Tag: injury

  • ರಾತ್ರೋರಾತ್ರಿ ಎರಡು ಅಂತಸ್ತಿನ ಕಟ್ಟಡ ಕುಸಿತ – ತಪ್ಪಿದ ಭಾರೀ ದುರಂತ

    ರಾತ್ರೋರಾತ್ರಿ ಎರಡು ಅಂತಸ್ತಿನ ಕಟ್ಟಡ ಕುಸಿತ – ತಪ್ಪಿದ ಭಾರೀ ದುರಂತ

    ಬೆಂಗಳೂರು: ರಾತ್ರೋರಾತ್ರಿ ಎರಡು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಬೆಂಗಳೂರಿನ ಆಸ್ಟಿನ್‍ಟೌನ್‍ನಲ್ಲಿ ರಾತ್ರಿ ಎರಡು ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದು ಬಿದ್ದಿದೆ. ಕಟ್ಟಡ ಕುಸಿದು ಬಿದ್ದ ರಭಸಕ್ಕೆ ಬಿಲ್ಡಿಂಗ್ ಪಕ್ಕದ ಶೀಟ್ ಮನೆಯಲ್ಲಿ ಮಲಗಿದ್ದ ದಂಪತಿಯ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇದು ರಾಜು ಅನ್ನೋರಿಗೆ ಸೇರಿದ ಸುಮಾರು 40 ವರ್ಷದಷ್ಟು ಹಳೆಯದಾದ ಕಟ್ಟಡವಾಗಿದೆ. ಇನ್ನು ಘಟನೆ ನಡೆದ ಸ್ಥಳಕ್ಕೆ ಶಾಸಕ ಎನ್.ಎ ಹ್ಯಾರಿಸ್ ಮತ್ತು ಪುತ್ರ ನಲಪಾಡ್ ಭೇಟಿ ನೀಡಿದ್ದರು. ಕಟ್ಟಡ ಕುಸಿದು ಬಿದ್ದ ದೃಶ್ಯಾವಳಿ ಸಿಸಿಟಿಯಲ್ಲಿ ಸೆರೆಯಾಗಿದ್ದು, ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಈ ಘಟನೆ ಕುರಿತು ವಿವೇಕನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಕಟ್ಟಡದ ಮಾಲೀಕ ರಾಜುರನ್ನು ವಶಕ್ಕೆ ಪಡೆಯಲಾಗಿದೆ.

  • ಕಾರ್, ಲಾರಿ ಮುಖಾಮುಖಿ ಡಿಕ್ಕಿ – 2 ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ದುರ್ಮರಣ

    ಕಾರ್, ಲಾರಿ ಮುಖಾಮುಖಿ ಡಿಕ್ಕಿ – 2 ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ದುರ್ಮರಣ

    ಕಾರವಾರ: ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಘಟನೆ ಯಲ್ಲಾಪುರ ತಾಲೂಕಿನ ಚಿಕ್ಕಮಾವಳ್ಳಿ ಗ್ರಾಮದಲ್ಲಿ ನಡೆದಿದೆ.

    ರಾಷ್ಟ್ರೀಯ ಹೆದ್ದಾರಿ 62ರ ಕಿರುವತ್ತಿ ಕ್ರಾಸ್ ಬಳಿಯ ಚಿಕ್ಕಮಾವಳ್ಳಿ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದ್ದು, ವಿನಾಯಕ ಹೆಗಡೆ(35), ಅರ್ಚನ(30) ಹಾಗೂ 2 ವರ್ಷದ ಮಗು ಶ್ರಾವಣಿ ಮೃತ ದುರ್ದೈವಿಗಳು.

    ಕಾರಿನಲ್ಲಿ ನಾಲ್ಕು ಜನ ಪ್ರಯಾಣಿಸುತ್ತಿದ್ದರು. ಇವರು ಕಾರಿನಲ್ಲಿ ಶಿರಸಿಯಿಂದ ಹುಬ್ಬಳ್ಳಿಗೆ ತೆರಳುತ್ತಿದ್ದರು. ಲಾರಿ ಹುಬ್ಬಳ್ಳಿಯಿಂದ ಯಲ್ಲಾಪುರಕ್ಕೆ ಬರುತ್ತಿತ್ತು. ಈ ವೇಳೆ ಚಿಕ್ಕಮಾವಳ್ಳಿ ಗ್ರಾಮದಲ್ಲಿ ವೇಗವಾಗಿ ಬಂದು ಕಾರ್ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಇನ್ನು ಈ ಅಪಘಾತದಿಂದ ಮತ್ತೊಂದು ಮಗುವಿಗೆ ಗಂಭೀರವಾಗಿ ಗಾಯವಾಗಿದ್ದು, ಮಗುವನ್ನು ಸಮೀಪದ ಯಲ್ಲಾಪುರ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪೊಲೀಸ್ ಕ್ರೇನ್‌ಗೆ ಕಾರ್ ಡಿಕ್ಕಿ – ಓರ್ವ ಮಹಿಳೆ ಸಾವು, ಮೂವರು ಗಂಭೀರ

    ಪೊಲೀಸ್ ಕ್ರೇನ್‌ಗೆ ಕಾರ್ ಡಿಕ್ಕಿ – ಓರ್ವ ಮಹಿಳೆ ಸಾವು, ಮೂವರು ಗಂಭೀರ

    ಕಾರವಾರ: ಪೊಲೀಸ್ ಕ್ರೇನ್‍ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮಹಿಳೆ ಮೃತಪಟ್ಟಿದ್ದು, ಮೂರು ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ನಡೆದಿದೆ.

    ರಾಷ್ಟ್ರೀಯ ಹೆದ್ದಾರಿ 66 ರ ದೀವಗಿಯಲ್ಲಿ ಈ ಅಪಘಾತ ಸಂಭವಿಸಿದೆ. ಆಸಿಯಾ(45) ಮೃತ ದುರ್ದೈವಿ. ಕಾರಿನಲ್ಲಿ ಕೇರಳ ಕಣ್ಣೂರಿನಿಂದ ಗೋವಾಕ್ಕೆ ಹೋಗುತ್ತಿದ್ದರು. ಈ ವೇಳೆ ಕಾರ್ ಅತೀ ವೇಗದಲ್ಲಿ ಕಾರವಾರ ದಿಂದ ಭಟ್ಕಳಕ್ಕೆ ಹೋಗುತಿದ್ದ ಪೊಲೀಸ್ ಕ್ರೇನ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಸಿಯಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಇನ್ನು ಕಾರಿನಲ್ಲಿದ್ದ ಮೂವರಿಗೆ ಗಂಭೀರವಾಗಿ ಗಾಯಗೊಂಡಿದ್ದು, ಉಡುಪಿಯ ಆದರ್ಶ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ. ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಸ್ ಆಟೋರಿಕ್ಷಾಗೆ ಡಿಕ್ಕಿ – 7 ಮಂದಿ ದುರ್ಮರಣ, 6 ಜನ ಗಂಭೀರ

    ಬಸ್ ಆಟೋರಿಕ್ಷಾಗೆ ಡಿಕ್ಕಿ – 7 ಮಂದಿ ದುರ್ಮರಣ, 6 ಜನ ಗಂಭೀರ

    ರಾಯಚೂರು: ಬಸ್ ಆಟೋರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಪಲ್ಟಿಯಾಗಿ , ಸ್ಥಳದಲ್ಲೇ 7 ಜನ ಮೃತಪಟ್ಟಿದ್ದು, ಆರು ಜನರ ಸ್ಥಿತಿ ಗಂಭೀರವಾಗಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

    ಆಂಧ್ರ ಪ್ರದೇಶದ ಕರ್ನೂಲ್ ಬಳಿ ಈ ಭೀಕರ ರಸ್ತೆ ಅಪಘಾತವಾಗಿದ್ದು. ಮೃತರನ್ನ ಕೋಮೂರು ಮಂಡಲದ ಚೆನುಗೊಂಡ್ಲ ಮತ್ತು ಕಳ್ಲವಾರಿ ಗ್ರಾಮದವರು ಅಂತ ಗುರುತಿಸಲಾಗಿದೆ.

    ಆಟೋದಲ್ಲಿ ಜನರು ಓರ್ವೋಕಲ್ ತಾಲೂಕಿನ ಸೋಮಯಾಜುಲಪಲ್ಲಿ ಯಿಂದ ನಾಟಿ ವೈದ್ಯರ ಬಳಿ ಮದ್ದು ಪಡೆಯಲು ಮಹಾನಂದಿಗೆ ತೆರಳುತ್ತಿದ್ದರು. ಈ ವೇಳೆ ಆಂಧ್ರ ಸಾರಿಗೆ ಬಸ್ ಆಟೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಏಳು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನು ಗಾಯಾಗಳುಗಳನ್ನ ಕರ್ನೂಲ್ ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಘಟನೆ ಕೊಡುಮೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಸೊಂಡಿಲಿನಿಂದ ಬಡಿದು ಕಾರನ್ನು ಜಖಂಗೊಳಿಸಿದ ಕಾಡಾನೆ- ಓರ್ವ ಗಂಭೀರ

    ಸೊಂಡಿಲಿನಿಂದ ಬಡಿದು ಕಾರನ್ನು ಜಖಂಗೊಳಿಸಿದ ಕಾಡಾನೆ- ಓರ್ವ ಗಂಭೀರ

    ಮಂಗಳೂರು: ಕಾಡಾನೆಯೊಂದು ಹಠಾತ್ ದಾಳಿ ನಡೆಸಿದ ಪರಿಣಾಮ ಕಾರು ಜಖಂಗೊಂಡು, ಕಾರಿನಲ್ಲಿದ್ದ ಓರ್ವ ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಿಳಿನೆಲೆಯಲ್ಲಿ ನಡೆದಿದೆ.

    ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಯಾತ್ರಾರ್ಥಿಗಳು ಮಾರುತಿ ಓಮ್ನಿ ಕಾರಿನಲ್ಲಿ ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದರು. ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿದ್ದ ವೇಳೆ ಬಿಳಿನೆಲೆಯ ಸಿಪಿಸಿಆರ್ ಐ ಸಮೀಪ ಕಾಡಾನೆ ರಸ್ತೆ ಹಾದು ಹೋಗುತ್ತಿತ್ತು. ಇದನ್ನು ಕಂಡ ಚಾಲಕ ಕಾರನ್ನು ನಿಲ್ಲಿಸಿದ್ದಾರೆ.

    ಈ ಸಂದರ್ಭದಲ್ಲಿ ಕಾಡಾನೆ ಹಿಂತಿರುಗಿ ಬಂದಿದ್ದು, ಸೊಂಡಿಲಿನಿಂದ ಕಾರಿನ ಮುಂಭಾಗಕ್ಕೆ ಬಡಿದು ಹಾನಿಯುಂಟು ಮಾಡಿದೆ. ಇದೇ ವೇಳೆ ಬಸ್ಸೊಂದು ಹಾರ್ನ್ ಮಾಡುತ್ತಾ ಬಂದ ಕಾರಣ ಕಾಡಾನೆ ಕಾರನ್ನು ಬಿಟ್ಟು ಓಡಿ ಹೋಗಿದೆ. ಇದರಿಂದಾಗಿ ಭಾರೀ ಅನಾಹುತವೊಂದು ತಪ್ಪಿದೆ. ಈ ಘಟನೆಯಲ್ಲಿ ಓರ್ವ ಗಂಭೀರ ಗಾಯಗೊಂಡಿದ್ದು, ಇನ್ನುಳಿದವರು ಅಪಾಯದಿಂದ ಪಾರಾಗಿದ್ದಾರೆ.

    https://www.youtube.com/watch?v=SdoaZVpXFIc

  • ಬ್ಯಾರಿಕೇಡ್ ಗೆ ಡಿಕ್ಕಿಯಾಗಿ ಸರ್ವಿಸ್ ರಸ್ತೆಯಿಂದ ಹೊರಹೋಗಿ ಕಾರ್ ಪಲ್ಟಿ – ಇಬ್ಬರ ದುರ್ಮರಣ

    ಬ್ಯಾರಿಕೇಡ್ ಗೆ ಡಿಕ್ಕಿಯಾಗಿ ಸರ್ವಿಸ್ ರಸ್ತೆಯಿಂದ ಹೊರಹೋಗಿ ಕಾರ್ ಪಲ್ಟಿ – ಇಬ್ಬರ ದುರ್ಮರಣ

    ಬೆಂಗಳೂರು: ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸಕ್ಕೆ ಇಬ್ಬರು ಬಲಿಯಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದ ಕಾರ್ ಸರ್ವಿಸ್ ರಸ್ತೆಯಿಂದ ಹೊರಹೋಗಿ ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಈ ಘಟನೆ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ. ಕ್ಯಾಬ್ ಚಾಲಕ ಶ್ರೀಧರ್ ಮತ್ತು ಪುನೀತ್ ಮೃತ ದುರ್ದೈವಿಗಳು.

    ಮೃತರು ಹಾಸನ ಹೊಳೆನರಸಿಪುರ ತಾಲೂಕಿನ ಗೊಂದಮಲೇನಹಳ್ಳಿಯವರು ಎಂದು ತಿಳಿದುಬಂದಿದೆ. ಇನ್ನೂ ಅಪಘಾತದ ತೀವ್ರತೆಗೆ ಮೃತರಿಬ್ಬರ ಮೆದಳು ಛಿದ್ರವಾಗಿದೆ. ಅಪಘಾತದಲ್ಲಿ ಮತ್ತೊಬ್ಬ ಪ್ರಯಾಣಿಕ ಸುಮ್ಮನ್ ಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಈ ಭೀಕರ ಅಪಘಾತಕ್ಕೆ ಕಾರಿನ ಅತೀಯಾದ ವೇಗ ಹಾಗೂ ಚಾಲಕನ ನಿಯಂತ್ರಣ ತಪ್ಪಿದ್ದೇ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗ್ತಿದ್ದ ಟೆಂಪೋ ಪಲ್ಟಿ- ಇಬ್ಬರ ದುರ್ಮರಣ

    ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗ್ತಿದ್ದ ಟೆಂಪೋ ಪಲ್ಟಿ- ಇಬ್ಬರ ದುರ್ಮರಣ

    ಯಾದಗಿರಿ: ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಟೆಂಪೋ ವಾಹನವೊಂದು ಪಲ್ಟಿಯಾಗಿ ಇಬ್ಬರು ಮೃತಪಟ್ಟ ಜಿಲ್ಲೆಯ ಗುರುಮಿಟ್ಕಲ್ ತಾಲೂಕಿನ ಸಿದ್ದಾಪುರ ಹತ್ತಿರ ನಡೆದಿದೆ.

    ಸಾಬಣ್ಣ, ನಾಗಮ್ಮ ಮೃತಪಟ್ಟ ಇಬ್ಬರು ಕಾರ್ಮಿಕರು. ಮೃತರು ಗಾಜರಕೋಟ್ ಗ್ರಾಮದ ನಿವಾಸಿಗಳಾಗಿದ್ದು, ಗಾಜರಕೋಟ್ ಗ್ರಾಮದಿಂದ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ದುಗನೂರ ಗ್ರಾಮದ ಕಡೆ ಕೂಲಿ ಕೆಲಸಕ್ಕಾಗಿ ತೆರಳುತ್ತಿದ್ದರು. ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಗುರುಮಠಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸ್ಥಳಕ್ಕೆ ಗುರುಮಿಟ್ಕಲ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಮಾವು ತುಂಬಿದ್ದ ಲಾರಿ ಪಲ್ಟಿ – ಮೂವರು ಮಹಿಳೆಯರು ಸೇರಿ 6ಮಂದಿ ದುರ್ಮರಣ

    ಮಾವು ತುಂಬಿದ್ದ ಲಾರಿ ಪಲ್ಟಿ – ಮೂವರು ಮಹಿಳೆಯರು ಸೇರಿ 6ಮಂದಿ ದುರ್ಮರಣ

    ಕೋಲಾರ: ಚಾಲಕನ ನಿಯಂತ್ರಣ ತಪ್ಪಿ ಮಾವು ತುಂಬಿದ್ದ ಲಾರಿ ಪಲ್ಟಿಯಾದ ಪರಿಣಾಮ ಲಾರಿಯಲ್ಲಿದ್ದ ಆರು ಮಂದಿ ಕೂಲಿಯಾಳುಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಆಂಧ್ರದ ಗಡಿಯಲ್ಲಿ ಸಂಭವಿಸಿದೆ.

    ಗಡಿ ಕುಪ್ಪಂ ಸಮೀಪದ ನಾಸೂರು ಬಳಿ ತಡರಾತ್ರಿ ಈ ಅಪಘಾತ ಸಂಭವಿಸಿದೆ. ನಾಸೂರು ಬಳಿ ಮಾವು ಕೀಳಲು ತಮಿಳುನಾಡಿನ ಕೊತ್ತಪೇಟೆ ಮೂಲದ 21 ಜನ ಕೂಲಿಯಾಳುಗಳು ಬಂದಿದ್ದರು. ಮಾವು ಕಿತ್ತು ಲಾರಿ ಮೂಲಕ ಕುಪ್ಪಂ ನಿಂದ ವಾಣಿಯಂಬಾಡಿ ಮಾರ್ಗವಾಗಿ ತೆರಳುತ್ತಿದ್ದರು.

    ಈ ವೇಳೆ ನಾಸೂರು ಬಳಿ ಅತಿವೇಗ ಹಾಗೂ ಚಾಲಕನ ನಿಯಂತ್ರಣ ತಪ್ಪಿದ ಹಿನ್ನೆಲೆಯಲ್ಲಿ ಲಾರಿ ಪಲ್ಟಿಯಾಗಿದೆ. ಪರಿಣಾಮ ಮೂರು ಮಂದಿ ಮಹಿಳೆಯರು ಹಾಗೂ 3 ಮಂದಿ ಪುರುಷರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ಈ ಅಪಘಾತದಿಂದ 15 ಜನ ಪ್ರಾಣಾಪಯದಿಂದ ಪಾರಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ.

    ಈ ಘಟನೆ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಕುಪ್ಪಂ ಪೊಲೀಸರು ಭೇಟಿ ನೀಡಿ, ಗಾಯಾಳುಗಳನ್ನು ಕೂಡಲೇ ತಮಿಳುನಾಡಿನ ಕೃಷ್ಣಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಸ್ಥಳದಲ್ಲಿ ಮೃತ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

    ಸೀಮಾಂದ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಚಿತ್ತೂರು ಜಿಲ್ಲಾಧಿಕಾರಿ ಪ್ರದ್ಯುಮ್ನರಿಂದ ಘಟನೆಯ ಸಂಪೂರ್ಣ ಮಾಹಿತಿ ಪಡೆದಿದ್ದು, ಸರ್ಕಾರದಿಂದ ವೈದ್ಯಕೀಯ ನೆರವು ನೀಡಿದ್ದಾರೆ.

  • ಕಾರ್ ಪಲ್ಟಿ – ವಕೀಲ ದುರ್ಮರಣ, ಇಬ್ಬರು ಗಂಭೀರ

    ಕಾರ್ ಪಲ್ಟಿ – ವಕೀಲ ದುರ್ಮರಣ, ಇಬ್ಬರು ಗಂಭೀರ

    ಮೈಸೂರು: ಕಾರ್ ಪಲ್ಟಿಯಾದ ಪರಿಣಾಮ ವಕೀಲ ಮೃತಪಟ್ಟಿದ್ದು, ಇಬ್ಬರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದ ಬಳಿ ನಡೆದಿದೆ.

    ವಕೀಲ ಬಾಲಕೃಷ್ಣ (42) ಮೃತ ದುರ್ದೈವಿ. ಕಾರಿನಲ್ಲಿ ಮೂರು ಮಂದಿ ಮೈಸೂರಿನಿಂದ ಹುಣಸೂರಿನ ಕಡೆಗೆ ಹೋಗುತ್ತಿದ್ದರು. ಈ ವೇಳೆ ಬಿಳಿಕೆರೆ ಗ್ರಾಮದ ಬಳಿ ನಿಯಂತ್ರಣ ತಪ್ಪಿ ಕಾರ್ ಪಲ್ಟಿಯಾಗಿದೆ. ಪರಿಣಾಮ ಬಾಲಕೃಷ್ಣ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಅಪಘಾತದಲ್ಲಿ ಕಾರಿನಲ್ಲಿದ್ದ ಹುಚ್ಚೇಗೌಡ ಹಾಗೂ ನಾರಾಯಣ್ ಗೆ ಗಂಭೀರವಾಗಿ ಗಾಯವಾಗಿದ್ದು, ಗಾಯಾಳುಗಳನ್ನು ಸಮೀಪದ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಕುರಿತು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • MBBS ವಿದ್ಯಾರ್ಥಿಯಿಂದ ಅವಾಂತರ – 3 ಕಾರುಗಳ ಮಧ್ಯೆ ಸರಣಿ ಅಪಘಾತ

    MBBS ವಿದ್ಯಾರ್ಥಿಯಿಂದ ಅವಾಂತರ – 3 ಕಾರುಗಳ ಮಧ್ಯೆ ಸರಣಿ ಅಪಘಾತ

    ಬೆಂಗಳೂರು: ಕುಡಿದ ಮತ್ತಿನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಮಾಡಿದ ಅವಾಂತರಕ್ಕೆ ಮೂರು ಕಾರುಗಳ ಮಧ್ಯೆ ಸರಣಿ ಅಪಘಾತವಾಗಿರುವ ಘಟನೆ ಬೆಂಗಳೂರಿನ ಪಾಪರೆಡ್ಡಿ ಪಾಳ್ಯದ ಬಳಿ ನಡೆದಿದೆ.

    ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಎಂಬಿಬಿಎಸ್ ವಿದ್ಯಾರ್ಥಿಯಾಗಿರೋ ರಾಹುಲ್ ಸುಮಾರು 10 ಗಂಟೆ ಕಂಠಪೂರ್ತಿ ಕುಡಿದು ಮಹೇಂದ್ರ ಕಾರಿನಲ್ಲಿ ಬರುತ್ತಿದ್ದನು. ಈ ವೇಳೆ ಕ್ರೇಟಾ, ಸ್ಕೂಡಾ ಕಾರು, ಮತ್ತೊಂದು ಕಾರಿನ ನಡುವೆ ಅಪಘಾತ ಉಂಟಾಗಿದೆ. ಅತಿ ವೇಗವೇ ಈ ಘಟನೆಗೆ ಕಾರಣ ಎನ್ನಲಾಗಿದೆ.

    ಇನ್ನು ಈ ಅಪಘಾತದಿಂದ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪರಾಗಿದ್ದಾರೆ.

    ಈ ಕುರಿತು ಕಾಮಾಕ್ಷಿಪಾಳ್ಯ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.