Tag: injury

  • 10 ನಿಮಿಷ ಅಂತರದಲ್ಲಿ ಒಂದೇ ಜಾಗದಲ್ಲಿ 2 ಕಾರು ಪಲ್ಟಿ

    10 ನಿಮಿಷ ಅಂತರದಲ್ಲಿ ಒಂದೇ ಜಾಗದಲ್ಲಿ 2 ಕಾರು ಪಲ್ಟಿ

    ಚಿಕ್ಕಬಳ್ಳಾಪುರ: ಹತ್ತು ನಿಮಿಷದ ಅಂತರದಲ್ಲಿ ಒಂದೇ ಜಾಗದಲ್ಲಿ ಎರಡು ಕಾರುಗಳು ಪಲ್ಟಿಯಾಗಿದ್ದು, ಕಾರುಗಳು ಸಂಪೂರ್ಣ ನಜ್ಜು ಗುಜ್ಜಾದರೂ ಕಾರಿನಲ್ಲಿದ್ದವರು ಪವಾಡಸದೃಶ ರೀತಿಯಲ್ಲಿ ಪಾರಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 7ರ ಆರೂರು ಬಳಿ ನಡೆದಿದೆ.

    ಹೈದರಾಬಾದ್ ಕಡೆಯಿಂದ ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ ಎರಡು ಕಾರುಗಳು ಪಲ್ಟಿಯಾಗಿವೆ. ಪ್ರತ್ಯಕ್ಷ ದರ್ಶಿಗಳು ಪೊಲೀಸರಿಗೆ ಈ ಬಗ್ಗೆ ತಿಳಿಸಿದ್ದಾರೆ. ಮೊದಲು ಬಿಳಿ ಬಣ್ಣದ ಮಹಾರಾಷ್ಟ್ರ ರಾಜ್ಯ ನೊಂದಣಿಯ ಎಂಎಚ್ 32 ಎಎಚ್ 0889 ನಂಬರಿನ ಕಾರು ಪಲ್ಟಿಯಾಗಿ ಹೆದ್ದಾರಿಯಿಂದ ಎಡಗಡೆ ಕೆಡೆಗೆ ಬಿದ್ದಿದೆ.

    ಅದಾದ ಕೆಲವೇ ನಿಮಿಷಗಳಲ್ಲಿ ಕೆಎ 03 ಎನ್ ಬಿ 7257 ನಂಬರಿನ ಮತ್ತೊಂದು ಕಾರು ಅದೇ ಜಾಗದಲ್ಲಿ ಪಲ್ಟಿಯಾಗಿ ಹೆದ್ದಾರಿಯಿಂದ ಬಲಗಡೆಗೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಕಾರುಗಳಲ್ಲಿದ್ದ ನಾಲ್ವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಪಲ್ಟಿಯಾದ ರಭಸಕ್ಕೆ ಕಾರುಗಳು ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಅಪಘಾತಕ್ಕೀಡಾದ ಕಾರುಗಳನ್ನ ಪೋಲಿಸ್ ಠಾಣೆ ಬಳಿಗೆ ಸ್ಥಳಾಂತರ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪುರಸಭೆ ಸಿಬ್ಬಂದಿಯನ್ನ ಕಚ್ಚಿ ಗಾಯಗೊಳಿಸಿದ ಬೀದಿ ನಾಯಿಗಳು

    ಪುರಸಭೆ ಸಿಬ್ಬಂದಿಯನ್ನ ಕಚ್ಚಿ ಗಾಯಗೊಳಿಸಿದ ಬೀದಿ ನಾಯಿಗಳು

    ಮಂಡ್ಯ: ಇಂದು ಬೆಳಗ್ಗೆ ಪುರಸಭೆ ಸಿಬ್ಬಂದಿಯನ್ನೆ ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿದ ಘಟನೆ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ನಡೆದಿದೆ.

    ಬೆಳಗ್ಗೆ ವಾಟರ್‌ಮ್ಯಾನ್‌ ಎಸ್. ಸುರೇಶ್ ಎಂಬವರು ನೀರು ಬಿಟ್ಟು, ಕೈಕಾಲು ಮುಖ ತೊಳೆಯಲು ಪುರಸಭೆ ಆವರಣಕ್ಕೆ ಬಂದಾಗ ಬೀದಿ ನಾಯಿಗಳು ದಾಳಿ ಮಾಡಿವೆ. ಈ ವೇಳೆ ಸುರೇಶ್ ಪ್ರಾಣ ಉಳಿಸಿಕೊಳ್ಳಲು ಪುರಸಭೆಯ ಡೋರಿನ ಗಾಜು ಒಡೆದು ಕಟ್ಟಡದ ಒಳಗೆ ಹಾರಿದ್ದಾರೆ. ಪರಿಣಾಮ ಕಾಲು, ಸೊಂಟ ಹಾಗೂ ಕೈಗೆ ಗಾಯಗಳಾಗಿವೆ.

    ಅದೇ ಸ್ಥಳಕ್ಕೆ ಆಗಮಿಸಿದ ಡಿ ಗ್ರೂಪ್ ನೌಕರ ಜಿಪಿ ಬಾಬು, ಸುರೇಶ್ ಸ್ನೇಹಿತ ರಮೇಶ್ ಅವರ ಮೇಲೂ ದಾಳಿ ನಡೆಸಿವೆ. ಪಕ್ಕದ ಅಗ್ನಿ ಶಾಮಕ ಠಾಣೆಯ ಪೊಲೀಸರಾದ ಅಂಜನಿ, ಲೋಕೇಶ್ ನಾಯಕ್ ಅವರ ಮೇಲೂ ದಾಳಿ ಮಾಡಿದ್ದು, ಮುಖ, ಬೆನ್ನಿನ ಮೇಲೆ ಕಚ್ಚಿದೆ. ಕೊನೆಗೆ ಎಲ್ಲರೂ ಸೇರಿ ನಾಯಿಗಳನ್ನು ಹಿಡಿದು ಸಾಯಿಸಿ ದಾಳಿ ಇಂದ ಪಾರಾಗಿದ್ದಾರೆ. ನಾಯಿ ದಾಳಿಗೆ ಒಳಗಾದ ಸಿಬ್ಬಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮೆಡಿಕಲ್ ಆಸ್ಪತ್ರೆಗೆ ರವಾನಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕ್ರೇನ್ ಗೆ ಕಾರು ಡಿಕ್ಕಿ – ನಾಲ್ವರ ದುರ್ಮರಣ, ಮೂವರು ಗಂಭೀರ

    ಕ್ರೇನ್ ಗೆ ಕಾರು ಡಿಕ್ಕಿ – ನಾಲ್ವರ ದುರ್ಮರಣ, ಮೂವರು ಗಂಭೀರ

    ತುಮಕೂರು: ಕ್ರೇನ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೂವರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಶಿರಾ ತಾಲೂಕಿನ ಕರಜೀವನಹಳ್ಳಿ ಬಳಿ ನಡೆದಿದೆ.

    ಕರಜೀವನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 04 ರಲಿ ಈ ಅಪಘಾತ ಸಂಭವಿಸಿದೆ. ವೆಂಕಟೇಶ್, ಶಶಿಕುಮಾರ್ ಮತ್ತು ಹೇಮಂತ್ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಮತ್ತೋರ್ವನ ಹೆಸರು ತಿಳಿದು ಬಂದಿಲ್ಲ.

    ಇವರು ಕಾರಿನಲ್ಲಿ ಬೆಂಗಳೂರಿನಿಂದ ಶಿರಾ ಕಡೆ ತೆರಳುತಿದ್ದರು. ಕರಜೀವನಹಳ್ಳಿ ಬಳಿ ಲಾರಿಯೊಂದು ಕೆಟ್ಟು ನಿಂತಿತ್ತು. ಆ ಲಾರಿಯನ್ನು ಕ್ರೇನ್ ಮೂಲಕ ತೆರವುಗೊಳಿಸುವ ಕೆಲಸ ನಡೆಯುತ್ತಿತ್ತು. ಆದರೆ ಈ ಸಂದರ್ಭದಲ್ಲಿ ವೇಗವಾಗಿ ಬಂದ ಕಾರು ಕ್ರೇನ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಡಿಕ್ಕಿ ಹೊಡೆದ ರಭಸಕ್ಕೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಅಪಘಾತದಲ್ಲಿ ಪ್ರಜ್ವಲ್(22), ಅಶೋಕ(25) ಮತ್ತು ಅನಿಲ್ ಕುಮಾರ್(20) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಸಂಬಂಧ ಕಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಳ್ಳಕ್ಕೆ ಬಿತ್ತು 40 ಮಂದಿ ಇದ್ದ ಟಂಟಂ!

    ಹಳ್ಳಕ್ಕೆ ಬಿತ್ತು 40 ಮಂದಿ ಇದ್ದ ಟಂಟಂ!

    ರಾಯಚೂರು: ಟಂಟಂ ಪಲ್ಟಿಯಾದ ಪರಿಣಾಮ ಚಿಕ್ಕಮಕ್ಕಳು ಸೇರಿ 40 ಜನರಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ಜಿಲ್ಲೆಯ ಸಿರವಾರ ತಾಲೂಕಿನ ಆನಂದಗಲ್ ಬಳಿ ನಡೆದಿದೆ.

    ಗದ್ದೆ ನಾಟಿಯ ಕೂಲಿ ಕೆಲಸಕ್ಕೆ ತಪ್ಪಲದೊಡ್ಡಿ, ಕೋಟೆಕಲ್ ನಿಂದ ಕೂಲಿಕಾರರನ್ನ ಹಾಲಾಪುರಕ್ಕೆ ಕರೆದ್ಯೊಯ್ಯುತ್ತಿದ್ದಾಗ ಟಂಟಂ ಪಲ್ಟಿಯಾಗಿದೆ. ಬಾಲ ಕಾರ್ಮಿಕರನ್ನೂ ಚಿಕ್ಕ ವಾಹನದಲ್ಲಿ ಕುರಿಗಳನ್ನ ತುಂಬಿದಂತೆ ತುಂಬಿಕೊಂಡು ಕರೆದ್ಯೊಯ್ಯಲಾಗುತ್ತಿತ್ತು.

    ಈ ವೇಳೆ ಟಂಟಂ ವೇಗವಾಗಿ ಹೋಗುತ್ತಿದ್ದು, ಸಿರವಾರ ತಾಲೂಕಿನ ಆನಂದಗಲ್ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದೆ. ಈ ಅಪಘಾತದಲ್ಲಿ 40 ಜನರಿಗೆ ಗಾಯವಾಗಿದ್ದು, ಅವರಲ್ಲಿ 15 ಜನರ ಸ್ಥಿತಿ ಗಂಭೀರವಾಗಿದೆ. ಟಂಟಂ ವಾಹನದಲ್ಲಿ ಮಕ್ಕಳು ಸೇರಿದಂತೆ 40 ಮಂದಿ ಇದ್ದರು ಎಂದು ತಿಳಿದು ಬಂದಿದೆ.

    ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳುಗಳನ್ನ ಸಮೀಪದ ಲಿಂಗಸುಗೂರು ಮತ್ತು ಪಾಮನಕಲ್ಲೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಘಟನೆ ಕವಿತಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೈಕ್, ಕಾರ್ ಮುಖಾಮುಖಿ ಡಿಕ್ಕಿ – ಸವಾರ ದುರ್ಮರಣ

    ಬೈಕ್, ಕಾರ್ ಮುಖಾಮುಖಿ ಡಿಕ್ಕಿ – ಸವಾರ ದುರ್ಮರಣ

    ಕಾರವಾರ: ಬೈಕ್ ಮತ್ತು ಕಾರಿಗೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಸಹ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರಡೇಶ್ವರದ ಬಸ್ತಿಯಲ್ಲಿ ನಡೆದಿದೆ.

    ಮರಡೇಶ್ವರದ ಉತ್ತರ ಕೊಪ್ಪ ನಿವಾಸಿ ದೇವು ಮರಾಠಿ(29) ಮೃತ ದುರ್ದೈವಿ. ಮತ್ತೋರ್ವ ಚಂದ್ರು ಮರಾಠಿ (28)ಗಂಭೀರ ಗಾಯಗೊಂಡಿದ್ದು, ಈತನನ್ನು ಸಮೀಪದ ಮುರಡೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರಾಜಶೇಕರ್ ಎಂಬವರು ಧಾರವಾಡದಿಂದ ಮಣಿಪಾಲ್ ಗೆ ತಮ್ಮ ಕುಟುಂಬದೊಂದಿಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಬೈಕಿನಲ್ಲಿ ದೇವು ಮರಾಠಿ ಮತ್ತು ಚಂದ್ರು ಮರಾಠಿ ಬರುತ್ತಿದ್ದು, ತಾಲೂಕಿನ ಮುರಡೇಶ್ವರದ ಬಸ್ತಿ ಬಳಿ ಅತಿವೇಗದಿಂದ ಬಂದು ಕಾರಿಗೆ ಸವಾರ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ದೇವು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

    ಈ ಘಟನೆ ಸಂಬಂಧ ಮುರಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಕ್ ಸವಾರನ ಅತೀ ವೇಗದ ಚಾಲನೆಯೇ ಈ ಘಟನೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಾತ್ರೆ ಮುಗಿಸಿಕೊಂಡು ವಾಪಸ್ಸಾಗ್ತಿದ್ದಾಗ ಕಂದಕಕ್ಕೆ ಉರುಳಿದ ಟಂಟಂ!

    ಜಾತ್ರೆ ಮುಗಿಸಿಕೊಂಡು ವಾಪಸ್ಸಾಗ್ತಿದ್ದಾಗ ಕಂದಕಕ್ಕೆ ಉರುಳಿದ ಟಂಟಂ!

    ಗದಗ: ಟಂಟಂ ವಾಹನ ಪಲ್ಟಿಯಾದ ಪರಿಣಾಮ 10 ಮಂದಿಗೆ ಗಾಯಗಳಾಗಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಕಪ್ಪತ್ತಗುಡ್ಡದಲ್ಲಿ ನಡೆದಿದೆ.

    ಕಪ್ಪತ್ತಗುಡ್ಡದ ಕಪ್ಪತ್ತಮಲ್ಲಯ್ಯ ಜಾತ್ರೆ ಮುಗಿಸಿಕೊಂಡು ಬರುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳು ಗದಗ ತಾಲೂಕಿನ ಬೆಳಧಡಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಈ ಟಂಟಂ ನಲ್ಲಿ 10 ಜನರು ಪ್ರಯಾಣ ಮಾಡುತ್ತಿದ್ದರು.

    ಅಪಘಾತದಲ್ಲಿ ಓರ್ವ ಬಾಲಕ ಹಾಗೂ ಮತ್ತಿಬ್ಬರು ಮಹಿಳೆಯರಿಗೆ ಗಂಭೀರವಾಗಿ ಗಾಯಗಳಾಗಿವೆ. ಆದರೆ ಕಪ್ಪತ್ತಗುಡ್ಡದಲ್ಲಿ ಮೊಬೈಲ್ ನೆಟ್ ವರ್ಕ್ ಸಂಪರ್ಕ ಸಿಗದ ಕಾರಣ ಅಂಬ್ಯುಲೆನ್ಸ್ ಗೆ ಕರೆ ಮಾಡಲು ಸಾಧ್ಯವಾಗದೇ ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು. ನಂತರ ಜಾತ್ರೆಗೆ ಆಗಮಿಸಿದ ಭಕ್ತರು ಗಾಯಾಳುಗಳನ್ನು ಉಪಚಾರ ಮಾಡಿದ್ದಾರೆ. ಬಳಿಕ ಸಮೀಪದ ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಚಾಲಕನ ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿ ಟಂಟಂ ಬೃಹತ್ ಕಂದಕಕ್ಕೆ ಉರುಳಿದೆ ಎನ್ನಲಾಗಿದೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಂಗೆ ಪೂಜೆ ಮುಗಿಸಿ ಬರುತ್ತಿದ್ದ 26 ಜನರಿದ್ದ ಟ್ಯಾಕ್ಟರ್ ಪಲ್ಟಿ

    ಗಂಗೆ ಪೂಜೆ ಮುಗಿಸಿ ಬರುತ್ತಿದ್ದ 26 ಜನರಿದ್ದ ಟ್ಯಾಕ್ಟರ್ ಪಲ್ಟಿ

    ಬಳ್ಳಾರಿ: ಟ್ಯಾಕ್ಟರ್ ಆಯ ತಪ್ಪಿ ಪಲ್ಟಿಯಾದ ಪರಿಣಾಮ 26 ಜನರು ಗಾಯಗೊಂಡಿದ್ದು, ಆರು ಮಂದಿಯ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಹಂಪಿ ಬಳಿ ನಡೆದಿದೆ.

    ಹಂಪಿಯ ಕೃಷ್ಣ ಬಜಾರ್ ಸಮೀಪ ಈ ಅಪಘಡ ಸಂಭವಿಸಿದೆ. ಇವರೆಲ್ಲರೂ ಹೊಸಪೇಟೆ ತಾಲೂಕಿನ ಮಲಪನಗುಡಿಯಿಂದ ಹಂಪಿಗೆ ಗಂಗೆ ಪೂಜೆಗೆಂದು ತೆರಳಿದ್ದರು. ಭಕ್ತರು ಗಂಗೆ ಪೂಜೆ ನೆರವೇರಿಸಿ ಹಿಂದಿರುಗಿ ಬರುವ ಸಂದರ್ಭದಲ್ಲಿ ಕೃಷ್ಣ ಬಜಾರ್ ಸಮೀಪ ಟ್ಯಾಕ್ಟರ್ ಆಯತಪ್ಪಿ ಬಿದ್ದು, ಪಲ್ಟಿಯಾಗಿ ಅಪಘಾತ ಸಂಭವಿಸಿದೆ.

    ಈ ಘಟನೆಯಲ್ಲಿ 26 ಜನರಿಗೆ ಗಾಯವಾಗಿದ್ದು, ರಾಜು(10), ಬೈರ (19), ಶಂಕರ(17), ಉಮೇಶ(10), ಪಕ್ಕಿರಮ್ಮ(40) ಮತ್ತು ತಾಯಮ್ಮ (40) ಎಂಬವರ ಸ್ಥಿತಿ ಗಂಭೀರವಾಗಿದೆ. ಗಂಭೀರವಾಗಿ ಗಾಯಗೊಂಡ ಗಾಯಾಳುಗಳನ್ನು ಬಳ್ಳಾರಿಯ ಆಸ್ಪತ್ರೆಗೆ ಹೆಚ್ಚಿನ ಚಿಕ್ಸಿತ್ಸೆಗಾಗಿ ರವಾನಿಸಲಾಗಿದೆ. ಉಳಿದ ಗಾಯಾಳುಗಳಿಗೆ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಘಟನೆಯ ಕುರಿತು ಹಂಪಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • KSRTC, ಖಾಸಗಿ ಬಸ್ ನಡುವೆ ಅಪಘಾತ – ಮೂವರ ದುರ್ಮರಣ

    KSRTC, ಖಾಸಗಿ ಬಸ್ ನಡುವೆ ಅಪಘಾತ – ಮೂವರ ದುರ್ಮರಣ

    ತುಮಕೂರು: ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಕೆಎಸ್ಆರ್  ಟಿಸಿ ಬಸ್ಸಿಗೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಈ ಅಪಘಾತ ಶಿರಾ ತಾಲೂಕಿನ ರಾಷ್ಟೀಯ ಹೆದ್ದಾರಿ 4ರ ಕಳ್ಳಂಬೆಳ್ಳ ಬಳಿ ಇಂದು ಮುಂಜಾನೆ ಸಂಭವಿಸಿದೆ. ನಿಖಿತಾ (27), ಧನರಾಜ್ (45) ಮತ್ತು ಕಾರವಾರದ ಪರಮೇಶ್ವರ್ ನಾಯ್ಕ್ (50) ಮೃತ ದುರ್ದೈವಿಗಳು. ಇನ್ನಿಬ್ಬರನ್ನು ಬೆಂಗಳೂರು ಮೂಲದವರು ಎಂದು ಗುರುತಿಸಲಾಗಿದೆ.

    ಎರಡು ಬಸ್ ಚಿತ್ರದುರ್ಗದಿಂದ ಬೆಂಗಳೂರಿನತ್ತ ಬರುತ್ತಿದ್ದವು. ಈ ವೇಳೆ ಕಳ್ಳಂಬೆಳ್ಳ ಬಳಿ ವೇಗವಾಗಿ ಬಂದು ಹಿಂಬದಿಯಿಂದ ಕೆಎಸ್‍ಆರ್ ಟಿಸಿ ಬಸ್ಸಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಖಾಸಗಿ ಬಸ್ಸಿನಲ್ಲಿದ್ದ ಇಬ್ಬರು ಹಾಗೂ ಕೆಎಸ್ಆರ್ ಟಿಸಿ ಬಸ್ಸಿನಲ್ಲಿದ್ದ ಓರ್ವ ಸಾವನ್ನಪ್ಪಿದ್ದಾರೆ. ಈ ಅಪಘಾತದಿಂದ 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ತುಮಕೂರು ಜಿಲ್ಲಾ ಆಸ್ಪತ್ರೆ ಹಾಗೂ ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಘಟನೆ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮನೆ ಗೋಡೆ ಕುಸಿದು 2 ಹಸು ಸಾವು -2 ಎತ್ತುಗಳಿಗೆ ಗಂಭೀರ ಗಾಯ

    ಮನೆ ಗೋಡೆ ಕುಸಿದು 2 ಹಸು ಸಾವು -2 ಎತ್ತುಗಳಿಗೆ ಗಂಭೀರ ಗಾಯ

    ಚಿತ್ರದುರ್ಗ: ತಡರಾತ್ರಿ ಇದ್ದಕ್ಕಿದಂತೆ ಮನೆಯ ಗೋಡೆಗಳು ಕುಸಿದು ಬಿದ್ದಿದರಿಂದ ಎರಡು ಹಸುಗಳು ಸಾವನ್ನಪ್ಪಿದ್ದು, ಅಲ್ಲೇ ಇದ್ದ ಎರಡು ಎತ್ತುಗಳಿಗೆ ಗಂಭೀರ ಗಾಯವಾಗಿರುವ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮದ್ದೇರು ಗ್ರಾಮದಲ್ಲಿ ನಡೆದಿದೆ.

    ರೇಣುಕಮ್ಮ ಎಂಬವರಿಗೆ ಸೇರಿದ್ದ ಮನೆಯ ಗೋಡೆ ಕುಸಿದಿದೆ. ಗೋಡೆ ಕುಸಿಯುತ್ತಿದಂತೆ ಕುಟುಂಬಸ್ಥರು ಹೊರಗೆ ಓಡಿ ಬಂದಿದ್ದಾರೆ. ಹಾಗಾಗಿ ಅದೃಷ್ಟವಶಾತ್ ಮನೆಯಲ್ಲಿ ಮಲಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಮನೆಯಲ್ಲಿದ್ದ ಜಾನುವಾರಗಳಲ್ಲಿ 2 ಹಸು ಸಾವನ್ನಪ್ಪಿದೆ ಮತ್ತು 2 ಎತ್ತುಗಳಿಗೆ ಗಂಭೀರ ಗಾಯಗಳಾಗಿವೆ. ಮಳೆಗೆ ಒದ್ದೆಯಾಗಿ ಗೋಡೆ ಕುಸಿದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

    ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮದುವೆ ದಿಬ್ಬಣದ ವಾಹನಕ್ಕೆ ಲಾರಿ ಡಿಕ್ಕಿ- ಸ್ಥಳದಲ್ಲೇ 6 ಮಂದಿ ಸಾವು

    ಮದುವೆ ದಿಬ್ಬಣದ ವಾಹನಕ್ಕೆ ಲಾರಿ ಡಿಕ್ಕಿ- ಸ್ಥಳದಲ್ಲೇ 6 ಮಂದಿ ಸಾವು

    ತುಮಕೂರು: ಮದುವೆ ದಿಬ್ಬಣದ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅನಂತಪುರ ಜಿಲ್ಲೆ ಪೆನುಕೊಂಡ ತಾಲೂಕಿನ ಸತ್ತಾರಪಲ್ಲಿ ಬಳಿ ನಡೆದಿದೆ.

    ವೈ.ಎಸ್.ಆರ್. ಪಕ್ಷದ ಮುಖಂಡ ಶ್ರೀಧರನಾರಾಯಣ ಅವರ ಪುತ್ರನ ಮದುವೆಗೆಂದು ಅನಂತಪುರಕ್ಕೆ ಬೊಲೆರೋ ವಾಹನದಲ್ಲಿ ತೆರಳುವ ವೇಳೆ ಧರ್ಮವರಂ ನಿಂದ ಬಾಳೆಹಣ್ಣು ತುಂಬಿಕೊಂಡು ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಗೋಪಾಲರೆಡ್ಡಿ(60), ರವೀಂದ್ರರೆಡ್ಡಿ(40), ಕೆ.ವೆಂಕಟಸ್ವಾಮಿ(65), ವಡ್ಡಿ ಆಂಜನೇಯುಲು(35), ವೆಂಕಟಪ್ಪ (50) ಮೃತಪಟ್ಟವರು.

    ಮೃತಪಟ್ಟವರನ್ನು ಪೆನುಗೊಂಡ ತಾಲೂಕಿನ ತಿಮ್ಮಾಪುರ ಮೂಲದವರು ಎಂದು ಹೇಳಲಾಗಿದೆ. ಮತ್ತೆ 10 ಮಂದಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ. ಈ ಘಟನೆ ಕುರಿತು ಪೆನುಗೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv