Tag: injury

  • ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಏರಿದ ಬಸ್

    ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಏರಿದ ಬಸ್

    ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿ ಬಸ್ ಡಿವೈಡರ್ ಮೇಲೆ ಏರಿದ ಘಟನೆ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಬಿಎಲ್‍ಡಿಇ ಕಾಲೇಜಿನ ಎದುರು ನಡೆದಿದೆ.

    ಇಂದು ನಸುಕಿನ ಜಾವ ಸುಮಾರು 4 ಗಂಟೆಗೆ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಈ ಅವಘಡದಲ್ಲಿ ಪ್ರಾಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಮೂರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಬಾಗೇವಾಡಿಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕೆಎ 36 ಎಫ್ 1370 ಸಂಖ್ಯೆಯ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಇದಾಗಿದೆ. ಪುಣೆ-ದೇವದುರ್ಗ ನಡುವೆ ಸಂಚರಿಸುವ ಬಸ್ ವಿಜಯಪುರದಿಂದ ಬಾಗೇವಾಡಿಗೆ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಏರಿದೆ.

    ಘಟನೆ ನಡೆದ ಸ್ಥಳಕ್ಕೆ ಬಸವನ ಬಾಗೇವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ವಿಸಿ ನಾಲೆಗೆ ಎತ್ತಿನಬಂಡಿ ಪಲ್ಟಿ: ಎತ್ತನ್ನ ರಕ್ಷಿಸಿ ಮಾನವೀಯತೆ ಮೆರೆದ ಸ್ಥಳೀಯರು

    ವಿಸಿ ನಾಲೆಗೆ ಎತ್ತಿನಬಂಡಿ ಪಲ್ಟಿ: ಎತ್ತನ್ನ ರಕ್ಷಿಸಿ ಮಾನವೀಯತೆ ಮೆರೆದ ಸ್ಥಳೀಯರು

    ಮಂಡ್ಯ: ಮೇವು ತುಂಬಿಕೊಂಡು ಬರುತ್ತಿದ್ದ ಎತ್ತಿನಗಾಡಿ ವಿಸಿ ನಾಲೆಗೆ ಪಲ್ಟಿಯಾಗಿ ಒಂದು ಎತ್ತು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ಮತ್ತೊಂದು ಎತ್ತನ್ನು ಸ್ಥಳೀಯರು ರಕ್ಷಿಸಿ ಮಾನವೀಯತೆ ಮೆರೆದಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಗಾಣದಹೊಸೂರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಗಿರಿಗೌಡ ತಮ್ಮ ಜಮೀನಿನಿಂದ ಎತ್ತಿನಗಾಡಿಯಲ್ಲಿ ಮೇವು ತುಂಬಿಕೊಂಡು ವಿಸಿ ನಾಲೆಯ ಏರಿಮೇಲೆ ಬರುತ್ತಿದ್ದರು. ಈ ಸಂದರ್ಭದಲ್ಲಿ ವಿಸಿ ನಾಲೆಗೆ ಹಾಕಿದ್ದ ಪಂಪ್ ಸೆಟ್ ಶಬ್ದಕ್ಕೆ ಬೆದರಿ ಎತ್ತುಗಳು ವಿಸಿ ನಾಲೆಯ ಕಡೆ ಏಕಾಏಕಿ ನುಗ್ಗಿದ ಎತ್ತುಗಳು ಗಾಡಿ ಸಮೇತ ಹರಿಯುತ್ತಿರುವ ನೀರಿನೊಳಗೆ ಬಿದ್ದಿವೆ.

    ಈ ಘಟನೆಯನ್ನು ಕಂಡ ಸ್ಥಳೀಯರು ಕೂಡಲೇ ವಿಸಿ ನಾಲೆಗೆ ಜಿಗಿದು ಒಂದು ಎತ್ತಿನ ಮೂಗುದಾರವನ್ನು ಕತ್ತರಿಸಿದ್ದಾರೆ. ತಕ್ಷಣ ಆ ಎತ್ತು ಈಜಿ ದಡ ಸೇರಿದೆ. ಆದರೆ ಮತ್ತೊಂದು ಎತ್ತಿನ ಮೂಗುದಾರವನ್ನು ಕತ್ತರಿಸಲು ಸಾಧ್ಯವಾಗದಿದ್ದರಿಂದ ಎತ್ತು ನೀರಿನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದೆ. ಅಪಘಾತದಲ್ಲಿ ರೈತ ಗಿರಿಗೌಡರಿಗೆ ತಲೆಯ ಭಾಗಕ್ಕೆ ಗಾಯವಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.

    ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿದ್ದು, ನಂತರ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಸ್ಥಳೀಯರ ಸಹಾಯದೊಂದಿಗೆ ವಿಸಿ ನಾಲೆಯಲ್ಲಿ ಮುಳುಗಿದ್ದ ಎತ್ತು ಹಾಗೂ ಗಾಡಿಯನ್ನು ಹೊರತೆಗೆದಿದ್ದಾರೆ.

     

  • ಬೊಲೆರೋ, KSRTC  ಮುಖಾಮುಖಿ ಡಿಕ್ಕಿ – ಇಬ್ಬರ ದುರ್ಮರಣ, 7 ಮಂದಿ ಗಂಭೀರ

    ಬೊಲೆರೋ, KSRTC ಮುಖಾಮುಖಿ ಡಿಕ್ಕಿ – ಇಬ್ಬರ ದುರ್ಮರಣ, 7 ಮಂದಿ ಗಂಭೀರ

    ಮೈಸೂರು: ಬೊಲೆರೋ ಮತ್ತು ಕೆಎಸ್‍ಆರ್ ಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೆ ಇಬ್ಬರು ಸಾವನ್ನಪ್ಪಿದ್ದು, 7 ಮಂದಿಗೆ ಗಾಯಗೊಂಡಿರುವ ಘಟನೆ ಮೈಸೂರು ತಾಲೂಕಿನ ಇಲವಾಲ ಬಳಿ ನಡೆದಿದೆ.

    ಬುಧವಾರ ನಗರದ ಇಲವಾಲದ ಆರ್ ಎಂಪಿ ಕ್ವಾಟರ್ಸ್ ಮುಂಭಾಗದಲ್ಲಿ ವಾಹನಗಳು ಮುಖಾಮುಖಿಯಾಗಿ ಅಘಫಾತ ಸಂಭವಿಸಿದೆ. ಕೆಎಸ್‍ಆರ್ ಟಿಸಿ ಬಸ್ ಮೈಸೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿತ್ತು. ಬೊಲೆರೋ ಕೇರಳದಿಂದ ಮೈಸೂರಿಗೆ ಬರುತ್ತಿತ್ತು. ಈ ಸಂದರ್ಭದಲ್ಲಿ ಇಲವಾಲ ಬಳಿ ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಎರಡು ವಾಹನಗಳ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿವೆ.

    ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ರಸ್ತೆ ಬಿಟ್ಟು ಹಳ್ಳಕ್ಕೆ ನುಗ್ಗಿದ KSRTC ಬಸ್ – 15 ಪ್ರಯಾಣಿಕರಿಗೆ ಗಾಯ

    ರಸ್ತೆ ಬಿಟ್ಟು ಹಳ್ಳಕ್ಕೆ ನುಗ್ಗಿದ KSRTC ಬಸ್ – 15 ಪ್ರಯಾಣಿಕರಿಗೆ ಗಾಯ

    ಚಿಕ್ಕಬಳ್ಳಾಪುರ: ಕೆಎಸ್‍ಆರ್ ಟಿಸಿ ಬಸ್ಸೊಂದು ರಸ್ತೆ ಬಿಟ್ಟು ಹಳ್ಳಕ್ಕೆ ನುಗ್ಗಿದ್ದು, ಸುಮಾರು 15 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆದಿದೆ.

    ಬಾಗೇಪಲ್ಲಿ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 7ರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಬಳಿ ಈ ಅವಘಡ ಸಂಭವಿಸಿದ್ದು, ಈ ಘಟನೆಯಲ್ಲಿ ಚಾಲಕ ಸೇರಿ 15 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.

    ಕೆಎಸ್‍ಆರ್ ಟಿಸಿ ಬಸ್ ಚಿಕ್ಕಬಳ್ಳಾಪುರ ದಿಂದ ಬಾಗೇಪಲ್ಲಿ ಗೆ ಸಂಚರಿಸುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ಬಸ್ ನ ಟೈರ್ ಸ್ಪೋಟಗೊಂಡು ಅಫಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದಲ್ಲಿ ಬಸ್ ನಲ್ಲಿದ್ದ 15 ಮಂದಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ನಾಲ್ವರಿಗೆ ಗಂಭೀರವಾದ ಗಾಯಗಳಾಗಿವೆ. ಬಸ್ ಚಾಲಕ ಸೇರಿದಂತೆ ನಾಲ್ವರನ್ನ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

    ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಬಸ್ ನ ಮುಂಭಾಗ ಜಖಂಗೊಂಡಿದ್ದು, ಗಾಜು ಪುಡಿ ಪುಡಿಯಾಗಿದೆ. ಆದರೆ ಅದೃಷ್ಟವಶಾತ್ ಬಸ್ ಪಲ್ಟಿಯಾಗಿಲ್ಲ. ಹೀಗಾಗಿ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.

  • ಗಂಡಾನೆ ದಾಳಿಯಿಂದ 1 ಕಣ್ಣು ಕಳೆದುಕೊಂಡು ಗುಂಪಿನಿಂದ ಬೇರ್ಪಟ್ಟ ಹೆಣ್ಣಾನೆ- ಅರಣ್ಯ ಇಲಾಖೆಯಿಂದ ರಕ್ಷಣಾ ಕಾರ್ಯ

    ಗಂಡಾನೆ ದಾಳಿಯಿಂದ 1 ಕಣ್ಣು ಕಳೆದುಕೊಂಡು ಗುಂಪಿನಿಂದ ಬೇರ್ಪಟ್ಟ ಹೆಣ್ಣಾನೆ- ಅರಣ್ಯ ಇಲಾಖೆಯಿಂದ ರಕ್ಷಣಾ ಕಾರ್ಯ

    ಕಾರವಾರ: ಗಾಯಗೊಂಡು ಗುಂಪಿನಿಂದ ಬೇರ್ಪಟ್ಟ ಹೆಣ್ಣಾನೆಯೊಂದು ಕಾಡಿನಿಂದ ನಾಡಿಗೆ ಬಂದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ನಡೆದಿದೆ.

    ಇಲ್ಲಿನ ಬಿಸಲಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉಳ್ಳಾಲದಲ್ಲಿ ಕಾಣಿಸಿಕೊಂಡ ಹೆಣ್ಣಾನೆ ಜನರನ್ನು ಭಯಭೀತಗೊಳಿಸಿತ್ತು. ಹತ್ತು ವರ್ಷದ ಹೆಣ್ಣಾನೆಯೊಂದು ಗಂಡಾನೆಯ ದಾಳಿಯಿಂದಾಗಿ ತನ್ನ ಒಂದು ಕಣ್ಣನ್ನು ಕಳೆದುಕೊಂಡಿದ್ದಲ್ಲದೇ ದೇಹದ ತುಂಬಾ ತಿವಿದ ಗಾಯಗಳಾಗಿದ್ದು, ಕಾಡಿನಲ್ಲಿ ಗುಂಪಿನೊಂದಿಗೆ ಹೋಗಲಾರದೇ ನಾಡಿಗೆ ಬಂದಿದೆ.

    ಕಳೆದ ಎರಡು ದಿನಗಳಿಂದ ಉಳ್ಳಾಲದ ಹಳ್ಳಿಗಳಲ್ಲಿ ಆನೆ ಸಂಚರಿಸುತ್ತಿರುವುದನ್ನು ಗಮನಿಸಿದ ಗ್ರಾಮದ ಜನ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಇದೀಗ ಅರಣ್ಯ ಸಿಬ್ಬಂದಿ ಗಾಯಗೊಂಡಿರುವ ಹೆಣ್ಣಾನೆಯನ್ನು ಹಿಡಿಯಲು ಮುಂದಾಗಿದೆ. ಶಿವಮೊಗ್ಗ ಜಿಲ್ಲೆಯ ಸಕ್ರೇಬೈಲಿನಿಂದ ಡಾ.ವಿನಯ್ ರವರ ನೇತೃತ್ವದಲ್ಲಿ ವಿಶೇಷ ಪರಿಣಿತಿ ತಂಡವನ್ನ ಕರೆಸಲಾಗಿದೆ.

    ಸದ್ಯ ಪ್ರಾಥಮಿಕವಾಗಿ ಆನೆಗೆ ಮದ್ದು ನೀಡಲಾಗಿದ್ದು ಮಧ್ಯಾಹ್ನದ ಬಳಿಕ ಆನೆಯನ್ನು ಹಿಡಿದು ಸಕ್ರೆಬೈಲಿನ ಆನೆ ಬಿಡಾರಕ್ಕೆ ಕೊಂಡೊಯ್ದು ಚಿಕಿತ್ಸೆ ನೀಡಲಿದ್ದಾರೆ.

  • ಕಾಲುವೆಗೆ ಉರುಳಿ ಬಿದ್ದ KSRTC ಬಸ್- ಚಾಲಕ, ನಿರ್ವಾಹಕ, ಪ್ರಯಾಣಿಕರಿಗೆ ಗಾಯ

    ಕಾಲುವೆಗೆ ಉರುಳಿ ಬಿದ್ದ KSRTC ಬಸ್- ಚಾಲಕ, ನಿರ್ವಾಹಕ, ಪ್ರಯಾಣಿಕರಿಗೆ ಗಾಯ

    ಬಾಗಲಕೋಟೆ: ಕೆಎಸ್‍ಆರ್ ಟಿಸಿ ಬಸ್ ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಚಾಲಕ, ನಿರ್ವಾಹಕ ಸೇರಿ ಆರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

    ಕೆಎಸ್‍ಆರ್  ಟಿಸಿ ಬಸ್ ಇಂದು ಮುಂಜಾನೆ ಸಾವಳಗಿಯಿಂದ ಜಮಖಂಡಿಗೆ ತೆರಳುತ್ತಿತ್ತು. ಈ ವೇಳೆ ರಸ್ತೆ ಬದಿಯ ಗರಸು ಮಣ್ಣಿನಲ್ಲಿ ಬಸ್ ಹತ್ತಿದ್ದರಿಂದ ಕಾಲುವೆಗೆ ಉರುಳಿದೆ. ಬಸ್ ಕಾಲುವೆಗೆ ಬಿದ್ದ ಸುದ್ದಿಯನ್ನು ತಿಳಿದ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ  ಚಿಕ್ಕ ಕಾಲುವೆಗೆ ಇಳಿದು ಬಸ್ ನಲ್ಲಿದ್ದವರನ್ನ ರಕ್ಷಣೆ ಮಾಡಿದ್ದಾರೆ.

    ಅಪಘಾತದಲ್ಲಿ ಚಾಲಕ, ನಿರ್ವಾಹಕ ಸೇರಿ 6 ಪ್ರಯಾಣಿಕರಿಗೆ ಗಾಯಗಾಳಾಗಿದ್ದು, ಗಾಯಾಳುಗಳನ್ನ 2 ಅಂಬುಲೆನ್ಸ್ ಮೂಲಕ ಜಮಖಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣಪುಟ್ಟ ಗಾಯಗಳನ್ನ ಬಿಟ್ಟರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

  • ಹೋರಿ ಬೆದರಿಸುವ ಸ್ಪರ್ಧೆ – ಎತ್ತು ತಿವಿದು ಯುವಕ ಸಾವು

    ಹೋರಿ ಬೆದರಿಸುವ ಸ್ಪರ್ಧೆ – ಎತ್ತು ತಿವಿದು ಯುವಕ ಸಾವು

    ಹಾವೇರಿ: ಜಾನಪದ ಕ್ರೀಡೆ ಹೋರಿ ಬೆದರಿಸೋ ಸ್ಪರ್ಧೆ ವೇಳೆ ಗಾಯಗೊಂಡಿದ್ದ ಯುವಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ನಡೆದಿದೆ.

    ಹಾವೇರಿ ನಗರದ ನಾಗೇಂದ್ರನಮಟ್ಟಿ ನಿವಾಸಿ ಯಲ್ಲಪ್ಪ ದೊಡ್ಡತಳವಾರ(20) ಮೃತ ಯುವಕ. ಸ್ಪರ್ಧೆ ವೀಕ್ಷಿಸುತ್ತಿದ್ದಾಗ ಹೋರಿ ತಿವಿದು ಗಂಭೀರವಾಗಿ ಗಾಯಗೊಂಡಿದ್ದ ಯಲ್ಲಪ್ಪ ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

    ಸೋಮವಾರ ಹಾನಗಲ್  ಪಟ್ಟಣದಲ್ಲಿ ನಡೆದ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆ ನಡೆಯುತ್ತಿತ್ತು. ಈ ಸ್ಪರ್ಧೆಯನ್ನು ವೀಕ್ಷಿಸುತ್ತಿದ್ದ ವೇಳೆ ಯಲ್ಲಪ್ಪನ ತೊಡೆಯ ಭಾಗಕ್ಕೆ ಹೋರಿ ಕೊಂಬಿನಿಂದ ತಿವಿದಿತ್ತು. ನಂತರ ಗಂಭೀರವಾಗಿ ಗಾಯಗೊಂಡಿದ್ದು, ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದನು. ತಕ್ಷಣ ಯಲ್ಲಪ್ಪ ನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಮೃತಪಟ್ಟಿದ್ದಾನೆ.

    ಈ ಘಟನೆ ಸಮಬಂಧ ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಹಾನಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನು ಓದಿ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ದುರಂತ – ಹೋರಿ ತಿವಿದು ಓರ್ವ ಸಾವು

  • ಪರೀಕ್ಷೆಗೆ ಹೋಗುವಾಗ ಅಪಘಾತ – ಕೈಯಲ್ಲಿ ಡ್ರಿಪ್ಸ್ ಹಾಕೊಂಡೆ  SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ

    ಪರೀಕ್ಷೆಗೆ ಹೋಗುವಾಗ ಅಪಘಾತ – ಕೈಯಲ್ಲಿ ಡ್ರಿಪ್ಸ್ ಹಾಕೊಂಡೆ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ

    ಪಾಟ್ನಾ: ಪರೀಕ್ಷೆಗೆ ಹೋಗುವಾಗ ಅಪಘಾತ ಸಂಭವಿಸಿದ್ದು, ಕೊನೆಗೆ ಕೈಯಲ್ಲಿ ಡ್ರಿಪ್ಸ್ ಹಾಕಿಕೊಂಡೆ ವಿದ್ಯಾರ್ಥಿನಿಯೊಬ್ಬರು SSLC ಪರೀಕ್ಷೆಯನ್ನು ಬರೆದಿದ್ದಾಳೆ.

    ಶ್ವೇತಾ ಕುಮಾರಿ ಪರೀಕ್ಷೆ ಬರೆದ ಸಾಹಸಿ ವಿದ್ಯಾರ್ಥಿನಿ. ಈಕೆ ಬಿಹಾರದ ಶಾರೈರಾಂಜನ್ ಪೊಲೀಸ್ ಠಾಣೆ ಪ್ರದೇಶದ ಅಡಿಯಲ್ಲಿ ಬರುವ ಗುರ್ಮ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.


    ಬಿಹಾರದಲ್ಲಿ 10ನೇ ತರಗತಿಯ ಬೋರ್ಡ್ ಪರೀಕ್ಷೆ ನಡೆಯುತ್ತಿದೆ. ಶ್ವೇತಾ ಕುಮಾರಿ ಶನಿವಾರ ಮೋಹನ್ಪುರದಲ್ಲಿರುವ ತನ್ನ ಶಾಲೆಗೆ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದಳು. ಈ ಸಂದರ್ಭದಲ್ಲಿ ಬಿಹಾರದ ಸಮಸ್ತಿಪುರದಲ್ಲಿ ವೇಗವಾಗಿ ಬೋಲೆರೊ ಬಂದು ಡಿಕ್ಕಿ ಹೊಡೆದಿದೆ. ಇದರಿಂದ ಶ್ವೇತಾ ಕುಮಾರಿ ತೀವ್ರವಾಗಿ ಗಾಯಗೊಂಡಿದ್ದಾಳೆ.

    ಅಪಘಾತದಲ್ಲಿ ಗಾಯಗೊಂಡ ಶ್ವೇತಾ ಕುಮಾರಿಯನ್ನು ಸಹೋದರ ಮತ್ತು ಇತರರ ಸಹಾಯದಿಂದ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆದರೆ ಆಕೆ ನಾನು ಪರೀಕ್ಷೆ ಬರೆಯಲು ಹೋಗಬೇಕು ಎಂದು ಹೇಳಿದ್ದಾಳೆ. ಅಷ್ಟೇ ಅಲ್ಲದೇ ತನ್ನ ಸಹೋದರನ ಬಳಿ ನಾನು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡು ಎಂದು ಮನವಿ ಮಾಡಿಕೊಂಡಿದ್ದಳು. ಕೊನೆಗೆ ಆಕೆಯ ಬೇಡಿಕೆಯನ್ನು ಕುಟುಂಬವು ಸಹ ಒಪ್ಪಿಕೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಸ್ಥಿತಿಯಲ್ಲಿಯೇ ಅಂಬುಲೆನ್ಸ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ.

    ಪರೀಕ್ಷೆ ಬರೆಯುವಾಗ ಆಕೆಗೆ ಏನಾದರೂ ತೊಂದರೆ ಯಾಗಬಹುದು ಎಂದು ಮುಂಜಾಗೃತ ಕ್ರಮವಾಗಿ ಆಕೆಗೆ ಸಹಾಯ ಮಾಡಲು ಮೂವರು ಮಹಿಳೆಯರನ್ನು ಕೂಡ ನಿಯೋಜಿಸಲಾಗಿತ್ತು. ಪರೀಕ್ಷಾ ಕೇಂದ್ರದಲ್ಲಿ ಒಂದು ಕಾಲಿಗೆ ಬ್ಯಾಂಡೇಜ್ ಮತ್ತು ಒಂದು ಕೈಯಲ್ಲಿ ಡ್ರಿಪ್ಸ್ ಹಾಕಿಕೊಂಡೆ 10 ನೇ ಬೋರ್ಡ್ ಪರೀಕ್ಷೆಯನ್ನು ಬರೆದಿದ್ದಾಳೆ.

  • ಕಬ್ಬು ತುಂಬಿದ ಎತ್ತಿನಗಾಡಿಗೆ ಹಿಂದಿನಿಂದ ಕಾರು ಡಿಕ್ಕಿ – ಎತ್ತಿನ ಕಾಲು ಮುರಿತ

    ಕಬ್ಬು ತುಂಬಿದ ಎತ್ತಿನಗಾಡಿಗೆ ಹಿಂದಿನಿಂದ ಕಾರು ಡಿಕ್ಕಿ – ಎತ್ತಿನ ಕಾಲು ಮುರಿತ

    ಮಂಡ್ಯ: ಕಬ್ಬು ತುಂಬಿದ ಎತ್ತಿನಗಾಡಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದು ಎತ್ತಿಗೆ ಕಾಲು ಮುರಿದಿದ್ದು, ಮತ್ತೊಂದು ಎತ್ತಿಗೆ ಗಾಯವಾಗಿರುವ ಘಟನೆ ಮದ್ದೂರು ತಾಲೂಕಿನ ಹುಲಿಗೆರೆಪುರ ಗೇಟ್ ಬಳಿ ನಡೆದಿದೆ.

    ಇಂದು ಮುಂಜಾನೆ ಕೆಎಂ ದೊಡ್ಡಿ ಮದ್ದೂರು ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಎತ್ತಿನಗಾಡಿ ಕಬ್ಬು ತುಂಬಿಕೊಂಡು ಕೆ.ಎಂ ದೊಡ್ಡಿಯಲ್ಲಿದ್ದ ಸಕ್ಕರೆ ಕಾರ್ಖಾನೆಗೆ ಹೋಗುತ್ತಿತ್ತು. ಕಾರು ಚಾಲಕ ಮದ್ದೂರಿನಿಂದ ವೇಗವಾಗಿ ದೊಡ್ಡಿ ಕಡೆ ಹೋಗುತ್ತಿದ್ದನು. ಆದರೆ ಕಾರು ಚಾಲಕನ ನಿಯಂತ್ರಣ ತಪ್ಪಿ ಎತ್ತಿನಗಾಡಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

    ಅಪಘಾತದಲ್ಲಿ ಎತ್ತಿನಗಾಡಿ ಓಡಿಸುತ್ತಿದ್ದ ರೈತ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಘಟನೆ ಸಂಬಂಧ ಕೆ.ಎಂ ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಟ್ಯಾಂಕರ್ ಲಾರಿ, ಬೈಕ್ ನಡುವೆ ಭೀಕರ ಅಪಘಾತ- ಸವಾರರಿಬ್ಬರ ದುರ್ಮರಣ

    ಟ್ಯಾಂಕರ್ ಲಾರಿ, ಬೈಕ್ ನಡುವೆ ಭೀಕರ ಅಪಘಾತ- ಸವಾರರಿಬ್ಬರ ದುರ್ಮರಣ

    ದಾವಣಗೆರೆ: ಟ್ಯಾಂಕರ್ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಸ್ಥಳದಲ್ಲಿ ಸಾವನ್ನಪ್ಪಿ, ಮತ್ತೊಬ್ಬನಿಗೆ ಗಂಭೀರ ಗಾಯವಾದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಳ್ಳಿ ತಾಲೂಕು ಟಿ.ಬಿ ಸರ್ಕಲ್ ಬಳಿ ನಡೆದಿದೆ.

    ಆದರ್ಶ್ (24) ಹಾಗೂ ಗಿರೀಶ್ (26) ಸಾವನ್ನಪ್ಪಿದ ದುರ್ದೈವಿಗಳಾಗಿದ್ದು, ಇನ್ನೊಬ್ಬ ಪ್ರದೀಪ್ (25) ನಿಗೆ ಗಂಭೀರ ಗಾಯವಾಗಿ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಗೋವಿನ ಕೋವಿ ಗ್ರಾಮದ ನಿವಾಸಿಗಳಾಗಿದ್ದು, ಕಳೆದ ರಾತ್ರಿ ಹೊನ್ನಾಳಿಯಲ್ಲಿ ನಡೆದ ಸಂಗೋಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುವಾಗ ಈ ಅಪಘಾತ ಸಂಭವಿಸಿದೆ.

    ಸ್ಥಳಕ್ಕೆ ಹೊನ್ನಾಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.