Tag: injury

  • ಬಸ್ ಮತ್ತು ಟಿಪ್ಪರ್ ನಡುವೆ ಡಿಕ್ಕಿ- ಇಬ್ಬರು ಸ್ಥಳದಲ್ಲೇ ಸಾವು – 15 ಮಂದಿಗೆ ಗಂಭೀರ ಗಾಯ

    ಬಸ್ ಮತ್ತು ಟಿಪ್ಪರ್ ನಡುವೆ ಡಿಕ್ಕಿ- ಇಬ್ಬರು ಸ್ಥಳದಲ್ಲೇ ಸಾವು – 15 ಮಂದಿಗೆ ಗಂಭೀರ ಗಾಯ

    ವಿಜಯಪುರ: ಸರ್ಕಾರಿ ಬಸ್ ಹಾಗೂ ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದ ಘಟನೆ ವಿಜಯಪುರದ ತಾಳಿಕೋಟೆ ತಾಲೂಕು ಕೊಣ್ಣೂರು ಕ್ರಾಸ್ ಬಳಿ ನಡೆದಿದೆ.

    ಮೀರಜ್ ನಿಂದ ತಾಳಿಕೋಟೆಗೆ ಬಸ್ ಹೊರಟಾಗ ಅಪಾಘಾತದ ವೇಗಕ್ಕೆ ಸರ್ಕಾರಿ ಬಸ್ ಪಲ್ಟಿ ಆಗಿದ್ದು, ಅವಘಡ ಸಂಭವಿಸಿದೆ. ತಾಳಿಕೋಟೆ ಘಟಕಕ್ಕೆ ಸೇರಿದ ಎಂ 28 ಈ 2428 ಸರ್ಕಾರಿ ಬಸ್ ಎಂದು ತಿಳಿದು ಬಂದಿದೆ.

    ಈ ಅಪಘಾತದಲ್ಲಿ ಓರ್ವ ವ್ಯಕ್ತಿ ಮತ್ತು ನಾಲ್ಕು ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಕೊಣ್ಣೂರ ಕೆನರಾ ಬ್ಯಾಂಕ್ ನೌಕರ ವಿನೋಧ ಬಾಕಲಿ(35) ಹಾಗೂ ಮಸಬಿನಾಳ ಗ್ರಾಮದ ನಾಲ್ಕು ವರ್ಷದ ಬಾಲಕಿ ಅಮೃತಾ ಯಳಮೇಲಿ ಎಂದು ಗುರುತಿಸಲಾಗಿದೆ. ಬಸ್ ನಲ್ಲಿದ್ದ 15 ಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡ ಪ್ರಯಾಣಿಕರನ್ನು 108 ಸಿಬ್ಬಂದಿ ತಾಳಿಕೋಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

    ಈ ಘಟನೆ ಬಗ್ಗೆ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಡ್ಯಾಂ ನೋಡಲು ಬಂದ ಜನಸಾಗರ – 10ಕ್ಕೂ ಹೆಚ್ಚು ಅಪಘಾತ, ಓರ್ವ ಸಾವು, 25 ಮಂದಿಗೆ ಗಾಯ

    ಡ್ಯಾಂ ನೋಡಲು ಬಂದ ಜನಸಾಗರ – 10ಕ್ಕೂ ಹೆಚ್ಚು ಅಪಘಾತ, ಓರ್ವ ಸಾವು, 25 ಮಂದಿಗೆ ಗಾಯ

    ಬಳ್ಳಾರಿ: ತುಂಗಭದ್ರಾ ಡ್ಯಾಂನ 32 ಕ್ರಸ್ಟ್ ಗೆಟ್ ಮೂಲಕ ಒಂದು ಲಕ್ಷಕ್ಕೂ ಹೆಚ್ಚು ನೀರು ನದಿಯ ಮೂಲಕ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಡ್ಯಾಂ ನೋಡಲು ಜನಸಾಗರ ಬಂದಿದ್ದು, ಹತ್ತಕ್ಕೂ ಹೆಚ್ಚು ಅಪಘಾತಗಳು ನಡೆದಿದೆ.

    ಟಿಬಿ ಡ್ಯಾಮ್ ಸುರಂಗ ಮಾರ್ಗದ ಬಳಿ ಅಪಘಾತ ಸಂಭವಿಸಿದ್ದು, ಮರಿಯಮ್ಮನಹಳ್ಳಿ ನಿವಾಸಿ ಅನಿಲ್ ಕುಮಾರ್ ಶೆಟ್ಟಿ (23) ಮೃತ ಪಟ್ಟಿದ್ದಾನೆ. ಬಸ್ಸಿಗೆ ಹಿಂದಿನಿಂದ ಬೈಕ್ ಡಿಕ್ಕಿ ಹೊಡೆದು ಕೆಳಗೆ ಬಿದ್ದು ಪರಿಣಾಮ ಸ್ಥಳದಲ್ಲೇ ಅನಿಲ್ ಮೃತಪಟ್ಟಿದ್ದಾನೆ. ಈತನ ಜೊತೆಯಲ್ಲಿದ್ದ ಮತ್ತೊಬ್ಬನಿಗೆ ಗಂಭೀರವಾಗಿ ಗಾಯವಾಗಿದೆ.

    ಇತ್ತ ಗುಂಡ ಪಾರಿಸ್ಟ್ ಬಳಿ ಟಾಟಾ ಸೋಮೊ ಮತ್ತು ಬಸ್ಸು ಡಿಕ್ಕಿಯಾಗಿ ನಾಲ್ಕು ಜನರಿಗೆ ಗಾಯವಾಗಿದೆ. ಗಾಯಗೊಂಡವರನ್ನು ಹನುಮಕ್ಕ (25), ಶೇಬಕ್(30) ಮತ್ತು ಪಾರಮ್ಮ (65) ಎಂದು ಗುರುತಿಸಲಾಗಿದೆ. ಬೇರೆ ಬೇರೆ ಅಪಘಾತದಲ್ಲಿ ರಾಘವೇಂದ್ರ(25), ವೆಂಕಣ್ಣ ಗೌಡ(56) ಸೇರಿದಂತೆ 25 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಅಪಘಾತದಲ್ಲಿ ಗಾಯಗೊಂಡವರನ್ನು ಹೊಸಪೇಟೆ ಸಾರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗಿದೆ.

    ಅನೇಕ ದಿನಗಳಿಂದ ಜಿಲ್ಲೆಯಾದ್ಯಂತ ಎಡೆಬಿಡದೆ ಮಳೆ ಸುರಿಯುತ್ತಿರುವ ಪರಿಣಾಮ ಎಲ್ಲ ನದಿಗಳು ತುಂಬಿ ಹರಿಯುತ್ತಿವೆ. ತುಂಗಭದ್ರಾ ನದಿ ಕೂಡ ತುಂಬಿ ಹರಿಯುತ್ತಿದ್ದು, ಬುಧವಾರ ನದಿಯ ಒಳಹರಿವು ಹೆಚ್ಚಾದ ಕಾರಣ 32 ಕ್ರಸ್ಟ್ ಗೇಟ್ ಗಳ ಮೂಲಕ ಸುಮಾರು ಒಂದು ಲಕ್ಷಕ್ಕಿಂತಲೂ ಅಧಿಕ ನೀರನ್ನು ಹೊರ ಬಿಡಲಾಗಿದೆ. ಆದ್ದರಿಂದ ಜನರು ಡ್ಯಾಂ ನೋಡಲು ಬಂದಿದ್ದಾರೆ. ಈ ವೇಳೆ ಕೆಲವು ಅಪಘಾತ ಸಂಭವಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಿನಿ ಬಸ್ ಪಲ್ಟಿ – ಮಹಿಳೆ ಕೈ ಕಟ್, ಹಲವರಿಗೆ ಗಾಯ

    ಮಿನಿ ಬಸ್ ಪಲ್ಟಿ – ಮಹಿಳೆ ಕೈ ಕಟ್, ಹಲವರಿಗೆ ಗಾಯ

    ಚಾಮರಾಜನಗರ: ಮಿನಿ ಬಸ್ ಪಲ್ಟಿಯಾದ ಪರಿಣಾಮ ಮಹಿಳೆಯ ಕೈ ತುಂಡಾಗಿದ್ದು, ಹಲವರಿಗೆ ಗಾಯವಾಗಿರುವ ಘಟನೆ ಜಿಲ್ಲೆಯ ಹನೂರಿನ ವಲಯದಲ್ಲಿ ನಡೆದಿದೆ.

    ಹನೂರು ತಾಲೂಕಿನ ಬೊಪ್ಪೆಗೌಡನಪುರ ಗ್ರಾಮದ ನಿವಾಸಿ ಅಮ್ಮಣ್ಣಿಯಮ್ಮ(55) ಕೈ ಕಳೆದುಕೊಂಡ ಮಹಿಳೆ. ಇಂದು ಭೀಮನ ಅಮವಾಸ್ಯೆ ಅಂಗವಾಗಿ ಭಕ್ತರು ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.

    ಭೀಮನ ಅಮವಾಸ್ಯೆ ಪ್ರಯುಕ್ತ ಇಂದು ಮಲೆಮಹಾದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ಇತ್ತು. ಆದ್ದರಿಂದ ಮಿನಿ ಬಸ್ಸಿನಲ್ಲಿ ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿದ್ದರು. ಹನೂರಿನ ವಲಯದಲ್ಲಿ ಕಿರಿದಾದ ರಸ್ತೆ ಇದ್ದ ಪರಿಣಾಮ ಎದುರಿಗೆ ಬರುತ್ತಿದ್ದ ಟಿಟಿ ನಡುವಿನ ಅಪಘಾತ ತಪ್ಪಿಸಲು ಹೋಗಿ ಮಿನಿ ಬಸ್ ಪಲ್ಟಿಯಾಗಿದೆ. ಪರಿಣಾಮ ಮಿನಿ ಬಸ್ ನಲ್ಲಿದ್ದ ಮಹಿಳೆ ಕೈ ತುಂಡಾಗಿದೆ. ಉಳಿದ ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.

    ಅಪಘಾತ ಸಂಭವಿಸಿ ರಕ್ತದ ಮಡುವಿನಲ್ಲಿ ನರಳುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದೆ ಜನರು ಸುಮ್ಮನೆ ನೋಡುತ್ತಾ ಮಾನವಿಯತೆಯನ್ನು ಮರೆತಿದ್ದಾರೆ. ಕೊನೆಗೆ ಸ್ಥಳದಲ್ಲಿದ್ದವರು ಅಂಬುಲೆನ್ಸ್ ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಆದರೆ ಅಪಘಾತ ಸಂಭವಿಸಿ ಒಂದೂವರೆ ಗಂಟೆ ಆದರೂ ಸ್ಥಳಕ್ಕೆ ಅಂಬುಲೆನ್ಸ್ ಬರಲಿಲ್ಲ. ಇತ್ತ ಅಪಘಾತದಿಂದ ಕೈ ತುಂಡಾಗಿ ನರಳಾಡುತ್ತಿದ್ದರೂ ಜನರು ನೆರವಿಗೆ ಬರಲಿಲ್ಲ. ಕೊನೆಗೆ ತಡವಾಗಿ ಅಂಬುಲೆನ್ಸ್ ಬಂದಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಘಟನೆ ಹನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಬೆಂಗ್ಳೂರಲ್ಲಿ ಸಿಲಿಂಡರ್ ಸ್ಫೋಟ: ಮಗು ಸೇರಿ ಮೂವರಿಗೆ ಗಂಭೀರ ಗಾಯ

    ಬೆಂಗ್ಳೂರಲ್ಲಿ ಸಿಲಿಂಡರ್ ಸ್ಫೋಟ: ಮಗು ಸೇರಿ ಮೂವರಿಗೆ ಗಂಭೀರ ಗಾಯ

    ಬೆಂಗಳೂರು: ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡಿರುವ ಘಟನೆ ನಗರದ ಯಶವಂತಪುರದ ತ್ರಿವೇಣಿ ರೋಡ್‍ನಲ್ಲಿ ನಡೆದಿದೆ.

    ಇಂದು ಸಂಜೆ ಗ್ಯಾಸ್‍ನ ಕ್ಯಾಪ್ ತೆಗೆಯುವಾಗ ಸಿಲಿಂಡರ್ ಸ್ಫೋಟಗೊಂಡಿದೆ. ಪರಿಣಾಮ ಸ್ಫೋಟದ ತೀವ್ರತೆಗೆ ಮನೆಯಲ್ಲಿದ್ದ ಮಗು ಸೇರಿ ಮೂವರು ಗಂಭೀರ ಗಾಯಗಳಾಗಿವೆ. ಅಷ್ಟೇ ಅಲ್ಲದೇ ಮನೆಯಲ್ಲಿದ್ದ ಫ್ರಿಡ್ಜ್ ಸೇರಿ ಪೀಠೋಪಕರಣ ಧ್ವಂಸವಾಗಿದೆ. ಗಾಯಾಳುಗಳನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ವಾಹನ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶ್ವಸಿಯಾಗಿದ್ದಾರೆ. ಸಿಲಿಂಡರ್ ಮೇಲಿನ ಕ್ಯಾಪ್ ತೆಗೆದ ರಭಸಕ್ಕೆ ಟ್ಯಾಂಕ್‍ನಲ್ಲಿದ್ದ ಗ್ಯಾಸ್ ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯಶವಂತಪುರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಬೆಳ್ತಂಗಡಿಯಲ್ಲಿ ಭಾರೀ ಭೂಕುಸಿತ – 3.5.ಕಿ.ಮೀ. ಕೊಚ್ಚಿಕೊಂಡು ಹೋಯ್ತು ಮರ

    ಬೆಳ್ತಂಗಡಿಯಲ್ಲಿ ಭಾರೀ ಭೂಕುಸಿತ – 3.5.ಕಿ.ಮೀ. ಕೊಚ್ಚಿಕೊಂಡು ಹೋಯ್ತು ಮರ

    ಮಂಗಳೂರು: ಗುಡ್ಡಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಳ್ತಂಗಡಿಯ ಗಂಡಿಬಾಗಿಲು ಬಳಿ ಭೂಕುಸಿತ ಸಂಭವಿಸಿದೆ.

    ಭೂಕೂಸಿತದಿಂದಾಗಿ ತೋಟದಲ್ಲಿದ್ದ ಮರ, ಗಿಡಗಳು 3.5 ಕಿ.ಮೀ. ಕೊಚ್ಚಿಕೊಂಡು ಹೋಗಿವೆ. ಅನಾಹುತದಿಂದಾಗಿ ಮನೆಯಲ್ಲಿದ್ದ ಎಲಿಯಮ್ಮ(70), ರೆನ್ನಿ, ವಿಸ್ಸಿ, ಪ್ರಿಯಾ(11), ಪ್ರೀಸ್ಸಿ(13)  ಗಾಯಗೊಂಡಿದ್ದು, ಅವರಿಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

    ಅಷ್ಟೇ ಅಲ್ಲದೇ ಜೋಸೆಫ್ ಎಂಬವರ ಸುಮಾರು 300 ಕ್ಕೂ ಹೆಚ್ಚು ಅಡಿಕೆ ತೋಟ ಸೇರಿ ಇನ್ನಿತರ ಕೃಷಿ ಬೆಳೆ ನಾಶವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಜೆಲ್ಲಿಫಿಶ್ ದಾಳಿಯಿಂದಾಗಿ 150 ಕ್ಕೂ ಹೆಚ್ಚು ಪ್ರವಾಸಿಗರಿಗೆ ಗಾಯ!

    ಜೆಲ್ಲಿಫಿಶ್ ದಾಳಿಯಿಂದಾಗಿ 150 ಕ್ಕೂ ಹೆಚ್ಚು ಪ್ರವಾಸಿಗರಿಗೆ ಗಾಯ!

    ಮುಂಬೈ: ನೀಲಿ ಬಣ್ಣದ ಜೆಲ್ಲಿಫಿಶ್ ದಾಳಿಯಿಂದಾಗಿ ಸುಮಾರು 150 ಕ್ಕೂ ಹೆಚ್ಚು ಪ್ರವಾಸಿಗರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರ ಮುಂಬೈ ಸಮುದ್ರ ತೀರದಲ್ಲಿ ನಡೆದಿದೆ.

    ಕಳೆದ ಎರಡು ದಿನಗಳಲ್ಲಿ ಹಲವಾರು ಮಂದಿ ಗಾಯಗೊಂಡಿದ್ದು, ಗಂಟಲು ನೋವಿನಿಂದ ಬಳಲುತ್ತಿದ್ದಾರೆ. ಈ ಮೀನು ಕಚ್ಚಿದರೆ ಮನುಷ್ಯರ ಜೀವಕ್ಕೆ ಅಪಾಯವಿಲ್ಲ. ಕಚ್ಚಿದ ಬಳಿಕ ಗಂಟೆಗಟಲ್ಲೇ ಉರಿ ಇರುತ್ತದೆ. ಈ ಜೆಲ್ಲಿ ಫಿಶ್ ಮೀನುಗಳಿಗೆ ಕಚ್ಚಿದರೆ ಅವುಗಳು ಸಾಯುತ್ತದೆ.

    ಮುಂಬೈನ ಸಮುದ್ರ ತೀರದಲ್ಲಿ ಜೆಲ್ಲಿ ಫಿಶ್‍ಗಳು ಸಾಮಾನ್ಯವಾಗಿ ಪ್ರತಿ ವರ್ಷ ಮಾನ್ಸೂನ್ ಅವಧಿಯ ಮಧ್ಯದಲ್ಲಿ ಕಾಣಸಿಗುತ್ತದೆ. ಆದರೆ ಈ ಬಾರಿ ಬಹುಬೇಗನೆ ಹೆಚ್ಚಿನ ಸಂಖ್ಯೆಯಲ್ಲೇ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. ಇವುಗಳು ಸಾಮಾನ್ಯವಾಗಿ ಅಟ್ಲಾಂಟಿಕ್, ಪೆಸಿಫಿಕ್, ಮತ್ತು ಭಾರತದ ಸಮುದ್ರ ತೀರದಲ್ಲಿ ಕಂಡುಬರುತ್ತವೆ.

    ಸಾಧಾರಣವಾಗಿ ಸಮುದ್ರದ ದೂರದಲ್ಲಿ ವಾಸವಾಗಿರುವ ಈ ಮೀನುಗಳು ಜೋರಾದ ಗಾಳಿ ಬಂದಾಗ ದಡಕ್ಕೆ ಬರುತ್ತವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಟಯರ್ ಸ್ಫೋಟಗೊಂಡು ಸಿಲಿಂಡರ್ ವಾಹನ ಪಲ್ಟಿ – ಐದು ವಾಹನಗಳು ಜಖಂ

    ಟಯರ್ ಸ್ಫೋಟಗೊಂಡು ಸಿಲಿಂಡರ್ ವಾಹನ ಪಲ್ಟಿ – ಐದು ವಾಹನಗಳು ಜಖಂ

    ಬೆಂಗಳೂರು: ಸಿಲಿಂಡರ್ ಗಳನ್ನು ತುಂಬಿಕೊಂಡು ಹೊರಟಿದ್ದ ವಾಹನದ ಟೈಯರ್ ಸ್ಫೋಟಗೊಂಡು ಪಲ್ಟಿಯಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಮಹದೇವಪುರ ಬಳಿ ನಡೆದಿದೆ.

    ಸಿಲಿಂಡರ್ ತುಂಬಿಕೊಂಡು ಬರುತ್ತಿದ್ದ ವಾಹನದ ಟಯರ್ ಏಕಾಏಕಿ ಸ್ಫೋಟಗೊಂಡಿದೆ. ಪರಿಣಾಮ ಈ ವೇಳೆ ಲಾರಿ ಹಿಂಬದಿ ಬರುತ್ತಿದ್ದ ಮಿನಿ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇನ್ನೊಂದು ಕಾರು ಹಾಗೂ ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಒಟ್ಟು ಐದು ವಾಹನಗಳು ಜಖಂಗೊಂಡಿದ್ದು, ಮೂವರಿಗೆ ಗಾಯಗಳಾಗಿದೆ. ಗಾಯಗೊಂಡವರನ್ನು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸರಣಿ ಅಪಘಾತದಿಂದ ಮಂಗಳೂರು-ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಗುಟ್ಕಾ ಹಂಚಿಕೊಳ್ಳದ್ದಕ್ಕೆ ದಲಿತ ವ್ಯಕ್ತಿಗೆ ಬೆಂಕಿ ಹಚ್ಚಿದ ಪುಂಡರು!

    ಗುಟ್ಕಾ ಹಂಚಿಕೊಳ್ಳದ್ದಕ್ಕೆ ದಲಿತ ವ್ಯಕ್ತಿಗೆ ಬೆಂಕಿ ಹಚ್ಚಿದ ಪುಂಡರು!

    ಲಕ್ನೋ: ಗುಟ್ಕಾವನ್ನು ತಮ್ಮೊಂದಿಗೆ ಹಂಚಿಕೊಳ್ಳಲಿಲ್ಲವೆಂದು ಸಿಟ್ಟಿಗೆದ್ದ ಮೇಲ್ವರ್ಗದ ಇಬ್ಬರು ದಲಿತ ವ್ಯಕ್ತಿಗೆ ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದ ಮಥುರಾದ ಸಪೋಹ ಗ್ರಾಮಲ್ಲಿ ನಡೆದಿದೆ.

    ಸಪೋಹ ಗ್ರಾಮದ ಪರ್ದೇಶಿ (35) ಗಾಯಗೊಂಡ ದಲಿತ ವ್ಯಕ್ತಿ. ಶುಕ್ರವಾರ ಗ್ರಾಮದ ಅಂಗಡಿ ಬಳಿ ಗುಟ್ಕಾವನ್ನು ಹಂಚಿಕೊಳ್ಳುವ ವಿಚಾರಕ್ಕೆ ಅದೇ ಗ್ರಾಮದ ರಾಹುಲ್ ಠಾಕೂರ್ ಹಾಗೂ ರಾಜು ಎಂಬವರ ನಡುವೆ ಗಲಾಟೆ ಏರ್ಪಟ್ಟಿದೆ. ಇದರಿಂದ ರೊಚ್ಚಿಗೆದ್ದ ಇಬ್ಬರು ಪರ್ದೇಶಿ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಅಂಗಡಿಯಲ್ಲಿದ್ದ ಸಿಮೇಎಣ್ಣೆಯನ್ನು ಸುರಿದು ಬೆಂಕಿ ಹಂಚಿ ಪರಾರಿಯಾಗಿದ್ದಾರೆ.

    ಗಾಯಗೊಂಡಿದ್ದ ಪರ್ದೇಶಿಯನ್ನು ಅಂಗಡಿ ಮಾಲೀಕ ಹಾಗೂ ಗ್ರಾಮಸ್ಥರು ಕೂಡಲೇ ಮಥುರಾದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶೇ 20 ರಷ್ಟು ಸುಟ್ಟಗಾಯಗಳಾಗಿದ್ದು, ಜೀವಕ್ಕೆ ಯಾವುದೇ ತೊಂದರೆ ಇಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಘಟನೆ ಸಂಬಂಧ ಪರ್ದೇಶಿ ಸಹೋದರ ಮಥುರಾ ಪೊಲೀಸರಿಗೆ ದೂರು ನೀಡಿದ್ದಾರೆ.

    ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307, 325, 504, 506 ಮತ್ತು ಎಸ್ಸಿ-ಎಸ್ಟಿ ಪ್ರಕರಣದಡಿ ದೂರು ದಾಖಲಿಸಿಕೊಂಡ ಪೊಲೀಸರು, ರಾಹುಲ್ ಠಾಕೂರ್ ಹಾಗೂ ರಾಜು ಎಂಬ  ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಘಟನೆ ಸಂಬಂಧ ಪ್ರತಿಕ್ರಿಯಿಸಿದ ಮಥುರಾ ಪೊಲೀಸ್ ಅಧಿಕಾರಿ ವಿನಯ್ ಚೌಹಾಣ್, ಶುಕ್ರವಾರ ಪರ್ದೇಶಿ ಎಂಬವರು ಗ್ರಾಮದ ಅಂಗಡಿಯಲ್ಲಿ ಗುಟ್ಕಾ ಹಾಗೂ ಇತರೆ ವಸ್ತುಗಳನ್ನು ಖರೀದಿಸಿದ್ದಾರೆ. ಈ ವೇಳೆ ಅಂಗಡಿ ಬಳಿಯಿದ್ದ ಆರೋಪಿಗಳು ಗುಟ್ಕಾವನ್ನು ಹಂಚಿಕೊಳ್ಳುವಂತೆ ಪರ್ದೇಶಿಗೆ ಕೇಳಿದ್ದಾರೆ. ಇದೇ ಕಾರಣಕ್ಕೆ ಇವರಿಬ್ಬರ ನಡುವೆ ಜಗಳವಾಗಿದ್ದು, ಆರೋಪಿಗಳು ಹಲ್ಲೆ ನಡೆಸಿದ್ದಲ್ಲದೇ, ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದರು ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಬಿಸಿಯೂಟ ತಯಾರಿಸುವ ವೇಳೆ ಕುಕ್ಕರ್ ಸ್ಫೋಟ!

    ಬಿಸಿಯೂಟ ತಯಾರಿಸುವ ವೇಳೆ ಕುಕ್ಕರ್ ಸ್ಫೋಟ!

    ಚಾಮರಾಜನಗರ: ಬಿಸಿಯೂಟ ತಯಾರಿಸುವ ವೇಳೆ ಕುಕ್ಕರ್ ಸ್ಫೋಟಗೊಂಡ ಪರಿಣಾಮ ವಿದ್ಯಾರ್ಥಿನಿಯೊಬ್ಬಳು ಹಾಗೂ ಅಡುಗೆ ಸಹಾಯಕಿ ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ಕೆ.ಗುಂಡಾಪುರದಲ್ಲಿ ಸಂಭವಿಸಿದೆ.

    ಗುಂಡಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಮಾಡುವ ವೇಳೆ ಆಕಸ್ಮಿಕವಾಗಿ ಕುಕ್ಕರ್ ಸ್ಫೋಟಗೊಂಡಿದೆ. ಇದರಿಂದ 7 ನೇ ತರಗತಿ ವಿದ್ಯಾರ್ಥಿನಿ ರಾಜೇಶ್ವರಿ ಹಾಗೂ ಅಡುಗೆ ಸಹಾಯಕಿ ಮಹದೇವಮ್ಮಗೆ ಗಂಭೀರವಾಗಿ ಗಾಯಗಳಾಗಿವೆ. ಅಡುಗೆ ಮಾಡುವ ವೇಳೆ ರಾಜೇಶ್ವರಿ ಬೆಳಗಿನ ಹಾಲು ಪಡೆಯಲು ಅಡುಗೆ ಮನೆಗೆ ಹೋಗಿದ್ದಾಳೆ. ಈ ವೇಳೆ ಕುಕ್ಕರ್ ಸ್ಫೋಟಗೊಂಡಿದೆ.

    ಈ ಘಟನೆಯಿಂದ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಯಭೀತರಾಗಿದ್ದಾರೆ. ಸ್ಥಳಕೆ ಬಿಇಓ ಸ್ವಾಮಿ ಭೇಟಿ ನೀಡಿದ್ದು, ವಿದ್ಯಾರ್ಥಿನಿಯ ಚಿಕಿತ್ಸೆ ವೆಚ್ಚವನ್ನು ಸರ್ಕಾರದಿಂದ ಭರಿಸುವುದಾಗಿ ಭರವಸೆ ನೀಡಿದ್ದಾರೆ. ಸದ್ಯ ವಿದ್ಯಾರ್ಥಿನಿ ಹಾಗೂ ಅಡುಗೆ ಸಹಾಯಕಿ ಇಬ್ಬರನ್ನು ಕಾಮಗೆರೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  • ಬೈಕಿಗೆ ಟೆಂಪೊ ಡಿಕ್ಕಿ – ತಾಯಿ-ಮಗು ದುರ್ಮರಣ

    ಬೈಕಿಗೆ ಟೆಂಪೊ ಡಿಕ್ಕಿ – ತಾಯಿ-ಮಗು ದುರ್ಮರಣ

    ವಿಜಯಪುರ: ಬೈಕಿಗೆ ಟೆಂಪೊ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಬೈಕಿನಲ್ಲಿದ್ದ ತಾಯಿ ಹಾಗೂ ಮಗು ಸಾವನ್ನಪ್ಪಿರುವ ಘಟನೆ ವಿಜಯಪುರ ತಾಲೂಕಿನ ಜಂಬಗಿ ಕ್ರಾಸ್ ಬಳಿ ನಡೆದಿದೆ.

    ವಿಜಯಪುರದ ಯೋಗಾಪುರ ನಿವಾಸಿ ಮಂಗಳಾ ರಜಪೂತ(28) ಹಾಗೂ ಮಗ ವಿಜಯ(3) ಮೃತ ದುರ್ದೈವಿಗಳು. ಮಂಗಳಾ ಪತಿ ಕಲ್ಯಾಣಸಿಂಗ್ ರಜಪೂತಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಮೂವರು ಒಂದೇ ಬೈಕಿನಲ್ಲಿ ಹೊನ್ನಳ್ಳಿಗೆ ಸಂಬಂಧಿಕರ ಮನೆಗೆ ಹೋಗಿ ತಮ್ಮೂರಿಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಟೆಂಪೊ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮಂಗಳಾ ಮತ್ತು ವಿಜಯ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಟೆಂಪೊ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವಾಗಿದ್ದು, ಟೆಂಪೊ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.