Tag: injury

  • ಕಾಡಾನೆ ದಾಳಿಯಿಂದ ಪಾರಾದ ತೋಟದ ಮಾಲೀಕ

    ಕಾಡಾನೆ ದಾಳಿಯಿಂದ ಪಾರಾದ ತೋಟದ ಮಾಲೀಕ

    ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಮಠಸಾಗರ ಗ್ರಾಮದ ಕಾಫಿತೋಟದಲ್ಲಿ ಆನೆ ದಾಳಿಯಿಂದ ತೋಟದ ಮಾಲೀಕರೊಬ್ಬರು ಗಾಯಗೊಂಡಿದ್ದಾರೆ.

    ಎಂ.ಡಿ.ಯೋಗೇಶ್ ಆನೆ ದಾಳಿಯಿಂದ ಗಾಯಗೊಂಡ ಕಾಫಿ ತೋಟದ ಮಾಲೀಕ. ಕಾಫಿತೋಟದಲ್ಲಿ ಕೆಲಸ ಮಾಡುವಾಗ ಏಕಾಏಕಿ ಆನೆಗಳು ಯೋಗೇಶ್ ಮೇಲೆ ದಾಳಿ ಮಾಡಿವೆ. ಆನೆ ದಾಳಿಯಿಂದ ಸಣ್ಣ-ಪುಟ್ಟ ಗಾಯಗಳಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಫಿತೋಟದಲ್ಲಿಯೇ ಆನೆಗಳು ಬೀಡು ಬಿಟ್ಟ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಂತಕಕ್ಕೊಳಗಾಗಿದ್ದಾರೆ.

    ಅಲ್ಲದೇ ಮಂಗಳವಾರದಂದೂ ಸಹ ಹಳೆಕೆರೆ ಗ್ರಾಮದ ಮಲ್ಲಿಗೆ ಎಸ್ಟೇಟ್ ನಲ್ಲಿ 4 ಮರಿಯಾನೆಗಳು ಸೇರಿದಂತೆ 20 ಕಾಡಾನೆಗಳು ಬೀಡು ಬಿಟ್ಟು, ಓರ್ವ ವ್ಯಕ್ತಿಯ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದವು.

  • ಅಪಘಾತದಲ್ಲಿ ಯುವತಿ ದುರ್ಮರಣ -ಕಣ್ಣುದಾನ ಮಾಡಿ ಸಾವಿನಲ್ಲೂ ಸಾರ್ಥಕತೆ

    ಅಪಘಾತದಲ್ಲಿ ಯುವತಿ ದುರ್ಮರಣ -ಕಣ್ಣುದಾನ ಮಾಡಿ ಸಾವಿನಲ್ಲೂ ಸಾರ್ಥಕತೆ

    ಬೆಂಗಳೂರು: ಸ್ಕೂಟಿಗೆ ಕಾಂಕ್ರೀಟ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಲಾಲ್‍ಬಾಗ್ ಬಳಿ ಇಂದು ಸಂಭವಿಸಿದೆ.

    ಮೃತಳನ್ನು 19 ವರ್ಷದ ಪ್ರೀತಿ ಎಂದು ಗುರುತಿಸಲಾಗಿದೆ. ಪ್ರೀತಿ ಸುರಾನ ಕಾಲೇಜ್ ನಲ್ಲಿ ಫ್ರಥಮ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದರು. ಇಂದು ಪ್ರೀತಿ ಮತ್ತು ಲಾವಣ್ಯ ಸಹೋದರಿಯರಿಬ್ಬರು ಬೈಕಿನಲ್ಲಿ ಹೋಗುತ್ತಿದ್ದರು. ಲಾಲ್‍ಬಾಗ್ ಬಳಿ ಬರುತ್ತಿದ್ದಂತೆಯೇ ವೇಗವಾಗಿ ಬಂದ ಕಾಂಕ್ರೀಟ್ ಮಿಶ್ರಣ ಮಾಡುವ ಟ್ರಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪ್ರೀತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಈ ಅಪಘಾತದಿಂದ 24 ವರ್ಷದ ಲಾವಣ್ಯಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ತೀವ್ರತೆಗೆ ಸ್ಕೂಟಿ ಸಂಪೂರ್ಣ ಜಖಂ ಆಗಿದ್ದು, ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದೆ.

    ಪೋಷಕರು ಅಪಘಾತದಲ್ಲಿ ಸಾವನ್ನಪ್ಪಿದ್ದ ಪ್ರೀತಿಯ ಕಣ್ಣುದಾನ ಮಾಡಿದ್ದಾರೆ. ಈ ಮೂಲಕ ಪ್ರೀತಿ ಸಾವಿನಲ್ಲೂ ಕಣ್ಣುದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ವಿ.ವಿ. ಪುರಂ ಟ್ರಾಫಿಕ್ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಿಕ್ಕಮಗಳೂರಲ್ಲಿ ಕಾಳಿಂಗ ಸರ್ಪಕ್ಕೆ ಚಿಕಿತ್ಸೆ

    ಚಿಕ್ಕಮಗಳೂರಲ್ಲಿ ಕಾಳಿಂಗ ಸರ್ಪಕ್ಕೆ ಚಿಕಿತ್ಸೆ

    ಚಿಕ್ಕಮಗಳೂರು: ಮೈಮೇಲೆ ಗಾಯವಾಗಿದ್ದ ಕಾಳಿಂಗ ಸರ್ಪಕ್ಕೆ ಚಿಕಿತ್ಸೆ ಕೊಡಿಸಿ ಅರಣ್ಯಕ್ಕೆ ಬಿಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವನಗಲ್ಲು ಗ್ರಾಮದ ರಿಚರ್ಡ್ ಲೋಬೋ ಅವರ ತೋಟದಲ್ಲಿ ಸುಮಾರು 15 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಕಂಡು ಬಂದಿದೆ. ಆದರೆ ಅದರ ಮೈಮೇಲೆ ಗಾಯವಾಗಿದ್ದರಿಂದ ತೆವಳಲಾಗದೆ ನಾಲ್ಕು ದಿನದಿಂದ ಒಂದೇ ಜಾಗದಲ್ಲಿ ನಿತ್ರಾಣಗೊಂಡು ಬಿದ್ದಿದೆ.

    ಸರ್ಪವನ್ನ ನೋಡಿದ ತೋಟದ ಮಾಲೀಕರು ಹಾಗೂ ಕೂಲಿ ಕಾರ್ಮಿಕರು ಗಾಬರಿಯಾಗಿದ್ದರು. ಬಳಿಕ ಉರಗ ತಜ್ಞ ನರೇಶ್ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಸ್ನೇಕ್ ನರೇಶ್, ಕಾಳಿಂಗನನ್ನ ಸೆರೆ ಹಿಡಿದು ಸ್ಥಳೀಯ ಪಶು ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

    ಕಾಳಿಂಗ ಸ್ವಲ್ಪ ಸುಧಾರಿಸಿದ ನಂತರ ಅದನ್ನು ಸುರಕ್ಷಿತವಾಗಿ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಬೃಹತ್ ಕಾಳಿಂಗನನ್ನ ಸೆರೆ ಹಿಡಿದ ಮೇಲೆ ತೋಟದ ಮಾಲೀಕ ಹಾಗೂ ಕೂಲಿ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ.

  • ಕಾರ್ ಪಲ್ಟಿ – ತಂದೆ ಸಾವು, ಮಗಳು ಗಂಭೀರ

    ಕಾರ್ ಪಲ್ಟಿ – ತಂದೆ ಸಾವು, ಮಗಳು ಗಂಭೀರ

    ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಪರಿಣಾಮ ಸ್ಥಳದಲ್ಲಿಯೇ ತಂದೆ ಸಾವನ್ನಪ್ಪಿದ್ದು, ಮಗಳಿಗೆ ಗಾಯವಾದ ಘಟನೆ ಹಾವೇರಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನ ಬಸವರಾಜ(56) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡ ಮಗಳು ಅಮೃತಾರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆ ದಾಖಲಿಸಲಾಗಿದೆ.

    ಜಿಲ್ಲೆಯ ಶಿಗ್ಗಾಂವಿಯಿಂದ ಬೆಂಗಳೂರಿನತ್ತ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಘಟನೆ ಹಾವೇರಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ಗಾಳಿಗೆ ಹಾರಿ ಬಿತ್ತು ಶಾಲೆಯ ಮೇಲ್ಛಾವಣಿ: ತಪ್ಪಿದ ಭಾರೀ ಅನಾಹುತ

    ಗಾಳಿಗೆ ಹಾರಿ ಬಿತ್ತು ಶಾಲೆಯ ಮೇಲ್ಛಾವಣಿ: ತಪ್ಪಿದ ಭಾರೀ ಅನಾಹುತ

    ಮೈಸೂರು: ಭಾರೀ ಗಾಳಿಯಿಂದಾಗಿ ಶಾಲೆಯ ಹೊಸ ಕಟ್ಟಡದ ಮೇಲ್ಛಾವಣಿ ಹಾರಿ ಬಿದ್ದು, 20ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ರತ್ನಾಪುರಿ ಗ್ರಾಮದಲ್ಲಿ ಸಂಭವಿಸಿದೆ.

    ಗ್ರಾಮದ ವಿಶ್ವ ಶಾಂತಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನೂರು ಜನರು ಸೇರಿದ್ದರು. ಈ ವೇಳೆ ಗಾಳಿಯ ಬೀಸಿದ ಪರಿಣಾಮ, ಶಾಲೆಯ ಹೊಸ ಕಟ್ಟಡದ ಎಲ್ಲ ಕೊಠಡಿಗಳ ಶೀಟ್‍ಗಳು (ಮೇಲ್ಛಾವಣಿ) ಹಾರಿ ಬಿದ್ದಿದ್ದು, ಕೆಳಗೆ ಸಿಲುಕಿದ ಕೆಲವರಿಗೆ ಗಾಯವಾಗಿದೆ.

    ಕಾರ್ಯಕ್ರಮದಲ್ಲಿ ಬಿಐಓ ರೇವಣ್ಣ, ಜಿಲ್ಲಾ ಪಂಚಾಯ್ತಿ ಸದಸ್ಯ ಸುರೇಂದ್ರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಅವಘಡದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಗಾಯಾಳುಗಳನ್ನು ಹುಣಸೂರು ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಖಾಸಗಿ ಬಸ್ ಪಲ್ಟಿ- 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ!

    ಖಾಸಗಿ ಬಸ್ ಪಲ್ಟಿ- 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ!

    ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

    ಕಾರ್ಕಳ ತಾಲೂಕಿನ ನಂದಳಿಕೆ ಎಂಬಲ್ಲಿ ಈ ಘಟನೆ ನಡೆದಿದ್ದು, 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಖಾಸಗಿ ಬಸ್ ಕಾರ್ಕಳದಿಂದ ಮಂಗಳೂರು ಕಡೆಗೆ ತೆರಳುತ್ತಿತ್ತು. ಈ ಸಂದರ್ಭ ತಿರುವಿನಲ್ಲಿ ಬಸ್ ಪಲ್ಟಿಯಾಗಿ ಬಿದ್ದಿದೆ.

    ಘಟನೆಯಿಂದಾಗಿ ಗಾಯಗೊಂಡವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಿರುವಿನಲ್ಲಿ ಬ್ರೇಕ್ ಹಿಡಿಯದ್ದರಿಂದ ಬಸ್ ಪಲ್ಟಿಯಾಗಿದೆ ಎನ್ನಲಾಗಿದೆ.

    ಕೂಡಲೇ ನೂರಾರು ಸ್ಥಳೀಯ ಸ್ಥಳಕ್ಕಾಗಮಿಸಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಲ್ಲಿ ಸಹಕಾರ ನೀಡಿದರು.

  • ರಸ್ತೆ ಪಕ್ಕದಲ್ಲಿದ್ದವರ ಮೇಲೆ ಹರಿದ ಟಿಪ್ಪರ್ – ಓರ್ವ ಮಹಿಳೆ ಸಾವು, ನಾಲ್ವರು ಗಂಭೀರ

    ರಸ್ತೆ ಪಕ್ಕದಲ್ಲಿದ್ದವರ ಮೇಲೆ ಹರಿದ ಟಿಪ್ಪರ್ – ಓರ್ವ ಮಹಿಳೆ ಸಾವು, ನಾಲ್ವರು ಗಂಭೀರ

    ಧಾರವಾಡ: ರಸ್ತೆ ಪಕ್ಕದಲ್ಲಿ ನಿಂತ ಐದು ಜನರ ಮೇಲೆ ಟಿಪ್ಪರ್ ಹರಿದ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, 4 ಜನರು ಗಂಭೀರವಾಗಿ ಗಾಯಗೊಂಡ ಘಟನೆ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಬಳಿ ನಡೆದಿದೆ.

    ಬಸವ್ವ ತಳವಾರ (50) ಮೃತ ದುರ್ದೈವಿ. ಧಾರವಾಡದಿಂದ ಸವದತ್ತಿ ತಾಲೂಕಿನ ಕಡೆಗೆ ಹೊರಟ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ. ಚಾಲಕ ಟಿಪ್ಪರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಕೆಎ-25 ಡಿ-6449 ನಂಬರ್ ಟಿಪ್ಪರ್ ಜನರಿಗೆ ಡಿಕ್ಕಿ ಹೊಡೆದ ತಕ್ಷಣ ಸ್ಥಳದಲ್ಲಿದ್ದ ಜನರು ಗಾಯಗೊಂಡವರಿಗೆ ಆರೈಕೆ ಮಾಡಿ ಆಸ್ಪತ್ರೆಗೆ ರವಾನಿಸಿದ್ದಾರೆ.

    ಗಾಯಾಳುಗಳಾದ ಜಾಕೀರ್ ಹುಸ್ಸೇನ್ ಮುಲ್ಲಾ (35), ರೇಣುಕಾ ಹೊಂಬಳ(35), ಮಲ್ಲಿಕಾರ್ಜುನ ಹನುಮಂತಪ್ಪ ನವಲೂರು(40) ಮತ್ತು ರಿಯಾಜ್ ಖಾನ್ (40) ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

    ಸದ್ಯ ಗ್ರಾಮೀಣ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಟಿಪ್ಪರ್ ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

  • 30ಕ್ಕೂ ಅಧಿಕ ಪ್ರಯಾಣಿಕರಿದ್ದ ಖಾಸಗಿ ಬಸ್ ಪಲ್ಟಿ!

    30ಕ್ಕೂ ಅಧಿಕ ಪ್ರಯಾಣಿಕರಿದ್ದ ಖಾಸಗಿ ಬಸ್ ಪಲ್ಟಿ!

    ಬೆಂಗಳೂರು: ರಸ್ತೆಯಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನಲ್ಲಿ ನಡೆದಿದೆ.

    ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಬಳಿ ಬೆಂಗಳೂರಿನಿಂದ ಮಾಲೂರಿಗೆ ಸಂಚರಿಸುತ್ತಿದ್ದ ಬಸ್ ಪಲ್ಟಿಯಾಗಿದೆ. ಚಾಲಕನ ಅತಿವೇಗ ಮತ್ತು ಅಜಾಗರೂಕತೆ ಈ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಅಪಘಾತದ ನಂತರ ಬಸ್ ಚಾಲಕ ಮತ್ತು ಕಂಡಕ್ಟರ್ ಸ್ಥಳದಿಂದ ಪರಾರಿಯಾಗಿದ್ದು, ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಸರ್ಕಾರಿ ಬಸ್ ಹಳ್ಳಕ್ಕೆ ಉರುಳಿ 11 ಮಂದಿಗೆ ಗಾಯ!

    ಸರ್ಕಾರಿ ಬಸ್ ಹಳ್ಳಕ್ಕೆ ಉರುಳಿ 11 ಮಂದಿಗೆ ಗಾಯ!

    ಹಾವೇರಿ: ಸರ್ಕಾರಿ ಬಸ್ ರಸ್ತೆ ಪಕ್ಕದ ಹಳ್ಳಕ್ಕೆ ಉರುಳಿ ಬಿದ್ದು ಹನ್ನೊಂದು ಜನರಿಗೆ ಗಾಯವಾದ ಘಟನೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಹಿರೇಮೊರಬ ಗ್ರಾಮದ ಬಳಿ ನಡೆದಿದೆ.

    11 ಜನ ಗಾಯಾಳುಗಳಿಗೆ ಮಾಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಏಳು ಜನರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ. ಸರ್ಕಾರಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಹಳ್ಳದ ಪಕ್ಕಕ್ಕೆ ಉರುಳಿದೆ.

    ಬಸ್ ರಾಣೇಬೆನ್ನೂರು ನಗರದಿಂದ ಶಿಕಾರಿಪುರದತ್ತ ಹೊರಟಿತ್ತು. ರಟ್ಟಿಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸದ್ಯ ಸ್ಥಳಕ್ಕೆ ರಟ್ಟಿಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಮದುವೆ ಮುಗಿಸಿ ಬೆಂಗಳೂರಿಗೆ ವಾಪಸಾಗ್ತಿದ್ದಾಗ ಲಾರಿ-ಕಾರ್ ಡಿಕ್ಕಿ – ಒಂದೇ ಕುಟುಂಬದ ಮೂವರ ಸಾವು

    ಮದುವೆ ಮುಗಿಸಿ ಬೆಂಗಳೂರಿಗೆ ವಾಪಸಾಗ್ತಿದ್ದಾಗ ಲಾರಿ-ಕಾರ್ ಡಿಕ್ಕಿ – ಒಂದೇ ಕುಟುಂಬದ ಮೂವರ ಸಾವು

    ಚಿತ್ರದುರ್ಗ: ಲಾರಿ ಮತ್ತು ಕಾರ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಮಾಡನಾಯಕಹಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ

    ಮೃತರನ್ನು ಮಂದಾರ (19), ರುಕ್ಮಿಣಿ(20) ಮತ್ತು ನೆವಿಲ್(26) ಅಂತ ಗುರುತಿಸಲಾಗಿದೆ. ಮೃತರು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕೋಮರಗನಘಟ್ಟದವರಾಗಿದ್ದು, ಇವರು ಬೆಂಗಳೂರಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.

    ಐವರು ಕಾರಿನಲ್ಲಿ ಬಾಗಲಕೋಟೆಯ ಸಂಬಂಧಿಯ ಮದುವೆಗೆ ಹೋಗಿದ್ದರು. ಬಳಿಕ ಮದುವೆ ಮುಗಿಸಿಕೊಂಡು ಸುಮಾರು ತಡರಾತ್ರಿ 2.30ಕ್ಕೆ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ಮಾಡನಾಯಕಹಳ್ಳಿಯ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಕಾರಿನ ಚಾಲಕ ಅತೀ ವೇಗವಾಗಿ ಬಂದು ಲಾರಿಗೆ ಡಿಕ್ಕಿ ಹೊಡೆದಿದ್ದಾನೆ.

    ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದಾರೆ. ಮನೋಹರ್ ಮತ್ತು ಮಹೇಂದ್ರರಿಗೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಆಸ್ಪತ್ರೆಗೆ ಎಸ್‍ಪಿ ಶ್ರೀನಾಥ್ ಎಂ ಜೋಷಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಘಟನೆ ತುರುವನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.