Tag: injury

  • 25 ಪ್ರಯಾಣಿಕರಿದ್ದ ಖಾಸಗಿ ಬಸ್ ಪಲ್ಟಿ

    25 ಪ್ರಯಾಣಿಕರಿದ್ದ ಖಾಸಗಿ ಬಸ್ ಪಲ್ಟಿ

    ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿರುವ ಘಟನೆ ಜಿಲ್ಲೆಯ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಅರಬೈಲ್ ಘಟ್ಟದಲ್ಲಿ ನಡೆದಿದೆ.

    ಎಸ್‍ಎಆರ್‍ಎಸ್ ಕಂಪೆನಿಗೆ ಸೇರಿದ ಬಸ್ ಬೆಂಗಳೂರಿನಿಂದ ಗೋವಾ ಕಡೆಗೆ ತೆರಳುತ್ತಿತ್ತು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟದಲ್ಲಿ ತಿರುವುಗಳು ಅಧಿಕವಾಗಿದ್ದರಿಂದ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ.

    ಈ ಬಸ್ಸಿನಲ್ಲಿ 25 ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಅದೃಷ್ಟವಶಾತ್ ಈ ಅಪಘಾತದಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಅಪಘಾತದಲ್ಲಿ ಸಣ್ಣಪುಟ್ಟದಾಗಿ ಗಾಯಗೊಂಡಿದ್ದ ಗಾಯಾಳುಗಳನ್ನು ಸಮೀಪದ ಯಲ್ಲಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸಂಬಂಧ ಯಲ್ಲಾಪುರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾಲು ಕಳೆದುಕೊಂಡರೂ ಪ್ರೀತಿ ಕೈ ಹಿಡಿಯಿತು – ಆಸ್ಪತ್ರೆಯಲ್ಲೇ ಮದ್ವೆಯಾದ ಜೋಡಿ

    ಕಾಲು ಕಳೆದುಕೊಂಡರೂ ಪ್ರೀತಿ ಕೈ ಹಿಡಿಯಿತು – ಆಸ್ಪತ್ರೆಯಲ್ಲೇ ಮದ್ವೆಯಾದ ಜೋಡಿ

    ಚೆನ್ನೈ: ಪ್ರೀತಿ ಶಾಶ್ವತ ಅನ್ನೋ ಮಾತೇ ಇದೆ. ನಿಜವಾಗಿ ಪ್ರೀತಿಸಿದ್ದರೆ ಎಂತಹ ಕಠಿಣ ಸಂದರ್ಭಗಳಲ್ಲೂ ಜೋಡಿಗಳು ಒಬ್ಬರಿಗೊಬ್ಬರು ಆಸರೆ ಆಗಿರುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಯುವ ಜೋಡಿಯೊಂದು ಕಾಲು ಕಳೆದುಕೊಂಡಿದ್ದರೂ ಆಸ್ಪತ್ರೆಯಲ್ಲಿ ಮದುವೆಯಾಗಿದ್ದಾರೆ.

    ಶಿಲ್ಪಾ ಮತ್ತು ವಿಜಯ್ ವೆಲ್ಲೋರ್ ನ ವನಿಯಂಬಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ವಿವಾಹವಾಗಿದ್ದಾರೆ. ಜನವರಿ 23ರಂದು ವಿಜಯ್ ರೈಲಿನಿಂದ ಕೆಳಕ್ಕೆ ಬಿದ್ದು ಕಾಲುಗಳನ್ನೇ ಕಳೆದುಕೊಂಡಿದ್ದರು. ಸದ್ಯ ವನಿಯಂಬಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ಆಸ್ಪತ್ರೆಯಲ್ಲಿ ಶಿಲ್ಪಾ ಹಾಗೂ ವಿಜಯ್ ವಿವಾಹ ನೆರವೇರಿದೆ.

    ನಡೆದಿದ್ದೇನು?
    ಶಿಲ್ಪಾ ಮೂಲತಃ ಊಟಿಯವರು. ಕೊಯಂಬತ್ತೂರು ಕಾಲೇಜಿನಲ್ಲಿ ಬಿಎಸ್ ಸಿ ಓದುತ್ತಿದ್ದಾಗ ವಿಜಯ್ ಪರಿಚಯವಾಗಿತ್ತು. ವಿಜಯ್ ಕೊಯಂಬತ್ತೂರಿನಲ್ಲಿ ಡೇಟಾ ಎಂಟ್ರಿ ಕೆಲಸ ಮಾಡುತ್ತಿದ್ದರು. ಶಿಲ್ಪಾ ಸಹ ಕೆಲಸ ಹುಡುಕುತ್ತಿದ್ದರು. ಬೆಂಗಳೂರಿಗೆ ಸಂದರ್ಶನಕ್ಕಾಗಿ ಬಂದಿದ್ದ ವಿಜಯ್ ವಾಪಸ್ ತೆರಳುವ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಬಂಗಾರಪೇಟೆ ಸಮೀಪದಲ್ಲಿ ಆಕಸ್ಮಿಕವಾಗಿ ಟ್ರೈನ್ ನಿಂದ ಬಿದ್ದಿದ್ದಾರೆ.

    ತಕ್ಷಣ ವಿಜಯ್ ಗೆ ಕರ್ನಾಟಕದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ನಂತರ ವಿಜಯ್ ಅವರನ್ನು ವಾನಿಯಂಬಾಡಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಸದ್ಯ ವಿಜಯ್‍ಗೆ ಫಿಸಿಯೋಥೆರಪಿ ನಡೆಯುತ್ತಿದ್ದು, ಶೀಘ್ರದಲ್ಲೇ ವಾಕರ್ ಸಹಾಯದಿಂದ ನಡೆದಾಡಬಲ್ಲರು ಅಂತಾ ವೈದ್ಯರು ತಿಳಿಸಿದ್ದಾರೆ.

    ಈ ಅಪಘಾತದ ಬಳಿಕ ಮದುವೆಗೆ ಶಿಲ್ಪಾಳ ತಾಯಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದ್ರೆ ಪೋಷಕರ ಮಾತನ್ನು ಲೆಕ್ಕಿಸದೇ ಶಿಲ್ಪಾ ತಾನು ಮನಸಾರೆ ಪ್ರೀತಿಸಿದ ಯುವಕನನ್ನು ಆಸ್ಪತ್ರೆಯಲ್ಲೇ ವಿವಾಹವಾಗಿದ್ದಾರೆ. ಆಸ್ಪತ್ರೆಯಲ್ಲಿದ್ದ ವೈದ್ಯರು, ಸಿಬ್ಬಂದಿ ನವದಂಪತಿಗೆ ಶುಭ ಕೋರಿದ್ದಾರೆ.

    ಶಿಲ್ಪಾ ಮತ್ತು ವಿಜಯ್ ತಮ್ಮ ಶಿಕ್ಷಣ ಮುಗಿದ ಮೇಲೆ ಕುಟುಂಬದವರ ಒಪ್ಪಿಗೆ ಮೇರೆಗೆ ಮದುವೆಯಾಗಬೇಕು ಎಂದುಕೊಂಡಿದ್ದರು ಎಂದು ಶಿಲ್ಪಾಳ ಸಂಬಂಧಿಕರು ತಿಳಿಸಿದ್ದಾರೆ.

  • ಪಿಸ್ತೂಲ್ ನಿಂದ ಪೊಲೀಸರ ಮೇಲೆಯೇ ಫೈರಿಂಗ್ ಮಾಡಿದ ಆರೋಪಿಗಳ ಕಾಲಿಗೆ ಗುಂಡು

    ಪಿಸ್ತೂಲ್ ನಿಂದ ಪೊಲೀಸರ ಮೇಲೆಯೇ ಫೈರಿಂಗ್ ಮಾಡಿದ ಆರೋಪಿಗಳ ಕಾಲಿಗೆ ಗುಂಡು

    ಬೆಂಗಳೂರು: ಭಾನುವಾರ ಸಿಲಿಕಾನ್ ಸಿಟಿಯಲ್ಲಿ ಪೊಲೀಸರ ಕಾರ್ಯಚರಣೆ ಶುರುವಾಗಿದ್ದು, ಇಬ್ಬರು ರೌಡಿಶೀಟರ್ ಮೇಲೆ ಗುಂಡು ಹಾರಿಸಿದ್ದಾರೆ.

    ಬೆಂಗಳೂರು ಹೊರವಲಯದಲ್ಲಿ ತಲಘಟ್ಟಪುರ ಪೊಲೀಸರು ಇಬ್ಬರು ರೌಡಿಶೀಟರ್ಸ್ ಮೇಲೆ ಶೂಟೌಟ್ ಮಾಡಿದ್ದಾರೆ. ಆರೋಪಿಗಳಾದ ಕೆಂಬತ್ತಹಳ್ಳಿ ಪರಮೇಶ್ ಮತ್ತು ಆತನ ಸಹಚರ ಸಂತೋಷ್ ಕಾಲಿಗೆ ಗುಂಡು ಹಾರಿಸಲಾಗಿದೆ.

    ಇಬ್ಬರು ರೌಡಿಶೀಟರ್ ಮೇಲೆ ಕೊಲೆ ಕೇಸ್ ದಾಖಲಾಗಿತ್ತು. ಈ ಸಂದರ್ಭದಲ್ಲಿ ಪರಮೇಶ್ ನನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆಯೇ ಪಿಸ್ತೂಲ್ ನಿಂದ ಫೈರಿಂಗ್ ಮಾಡಿದ್ದಾರೆ. ಈ ದಾಳಿಯಲ್ಲಿ ಮುಖ್ಯ ಪೇದೆ ಸುರೇಶ್ ಮತ್ತು ಪೇದೆ ನೇಮಿನಾಥ್‍ಗೆ ಗಾಯವಾಗಿದೆ. ಇದರಿಂದ ಆತಂಕಗೊಂಡ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಸದ್ಯಕ್ಕೆ ಆರೋಪಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರು ಪಲ್ಟಿ – ಓರ್ವ ವಿದ್ಯಾರ್ಥಿ ದುರ್ಮರಣ, ನಾಲ್ವರು ಗಂಭೀರ

    ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರು ಪಲ್ಟಿ – ಓರ್ವ ವಿದ್ಯಾರ್ಥಿ ದುರ್ಮರಣ, ನಾಲ್ವರು ಗಂಭೀರ

    ರಾಮನಗರ: ರಸ್ತೆ ಅಪಘಾತದಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ರಾಯಸಂದ್ರ ಗೇಟ್ ಬಳಿ ನಡೆದಿದೆ,

    ಸರಂದೀಪ್ ಸಿನ್ಹಾ(23) ಮೃತ ವಿದ್ಯಾರ್ಥಿ. ಈತ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ. ಅಪಘಾತದಲ್ಲಿ ಗಾಯಗೊಂಡಿರುವ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಐವರು ವಿದ್ಯಾರ್ಥಿಗಳು ಹೊರ ರಾಜ್ಯದವರು ಎಂದು ಗುರುತಿಸಲಾಗಿದೆ.

    ಈ ಐವರು ಬೆಂಗಳೂರು ಕ್ರೈಸ್ಟ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕಾಲೇಜು ರಜೆ ಇದ್ದ ಕಾರಣ ಬಿಳಿಗಿರಿ ರಂಗನಬೆಟ್ಟಕ್ಕೆ ಕಾರಿನಲ್ಲಿ ಹೋಗಿದ್ದಾರೆ. ಆದರೆ ಮರಳಿ ಬರುವಾಗ ಬೆಂಗಳೂರು- ಕನಕಪುರ ಮಾರ್ಗ ಮಧ್ಯೆ ಇರುವ ರಾಯಸಂದ್ರ ಗೇಟ್ ಬಳಿ ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿದೆ. ಪರಿಣಾಮ ಸರಂದೀಪ್ ಸಿನ್ಹಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

    ಅಪಾಘತದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ವಿದ್ಯಾರ್ಥಿಯ ದೇಹವನ್ನು ಬೆಂಗಳೂರು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕನಕಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕ್ರೂಸರ್, ಕಾರ್, 4 ಬೈಕ್ ಗಳಿಗೆ ಡಿಕ್ಕಿ ಹೊಡೆದ ಟೆಂಪೋ – ಬೈಕ್ ಸವಾರನ ಕಾಲು ಕಟ್

    ಕ್ರೂಸರ್, ಕಾರ್, 4 ಬೈಕ್ ಗಳಿಗೆ ಡಿಕ್ಕಿ ಹೊಡೆದ ಟೆಂಪೋ – ಬೈಕ್ ಸವಾರನ ಕಾಲು ಕಟ್

    ಬೆಳಗಾವಿ: ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್, ಕಾರು ಮತ್ತು ನಾಲ್ಕು ಬೈಕ್ ಗಳು ಡಿಕ್ಕಿಯಾದ ಪರಿಣಾಮ ಬೈಕ್ ಸವಾರನ ಕಾಲು ಕಟ್ ಆಗಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ್ ಕ್ರಾಸ್ ಬಳಿ ಭೀಕರ ಸರಣಿ ಅಪಘಾತ ಸಂಭವಿಸಿದೆ.

    ಟೆಂಪೋ ವಿಜಯಪುರದಿಂದ ಅಥಣಿ ಕಡೆಗೆ ಬರುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕ್ರೂಸರ್, ಕಾರು ಮತ್ತು ನಾಲ್ಕು ಬೈಕ್ ಗಳಿಗೆ ಡಿಕ್ಕಿಯಾಗಿದೆ. ಇದರಿಂದ ಬೈಕ್ ಸವಾರನ ಕಾಲು ಕಟ್ ಆಗಿದ್ದು, ಉಳಿದ ಬೈಕ್ ಸವಾರರ ಪರಿಸ್ಥಿತಿ ಚಿಂತಾಜನಕವಾಗಿದೆ.

    ಚಾಲಕನ ನಿಯಂತ್ರಣ ತಪ್ಪಿ ಈ ಸರಣಿ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರರು ಬಿದ್ದು ನರಳಾಡುತ್ತಿದ್ದರು. ಆದರೆ ಅಪಘಾತ ನಡೆದು ಅರ್ಧ ಗಂಟೆಯಾದರೂ ಸಹ ಸ್ಥಳಕ್ಕೆ ಆಂಬುಲೆನ್ಸ್ ಬರಲಿಲ್ಲ. ನಂತರ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಘಟನೆ ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಟೆಂಪೋ ಚಾಲಕ ಭಯಗೊಂಡು ಪರಾರಿಯಾಗಿದ್ದಾನೆ.

  • ಖಾಸಗಿ ಬಸ್, ಜೀಪ್ ಮುಖಾಮುಖಿ ಡಿಕ್ಕಿ – ಮೂವರಿಗೆ ಗಂಭೀರ ಗಾಯ

    ಖಾಸಗಿ ಬಸ್, ಜೀಪ್ ಮುಖಾಮುಖಿ ಡಿಕ್ಕಿ – ಮೂವರಿಗೆ ಗಂಭೀರ ಗಾಯ

    ಮಡಿಕೇರಿ: ಖಾಸಗಿ ಬಸ್ ಮತ್ತು ಜೀಪ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಜೀಪ್ ನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೋಪ್ಪ ಗ್ರಾಮದಲ್ಲಿ ನಡೆದಿದೆ.

    ಶ್ರೀ ಉಮಾಮಹೇಶ್ವರಿ ದೇವಾಲಯದ ಬಳಿ ಈ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಖಾಸಗಿ ಬಸ್ ಬೆಂಗಳೂರಿನಿಂದ ಕಣ್ಣನೂರಿಗೆ ಹೋಗುತ್ತಿತ್ತು. ಜೀಪ್ ವಿರುದ್ಧ ದಿಕ್ಕಿನಿಂದ ಅಂದರೆ ಬೆಂಗಳೂರು ಕಡೆಗೆ ಹೋಗುತ್ತಿತ್ತು.

    ಈ ವೇಳೆ ಗೋಣಿಕೋಪ್ಪ ಗ್ರಾಮದ ಬಳಿ ವೇಗವಾಗಿ ಬಂದು ಎರಡು ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದಿವೆ. ಪರಿಣಾಮ ಜೀಪ್ ನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಗಿದೆ. ಈ ಬಗ್ಗೆ ಗೋಣಿಕೋಪ್ಪ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮದ್ವೆ ಮುಗಿಸಿಕೊಂಡು ಬರುತ್ತಿದ್ದಾಗ ಬೆಂಗ್ಳೂರು ಪೊಲೀಸರಿದ್ದ ಕಾರು ದಾವಣಗೆರೆಯಲ್ಲಿ ಪಲ್ಟಿ

    ಮದ್ವೆ ಮುಗಿಸಿಕೊಂಡು ಬರುತ್ತಿದ್ದಾಗ ಬೆಂಗ್ಳೂರು ಪೊಲೀಸರಿದ್ದ ಕಾರು ದಾವಣಗೆರೆಯಲ್ಲಿ ಪಲ್ಟಿ

    ದಾವಣಗೆರೆ: ಬೆಂಗಳೂರಿನ ಮೀಸಲು ಪೊಲೀಸ್ ಪಡೆ ಸಿಬ್ಬಂದಿಗಳಿದ್ದ ಕಾರು ಪಲ್ಟಿಯಾಗಿದ್ದು, ಪರಿಣಾಮ ಐವರಿಗೆ ಗಾಯವಾಗಿ ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಬಳಿ ನಡೆದಿದೆ.

    ಸ್ವಿಫ್ಟ್ ಕಾರಿನಲ್ಲಿ ಪೊಲೀಸ್ ಸಿಬ್ಬಂದಿ ಹುಬ್ಬಳ್ಳಿ ಕಡೆಯಿಂದ ಬೆಂಗಳೂರಿನ ಕಡೆ ಮದುವೆ ಮುಗಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದಂತೆ ಅತಿ ವೇಗವಾಗಿ ಕಾರು ಬಂದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.

    ಕಾರು ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ಐವರು ಗಾಯಗೊಂಡಿದ್ದು, ಅವರನ್ನು ಇಬ್ಬರಿಗೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಘಟನೆ ಸಂಬಂಧ ಹರಿಹರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೈಕ್ ಗಳು ಮುಖಾಮುಖಿ ಡಿಕ್ಕಿ – ಓರ್ವ ಸಾವು, ಇಬ್ಬರು ಗಂಭೀರ

    ಬೈಕ್ ಗಳು ಮುಖಾಮುಖಿ ಡಿಕ್ಕಿ – ಓರ್ವ ಸಾವು, ಇಬ್ಬರು ಗಂಭೀರ

    ಮಂಡ್ಯ: ಬೈಕ್ ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬೆಳಕವಾಡಿ ಸಮೀಪ ನಡೆದಿದೆ.

    ಕಗ್ಗಲಿಪುರ ಗ್ರಾಮದ ಸಂಜು ಕುಮಾರ್(22) ಮೃತ ದುರ್ದೈವಿ. ಭಾನುವಾರ ರಾತ್ರಿ ಈ ಅಪಘಾತ ನಡೆದಿದೆ. ಸಂಜು ಕುಮಾರ್ ರಾತ್ರಿ ತಮ್ಮ ಗ್ರಾಮದಿಂದ ಬೆಳಕವಾಡಿಗೆ ತೆರಳುತ್ತಿದ್ದರು. ಬೆಳಕವಾಡಿಯಿಂದ ಮತ್ತೊಂದು ಬೈಕ್ ಬರುತ್ತಿತ್ತು. ಈ ವೇಳೆ ವೇಗವಾಗಿ ಬಂದ ಎರಡು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದಿವೆ. ಪರಿಣಾಮ ಸಂಜು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಅಪಘಾತದಲ್ಲಿ ಮೊತ್ತೊಬ್ಬ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಮೃತ ಸಂಜು ಕುಮಾರ್ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

    ಈ ಘಟನೆ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಎರಡು ಬೈಕ್‍ಗಳಿಗೆ ಹಿಂಬದಿಯಿಂದ ಕಾರ್ ಡಿಕ್ಕಿ – ಓರ್ವ ಸಾವು, ಮೂವರು ಗಂಭೀರ

    ಎರಡು ಬೈಕ್‍ಗಳಿಗೆ ಹಿಂಬದಿಯಿಂದ ಕಾರ್ ಡಿಕ್ಕಿ – ಓರ್ವ ಸಾವು, ಮೂವರು ಗಂಭೀರ

    ಮಂಡ್ಯ: ಯುಗಾದಿ ಹಬ್ಬದಂದೇ ಬೆಳ್ಳಂಬೆಳಗ್ಗೆ ಎರಡು ಬೈಕ್‍ಗಳಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಕಂಚಿನ ಕೋಟೆ ಗೇಟ್ ಬಳಿ ನಡೆದಿದೆ.

    ತಮ್ಮಯ್ಯ (45) ಮೃತ ದುರ್ದೈವಿ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಎನ್‍ಎಚ್ 75 ರಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಬೆಂಗಳೂರಿನಿಂದ ಹಬ್ಬಕ್ಕೆ ಬೈಕ್‍ನಲ್ಲಿ ಊರಿಗೆ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದು ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ತಿಮ್ಮಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಅಪಘಾತಕ್ಕೆ ಟೋಲ್‍ನ ಲಂಕೋ ಕಂಪೆನಿಯ ನಿರ್ಲಕ್ಷ್ಯವೇ ಕಾರಣವಾಗಿದ್ದು, ಕಳೆದ ಒಂದು ವರ್ಷದಿಂದ ಸೇತುವೆ ಕೆಲಸ ಮುಗಿಸದೆ ಕಾಮಗಾರಿ ನಡೆಯುತ್ತಿರುವುದರಿಂದ ಪದೇ ಪದೇ ಇಲ್ಲಿ ಅಪಘಾತ ಸಂಭವಿಸುತ್ತಿವೆ. ಸುಂಕ ಕಟ್ಟಿಸಿಕೊಂಡು ಸೇತುವೆ ಕಾರ್ಯ ಮುಗಿಸದ ಟೋಲ್ ಕಂಪೆನಿಯ ವಿರುದ್ಧ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ.

    ಈ ಘಟನೆ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ಬಳಿಕ ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಸದ್ಯಕ್ಕೆ ಕಾರನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ನರ್ಸ್ ಮಾಡಿದ ಎಡವಟ್ಟಿಗೆ 10 ತಿಂಗಳ ಮಗುವಿನ ಮುಖದಲ್ಲಿ ಗಾಯ

    ನರ್ಸ್ ಮಾಡಿದ ಎಡವಟ್ಟಿಗೆ 10 ತಿಂಗಳ ಮಗುವಿನ ಮುಖದಲ್ಲಿ ಗಾಯ

    ಧಾರವಾಡ: ಆಸ್ಪತ್ರೆಯ ನರ್ಸ್ ಮಾಡಿದ ಎಡವಟ್ಟಿಗೆ 10 ತಿಂಗಳ ಮಗುವಿನ ಮುಖ ಸುಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಧಾರವಾಡ ನಗರದ ತಾವರಗೇರಿ ನರ್ಸಿಂಗ್ ಹೋಂ ನಲ್ಲಿ ಈ ಘಟನೆ ನಡೆದಿದೆ. ಉಸಿರಾಟದ ತೊಂದರೆಯಿಂದ ಬಳಲುತಿದ್ದ ಮಗು ಲಾವಣ್ಯಳನ್ನ ಪೋಷಕರು ನಗರದ ತಾವರಗೇರೆ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಈ ವೇಳೆ ಆಸ್ಪತೆಯ ನರ್ಸ್ ಮಗುವಿಗೆ ನೆಬ್ಯುಲೈಸರ್ ಮಾಡುವಾಗ ಬಾಯಿಯ ಅಕ್ಕಪಕ್ಕದಲ್ಲೆಲ್ಲ ಸುಟ್ಟುಹೋಗಿದೆ.

    ನಗರದ ಗೊಲ್ಲರ ಕಾಲೋನಿಯ ನಾಗೇಶ ಹಾಗೂ ಅಂಜಲಿ ಎಂಬವರ ಮಗುವಿನ ಮುಖ ಸುಟ್ಟು ಗಾಯಗೊಂಡಿದ್ದು, ಈ ಘಟನೆ ನಡೆದು ಮೂರು ದಿನಗಳ ನಂತರ ಬೆಳಕಿಗೆ ಬಂದಿದೆ. ಸದ್ಯ ಅದೇ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಾಲು ಕೂಡಾ ಉಣಿಸಿಲು ಆಗದಂತೆ ಮುಖಕ್ಕೆ ಗಾಯವಾಗಿರೋದ್ರಿಂದ ಮಗುವಿಗೆ ಸಲೈನ್ ಮೇಲೆ ಮಾತ್ರ ಇಡಲಾಗಿದೆ.

    ಈ ಘಟನೆ ನಡೆದಿರುವ ಬಗ್ಗೆ ಆಸ್ಪತೆಯ ವೈದ್ಯರಿಗೆ ಕೇಳಿದರೆ, ನಿಮ್ಮ ಕೈಯಲ್ಲೇ ನೆಬ್ಯುಲೈಸರ್ ಕೊಡಲಾಗಿತ್ತು. ನೀವೇ ಇದಕ್ಕೆ ಜವಾಬ್ದಾರಿ ಎಂದು ಉತ್ತರ ನೀಡುತ್ತಿದ್ದಾರೆ ಎಂದು ಮಗುವಿನ ಪೋಷಕರು ಆರೋಪಿಸಿದ್ದಾರೆ.