾಲತಾಣದಲ್ಲಿ ಸದ್ದು ಮಾಡ್ತಿವೆ. ಕೆಲ ಪುರುಷ ಮಾಡೆಲ್‌ಗಳು ಕ್ಯಾಟ್ ಇಯರ್ ಹೆಡ್‌ಬ್ಯಾಂಡ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಮೋದಿಯನ್ನು `ಸೈತಾನ್’ಗೆ ಹೋಲಿಸಿದ ಪಾಕ್ ಮಾಜಿ ಕ್ರಿಕೆಟಿಗ – ಜಾಲತಾಣದಲ್ಲಿ ವ್ಯಾಪಕ ಆಕ್ರೋಶ

    ಪುರುಷ ಮಾಡೆಲ್‌ಗಳಿಂದ ಮಹಿಳೆಯರ ಒಳ ಉಡುಪು ಪ್ರದರ್ಶಿಸುವ ಮೂಲಕ ಚೀನಾ ಸರ್ಕಾರ ಟೀಕೆಗೆ ಗುರಿಯಾಗಿದೆ. ಕೆಲವರು ಇದಕ್ಕೆ ಬೆಂಬಲ ಸಹ ವ್ಯಕ್ತಪಡಿಸಿದ್ದಾರೆ. ಫ್ಯಾಶನ್ ಕಂಪನಿಗಳ ಪ್ರಯತ್ನಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನೂ ಓದಿ: ಪಾಕ್ ಇತಿಹಾಸ ಪುಸ್ತಕಗಳಲ್ಲಿ ಭಾರತ, ಹಿಂದೂ ವಿರೋಧಿ ನಿಲುವು – ಪಠ್ಯದಲ್ಲಿ ಗಾಂಧಿ ಹಿಂದೂ ನಾಯಕ ಎಂದು ಪರಿಚಯ

    ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷ ಲೈವ್‌ಸ್ಟ್ರೀಮ್‌ ಇ-ಕಾಮರ್ಸ್ (Livestreaming E-Commerce) ಬಳಕೆದಾರರ ಸಂಖ್ಯೆ 46 ಕೋಟಿಗಿಂತಲೂ ಹೆಚ್ಚಾಗಿದೆ ಎಂದು ಹೇಳಲಾಗಿದೆ.

  • ನೀಟ್ ಪರೀಕ್ಷಾ ಹಾಲ್‌ಗೆ ಪ್ರವೇಶಿಸುವ ಮೊದಲು ಬ್ರಾಗಳನ್ನು ತೆಗೆದುಹಾಕಲು ಒತ್ತಾಯ – ತನಿಖೆಗೆ ಆದೇಶ

    ನೀಟ್ ಪರೀಕ್ಷಾ ಹಾಲ್‌ಗೆ ಪ್ರವೇಶಿಸುವ ಮೊದಲು ಬ್ರಾಗಳನ್ನು ತೆಗೆದುಹಾಕಲು ಒತ್ತಾಯ – ತನಿಖೆಗೆ ಆದೇಶ

    ತಿರುವನಂತಪುರಂ: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(NEET)ಯ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಿದ ಮಹಿಳೆಯರ ಬ್ರಾಗಳನ್ನು ತೆಗೆಯುವಂತೆ ಸಿಬ್ಬಂದಿ ಒತ್ತಾಯಿಸಿದ್ದಾರೆ ಎಂದು ಆಕ್ರೋಶಗೊಂಡ ತಂದೆ ಇದರ ವಿರುದ್ಧ ತನಿಖೆ ಮಾಡುವಂತೆ ಮನವಿ ಮಾಡಿರುವ ಸುದ್ದಿಯೊಂದು ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನೆಡೆದಿದೆ.

    NEET ಪರೀಕ್ಷೆ ಬರೆದ ಮಹಿಳೆಯ ತಂದೆ ಕೊಟ್ಟಾರಕರ ಪೊಲೀಸರಿಗೆ ದೂರು ನೀಡಿದ್ದು, ಚಾತಮಂಗಲಂನಲ್ಲಿರುವ ಪರೀಕ್ಷಾ ಕೊಠಡಿಗೆ ಪ್ರವೇಶಿಸುವ ಮೊದಲು ನನ್ನ ಮಗಳು ಸೇರಿದಂತೆ ಮಹಿಳಾ ನೀಟ್ ಆಕಾಂಕ್ಷಿಗಳು ತಮ್ಮ ಒಳಉಡುಪುಗಳನ್ನು ತೆಗೆಯುವಂತೆ ಸಿಬ್ಬಂದಿ ಹೇಳಿದ್ದಾರೆ. ಇದರಿಂದ ಪರೀಕ್ಷೆ ಬರೆಯಲು ಮಹಿಳಾ ಆಕಾಂಕ್ಷಿಗಳಿಗೆ ಮಾನಸಿಕವಾಗಿ ಹಿಂಸೆಯಾಗಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ:  ಬೊಮ್ಮಾಯಿ ಅಲ್ಲ, ಮೋದಿ ನಿತ್ಕೊಂಡ್ರು ನಾನು ಸ್ಪರ್ಧೆ ಮಾಡ್ತೀನಿ: ಮಲ್ಲಿಕಾರ್ಜುನ್

    EXAM

    ಈ ಹಿನ್ನೆಲೆ ಮಾನವ ಹಕ್ಕುಗಳ ಆಯೋಗವು ಕೊಲ್ಲಂ ಗ್ರಾಮಾಂತರ ಎಸ್‍ಪಿಗೆ ಈ ಬಗ್ಗೆ ತನಿಖೆ ನಡೆಸಿ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದೆ.

    ದೂರಿನಲ್ಲಿ ಏನಿದೆ?
    ಪ್ರಾಥಮಿಕ ತಪಾಸಣೆಯ ನಂತರ, ಲೋಹ ಶೋಧಕದಿಂದ ಮಹಿಳೆಯರ ಒಳಉಡುಪಿನ ಕೊಕ್ಕೆ ಪತ್ತೆಯಾಯಿತು. ಈ ವೇಳೆ ಸಿಬ್ಬಂದಿ ಅದನ್ನು ತೆಗೆದುಹಾಕಲು ಕೇಳಿದರು. ಇದೇ ರೀತಿ ಸುಮಾರು 90 ಪ್ರತಿಶತ ಮಹಿಳಾ ಅಭ್ಯರ್ಥಿಗಳು ತಮ್ಮ ಒಳಉಡುಪುಗಳನ್ನು ತೆಗೆದು ಸ್ಟೋರ್ ರೂಂನಲ್ಲಿ ಹಾಕಬೇಕಾಯಿತು. ಇದಾದ ಬಳಿಕ ಪರೀಕ್ಷೆಯನ್ನು ನೀಡುವಾಗ ಅಭ್ಯರ್ಥಿಗಳು ಮಾನಸಿಕವಾಗಿ ತೊಂದರೆಗೀಡಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಸತ್ಯ ಹೇಳಿದ ದಿನ ಅವರಿಗೆ ಸಾವು ಬರುತ್ತೆ: ಕಾರಜೋಳ ಕಿಡಿ

    ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‍ಟಿಎ) ಡ್ರೆಸ್ ಕೋಡ್‍ನಲ್ಲಿ ಒಳಉಡುಪುಗಳನ್ನು ತೆಗೆದುಹಾಕಲು ಸೂಚಿಸಿಲ್ಲ ಎಂದು ದೂರುದಾರರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೈಸೂರಲ್ಲಿ ವಿಕೃತ ಕಾಮಿ ಪ್ರತ್ಯಕ್ಷ – ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಕಾಮುಕನ ಕಾಟ

    ಮೈಸೂರಲ್ಲಿ ವಿಕೃತ ಕಾಮಿ ಪ್ರತ್ಯಕ್ಷ – ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಕಾಮುಕನ ಕಾಟ

    ಮೈಸೂರು: ನಗರದಲ್ಲಿ ಮಹಿಳೆಯರ ಒಳ ಉಡುಪುಗಳನ್ನು ಕದಿಯುವ ವಿಕೃತ ಕಾಮಿ ಪ್ರತ್ಯಕ್ಷವಾಗಿದ್ದೇನೆ. ರಾತ್ರೋರಾತ್ರಿ ಲೇಡಿಸ್ ಹಾಸ್ಟೆಲಿಗೆ ನುಗ್ಗುವ ವಿಕೃತ ಕಾಮಿ ಹುಡುಗಿಯರ ಒಳ ಉಡುಪು ಕದ್ದು ಎಸ್ಕೇಪ್ ಆಗುತ್ತಿದ್ದಾನೆ.

    ಕೆ.ಆರ್. ಆಸ್ಪತ್ರೆಯ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಈತ ಪ್ರತ್ಯಕ್ಷವಾಗಿದ್ದಾನೆ. ಮೂರಂತಸ್ತಿನ ನರ್ಸಿಂಗ್ ಕಾಲೇಜು ಹಾಸ್ಟೆಲ್ ನ ಕಟ್ಟಡ ಏರಿ ಒಳ ನುಗ್ಗಿ ವಿದ್ಯಾರ್ಥಿನಿಯರಲ್ಲಿ ಭೀತಿ ಮೂಡಿಸಿರುವ ಸೈಕೋ, ವಿದ್ಯಾರ್ಥಿನಿಯೊಬ್ಬಳ ರೂಂಗೆ ತಡರಾತ್ರಿ ನುಗ್ಗಿ ಮೊಬೈಲ್ ಕಸಿದುಕೊಂಡಿದ್ದಾನೆ.

    ಸೆಕ್ಯೂರಿಟಿ ಗಾರ್ಡ್ ಮತ್ತು ಸಿಸಿಟಿವಿ ಇದ್ದರೂ ಲೆಕ್ಕಿಸದೇ ಆಳೆತ್ತರದ ಕಾಂಪೌಂಡ್ ಹಾರಿ ಈ ಸೈಕೋ ಒಳ ನುಗ್ಗಿದ್ದಾನೆ. ಶುಕ್ರವಾರದಂದು ಬೆಳಗಿನ ಜಾವ ಸುಮಾರು 3 ಗಂಟೆವರೆಗೂ ಹಾಸ್ಟೆಲ್ ನಲ್ಲೇ ಅಡ್ಡಾಡಿ ಹಾಸ್ಟೆಲ್ ನ ಆವರಣದಲ್ಲಿ ಒಣಗಲು ಹಾಕಿದ್ದ ಯುವತಿಯರ ಒಳ ಉಡುಪುಗಳನ್ನು ತೆಗೆದುಕೊಂಡು ಹೋಗಿದ್ದಾನೆ. ಈತನ ವಿಕೃತ ಕಳ್ಳತನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ಸೈಕೋಪಾತ್ ವರ್ತನೆಯಿಂದ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಆತಂಕಗೊಂಡಿದ್ದಾರೆ. ಈ ಬಗ್ಗೆ ದೇವರಾಜ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ವಿಕೃತ ಕಾಮಿಯ ಪತ್ತೆಗೆ ಮುಂದಾಗಿದ್ದಾರೆ.

  • ಒಂದೇ ಬಣ್ಣದ ಒಳಉಡುಪು ಧರಿಸುವಂತೆ ವಿದ್ಯಾರ್ಥಿನಿಯರಿಗೆ ಶಾಲೆಯ ನ್ಯೂ ರೂಲ್ಸ್

    ಒಂದೇ ಬಣ್ಣದ ಒಳಉಡುಪು ಧರಿಸುವಂತೆ ವಿದ್ಯಾರ್ಥಿನಿಯರಿಗೆ ಶಾಲೆಯ ನ್ಯೂ ರೂಲ್ಸ್

    ಮುಂಬೈ: ಪುಣೆಯ ಪ್ರತಿಷ್ಠಿತ ಶಾಲೆಯೊಂದು ವಿದ್ಯಾರ್ಥಿನಿಯರಿಗೆ ಒಂದೇ ರೀತಿಯ ಬಣ್ಣದ ಒಳಉಡುಪು ಧರಿಸಬೇಕೆಂದು ಹೊಸ ವಸ್ತ್ರ ನಿಯಮವನ್ನು ಜಾರಿ ಮಾಡಿದೆ.

    ಪುಣೆಯ ಮಯೀರ್ ಎಂಐಟಿಯ ಶಾಲೆ ಈ ರೀತಿ ಹೊಸ ನಿಯಮವನ್ನು ಮಾಡಿದೆ. ವಿದ್ಯಾರ್ಥಿನಿಯರು ಬಿಳಿ ಬಣ್ಣದ ಅಥವಾ ಚರ್ಮದ ಬಣ್ಣದ ಒಳ ಉಡುಪುಗಳನ್ನು ಶಾಲೆಗೆ ಧರಿಸಿಕೊಂಡು ಬರಬೇಕು ಎಂದು ಆದೇಶ ಹೊರಡಿಸಿದೆ. ಜೊತೆಗೆ ಶಾಲಾ ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡುವ ಸಲುವಾಗಿ ಈ ಹೊಸ ನಿಯಮವನ್ನು ಮಾಡಲಾಗಿದೆ ಎಂದು ಶಾಲೆ ತಿಳಿಸಿದೆ.

    ಶಾಲೆ ಈ ನಿಯಮದ ಬಗ್ಗೆ ವಿದ್ಯಾರ್ಥಿನಿಯರ ದಿನಚರಿ ಡೈರಿಯಲ್ಲಿ ಬರೆದು ಪೋಷಕರ ಬಳಿ ಸಹಿ ಮಾಡಿಸಿಕೊಂಡು ಬರುವಂತೆ ತಿಳಿಸಿದೆ. ಬಳಿಕ ಶಾಲೆಯ ಈ ಹೊಸ ನಿಯಮದ ವಿರುದ್ಧ ಆಕ್ರೋಶಗೊಂಡು ವಿದ್ಯಾರ್ಥಿಗಳ ಪೋಷಕರು ಶಾಲೆಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.

    ಅಷ್ಟೇ ಅಲ್ಲದೇ ಈ ಶಾಲೆಯಲ್ಲಿ ವಿದ್ಯಾರ್ಥಿಗಳು ಅನೇಕ ಸಲ ಟಾಯ್ಲೆಟ್ ಬಳಸಲು ಸಹ ಅನುಮತಿಸುವುದಿಲ್ಲ. ಅವರು ಧರಿಸಬೇಕಾದ ಸ್ಕರ್ಟ್ ನ ಉದ್ದವನ್ನೂ ಶಾಲೆ ಅವರೇ ಉಲ್ಲೇಖಿಸಿದ್ದಾರೆ. ಈ ಹೊಸ ನಿಯಮಕ್ಕೆ ನಮ್ಮ ಬಳಿ ಸಹಿ ಹಾಕಿಸಿಕೊಂಡು ಬನ್ನಿ ಎಂದು ಹೇಳುತ್ತಿದ್ದಾರೆ ಎಂದು ಪೋಷಕರು ಹೇಳಿದ್ದಾರೆ.

    ಶಾಲೆ ಮಾಡಿದ ನಿಯಮವನ್ನು ಉಲ್ಲಂಘಿಸಿದರೆ ವಿದ್ಯಾರ್ಥಿನಿಯರು ಮತ್ತು ಪೋಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲೆಯ ಅಧಿಕಾರಿಗಳು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಈ ನಿಯಮದಿಂದ ಪೋಷಕರಿಗೆ ಮತ್ತು ವಿದ್ಯಾಥಿಗಳಿಗೆ ತೊಂದರೆ ಆಗುವುದಿಲ್ಲ. ಶಾಲೆಯ ಈ ನಿಯಮ ಒಳ್ಳೆಯದಾಗಿದೆ ಎಂದು ಎಂಐಟಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಸುಚಿತ್ರ ಕರದ್ ನಗರೆ ಹೇಳಿದ್ದಾರೆ.

    ನಾವು ಈ ಹಿಂದೆ ಕೆಲವು ಅನುಭವಗಳನ್ನು ಹೊಂದಿದ್ದೇವೆ. ಆದ್ದರಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಇದರಿಂದ ನಾವು ಯಾವುದೇ ರಹಸ್ಯ ಕಾರ್ಯಸೂಚಿಯನ್ನು ಹೊಂದಿಲ್ಲ. ಇದು ವಿದ್ಯಾರ್ಥಿನಿಯರ ಸುರಕ್ಷತೆಯ ದೃಷ್ಠಿಯಿಂದ ಮಾಡಲಾಗಿದೆ ಎಂದು ತಮ್ಮ ಹೊಸ ನಿಯಮವನ್ನು ಸಮರ್ಥಿಸಿಕೊಂಡಿದ್ದಾರೆ.

  • 7 ಲಕ್ಷ ರೂ. ಮೌಲ್ಯದ ಬ್ರಾಗಳನ್ನ ಕದ್ದ ಮಹಿಳೆಯರು!

    7 ಲಕ್ಷ ರೂ. ಮೌಲ್ಯದ ಬ್ರಾಗಳನ್ನ ಕದ್ದ ಮಹಿಳೆಯರು!

    ವಾಷಿಂಗ್ಟನ್: ಇಬ್ಬರು ಮಹಿಳೆಯರು ಲಕ್ಷಾಂತರ ರೂ. ಮೌಲ್ಯದ ಒಳಉಡುಪನ್ನು ಕದ್ದು ಸಿಕ್ಕಿಬಿದ್ದ ಘಟನೆ ಕ್ಯಾಲಿಫೋರ್ನಿಯಾದ ಫೋಲ್ಸಮ್‍ನಲ್ಲಿರುವ ವಿಕ್ಟೋರಿಯಾಸ್ ಸೀಕ್ರಟ್ ಸ್ಟೋರ್‍ನಲ್ಲಿ ನಡೆದಿದೆ.

    ಒಳಉಡುಪನ್ನು ಕದ್ದ ಇಬ್ಬರು ಮಹಿಳೆಯರು ಸಿಬ್ಬಂದಿಯ ಮೇಲೆ ಪೆಪ್ಪರ್ ಸ್ಪ್ರೇ ಮಾಡಿ ಪರಾರಿಯಾಗಲು ಯತ್ನಿಸಿದ್ದರು. ಆಗ ತಕ್ಷಣ ಅಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಎಚ್ಚೆತ್ತುಕೊಂಡು ಅವರನ್ನು ಹಿಡಿದು ಬಂಧಿಸಿದ್ದಾರೆ.

    ಆರೋಪಿ ಮಹಿಳೆಯರು ಹಲವು ದೊಡ್ಡ ಬ್ಯಾಗ್‍ಗಳಲ್ಲಿ ತುಂಬಿಸಿಕೊಂಡಿದ್ದ ಸುಮಾರು ನೂರಕ್ಕೂ ಹೆಚ್ಚು ಪ್ಯಾಡೆಡ್ ಬ್ರಾಗಳ ಫೋಟೋವನ್ನು ಫೋಲ್ಸಮ್ ಪೊಲೀಸ್ ಅಧಿಕಾರಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

    ಫೋಲ್ಸಮ್ ಪೊಲೀಸರ ಪ್ರಕಾರ ಶುಕ್ರವಾರ ಮಹಿಳೆಯರು ಬ್ಯಾಗಿನಲ್ಲಿ ಒಳಉಡುಪನ್ನು ತುಂಬಿಸಿಕೊಂಡು ಹೋಗುತ್ತಿದ್ದಾಗ ಅಲ್ಲಿನ ಸಿಬ್ಬಂದಿ ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಈ ಮಹಿಳೆಯರು ಅವರ ಮೇಲೆ ಪೆಪ್ಪರ್ ಸ್ಪ್ರೇ ಮಾಡಿ ಹಲ್ಲೆ ನಡೆಸಿದ್ದಾರೆ. ಆದರೆ ಇದರಿಂದ ಸಿಬ್ಬಂದಿಗೆ ಯಾವುದೇ ಹಾನಿಯಾಗಿಲ್ಲ ವರದಿಯಾಗಿದೆ.

    ಮಹಿಳೆಯರು ಪರಾರಿಯಾಗಲು ಯತ್ನಿಸುವಾಗ ಪೊಲೀಸ್ ಅಧಿಕಾರಿ ಕಾರಿನ ಹತ್ತಿರ ಅವರನ್ನು ತಡೆದಿದ್ದಾರೆ. ನಂತರ ಪೊಲೀಸ್ ಅಧಿಕಾರಿಗಳು ಕದ್ದ ಒಳಉಡುಪನ್ನು ನೋಡಿ ಅವರನ್ನು ಬಂಧಿಸಿದ್ದಾರೆ.

    ಮಹಿಳೆಯರು ಸುಮಾರು 11 ಸಾವಿರ ಡಾಲರ್(ಅಂದಾಜು 7 ಲಕ್ಷ ರೂ.) ಮೌಲ್ಯದ ಬ್ರಾಗಳನ್ನ ಕದ್ದಿದ್ದರು ಎಂದು ವರದಿಯಾಗಿದೆ. ಆರೋಪಿಗಳ ವಿರುದ್ಧ ಕಳ್ಳತನ ಹಾಗೂ ಪಿತೂರಿ ಆರೋಪದಡಿ ಪ್ರಕರಣ ದಾಖಲಾಗಿದೆ. ತನಿಖೆ ವೇಳೆ ಒಬ್ಬಳ ಬಳಿ ನಕಲಿ ನೋಟುಗಳು ಕೂಡ ಪತ್ತೆಯಾಗಿದ್ದು, ಅದರ ವಿರುದ್ಧವೂ ಪ್ರಕರಣ ದಾಖಲಾಗಿದೆ.

    ವಿಚಾರಣೆ ವೇಳೆ ಈ ಹಿಂದೆಯೂ ಬೇರೆ ಮಳಿಗೆಗಳಿಂದ ಬ್ರಾಗಳನ್ನು ಕದ್ದ ವಿಚಾರವನ್ನು ಆರೋಪಿಗಳು ಬಹಿರಂಗಪಡಿಸಿದ್ದಾರೆ.