Tag: injury

  • 30 ಅಡಿ ಆಳದ ಕಂದಕಕ್ಕೆ ಬಿತ್ತು ಸರ್ಕಾರಿ ಬಸ್ – 20 ಕ್ಕೂ ಅಧಿಕ ಮಂದಿಗೆ ಗಾಯ, ಮೂವರು ಗಂಭೀರ

    30 ಅಡಿ ಆಳದ ಕಂದಕಕ್ಕೆ ಬಿತ್ತು ಸರ್ಕಾರಿ ಬಸ್ – 20 ಕ್ಕೂ ಅಧಿಕ ಮಂದಿಗೆ ಗಾಯ, ಮೂವರು ಗಂಭೀರ

    ಚಿಕ್ಕಮಗಳೂರು: ಸರ್ಕಾರಿ ಬಸ್ಸೊಂದು ಸುಮಾರು 30 ಅಡಿ ಆಳದ ಕಂದಕಕ್ಕೆ ಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಕಡೂರು ತಾಲೂಕು ತಂಗಲಿ ಸಮೀಪದ ವೇದಾ ನದಿ ಸೇತುವೆಯಿಂದ ಬಸ್ ಪಲ್ಟಿಯಾಗಿದೆ. ಬಸ್ಸಿನಲ್ಲಿ ಸುಮಾರು 20 ಅಧಿಕ ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ಬಸ್ ಬೆಂಗಳೂರಿನಿಂದ ಕುಂದಾಪುರಕ್ಕೆ ಹೋಗುತ್ತಿತ್ತು. ಬಸ್ ತಂಗಲಿ ಸಮೀಪ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ವೇದಾ ನದಿ ಸೇತುವೆಗೆ ಡಿಕ್ಕಿ ಹೊಡೆದು ನದಿಗೆ ಬಿದ್ದಿದೆ.

    ಬಸ್ ನದಿಗೆ ಬಿದ್ದ ಪರಿಣಾಮ ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳಗಳಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.

    ಇನ್ನು ಈ ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಕಡೂರು ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೇದಾ ನದಿ ಸುಮಾರು ವರ್ಷಗಳಿಂದ ನೀರಿಲ್ಲದೇ ಬತ್ತಿಹೋಗಿತ್ತು. ಈ ಘಟನೆ ಕಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ಕಾರು ಮೇಲೆ ಕಾರ್ ಪಲ್ಟಿ ಹೊಡೆದು ಉಲ್ಟಾವಾಗಿ ಬಿದ್ರೂ, ಚಾಲಕ ಪಾರು – ವಿಡಿಯೋ ವೈರಲ್

    ಕಾರು ಮೇಲೆ ಕಾರ್ ಪಲ್ಟಿ ಹೊಡೆದು ಉಲ್ಟಾವಾಗಿ ಬಿದ್ರೂ, ಚಾಲಕ ಪಾರು – ವಿಡಿಯೋ ವೈರಲ್

    ಕೀವ್: ಬಿಳಿ ಬಣ್ಣದ ಕಾರೊಂದು ಡಿಕ್ಕಿ ಹೊಡೆದ ರಭಸಕ್ಕೆ ಫಿಯೆಟ್ ಡೊಬ್ಲೊ ವ್ಯಾನ್, ನಿಂತಿದ್ದ ಇನ್ನೊಂದು ಕಾರಿನ ಮೇಲೆ ಪಲ್ಟಿ ಹೊಡೆದು ರಸ್ತೆಗೆ ಉಲ್ಟಾವಾಗಿ ಬಿದ್ದರೂ ಚಾಲಕ ಪವಾಡಸದೃಶವಾಗಿ ಪಾರಾಗಿದ್ದಾನೆ.

    ಈ ಘಟನೆ ಭಾನುವಾರ ಉಕ್ರೇನ್ ನ ಕೊಲೊಮಿಯಿಯ ನಗರ ಹೆದ್ದಾರಿಯಲ್ಲಿ ಸಂಭವಿಸಿದೆ. ಈ ಅಪಘಾತದ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದ್ದು, ಇದೀಗ ಎಲ್ಲೆಡೆ ವೈರಲ್ ಆಗಿದೆ.

    ಹೆದ್ದಾರಿಯಲ್ಲಿ ಬೂದು ಬಣ್ಣದ ಕಾರೊಂದು ರಸ್ತೆ ಬದಿಯಲ್ಲಿ ನಿಂತಿರುತ್ತದೆ. ಈ ದಾರಿಯಲ್ಲಿ ನೇರವಾಗಿ ಫಿಯೆಟ್ ಡೊಬ್ಲೊ ವ್ಯಾನೊಂದು ಬರುತ್ತಿತ್ತು. ಈ ವೇಳೆ ಇನ್ನೊಂದು ರಸ್ತೆಯಿಂದ ಕಾರು ನೇರವಾಗಿ ಬಂದು ವ್ಯಾನ್ ಗೆ ಡಿಕ್ಕಿ ಹೊಡೆದಿದೆ.

    ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿನ ಮೇಲೆ ಪಲ್ಟಿ ಹೊಡೆದಿದೆ. ಬಳಿಕ ರಸ್ತೆಯಲ್ಲಿ ಉಲ್ಟಾವಾಗಿ ಬಿದ್ದಿದೆ. ಆದರೂ ಚಾಲಕ ಮಾತ್ರ ಆರಾಮವಾಗಿ ವ್ಯಾನ್ ಕಿಟಕಿ ಮೂಲಕ ಹೊರಬಂದು, ಗಾಬರಿಯಿಂದ ಓಡಿದ್ದಾನೆ. ನಂತರ ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿನಲ್ಲಿದ್ದ ಮಗು ಸೇರಿ ದಂಪತಿ ಹೊರ ಬಂದು ಓಡಿ ಹೋಗಿದ್ದಾರೆ.

    ಸದ್ಯಕ್ಕೆ ಈ ಅಪಘಾತದಿಂದ ಸಣ್ಣ ಪುಟ್ಟ ಗಾಯಗಳಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    https://www.youtube.com/watch?time_continue=33&v=XOZcbfZo0rs

  • ಮಗಳನ್ನು ತನ್ನ ಮಗನಿಗೆ ಕೊಡಲಿಲ್ಲವೆಂದು ಕೊಡಲಿ, ರಾಡ್ ನಿಂದ ಹಲ್ಲೆ!

    ಮಗಳನ್ನು ತನ್ನ ಮಗನಿಗೆ ಕೊಡಲಿಲ್ಲವೆಂದು ಕೊಡಲಿ, ರಾಡ್ ನಿಂದ ಹಲ್ಲೆ!

    ಕೊಪ್ಪಳ: ಕ್ಷುಲ್ಲಕ ಕಾರಣಕ್ಕೆ ಮಾರಕಾಸ್ತ್ರದಿಂದ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಕಾರಟಗಿ ತಾಲೂಕು ಮೈಲಾಪುರ ಗ್ರಾಮದಲ್ಲಿ ನಡೆದಿದೆ.

    ತನ್ನ ಮಗನಿಗೆ ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದ ಕುಟುಂಬದ ಮೇಲೆ ರಾಮಣ್ಣ ತನ್ನ ಮಕ್ಕಳೊಂದಿಗೆ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಅದೇ ಗ್ರಾಮದ ನಾಗಪ್ಪ ಬಸಾಪಟ್ಟಣ ಮೇಲೆ ಹಲ್ಲೆ ಮಾಡಿದ್ದು, ರಾಮಣ್ಣ ತಳವಾರ ಮತ್ತು ಆತನ ಮಕ್ಕಳು ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ.

    ಮೈಲಾಪುರ ಗ್ರಾಮದ ನಾಗಪ್ಪನ ಸಹೋದರ ಕೃಷ್ಣಪ್ಪನ ಮಗಳನ್ನು ತನ್ನ ಮಗನಿಗೆ ಮದುವೆ ಮಾಡಿಕೊಡುವಂತೆ ರಾಮಣ್ಣ ತಳವಾರ ಕೇಳಿದ್ದಾನೆ. ತಮ್ಮ ಮಗಳನ್ನು ರಾಮಣ್ಣನ ಮಗನಿಗೆ ಕೊಡುವುದಕ್ಕೆ ನಾಗಪ್ಪ ಮತ್ತು ಕೃಷ್ಣಪ್ಪ ಸಹೋದರು ನಿರಾಕರಿಸಿದ್ದಾರೆ. ಈ ಕಾರಣಕ್ಕೆ ಇಂದು ಬೆಳಗ್ಗೆ ಕೊಡಲಿ ಮತ್ತು ರಾಡ್ ನಿಂದ ನಾಗಪ್ಪನ ಮೇಲೆ ರಾಮಣ್ಣ ಮತ್ತು ಆತನ ಮಕ್ಕಳು ಹಲ್ಲೆ ಮಾಡಿದ್ದಾರೆ.

    ಈ ಘಟನೆಯಿಂದ ನಾಗಪ್ಪನ ತಲೆಗೆ ಬಲವಾದ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಗೆ ರವಾನಿಸಲಾಗಿದೆ. ಈ ಘಟನೆ ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • 500 ಅಡಿ ಪ್ರಪಾತಕ್ಕೆ ಬಿದ್ದ ಟೂರಿಸ್ಟ್ ಬಸ್ – ನಾಲ್ವರು ಬೆಂಗ್ಳೂರಿಗರ ದುರ್ಮರಣ

    500 ಅಡಿ ಪ್ರಪಾತಕ್ಕೆ ಬಿದ್ದ ಟೂರಿಸ್ಟ್ ಬಸ್ – ನಾಲ್ವರು ಬೆಂಗ್ಳೂರಿಗರ ದುರ್ಮರಣ

    ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಬೆಂಗಳೂರಿನ ಟೂರಿಸ್ಟ್ ಬಸ್ ಸುಮಾರು 500 ಅಡಿ ಪ್ರಪಾತಕ್ಕೆ ಬಿದ್ದ ಪರಿಣಾಮ ನಾಲ್ವರು ಬೆಂಗಳೂರಿಗರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಮಿಳುನಾಡಿನ ಊಟಿ ಬಳಿ ನಡೆದಿದೆ.

    ಈ ಅವಘಡದಿಂದ ಸುಮಾರು 10 ಕ್ಕೂ ಹೆಚ್ವು ಪ್ರವಾಸಿಗರಿಗೆ ಗಂಭೀರ ಗಾಯವಾಗಿದೆ. ಖಾಸಗಿ ಬಸ್ಸಿನಲ್ಲಿ ಬೆಂಗಳೂರಿನ ತಿಂಡ್ಲುವಿನ ನಿವಾಸಿಗಳು ಪ್ರವಾಸಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ.

    ಸಂಘದ ಸದಸ್ಯರು ಬೆಂಗಳೂರಿನ ಟ್ರ್ಯಾವೆಲ್ಸ್ ಗೆ ಸೇರಿದ ಈ ಬಸ್ ನಲ್ಲಿ ಪ್ರವಾಸ ಕೈಗೊಂಡಿದ್ದರು. ಪ್ರವಾಸಕ್ಕೆಂದು ನಾಲ್ಕು ಜನ ಮಕ್ಕಳು, ಅಡುಗೆ ಭಟ್ರು ಸೇರಿ ಒಟ್ಟು 30 ಜನ ಮಹಿಳೆಯರು ತೆರಳಿದ್ದರು. ಹೀಗೆ ಸುಮಾರು 30 ಜನರು ಶುಕ್ರವಾರ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಊಟಿಗೆ ತೆರಳಿದ್ದರು. ಊಟಿ, ಮಡಿಕೇರಿ ಪ್ರವಾಸ ಮುಗಿಸಿ ನಾಳೆ ರಾತ್ರಿ ಬೆಂಗಳೂರಿಗೆ ಆಗಮಿಸಬೇಕಿತ್ತು.

    ಶನಿವಾರ ಊಟಿಯಲ್ಲಿ ಸ್ಥಳೀಯ ದೃಶ್ಯ ವೀಕ್ಷಣೆ ಮುಗಿಸಿ ಮಡಿಕೇರಿಯತ್ತ ಪ್ರಯಾಣ ಬೆಳೆಸಿದ್ದರು. ಆದರೆ ರಾತ್ರಿ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಪೊಲೀಸರು, ಮೃತರ ಕುಟುಂಬಸ್ಥರು ಹಾಗೂ ಸಂಬಂಧಿಕರು ಊಟಿಯತ್ತ ದೌಡಾಯಿಸಿದ್ದಾರೆ.

    ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಾಯಳುಗಳನ್ನು ನಡುವಾತಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನಡೆದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಈ ಘಟನೆ ಸಂಬಂಧ ಕುಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೋಲೀಸರು ಕಾರ್ಯಚರಣೆಯನ್ನು ಮುಂದುವರಿಸಿದ್ದು, ಇನ್ನು ಸಾವಿನ ಸಂಖ್ಯೆ ಅಧಿಕವಾಗುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ.

  • ಟೀ ಅಂಗಡಿ ಮೇಲೆ ಬಿದ್ದ ವಿದ್ಯುತ್ ತಂತಿ- ಸ್ಥಳದಲ್ಲಿದ್ದ 7 ಮಂದಿಗೆ ಕರೆಂಟ್ ಶಾಕ್

    ಟೀ ಅಂಗಡಿ ಮೇಲೆ ಬಿದ್ದ ವಿದ್ಯುತ್ ತಂತಿ- ಸ್ಥಳದಲ್ಲಿದ್ದ 7 ಮಂದಿಗೆ ಕರೆಂಟ್ ಶಾಕ್

    ವಿಜಯಪುರ: ಟೀ ಅಂಗಡಿ ಮೇಲೆ ವಿದ್ಯುತ್ ತಂತಿ ಹರಿದು ಬಿದ್ದ ಪರಿಣಾಮ ಟೀ ಕುಡಿಯುತ್ತಿದ್ದ ಏಳು ಜನರಿಗೆ ವಿದ್ಯುತ್ ಪ್ರವಹಿಸಿದ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಲತವಾಡ ಪಟ್ಟಣದಲ್ಲಿ ನಡೆದಿದೆ.

    ಶನಿವಾರ ಸಂಜೆ ವೇಳೆ ಬೀಸಿದ ಬಿರುಗಾಳಿ ವೇಳೆ ನಲತವಾಡನ ಟೀ ಅಂಗಡಿಯ ತಗಡಿನ ಮೇಲೆ ವಿದ್ಯುತ್ ತಂತಿ ಹರಿದು ಬಿದ್ದಿದೆ. ಆಗ ತಗಡಿನ ಮೂಲಕ ವಿದ್ಯುತ್ ಹರಿದ ಪರಿಣಾಮ ಇಬ್ಬರಿಗೆ ತೀವ್ರ ಗಾಯವಾಗಿದ್ದು, ಐವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

    ಗದ್ದೆಪ್ಪ ಬಂಡಿವಡ್ಡರ, ಶಿವಪ್ಪ ವಡ್ಡರಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಉಳಿದ ಐವರನ್ನು ನಲತವಾಡ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅವಘಡಕ್ಕೆ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

    ಘಟನೆ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತಿಗೆ ಚಾಕು ಇರಿದು ತಾನೂ ಚುಚ್ಚಿಕೊಂಡ್ಳು!

    ಪತಿಗೆ ಚಾಕು ಇರಿದು ತಾನೂ ಚುಚ್ಚಿಕೊಂಡ್ಳು!

    ಗದಗ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯೊಬ್ಬಳು ಪತಿಗೆ ಚೂರಿ ಇರಿದು ಬಳಿಕ ತಾನೂ ಚುಚ್ಚಿಕೊಂಡಿರುವ ಘಟನೆ ಗದಗ ನಗರದ ಒಕ್ಕಲಗೇರಿ ಓಣಿಯಲ್ಲಿ ನಡೆದಿದೆ.

    ಪತ್ನಿ ಶ್ರೀದೇವಿಯಿಂದ ಈ ಕೃತ್ಯ ನಡೆದಿದ್ದು, ಪತಿ ಶ್ರೀಕಾಂತನ ಹೊಟ್ಟೆಗೆ ತೀವ್ರವಾಗಿ ಗಾಯವಾಗಿದೆ. ಸದ್ಯ ಅವರನ್ನು ಗದಗ ನ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀದೇವಿ ತಾನೂ ಸಹ ಚಾಕು ಚುಚ್ಚಿಕೊಂಡಿದ್ದರಿಂದ ಆಕೆಗೂ ಸಣ್ಣಪುಟ್ಟ ಗಾಯಗಳಾಗಿದೆ.

    ಗಲಾಟೆ ನಡೆಯುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಸಮಯಕ್ಕೆ ಸರಿಯಾಗಿ ಇಬ್ಬರ ಜಗಳ ಬಿಡಿಸಿದ್ದು, ಹೆಚ್ಚಿನ ಅನಾಹುತವಾಗದಂತೆ ತಡೆದಂತಾಗಿದೆ. ತನ್ನ ಪತ್ನಿ ನನ್ನ ಮೇಲೆ ವಿನಾಕಾರಣ ಅನುಮಾನ ಪಡುತ್ತಿದ್ದಳು. ಅದಕ್ಕೆ ಈ ರೀತಿಯಾಗಿ ಮಾಡಿರುವುದು ಎಂದು ಸ್ವತಃ ಶ್ರೀಕಾಂತನೇ ಆರೋಪಿಸುತ್ತಿದ್ದಾನೆ.

    ಶ್ರೀದೇವಿ ಇತ್ತೀಚೆಗೆ ಮಾನಸಿಕ ಅಸ್ವಸ್ಥೆಯಂತೆ ವರ್ತಿಸುತ್ತಿದ್ದಳು ಅನ್ನೋ ಆರೋಪವೂ ಕೇಳಿಬಂದಿದೆ. ಈ ಘಟನೆ ಗದಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ಡಿವೈಡರ್ ಗೆ ಡಿಕ್ಕಿ ಹೊಡೆದು ಮಿನಿ ಬಸ್ ಪಲ್ಟಿ – 7 ಮಂದಿಗೆ ಗಾಯ, ಮಹಿಳೆ ಗಂಭೀರ

    ಡಿವೈಡರ್ ಗೆ ಡಿಕ್ಕಿ ಹೊಡೆದು ಮಿನಿ ಬಸ್ ಪಲ್ಟಿ – 7 ಮಂದಿಗೆ ಗಾಯ, ಮಹಿಳೆ ಗಂಭೀರ

    ಮಂಡ್ಯ: ಮಿನಿ ಬಸ್ ಪಲ್ಟಿಯಾದ ಪರಿಣಾಮ ಏಳು ಮಂದಿ ಗಾಯಗೊಂಡಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಕೆ.ಆರ್ ಸಾಗರ ಟೋಲ್ ಬಳಿ ನಡೆದಿದೆ.

    ಗಾಯಾಳುಗಳನ್ನು ಬೆಂಗಳೂರು ಮತ್ತು ಆಂಧ್ರಪ್ರದೇಶ ಮೂಲದ ಪ್ರವಾಸಿಗರು ಎಂದು ತಿಳಿದುಬಂದಿದೆ. ಇವರೆಲ್ಲರೂ ಪ್ರವಾಸಕ್ಕೆಂದು ಬರುತ್ತಿದ್ದರು. ಈ ವೇಳೆ ಕೆ.ಆರ್ ಸಾಗರ ಟೋಲ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಬಳಿಕ ಮಿನಿ ಬಸ್ ಪಲ್ಟಿಯಾಗಿದೆ. ಪರಿಣಾಮ ಏಳು ಮಂದಿಗೆ ಗಾಯಗಳಾಗಿವೆ.

    ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ನಾಗಲಕ್ಷ್ಮೀ ಅವರನ್ನು ಕೂಡಲೇ ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಘಟನೆ ನಡೆದ ಸ್ಥಳಕ್ಕೆ ಕೆ.ಆರ್ ಸಾಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

  • ಖಾಸಗಿ ಬಸ್ ಪಲ್ಟಿ- ಸ್ಥಳದಲ್ಲೇ ಯುವತಿ ಸಾವು, 9 ಜನರಿಗೆ ಗಾಯ

    ಖಾಸಗಿ ಬಸ್ ಪಲ್ಟಿ- ಸ್ಥಳದಲ್ಲೇ ಯುವತಿ ಸಾವು, 9 ಜನರಿಗೆ ಗಾಯ

    ಬೀದರ್: ಖಾಸಗಿ ಬಸ್ ಪಲ್ಟಿಯಾಗಿ ಓರ್ವ ಯುವತಿ ಮೃತಪಟ್ಟು 9 ಜನರು ಗಾಯಗೊಂಡ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 9ರಲ್ಲಿ ನಡೆದಿದೆ.

    ಸ್ವಾತಿ(24) ಮೃತಪಟ್ಟ ಯುವತಿ. ಬಸ್ ಸೋಲಾಪೂರಯಿಂದ ಹೈದ್ರಾಬಾದ್ ಗೆ ಹೊರಟಿದ್ದಾಗ ಈ ಅಪಘಾತ ಸಂಭವಿಸಿದೆ. ಇನ್ನೂ ಅಪಘಾತದಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸದ್ಯ ಹುಮ್ನಾಬಾದ್ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಮದ್ವೆ ಮುಗಿಸಿಕೊಂಡು ವಾಪಸ್ಸಾಗುವಾಗ ಕಾರ್ ಪಲ್ಟಿ- ಐವರಿಗೆ ಗಾಯ

    ಮದ್ವೆ ಮುಗಿಸಿಕೊಂಡು ವಾಪಸ್ಸಾಗುವಾಗ ಕಾರ್ ಪಲ್ಟಿ- ಐವರಿಗೆ ಗಾಯ

    ಕೋಲಾರ: ಎರಿಟಿಗಾ ಕಾರು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಐವರು ಗಾಯಗೊಂಡ ಘಟನೆ ಕೋಲಾರ ನಗರದ ಹೊರವಲಯ ಟಮಕ ಬಳಿ ತಡರಾತ್ರಿ ನಡೆದ ಘಟನೆ.

    ಕೇದಾರ್(38), ಶಿವಶಂಕರ್(41) ಮೃತ ದುದೈವಿಗಳು. ಮೃತರು ಮುಳಬಾಗಿಲು ತಾಲೂಕು ಬೆಸ್ತರಹಳ್ಳಿ ಗ್ರಾಮದವರಾಗಿದ್ದಾರೆ. ಕೋಲಾರದಲ್ಲಿ ಮದುವೆ ಮುಗಿಸಿಕೊಂಡು ವಾಪಸ್ಸಾಗುವಾಗ ಈ ಘಟನೆ ನಡೆದಿದೆ. ಘಟನೆಯಿಂದಾಗಿ ಕಾರಿನಲ್ಲಿದ್ದ ಐವರಿಗೆ ಗಾಯಗಳಾಗಿದ್ದು, ಸದ್ಯ ಗಾಯಾಳುಗಳನ್ನು ಆರ್ ಎಲ್ ಜಾಲಪ್ಪಾ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಮತದಾನ ಹಾಕಲು ಪ್ರಯಾಣಿಸುತ್ತಿದ್ದ ಟಂ ಟಂ ಪಲ್ಟಿ- 8 ಜನರಿಗೆ ಗಾಯ, 3 ಜನರಿಗೆ ಗಂಭೀರ ಗಾಯ!

    ಮತದಾನ ಹಾಕಲು ಪ್ರಯಾಣಿಸುತ್ತಿದ್ದ ಟಂ ಟಂ ಪಲ್ಟಿ- 8 ಜನರಿಗೆ ಗಾಯ, 3 ಜನರಿಗೆ ಗಂಭೀರ ಗಾಯ!

    ಗದಗ: ಮತದಾನ ಹಾಕಲು ಪ್ರಯಾಣಿಸುತ್ತಿದ್ದ ಟಂ ಟಂ ಪಲ್ಟಿಯಾಗಿ 8 ಜನರಿಗೆ ಗಾಯ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜಿಲ್ಲೆಯ ನರಗುಂದ ಹೊರವಲಯದಲ್ಲಿ ಈ ಅಪಘಾತ ನಡೆದಿದೆ.

    ಮತದಾರರು ಬೆಳಗಾವಿಯಿಂದ ನರಗುಂದ ಮಾರ್ಗವಾಗಿ ಕೊಂಗವಾಡ ಗ್ರಾಮಕ್ಕೆ ಹೊರಟ್ಟಿದ್ದರು. ಈ ವೇಳೆ ಟಂಟಂ ವಾಹನ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಅಪಘಾತದಲ್ಲಿ 5 ಜನ ಮಹಿಳೆಯರು, 3 ಜನ ಪುರುಷರು ಗಾಯಗೊಂಡಿದ್ದಾರೆ.

    ಗಾಯಾಳುಗಳನ್ನು ನರಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದು, 3 ಜನ ಗಂಭೀರ ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.