Tag: injury

  • ಮಂಡ್ಯದಲ್ಲಿ ಸಿಲಿಂಡರ್ ಬದಲಿಸುವಾಗ ಗ್ಯಾಸ್ ಲೀಕ್..!

    ಮಂಡ್ಯದಲ್ಲಿ ಸಿಲಿಂಡರ್ ಬದಲಿಸುವಾಗ ಗ್ಯಾಸ್ ಲೀಕ್..!

    ಮಂಡ್ಯ: ಖಾಲಿಯಾದ ಸಿಲಿಂಡರ್ ಬದಲಿಸಿ ಹೊಸ ಸಿಲಿಂಡರ್ ಅಳವಡಿಸುವಾಗ ಇದ್ದಕ್ಕಿದ್ದಂತೆ ಗ್ಯಾಸ್ ಲೀಕ್ ಆಗಿದ್ದು, ನಾಲ್ವರಿಗೆ ಸುಟ್ಟ ಗಾಯಗಳಾಗಿ ಮನೆಯವರೆಲ್ಲ ಅಪಾಯದಿಂದ ಪಾರಾದ ಘಟನೆ ಜಿಲ್ಲೆಯ ಮದ್ದೂರು ಪಟ್ಟಣದ ಚನ್ನೇಗೌಡ ಬಡಾವಣೆಯಲ್ಲಿ ನಡೆದಿದೆ.

    ಮಂಜು, ರಶ್ಮಿ, ಮಂಗಳ ಹಾಗೂ ಸುಶೀಲಮ್ಮ ಗಾಯಗೊಂಡವರು. ಸುಶೀಲಮ್ಮ ಮನೆಯಲ್ಲಿ ಅಡುಗೆ ಸಿಲಿಂಡರ್ ಖಾಲಿಯಾಗಿದ್ದರಿಂದ ಹೊಸ ಸಿಲಿಂಡರ್ ಅಳವಡಿಸಲು ಕ್ಯಾಪ್ ತೆಗೆದಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಹೊಸ ಸಿಲಿಂಡರ್‍ನಿಂದ ಗ್ಯಾಸ್ ಲೀಕಾಗಲು ಆರಂಭಿಸಿದೆ.

    ಸುಶೀಲಮ್ಮ ಭಯಗೊಂಡು ಗ್ಯಾಸ್ ಲೀಕಾಗದಂತೆ ಅದುಮಿಟ್ಟುಕೊಂಡು ಮನೆಯವರನ್ನೆಲ್ಲ ಹೊರಗೆ ಹೋಗುವಂತೆ ಕೂಗಿಕೊಂಡಿದ್ದಾರೆ. ತಕ್ಷಣ ಮನೆಯವರೆಲ್ಲ ಹೊರಗೆ ಹೋಗಿದ್ದಾರೆ. ಆದರೆ ಈ ವೇಳೆ ಮನೆಯಲ್ಲಿ ಹರಡಿದ್ದ ಗ್ಯಾಸ್‍ಗೆ ಒಂದು ಕ್ಷಣ ಬೆಂಕಿ ತಗುಲಿದ್ದರಿಂದ ನಾಲ್ವರಿಗೆ ಸಣ್ಣಪುಟ್ಟ ಸುಟ್ಟಗಾಯಗಳಾಗಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಣಾಪಾಯದಿಂದ ಪಾರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬರ್ತ್ ಡೇ ಪಾರ್ಟಿಗೆ ತೆರಳ್ತಿದ್ದಾಗ ಏರ್ ಪೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತ – ನಾಲ್ವರ ದುರ್ಮರಣ

    ಬರ್ತ್ ಡೇ ಪಾರ್ಟಿಗೆ ತೆರಳ್ತಿದ್ದಾಗ ಏರ್ ಪೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತ – ನಾಲ್ವರ ದುರ್ಮರಣ

    ಚಿಕ್ಕಬಳ್ಳಾಪುರ: ಚಲಿಸುತ್ತಿದ್ದ ಓಮ್ನಿ ಕಾರಿಗೆ ಹಿಂಬದಿಯಿಂದ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ವಿಮಾನ ನಿಲ್ದಾಣ ರಸ್ತೆಯಲ್ಲಿ ನಡೆದಿದೆ.

    ಮಧ್ಯರಾತ್ರಿ ಸುಮಾರು 1.30ಗಂಟೆಗೆ ಅಪಘಾತ ಸಂಭವಿಸಿದ್ದು, ವೆಂಕಟೇಶ್, ಸತೀಶ್, ವಿಕಾಸ್ ಮತ್ತು ಸುಂದರ್ ಮೃತ ದುರ್ದೈವಿಗಳು. ಓಮ್ನಿ ಕಾರಿನಲ್ಲಿದ್ದವರು ಬೆಂಗಳೂರಿನ ಆರ್.ಟಿ ನಗರದಲ್ಲಿ ಫ್ಲವರ್ ಡೆಕೋರೇಷನ್ ಕೆಲಸ ಮಾಡುತ್ತಿದ್ದವರು ಎಂದು ತಿಳಿದು ಬಂದಿದೆ.

    ಪ್ಲವರ್ ಡೆಕೋರೇಷನ್ ಮಾಡುತ್ತಿದ್ದ ಯುವಕರು ತಮ್ಮ ಸ್ನೇಹಿತನ ಬರ್ತ್ ಡೇ ಪಾರ್ಟಿಗೆ ಅಂತ ನಂದಿ ಬೆಟ್ಟದ ಕಡೆಗೆ ತೆರಳುತ್ತಿದ್ದು, ಈ ವೇಳೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಓಮ್ನಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಹೀಗಾಗಿ ಓಮ್ನಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋವಾ ಕಾರಿನಲ್ಲಿದ್ದ ಮೂವರು ಸಹ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಈ ಅಪಘಾತಕ್ಕೆ ಅವೈಜ್ಞಾನಿಕವಾಗಿ ಹೆದ್ದಾರಿ ನಿರ್ಮಾಣ ಮಾಡಿರುವ ಹೆದ್ದಾರಿ ಪ್ರಾಧಿಕಾರದ ಅಧಿಕಾರಗಳ ಬೇಜವಾಬ್ದಾರಿತನವೇ ಕಾರಣ ಅಂತ ಹೇಳಲಾಗುತ್ತಿದೆ. ಪ್ರಮುಖವಾಗಿ ಬೆಂಗಳೂರು ನಗರದಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ಸುಸಜ್ಜಿತ ಹೆದ್ದಾರಿ ನಿರ್ಮಾಣ ಮಾಡಿರುವ ಅಧಿಕಾರಗಳು ಏರ್ ಪೋರ್ಟ್ ಟೋಲ್ ಮುಗಿದ ನಂತರ ಉತ್ತಮ ರಸ್ತೆ ಮಾಡಿಲ್ಲ. ಹೈದರಾಬಾದ್ ಕಡೆಯ ಟೋಲ್ ಮುಗಿದ ನಂತರ ಕನ್ನಮಂಗಲಪಾಳ್ಯ ಗೇಟ್ ಬಳಿ ಸೇತುವೆ ನಿರ್ಮಿಸಲಾಗಿದ್ದು, ಈ ಸೇತುವೆ ಮೇಲೆ ನೂತನವಾಗಿ ಡಾಂಬರೀಕರಣ ಮಾಡಲಾಗಿದೆ. ಹೀಗಾಗಿ ಡಾಂಬರೀಕರಣ ಮಾಡಿರುವ ಪರಿಣಾಮ ಹೆದ್ದಾರಿ ಮಧ್ಯದ ಡಿವೈಡರ್ ಸಮತಟ್ಟಾಗಿದ್ದು ಎರಡು ಬದಿಯ ರಸ್ತೆಗಳು ಒಂದೇ ಸಮನಾಗಿವೆ.

    ಮೇಲ್ಸುತುವೆ ಮೇಲೆ 6 ಪಥದ ರಸ್ತೆ ಇದಾಗಿದ್ದು ಸಾಕಷ್ಟು ವಿಶಾಲವಾಗಿದೆ. ಡಾಂಬರೀಕರಣ ಕಡು ಕಪ್ಪಾಗಿದ್ದು, ವಾಹನಗಳ ಹೆಡ್ ಲೈಟ್ ಎಷ್ಟೇ ಇದ್ದರೂ ಮುಂದಿನ ವಾಹನಗಳು ಬಹಳ ಹತ್ತಿರ ಬರುವವರೆಗೂ ಬಹುಬೇಗ ಕಾಣುವುದಿಲ್ಲ. ಇದರ ಜೊತೆಗೆ ಕತ್ತಲಲ್ಲಿ ಹೊಳೆಯುವ ರೇಡಿಯಂ ಸ್ಟಿಕರ್ ಮಾರ್ಗ ಸೂಚಿಗಳನ್ನ ಸಹ ಇಲ್ಲಿ ಅಳವಡಿಸಿಲ್ಲ. ಹೀಗಾಗಿ ಈ ಸ್ಥಳದಲ್ಲೇ ಪದೇ ಪದೇ ಅಪಘಾತಗಳು ಸಂಭವಿಸುತ್ತಿರುತ್ತವೆ.

    ಕಳೆದ ರಾತ್ರಿಯೂ ಸಹ ಇದೇ ರೀತಿ ಮುಂದೆ ಚಲಿಸುತ್ತಿದ್ದ ಓಮ್ನಿ ಕಾರು ಕಾಣದೆ ಹಿಂಬದಿಯಲ್ಲಿ ವೇಗವಾಗಿ ಬಂದ ಇನ್ನೋವಾ ಕಾರು ಡಿಕ್ಕಿಯಾಗಿದೆ. ಈ ಸಂಬಂಧ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 12 ಮಂದಿ ವಿದ್ಯಾರ್ಥಿಗಳಿದ್ದ ಶಾಲಾ ಬಸ್ ಪಲ್ಟಿ

    12 ಮಂದಿ ವಿದ್ಯಾರ್ಥಿಗಳಿದ್ದ ಶಾಲಾ ಬಸ್ ಪಲ್ಟಿ

    ಗದಗ: ಸ್ಟೇರಿಂಗ್ ಕಟ್ಟಾದ ಪರಿಣಾಮ ಶಾಲಾ ಮಕ್ಕಳಿದ್ದ ಶಾಲಾ ಬಸ್ ಪಲ್ಟಿಯಾಗಿರುವ ಘಟನೆ ಗದಗ ತಾಲೂಕಿನ ಕಲ್ಲೂರ ಗ್ರಾಮದ ಬಳಿ ನಡೆದಿದೆ.

    ಗದಗ ತಾಲೂಕಿನ ಹೊಸಳ್ಳಿಯ ಬೂದಿಶ್ವರ ವಿದ್ಯಾಪೀಠಕ್ಕೆ ಸೇರಿದ ಶಾಲಾ ಬಸ್ ಇದಾಗಿದ್ದು, ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಈ ಅಪಘಡ ಸಂಭವಿಸಿದೆ. ಸದ್ಯಕ್ಕೆ ಬಸ್ ಅಪಘಾತದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಈ ಬಸ್ ಕಲ್ಲೂರು, ಚಿಂಚಲಿ, ಅಂತೂರ, ಬೆಂತೂರ ಗ್ರಾಮದ ಮಕ್ಕಳನ್ನ ಶಾಲೆಗೆ ಕರೆದುಕೊಂಡು ಹೋಗುತ್ತಿತ್ತು. ಎಂದಿನಂತೆ ಇಂದು ಕೂಡ ಬಸ್ ಮೊದಲಿಗೆ ಒಂದು ಗ್ರಾಮದ ಮಕ್ಕಳನ್ನು ಕರೆದುಕೊಂಡು ಇನ್ನೊಂದು ಗ್ರಾಮಕ್ಕೆ ಹೋಗುತ್ತಿತ್ತು. ಈ ವೇಳೆ ಸ್ಟೇರಿಂಗ್ ಕಟ್ಟಾಗಿ ಚಾಲಕನ ಜಾಗರೂಕತೆಯಿಂದ ಕಲ್ಲೂರ ಗ್ರಾಮದ ಬಳಿ ಬಸ್ ರಸ್ತೆ ಪಕ್ಕದಲ್ಲಿ ಪಲ್ಟಿಯಾಗಿದೆ.

    ಈ ಅಪಘಾತದಲ್ಲಿ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ. ಬಸ್ಸಿನಲ್ಲಿ 12 ವಿದ್ಯಾರ್ಥಿಗಳು ಇದ್ದರು. ಸದ್ಯಕ್ಕೆ ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಈ ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 166 ಮಂದಿ ಬಲಿಯಾಗಿ ಇಂದಿಗೆ 10 ವರ್ಷ

    166 ಮಂದಿ ಬಲಿಯಾಗಿ ಇಂದಿಗೆ 10 ವರ್ಷ

    ಮುಂಬೈ: ವಾಣಿಜ್ಯ ನಗರಿ ಮುಂಬೈ ಉಗ್ರರ ದಾಳಿ ನಡೆದು 166 ಮಂದಿ ಬಲಿಯಾಗಿ ಇಂದಿಗೆ 10 ವರ್ಷಗಳು ಕಳೆದಿದೆ.

    2008 ನವೆಂಬರ್ 26 ರಂದು ಪಾಕಿಸ್ತಾನದ ಲಷ್ಕರ್-ಇ-ತೊಯ್ಬಾ ಉಗ್ರರು ಮುಂಬೈನಲ್ಲಿ ದಾಳಿ ನಡೆಸಿದ್ದರು. ಅಂದು ಸತತ ಮೂರು ದಿನಗಳ ಕಾಲ ಮುಂಬೈ ಭಯದಲ್ಲಿ ನಡುಗಿ ಹೋಗಿದ್ದು, ವಿಶ್ವಾದ್ಯಂತ ಸುದ್ದಿಯಾಗಿತ್ತು. ಈ ಭೀಕರ ಭಯೋತ್ಪಾದಕ ದಾಳಿಗೆ 166 ಮಂದಿ ಬಲಿಯಾಗಿದ್ದರು.

    ನವೆಂಬರ್ 26 ರಂದು ಪಾಕಿಸ್ತಾನದ 10 ಮಂದಿ ಉಗ್ರರು ಭಾರತದತ್ತ ಪ್ರಯಾಣಿಸಿದ್ದರು. ಬಳಿಕ ಗುರುತು ಮರೆಸಿಕೊಂಡು ಮುಂಬೈಗೆ ಎಂಟ್ರಿಕೊಟ್ಟಿದ್ದು, ಮೂರು ದಿನಗಳ ಕಾಲ ತಾಜ್ ಹೋಟೆಲ್, ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣ, ಆಸ್ಪತ್ರೆ, ರೆಸ್ಟೊರೆಂಟ್, ಯಹೂದಿ ಸಮುದಾಯ ಕೇಂದ್ರ ಸೇರಿದಂತೆ 10ಕ್ಕೂ ಹೆಚ್ಚು ಕಡೆಗಳಲ್ಲಿ ಬಾಂಬ್ ಸ್ಫೋಟ ಹಾಗೂ ಗುಂಡಿನ ದಾಳಿ ನಡೆದ್ದರು. ಈ ದಾಳಿಯಿಂದ 166 ಜನರು ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

    ಭಯೋತ್ಪಾದಕರ ದಾಳಿಯ ಬಗ್ಗೆ ತಿಳಿಯುತ್ತಿದ್ದಂತೆ ಜನರ ರಕ್ಷಣೆಗೆ ಪೊಲೀಸರು ದೌಡಾಯಿಸಿದ್ದರು. ಆದರೆ ಈ ದಾಳಿಯಲ್ಲಿ ಪೊಲೀಸ್ ಅಧಿಕಾರಿಗಳಾದ ಹೇಮಂತ್ ಕರ್ಕರೆ, ವಿಜಯ್ ಸಾಲಸ್ಕರ್, ಅಶೋಕ್ ಕಾಮ್ಟೆ ಮತ್ತು ತುಕಾರಾಮ್ ಓಂಬ್ಳೆ ಮತ್ತು ಯೋಧ ಸಂದೀಪ್ ಉನ್ನಿಕೃಷ್ಣನ್ ಉಗ್ರರಿಂದ ಹತರಾಗಿದ್ದರು. ಇನ್ನೂ 10 ಉಗ್ರರಲ್ಲಿ 9 ದಾಳಿಕೋರರನ್ನು ಭದ್ರತಾ ಪಡೆ ಕೊಂದು ಹಾಕಿತ್ತು.

    ಜೀವಂತ ಸೆರೆ ಹಿಡಿದಿದ್ದ ಅಜ್ಮಲ್ ಕಸಬ್ ನನ್ನು ನಾಲ್ಕು ವರ್ಷಗಳ ಬಳಿಕ 2012ರ ನವೆಂಬರ್ 21ರಂದು ಗಲ್ಲಿಗೇರಿಸಲಾಯಿತು. ಇಂದಿಗೆ ದಾಳಿ ನಡೆದು ಹತ್ತು ವರ್ಷಗಳಾಗಿದೆ. ಆದರೆ ಪಾಕಿಸ್ತಾನ ಮಾತ್ರ ಸಂಚುಕೋರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಲ್ಸಕ್ಕಾಗಿ ಹೋಗುತ್ತಿದ್ದ 50ಕ್ಕೂ ಸಿಬ್ಬಂದಿಯಿದ್ದ ಬಸ್ ಪಲ್ಟಿ!

    ಕೆಲ್ಸಕ್ಕಾಗಿ ಹೋಗುತ್ತಿದ್ದ 50ಕ್ಕೂ ಸಿಬ್ಬಂದಿಯಿದ್ದ ಬಸ್ ಪಲ್ಟಿ!

    ಬಳ್ಳಾರಿ: ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿರುವ ಘಟನೆ ಜಿಲ್ಲೆಯ ಸಂಡೂರು ತಾಲೂಕಿನ ಕುಡತಿನಿ ಬಳಿ ನಡೆದಿದೆ.

    ಜಿಂದಾಲ್ ಕಾರ್ಖಾನೆಯ ಬಸ್ಸು ಕೆಲಸಕ್ಕಾಗಿ ಸಿಬ್ಬಂದಿಯನ್ನು ಜನರಲ್ ಶಿಫ್ಟ್ ಗಾಗಿ ಕರೆದುಕೊಂಡು ಹೋಗುತ್ತಿದ್ದಾಗ ಇಂದು ಮುಂಜಾನೆ ಪಲ್ಟಿಯಾಗಿದೆ. ಬಸ್ಸಿನಲ್ಲಿ ಸುಮಾರು 50 ಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

    ಸಿಬ್ಬಂದಿಯನ್ನು ಕಾರ್ಖಾನೆಗೆ ಕರೆದುಕೊಂಡು ಹೋಗುವಾಗ ಸಂಡೂರು ತಾಲೂಕಿನ ಕುಡತಿನಿ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿನ ಡಿವೈಡರ್ ಡಿಕ್ಕಿ ಹೊಡೆದು ಬಳಿಕ ಬಸ್ ಪಲ್ಟಿಯಾಗಿದೆ. ಪರಿಣಾಮ ಬಸ್‍ನಲ್ಲಿದ್ದ ಮೂವರಿಗೆ ಗಂಭೀರವಾಗಿ ಗಾಯವಾಗಿದೆ. ಗಾಯಾಳುಗಳನ್ನು ಸಮೀಪದ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಬಸ್ ಪಲ್ಟಿಯಾದ ಕೂಡಲೇ ಎರ್ಮಜೆನ್ಸಿ ಡೋರ್ ಮೂಲಕ ಜನರನ್ನು ರಕ್ಷಣೆ ಮಾಡಲಾಗಿದೆ. ಸುಮಾರು 50 ಜನರ ರಕ್ಷಣೆ ಮಾಡಲಾಗಿದ್ದು, ಸದ್ಯಕ್ಕೆ ಈ ಅವಘಡದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚಾಲಕನು ನಿದ್ದೆಯ ಮಂಪರಿನಲ್ಲಿದ್ದು, ಆತನ ಅಜಾಗರುಕತೆಯಿಂದ ಬಸ್ ಪಲ್ಟಿಯಾಗಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

    ಈ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಕುಡತಿನಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 2 ಆಟೋ, ಕಾರ್ ಡಿಕ್ಕಿ – ಮಹಿಳೆ ದುರ್ಮರಣ, ಐವರು ಗಂಭೀರ

    2 ಆಟೋ, ಕಾರ್ ಡಿಕ್ಕಿ – ಮಹಿಳೆ ದುರ್ಮರಣ, ಐವರು ಗಂಭೀರ

    ಕಾರವಾರ: ಎರಡು ಆಟೋ ಹಾಗೂ ಕಾರಿನ ನಡುವೆ ಡಿಕ್ಕಿಯಾದ ಪರಿಣಾಮ ಓರ್ವ ಮಹಿಳೆ ಮೃತಪಟ್ಟಿದ್ದು, ಐವರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ರಾಷ್ಟ್ರೀಯ ಹೆದ್ದಾರಿ 66ರ ರಂಗಿನಕಟ್ಟೆ ಬಳಿ ನಡೆದಿದೆ.

    ಶಿರಾಲಿ ಗ್ರಾಮದ ಮಾದೇವಿ ಸುರೇಶ್ ನಾಯ್ಕ್ (42) ಮೃತ ದುರ್ದೈವಿ. ಭಟ್ಕಳದ ರಾಷ್ಟ್ರೀಯ ಹೆದ್ದಾರಿ 66ರ ರಂಗಿನಕಟ್ಟೆ ಬಳಿ ಎರಡು ಆಟೋ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಿಂದ ಆಟೋ ಚಾಲಕರಾದ ನಾಗೇಶ್ ನಾಯ್ಕ್, ಚಂದ್ರ ನಾಯ್ಕ್ ಹಾಗೂ ಪ್ರಯಾಣಿಕ ಭಾಸ್ಕರ್ ನಾಯ್ಕ್ ಗಾಯಗೊಂಡವರಾಗಿದ್ದಾರೆ.

    ಕಾರಿನಲ್ಲಿದ್ದ ಬೆಂಗಳೂರಿನ ರತ್ನಮ್ಮ ಮುನೇಟಪ್ಪ(22) ಮತ್ತು ಕಾವ್ಯಾ ವೆಂಕಟೇಶ್(20)ಗೆ ಗಂಭೀರವಾಗಿ ಗಾಯಗಳಾಗಿದ್ದು, ಅವರನ್ನು ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆ ಸಂಬಂಧ ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಅಪಘಾತದ ರಭಸಕ್ಕೆ ಲಾರಿ ಪಲ್ಟಿ, ಗದ್ದೆಗೆ ನುಗ್ಗಿದ KSRTC ಬಸ್

    ಅಪಘಾತದ ರಭಸಕ್ಕೆ ಲಾರಿ ಪಲ್ಟಿ, ಗದ್ದೆಗೆ ನುಗ್ಗಿದ KSRTC ಬಸ್

    ಮೈಸೂರು: ಕೆಎಸ್‍ಆರ್ ಟಿಸಿ ಬಸ್ ಹಾಗೂ ಟಿಪ್ಪರ್ ಲಾರಿ ನಡುವೆ ಅಪಘಾತ ಸಂಭಸಿದ ಪರಿಣಾಮ 8 ಮಂದಿಗೆ ಗಾಯವಾಗಿದ್ದು, ಇಬ್ಬರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಬಿಳಿಕೆರೆ ಪೊಲೀಸ್ ಠಾಣೆ ಬಳಿ ಈ ಅಪಘಾತ ಸಂಭವಿಸಿದೆ. ಟಿಪ್ಪರ್ ಲಾರಿ ಜಲ್ಲಿ ತುಂಬಿಕೊಂಡು ಮೈಸೂರಿನಿಂದ ಹುಣಸೂರಿನತ್ತ ಹೊರಟಿತ್ತು. ಇತ್ತ ಕೆಎಸ್‍ಆರ್ ಟಿಸಿ ಬಸ್ ಮೈಸೂರಿನ ಕಡೆಗೆ ಬರುತ್ತಿತ್ತು.

    ಈ ವೇಳೆ ಬಿಳಿಕೆರೆ ಪೊಲೀಸ್ ಠಾಣೆ ಬಳಿ ಕೆಎಸ್‍ಆರ್ ಟಿಸಿ ಬಸ್ ಹಾಗೂ ಟಿಪ್ಪರ್ ಲಾರಿ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಿಂದ ಬಸ್ಸಿನಲ್ಲಿದ್ದ 8 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅವರಲ್ಲಿ ಇಬ್ಬರಿಗೆ ಗಂಭೀರವಾಗಿ ಗಾಯವಾಗಿದೆ. ಗಾಯಾಳುಗಳನ್ನು ಮೈಸೂರು ಕೆ.ಆರ್.ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಅಪಘಾತದ ರಭಸಕ್ಕೆ ಟಿಪ್ಪರ್ ಲಾರಿ ಪಲ್ಟಿಯಾಗಿದ್ದು, ಇತ್ತ ಕೆಎಸ್‍ಆರ್ ಟಿಸಿ ಬಸ್ ಸಮೀಪದ ಗದ್ದೆಯೊಳಗೆ ನುಗ್ಗಿದೆ. ಅಪಘಾತದ ಮಾಹಿತಿ ತಿಳಿದು ಬಿಳಿಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 10ಕ್ಕೂ ಹೆಚ್ಚು ಮಕ್ಕಳ ಮೇಲೆ ಬೀದಿ ನಾಯಿಗಳಿಂದ ದಾಳಿ!

    10ಕ್ಕೂ ಹೆಚ್ಚು ಮಕ್ಕಳ ಮೇಲೆ ಬೀದಿ ನಾಯಿಗಳಿಂದ ದಾಳಿ!

    ಕಲಬುರಗಿ: ರಸ್ತೆಯ ಬದಿಯಲ್ಲಿ ಆಟವಾಡುತ್ತಿದ್ದ 10 ಕ್ಕೂ ಹೆಚ್ಚು ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿರುವ ಘಟನೆ ಕಲಬುರಗಿ ಹೊರವಲಯದ ಹಾಗರಗಾ ಕ್ರಾಸ್‍ನ ಅಮನ್ ನಗರದಲ್ಲಿ ನಡೆದಿದೆ.

    ಮೈಬೂಬ್(6), ಅಫ್ಪಯಾ(7), ಮಹ್ಮದ್ ಸೋಯಬ್(11), ಫರಾನ್(3), ಮಹ್ಮದಿ(5) ಸೇರಿ ಹತ್ತಕ್ಕೂ ಅಧಿಕ ಮಕ್ಕಳಿಗೆ ಬೀದಿ ನಾಯಿಗಳ ದಾಳಿಯಿಂದ ಗಾಯಗಳಾಗಿದ್ದು, ಅವರನ್ನು ಕಲಬುರಗಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಹಲವು ಬಾರಿ ಮನವಿ ಕೊಟ್ಟರೂ ಬೀದಿನಾಯಿ ಹಾವಳಿ ತಪ್ಪಿಸುವಲ್ಲಿ ಮಹಾನಗರ ಪಾಲಿಕೆ ವಿಫಲವಾಗಿದೆ ಎಂದು ಪೋಷಕರು ಆರೋಪಿದ್ದಾರೆ. ಅಷ್ಟೇ ಅಲ್ಲದೇ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ರೋಜಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಇದೇ ರೀತಿ ಸಿಲಿಕಾನ್ ಸಿಟಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು ಈ ಹಿಂದೆ ಶೌಚಾಲಯಕ್ಕೆ ಹೋಗಿದ್ದ ಬಾಲಕನ ಮೇಲೆ 10 ಕ್ಕೂ ಹೆಚ್ಚು ನಾಯಿಗಳು ದಾಳಿ ಮಾಡಿ ಗಾಯಗೊಳಿಸಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಂಬಿನೋತ್ಸವಕ್ಕೆ ತೆರಳ್ತಿದ್ದ ಎತ್ತಿನಗಾಡಿಗೆ ಬಸ್ ಡಿಕ್ಕಿ – ಇಬ್ಬರ ದುರ್ಮರಣ

    ಅಂಬಿನೋತ್ಸವಕ್ಕೆ ತೆರಳ್ತಿದ್ದ ಎತ್ತಿನಗಾಡಿಗೆ ಬಸ್ ಡಿಕ್ಕಿ – ಇಬ್ಬರ ದುರ್ಮರಣ

    ಚಿತ್ರದುರ್ಗ: ಎತ್ತಿನಗಾಡಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಬಳಿ ನಡೆದಿದೆ.

    ಮಲ್ಕಾಪುರ ಗ್ರಾಮದ ಪಾಲಯ್ಯ (28) ಮತ್ತು ವಿಜಿಯಪ್ಪ (30) ಮೃತ ದುರ್ದೈವಿಗಳು ಗುರುತಿಸಲಾಗಿದೆ. ಈ ಅಪಘಾತದಲ್ಲಿ ಏಳು ಮಂದಿಗೆ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಎತ್ತಿನಗಾಡಿಯಲ್ಲಿ ಮಲ್ಕಾಪುರದಿಂದ ಚಿತ್ರಹಳ್ಳಿಯ ಚಿತ್ರಲಿಂಗೇಶ್ವರ ಅಂಬಿನೋತ್ಸವಕ್ಕೆ ಹೋಗುತ್ತಿದ್ದರು. ಈ ವೇಳೆ ಮಧ್ಯರಾತ್ರಿ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಬಳಿ ವೇಗವಾಗಿ ಬಂದ ಖಾಸಗಿ ಬಸ್ ಎತ್ತಿನಗಾಡಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಪಾಲಯ್ಯ ಮತ್ತು ವಿಜಿಯಪ್ಪ ಮೃತಪಟ್ಟಿದ್ದಾರೆ.

    ಅಪಘಾತದಲ್ಲಿ ಗಾಯಗೊಂಡವರನ್ನು ಹೊಳಲ್ಕೆರೆ ಮತ್ತು ದಾವಣಗೆರೆ ಆಸ್ಪತ್ರೆಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಪಲ್ಟಿಯಾಗಿದೆ. ಈ ಸಂಬಂಧ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಡಿಕೇರಿಯಲ್ಲಿ ಗುಂಡಿನ ಸದ್ದು – ಬಾಕಿ ಹಣ ಕೊಡುವಂತೆ ಕೇಳಿದ್ದೇ ತಪ್ಪಾಯ್ತು

    ಮಡಿಕೇರಿಯಲ್ಲಿ ಗುಂಡಿನ ಸದ್ದು – ಬಾಕಿ ಹಣ ಕೊಡುವಂತೆ ಕೇಳಿದ್ದೇ ತಪ್ಪಾಯ್ತು

    ಮಡಿಕೇರಿ: ಹಣ ಕೇಳಿದ್ದಕ್ಕೆ ಕ್ಯಾಂಟೀನ್ ಯುವಕರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ನಗರದಲ್ಲಿ ರಾತ್ರಿ ನಡೆದಿದೆ.

    ನಗರದ ಮಾರ್ಕೆಟ್ ಹಿಂಭಾಗ ಕ್ಯಾಂಟೀನ್ ನಲ್ಲಿ ಈ ದುರ್ಘಟನೆ ನಡೆದಿದೆ. ಕ್ಯಾಂಟೀನ್ ನಡೆಸುತ್ತಿದ್ದ ರಿಯಾಝ್ ಮತ್ತು ಸಮೀಮ್ ಮೇಲೆ ಗುಂಡಿನ ದಾಳಿ ನಡೆದಿದ್ದು, ರಿಯಾಝ್ ತೊಡೆ ಭಾಗಕ್ಕೆ ಹಾಗೂ ಸಮೀಮ್ ಕಾಲಿಗೆ ಗಾಯಗಳಾಗಿದ್ದು, ಇಬ್ಬರು ಗಾಯಾಳುಗಳನ್ನ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಕ್ಯಾಂಟೀನ್ ನಲ್ಲಿ ಯುವಕರು ಎಗ್‍ರೋಲ್ ಪಡೆದು ಹಣ ಕೊಡದೆ ತೆರಳುತ್ತಿದ್ದರು. ಈ ವೇಳೆ ರಿಯಾಝ್ ಮತ್ತು ಸಮೀಮ್ ಹಣ ಕೇಳಿದ್ದಾರೆ. ಬಳಿಕ ಮತ್ತೆ ಗೋಬಿ ನೀಡುವಂತೆ ಕೇಳಿದಾಗ ಯುವಕರು ಮೊದಲು ಹಣ ನೀಡುವಂತೆ ಕೇಳಿದ್ದಾರೆ. ಈ ವೇಳೆ ಗೋಬಿ ತರಲು ಕಳುಹಿಸಿದ್ದ ವ್ಯಕ್ತಿಗಳು ಹಣ ಕೇಳಿದ್ದನ್ನ ಕಂಡು ಕಾವೇರಿ ಬಾರ್ ಮೇಲ್ಭಾಗದ ಕಿಟಕಿಯಿಂದ ಮೂರು ಬಾರಿ ಗುಂಡು ಹಾರಿಸಿದ್ದಾರೆ.

    ಲೋಕೇಶ್ ಮತ್ತು ಅಕ್ರಂ ಎಂಬವರು ಗುಂಡಿನ ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರು ಭೇಟಿ ನೀಡಿ ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಘಟನಾ ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾವನ್ನೂ ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv