Tag: injury

  • ಎರಡು ಪ್ರತ್ಯೇಕ ಅಪಘಾತದಲ್ಲಿ ಯುವಕರಿಬ್ಬರ ದುರ್ಮರಣ

    ಎರಡು ಪ್ರತ್ಯೇಕ ಅಪಘಾತದಲ್ಲಿ ಯುವಕರಿಬ್ಬರ ದುರ್ಮರಣ

    ರಾಮನಗರ: ಎರಡು ಪ್ರತ್ಯೇಕ ಅಪಘಾತದಲ್ಲಿ ಯುವಕರಿಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ನಡೆದಿದೆ.

    ಗುರುರಾಜ್ (21) ಮತ್ತು ಕಿರಣ್ (25) ಮೃತ ದುರ್ದೈವಿಗಳು. ಕೋಡಿಹಳ್ಳಿಯಿಂದ ಗುರುರಾಜ್ ಬೈಂಡಿಂಗ್ ಕೆಲಸಕ್ಕೆ ಬೈಕಿನಲ್ಲಿ ತೆರಳುತ್ತಿದ್ದನು. ಈ ವೇಳೆ ಕನಕಪುರ ಟೌನ್ ಹಾಗೂ ಕನಕಪುರ ತಾಲೂಕಿನ ಟಿ.ಬೇಕುಪ್ಪೆ ಸರ್ಕಲ್ ಬಳಿ ವೇಗವಾಗಿ ಬಂದ ಟ್ರಾಕ್ಟರ್ ಬೈಕಿಗೆ ಹಿಂಬದಿಯಿಂದ ಗುದ್ದಿದೆ. ಪರಿಣಾಮ ಬೈಕಿನಲ್ಲಿ ಗುರುರಾಜ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

    ಹಿಂಬದಿ ಸವಾರ ಸುರೇಶ್ ಗಾಯಗೊಂಡಿದ್ದು, ಆತನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸಂಬಂಧ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಇತ್ತ ಕನಕಪುರ ಟೌನ್‍ನ ಮೆಳೆಕೋಟೆ ಸಮೀಪದಲ್ಲಿ ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಪರಿಣಾಮ ದೊಡ್ಡ ಆಲಹಳ್ಳಿಯ ನಿವಾಸಿ ಕಿರಣ್ ಮೃತಪಟ್ಟಿದ್ದಾನೆ. ಇಲ್ಲೂ ಕೂಡ ಹಿಂಬದಿ ಸವಾರ ಗೋವಿಂದರಾಜ್ ಗಾಯಗೊಂಡಿದ್ದು, ಆತನನ್ನು ಕನಕಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಕನಕಪುರ ಸಂಚಾರಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏಕಾಏಕಿ ಅಡ್ಡ ಬಂದ ದನ – ತೋಡಿಗೆ ಬಿದ್ದ ಕಾರ್

    ಏಕಾಏಕಿ ಅಡ್ಡ ಬಂದ ದನ – ತೋಡಿಗೆ ಬಿದ್ದ ಕಾರ್

    ಮಡಿಕೇರಿ: ರಸ್ತೆಗೆ ಅಡ್ಡಬಂದ ದನದಿಂದ ಪಾರಾಗಲು ಯತ್ನಿಸಿ ವಿಫಲವಾದ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ತೋಡಿಗೆ ಬಿದ್ದಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಾದಾಪುರ ಸಮೀಪದ ಮೂವತ್ತೊಕ್ಲುವಿನಲ್ಲಿ ನಡೆದಿದೆ.

    ಗ್ರಾಮದ ನಿವಾಸಿಗಳಾದ ರಚನ್ ಹಾಗೂ ರಾಬಿನ್ ಎಂಬವರ ಕಾರಾಗಿದ್ದು, ಶನಿವಾರ ತಮ್ಮ ಮಾರುತಿ ಆಲ್ಟೋ ಕಾರಿನಲ್ಲಿ ಕುಶಾಲನಗರದಿಂದ ಸುಂಟಿಕೊಪ್ಪ ಕಡೆಗೆ ಹೋಗುತ್ತಿದ್ದರು. ಆಗ 7ನೇ ಹೊಸಕೋಟೆಯ ಕೆಳಭಾಗದಲ್ಲಿರುವ ಮಾರುತಿ ನಗರದ ಮುಖ್ಯರಸ್ತೆ ಬದಿಯಲ್ಲಿ ಇದ್ದಕ್ಕಿದ್ದಂತೆ ದನವೊಂದು ಅಡ್ಡಬಂದಿದೆ.

    ದನಕ್ಕೆ ಅಪ್ಪಳಿಸುವುದನ್ನು ತಪ್ಪಿಸಲು ಯತ್ನಿಸಿದಾಗ ಚಾಲಕ ರಚನ್ ಗೆ ಕಾರ್ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ತೋಡಿಗೆ ಬಿದ್ದಿದೆ. ಅದೃಷ್ಟವಶಾತ್ ಚಾಲಕ ರಚನ್ ಹಾಗೂ ಅವರೊಂದಿಗೆ ಕಾರಿನಲ್ಲಿದ್ದ ರಾಬಿನ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಈ ಅಪಘಾತದಿಂದ ಗಾಯಗೊಂಡ ಅವರಿಗೆ ಕೂಡಲೇ 7ನೇ ಹೊಸಕೋಟೆಯ ಆರೋಗ್ಯ ಉಪಕೇಂದ್ರದಲ್ಲಿ ತುರ್ತು ಚಿಕಿತ್ಸೆ ಕೊಡಿಸಲಾಗಿದೆ. ಇನ್ನೂ ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಿವೈಡರ್‌ಗೆ  ಹೊಡೆದು ಇನ್ನೊಂದು ಕಾರಿನ ಮೇಲೆ ಎಗರಿತು – 6 ಮಂದಿ ದುರ್ಮರಣ

    ಡಿವೈಡರ್‌ಗೆ ಹೊಡೆದು ಇನ್ನೊಂದು ಕಾರಿನ ಮೇಲೆ ಎಗರಿತು – 6 ಮಂದಿ ದುರ್ಮರಣ

    ಗದಗ: ಡಿವೈಡರ್‌ಗೆ ಡಿಕ್ಕಿ ಹೊಡೆದು ಎಗರಿ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ 6 ಮಂದಿ ಮೃತಪಟ್ಟಿರುವ ಘಟನೆ ಗದಗದ ಮುಂಡರಗಿ ರಸ್ತೆಯ ರಿಂಗ್‍ರೋಡ್ ಬಳಿ ನಡೆದಿದೆ.

    ಧಾರವಾರ ಜಿಲ್ಲೆಯ ಆನಂದ ಬೆಟಗೇರಿ, ಸಿದ್ದುಕೋರಿ ಶೆಟ್ಟಿ, ಮನೋಜ್‍ಕುಮಾರ್, ಕರಡಿಗುಡ್ಡ ಮತ್ತು ಅಮೃತ ಮೃತ ದುರ್ದೈವಿಗಳು. ಐ10 ಮತ್ತು ಐ20 ಎರಡು ಕಾರುಗಳ ಮಧ್ಯೆ ಈ ಭೀಕರ ಅಫಘಾತ ಸಂಭವಿಸಿದೆ.

    ಒಂದು ಕಾರು ಗದಗ್ ನಿಂದ ಮುಂಡರಗಿಗೆ ಹೋಗುತ್ತಿತ್ತು. ಇನ್ನೊಂದು ಕಾರು ಮುಂಡರಗಿನಿಂದ ಗದಗಕ್ಕೆ ಬರುತ್ತಿತ್ತು. ಎರಡು ಕಾರುಗಳು ವೇಗವಾಗಿ ಬರುತ್ತಿದ್ದವು. ಈ ವೇಳೆ ಮುಂಡರಗಿ ರಸ್ತೆಯ ರಿಂಗ್‍ರೋಡ್ ಬಳಿ ಐ10 ಕಾರ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಎಗರಿ, ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಐ20 ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಹೊಡೆದ ರಭಸಕ್ಕೆ ಐ20 ಕಾರ್ ಅಪ್ಪಚ್ಚಿಯಾಗಿದ್ದು, ಆ ಕಾರಿನಲ್ಲಿದ್ದ ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಇತ್ತ ಡಿವೈಡರ್‌ ನಿಂದ ಎಗರಿ ಡಿಕ್ಕಿ ಹೊಡೆದ ಕಾರಲ್ಲಿದ್ದವರು ಬಚಾವ್ ಆಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪ್ಪಚ್ಚಿಯಾದ ಕಾರಿನಲ್ಲಿದ್ದ ಮೃತದೇಹಗಳನ್ನು ಹೊರ ತೆಗೆಯಲು ಹರಸಾಹಸ ಪಟ್ಟಿದ್ದಾರೆ.

    ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗ್ಳೂರಿನಿಂದ ಹೊರಟ 34 ಪ್ರಯಾಣಿಕರಿದ್ದ ವೋಲ್ವೋ ಬಸ್ ಪಲ್ಟಿ

    ಬೆಂಗ್ಳೂರಿನಿಂದ ಹೊರಟ 34 ಪ್ರಯಾಣಿಕರಿದ್ದ ವೋಲ್ವೋ ಬಸ್ ಪಲ್ಟಿ

    ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ ದಾಸ್ತಿಕೊಪ್ಪ ಬಳಿ ನಡೆದಿದೆ.

    ದಾಸ್ತಿಕೊಪ್ಪ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಅವಘಡ ಸಂಭವಿಸಿದೆ. ಈ ಖಾಸಗಿ ವೋಲ್ವೋ ಬಸ್ ಬೆಂಗಳೂರಿನಿಂದ ರಾಜಸ್ಥಾನಕ್ಕೆ ಹೊರಟಿತ್ತು. ಕಿತ್ತೂರು ತಾಲೂಕಿನ ದಾಸ್ತಿಕೊಪ್ಪ ಬಳಿ ತಿರುವಿನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

    ಪರಿಣಾಮ ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಮಂದಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅಂಬ್ಯುಲೆನ್ಸ್ ಗೆ ಕರೆ ಮಾಡಲಾಗಿದೆ. ಕೂಡಲೇ ಸ್ಥಳಕ್ಕೆ 5ಕ್ಕೂ ಹೆಚ್ಚು ಅಂಬ್ಯುಲೆನ್ಸ್ ಗಳ ಬಂದಿದ್ದು, ಅವುಗಳ ಮೂಲಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಬಸ್ಸಿನಲ್ಲಿ ಒಟ್ಟು 34 ಮಂದಿ ಪ್ರಯಾಣಿಸುತ್ತಿದ್ದರು. ಸದ್ಯಕ್ಕೆ ಪ್ರಯಾಣಿಕರೆಲ್ಲರೂ ಪ್ರಾಣಾಯದಿಂದ ಪಾರಾಗಿದ್ದಾರೆ.

    ಈ ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಎಂ.ಕೆ.ಹುಬ್ಬಳ್ಳಿ ಉಪಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರವಾಸಕ್ಕೆ ತೆರಳಿದ್ದ ಬಸ್ ಅಪಘಾತ – ಶಿಕ್ಷಕರು ಸೇರಿ 16 ವಿದ್ಯಾರ್ಥಿಗಳ ದುರ್ಮರಣ

    ಪ್ರವಾಸಕ್ಕೆ ತೆರಳಿದ್ದ ಬಸ್ ಅಪಘಾತ – ಶಿಕ್ಷಕರು ಸೇರಿ 16 ವಿದ್ಯಾರ್ಥಿಗಳ ದುರ್ಮರಣ

    ಕಠ್ಮಂಡು: ಕಂದಕಕ್ಕೆ ಬಸ್ ಉರುಳಿ ಬಿದ್ದ ಪರಿಣಾಮ ಶಿಕ್ಷಕರು ಸೇರಿದಂತೆ 16 ವಿದ್ಯಾರ್ಥಿಗಳು ಮೃತಪಟ್ಟಿದ್ದು, 11 ಜನರಿಗೆ ಗಾಯವಾಗಿರುವ ಘಟನೆ ನೇಪಾಳದ ದಾಂಗ್ ಜಿಲ್ಲೆಯ ತುಲ್ಸಿಪುರದ ರಾಮ್ರಿಯಲ್ಲಿ ನಡೆದಿದೆ.

    ಬಸ್ ಕಪೂರ್ಕೋಟ್ ನಿಂದ ತುಲ್ಸಿಪುರ್ ಕಡೆಗೆ ಹೋಗುತ್ತಿತ್ತು. ಈ ವೇಳೆ ತುಲ್ಸಿಪುರ-ಕಪೂರ್ಕೋಟ್ ರಸ್ತೆಯಿಂದ ಸುಮಾರು 400 ಮೀಟರ್ ಗಳಷ್ಟು  ಆಳದ ಕಂದಕಕ್ಕೆ ಬಸ್ ಉರುಳಿದೆ. ಪರಿಣಾಮ ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ 16 ಮಂದಿ ಮೃತಪಟ್ಟಿದ್ದಾರೆ ಜಿಲ್ಲಾ ಪೊಲೀಸ್ ಅಧೀಕ್ಷಕ ತುಳಸಿಪುರ ಪ್ರೇಮ್ ಬಹದ್ದೂರ್ ಶಾಹಿ ತಿಳಿಸಿದ್ದಾರೆ.

    ಈ ಅಪಘಾತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಬಂದು ಗಾಯಾಳುಗಳನ್ನು ರಕ್ಷಿಸಿದ್ದು, ಅವರನ್ನು ರಾಪ್ತಿ ಝೋನಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಿದ್ದಾರೆ. ಈ ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ನೇಪಾಳಗುಂಜ್‍ದವರು ಎಂದು ಗುರುತಿಸಲಾಗಿದೆ.

    ಘೋರಾಹಿಯಲ್ಲಿನ ಕೃಷ್ಣಾಸೆನ್ ಟೆಕ್ನಿಕಲ್ ಸ್ಕೂಲ್ ನಿಂದ 31 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರವಾಸಕ್ಕೆ ತೆರಳಿದ್ದರು. ಒಂದು ದಿನದ ಪ್ರವಾಸಕ್ಕಾಗಿ ಅವರೆಲ್ಲರೂ ಬಂದಿದ್ದು, ಸಲ್ಯಾನ್ ಕಪೂರ್ಕೋಟ್ ನ ಮುಲ್ಪಾಣಿಯ ಬೋಟಾನಿಕಲ್ ಗಾರ್ಡನ್ ಪ್ರವಾಸದಿಂದ ಹಿಂದಿರುಗುತ್ತಿದ್ದರು ಎಂದು ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯೂಟರ್ನ್ ವೇಳೆ ಹಿಟ್ ಆ್ಯಂಡ್ ರನ್ – ಬೈಕಿಗೆ ಡಿಕ್ಕಿ ಹೊಡೆದು ಕಾರ್ ಎಸ್ಕೇಪ್..!

    ಯೂಟರ್ನ್ ವೇಳೆ ಹಿಟ್ ಆ್ಯಂಡ್ ರನ್ – ಬೈಕಿಗೆ ಡಿಕ್ಕಿ ಹೊಡೆದು ಕಾರ್ ಎಸ್ಕೇಪ್..!

    ಬೆಂಗಳೂರು: ನಗರದಲ್ಲಿ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ ನಡೆದಿದ್ದು, ಕುಮಾರಸ್ವಾಮಿ ಲೇಔಟ್‍ನ ಸಾರಕ್ಕಿ ಸಿಗ್ನಲ್‍ನಲ್ಲಿ ರಾತ್ರಿ ವೇಳೆ ನಡೆದಿದೆ.

    ಡಿಸೆಂಬರ್ 16ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಿನಾಂಕ 16 ರಾತ್ರಿ ಸುಮಾರು 11 ಗಂಟೆಗೆ ಮಲ್ಲೇಶ್ ಎಂಬವರು ಕೆಲಸ ಮುಗಿಸಿ ಬೈಕಿನಲ್ಲಿ ಮನೆ ಕಡೆ ಹೊರಟಿದ್ದರು. ಸಾರಕ್ಕಿ ಸಿಗ್ನಲ್‍ನ ಮಾರ್ಕೆಟ್ ಬಳಿ ಯೂ ಟರ್ನ್ ತೆಗೆದುಕೊಳ್ಳೋಕೆ ಮುಂದಾಗಿದ್ದರು. ಈ ವೇಳೆ ಅತಿವೇಗವಾಗಿ ಬಂದ ಕಾರೊಂದು ಮಲ್ಲೇಶ್ ಬೈಕಿಗೆ ಡಿಕ್ಕಿ ಹೊಡೆದಿದೆ.

    ಕಾರಿನ ಡಿಕ್ಕಿಯ ರಭಸಕ್ಕೆ ಮಲ್ಲೇಶ್ ಹೋಗುತ್ತಿದ್ದ ಬೈಕ್ ಸುಮಾರು 20 ಅಡಿಗೂ ದೂರಕ್ಕೆ ಬಿದ್ದಿತ್ತು. ಈ ಭಯಾನಕ ಅಪಘಾತ ನೋಡಿದ ಅಕ್ಕಪಕ್ಕದಲ್ಲಿದ್ದ ಜನರಿಗೆ ಏನಾಯ್ತು, ಅಂತ ಗೊತ್ತಾಗೋ ಮುನ್ನವೇ ಕಾರು ಅದೇ ವೇಗದಲ್ಲಿ ಎಸ್ಕೇಪ್ ಆಗಿದೆ.

    ಹೆಲ್ಮೆಟ್ ಹಾಕದೇ ರೈಡ್ ಮಾಡುತ್ತಿದ್ದ ನಮ್ಮ ತಂದೆಯ ತಲೆ ಮತ್ತು ಕಾಲಿನ ಭಾಗಕ್ಕೆ ಗಂಭೀರವಾಗಿ ಗಾಯವಾಗಿದ್ದು, ತಕ್ಷಣ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಅವರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ಮಲ್ಲೇಶ್ ಮಗ ಮಂಜುನಾಥ್ ಹೇಳಿದ್ದಾರೆ.

    ಸದ್ಯಕ್ಕೆ ಈ ಪ್ರಕರಣ ದಾಖಲಿಸಿಕೊಂಡಿರುವ ಕುಮಾರಸ್ವಾಮಿ ಲೇಔಟ್ ಪೊಲೀಸರು, ಡಿಕ್ಕಿ ಹೊಡೆದು ಎಸ್ಕೇಪ್ ಆದ ಕಾರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೂಲಿ ಅರಸಿ ಬಂದ ಮಹಿಳೆಯನ್ನ ಬಲಿ ಪಡೆದ ನ್ಯಾಯಾಲಯ ಕಟ್ಟಡ!

    ಕೂಲಿ ಅರಸಿ ಬಂದ ಮಹಿಳೆಯನ್ನ ಬಲಿ ಪಡೆದ ನ್ಯಾಯಾಲಯ ಕಟ್ಟಡ!

    ಚಿಕ್ಕಬಳ್ಳಾಪುರ: ನಿರ್ಮಾಣ ಹಂತದ ನ್ಯಾಯಾಲಯ ಕಟ್ಟಡದ ಕಿಟಕಿಯ ಸಜ್ಜಾ ಕುಸಿದ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

    ಆಂಧ್ರ ಮೂಲದ ರಾಜೇಶ್ವರಿ (35) ಮೃತ ಕೂಲಿ ಕಾರ್ಮಿಕ ಮಹಿಳೆ. ಚಿಕ್ಕಬಳ್ಳಾಪುರ ನಗರದ ಜಿಲ್ಲಾ ಸತ್ರ ನ್ಯಾಯಾಲಯದ ಕೂಗಳತೆ ದೂರದಲ್ಲೇ ಮತ್ತೊಂದು ನೂತನ ನ್ಯಾಯಾಲಯ ಸಂಕೀರ್ಣದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಆದರೆ ಇಂದು ಈ ನೂತನ ಕಟ್ಟಡದ ಬೃಹತ್ ಗಾತ್ರದ ಕಿಟಕಿಯ ಸಿಮೆಂಟ್ ಸಜ್ಜಾ ಕುಸಿದಿದ್ದು, ಪರಿಣಾಮ ಅಲ್ಲೇ ಕೆಲಸ ಮಾಡುತ್ತಿದ್ದ ರಾಜೇಶ್ವರಿ ಮೃತಪಟ್ಟಿದ್ದಾರೆ.

    ಈ ಘಟನೆಯಲ್ಲಿ ಉಮಾದೇವಿ ಎಂಬ ಯುವತಿ ಸಹ ಗಾಯಗೊಂಡಿದ್ದು, ಕಾರ್ಮಿಕರಾದ ಈರೇಶ್, ಉಲ್ಲೇಶ ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಮೂವರು ಗಾಯಾಳುಗಳನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಗೆ ಗುತ್ತಿಗೆದಾರ ಹಾಗೂ ಎಂಜಿನಿಯರ್ ಗಳ ನಿರ್ಲಕ್ಷ್ಯವೇ ಕಾರಣ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

    ಅವೈಜ್ಞಾನಿಕವಾಗಿ ಬೃಹತ್ ಗಾತ್ರದ ಕಿಟಕಿಗಳಿಗೆ ಸಜ್ಜಾ ನಿರ್ಮಾಣ ಮಾಡಲು ಮುಂದಾಗಿರುವುದು ಅವಘಡಕ್ಕೆ ಕಾರಣ ಅಂತ ಅಂದಾಜಿಸಲಾಗುತ್ತಿದೆ. ಈ ಘಟನೆ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಫೈಟ್ ಶೂಟಿಂಗ್ ವೇಳೆ ಗಾಯಗೊಂಡ ವಿಜಯ್ ದೇವರಕೊಂಡ

    ಫೈಟ್ ಶೂಟಿಂಗ್ ವೇಳೆ ಗಾಯಗೊಂಡ ವಿಜಯ್ ದೇವರಕೊಂಡ

    ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ಫೈಟಿಂಗ್ ದೃಶ್ಯ ಚಿತ್ರೀಕರಿಸುವ ವೇಳೆ ಗಾಯಗೊಂಡಿದ್ದಾರೆ.

    ವಿಜಯ್ ಆಂಧ್ರದ ಕಾಕಿನಾಡಿನಲ್ಲಿ ‘ಡಿಯರ್ ಕಾಮ್ರೆಡ್’ ಚಿತ್ರದ ಶೂಟಿಂಗ್‍ನಲ್ಲಿ ತೊಡಗಿಕೊಂಡಿದ್ದರು. ಮೂರು ವಾರಗಳ ಕಾಲ ಈ ಚಿತ್ರದ ಚಿತ್ರೀಕರಣವನ್ನು ನಡೆಸುತ್ತಿದ್ದಾರೆ. ಆದರೆ ಈಗ ವಿಜಯ್ ಸಾಹಸ ದೃಶ್ಯ ಚಿತ್ರೀಕರಿಸುವಾಗ ಗಾಯಗೊಂಡಿದ್ದು, ವೈದ್ಯರು ಒಂದು ದಿನ ವಿಶ್ರಾಂತಿ ಪಡೆಯಲು ತಿಳಿಸಿದ್ದಾರೆ.

    ವಿಜಯ್ ಅವರು ಸ್ವತಃ ತಮಗೆ ಗಾಯಗೊಂಡಿರುವ ವಿಷಯವನ್ನು ಇನ್‍ಸ್ಟಾಗ್ರಾಂನಲ್ಲಿ ಫೋಟೋ ಹಾಕುವ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ವಿಜಯ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ “ನಿಮ್ಮ ಗಾಯಗಳನ್ನು ನೀವೇ ಆಚರಿಸಿಕೊಳ್ಳಿ. ಏಕೆಂದರೆ ಜೀವನದಲ್ಲಿ ಯಾವುದು ಸುಲಭವಾಗಿ ಸಿಗುವುದಿಲ್ಲ” ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ರಶ್ಮಿಕಾಗೆ ಚೈಲ್ಡ್ ನಟಿ ಎಂದ ವಿಜಯ್ ದೇವರಕೊಂಡ

     

    View this post on Instagram

     

    Celebrate your Bruises! Because In life nothing comes easy.

    A post shared by Vijay Deverakonda (@thedeverakonda) on

    ಡಿಯರ್ ಕಾಮ್ರೆಡ್ ಚಿತ್ರವನ್ನು ಭರತ್ ಕಮ್ಮ ನಿರ್ದೇಶನ ಮಾಡುತ್ತಿದ್ದು, ಯಶ್ ರಂಗಿನೇನಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಿಜಯ್‍ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಈ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದೆ.

    ಗೀತಾ ಗೋವಿಂದಂ ಚಿತ್ರದ ಯಶಸ್ಸಿನ ನಂತರ ವಿಜಯ್ ಹಾಗೂ ರಶ್ಮಿಕಾ ಡಿಯರ್ ಕಾಮ್ರೆಡ್ ಚಿತ್ರದಲ್ಲಿ ಮತ್ತೆ ಒಟ್ಟಿಗೆ ನಟಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಂಬರ್ ಬಿದ್ದು ಎರಡನೇ ತರಗತಿಯ ಬಾಲಕರಿಗೆ ಗಾಯ!

    ಸಾಂಬರ್ ಬಿದ್ದು ಎರಡನೇ ತರಗತಿಯ ಬಾಲಕರಿಗೆ ಗಾಯ!

    ಬಳ್ಳಾರಿ: ಎರಡನೇ ತರಗತಿ ಓದುತ್ತಿದ್ದ ಇಬ್ಬರು ಶಾಲಾ ಮಕ್ಕಳ ಮೇಲೆ ಬಿಸಿಯೂಟದ ಬಿಸಿ ಸಾಂಬರ್ ಬಿದ್ದು ಗಾಯಗೊಂಡ ಘಟನೆ ಜರುಗಿದೆ.

    ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮಾನ್ಯರ ಮಸಲವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ಸಂಭವಿಸಿದೆ. ವೀರೇಶ್ ಮತ್ತು ಪೃಥ್ವಿರಾಜ್ ಗಾಯಗೊಂಡಿದ್ದಾರೆ. ವೀರೇಶ್ ಸ್ಥಿತಿ ಗಂಭೀರವಾಗಿದ್ದು ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಘಟನೆಗೆ ಶಾಲೆಯ ಶಿಕ್ಷಕರ ಮತ್ತು ಅಡುಗೆ ತಯಾರಕರ ನಿರ್ಲಕ್ಷ್ಯ ಕಾರಣ ಎಂದು ತಿಳಿದು ಬಂದಿದೆ. ಅಡುಗೆ ಸಹಾಯಕಿ ಅನ್ನಪೂರ್ಣ ಎನ್ನುವ ಮಹಿಳೆ ತನ್ನ ಕೆಲಸವನ್ನು ತಾನು ಮಾಡದೇ ತನ್ನ ವಯಸ್ಸಾದ ತಾಯಿಯನ್ನು ಕಳುಹಿಸಿದ್ದಾರೆ. ಹಾಗಾಗಿ ವಯಸ್ಸಾದ ಅಜ್ಜಿ ಬಿಸಿ ಸಾಂಬರನ್ನು ತೆಗೆದುಕೊಂಡು ಹೋಗುವಾಗ ಸಾಂಬರ್ ಕೈ ಜಾರಿ ಬಿದ್ದ ಹಿನ್ನೆಲೆಯಲ್ಲಿ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಇಷ್ಟಾದರೂ ಆಸ್ಪತ್ರೆಗೆ ಇಲಾಖೆಯ ಯಾವ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಸಮಸ್ಯೆ ಸರಿಪಡಿಸಲು ಮುಂದಾಗಿಲ್ಲ. ಈ ಸಂಬಂಧ ಗ್ರಾಮಸ್ಥರು ಮತ್ತು ಪೋಷಕರು ಸರ್ಕಾರಿ ಶಾಲೆಯ ಮುಂದೆ ಪ್ರತಿಭಟನೆಗೆ ಮುಂದಾಗಲಿದ್ದಾರೆ. ಕಳೆದೆರಡು ದಿನಗಳ ಹಿಂದೆ ಜರುಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಫುಟ್‍ಪಾತ್ ನಲ್ಲಿ ಮಲಗಿದ್ದ 15 ಮಂದಿ ಮೇಲೆ ಹರಿದ ಲಾರಿ!

    ಫುಟ್‍ಪಾತ್ ನಲ್ಲಿ ಮಲಗಿದ್ದ 15 ಮಂದಿ ಮೇಲೆ ಹರಿದ ಲಾರಿ!

    ಬೆಂಗಳೂರು: ರಸ್ತೆ ಬದಿಯ ಫುಟ್ ಪಾತ್ ಮೇಲೆ ಮಲಗಿದ್ದವರ ಮೇಲೆ ಕಂಟೇನರ್ ಲಾರಿ ಹರಿದು, 14 ವರ್ಷದ ಬಾಲಕ ಸ್ಥಳದಲ್ಲೇ ಸಾವನಪ್ಪಿರುವ ಧಾರುಣ ಘಟನೆ ನೆ ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಸಂಭವಿಸಿದೆ.

    ರಾಷ್ಟ್ರೀಯ ಹೆದ್ದಾರಿ 4ರ ತುಮಕೂರು ಬೆಂಗಳೂರು ರಸ್ತೆಯ ಜಾಸ್ ಟೋಲ್ ಬಳಿ ಈ ಅಪಘಾತ ಸಂಭವಿಸಿದ್ದು, 14 ವರ್ಷದ ಯುವಕ ಬಾಲಕ ಜೋತು ಚೌಹಾನ್ ಮೃತ ದುರ್ದೈವಿ. ಈ ಅಪಘಾತದಲ್ಲಿ ಮತ್ತೊಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಇನ್ನುಳಿದ 13 ಮಂದಿ ಪವಾಡ ರೀತಿಯಲ್ಲಿ ಅದೃಷ್ಟವಶಾತ್ ಪಾರಾಗಿದ್ದಾರೆ.

    ಮಹಾರಾಷ್ಟ್ರ ಮೂಲದ ಒಂದೇ ಕುಟುಂಬದ 15 ಮಂದಿ ರಸ್ತೆ ಬದಿಯ ಫುಟ್ ಫಾತ್ ಬಳಿ ರಾತ್ರಿ ಮಲಗಿದ್ದರು. ಈ ವೇಳೆ ಕಂಟೇನರ್ ಲಾರಿ ವೇಗವಾಗಿ ಬಂದು ಮಲಗಿದ್ದವರ ಮೇಲೆ ಹರಿದಿದೆ. ಪರಿಣಾಮ 14 ವರ್ಷದ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. 45 ವರ್ಷದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಅಪಘಾತವಾದ ತಕ್ಷಣ ಲಾರಿ ಹಾಗೂ ಚಾಲಕ ಪರಾರಿಯಾಗಿದ್ದಾರೆ. ಸದ್ಯಕ್ಕೆ ಈ ಕುರಿತು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv