Tag: injure

  • ಪಂತ್‍ಗೂ ಕಾಡ್ತಿದ್ಯಾ ಗಾಯದ ಸಮಸ್ಯೆ?

    ಪಂತ್‍ಗೂ ಕಾಡ್ತಿದ್ಯಾ ಗಾಯದ ಸಮಸ್ಯೆ?

    ಬ್ರಿಸ್ಪೇನ್: ಟಿ20 ವಿಶ್ವಕಪ್‍ಗಾಗಿ (T20 World Cup) ಆಸ್ಟ್ರೇಲಿಯಾದಲ್ಲಿರುವ (Australia) ಭಾರತ (India) ತಂಡಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ಇದೀಗ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ರಿಷಭ್ ಪಂತ್ (Rishabh Pant) ಗಾಯಗೊಂಡಿರುವ ಕುರಿತು ಗುಮಾನಿ ಎದ್ದಿದೆ.

    ಪಂತ್ ಡಗೌಟ್‍ನಲ್ಲಿ ಮಂಡಿಗೆ ಐಸ್ ಕ್ಯೂಬ್ ಕಟ್ಟಿಕೊಂಡು ಕುಳಿತಿರುವ ಫೋಟೋಗಳು ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಕಂಡು ಬಂತು. ಆ ಬಳಿಕ ಇದೀಗ ಪಂತ್ ಗಾಯಗೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ: ಕೊಹ್ಲಿ ಮ್ಯಾಜಿಕ್‌ ಫೀಲ್ಡಿಂಗ್‌, ಶಮಿ ಮಾರಕ ಬೌಲಿಂಗ್‌ – ಭಾರತಕ್ಕೆ 6 ರನ್‌ಗಳ ರೋಚಕ ಜಯ

    ಪಂತ್ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಿಂದ ಹೊರಗುಳಿದಿದ್ದರು. ಭಾರತ ಅ.23 ರಂದು ಪಾಕಿಸ್ತಾನ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ. ಈ ಪಂದ್ಯದಿಂದಲೂ ಪಂತ್ ಹೊರಗುಳಿಯುವ ಸಾಧ್ಯತೆ ಇದೆ. ಪಂತ್ ಗಾಯದ ಕುರಿತಾಗಿ ಬಿಸಿಸಿಐ (BCCI) ಹೆಚ್ಚಿನ ಮಾಹಿತಿ ನೀಡಬೇಕಾಗಿದೆ. ಇದನ್ನೂ ಓದಿ: ಕೊರೊನಾ ಇದ್ದರೂ T20 ವಿಶ್ವಕಪ್ ಆಡಲು ಆಟಗಾರರಿಗೆ ಅವಕಾಶ!

    ಇತ್ತ ಆಸ್ಟ್ರೇಲಿಯಾ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ 6 ರನ್‍ಗಳ ರೋಚಕ ಜಯ ಸಾಧಿಸಿದೆ. ಪಂದ್ಯದ ಕೊನೆಯಲ್ಲಿ ವಿರಾಟ್ ಕೊಹ್ಲಿ ಮ್ಯಾಜಿಕ್ ಫೀಲ್ಡಿಂಗ್ ಮತ್ತು ಮೊಹಮ್ಮದ್ ಶಮಿ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನದಿಂದ ಆಸ್ಟ್ರೇಲಿಯಾ ವಿರುದ್ಧ ಭಾರತ 6 ರನ್‍ಗಳ ರೋಚಕ ಜಯ ಸಾಧಿಸಿತು. ಗೆಲ್ಲಲು 187 ರನ್‍ಗಳ ಗುರಿಯನ್ನು ಪಡೆದ ಆಸ್ಟ್ರೇಲಿಯಾ 18 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು. ಆದರೆ ಕೊನೆಯಲ್ಲಿ ಡೇವಿಡ್ ರನೌಟ್ ಮತ್ತು ಪ್ಯಾಟ್ ಕಮ್ಮಿನ್ಸ್ ಅವರ ಕ್ಯಾಚನ್ನು ಕೊಹ್ಲಿ ಪಡೆದು ಪಂದ್ಯಕ್ಕೆ ರೋಚಕ ತಿರುವು ಕೊಟ್ಟರು. 9 ರನ್‍ಗಳ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡಿದ್ದರಿಂದ ಭಾರತ ಪಂದ್ಯವನ್ನು ಗೆದ್ದುಕೊಂಡು ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಮಿಂಚಿದೆ.

    Live Tv
    [brid partner=56869869 player=32851 video=960834 autoplay=true]

  • ಮಗನಿಗೆ ಹೊಸ ಕಾರ್ ಸರ್ಪ್ರೈಸ್ ಕೊಡಲು ಹೋಗ್ತಿದ್ದವರು ದುರ್ಮರಣ..!

    ಮಗನಿಗೆ ಹೊಸ ಕಾರ್ ಸರ್ಪ್ರೈಸ್ ಕೊಡಲು ಹೋಗ್ತಿದ್ದವರು ದುರ್ಮರಣ..!

    ರಾಯಚೂರು: ಸೇತುವೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ತಂದೆ-ಮಗ ಸಾವನ್ನಪ್ಪಿದ್ದು, ಮತ್ತಿಬ್ಬರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ರಾಯಚೂರಿನ ಸಿಂಧನೂರು ಹೊರವಲಯದ ರಾಘವೇಂದ್ರ ರೈಸ್ ಮಿಲ್ ಬಳಿ ನಡೆದಿದೆ.

    ಹನೀಫ್ ಕುರೇಸಿ (60) ಮತ್ತು ಅಬ್ದುಲ್ಲ (16) ಮೃತ ದುರ್ದೈವಿಗಳು. ಮೃತರು ರಾಯಚೂರಿನ ಮಂಗಳವಾರ ಪೇಡೆ ನಗರದ ನಿವಾಸಿಗಳಾಗಿದ್ದು, ಅಪಘಾತದಲ್ಲಿ ಅಖ್ತರಾ ಬಾನು ಮತ್ತು ಕಾರು ಚಾಲಕ ಅಬ್ದುಲ್ ಲತೀಫಗೆ ಗಾಯಗಳಾಗಿದೆ. ಅವರನ್ನು ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಹನೀಫ್ ಕುರೇಸಿ, ಅಬ್ದುಲ್ಲ ಮತ್ತು ಅಖ್ತರಾ ಬಾನು ಕುಟುಂಬದವರು ಹೊಸ ಕಾರ್ ಖರೀದಿಸಿದ್ದರು. ಇವರ ಹಿರಿಯ ಪುತ್ರ ದಾವಣಗೆರೆಯಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದನು. ಆದ್ದರಿಂದ ಮಗನಿಗೆ ಹೊಸ ಕಾರ್ ಗಿಫ್ಟ್ ಕೊಟ್ಟು ಸರ್ಪ್ರೈಸ್ ಕೊಡಬೇಕೆಂದು ದಾವಣಗೆರೆಗೆ ಹೋಗುತ್ತಿದ್ದರು. ಆದರೆ ಸಿಂಧನೂರಿನ ಮುಚ್ಚಳ ಕ್ಯಾಂಪ್ ಬಳಿಕ ಚಾಲಕನ ನಿಯಂತ್ರಣ ತಪ್ಪಿ ಕಾರ್ ಸೇತುವೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತಂದೆ ಮತ್ತು ಪುತ್ರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಈ ಕುರಿತು ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಕೋಡಾ ವ್ಯಾಪಾರಿಯ ನಿರ್ಲಕ್ಷ್ಯಕ್ಕೆ ಬಾಲಕಿಯ ಕಾಲು ಸುಟ್ಟೇ ಹೋಯ್ತು!

    ಪಕೋಡಾ ವ್ಯಾಪಾರಿಯ ನಿರ್ಲಕ್ಷ್ಯಕ್ಕೆ ಬಾಲಕಿಯ ಕಾಲು ಸುಟ್ಟೇ ಹೋಯ್ತು!

    ಮಂಗಳೂರು: ರಸ್ತೆ ಬದಿ ಪಕೋಡಾ ವ್ಯಾಪಾರಿಯೊಬ್ಬಳು ಕಾದ ಎಣ್ಣೆಯನ್ನು ಸುರಿದ ಪರಿಣಾಮ ಬಾಲಕಿಯ ಬಲಗಾಲು ಸುಟ್ಟು ಹೋಗಿರುವ ಅಮಾನವೀಯ ಘಟನೆ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ನಲ್ಲಿ ನಡೆದಿದೆ.

    14 ವರ್ಷದ ಅಮಂಡಾ ಗಾಯಗೊಳಗಾದ ಬಾಲಕಿ. ಭಾನುವಾರ ಮಧ್ಯಾಹ್ನ ಅಮಂಡಾ ತನ್ನ ತಂದೆ ವಿಕ್ಟರ್ ಜೊತೆ ಮಾರ್ಕೆಟ್ ನಲ್ಲಿ ಹಣ್ಣು ಹಂಪಲು ತೆಗೆದುಕೊಂಡು ಹಿಂದಿರುಗುತ್ತಿದ್ದಳು. ಈ ವೇಳೆ ರಸ್ತೆ ಬದಿ ಪಕೋಡಾ ಮಾಡುತ್ತಿದ್ದ ಮಹಿಳೆ ಏಕಾಏಕಿ ಕಾದ ಬಿಸಿ ಎಣ್ಣೆಯನ್ನು ನಿರ್ಲಕ್ಷ್ಯ ದಿಂದ ಸುರಿದಿದ್ದಾಳೆ.

    ಅಮಂಡಾ ಬಲಗಾಲಿಗೆ ಕಾದ ಎಣ್ಣೆ ಬಿದ್ದ ಪರಿಣಾಮ ಕಾಲು ಸಂಪೂರ್ಣ ಸುಟ್ಟು ಹೋಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ಪಕೋಡಾ ವ್ಯಾಪಾರಿಯ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದ್ದರಿಂದ ಆಕೆಯ ವಿರುದ್ಧ ಬಂದರು ಪೊಲೀಸ್ ಠಾಣೆಯಲ್ಲಿ ತಂದೆ ವಿಕ್ಟರ್ ದೂರು ನೀಡಿದ್ದಾರೆ. ಬಾಲಕಿ ಅಮಂಡಾ ಮಂಗಳೂರಿನ ಖಾಸಗಿ ಶಾಲೆಯ ವಿದ್ಯಾರ್ಥಿನಿಯಾಗಿದ್ದು ಫೆ. 19ರಿಂದ ವಾರ್ಷಿಕ ಪರೀಕ್ಷೆ ಆರಂಭವಾಗಲಿದೆ.

    ಈ ಬಗ್ಗೆ ಬಾಲಕಿ ತಂದೆ ವಿಕ್ಟರ್ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಗೆ ದೂರು ನೀಡಿದ್ದು, ಮಾರ್ಕೆಟ್ ನಲ್ಲಿ ರಸ್ತೆ ಬದಿ ಪಕೋಡಾ ಕಾಯಿಸುವವರನ್ನು ನಿಯಂತ್ರಿಸಿ ಮಗಳಿಗಾದ ಅನಾಹುತ ಬೇರೆಯವರಿಗೆ ಆಗದಂತೆ ನೋಡಿಕೊಳ್ಳಲು ಮನವಿ ಮಾಡಿದ್ದಾರೆ.

     

  • ಮೊಬೈಲ್ ಬ್ಲಾಸ್ಟ್ ಆಗಿ ಯುವಕನ ತೊಡೆ, ಮರ್ಮಾಂಗಕ್ಕೆ ಗಂಭೀರ ಗಾಯ

    ಮೊಬೈಲ್ ಬ್ಲಾಸ್ಟ್ ಆಗಿ ಯುವಕನ ತೊಡೆ, ಮರ್ಮಾಂಗಕ್ಕೆ ಗಂಭೀರ ಗಾಯ

    ಕೊಪ್ಪಳ: ಗ್ರಾಹಕರೆ ಮೊಬೈಲ್ ಖರೀದಿಸೋ ಮುನ್ನ ಎಚ್ಚರ ವಹಿಸಿ. ಯಾಕಂದ್ರೆ ಎಂಐ ನೋಟ್ 4 ಮೊಬೈಲ್ ಬ್ಲಾಸ್ಟ್ ಆಗಿ ಯುವಕನಿಗೆ ಗಂಭೀರ ಗಾಯವಾಗಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಗಂಗಾವತಿ ತಾಲೂಕಿನ ಸಿದ್ದಾಪೂರ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಈ ಘಟನೆ ನಡೆದಿದ್ದು, ಹನುಮೇಶ್ ಹರಿಜನ ಎಂಬವರು ತಮ್ಮ ಮೊಬೈಲನ್ನು ಪ್ಯಾಂಟ್ ಜೇಬಿನಲ್ಲಿಟ್ಟುಕೊಂಡಾಗ ಏಕಾಏಕಿ ಬ್ಲಾಸ್ಟ್ ಆಗಿದೆ. ಪರಿಣಾಮ ಯುವಕನ ತೊಡೆಭಾಗ ಮತ್ತು ಮರ್ಮಾಂಗಕ್ಕೆ ಗಂಭೀರ ಗಾಯಗಳಾಗಿವೆ.

    ಹನುಮೇಶ್ ಹರಿಜನ ಆನ್‍ಲೈನ್ ಮೂಲಕ ಮೊಬೈಲ್ ಖರೀದಿಸಿದ್ದರು. ಸದ್ಯ ಗಾಯಗೊಂಡಿರುವ ಯುವಕ ಹನುಮೇಶರನ್ನು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಕಾಲು ಜಾರಿ ಕೆಂಡದ ರಾಶಿಗೆ ಬಿದ್ದ ಭಕ್ತ- ರಕ್ಷಿಸಲು ಹೋದ ಸಹಭಕ್ತನಿಗೂ ಗಂಭೀರ ಗಾಯ

    ಕಾಲು ಜಾರಿ ಕೆಂಡದ ರಾಶಿಗೆ ಬಿದ್ದ ಭಕ್ತ- ರಕ್ಷಿಸಲು ಹೋದ ಸಹಭಕ್ತನಿಗೂ ಗಂಭೀರ ಗಾಯ

    ಕೊಪ್ಪಳ: ಕೌಡೇಪೀರ ಕೆಂಡದಲ್ಲಿ ಬಿದ್ದು ಇಬ್ಬರಿಗೆ ಸುಟ್ಟ ಗಾಯವಾಗಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದಲ್ಲಿ ಇಂದು ನಸುಕಿನ ಜಾವ ಈ ಘಟನೆ ಸಂಭವಿಸಿದೆ. ಚಿಕ್ಕ ಬೆಣಕಲ್ ಗ್ರಾಮದ ಖಾದರ್ ಸಾಬ್ ಹಾಗೂ ಜಮಪೂರ ಗ್ರಾಮದ ಖಾಜಾಸಾಬ್ ಗಾಯಗೊಂಡವರು.

    ಮೊಹರಂ ನಂತರ ಅದೇ ಮಾದರಿಯಲ್ಲಿ ನಡೆಯುವ ಕೌಡೇಪೀರ ಆಚರಣೆ ವೇಳೆ ಅಗ್ನಿ ಹಾಯಲಾಗುತ್ತೆ. ಈ ವೇಳೆ ಅಗ್ನಿ ಹಾಯುವಾಗ ಕಾಲು ತೊಡರಾಗಿ ಕೆಂಡದಲ್ಲಿ ಮೊದಲು ಖಾದರ್ ಸಾಬ್ ಬಿದ್ದಿದ್ದಾರೆ. ಅವರನ್ನು ರಕ್ಷಣೆ ಮಾಡಲು ಹೋದ ಖಾಜಾಸಾಬ್ ಅವರಿಗೂ ಸುಟ್ಟು ಗಾಯವಾಗಿವೆ.

    ಸದ್ಯ ಖಾಜಾಸಾಬ್ ಗಂಗಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಘಟನೆಯಿಂದಾಗಿ ಗಂಭೀರ ಸುಟ್ಟು ಗಾಯವಾಗಿದ್ರಿಂದ ಖಾದರ್ ಸಾಬ್‍ರನ್ನು ಹೆಚ್ಚಿನ ಚಿಕಿತ್ಸೆಗೆಂದು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

     

  • ಎಲೆಕ್ಟ್ರಿಕ್ ಪೋಲ್‍ಗೆ ಕೆಟಿಎಂ ಬೈಕ್ ಡಿಕ್ಕಿ: ವಿದ್ಯಾರ್ಥಿ ಬಲಿ

    ಎಲೆಕ್ಟ್ರಿಕ್ ಪೋಲ್‍ಗೆ ಕೆಟಿಎಂ ಬೈಕ್ ಡಿಕ್ಕಿ: ವಿದ್ಯಾರ್ಥಿ ಬಲಿ

    ಬೆಂಗಳೂರು: ಎಲೆಕ್ಟ್ರಿಕ್ ಪೋಲ್‍ಗೆ ಕೆಟಿಎಂ ಬೈಕ್ ಡಿಕ್ಕಿಯಾಗಿ ವಿದ್ಯಾರ್ಥಿ ಮೃತಪಟ್ಟ ಘಟನೆ ನಗರದ ಮ್ಯೂಸಿಯಂ ರಸ್ತೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.

    ಮೃತ ದುರ್ದೈವಿ ಬೈಕ್ ಸವಾರನನ್ನು ಪ್ರಿಲ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಹಿಂಬದಿ ಸವಾರ ರಿಕ್ಕಿ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮೃತ ಪ್ರಿಲ್ ಮತ್ತು ಗಾಯಾಳು ರಿಕ್ಕಿ ಇಬ್ಬರೂ ಮೂಲತಃ ತ್ರಿಪುರಾದವರಾಗಿದ್ದು, ಬೆಂಗಳೂರಿನ ಆಚಾರ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದರು.

    ಬೆಂಗಳೂರಿನಲ್ಲಿ ಕಳೆದ ಮೂರು ವರ್ಷಗಳಿಂದ ವಾಸವಿದ್ದ ಇವರು ಇಂದು ಬೈಕ್‍ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಮ್ಯೂಸಿಯಂ ರಸ್ತೆಯಲ್ಲಿ ಬೈಕ್ ಕಂಟ್ರೋಲ್‍ಗೆ ಸಿಗದೆ ಎಲೆಕ್ಟ್ರಿಕ್ ಪೋಲ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಒಬ್ಬ ಮೃತಪಟ್ಟು, ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ.

    ಈ ಬಗ್ಗೆ ಕಬ್ಬನ್ ಪಾರ್ಕ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.