Tag: injury

  • ಜನನಿಬೀಡ ಪ್ರದೇಶದಲ್ಲಿದ್ದ ಕಟ್ಟಡ ಕುಸಿತ – ತಪ್ಪಿತು ಭಾರೀ ದುರಂತ

    ಜನನಿಬೀಡ ಪ್ರದೇಶದಲ್ಲಿದ್ದ ಕಟ್ಟಡ ಕುಸಿತ – ತಪ್ಪಿತು ಭಾರೀ ದುರಂತ

    ವಿಜಯಪುರ: ಜನನಿಬೀಡ ಪ್ರದೇಶದಲ್ಲಿದ್ದ ಹಳೇ ಕಟ್ಟಡವೊಂದು ಕುಸಿದ ಪರಿಣಾಮ ಭಾರೀ ಅನಾಹುತವೊಂದು ಕೊದಲೆಳೆ ಅಂತರದಲ್ಲಿ ತಪ್ಪಿದ ಘಟನೆ ಜಿಲ್ಲೆಯ ಗಾಂಧಿಚೌಕದಲ್ಲಿ ನಡೆದಿದೆ.

    ಗಾಂಧಿಚೌಕದಲ್ಲಿರುವ ಮಾರ್ಕೆಟ್‍ ನ ಮೇಲ್ಛಾವಣಿ ಕುಸಿದು ಬಿದ್ದಿದೆ. ಎಲ್‍ಬಿಎಸ್ ಮಾರ್ಕೆಟ್ ಕಿರಿದಾಗಿದ್ದು, ಜನನಿಬೀಡ ಪ್ರದೇಶದಲ್ಲಿರುವ ಈ ಕಟ್ಟಡ ಹಳೆಯದಾಗಿತ್ತು. ಬೆಳಗಿನ ಜಾವದಲ್ಲಿ ಈ ಕಟ್ಟಡ ಕುಸಿದಿದೆ.

    ಘಟನೆ ನಡೆದ ವೇಳೆ ಕಟ್ಟಡದಲ್ಲಿ ಕೆಲವೇ ಕೆಲವು ಜನರು ಇದ್ದರು. ಆದ್ದರಿಂದ ಭಾರೀ ಅನಾಹುತ ತಪ್ಪಿದ್ದು, ಕಟ್ಟಡದಲ್ಲಿದ್ದ ಕೆಲವರು ಓಡಿ ಬಂದಿದ್ದಾರೆ. ಅವರಿಗೆಲ್ಲಾ ಸಣ್ಣ-ಪುಟ ಗಾಯಗಳಾಗಿವೆ. ಆದರೆ ಇಷ್ಟೊಂದು ಅನಾಹುತ ಸಂಭವಿಸಿದ್ರೂ, ಸ್ಥಳಕ್ಕೆ ಮಾತ್ರ ಪಾಲಿಕೆ ಅಧಿಕಾರಿಗಳು ಬಾರದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

  • ಖಾಸಗಿ ಬಸ್ ಗೆ ಲಾರಿ ಡಿಕ್ಕಿ – 20 ಮಂದಿ ಪ್ರಯಾಣಿಕರಿದ್ದ ಬಸ್ ಪಲ್ಟಿ!

    ಖಾಸಗಿ ಬಸ್ ಗೆ ಲಾರಿ ಡಿಕ್ಕಿ – 20 ಮಂದಿ ಪ್ರಯಾಣಿಕರಿದ್ದ ಬಸ್ ಪಲ್ಟಿ!

    ಚಿತ್ರದುರ್ಗ: ಖಾಸಗಿ ಬಸ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಸ್ ಪಲ್ಟಿಯಾಗಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬಾಲೇನಹಳ್ಳಿ ನಡೆದಿದೆ.

    ಈ ಅಪಘಾತದಿಂದ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 20 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಖಾಸಗಿ ಬಸ್ ಆಂಧ್ರಪ್ರದೇಶದ ಅನಂತಪುರದಿಂದ ಚಿತ್ರದುರ್ಗಕ್ಕೆ ತೆರಳುತ್ತಿತ್ತು. ಈ ವೇಳೆ ಬಾಲೇನಹಳ್ಳಿ ಬಳಿ ವೇಗವಾಗಿ ಬಂದ ಲಾರಿ, ಬಸ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್ ಪಲ್ಟಿಯಾಗಿದೆ.

    ಬಸ್ ಪಲ್ಟಿಯಾಗಿದ್ದರಿಂದ ಸ್ಥಳದಲ್ಲಿದ್ದವರು ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಸಮೀಪದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

    ಈ ಘಟನೆ ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯಕ್ಕೆ ಈ ಅವಘಡದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅದೃಷ್ಟವಶಾತ್ ಭಾರೀ ದುರಂತ ತಪ್ಪಿದಂತಾಗಿದೆ.

  • ಅಪರಿಚಿತ ವಾಹನ ಡಿಕ್ಕಿ – ಇಬ್ಬರ ದುರ್ಮರಣ, ಮತ್ತಿಬ್ಬರು ಗಂಭೀರ

    ಅಪರಿಚಿತ ವಾಹನ ಡಿಕ್ಕಿ – ಇಬ್ಬರ ದುರ್ಮರಣ, ಮತ್ತಿಬ್ಬರು ಗಂಭೀರ

    ಬೆಳಗಾವಿ: ಅಪರಿಚಿತ ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಟೂರು ಗ್ರಾಮದ ಬಳಿ ನಡೆದಿದೆ.

    ಪ್ರದೀಪ್ ಬಡಿಗೇರ(22) ಮತ್ತು ವಿಶಾಲ ಶೇಖನವರ (14) ಮೃತ ದುರ್ದೈವಿಗಳು. ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಈ ಘಟನೆ ಸಂಭವಿಸಿದೆ. ಪ್ರದೀಪ್, ವಿಶಾಲ ಹಾಗೂ ಮತ್ತಿಬ್ಬರು ಒಟ್ಟಾಗಿ ದ್ವಿಚಕ್ರ ವಾಹನದ ಮೇಲೆ 4 ಜನ ಯುವಕರು ಬಾವಿಗೆ ಈಜಾಡಲು ಹೋಗುತ್ತಿದ್ದರು.

    ಈ ವೇಳೆ ಗೋಟೂರು ಗ್ರಾಮದ ಬಳಿ ಹಿಂಬದಿಯಿಂದ ಅಪರಿಚಿತ ವಾಹನ ಬಂದು ಬೈಕಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಇನ್ನೂ ಇಬ್ಬರು ಬೈಕ್ ಸವಾರರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಈ ಘಟನೆ ಸಂಬಂಧ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಲಿಸುತ್ತಿದ್ದಂತೆ ಟೈಯರ್ ಸ್ಫೋಟಗೊಂಡು ಬೊಲೆರೋ ಪಲ್ಟಿ – ನಾಲ್ವರು ಗಂಭೀರ

    ಚಲಿಸುತ್ತಿದ್ದಂತೆ ಟೈಯರ್ ಸ್ಫೋಟಗೊಂಡು ಬೊಲೆರೋ ಪಲ್ಟಿ – ನಾಲ್ವರು ಗಂಭೀರ

    ರಾಯಚೂರು: ಟೈಯರ್ ಸ್ಫೋಟಗೊಂಡು ಚಲಿಸುತ್ತಿದ್ದ ಬೊಲೆರೋ ವಾಹನ ಪಲ್ಟಿಯಾದ ಪರಿಣಾಮ ನಾಲ್ವರ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ನಲ್ಲಿ ನಡೆದಿದೆ.

    ಪಟ್ಟಣದ ಚಿತ್ತಾಪುರ ರಸ್ತೆಯ ಬಳಿ ಬೊಲೆರೋ ಬರುತ್ತಿದ್ದಂತೆ ಟೈಯರ್ ಸ್ಫೋಟಗೊಂಡಿದ್ದು, ತಕ್ಷಣವೇ ವಾಹನ ಪಲ್ಟಿಯಾಗಿದೆ. ಪರಿಣಾಮ ವಾಹನದಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.

    ಕೂಡಲೇ ಸ್ಥಳೀಯ ಆಂಬುಲೆನ್ಸ್ ಗೆ ಕರೆ ಮಾಡಿದ್ದು, ಸ್ಥಳಕ್ಕೆ ದೌಡಾಯಿಸಿದ ಆಂಬ್ಯುಲೆನ್ಸ್ ನಲ್ಲಿ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಘಟನೆ ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಟ್ರ್ಯಾಕ್ಟರ್, ಬೈಕ್ ಮುಖಾಮುಖಿ ಡಿಕ್ಕಿ – 12ರ ಬಾಲಕಿ ದುರ್ಮರಣ, ತಂದೆ ಗಂಭೀರ

    ಟ್ರ್ಯಾಕ್ಟರ್, ಬೈಕ್ ಮುಖಾಮುಖಿ ಡಿಕ್ಕಿ – 12ರ ಬಾಲಕಿ ದುರ್ಮರಣ, ತಂದೆ ಗಂಭೀರ

    ಹಾವೇರಿ: ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ಹನ್ನೆರಡು ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಲಕಮಾಪುರ ಕ್ರಾಸ್ ಬಳಿ ನಡೆದಿದೆ.

    ವಿಜಯಶ್ರೀ ಚಕ್ರವರ್ತಿ(12) ಮೃತ ದುರ್ದೈವಿ. ಅಪಘಾತದಲ್ಲಿ ಬಾಲಕಿಯ ತಂದೆ ರಾಮದಾಸ್ ಗಂಭೀರವಾಗಿ ಗಾಯಗೊಂಡಿದ್ದು. ಅವರನ್ನು ಕೂಡಲೇ ಸಮೀಪದ ತಿಳುವಳ್ಳಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

    ಟ್ರ್ಯಾಕ್ಟರ್ ಮತ್ತು ಬೈಕ್ ಎರಡು ವೇಗವಾಗಿ ಬರುತ್ತಿದ್ದು, ಲಕಮಾಪುರ ಕ್ರಾಸ್ ಬಳಿ ಬರುತ್ತಿದ್ದಂತೆ ತಿರುವುನಲ್ಲಿ ಮುಖಾಮುಖಿ ಡಿಕ್ಕಿ ಹೊಡೆದಿವೆ. ಪರಿಣಾಮ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಅಪಾಘತದಲ್ಲಿ ಅನೇಕ ಮಂದಿಗೆ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.

    ಈ ಘಟನೆ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಆಡೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿ ಕಾರ್ ಚಾಲನೆ- ಸಾರ್ವಜನಿಕರಿಂದ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿತ

    ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿ ಕಾರ್ ಚಾಲನೆ- ಸಾರ್ವಜನಿಕರಿಂದ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿತ

    ಬೆಂಗಳೂರು: ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ ಸರಣಿ ಅಪಘಾತ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ಶನಿವಾರ ರಾತ್ರಿ ನಡೆದಿದೆ.

    ಹನುಮಂತನಗರ 50 ಅಡಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಹಾಸನಾಂಭ ಟ್ರಾವೆಲ್ಸ್ ಗೆ ಸೇರಿದ ಇನ್ನೋವಾ ಕಾರನ್ನು ಚಾಲಕ ಅಭಿಷೇಕ್ ಓಡಿಸುತ್ತಿದ್ದ. ಮದ್ಯಪಾನ ಸೇವಿಸಿದ್ದ ಅಭಿಷೇಕ್ ಅಮಲಿನಲ್ಲಿ ಕಾರನ್ನು ಅಡ್ಡಾದಿಡ್ಡಿ ಓಡಿಸಿ ಸರಣಿ ಅಪಘಾತ ಮಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಸದ್ಯ ಬಸವನಗುಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ನಿರ್ಲಕ್ಷ್ಯ ಚಾಲನೆಯಡಿ ಚಾಲಕನ ವಿರುದ್ಧ ಕೇಸ್ ದಾಖಲಾಗಿದೆ. ಪೊಲೀಸರು ಆರೋಪಿ ಡ್ರೈವರ್ ಅಭಿಷೇಕ್ ನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ್ದಾರೆ. ಈ ಅಪಘಾತದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳಿಂದ ಡ್ರೈವರ್ ಪಾರಾಗಿದ್ದಾನೆ.

  • ಅರ್ಚಕರನ್ನ ರಕ್ಷಿಸಲು ಹೋದ ಇಬ್ಬರೂ ಅಗ್ನಿಕೊಂಡಕ್ಕೆ ಬಿದ್ದರು!

    ಅರ್ಚಕರನ್ನ ರಕ್ಷಿಸಲು ಹೋದ ಇಬ್ಬರೂ ಅಗ್ನಿಕೊಂಡಕ್ಕೆ ಬಿದ್ದರು!

    ರಾಮನಗರ: ಅಗ್ನಿಕೊಂಡ ಹಾಯುವ ವೇಳೆ ಅರ್ಚಕರೊಬ್ಬರು ಕೊಂಡಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಮನಗರ ತಾಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಇತಿಹಾಸ ಪ್ರಸಿದ್ಧ ರೇವಣ ಸಿದ್ಧೇಶ್ವರ ಸ್ವಾಮಿಯ ಅಗ್ನಿಕೊಂಡ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ಇಂದು ಬೆಳಗ್ಗೆ ಅಗ್ನಿಕೊಂಡ ಹಾಯುತ್ತಿದ್ದ ಅರ್ಚಕ ವಿಜಯ್ ಕುಮಾರ್ ಅವರು ಆಯತಪ್ಪಿ ಕೊಂಡದಲ್ಲಿ ಬಿದ್ದಿದ್ದಾರೆ. ಈ ವೇಳೆ ಅರ್ಚಕ ವಿಜಯ್ ನನ್ನು ರಕ್ಷಿಸಲು ಹೋದ ರುದ್ರೇಶ್ ಹಾಗೂ ಮಂಜುನಾಥ್ ಎಂಬ ಅರ್ಚಕರೂ ಕೂಡ ಕೊಂಡಕ್ಕೆ ಬಿದ್ದಿದ್ದು, ಸುಟ್ಟಗಾಯಗಳಾಗಿವೆ.

    ಘಟನೆಯಿಂದ ಗಾಯಗೊಂಡ ಮೂರು ಜನ ಅರ್ಚಕರನ್ನು ರಾಮನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ತಿಂಗಳು ಕನಕಪುರ ತಾಲೂಕಿನ ಸಾತನೂರು ಹಾಗೂ ಉಯ್ಯಂಬಳ್ಳಿ ಗ್ರಾಮಗಳಲ್ಲೂ ಸಹ ಅಗ್ನಿಕೊಂಡ ದುರಂತ ನಡೆದಿದೆ. ಉಯ್ಯಂಬಳ್ಳಿಯಲ್ಲಿ ನಡೆದ ಅಗ್ನಿಕೊಂಡದಲ್ಲಿ ಬಿದ್ದ ಪೂಜಾರಿ ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ನಡೆದಿದೆ.

  • ಟೆಂಪೋ ಟ್ರಾವೆಲರ್, ಕಾರ್ ಡಿಕ್ಕಿ – ಮಗು ಸೇರಿ ಐವರು ಗಂಭೀರ

    ಟೆಂಪೋ ಟ್ರಾವೆಲರ್, ಕಾರ್ ಡಿಕ್ಕಿ – ಮಗು ಸೇರಿ ಐವರು ಗಂಭೀರ

    ಮಂಗಳೂರು: ಟೆಂಪೋ ಟ್ರಾವೆಲರ್ ಮತ್ತು ಕಾರ್ ನಡುವೆ ಡಿಕ್ಕಿಯಾದ ಪರಿಣಾಮ ಐದು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸುಬ್ರಹ್ಮಣ್ಯ ಸಮೀಪದ ಇಂಜಾಡಿ ಎಂಬಲ್ಲಿ ನಡೆದಿದೆ.

    ರಜೆ ಇದ್ದ ಕಾರಣ ಭಾನುವಾರ ಪ್ರವಾಸಿಗರು ಟೆಂಪೋ ಟ್ರಾವೆಲರ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯಗೆ ಪ್ರವಾಸಕ್ಕೆ ಬರುತ್ತಿದ್ದರು. ಈ ವೇಳೆ ಇವರ ವಿರುದ್ಧ ದಿಕ್ಕಿನಿಂದ ಕಾರ್ ಬರುತ್ತಿತ್ತು. ಸುಬ್ರಹ್ಮಣ್ಯ ಸಮೀಪದ ಇಂಜಾಡಿ ಬಳಿ ಕಾರು ಮತ್ತು ಟೆಂಪೋ ಟ್ರಾವೆಲರ್ ಮುಖಾಮುಖಿ ಡಿಕ್ಕಿ ಹೊಡೆದಿವೆ.

    ಪರಿಣಾಮ ಕಾರ್ ನಲ್ಲಿದ್ದ ಮಗು ಸೇರಿ ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಅಪಘಾತದ ರಭಸಕ್ಕೆ ಟೆಂಪೋ ಟ್ರಾವೆಲರ್ ಮತ್ತು ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.

    ಈ ಘಟನೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

  • ಲಾರಿ, ಬುಲೆರೋ, ಟಾಟಾ ಏಸ್ ನಡುವೆ ಸರಣಿ ಅಪಘಾತ – ಮೂವರ ದುರ್ಮರಣ

    ಲಾರಿ, ಬುಲೆರೋ, ಟಾಟಾ ಏಸ್ ನಡುವೆ ಸರಣಿ ಅಪಘಾತ – ಮೂವರ ದುರ್ಮರಣ

    ರಾಯಚೂರು: ಲಾರಿ, ಬುಲೆರೋ ಹಾಗೂ ಟಾಟಾ ಏಸ್ ನಡುವೆ ಸರಣಿ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಮಸ್ಕಿಯಲ್ಲಿ ನಡೆದಿದೆ.

    ಟಾಟಾ ಏಸ್ ಚಾಲಕ ಲಕ್ಷ್ಮಣ್ ಕಾಟಗಿಹಳ್ಳಿ(40), ಬಸವರಾಜ್ (30) ಮತ್ತು ಶಿವಲಿಂಗಪ್ಪ ಮೃತ ದುರ್ದೈವಿಗಳು. ಅಪಘಾತದಲ್ಲಿ ಮಾಬುಸಾಬ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮಸ್ಕಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮಸ್ಕಿಯ ಬೀದರ್ ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಿನ ಈ ಜಾವ ಅಪಘಾತ ಸಂಭವಿಸಿದ್ದು, ಚಾಲಕರ ಅತೀ ವೇಗ ಹಾಗೂ ನಿಯಂತ್ರಣ ತಪ್ಪಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಘಟನೆ ಹಿನ್ನೆಲೆಯಲ್ಲಿ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ನಡೆದ ಬಳಿಕ ಲಾರಿ ಚಾಲಕ ಹಾಗೂ ಕ್ಲೀನರ್ ಪರಾರಿಯಾಗಿದ್ದಾರೆ.

  • ಡಿವೈಡರ್ ಗೆ ಡಿಕ್ಕಿ ಹೊಡೆದು ಬಸ್ ಪಲ್ಟಿ – 20ಕ್ಕೂ ಅಧಿಕ ಮಂದಿ ಗಂಭೀರ

    ಡಿವೈಡರ್ ಗೆ ಡಿಕ್ಕಿ ಹೊಡೆದು ಬಸ್ ಪಲ್ಟಿ – 20ಕ್ಕೂ ಅಧಿಕ ಮಂದಿ ಗಂಭೀರ

    ಶ್ರೀನಗರ: ಬಸ್ ಪಲ್ಟಿಯಾದ ಪರಿಣಾಮ 20ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ.

    ಈ ಘಟನೆ ಬರಾಮುಲ್ಲಾದ ಉರಿಯಲ್ಲಿರುವ ಶ್ರೀನಗರ-ಮುಜಫರಾಬಾದ್ ಹೆದ್ದಾರಿಯಲ್ಲಿ ಸಂಭವಿಸಿದೆ. ಎಸ್‍ಆರ್ ಟಿಸಿ ಬಸ್ ಇಂದು ಸಲಾಮಾಬಾದ್ ನಿಂದ ಉರಿಗೆ ಹೋಗುತ್ತಿತ್ತು. ಈ ವೇಳೆ ಶ್ರೀನಗರ-ಮುಜಫರಾಬಾದ್ ಹೆದ್ದಾರಿಯಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿದ್ದ ರಸ್ತೆಯ ಕಬ್ಬಿಣದ ಡಿವೈಡರ್ ಗೆ ಡಿಕ್ಕಿ ಹೊಡೆದು ರಸ್ತೆ ಪಕ್ಕದ ಗದ್ದೆಗೆ ಪಲ್ಟಿಯಾಗಿದೆ.

    ಬಸ್ ಪಲ್ಟಿಯಾದ ಪರಿಣಾಮ 20 ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯವಾಗಿದೆ. ಕೂಡಲೇ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ದೌಡಾಯಿಸಿ ರಕ್ಷಣೆಯ ಕಾರ್ಯಚರಣೆ ನಡೆಸಿದ್ದಾರೆ.

    ಅಪಘಾತದಲ್ಲಿ ಗಾಯಗೊಂಡವರನ್ನು ಆಂಬುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನು ಈ ಅಪಘಾತದಲ್ಲಿ 11 ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆಯನ್ನು ನಡೆಸಿದ್ದಾರೆ.

    https://www.youtube.com/watch?v=vpN34QEcYSs