Tag: injury

  • ಕ್ರಿಕೆಟ್ ಆಡಿ ಮಹದಾಯಿ ಪ್ರತಿಭಟನೆ – ಬ್ಯಾಟ್ ತಾಗಿ ಕಾರ್ಯಕರ್ತನ ತಲೆ ಓಪನ್

    ಕ್ರಿಕೆಟ್ ಆಡಿ ಮಹದಾಯಿ ಪ್ರತಿಭಟನೆ – ಬ್ಯಾಟ್ ತಾಗಿ ಕಾರ್ಯಕರ್ತನ ತಲೆ ಓಪನ್

    ದಾವಣಗೆರೆ: ಮಹದಾಯಿಗಾಗಿ ನಗರದಲ್ಲಿ ಕನ್ನಡ ಪರ ಸಂಘಟನೆಗಳು ಕ್ರಿಕೆಟ್ ಆಡಿ ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಬ್ಯಾಟ್ ತಾಗಿ ಕಾರ್ಯಕರ್ತರ ತಲೆಗೆ ಗಂಭೀರ ಪೆಟ್ಟಾಗಿದೆ.

    ಜಯದೇವ ವೃತ್ತದಲ್ಲಿ ಕನ್ನಡ ಪರ ಸಂಘಟನೆಗಳು ಕ್ರಿಕೆಟ್ ಆಟವಾಡಿ ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಬ್ಯಾಟ್ ತಾಗಿ ಕರವೇ ಶಿವರಾಮೆ ಗೌಡರ ಬಣದ ಚನ್ನಗಿರಿ ತಾಲೂಕಿನ ಅಧ್ಯಕ್ಷ ಲೋಹಿತ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

    ವೃತ್ತದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ. ಶಿವಕುಮಾರ್ ಬ್ಯಾಟಿಂಗ್ ಮಾಡುತ್ತಿದ್ದರು. ಬ್ಯಾಟಿಂಗ್ ಮಾಡುವಾಗ ಪಕ್ಕದಲ್ಲಿದ್ದ ಲೋಹಿತ್ ತಲೆಗೆ ಬ್ಯಾಟ್ ತಾಗಿದೆ.

    ಬ್ಯಾಟ್ ತಾಗಿದ ಪೆಟ್ಟಿಗೆ ಲೋಹಿತ್ ತಲೆ ಓಪನ್ ಆಗಿದೆ. ಕೂಡಲೇ ಲೋಹಿತ್ ಅವರನ್ನು ಕಾರ್ಯಕರ್ತರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಬಂದ್ ದಿನ ಅಂಗಡಿ ತೆರೆದ ವ್ಯಾಪಾರಿಗಳಿಗೆ ಕನ್ನಡ ಸಂಘಟನೆಗಳಿಂದ ಸನ್ಮಾನ

  • ಮಗಳಿಗೆ ಕಣ್ಣಾಕಿದವರ ಮೇಲೆ ಹಲ್ಲೆಗೈಯಲು ಪುಡಿ ರೌಡಿಗಳಿಗೆ ಸುಪಾರಿ ಕೊಟ್ಟ ತಾಯಿ!

    ಮಗಳಿಗೆ ಕಣ್ಣಾಕಿದವರ ಮೇಲೆ ಹಲ್ಲೆಗೈಯಲು ಪುಡಿ ರೌಡಿಗಳಿಗೆ ಸುಪಾರಿ ಕೊಟ್ಟ ತಾಯಿ!

    ಶಿವಮೊಗ್ಗ: ತಾಯಿಯೊಬ್ಬರು ತನ್ನ ಮಗಳ ಮೇಲೆ ಕಣ್ಣಾಕಿದವರ ಮೇಲೆ ಹಲ್ಲೆ ನಡೆಸಲು ಪುಡಿ ರೌಡಿಗಳಿಗೆ ಸುಪಾರಿ ಕೊಟ್ಟ ಘಟನೆ ಶಿವಮೊಗ್ಗ ನಗರದ ಹೊರವಲಯದ ಗೋವಿಂದಪುರ ಗ್ರಾಮದಲ್ಲಿ ನಡೆದಿದೆ.

    ಧನಲಕ್ಷ್ಮಿ ಎಂಬವರ ಮಗಳ ಮೇಲೆ ನಿತಿನ್ ಎಂಬಾತ ಕಣ್ಣು ಹಾಕಿದ್ದ. ಆಕೆಯನ್ನು ಲವ್ ಮಾಡುತ್ತಿರುವುದಾಗಿ ಗೆಳೆಯರಿಗೆ ಹೇಳಿಕೊಂಡು ತಿರುಗಾಡುತ್ತಿದ್ದ. ಇದರಿಂದ ರೊಚ್ಚಿಗೆದ್ದ ಧನಲಕ್ಷ್ಮಿ ಪುಡಿ ರೌಡಿ ಸಂತು ಎಂಬಾತನಿಗೆ ಸುಪಾರಿ ಕೊಟ್ಟಿದ್ದಾರೆ. ಅಂತೆಯೇ ಸಂತು ನಿತಿನ್ ಮತ್ತು ಆತನ ಸ್ನೇಹಿತರ ಮೇಲೆ ಚೂರಿಯಂದ ಹಲ್ಲೆ ಮಾಡಿದ್ದಾನೆ.

    ಚೂರಿ ಇರಿತದಿಂದ ನಿತಿನ್ ತೀವ್ರವಾಗಿ ಗಾಯಗೊಂಡಿದ್ದಾನೆ. ಈತನ ಸ್ನೇಹಿತರಾದ ರಾಜು, ಪ್ರಜ್ವಲ್, ನವೀನ್ ಎಂಬವರೂ ಕೂಡ ಗಾಯಗೊಂಡಿದ್ದಾರೆ. ಸದ್ಯ ಗಾಯಗೊಂಡ ನಾಲ್ವರು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

    ಹಲ್ಲೆ ನಡೆಸಿದ ಬಳಿಕ ಪುಡಿ ರೌಡಿ ಕುಟ್ಟಿ ಮತ್ತು ಈತನ ಗೆಳೆಯರಾದ ನವೀನ್, ಪ್ರದೀಪ್, ಸಂತು ಎಂಬವರು ಪರಾರಿ ಆಗಿದ್ದಾರೆ. ಈ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಗುವನ್ನು ಶಾಲೆಯಿಂದ ಕರೆತರಲು ಹೋಗುವಾಗ ತಾಯಿಗೆ ಡಿಕ್ಕಿ ಹೊಡೆದ ಕಾರು- ಮಹಿಳೆ ಸ್ಥಳದಲ್ಲೇ ಸಾವು

    ಮಗುವನ್ನು ಶಾಲೆಯಿಂದ ಕರೆತರಲು ಹೋಗುವಾಗ ತಾಯಿಗೆ ಡಿಕ್ಕಿ ಹೊಡೆದ ಕಾರು- ಮಹಿಳೆ ಸ್ಥಳದಲ್ಲೇ ಸಾವು

    ಬೆಂಗಳೂರು: ಶಾಲೆಗೆ ತೆರಳಿದ್ದ ತನ್ನ ಮಗುವನ್ನು ವಾಪಸ್ ಮನೆಗೆ ಕರೆತರಲು ತೆರಳುತ್ತಿದ್ದ ತಾಯಿಗೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನಪ್ಪಿರುವ ಧಾರುಣ ಘಟನೆ ಸಂಭವಿಸಿದೆ.

    ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ದಾಸನಪುರದ ಬಳಿ ನಡೆದಿದೆ. ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮತ್ತೊಂದು ಕಾರಿಗೆ ಅಪಘಾತವಾದ ಬಳಿಕ, ದಾಸನಪುರ ನಿವಾಸಿ ಸುದಾ ಎಂಬ ಮಹಿಳೆಗೆ ಅಪ್ಪಳಿಸಿದೆ.

    ಈ ಅಪಘಾತದಲ್ಲಿ ಮಹಿಳೆ ಸ್ಥಳದಲ್ಲಿ ಸಾವನಪ್ಪಿದ್ದರೆ, ಎರಡು ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲದೆ ಈ ಘಟನಾ ಸ್ಥಳದಲ್ಲಿ ಸ್ಕೈವಾಕ್ ಇಲ್ಲದೇ ಇರುವ ಕಾರಣ ಮಹಿಳೆ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

  • ಕಾಲಲ್ಲಿ ಗಾಯವಾದ್ರೆ ರಕ್ತದ ಬದಲು ತ್ರಾಮದ ಮೊಳೆಗಳು ಹೊರಬಂದ್ವು- ಚಾಮರಾಜನಗರದಲ್ಲೊಂದು ಅಚ್ಚರಿ!

    ಕಾಲಲ್ಲಿ ಗಾಯವಾದ್ರೆ ರಕ್ತದ ಬದಲು ತ್ರಾಮದ ಮೊಳೆಗಳು ಹೊರಬಂದ್ವು- ಚಾಮರಾಜನಗರದಲ್ಲೊಂದು ಅಚ್ಚರಿ!

    ಚಾಮರಾಜನಗರ: ಕಾಲಿಗೆ ಗಾಯವಾದರೆ ರಕ್ತ ಬರುವುದನ್ನು ನೋಡಿದ್ದೀರ. ಆದರೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ದೊಡ್ಡತಪ್ಪೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಕಾಲಿಗೆ ಗಾಯವಾಗಿದ್ದು, ತಾಮ್ರದ ಮೊಳೆಗಳು ಹೊರಬಂದಿವೆ.

    ಗ್ರಾಮದ ಮಾದಪ್ಪ ಎಂಬವರ ಕಾಲಿನಲ್ಲಿ ಗಾಯವಾದ ಜಾಗದಲ್ಲಿ ರಕ್ತದ ಬದಲು ತಾಮ್ರದ ಮೊಳೆಗಳು ಬರುತ್ತಿವೆ. ಕಳೆದ ಪೂರ್ಣಿಮೆಯಂದು ಜಮೀನಿನಿಂದ ಮನೆಗೆ ಬರುವ ವೇಳೆ ಮಾಟ ಮಾಡಿದ ಜಾಗದಲ್ಲಿ ಮಾದಪ್ಪ ಕಾಲಿಟ್ಟಿದ್ದಾರೆ. ಮಾದಪ್ಪ ಅವರಿಗೆ ಮಾಟಮಂತ್ರದ ಬಗ್ಗೆ ಹೆಚ್ಚು ನಂಬಿಕೆ ಇಲ್ಲದ ಕಾರಣ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಆದ್ರೆ ಒಂದು ದಿನದ ನಂತರ ಪಾದದಲ್ಲಿ ದೊಡ್ಡ ಗುಳ್ಳೆಯೊಂದು ಆಗಿದೆ.

    ಇದನ್ನು ಗುಣಪಡಿಸಿಕೊಳ್ಳಲು ವೈದ್ಯರ ಬಳಿ ಹೋದ ಸಂದರ್ಭದಲ್ಲಿ ಗುಳ್ಳೆಯನ್ನು ಒಡೆದು, ಔಷಧಿಯನ್ನು ನೀಡಿದ್ದಾರೆ. ಆದರೂ ಸಹ ಗಾಯ ಮಾತ್ರ ವಾಸಿಯಾಗಿರಲಿಲ್ಲ. ಮಂಗಳವಾರ ಅಮವಾಸ್ಯೆಯಾದ್ದರಿಂದ ಪತ್ನಿಯ ಒತ್ತಾಯಕ್ಕೆ ಮಣಿದು ಗುಂಡ್ಲುಪೇಟೆ ತಾಲೂಕಿನ ತವರೆಕಟ್ಟೆಯಲ್ಲಿರುವ ಮಹದೇಶ್ವರ ಸನ್ನಿಧಿಗೆ ಹೋಗಿದ್ದಾರೆ. ಅಲ್ಲಿನ ಅರ್ಚಕರು ಗಾಯದ ಮೇಲೆ ನಿಂಬೆ ರಸವನ್ನು ಬಿಟ್ಟ ಸಂದರ್ಭದಲ್ಲಿ ಎಲ್ಲರಿಗೂ ಆಶ್ಚರ್ಯವಾಗುವ ರೀತಿಯಲ್ಲಿ ಕಾಲಿನಿಂದ ಸುಮಾರು 30 ರಿಂದ 40 ತಾಮ್ರದ ಮೊಳೆಗಳು ಹೊರಬಂದಿವೆ.

  • ಕಾರು ಗುದ್ದಿದ ರಭಸಕ್ಕೆ ಮೇಲಕ್ಕೆ ಚಿಮ್ಮಿದ್ರು ಸವಾರರು: ಉಡುಪಿಯ ಭಯಾನಕ ಅಪಘಾತ ಸಿಸಿಟಿವಿಯಲ್ಲಿ ಸೆರೆ

    ಕಾರು ಗುದ್ದಿದ ರಭಸಕ್ಕೆ ಮೇಲಕ್ಕೆ ಚಿಮ್ಮಿದ್ರು ಸವಾರರು: ಉಡುಪಿಯ ಭಯಾನಕ ಅಪಘಾತ ಸಿಸಿಟಿವಿಯಲ್ಲಿ ಸೆರೆ

    ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ನಿಟ್ಟೂರಿನಲ್ಲಿ ಇನ್ನೋವಾ ಕಾರೊಂದು ಬೈಕಿಗೆ ಗುದ್ದಿದ ಪರಿಣಾಮ ಮೂವರು ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಭಾನುವಾರ ಬೆಳಗ್ಗೆ 10.30 ರ ವೇಳೆಗೆ ಬೈಕಿನಲ್ಲಿ ಮೂವರು ಸವಾರರು ನಿಟ್ಟೂರಿನ ಬಾಳಿಗಾ ಫಿಶ್‍ನೆಟ್ ಎದುರಿನಿಂದ ಕೊಡಂಕೂರು ಕಡೆಗೆ ಬಂದಿದ್ದಾರೆ. ರಾಷ್ಟ್ರೀಯ ಹೆದ್ದಾರಿ ದಾಟಿ ಹೋಗುತ್ತಿದ್ದಾಗ, ವೇಗವಾಗಿ ಬಂದ ಇನ್ನೋವಾ ಕಾರು ಬೈಕ್‍ ಗೆ ಡಿಕ್ಕಿ ಹೊಡೆದಿದೆ. ವೇಗದ ರಭಸಕ್ಕೆ ಬೈಕ್‍ ನಲ್ಲಿದ್ದ ಮೂವರು ಏಕಾಏಕಿ ಎಸೆಯಲ್ಪಟ್ಟಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಮೂವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕಾರು ಚಾಲಕ ಅಪಘಾತ ತಪ್ಪಿಸಲು ಪ್ರಯತ್ನಿಸಿದ್ದು, ಬೈಕ್‍ಗೆ ಡಿಕ್ಕಿಯಾದ ನಂತರ ಲಾರಿ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಕಾರು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಬೈಕ್ ನಲ್ಲಿದ್ದವರು ಕೊಡಂಕೂರು ನಿವಾಸಿಗಳಾಗಿದ್ದು ದೀಪಕ್, ಬಾಲು, ಅವಿನಾಶ್ ಎಂದು ಗುರುತಿಸಲಾಗಿದೆ.

    ಈ ಬಗ್ಗೆ ಉಡುಪಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಖಾಸಗಿ ಬಸ್ ಪಲ್ಟಿ- ಮಹಿಳೆ ಗಂಭೀರ

    ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಖಾಸಗಿ ಬಸ್ ಪಲ್ಟಿ- ಮಹಿಳೆ ಗಂಭೀರ

    – 20 ಪ್ರಯಾಣಿಕರು ಅಪಾಯದಿಂದ ಪಾರು

    ಹಾವೇರಿ: ಬೈಕ್ ಸವಾರನನ್ನ ತಪ್ಪಿಸಲು ಹೋಗಿ ಖಾಸಗಿ ಬಸ್ ಪಲ್ಟಿಯಾಗಿ ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿದ್ದು, ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಹಾವೇರಿಯಲ್ಲಿ ನಡೆದಿದೆ.

    ಜಿಲ್ಲೆಯ ರಾಣೇಬೆನ್ನೂರು ನಗರದ ಹೊರವಲಯದಲ್ಲಿರೋ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದ್ದು, ಖಾಸಗಿ ಬಸ್ ಬೆಂಗಳೂರಿನಿಂದ ಹುಬ್ಬಳ್ಳಿಯತ್ತ ಹೊರಟಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

    ಘಟನೆಯಲ್ಲಿ ಗಾಯಗೊಂಡವರನ್ನು ಕೂಡಲೇ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಇನ್ನು ಬಸ್ ನಲ್ಲಿದ್ದ 20 ಕ್ಕೂ ಅಧಿಕ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಸ್ಥಳಕ್ಕೆ ರಾಣೇಬೆನ್ನೂರು ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

    ರಾಣೇಬೆನ್ನೂರು ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಕ್ರೂಸರ್, ಟ್ರಕ್ ನಡುವೆ ಡಿಕ್ಕಿ- ಐವರು ಸಾವು, 8 ಮಂದಿಗೆ ಗಾಯ

    ಕ್ರೂಸರ್, ಟ್ರಕ್ ನಡುವೆ ಡಿಕ್ಕಿ- ಐವರು ಸಾವು, 8 ಮಂದಿಗೆ ಗಾಯ

    ಚಿತ್ರದುರ್ಗ: ಕ್ರೂಸರ್, ಟ್ರಕ್ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ ಐವರು ಸಾವನ್ನಪ್ಪಿದ್ದು, 8 ಮಂದಿಗೆ ಗಾಯವಾಗಿರುವ ಘಟನೆ ಚಿತ್ರದುರ್ಗ ಹೊರವಲಯದ ಸಿಬಾರದಲ್ಲಿ ನಡೆದಿದೆ.

    ಸಿದ್ದಾರ್ಥ, ರಾಕೇಶ್, ಶಿವಲಿಂಗು, ವಿನೋದ್ ಹಾಗು ಕ್ರೂಸರ್ ಚಾಲಕ ಶಿವಲಿಂಗು ಮೃತ ದುರ್ದೈವಿಗಳು. ಇಂದು ಬೆಳಗ್ಗೆ 7:30ಕ್ಕೆ ಈ ಅಪಘಾತದಲ್ಲಿ ಸಂಭವಿಸಿದೆ. ಮೃತರು ಸುಮಾರು 18 ರಿಂದ 24 ವರ್ಷದೊಳಗಿನ ಯುವಕರು ಎಂದು ಹೇಳಲಾಗಿದ್ದು, ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮುನ್ಯಾಳು ಗ್ರಾಮದವರು ಎಂದು ತಿಳಿದುಬಂದಿದೆ. ಮೈಸೂರು ಪ್ರವಾಸ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ಈ ಅವಘಡ ನಡೆದಿದೆ.

    8 ಮಂದಿ ಗಾಯಾಳುಗಳು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾರು ಬೈಕ್ ಡಿಕ್ಕಿ – ಹಳ್ಳಕ್ಕೆ ಉರುಳಿದ ಕಾರು, ಸವಾರನ ಎರಡು ಕಾಲು ಕಟ್

    ಕಾರು ಬೈಕ್ ಡಿಕ್ಕಿ – ಹಳ್ಳಕ್ಕೆ ಉರುಳಿದ ಕಾರು, ಸವಾರನ ಎರಡು ಕಾಲು ಕಟ್

    ಮಂಡ್ಯ: ಕಾರು ಮತ್ತು ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಸವಾರನ ಕಾಲು ಮುರಿದಿದ್ದು, ಕಾರು ಹಳ್ಳಕ್ಕೆ ಉರುಳಿರುವ ಘಟನೆ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಹೊಸಹಳ್ಳಿ ಬಳಿ ನಡೆದಿದೆ.

    21 ವರ್ಷದ ಸಂಜಯ್ ಕಾಲು ಮುರಿದುಕೊಂಡು ಗಾಯಗೊಂಡ ಸವಾರ. ಡಿಕ್ಕಿಯ ರಭಸಕ್ಕೆ ಕಾರು ಹಳ್ಳಕ್ಕೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳು ಸಂಜಯ್ ರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕಾರು ಕೆಆರ್‍ಎಸ್‍ನಿಂದ ಶ್ರೀರಂಗಪಟ್ಟಣದ ಕಡೆಗೆ ಬರುತ್ತಿತ್ತು. ಬೈಕ್  ಶ್ರೀರಂಗಪಟ್ಟಣದಿಂದ ಕೆಆರ್‍ಎಸ್ ಕಡೆಗೆ ಹೋಗುತ್ತಿತ್ತು. ಈ ಸಂದರ್ಭದಲ್ಲಿ ಹೊಸಹಳ್ಳಿ ರಸ್ತೆಯ ಒಂದು ತಿರುವಿನಲ್ಲಿ ವೇಗವಾಗಿ ಎರಡು ವಾಹನಗಳು ಬಂದು ಮುಖಾಮುಖಿ ಡಿಕ್ಕಿ ಹೊಡೆದಿವೆ. ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನ ಎರಡು ಕಾಲು ಕಟ್ ಆಗಿದ್ದು, ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಘಟನೆ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಳ್ಳಕ್ಕೆ ಬಿದ್ದಿರುವ ಕಾರನ್ನು ಮೇಲಕ್ಕೆ ಎತ್ತಲಾಗಿದೆ.

  • ಜಮೀನಿಗೆ ಹೋಗ್ತಿದ್ದಾಗ ಎತ್ತಿನಗಾಡಿಗೆ ಖಾಸಗಿ ಬಸ್ ಡಿಕ್ಕಿ- ರೈತ ಮಹಿಳೆ ಸಾವು

    ಜಮೀನಿಗೆ ಹೋಗ್ತಿದ್ದಾಗ ಎತ್ತಿನಗಾಡಿಗೆ ಖಾಸಗಿ ಬಸ್ ಡಿಕ್ಕಿ- ರೈತ ಮಹಿಳೆ ಸಾವು

    ಮಂಡ್ಯ: ಜಮೀನಿಗೆ ಹೋಗುತ್ತಿದ್ದ ಎತ್ತಿನಗಾಡಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಎತ್ತಿನಗಾಡಿ ಹಳ್ಳಕ್ಕೆ ಮಗುಚಿ ಬಿದ್ದು ಮಹಿಳೆ ಮೃತಪಟ್ಟಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ 40 ವರ್ಷದ ಜವನಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಶಂಕರ್ ಎಂಬುವರು ಗಾಯಗೊಂಡಿದ್ದಾರೆ. ಇದೇ ವೇಳೆ ಎತ್ತುಗಳು ಕೂಡ ಗಾಯಗೊಂಡಿವೆ. ಕೆಲಸಕ್ಕೆಂದು ಜಮೀನಿಗೆ ಹೋಗುತ್ತಿದ್ದ ವೇಳೆ ಖಾಸಗಿ ಬಸ್ ಎತ್ತಿನಗಾಡಿಯ ನೊಗಕ್ಕೆ ತಾಗಿದ್ದು, ಎತ್ತಿನಗಾಡಿ ಮಗುಚಿ ಬಿದ್ದು ಈ ಅವಘಡ ಸಂಭವಿಸಿದೆ.

    ಈ ಬಗ್ಗೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೊಸ ವರ್ಷಾಚರಣೆ ಮುಗಿಸಿ ಗೋವಾದಿಂದ ಬರುವಾಗ ಭೀಕರ ಅಪಘಾತ: ಮೂವರ ಸಾವು

    ಹೊಸ ವರ್ಷಾಚರಣೆ ಮುಗಿಸಿ ಗೋವಾದಿಂದ ಬರುವಾಗ ಭೀಕರ ಅಪಘಾತ: ಮೂವರ ಸಾವು

    ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ನಗರ ಸಮೀಪದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಈ ಅಪಘಾತ ನಡೆದಿದೆ. ಸಾವಿತ್ರಿ ಗುಪ್ತಾ(47), ಶೋಭಾ ಗುಪ್ತಾ(27) ಹಾಗೂ ಆರತಿ ಗುಪ್ತಾ(21) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಾಯಿ ಸೇರಿದಂತೆ ಇಬ್ಬರು ಮಕ್ಕಳ ಸಾವನ್ನಪ್ಪಿದ್ದು, ಸಾವಿತ್ರಿ ಗುಪ್ತಾ ಅವರ ಪತಿ, ಸಹೋದರ ಹಾಗೂ ಕಾರು ಚಾಲಕನಿಗೆ ಗಂಭಿರ ಗಾಯವಾಗಿದೆ.

    ಗಾಯಾಳುಗಳನ್ನು ಮಹಾರಾಷ್ಟ್ರದ ಕೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರು ಮತ್ತು ಗಾಯಾಳುಗಳು ಮುಂಬೈ ಮೂಲದವರಾಗಿದ್ದು, ಗೋವಾದಿಂದ ಹೊಸ ವರ್ಷಾಚರಣೆ ಮುಗಿಸಿ ಮುಂಬೈಗೆ ವಾಪಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

    ಸ್ಥಳಕ್ಕೆ ನಿಪ್ಪಾಣಿ ಶಹರ ಪಿಎಸ್‍ಐ ಶಶಿಕಾಂತ ವರ್ಮಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿಪ್ಪಾಣಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.