Tag: INLD

  • ಹರಿಯಾಣ ಮಾಜಿ ಸಿಎಂ ಓಂ ಪ್ರಕಾಶ್ ಚೌತಾಲ ವಿಧಿವಶ

    ಹರಿಯಾಣ ಮಾಜಿ ಸಿಎಂ ಓಂ ಪ್ರಕಾಶ್ ಚೌತಾಲ ವಿಧಿವಶ

    ಚಂಡೀಗಢ: ಹರಿಯಾಣದ ಮಾಜಿ ಸಿಎಂ ಮತ್ತು ಭಾರತೀಯ ರಾಷ್ಟ್ರೀಯ ಲೋಕದಳ (INLD) ಮುಖ್ಯಸ್ಥ ಓಂ ಪ್ರಕಾಶ್ ಚೌತಾಲಾ (89) (Om Prakash Chautala) ಶುಕ್ರವಾರ (ಡಿ.20), ಗುರುಗ್ರಾಮ್‌ನಲ್ಲಿರುವ ಅವರ ನಿವಾಸದಲ್ಲಿ ನಿಧನರಾದರು.

    ಭಾರತದ 6ನೇ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ ಚೌಧರಿ ದೇವಿ ಲಾಲ್ ಅವರ ಪುತ್ರನಾಗಿ 1935ರ ಜನವರಿ 1ರಲ್ಲಿ ಚೌತಾಲಾ ಜನಿಸಿದರು. 1989ರಲ್ಲಿ ಮೊದಲಬಾರಿಗೆ ಹರಿಯಾಣ ಮುಖ್ಯಮಂತ್ರಿಯಾಗಿದ್ದ ಚೌತಾಲಾ 6 ತಿಂಗಳ ಕಾಲ ಹುದ್ದೆಯಲ್ಲಿದ್ದರು. ಬಳಿಕ 2 ತಿಂಗಳ ನಂತರ ಮತ್ತೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ರು, ಇದಾದ 5 ದಿನಗಳಲ್ಲೇ ರಾಜೀನಾಮೆ ನೀಡುವ ಪರಿಸ್ಥಿತಿ ಬಂದೊದಗಿತು. ಬಳಿಕ 1991ರಲ್ಲಿ 3ನೇ ಅವಧಿಗೆ ಸಿಎಂ ಆದರು. ಇದಾದ 2 ವಾರಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ್ದರಿಂದ ಸಿಎಂ ಸ್ಥಾನ ಕಳೆದುಕೊಂಡರು. ನಂತರ 1999 ರಿಂದ 2025ರ ನಡುವೆ ಸತತ 2 ಅವಧಿಗೆ ಸಿಎಂ ಆಗಿ ಸೇವೆ ಸಲ್ಲಿಸಿದ್ದರು.

    ಭಾರತೀಯ ರಾಜಕೀಯದಲ್ಲಿ ಧೀಮಂತ ನಾಯಕನಾಗಿ ಗುರುತಿಸಿಕೊಂಡಿದ್ದರು. ಆದ್ರೆ ಅವರ ವೃತ್ತಿ ಜೀವನವು ವಿವಾದಗಳಿಂದಲೇ ಗುರುತಿಸಲ್ಪಟ್ಟಿತ್ತು. ಇದನ್ನೂ ಓದಿ: UI: ಉಪೇಂದ್ರ, ಶಿವಣ್ಣ ಫೋಟೋ ಇಟ್ಟು ಪೂಜೆ- ಫ್ಯಾನ್ಸ್ ಭರ್ಜರಿ ಸೆಲೆಬ್ರೇಶನ್

    1999-2000 ಅವಧಿಯಲ್ಲಿ ಹರಿಯಾಣದಲ್ಲಿ ಕಿರಿಯ ಮೂಲ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಹಗರಣರಣದಲ್ಲಿ ಚೌತಾಲಾಗೆ ಕೋರ್ಟ್‌ ಶಿಕ್ಷೆ ವಿಧಿಸಿತ್ತು. 2013 ರಲ್ಲಿ ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತು.

    87ನೇ ವಯಸ್ಸಿನವರಾಗಿದ್ದಾಗ 2021ರಲ್ಲಿ ಜೈಲಿನಿಂದ ಬಿಡುಗಡೆಯಾದರು. ಇದಕ್ಕೂ ಮುನ್ನ ದೆಹಲಿಯ ತಿಹಾರ್ ಜೈಲಿನ (87 ವರ್ಷ ವಯಸ್ಸಿನ) ಅತ್ಯಂತ ಹಳೆಯ ಖೈದಿ ಎಂಬ ದಾಖಲೆಯನ್ನೂ ಹೊಂದಿದ್ದರು. ಇದನ್ನೂ ಓದಿ: ಉಕ್ರೇನ್‌ ಯುದ್ಧ ಸಂಬಂಧ ಟ್ರಂಪ್‌ ಜೊತೆ ಮಾತುಕತೆಗೆ ಸಿದ್ಧ: ಪುಟಿನ್‌

  • ಹರಿಯಾಣದ ಮಾಜಿ ಶಾಸಕನಿಗೆ ಗುಂಡಿಕ್ಕಿ ಹತ್ಯೆ

    ಹರಿಯಾಣದ ಮಾಜಿ ಶಾಸಕನಿಗೆ ಗುಂಡಿಕ್ಕಿ ಹತ್ಯೆ

    ಚಂಡೀಗಢ: ಜಜ್ಜರ್ ಜಿಲ್ಲೆಯಲ್ಲಿ ಅಪರಿಚಿತ ಬಂಧೂಕುಧಾರಿಗಳು ಹೊಂಚುದಾಳಿ ನಡೆಸಿ ಹರಿಯಾಣದ ಭಾರತೀಯ ರಾಷ್ಟ್ರೀಯ ಲೋಕದಳದ ಅಧ್ಯಕ್ಷ ಮತ್ತು ಮಾಜಿ ಶಾಸಕ ನಫೆ ಸಿಂಗ್ ರಾಠಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

    ನಫೆ ಸಿಂಗ್‌ ರಾಠಿ ಅವರು ಪ್ರಯಾಣಿಸುತ್ತಿದ್ದ ಎಸ್‌ಯುವಿ ಮೇಲೆ ಹೊಂಚುದಾಳಿ ನಡೆಸಿದ ಅಪರಿಚಿತ ಬಂದೂಕುಧಾರಿಗಳು ಇಂದು ಸಂಜೆ ಗುಂಡಿಕ್ಕಿ ಕೊಂದಿದ್ದಾರೆ. ರಾಠಿ ಅವರೊಂದಿಗೆ ಪ್ರಯಾಣಿಸುತ್ತಿದ್ದ ಇಬ್ಬರು ಸಾವನ್ನಪ್ಪಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

    ಕಾರಿನಲ್ಲಿ ಬಂದ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದಾಗ ರಾಠಿ ಮತ್ತು ಅವರ ಸಹಚರರು ವಾಹನದೊಳಗೆ ಇದ್ದರು. ದಾಳಿಯ ನಂತರ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಾಳುಗಳನ್ನು ತಕ್ಷಣ ವೈದ್ಯಕೀಯ ಚಿಕಿತ್ಸೆಗಾಗಿ ಬ್ರಹ್ಮ ಶಕ್ತಿ ಸಂಜೀವನಿ ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟರಲ್ಲಿ ಮಾಜಿ ಶಾಸಕರು ಸಾವನ್ನಪ್ಪಿದ್ದಾರೆ.

    ನಫೆ ಸಿಂಗ್ ರಾಠಿ ಅವರು ಬಹದ್ದೂರ್‌ಗಢದಿಂದ ಐಎನ್‌ಎಲ್‌ಡಿ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಆಘಾತಕಾರಿ ದಾಳಿಯ ನಂತರ ರಾಜ್ಯ ಪೊಲೀಸರು ಅಲರ್ಟ್ ಆಗಿದ್ದಾರೆ. ಅಪರಾಧದ ಸ್ಥಳಕ್ಕೆ ಹಲವಾರು ತಂಡಗಳನ್ನು ತ್ವರಿತವಾಗಿ ಸಜ್ಜುಗೊಳಿಸಲಾಗಿದೆ. ದಾಳಿ ಕುರಿತು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ದಾಳಿಕೋರರು ಹೇಗೆ ಬಂದರು, ಹೇಗೆ ಪರಾರಿಯಾದರು ಎಂಬುದನ್ನು ತಿಳಿಯಲು ಅಧಿಕಾರಿಗಳು ಸುತ್ತಮುತ್ತಲಿನ ವಿವಿಧ ಸ್ಥಳಗಳಿಂದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

  • ಹರಿಯಾಣದಲ್ಲಿಯೂ ಪಕ್ಷಾಂತರ ಪರ್ವ- ಮೂವರು ಶಾಸಕರು ಬಿಜೆಪಿಗೆ ಸೇರ್ಪಡೆ

    ಹರಿಯಾಣದಲ್ಲಿಯೂ ಪಕ್ಷಾಂತರ ಪರ್ವ- ಮೂವರು ಶಾಸಕರು ಬಿಜೆಪಿಗೆ ಸೇರ್ಪಡೆ

    ಚಂಡೀಗಢ: ಕರ್ನಾಟಕ, ಮಹಾರಾಷ್ಟ್ರದ ನಂತರ ಹರಿಯಾಣದಲ್ಲಿಯೂ ಪಕ್ಷಾಂತರ ಪರ್ವ ಮುಂದುವರಿದಿದ್ದು, ಇಂಡಿಯನ್ ನ್ಯಾಷನಲ್ ಲೋಕದಳ(ಐಎನ್‍ಎಲ್‍ಡಿ)ದ ಇಬ್ಬರು ಹಾಗೂ ಪಕ್ಷೇತರ ಶಾಸಕರೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ.

    ಹರಿಯಾಣ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವಾಗಲೇ ಪಕ್ಷಾಂತರ ಕಾರ್ಯ ಚುರುಕುಗೊಂಡಿದೆ. ಇತ್ತೀಚೆಗಷ್ಟೇ ರಾಜೀನಾಮೆ ನೀಡಿದ್ದ ಸಿರ್ಸಾ ಜಿಲ್ಲೆಯ ರಾನಿಯಾ ವಿಧಾನಸಭಾ ಕ್ಷೇತ್ರದ ಐಎನ್‍ಎಲ್‍ಡಿ ಶಾಸಕ ರಾಮ್ ಚಂದರ್ ಕಾಂಬೋಜ್, ಫಿರೋಜ್‍ಪುರ್ ಝಿರ್ಕಾದ ಶಾಸಕ ನಸೀಮ್ ಅಹ್ಮದ್ ಬಿಜೆಪಿ ಪಾಳಯ ಸೇರಿದ್ದಾರೆ.

    ಸಫಿಡನ್ ಕ್ಷೇತ್ರದ ಪಕ್ಷೇತರ ಶಾಸಕ ಜಸ್ಬಿರ್ ದೇಸ್ವಾಲ್ ಸಹ ಬಿಜೆಪಿಗೆ ಬೆಂಬಲ ನೀಡಿದ್ದು, ಇಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್ ಬರಾಲಾ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ವಿಶೇಷವೆಂದರೆ ಮೇ 12 ರಂದು 6ನೇ ಹಂತದ ಲೋಕಸಭಾ ಚುನಾವಣೆ ನಡೆಯುವುದಕ್ಕೂ ಕೆಲವೇ ದಿನಗಳ ಮುಂಚೆ ನಸೀಮ್ ಅಹ್ಮದ್ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದರು. ಇದೀಗ ಮತ್ತೆ ಬಿಜೆಪಿಗೆ ಜಂಪ್ ಆಗಿದ್ದಾರೆ.

    ಈ ಮೂವರು ಶಾಸಕರೂ ಯಾವುದೇ ಷರತ್ತುಗಳಿಲ್ಲದೇ ಬಿಜೆಪಿ ಸೇರಿದ್ದಾರೆ ಎಂದು ಸುಭಾಷ್ ಬರಾಲಾ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ರತಿಯಾದ ಐಎನ್‍ಎಲ್‍ಡಿ ಶಾಸಕ ರವೀಂದರ್ ಬಲೈಲಾ ಅವರು ಮಾಜಿ ಸಚಿವ ಜಗದೀಶ್ ಯಾದವ್ ಅವರೊಂದಿಗೆ ಬಿಜೆಪಿ ಸೇರ್ಪಡೆಯಾಗಿದ್ದರು. ಇದೀಗ ಮತ್ತೆ ಇಬ್ಬರು ಐಎನ್‍ಎಲ್‍ಡಿ ಶಾಸಕರು ಕೇಸರಿ ತೆಕ್ಕೆಗೆ ಜಾರಿದ್ದಾರೆ.

    ಚೌತಾಲಾ ಕುಟುಂಬದಲ್ಲಿನ ದ್ವೇಷದಿಂದ ಕಳೆದ ವರ್ಷ ಐಎನ್‍ಎಲ್‍ಡಿ ವಿಭಜನೆಯಾಯಿತು. ಆ ಸಂದರ್ಭದಲ್ಲಿಯೂ ಸಹ ಹಲವಾರು ಸದಸ್ಯರು ಬಿಜೆಪಿಗೆ ಸೇರ್ಪಡೆಯಾಗಿದ್ದರು.