Tag: inmates

  • ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಹೈಫೈ ಆತಿಥ್ಯ

    ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಹೈಫೈ ಆತಿಥ್ಯ

    ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದ (Kalaburagi Central Jail) ಕೈದಿಗಳು ಹೈಫೈ ಜೀವನ ನಡೆಸುತ್ತಿರುವ ಹಲವು ಫೋಟೊ ಹಾಗೂ ವಿಡಿಯೋ ತುಣುಕುಗಳು ವೈರಲ್ ಆಗಿವೆ.

    ಇಲ್ಲಿ ಹಣ ಕೊಟ್ಟರೆ ಸ್ಮಾರ್ಟ್ ಫೋನ್, ಗಾಂಜಾ ಸೇರಿದಂತೆ ಕೈದಿಗಳಿಗೆ ರಾಜ್ಯಾತಿಥ್ಯ ಸಿಗುತ್ತಿದೆ ಎಂಬ ಮಾತು ಕೇಳಿ ಬಂದಿದೆ.ಬೇರೆ ಬೇರೆ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿರುವ ಆರೋಪಿಗಳಾದ ವಿಶಾಲ್, ಸಾಗರ್ ಹಾಗೂ ಸೋನು ಎಂಬ ಕೈದಿಗಳ ಹೈಫೈ ಲೈಫ್ ಅನಾವರಣಗೊಂಡಿದೆ. ಇದನ್ನೂ ಓದಿ: ಅಶೋಕ್ ಲಾಜಿಕ್ ಪ್ರಕಾರ ಸಿ.ಟಿ ರವಿ ಭಯೋತ್ಪಾದಕರಾ? – ಪ್ರಿಯಾಂಕ್ ಖರ್ಗೆ ತಿರುಗೇಟು

    ಸ್ಮಾರ್ಟ್ ಫೋನ್ ಬಳಸಿ ಸ್ನೇಹಿತರಿಗೆ ಕೈದಿಗಳ ವಿಡಿಯೋ ಕಾಲ್, ಗಾಂಜಾ ಸೇದುತ್ತಾ ಜೈಲಿನಲ್ಲಿ ಸೆಲ್ಫಿಗೆ ಪೋಸ್ ನೀಡುತ್ತಿರುವ ಕೈದಿಗಳ ವಿಡಿಯೋ ಬಹಿರಂಗವಾಗಿವೆ. ಇದನ್ನೂ ಓದಿ: Secunderabad| ಮುತ್ಯಾಲಮ್ಮ ದೇವಸ್ಥಾನದ ವಿಗ್ರಹ ಧ್ವಂಸ – ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ

    ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನಗೆ ರಾಜಾತಿಥ್ಯ ಪ್ರಕರಣ ಹಿನ್ನೆಲೆ ದರ್ಶನ್ ಆಪ್ತ ಸಹಾಯಕ ನಾಗರಾಜ್ ಕಲಬುರಗಿ ಜೈಲಿಗೆ ಶಿಫ್ಟ್ ಆಗಿದ್ದು, ನಾಗರಾಜ್‌ಗೆ ಕಲಬುರಗಿ ಕೇಂದ್ರಿಯ ಕಾರಾಗೃಹದಲ್ಲಿ ಹೈಫೈ ರಾಜಾತಿಥ್ಯ ನೀಡಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ. ಇದನ್ನೂ ಓದಿ: ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರುತ್ತಾರೆ ಎಂದು ಖರ್ಗೆ ಅವರಿಂದ ಹೇಳಿಸಿ ನೋಡೋಣ: ಬಿವೈವಿ ಸವಾಲ್

  • ಜೈಲಿನ ಮೇಲೆ ಗುಂಡಿನ ದಾಳಿ – 10 ಭದ್ರತಾ ಸಿಬ್ಬಂದಿ ಸೇರಿ 14 ಮಂದಿ ಸಾವು, 24 ಕೈದಿಗಳು ಎಸ್ಕೇಪ್‌

    ಜೈಲಿನ ಮೇಲೆ ಗುಂಡಿನ ದಾಳಿ – 10 ಭದ್ರತಾ ಸಿಬ್ಬಂದಿ ಸೇರಿ 14 ಮಂದಿ ಸಾವು, 24 ಕೈದಿಗಳು ಎಸ್ಕೇಪ್‌

    ಮೆಕ್ಸಿಕೊ: ಇಲ್ಲಿನ ಸಿಯುಡಾಡ್ ಜುವಾರೆಜ್‌ನಲ್ಲಿ ಬಂದೂಕುಧಾರಿಗಳು ಜೈಲಿನ ಮೇಲೆ (Mexican Border Prison) ಗುಂಡಿನ ದಾಳಿ ನಡೆಸಿದ್ದು, 10 ಭದ್ರತಾ ಸಿಬ್ಬಂದಿ ಮತ್ತು 4 ಮಂದಿ ಕೈದಿಗಳು ಮೃತಪಟ್ಟಿದ್ದಾರೆ.

    ಕೈದಿಗಳ ಕುಟುಂಬದವರು ತಮ್ಮ ಸದಸ್ಯರನ್ನು ಭೇಟಿ ಮಾಡಲು ಜೈಲಿಗೆ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬಂದೂಕುಧಾರಿಗಳು ಪೆನಿಟೆನ್ಷಿಯರಿ ಸೆಂಟರ್‌ಗೆ ವಾಹನಗಳಲ್ಲಿ ಬಂದಿದ್ದಾರೆ. ನಂತರ ಭದ್ರತಾ ಅಧಿಕಾರಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡ ಸನ್ನಿವೇಶದಲ್ಲಿ 24 ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಗೆ ಹಾಜರಾದ 32 ಸಾವಿರ ಜನ – ಪೆನ್ನು, ಪೇಪರ್ ಹಿಡಿದು ಸ್ಟೇಡಿಯಂನಲ್ಲೆ ಕುಳಿತ್ರು

    ಮೆಕ್ಸಿಕನ್ ಸೈನಿಕರು ಮತ್ತು ರಾಜ್ಯ ಪೊಲೀಸರು ತಕ್ಷಣ ಜೈಲಿನ ನಿಯಂತ್ರಣ ಪಡೆದಿದ್ದಾರೆ. ದಾಳಿ ನಡೆಸಿದವರು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಮೆಕ್ಸಿಕನ್ ಜೈಲುಗಳಲ್ಲಿ ಈ ಹಿಂದೆಯೂ ಹಲವಾರು ಹಿಂಸಾಚಾರದ ದಾಳಿಗಳಾಗಿವೆ.

    ಜೈಲಿನ ಮೇಲೆ ದಾಳಿ ಮಾಡುವುದಕ್ಕೂ ಮೊದಲು, ಮುನ್ಸಿಪಲ್ ಪೊಲೀಸರನ್ನು ಗುರಿಯಾಗಿಸಿ ದಾಳಿ ನಡೆದಿತ್ತು. ದಾಳಿಕೋರರನ್ನು ಹಿಂಬಾಲಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೇ ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಬಂದೂಕುಧಾರಿಗಳನ್ನು ಹತ್ಯೆಗೈದಿದ್ದರು. ಇದನ್ನೂ ಓದಿ: ಕಾಬೂಲ್‌ ಮಿಲಿಟರಿ ವಿಮಾನ ನಿಲ್ದಾಣದಲ್ಲಿ ಸ್ಫೋಟ – 10 ಮಂದಿ ಸಾವು

    Live Tv
    [brid partner=56869869 player=32851 video=960834 autoplay=true]

  • ಕೈದಿಗಳಿಂದ ಮೊಬೈಲ್ ಬಳಕೆ – ಟೈಲ್ಸ್, ಗೋಡೆ ಕೊರೆದು ಬಚ್ಚಿಟ್ಟಿದ್ದ 19 ಫೋನ್ ವಶಕ್ಕೆ

    ಕೈದಿಗಳಿಂದ ಮೊಬೈಲ್ ಬಳಕೆ – ಟೈಲ್ಸ್, ಗೋಡೆ ಕೊರೆದು ಬಚ್ಚಿಟ್ಟಿದ್ದ 19 ಫೋನ್ ವಶಕ್ಕೆ

    ಚಂಡೀಗಢ: ಪಟಿಯಾಲ ಸೆಂಟ್ರಲ್ ಜೈಲು ಸಂಕೀರ್ಣದಿಂದ 19 ಕೀ ಪ್ಯಾಡ್ ಮೊಬೈಲ್ ಫೋನ್‍ಗಳನ್ನು ಭಾನುವಾರ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಪಟಿಯಾಲ ಕೇಂದ್ರ ಕಾರಾಗೃಹದಲ್ಲಿ ಭಾನುವಾರ ನಡೆಸಿದ ವಿಶೇಷ ಶೋಧ ಕಾರ್ಯಾಚರಣೆಯಲ್ಲಿ ಗೋಡೆ ಮತ್ತು ನೆಲವನ್ನು ಕೊರೆದು ಬಚ್ಚಿಟ್ಟಿದ್ದ 19 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೀಗ ಕೇಂದ್ರ ಕಾರಾಗೃಹದ ಅಧಿಕಾರಿಗಳು ಮತ್ತು ಸಿಬ್ಬಂದಿಕಾರ್ಯಕ್ಕೆ ಪಂಜಾಬ್ ಜೈಲು ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಟ್ವೀಟ್ ಮಾಡುವ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ಇಲ್ಲ, ಸ್ವಾತಂತ್ರೋತ್ಸವ ಅದ್ದೂರಿಯಾಗಿ ಆಚರಿಸುತ್ತೇವೆ: ಜಮೀರ್ ಅಹ್ಮದ್

    ಹರ್ಜೋತ್ ಸಿಂಗ್ ಬೈನ್ಸ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ಖತರ್ನಾಕ್ ಖದೀಮರು ಫೋನ್‍ಗಳನ್ನು ಬಚ್ಚಿಡಲು ನೆಲದ ಟೈಲ್ಸ್ ಜಾಯಿಂಟ್‍ಗಳು ಮತ್ತು ಗೋಡೆಯ ಕೊರೆದಿರುವುದನ್ನು ಕಾಣಬಹುದಾಗಿದೆ. ಮೊಬೈಲ್ ಫೋನ್ ಇಟ್ಟುಕೊಳ್ಳುವುದು ತಪ್ಪು ಎಂದು ತಿಳಿದಿದ್ದರೂ, ಕೈದಿಗಳು ಸುರಕ್ಷಿತವಾಗಿ ಮೊಬೈಲ್ ಫೋನ್ ಅನ್ನು ಜೈಲಿನೊಳಗೆ ಹೇಗೆ ತಂದರು ಎಂಬುವುದು ಇದೀಗ ಯಕ್ಷ ಪ್ರಶ್ನೆಯಾಗಿದೆ. ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟಕ್ಕೆ ಈ ಸೋಗಲಾಡಿ ಸಿದ್ದಸೂತ್ರದಾರನ ಕೊಡುಗೆ ಏನು?: ಹೆಚ್‌ಡಿಕೆ ವಾಗ್ದಾಳಿ

    ಪಟಿಯಾಲ ಸೆಂಟ್ರಲ್ ಜೈಲಿನಲ್ಲಿ ಮೊಬೈಲ್ ಫೋನ್ ವಶಪಡಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಮೇ 25 ರಂದು, ಕುಖ್ಯಾತ ಸಿಂಥೆಟಿಕ್ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ದೋಷಿ ಎಂದು ವಜಾಗೊಂಡ ಪಂಜಾಬ್ ಡಿಎಸ್‍ಪಿ ಜಗದೀಶ್ ಸಿಂಗ್ ಭೋಲಾ ಅವರಿಂದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿತ್ತು. ಮೇ 31 ರಂದು ಜೈಲು ಅಧಿಕಾರಿಗಳು ಈ ಕೇಂದ್ರ ಕಾರಾಗೃಹದ ಸಂಕೀರ್ಣದಲ್ಲಿ ಹೂತಿಟ್ಟಿದ್ದ ಎಂಟು ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • 73ನೇ ಹುಟ್ಟುಹಬ್ಬದಂದು 17 ಕೈದಿಗಳ ಜಾಮೀನು ಹಣ ಪಾವತಿಸಿದ ಉದ್ಯಮಿ

    73ನೇ ಹುಟ್ಟುಹಬ್ಬದಂದು 17 ಕೈದಿಗಳ ಜಾಮೀನು ಹಣ ಪಾವತಿಸಿದ ಉದ್ಯಮಿ

    ಲಕ್ನೋ: ಉದ್ಯಮಿಯೊಬ್ಬರು ತಮ್ಮ 73ನೇ ಹುಟ್ಟುಹಬ್ಬಕ್ಕೆ 17 ಕೈದಿಗಳ ಜಾಮೀನು ಹಣ ಪಾವತಿಸಿದ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.

    ಮೋತಿಲಾಲ್ ಯಾದವ್ ಜಾಮೀನಿಗೆ ಹಣ ಪಾವತಿಸಿದ ಉದ್ಯಮಿ. ಮೋತಿಲಾಲ್ ಅವರು ಜಿಲ್ಲಾ ಜೈಲು ಅಧಿಕಾರಿಗಳಿಗೆ 32 ಸಾವಿರ ರೂ. ಪಾವತಿಸಿ ಸಣ್ಣ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿರುವ ಹಾಗೂ ಜಾಮೀನು ಪಡೆಯಲು ಸಾಧ್ಯವಾಗದವರಿಗೆ ಬಿಡುಗಡೆ ಮಾಡಲು ಕೇಳಿಕೊಂಡಿದ್ದಾರೆ.

    ಜಿಲ್ಲಾ ಜೈಲಿನ ಅಧೀಕ್ಷಕ ಶಶಿಕಾಂತ್ ಮಿಶ್ರಾ ಅವರು ಯಾದವ್ ಅವರ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ. ಅಲ್ಲದೆ ಕೈದಿಗಳ ಕುಟುಂಬ ಹಾಗೂ ಸ್ನೇಹಿತರು 8.5 ಲಕ್ಷ ರೂ. ಜಮೆ ಮಾಡಿದ ನಂತರ ಕಳೆದ ಎರಡು ವರ್ಷದಲ್ಲಿ ಸುಮಾರು 232 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

    ಸ್ಥಳೀಯ ಉದ್ಯಮಿ ಮೋತಿಲಾಲ್ ಅವರು ಇಂದು ತಮ್ಮ 73ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಜಾಮೀನು ಪಡೆಯಲು ಸಾಧ್ಯವಾಗದ ಕೈದಿಗಳಿಗೆ ಸಹಾಯ ಮಾಡಲು ಮುಂದಾಗಿದ್ದಾರೆ ಎಂದು ಶಶಿಕಾಂತ್ ಮಿಶ್ರಾ ತಿಳಿಸಿದರು.

    ಅಗಸ್ಟ್ 17, 2016ರಂದು ಬಂಧಿಸಿದ ಅಪರಾಧಿ ಜೈಲಿನಲ್ಲಿ ಇದ್ದರು. ಅಪರಾಧಿಯ ಜೈಲು ಶಿಕ್ಷೆಯ ಅವಧಿ ಕಳೆದ ವರ್ಷವೇ ಪೂರ್ಣಗೊಂಡಿದ್ದರೂ ದಂಡದ ಮೊತ್ತವಾದ 1,089 ರೂ. ಪಾವತಿಸಲು ಹಣ ಇರಲಿಲ್ಲ. ಹೀಗಾಗಿ ಅಪರಾಧಿ ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿಯೇ ಇರಬೇಕಾಯಿತು ಎಂದು ಶಶಿಕಾಂತ್ ಮಿಶ್ರಾ ಹೇಳಿದರು.

    ನನ್ನ ಮಗ ವಕೀಲನಾಗಿದ್ದು, ಜನರ ಸಹಾಯದಿಂದ ಕೈದಿಗಳನ್ನು ಬಿಡುಗಡೆ ಮಾಡಬಹುದು ಎಂಬ ವಿಷಯ ತಿಳಿಯಿತು. ಹೀಗಾಗಿ ನಾನು ನನ್ನ ಕೊಡುಗೆಯನ್ನು ನೀಡಿದ್ದೇನೆ. ಮುಂದೆ ಅವರು ಈ ಅಪರಾಧಗಳನ್ನು ಮುಂದುವರಿಸಲ್ಲ ಎನ್ನುವ ಭಾವನೆ ಹೊಂದಿದ್ದೇನೆ ಎಂದು ಮೋತಿಲಾಲ್ ಯಾದವ್ ತಿಳಿಸಿದರು.