Tag: injury

  • ಕಲ್ಲುಕಂಬಕ್ಕೆ ಕಾರ್ ಡಿಕ್ಕಿ- ಓರ್ವ ಸಾವು, ಇಬ್ಬರಿಗೆ ಗಾಯ

    ಕಲ್ಲುಕಂಬಕ್ಕೆ ಕಾರ್ ಡಿಕ್ಕಿ- ಓರ್ವ ಸಾವು, ಇಬ್ಬರಿಗೆ ಗಾಯ

    ಚಿಕ್ಕಮಗಳೂರು: ಕೆರೆ ಏರಿಯ ಬದಿಯಲ್ಲಿದ್ದ ಕಲ್ಲುಕಂಬಕ್ಕೆ ಕಾರ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಅಂತರಗಟ್ಟೆ ಗ್ರಾಮದ ಬಳಿ ನಡೆದಿದೆ.

    ಶನಿವಾರ ರಾತ್ರಿ ಅಜ್ಜಂಪುರದಿಂದ ಕಡೂರಿಗೆ ಬರುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾಗಿದೆ. ಕಾರಿನಲ್ಲಿದ್ದ ಮೂವರು ಯುವಕರಲ್ಲಿ 21 ವರ್ಷದ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿರೋ ಇಬ್ಬರನ್ನ ಕಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದವರು ಮದ್ಯ ಸೇವಿಸಿದ್ದರು ಎಂದು ಹೇಳಲಾಗುತ್ತಿದೆ.

    ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ- ಇಬ್ಬರು ಅಧಿಕಾರಿಗಳಿಗೆ ಗಂಭೀರ ಗಾಯ

    ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ- ಇಬ್ಬರು ಅಧಿಕಾರಿಗಳಿಗೆ ಗಂಭೀರ ಗಾಯ

    ಕೊಪ್ಪಳ: ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಅಧಿಕಾರಿಗಳು ತೀವ್ರವಾಗಿ ಗಾಯವಾಗಿರೋ ಘಟನೆ ಕೊಪ್ಪಳ ದಲ್ಲಿ ನಡೆದಿದೆ.

    ಕುಷ್ಟಗಿ ತಾಲೂಕಿನ ತಾವರಗೇರಾದ ಕಳಮಳ್ಳಿ ಕ್ರಾಸ್ ಬಳಿ ರಸ್ತೆ ಅಪಘಾತ ಸಂಭವಿಸಿದ್ದು, ಗಂಗಾವತಿ ನಗರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಉದಯರವಿ ಹಾಗೂ ಮೈಸೂರು ಕೆಎಸ್‍ಆರ್ ಟಿಸಿ ಡಿಪೋ ಮ್ಯಾನೇಜರ್ ಷಡಕ್ಷರಯ್ಯರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

    ಗಾಯಗೊಂಡ ಅಧಿಕಾರಿಗಳನ್ನು ಗಂಗಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆ ಗಾಗಿ ಹುಬ್ಬಳ್ಳಿ ಆಸ್ಪತ್ರೆಗೆ ರವನಿಸಿದ್ದಾರೆ. ಕಾರಿನಲ್ಲಿದ್ದ ಹುಸೇನ್ ಎನ್ನುವರಿಗೂ ಗಾಯಗಳಾಗಿವೆ. ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವೈಟಿಪಿಎಸ್ ನಲ್ಲಿ ವಿದ್ಯುತ್ ಅವಘಡ- ಕಾರ್ಮಿಕನ ಸ್ಥಿತಿ ಗಂಭೀರ

    ವೈಟಿಪಿಎಸ್ ನಲ್ಲಿ ವಿದ್ಯುತ್ ಅವಘಡ- ಕಾರ್ಮಿಕನ ಸ್ಥಿತಿ ಗಂಭೀರ

    ರಾಯಚೂರು: ವಿದ್ಯುತ್ ಅವಘಡದಿಂದಾಗಿ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿರುವ ಘಟನೆ ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ (ವೈಟಿಪಿಎಸ್)ನಲ್ಲಿ ನಡೆದಿದೆ.

    ಸ್ವಿಚ್ ಗೇರ್ ನಲ್ಲಿ ಬೋರ್ಡ್ ಬದಲಿಸುವ ವೇಳೆ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಕೆಎಎಸ್‍ಎಲ್ ಕಂಪನಿ ಗುತ್ತಿಗೆ ಕಾರ್ಮಿಕ ಮಹೇಶ್ ಗಾಯಗೊಂಡಿದ್ದಾರೆ. ಹೊಟ್ಟೆ, ತೊಡೆ, ಕಾಲಿನ ಭಾಗ ಭಾಗಶ: ಸುಟ್ಟಿದ್ದು, ಮಹೇಶ್ ಸ್ಥಿತಿ ಗಂಭೀರವಾಗಿದೆ.

    ರಾಯಚೂರಿನ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಮಹೇಶ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಸೌಲಭ್ಯ ಹಾಗೂ ವೈದ್ಯರಿಲ್ಲದ ಕಾರಣ ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

    ವೈಟಿಪಿಎಸ್ ಹಾಗೂ ಉಪ ಗುತ್ತಿಗೆ ಪಡೆದಿರುವ ಕೆಎಎಸ್‍ಎಲ್ ಕಂಪನಿ ಕಾರ್ಮಿಕರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನ ಕೈಗೊಳ್ಳದಿರುವುದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಕನಿಷ್ಠ ಮಟ್ಟದ ಸುರಕ್ಷತೆಯೂ ಇಲ್ಲದೆ ವಿದ್ಯುತ್ ಕೆಲಸ ಮಾಡುತ್ತಿದ್ದರಿಂದ ಹೆಚ್ಚು ಗಾಯಗಳಾಗಿವೆ.

    ಘಟನೆಯಿಂದ ಭಯಭೀತರಾಗಿರುವ ವೈಟಿಪಿಎಸ್ ಸಿಬ್ಬಂದಿ ಹಾಗೂ ಕಾರ್ಮಿಕರು ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

  • ಬೆಂಗ್ಳೂರಿನಲ್ಲಿ ಬೈಕ್ ಗಳ ನಡುವೆ ಡಿಕ್ಕಿ- ಒಬ್ಬರ ಸಾವು, ಇಬ್ಬರಿಗೆ ಗಂಭೀರ ಗಾಯ

    ಬೆಂಗ್ಳೂರಿನಲ್ಲಿ ಬೈಕ್ ಗಳ ನಡುವೆ ಡಿಕ್ಕಿ- ಒಬ್ಬರ ಸಾವು, ಇಬ್ಬರಿಗೆ ಗಂಭೀರ ಗಾಯ

    ಬೆಂಗಳೂರು: ಬೈಕ್‍ ಗಳ ನಡುವೆ ಡಿಕ್ಕಿಯಾಗಿ ಒಬ್ಬರು ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ಬೆಂಗಳೂರಿನ ಕೆಆರ್ ಮಾರುಕಟ್ಟೆಯ ಮೇಲ್ಸೆತುವೆ ಮೇಲೆ ನಡೆದಿದೆ.

    ಸತೀಶ್ ಪಂಡಿತ್ ಮೃತ ದುರ್ದೈವಿ. ಸ್ವಾತಿ ಪಂಡಿತ್ ಹಾಗೂ ಇನ್ನೊಬ್ಬ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ. ಬೆಳಗ್ಗೆ ಒಂಭತ್ತು ಗಂಟೆಗೆ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸ್ವಾತಿ ತಮ್ಮ ತಂದೆ ಸತೀಶ್ ಜೊತೆಯಲ್ಲಿ ಬೈಕಿನಲ್ಲಿ ತೆರಳುತ್ತಿದ್ದಾಗ ಹಿಂಬಂದಿಯಿಂದ ಇನ್ನೊಂದು ಬೈಕ್ ಡಿಕ್ಕಿ ಹೊಡೆದಿದೆ. ಈ ವೇಳೆ ಸತೀಶ್ ಪಂಡಿತ್ ಬೈಕ್ ನಿಯಂತ್ರಣ ಕಳೆದುಕೊಂಡು ಕೆಳಗಡೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ತಂದೆ ಸ್ಥಳದಲ್ಲೇ ಸಾವನಪ್ಪಿದ್ದರೆ ಮಗಳು ಸ್ವಾತಿಯ ಪರಿಸ್ಥಿತಿ ಗಂಭೀರವಾಗಿದೆ.

    ಹೊಸಕೆರೆಹಳ್ಳಿ ದ್ವಾರಕ ನಗರ ನಿವಾಸಿಯಾದ ಗೋವಿಂದ ದಿವಾಕರ್ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ. ಸಿಟಿ ಮಾರ್ಕೆಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 2 ಬೈಕ್‍ಗಳ ನಡುವೆ ಡಿಕ್ಕಿ, ಓರ್ವ ಸವಾರ ಸಾವು- ಕಾಪಾಡಿ ಕಾಪಾಡಿ ಎಂದ್ರೂ ಸಹಾಯಕ್ಕೆ ಬರ್ಲಿಲ್ಲ ಜನ

    2 ಬೈಕ್‍ಗಳ ನಡುವೆ ಡಿಕ್ಕಿ, ಓರ್ವ ಸವಾರ ಸಾವು- ಕಾಪಾಡಿ ಕಾಪಾಡಿ ಎಂದ್ರೂ ಸಹಾಯಕ್ಕೆ ಬರ್ಲಿಲ್ಲ ಜನ

    ಬೀದರ್: ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸವಾರರು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಜನರು ಮಾನವೀಯತೆ ತೋರದೆ ಫೋಟೋ ತೆಗೆಯುತ್ತಿದ್ದ ಅಮಾನವೀಯ ಘಟನೆ ಜಿಲ್ಲೆಯ ಔರಾದ್ ತಾಲೂಕಿನ ಶೆಂಬೆಳ್ಳಿ ಬಳಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

    ಈ ಘಟನೆ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೀದರ್‍ನಿಂದ ಒಬ್ಬ ಬೈಕ್ ಸವಾರ ಔರಾದ್ ಕಡೆಗೆ ತೆರೆಳುತ್ತಿದ್ದರು. ಮತ್ತಿಬ್ಬರು ಔರಾದ್‍ನಿಂದ ಬೀದರ್‍ಗೆ ಒಂದೇ ಬೈಕ್‍ನಲ್ಲಿ ಬರುತ್ತಿದ್ದರು. ಈ ಸಂದರ್ಭದಲ್ಲಿ ಶೆಂಬಳ್ಳಿ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಇಬ್ಬರೂ ವೇಗವಾಗಿ ಬಂದು ಬೈಕ್‍ಗಳು ಮುಖಾಮುಖಿ ಡಿಕ್ಕಿ ಹೊಡೆದಿವೆ.

    ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಒಂದು ಕಡೆ ಮತ್ತಿಬ್ಬರು ಇನ್ನೊಂದು ಕಡೆ ಬಿದ್ದಿದ್ದಾರೆ. ಇಬ್ಬರು ಬೈಕ್ ಸವಾರರು ರಕ್ತದ ಮಡುವಿನಲ್ಲಿ ಬಿದ್ದು ಕಾಪಾಡಿ, ಕಾಪಾಡಿ ಎಂದು ಬೇಡಿಕೊಂಡರೂ ಸಾರ್ವಜನಿಕರು ಸಹಾಯಕ್ಕೆ ಬಾರದೆ ಫೋಟೋ ತೆಗೆಯುತ್ತಾ, ಅವರನ್ನೇ ಬೈಯುತ್ತಾ ಅಮಾನವೀಯತೆ ತೋರಿದ್ದಾರೆ. ನಂತರ 45 ನಿಮಿಷಗಳ ಬಳಿಕ ಸ್ಥಳದಲ್ಲಿದ್ದವರು ಆಂಬುಲೆನ್ಸ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

    ಅಪಘಾತದಲ್ಲಿ ಗಾಯಗೊಂಡವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಒಬ್ಬ ಬೈಕ್ ಸವಾರ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಸದ್ಯಕ್ಕೆ ಮತ್ತಿಬ್ಬರು ಗಾಯಾಳುಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಘಟನೆ ಸಂಬಂಧ ಸಂತಪೂರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸೇತುವೆಯಿಂದ ಉರುಳಿದ ರೈಲು: ಮೂವರ ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ

    ಸೇತುವೆಯಿಂದ ಉರುಳಿದ ರೈಲು: ಮೂವರ ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ

    ವಾಷಿಂಗ್ಟನ್: ಅಮೆರಿಕದ ವಾಷಿಂಗ್ಟನ್ ರಾಜ್ಯದಲ್ಲಿ ಸೇತುವೆಯಿಂದ ಪ್ರಯಾಣಿಕ ರೈಲು ಉರುಳಿ ಬಿದ್ದ ಪರಿಣಾಮ ಮೂರು ಮಂದಿ ಮೃತಪಟ್ಟು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

    ಡ್ಯೂಪಾಂಟ್ ಹತ್ತಿರ ರೈಲು ಹಳಿ ತಪ್ಪುವಾಗ ಬೋಗಿಯಲ್ಲಿ 77 ಪ್ರಯಾಣಿಕರು ಹಾಗೂ 7 ಜನ ಸಿಬ್ಬಂದಿ ಇದ್ದರು ಎಂದು ತಿಳಿದು ಬಂದಿದೆ. ಈ ಘಟನೆಯಿಂದ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಕಾರು ಸೇರಿದಂತೆ ಸಾಕಷ್ಟು ವಾಹನಗಳು ಜಖಂಗೊಂಡಿವೆ.

    ಹಳಿ ತಪ್ಪಿದ ರೈಲು ಪ್ರಯಾಣಿಕರಿಂದ ಭರ್ತಿಯಾಗಿರಲಿಲ್ಲ. ಹೀಗಾಗಿ ಸಾವು ನೋವಿನ ಸಂಖ್ಯೆ ಕಡಿಮೆಯಾಗಿದೆ. ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಘಟನೆ ಬಗ್ಗೆ ವಿಚಾರಣೆ ನಡೆಸುತ್ತಿದೆ.

  • ಬೈಕ್, ಲಾರಿ ನಡುವೆ ಅಪಘಾತ: ಆಸ್ಪತ್ರೆಗೆ ಹೋಗ್ತಿದ್ದ ವೃದ್ಧ ಸಾವು

    ಬೈಕ್, ಲಾರಿ ನಡುವೆ ಅಪಘಾತ: ಆಸ್ಪತ್ರೆಗೆ ಹೋಗ್ತಿದ್ದ ವೃದ್ಧ ಸಾವು

    ಮಂಡ್ಯ: ಬೈಕ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ವೃದ್ಧರೊಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಕೆ.ಹೊನ್ನಲಗೆರೆ ಗ್ರಾಮದ ಬಳಿ ನಡೆದಿದೆ.

    ಹುಲಿಕೆರೆ ಗ್ರಾಮದ 80 ವರ್ಷದ ವೃದ್ಧ ಮರಿಯಣ್ಣ ಸಾವನ್ನಪ್ಪಿದ್ದಾರೆ. ಯುವಕರಾದ ಲೋಕೇಶ್ ಮತ್ತು ಸಚಿನ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಮರಿಯಣ್ಣ ಅನಾರೋಗ್ಯದಿಂದ ಬಳಲುತ್ತಿದ್ದರು. ಆದ್ದರಿಂದ ಅವರನ್ನು ಆಸ್ಪತ್ರೆಗೆ ತೋರಿಸಲು ಸಚಿನ್ ಮತ್ತು ಲೋಕೇಶ್ ಬೈಕ್‍ನಲ್ಲಿ ಮದ್ದೂರಿಗೆ ಕರೆದುಕೊಂಡು ಬರುತ್ತಿದ್ದರು.

    ಈ ಘಟನೆ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಂತ್ರಿಮಾಲ್‍ನಲ್ಲಿ ಮಹಿಳೆ ತಲೆ ಮೇಲೆ ಬಿತ್ತು ಬೃಹತ್ ಬೋರ್ಡ್ – ರಕ್ತ ಸೋರುತ್ತಿದ್ರೂ ಆಸ್ಪತ್ರೆಗೆ ಸೇರಿಸದ ಸಿಬ್ಬಂದಿ

    ಮಂತ್ರಿಮಾಲ್‍ನಲ್ಲಿ ಮಹಿಳೆ ತಲೆ ಮೇಲೆ ಬಿತ್ತು ಬೃಹತ್ ಬೋರ್ಡ್ – ರಕ್ತ ಸೋರುತ್ತಿದ್ರೂ ಆಸ್ಪತ್ರೆಗೆ ಸೇರಿಸದ ಸಿಬ್ಬಂದಿ

    ಬೆಂಗಳೂರು: ಮಂತ್ರಿಮಾಲ್‍ನಲ್ಲಿ ಮತ್ತೆ ಎಡವಟ್ಟಾಗಿದೆ. ಶಾಪಿಂಗ್‍ಗೆ ಹೋಗಿದ್ದ ಮಹಿಳೆ ಮೇಲೆ ಬೃಹತ್ ಬೋರ್ಡ್ ಬಿದ್ದ ಘಟನೆ ಗುರುವಾರ ರಾತ್ರಿ ನಡೆದಿದೆ.

    ಯಲಹಂಕದ ಗುಣಶೀಲ ಎಂಬವರು ಮಾಲ್‍ಗೆ ಹೋಗಿದ್ದಾಗ ಬಟ್ಟೆಗಳ ಆಫರ್ ಪ್ರದರ್ಶನದ ಬೃಹತ್ ಬೋರ್ಡ್ ಅವರ ತಲೆಯ ಮೇಲೆ ಬಿದ್ದಿದೆ. ಇದರ ಪರಿಣಾಮ ಗುಣಶೀಲ ಅವರ ತಲೆಗೆ ಗಾಯವಾಗಿದ್ದು, ಏಳು ಸ್ಟಿಚ್ ಹಾಕಲಾಗಿದೆ.

     

    ಘಟನೆ ನಡೆದು ರಕ್ತ ಸೋರುತ್ತಿದ್ದರೂ ಮಂತ್ರಿ ಮಾಲ್‍ನವರು ಪ್ರಥಮ ಚಿಕಿತ್ಸೆ ಮಾಡಿ ಬಿಟ್ಟಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗದೇ ಅಮಾನವೀಯತೆ ಮೆರೆದಿದ್ದಾರೆ. ತಮ್ಮ ಕಡೆಯಿಂದ ತಪ್ಪಾಗಿದ್ರೂ ಮುಚ್ಚಿಕೊಳ್ಳುವ ಯತ್ನ ನಡೆಸಿದ್ದಾರೆ.

     

    ನಂತರ ಗುಣಶೀಲ ಅವರ ಪತಿ ಸ್ಥಳಕ್ಕೆ ಬಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಗುಣಶೀಲ ಅವರ ತಲೆಯ ಮುಂಭಾಗಕ್ಕೆ ಏಟು ಬಿದ್ದಿದ್ದು ಎರಡು ದಿನ ಬಿಟ್ಟು ಎಂಆರ್‍ಐ ಮಾಡಿಸೋದಕ್ಕೆ ವೈದ್ಯರು ಸೂಚಿಸಿದ್ದಾರೆ ಅಂತ ತಿಳಿದುಬಂದಿದೆ.

  • ದಾವಣಗೆರೆಯಲ್ಲಿ ಮತ್ತೆ ಗ್ಯಾಂಗ್‍ವಾರ್- ರೌಡಿ ಬುಳ್ಳನಾಗನ ಮೇಲೆ ಸುಪಾರಿ ಅಟ್ಯಾಕ್

    ದಾವಣಗೆರೆಯಲ್ಲಿ ಮತ್ತೆ ಗ್ಯಾಂಗ್‍ವಾರ್- ರೌಡಿ ಬುಳ್ಳನಾಗನ ಮೇಲೆ ಸುಪಾರಿ ಅಟ್ಯಾಕ್

    ದಾವಣಗೆರೆ: ಜಿಲ್ಲೆಯಲ್ಲಿ ಮತ್ತೆ ಗ್ಯಾಂಗ್ ವಾರ್ ಶುರುವಾಗಿದೆ. ನಾಗರಾಜ್ ಅಲಿಯಾಸ್ ಬುಳ್ಳನಾಗ ಮತ್ತು ಸಹಚರರ ಮೇಲೆ ರಾತ್ರೋರಾತ್ರಿ ದಾಳಿ ನಡೆದಿದ್ದು, ಮತ್ತೊಮ್ಮೆ ಬೆಣ್ಣೆನಗರಿ ಜನ ಬೆಚ್ಚಿ ಬೀಳುವಂತಾಗಿದೆ.

    ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕುಮಾರಪಟ್ಟಣಂ ಸಮೀಪದ ಸೇತುವೆ ಬಳಿ 15ಕ್ಕೂ ಹೆಚ್ಚು ಸುಪಾರಿ ಕಿಲ್ಲರ್ಸ್ ರೌಡಿ ಶೀಟರ್ ಬುಳ್ಳನಾಗನ ಮೇಲೆ ಅಟ್ಯಾಕ್ ಮಾಡಿದ್ದಾರೆ. ಬುಳ್ಳನಾಗ ಮತ್ತು ಸಹಚರರು ಕುಮಾರಪಟ್ಟಣಂ ಮಾರ್ಗವಾಗಿ ದಾವಣಗೆರೆಗೆ ಬರುವಾಗ ಇನ್ನೋವಾ ಕಾರು ಅಡ್ಡಗಟ್ಟಿ ಒಮ್ಮೆಲೆ ಅಟ್ಯಾಕ್ ಮಾಡಿದ್ದಾರೆ.

    ಈ ವೇಳೆ ಬುಳ್ಳನಾಗ ಮತ್ತು ಇಬ್ಬರು ಸಹಚರರಿಗೆ ಗಂಭೀರ ಗಾಯಗಳಾಗಿವೆ. ಇನ್ನೋವಾ ಕಾರಿನ ಗಾಜುಗಳು ಜಖಂ ಆಗಿವೆ. ಅಟ್ಯಾಕ್ ಆಗುತ್ತಿದ್ದಂತೆ ಬುಳ್ಳನಾಗನ ಕಾರು ಚಾಲಕ ಕಾರು ಜೋರಾಗಿ ಚಲಾಯಿಸಿಕೊಂಡು ಬಂದು ಪರಾರಿಯಾಗಿದ್ದಾರೆ. ಈ ಹಿಂದೆ ಬುಳ್ಳನಾಗನನ್ನ ಕೊಲೆ ಮಾಡೋದಕ್ಕೆ ಸಂತೋಷ್ ಅಲಿಯಾಸ್ ಕಣುಮ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ರೌಡಿಗಳಿಗೆ ಸುಪಾರಿ ಕೊಟ್ಟಿದ್ದ.

    ಎರಡು ತಿಂಗಳ ಹಿಂದೆ ದಾವಣಗೆರೆ ಪೊಲೀಸರು 7 ಮಂದಿ ಸುಪಾರಿ ಕಿಲ್ಲರ್ಸ್ ಗಳನ್ನ ಬಂಧಿಸಿದ್ದರು. ಈಗಲೂ ಕೂಡ ಸಂತೋಷ್ ಅಲಿಯಾಸ್ ಕಣುಮ, ಶ್ರೀನಿವಾಸ್ ಅಲಿಯಾಸ್ ಮೋಟ್ ಬಳ್ ಸೀನ, ಗೋವಿಂದ ಎಂಬವರು ಅಟ್ಯಾಕ್ ಮಾಡಿಸಿದ್ದಾರೆ ಎಂದು ಹಲ್ಲೆಗೆ ಒಳಗಾದ ಬುಳ್ಳನಾಗ ಆರೋಪಿಸಿದ್ದಾನೆ.

  • ಖಾಸಗಿ ಬಸ್ ವೇಗವಾಗಿ ಬಂದು ಕಂಟೈನರ್ ಲಾರಿ, ಕಾರಿಗೆ ಡಿಕ್ಕಿ- ಮಹಿಳೆ ಸಾವು, 18 ಮಂದಿಗೆ ಗಾಯ

    ಖಾಸಗಿ ಬಸ್ ವೇಗವಾಗಿ ಬಂದು ಕಂಟೈನರ್ ಲಾರಿ, ಕಾರಿಗೆ ಡಿಕ್ಕಿ- ಮಹಿಳೆ ಸಾವು, 18 ಮಂದಿಗೆ ಗಾಯ

    ಮಂಗಳೂರು: ನಗರದಲ್ಲಿ ನಂತೂರು ವೃತ್ತದಲ್ಲಿ ಭೀಕರ ಅಪಘಾತ ನಡೆದಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

    ಅತೀ ವೇಗದಿಂದ ಬರುತ್ತಿದ್ದ ಖಾಸಗಿ ಬಸ್‍ವೊಂದು ಕಂಟೈನರ್ ಲಾರಿ ಮತ್ತು ಕಾರಿಗೆ ಡಿಕ್ಕಿಯಾಗಿದ್ದು, ಬಸ್ಸಿನಲ್ಲಿದ್ದ ಗುರುಪುರ ನಿವಾಸಿ ವೆನ್ಲಾಕ್ ಆಸ್ಪತ್ರೆಯ ಸಿಬ್ಬಂದಿ ಕವಿತಾ(50) ಮೃತಪಟ್ಟಿದ್ದಾರೆ. ಬಸ್ ಚಾಲಕನ ಅತೀ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.

    ಗುರುಪುರ ಕಡೆಯಿಂದ ಕಿಕ್ಕಿರಿದು ತುಂಬಿದ್ದ ಬಸ್ಸನ್ನು ಚಾಲಕ ಅತೀ ವೇಗದಿಂದ ಚಲಾಯಿಸುತ್ತಾ ನಂತೂರು ವೃತ್ತದಲ್ಲಿ ನುಗ್ಗಿಸಿದ್ದಾನೆ. ಈ ವೇಳೆ ಪಣಂಬೂರು ಕಡೆಯಿಂದ ಬರುತ್ತಿದ್ದ ಕಂಟೈನರ್ ಟ್ರಕ್ ಬಸ್ಸಿಗೆ ಬಡಿದರೆ, ಧಾವಂತದಲ್ಲಿದ್ದ ಬಸ್ ಮುಂದಕ್ಕೆ ಹೋಗಿ ಮತ್ತೊಂದು ಕಾರಿಗೆ ಡಿಕ್ಕಿಯಾಗಿದೆ.

    ಅಪಘಾತದಲ್ಲಿ ಬಸ್ ಪ್ರಯಾಣಿಕರು, ಟ್ರಕ್ ಚಾಲಕ ಸೇರಿ ಒಟ್ಟು 18 ಮಂದಿ ಗಾಯಗೊಂಡಿದ್ದಾರೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.