Tag: injury

  • ಕ್ರೂಸರ್ ಪಲ್ಟಿಯಾಗಿ 6 ಜನರಿಗೆ ಗಂಭೀರ ಗಾಯ

    ಕ್ರೂಸರ್ ಪಲ್ಟಿಯಾಗಿ 6 ಜನರಿಗೆ ಗಂಭೀರ ಗಾಯ

    ಹಾವೇರಿ: ಕ್ರೂಸರ್ ವಾಹನ ಪಲ್ಟಿಯಾಗಿ ಇಬ್ಬರಿಗೆ ಗಾಯವಾಗಿದ್ದು, ಆರು ಜನರಿಗೆ ಸಣ್ಣಪುಟ್ಟ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಯಲವಗಿ ಗ್ರಾಮದ ಬಳಿ ಘಟನೆ ನಡೆದಿದೆ.

    ಘಟನೆಯಲ್ಲಿ ಗಾಯಗೊಂಡ ಚಾಲಕರನನ್ನ ಚಿತ್ರದುರ್ಗದ ಹನುಮಂತಪ್ಪ ಕರ್ಜಗಿ(36) ಅನ್ಸರ್ ಅಬ್ದುಲ್(45), ಹನೀಫ್ (46), ಹೈದರಲಿ ಶಬ್ಬಿರ್ (16) ಎಂದು ಗುರುತಿಸಲಾಗಿದೆ.

    ಕ್ರೂಸರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ನಾಲ್ಕು ಜನರನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಇನ್ನೂ ಘಟನೆಯಲ್ಲಿ ಆರು ಜನ ಗಾಯಾಳುಗಳನ್ನ ಸವಣೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕ್ರೂಸರ್ ವಾಹನ ಸವಣೂರಿನಿಂದ ಗದಗ ಜಿಲ್ಲೆಯ ಲಕ್ಷಮೇಶ್ವರ ಗ್ರಾಮದ ಬಳಿ ಇರುವ ದುದ್ ಪೀರ್ ದರ್ಗಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

    ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಬೆಳಗಾವಿಯಲ್ಲಿ ಭಾರೀ ವಿದ್ಯುತ್ ಅವಘಡಕ್ಕೆ ಇಬ್ಬರು ಬಲಿ- 6 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ

    ಬೆಳಗಾವಿಯಲ್ಲಿ ಭಾರೀ ವಿದ್ಯುತ್ ಅವಘಡಕ್ಕೆ ಇಬ್ಬರು ಬಲಿ- 6 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ

    ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಭಾರೀ ವಿದ್ಯುತ್ ಅವಘಡ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನಪ್ಪಿದ ಘಟನೆ ಇಂದು ನಡೆದಿದೆ.

    45 ವರ್ಷದ ಪರಶುರಾಮ ಕಠಾರೆ, 25 ವರ್ಷದ ಗೋಪಾಲ ಸೊಲಗನ್ನವರ ವಿದ್ಯುತ್ ಅವಘಡಕ್ಕೆ ಬಲಿಯಾದ ದುರ್ದೈವಿಗಳು. ಘಟನೆಯಲ್ಲಿ 6 ಜನರಿಗೆ ಗಂಭೀರ ಗಾಯಗಳಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಗಾಯಾಳುಗಳು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಗಾಂಧಿನಗರದಲ್ಲಿ ಹೋಟೆಲ್ ನಾಮಫಲಕ ಅಳವಡಿಕೆ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಡಿಸಿಪಿ ಸೀಮಾ ಲಾಟಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಸ್ಟ್ರೇಟ್ ಹಿಟ್ ಬಾಲ್ ತಲೆಗೆ ಬಡಿಯಿತು: ಗಂಭೀರ ಗಾಯಗೊಂಡು ಪಿಚ್ ಮೇಲೆ ಬಿದ್ದ ಬೌಲರ್

    ಸ್ಟ್ರೇಟ್ ಹಿಟ್ ಬಾಲ್ ತಲೆಗೆ ಬಡಿಯಿತು: ಗಂಭೀರ ಗಾಯಗೊಂಡು ಪಿಚ್ ಮೇಲೆ ಬಿದ್ದ ಬೌಲರ್

    ಎಜ್‍ಬಾಸ್ಟನ್: ಕ್ರಿಕೆಟ್ ಆಡುವ ವೇಳೆ ತಲೆಗೆ ಬಾಲ್ ಬಡಿದು ಗಂಭೀರವಾಗಿ ಬೌಲರ್ ಗಾಯಗೊಂಡಿರುವ ಘಟನೆ ಇಂಗ್ಲೆಂಡಿನಲ್ಲಿ ನಡೆದಿದೆ.

    ಶನಿವಾರ ನಡೆದ ಟಿಂ 20 ಕ್ರಿಕೆಟ್ ವೇಳೆ ನಾಟಿಂಗ್‍ಹ್ಯಾಮ್‍ಶೈರ್ ಬೌಲರ್ ಲ್ಯೂಕ್ ಫ್ಲೆಚರ್ ಗಂಭೀರವಾಗಿ ಗಾಯಗೊಂಡಿದ್ದು, ಈಗ ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾರೆ.

    ಟಿ20 ಬ್ಲಾಸ್ಟ್ ಕ್ರಿಕೆಟ್ ವೇಳೆ ಲ್ಯೂಕ್ ಫ್ಲೆಚರ್ ಬೌಲ್ ಮಾಡುತ್ತಿದ್ದರು. ಸ್ಟ್ರೈಕ್‍ನಲ್ಲಿ ಬರ್ಮಿಂಗ್‍ಹ್ಯಾಮ್ ತಂಡದ ಬ್ಯಾಟ್ಸ್ ಮನ್ ಸಾಮ್ ಹೈನ್ ಇದ್ದರು. ಲ್ಯೂಕ್ ಫ್ಲೆಚರ್ ಅವರ ಎಸೆತವನ್ನು ಬಲವಾಗಿ ಸಾಮ್ ಹೈನ್ ಬಲವಾಗಿ ಹೊಡೆದಿದ್ದರು. ಬಿರುಸಿನ ಹೊಡೆತದಿಂದಾಗಿ ಬಾಲ್ ನೇರವಾಗಿ ಫ್ಲೆಚರ್ ತಲೆಗೆ ಬಡಿದಿದೆ.

    ತಲೆಗೆ ಬಾಲ್ ಬಿದ್ದ ಕೂಡಲೇ ಫ್ಲೆಚರ್ ಪಿಚ್ ಮೇಲೆ ಬಿದ್ದಿದ್ದಾರೆ. ಕೂಡಲೇ ಏನಾಯ್ತು ಎಂದು ಉಳಿದ ಆಟಗಾರರು ಸಹಾಯಕ್ಕೆ ಧಾವಿಸಿದ್ದಾರೆ. ಮುಂದೆ ಬಂದು ಫ್ಲೆಚರ್ ಅವರನ್ನು ನೋಡಿ ಶಾಕ್ ಆಗಿ ಆಟಗಾರರು ಹಿಂದಕ್ಕೆ ಸರಿದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

    28 ವರ್ಷದ ಲ್ಯೂಕ್ ಫ್ಲೆಚರ್ ಅವರನ್ನು ಕ್ವೀನ್ ಎಲಿಜಬೆತ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. 30 ನಿಮಿಷದ ಬಳಿಕ ಪಂದ್ಯ ಮತ್ತೆ ಆರಂಭವಾಯಿತು.

     

    https://twitter.com/ThomasWalsh1/status/883776741872893952

  • 15 ದಿನಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ ಕೋತಿ, ಯುವಕನಿಗೆ ಕಚ್ಚಿ ಗಂಭೀರ ಗಾಯ

    15 ದಿನಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ ಕೋತಿ, ಯುವಕನಿಗೆ ಕಚ್ಚಿ ಗಂಭೀರ ಗಾಯ

    ಕೊಪ್ಪಳ: ಕಳೆದ ಹದಿನೈದು ದಿನಗಳಿಂದ ಕೋತಿಯೊಂದು ಗ್ರಾಮಸ್ಥರ ನಿದ್ದೆಗೆಡಿಸಿದ್ದು, ಯುವಕನಿಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಯಲಬುರ್ಗಾ ತಾಲೂಕಿನ ಜೂಲಕಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 21 ವರ್ಷದ ಭೀಮಪ್ಪ ವಾಲೀಕಾರ ಎಂಬವರು ಬುಧವಾರ ತಡರಾತ್ರಿ ದೇಗಲದಲ್ಲಿ ಮಲಗಿಕೊಂಡಾಗ ಕೋತಿ ಬಂದು ಕಚ್ಚಿ ಗಾಯಗೊಳಿಸಿದೆ. ಕೋತಿ ಹುಚ್ಚಾಟಕ್ಕೆ ಗ್ರಾಮಸ್ಥರು ಬೆಚ್ಚಿಬಿದ್ದು ಭಯಭೀತರಾಗಿದ್ದಾರೆ.

    ಕೋತಿ ಮಾನಸಿಕವಾಗಿ ಅಸ್ವಸ್ಥಗೊಂಡಿರುವ ಶಂಕೆ ವ್ಯಕ್ತವಾಗಿದ್ದು, ರಾತ್ರಿ ವೇಳೆ ಹೆಚ್ಚಾಗಿ ಕೋತಿ ದಾಳಿ ಮಾಡುತ್ತಿದೆ. ಹೀಗಾಗಿ ಗ್ರಾಮಸ್ಥರು ದೊಣ್ಣೆ ಹಿಡಿದುಕೊಂಡು ಕೋತಿ ಸೆರೆಹಿಡಿಯಲು ಪ್ರಯತ್ನ ಮಾಡುತ್ತಿದ್ದಾರೆ. ಆದ್ರೆ ಕೋತಿ ಇಷ್ಟೆಲ್ಲಾ ರಂಪಾಟ ಮಾಡ್ತಿದ್ರೂ ಅರಣ್ಯ ಇಲಾಖೆ ಕ್ರಮಕ್ಕೆ ಮುಂದಾಗದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕಾರಿನ ಮುಂಭಾಗದ ಗ್ಲಾಸ್ ಮೇಲೆ ಹಾರಿ ಸಿಲುಕಿಕೊಂಡ ಕುದುರೆ!

    ಕಾರಿನ ಮುಂಭಾಗದ ಗ್ಲಾಸ್ ಮೇಲೆ ಹಾರಿ ಸಿಲುಕಿಕೊಂಡ ಕುದುರೆ!

    ಜೈಪುರ: ಟಾಂಗಾಕ್ಕೆ ಕಟ್ಟಿದ ಕುದುರೆ ತನ್ನ ನಿಯಂತ್ರಣ ತಪ್ಪಿ ಕಾರಿನ ಮುಂಬದಿಯ ಗಾಜಿನ ಮೇಲೆ ಹಾರಿದ ಪರಿಣಾಮ ಕಾರು ಚಾಲಕ ಹಾಗೂ ಕುದುರೆ ಗಾಯಗೊಂಡ ಘಟನೆ ಜೈಪುರದಲ್ಲಿ ನಡೆದಿದೆ.

    ಈ ಘಟನೆಯು ಭಾನುವಾರ ಸುಮಾರು 1.30ರ ವೇಳೆಗೆ ಜೈಪುರದ ಸಿವಿಲ್ ಲೈನ್ಸ್ ಪ್ರದೇಶದ ಬಳಿ ನಡೆದಿದೆ. ಈ ವೇಳೆ ಅಲ್ಲಿನ ಬಿಸಿಲಿನ ತಾಪ 42 ಡಿಗ್ರಿ ಸೆಲ್ಸಿಯಸ್ ಇತ್ತು. ಹೀಗಾಗಿ ಬಿಸಿಲಿನ ಬೇಗೆಗೆ ಕಂಗೆಟ್ಟ ಕುದುರೆ ತನ್ನ ನಿಯಂತ್ರಣ ತಪ್ಪಿ ಕಾರಿನ ಮುಂಬದಿಯ ಗ್ಲಾಸ್ ಮೇಲೆ ಹಾರಿದೆ. ಪರಿಣಾಮ ಮುಂಬದಿಯ ಗಾಜು ಪುಡಿಪುಡಿಯಾಗಿ ಕುದುರೆ ಕಾರೊಳಗೆ ಸಿಲುಕಿದೆ. ಇದರಿಂದ ಚಾಲಕ ಗಾಯಗೊಂಡಿದ್ದು, ಕುದುರೆಗೂ ಸಣ್ಣಪುಟ್ಟ ಗಾಯಗಳಾಗಿವೆ ಅಂತಾ ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

    ಗಾಯಗೊಂಡ ಕಾರು ಚಾಲಕನನ್ನು ಪಂಕಜ್ ಜೋಶಿ ಅಂತಾ ಗುರುತಿಸಲಾಗಿದೆ. ಇನ್ನು ಸಾರ್ವಜನಿಕರು ಘಟನೆಯ ಫೊಟೋ ಹಾಗೂ ವಿಡಿಯೋ ಮಾಡಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    `ನಾನು ಆಗಷ್ಟೇ ನನ್ನ ಕಾರು ಸ್ಟಾರ್ಟ್ ಮಾಡಿದೆ. ಸಡನ್ ಆಗಿ ನನ್ನ ಕಾರಿನ ಮುಂಬದಿಯ ಗ್ಲಾಸ್ ಒಡೆದಿದ್ದು ಗೊತ್ತಾಗಿದೆ. ನೋಡನೋಡುತ್ತಲೇ ಕುದರೆ ತನ್ನ ಕಾರೊಳಗೆ ಸಿಲುಕಿಕೊಂಡಿದೆ. ಪರಿಣಾಮ ನನ್ನ ಎರಡೂ ಕೈಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅಂತಾ ಜೋಶಿ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

    ಘಟನೆ ನಡೆಯುತ್ತಿದ್ದಂತೆಯೇ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದ್ದು, ಕಾರೊಳಗಿನಿಂದ ಕುದುರೆಯನ್ನು ಹೊರ ತೆಗೆದಿದ್ದಾರೆ. ಘಟನೆಯಿಂದ ಗಾಯಗೊಂಡ ಕುದುರೆಗೆ ಅಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ವಿಪರೀತ ಬಿಸಿಲು ಇದ್ದ ಕಾರಣ ಈ ಘಟನೆ ನಡೆದಿದೆ ಅಂತಾ ಪೊಲೀಸರು ಹೇಳಿದ್ದಾರೆ.

    https://www.youtube.com/watch?v=zg1tBy-aZbI

  • ಟಾಟಾ ಏಸ್‍ಗೆ ಲಾರಿ ಡಿಕ್ಕಿ: ಒಂದೇ ಕುಟುಂಬದ 11 ಮಂದಿಗೆ ಗಾಯ

    ಟಾಟಾ ಏಸ್‍ಗೆ ಲಾರಿ ಡಿಕ್ಕಿ: ಒಂದೇ ಕುಟುಂಬದ 11 ಮಂದಿಗೆ ಗಾಯ

    ಬಳ್ಳಾರಿ: ಲಾರಿಯೊಂದು ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ 11 ಜನರು ಗಾಯಗೊಂಡ ಘಟನೆ ಹೊಸಪೇಟೆ ತಾಲೂಕಿನ ಚಿಲಕನಹಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ನಡೆದಿದೆ.

    ಗಾಯಾಳುಗಳನ್ನು ಕೂಡ್ಲಿಗಿ ತಾಲೂಕಿನ ಕೈವಲ್ಲಾಪುರ ಗ್ರಾಮದ ನಿವಾಸಿಗಳಾದ ಸೀತಮ್ಮ(30), ಕೊಟ್ಲೇಶ(35), ಕಾವೇರಿ(12), ದುರ್ಗಮ್ಮ(18), ಅಜೇಯ(10), ಪವಿತ್ರ(15), ಲಕ್ಷ್ಮೀ(20), ಆನಂದ(35) ಹಾಗೂ ಪ್ರವೀಣ(7) ಎಂದು ಗುರುತಿಸಲಾಗಿದೆ.

    ಗಾಯಾಳುಗಳನ್ನು ಹೊಸಪೇಟೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಇಬ್ಬರಿಗೆ ತೀವ್ರ ಗಾಯವಾಗಿದ್ದು, ಇಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ.

    ಟಾಟಾ ಏಸ್ ನಲ್ಲಿದ್ದವರು ಕೈವಲ್ಲಾಪುರ ಗ್ರಾಮದಿಂದ ಮುನಿರಾಬಾದ್ (ಹುಲಿಗಿ ಕ್ಷೇತ್ರ)ಗೆ ಪ್ರಯಾಣ ಬೆಳೆಸಿದ್ದು, ಮಾರ್ಗ ಮಧ್ಯದಲ್ಲಿ (ಚಿಲಕನಹಟ್ಟಿ ಗ್ರಾಮ) ಅತಿ ವೇಗದಿಂದ ಬಂದ ಲಾರಿ ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡದಿದೆ. ಘಟನೆಯ ನಂತರ ಹೊಸಪೇಟೆ ಬಡಾವಣೆ ಠಾಣೆ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

     

  • ಕೊಂಡ ಹಾಯುವಾಗ ಆಯತಪ್ಪಿ ಬಿದ್ದು ಮಕ್ಕಳು ಸೇರಿದಂತೆ 10 ಮಂದಿಗೆ ಗಾಯ!

    ಕೊಂಡ ಹಾಯುವಾಗ ಆಯತಪ್ಪಿ ಬಿದ್ದು ಮಕ್ಕಳು ಸೇರಿದಂತೆ 10 ಮಂದಿಗೆ ಗಾಯ!

    ಬೆಂಗಳೂರು: ಗ್ರಾಮದೇವತೆ ಮಾರಮ್ಮ ದೇವಿ ಜಾತ್ರೆಯಲ್ಲಿ ಕೊಂಡ ಹಾಯುವಾಗ ಆಯತಪ್ಪಿ ಬಿದ್ದು, ಮಕ್ಕಳು ಸೇರಿದಂತೆ 10ಕ್ಕೂ ಹೆಚ್ಚು ಮಂದಿಗೆ ಸುಟ್ಟ ಗಾಯವಾಗಿರೋ ಘಟನೆ ನೆಲಮಂಗಲ ತಾಲೂಕಿನ ನರಸೀಪುರ ಗ್ರಾಮದಲ್ಲಿ ಸಂಭವಿಸಿದೆ.

    ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮಾರಮ್ಮ ದೇವಿಗೆ ಸಡಗರ ಸಂಭ್ರಮದಿಂದ ಗ್ರಾಮಸ್ಥರು ಬೆಂಕಿಯ ಕೊಂಡವನ್ನ ಏರ್ಪಡಿಸಿದ್ದು, ಈ ವೇಳೆ ಆರತಿ ದೀಪದೊಂದಿಗೆ ಸೇವೆ ಸಲ್ಲಿಸುವಾಗ ಆಯತಪ್ಪಿ ಅವಘಡ ನಡೆದಿದೆ.

    ಇದನ್ನೂ ಓದಿ: ವಿಡಿಯೋ: ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ದೇವರ ಪಲ್ಲಕ್ಕಿ ಹೊತ್ತ ಭಕ್ತ

    ಗಾಯಗೊಂಡ ಸುಜಾತ, ಕವಿತಾ, ಲಕ್ಷ್ಮೀ, ಪವಿತ್ರ, ಜನಾರ್ದನ್ ಸೇರಿದಂತೆ 10ಕ್ಕೂ ಹೆಚ್ಚು ಮಂದಿಯನ್ನು ಅಂಬ್ಯುಲೆನ್ಸ್ ಮೂಲಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಇದರಿಂದ ಗ್ರಾಮದಲ್ಲಿ ಆತಂಕದ ಛಾಯೆ ನಿರ್ಮಾಣವಾಗಿದ್ದು, ಡಾಬಸ್‍ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನ ನಡೆಸಿದ್ದಾರೆ.

    ಘಟನೆ ನಡೆದ ಸಂದರ್ಭದಲ್ಲಿ ಚಿತ್ರೀಕರಣಕ್ಕೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಅಡ್ಡಿ ಪಡಿಸಿದ್ದು, ಇಲ್ಲಿ ಯಾವುದೇ ಅವಘಡ ನಡೆದಿಲ್ಲ. ಎಲ್ಲ ಸೃಷ್ಟಿ ಎಂದು ಸ್ಥಳೀಯರು ಸಮಜಾಯಿಷಿ ಹೇಳಿಕೆ ನೀಡಿದ್ದಾರೆ.

  • ಮ್ಯಾನ್ಮಾರ್: ವಾಟರ್ ಫೆಸ್ಟಿವಲ್ ವೇಳೆ 285 ಜನರ ಸಾವು, 1073 ಮಂದಿಗೆ ಗಾಯ

    ಮ್ಯಾನ್ಮಾರ್: ವಾಟರ್ ಫೆಸ್ಟಿವಲ್ ವೇಳೆ 285 ಜನರ ಸಾವು, 1073 ಮಂದಿಗೆ ಗಾಯ

    ಯಾಂಗಾನ್: ಮ್ಯಾನ್ಮಾರ್‍ನಲ್ಲಿ ನಡೆದ ನಾಲ್ಕು ದಿನಗಳ ವಾಟರ್ ಫೆಸ್ಟಿವಲ್‍ನಲ್ಲಿ ಒಟ್ಟು 285 ಮಂದಿ ಮೃತಪಟ್ಟು, 1,073 ಮಂದಿಗೆ ಗಾಯಗಳಾದ ಬಗ್ಗೆ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

    ಮ್ಯಾನ್ಮಾರ್ ನಲ್ಲಿ ಹೊಸ ವರ್ಷವನ್ನು ತಿಂಗ್ಯಾನ್ ವಾಟರ್ ಫೆಸ್ಟಿವೆಲ್ ಹೆಸರಿನಲ್ಲಿ ಆಚರಿಸಲಾಗುತ್ತದೆ. ಈ ವರ್ಷ ಕಳೆದ ಗುರುವಾರದಿಂದ ಭಾನುವಾರದವರೆಗೆ ವಾಟರ್ ಫೆಸ್ಟಿವಲ್ ಆಚರಿಸಲಾಯಿತು. ನಿಗದಿತ ಸ್ಥಳಗಳಲ್ಲಿ ಜಮಾವಣೆಗೊಳ್ಳುವ ಜನ ನೀರೆರಚಿಕೊಂಡು ಸಂಭ್ರಮಿಸುವುದೇ ಈ ವಾಟರ್ ಫೆಸ್ಟಿವಲ್‍ನ ವಿಶೇಷತೆ.

    ಮ್ಯಾನ್ಮಾರ್‍ನ ಪ್ಯಿ ಟಾವ್ ನಲ್ಲಿ 10, ಯಾಂಗೂನ್ ನಲ್ಲಿ 44, ಮಂಡಾಲೆಯಲ್ಲಿ 36, ಸ್ಯಾಗಿಂಗ್ ಪ್ರಾಂತ್ಯದಲ್ಲಿ 26, ತನ್ನಿಂತರಿ ಪ್ರಾಂತ್ಯದಲ್ಲಿ 11, ಬಾಗೊ ಪ್ರಾಂತ್ಯದಲ್ಲಿ 37, ಮಾಗ್‍ವೇ ಪ್ರಾಂತ್ಯದಲ್ಲಿ 11, ಮಾನ್ ರಾಜ್ಯದಲ್ಲಿ 20, ರಖಿನೆಯಲ್ಲಿ 17, ಶಾನ್ ರಾಜ್ಯದಲ್ಲಿ 29 ಹಾಗೂ ಅಯೆಯವಾಡ್ಡಿ ಪ್ರಾಂತ್ಯದಲ್ಲಿ 28 ಮಂದಿ ವಾಟರ್ ಫೆಸ್ಟಿವೆಲ್ ವೇಳೆ ಮೃತಪಟ್ಟಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಒಟ್ಟು 1,200 ಕ್ರಿಮಿನಲ್ ಕೇಸ್‍ಗಳು ದಾಖಲಾಗಿದೆ. ಕೊಲೆ, ಕಾರು ಅಪಘಾತ, ಮಾದಕ ವ್ಯಸನ, ಕಳ್ಳತನ, ಶಸ್ತ್ರಾಸ್ತ್ರ ಹೊಂದಿದ್ದ ಬಗ್ಗೆ ಹಾಗೂ ಗುಂಪು ಘರ್ಷಣೆಗೆ ಸಂಬಂಧಿಸಿದಂತೆ ಈ ಪ್ರಕರಣಗಳನ್ನ ದಾಖಲಿಸಿಕೊಳ್ಳಲಾಗಿದೆ ಅಂತಾ ವರದಿಯಾಗಿದೆ.

    ಕಳೆದ ವರ್ಷದ ವಾಟರ್ ಫೇಸ್ಟಿವಲ್‍ನಲ್ಲಿ ಒಟ್ಟು 272 ಮಂದಿ ಮೃತಪಟ್ಟು, 1,086ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

  • ರಥೋತ್ಸವ ವೇಳೆ ನೂಕುನುಗ್ಗಲು : ರಥದ ಚಕ್ರಕ್ಕೆ ಸಿಲುಕಿ ಮೂವರ ಕಾಲು ಮುರಿತ

    ರಥೋತ್ಸವ ವೇಳೆ ನೂಕುನುಗ್ಗಲು : ರಥದ ಚಕ್ರಕ್ಕೆ ಸಿಲುಕಿ ಮೂವರ ಕಾಲು ಮುರಿತ

    -ಮಹಿಳೆಯರಿಂದಲೇ ಎಳೆಯಲ್ಪಡುವ ದುರ್ಗಮ್ಮಾದೇವಿ ತೇರು

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಿರೇಅಂತರಗಂಗೆ ಗ್ರಾಮದಲ್ಲಿ ದುರ್ಗಮ್ಮ ದೇವಿ ಜಾತ್ರೆ ವೇಳೆ ತೇರಿನ ಗಾಲಿ ಹರಿದು ಮೂರು ಜನ ಭಕ್ತರ ಕಾಲು ಮುರಿದಿವೆ.

    ಈರಮ್ಮ, ಸುನಿತಾ, ಈರಮ್ಮ ಕಾಲು ಮುರಿದು ತೀವ್ರ ಗಾಯಗೊಂಡಿರುವ ಮಹಿಳೆಯರು. ಹೊಸದಾಗಿ ನಿರ್ಮಿಸಿದ್ದ ತೇರನ್ನ ಜಾತ್ರೆಯ ನಿಮಿತ್ತ ಎಳೆಯುವ ವೇಳೆ ನೂಕುನುಗ್ಗಲು ಉಂಟಾಗಿ ಮಹಿಳೆಯರು ರಥದ ಚಕ್ರಕ್ಕೆ ಸಿಲುಕಿದ್ದಾರೆ.

    ಹಿಂದಿನಿಂದಲೂ ಮಹಿಳೆಯರಿಂದಲೇ ನಡೆಯುತ್ತಿರುವ ಜಾತ್ರೆಯಲ್ಲಿ ಮಹಿಳೆಯರೇ ತೇರನ್ನ ಎಳೆಯುತ್ತಾರೆ. ದುರಾದೃಷ್ಠವಶಾತ್ ಈ ಬಾರಿ ಮೂವರು ಮಹಿಳೆಯರು ಕಾಲು ಕಳೆದುಕೊಳ್ಳುವ ಸ್ಥಿತಿ ಎದುರಿಸುತ್ತಿದ್ದಾರೆ. ಗಾಯಾಳುಗಳನ್ನ ಮಸ್ಕಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರೆದಿದೆ.

    ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯರ ಯೋಗಕ್ಷೇಮ ವಿಚಾರಿಸಿದರು. ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

  • ವಿಡಿಯೋ: ಕೆಂಡ ಹಾಯುವಾಗ ಎಡವಿ ಬೆಂಕಿ ಮೇಲೆ ಬಿದ್ದ ಪೂಜಾರಿ

    ವಿಡಿಯೋ: ಕೆಂಡ ಹಾಯುವಾಗ ಎಡವಿ ಬೆಂಕಿ ಮೇಲೆ ಬಿದ್ದ ಪೂಜಾರಿ

    ಮಂಡ್ಯ: ಇಂದು ಬೆಳಗ್ಗೆ ಮಂಡ್ಯ ತಾಲೂಕಿನ ಬಸರಾಳು ಗ್ರಾಮದಲ್ಲಿ ಕಾಲಭೈರವೇಶ್ವರ ದೇವರ ಜಾತ್ರೆಯಲ್ಲಿ ಕೆಂಡೋತ್ಸವ ಕಾರ್ಯಕ್ರಮದಲ್ಲಿ ಪೂಜಾರಿಯೊಬ್ಬರು ಕೆಂಡ ಹಾಯುವಾಗ ಎಡವಿ ಬೆಂಕಿಯಲ್ಲಿ ಬಿದ್ದಿದ್ದಾರೆ.

    ಕುಮಾರ್ ಎಂಬವರೇ ಬೆಂಕಿಯಲ್ಲಿ ಬಿದ್ದು ಗಾಯಗೊಂಡಿರುವ ವ್ಯಕ್ತಿ. ಕುಮಾರ್ ಅವರಿಗಿಂತ ಮುಂಚೆ ಆರು ಜನ ಯಶ್ವಸಿಯಾಗಿ ಹಾಯ್ದಿದ್ದರು. ಏಳನೇಯವರಾಗಿ ಬಂದ ಕುಮಾರ್ ತಲೆಯ ಮೇಲೆ ದೇವರ ಮೂರ್ತಿಯನ್ನು ಹೊತ್ತುಕೊಂಡು ಹೋಗುವಾಗ ಎಡವಿ ಬಿದ್ದಿದ್ದಾರೆ.

    ಬಸರಾಳು ಗ್ರಾಮದಲ್ಲಿ ಪ್ರತಿ ವರ್ಷಕ್ಕೊಮ್ಮೆ ನಡೆಯುವ ಕಾಲಭೈರವೇಶ್ವರ ದೇವರ ಜಾತ್ರೆಯಲ್ಲಿ ಕೆಂಡ ಹಾಯುವ ಆಚರಣೆ ನಡೆದುಕೊಂಡು ಬಹಳ ದಿನಗಳಿಂದ ನಡೆದುಕೊಂಡು ಬಂದಿದೆ. ಕೂಡಲೇ ಸ್ಥಳೀಯರು ಕುಮಾರ್ ಅವರನ್ನು ರಕ್ಷಿಸಿದ್ದಾರೆ. ಕುಮಾರ್ ಅವರಿಗೆ ಪ್ರಥಮ ಚಿಕಿತ್ಸೆಯನ್ನು ನೀಡಲಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ.

    https://www.youtube.com/watch?v=f7zKaj5WW1Y

    ಕುಮಾರ್