Tag: Injunction

  • ಅಜಯ್ ದೇವಗನ್ ನಟಿಸಿರುವ ‘ಮೈದಾನ’ ಚಿತ್ರಕ್ಕೆ ತಡೆಯಾಜ್ಞೆ ತಂದ ಮೈಸೂರಿನ ಅನಿಲ್ ಕುಮಾರ್

    ಅಜಯ್ ದೇವಗನ್ ನಟಿಸಿರುವ ‘ಮೈದಾನ’ ಚಿತ್ರಕ್ಕೆ ತಡೆಯಾಜ್ಞೆ ತಂದ ಮೈಸೂರಿನ ಅನಿಲ್ ಕುಮಾರ್

    ಜಯ್ ದೇವಗನ್ (Ajay Devgan) ನಟಿಸಿರುವ ಮೈದಾನ (Maidan) ಸಿನಿಮಾ ಏಪ್ರಿಲ್ 11 ರಂದು ದೇಶಾದ್ಯಂತ ರಿಲೀಸ್ ಆಗಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈಗಾಗಲೇ ದೇಶದ ನಾನಾ ರಾಜ್ಯಗಳಲ್ಲಿ ಅಜಯ್ ದೇವಗನ್ ಅಭಿಮಾನಿಗಳು ಚಿತ್ರ ನೋಡಲು ಕಾತರದಿಂದ ಕಾಯುತ್ತಿದ್ದರು. ಇದೀಗ ಚಿತ್ರಕ್ಕೆ ತಡೆಯಾಜ್ಞೆ ತರಲಾಗಿದೆ. ಮೈಸೂರಿನ (Mysore) ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ತಡೆಯಾಜ್ಞೆಯ (Injunction) ಆದೇಶ ನೀಡಿದ್ದಾರೆ.

    ಅಮಿತ್ ಶರ್ಮಾ ನಿರ್ದೇಶನದ ಈ ಚಿತ್ರವನ್ನು ಬೋನಿ ಕಪೂರ್ ಮತ್ತು ಜೀ ಸ್ಟುಡಿಯೋ ಜಂಟಿಯಾಗಿ ನಿರ್ಮಾಣ ಮಾಡಿದೆ. ಚಿತ್ರಕ್ಕಾಗಿ ಸೈವಾನ್ ಖದ್ರಾಸ್, ಆಕಾಶ್ ಜಾವ್ಲಾ ಮತ್ತು ಅರುಣವಾ ಜಾಯ್ ಸೇನ್ ಗುಪ್ತಾ ಕಥೆ ಬರೆದಿದ್ದಾರೆ. ಆದರೆ, ಆ ಕಥೆ ತಮ್ಮದು ಎಂದು  ಮೈಸೂರಿನ ಸ್ಟೋರಿ ರೈಟರ್ ಅನಿಲ್ ಕುಮಾರ್ (Anil Kumar) ಎಂಬುವರು ಕೋರ್ಟ್ ಮೆಟ್ಟಿಲು ಏರಿದ್ದರು. ಅವರು ನೀಡಿರುವ ದೂರಿನ ಆಧಾರದ ಮೇಲೆ ಚಿತ್ರ ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ  ಆದೇಶ ನೀಡಿದ ಮೈಸೂರಿನ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ.

    ತಮ್ಮ ಚಿತ್ರದ ಮೂಲ ಕಥೆಯನ್ನು ಚಿತ್ರತಂಡ ಕದಿದ್ದೆ. 2019 ರ ಫೆಬ್ರವರಿಯಲ್ಲಿ ಸ್ಕ್ರೀನ್ ರೈಟ್ ಅಸೋಸಿಯೇಷನ್ ನಲ್ಲಿ ಚಿತ್ರದ ಹೆಸರನ್ನು ರಿಜಿಸ್ಟರ್ ಮಾಡಿಸಿದ್ದೇನೆ. 2018ರಲ್ಲಿ ಚಿತ್ರ ಕಥೆಯನ್ನ ಲಿಂಕ್ ಡಿನ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಕಥೆಯನ್ನ ಗಮನಿಸಿದ  ಸುಕ್ ದಾಸ್ ಸೂರ್ಯವಂಶಿ ನನ್ನ ಜೊತೆ ಮಾತು ಕತೆ ನಡೆಸಿದರು. 1950 ರಲ್ಲಿ ಫೀಫಾ ವಿಶ್ವಕಪ್ ಟೂರ್ನಮೆಂಟ್ ನಿಂದ ಭಾರತ ತಂಡವನ್ನ ಹೊರಹಾಕಲಾಗಿತ್ತು. ಈ ಬಗ್ಗೆ ಚಿತ್ರ ಕಥೆಯನ್ನ ಸಿದ್ದಪಡಿಸಿದೆ. ಶಾರುಕ್ ಖಾನ್, ಸಲ್ಮಾನ್ ಖಾನ್, ಅಮಿರ್ ಖಾನ್, ಅಜಯ ದೇವಗನ್, ಅಕ್ಷರ್ ಕುಮಾರ್ ಎಲ್ಲರನ್ನ ಸೇರಿಸಿ ಚಿತ್ರ ಮಾಡಲು ನಾನೇ ಐಡಿಯಾ ಕೊಟ್ಟಿದ್ದೆ. ಪಾದ ಖಂಡುಕ ಎಂದು ಹೆಸರಿಟ್ಟಿದೆ. Players with out shoe ಎಂದು ಇಂಗ್ಲೀಷ್ ನಲ್ಲಿ ಕರೆಯುತ್ತಾರೆ. ನನ್ನ ಮೂಲ ಕಥೆಯನ್ನು ಕದ್ದು ಮೈದಾನ ಎಂದು ಹೆಸರಿಟ್ಟಿದ್ದಾರೆ. ನನಗೆ ಮೈಸೂರು ನ್ಯಾಯಾಲಯದಿಂದ ನ್ಯಾಯ ಸಿಕ್ಕಿದೆ ಎನ್ನುತ್ತಾರೆ ರೈಟರ್ ಅನಿಲ್ ಕುಮಾರ್.

    ಮೈದಾನ ಚಿತ್ರಕ್ಕೆ ಮಧ್ಯಂತರ ತಡೆಯಾಜ್ಞೆ ಸಿಕ್ಕಿದೆ. ಈ ವಿಷಯ ಸಿನಿಮಾ ತಂಡದ ಗಮನಕ್ಕೆ ತಲುಪು, ಈ ಸಿನಿಮಾ ಅಂದುಕೊಂಡ ದಿನಾಂಕದಂದು ಬಿಡುಗಡೆ ಆಗತ್ತಾ? ಅಥವಾ ಬೇರೆ ಏನಾದರೂ ಉಪಾಯ ನಡೆಯತ್ತಾ ಕಾದು ನೋಡಬೇಕು.

  • ‘ರಜಾಕಾರ್’ ಚಿತ್ರ ತಡೆಗೆ ಹೈಕೋರ್ಟ್ ನಕಾರ: ನಿಟ್ಟುಸಿರಿಟ್ಟ ಟೀಮ್

    ‘ರಜಾಕಾರ್’ ಚಿತ್ರ ತಡೆಗೆ ಹೈಕೋರ್ಟ್ ನಕಾರ: ನಿಟ್ಟುಸಿರಿಟ್ಟ ಟೀಮ್

    ನಾಳೆ ಬೆಳಗ್ಗೆ ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ರಜಾಕಾರ್ ಬಿಡುಗಡೆ ಆಗುತ್ತಿದೆ. ಈ ಸಿನಿಮಾ ರಿಲೀಸ್ ಮಾಡದಂತೆ ತಡೆ ಕೋರಿ ಹೈದರಾಬಾದ್ ಹೈಕೋರ್ಟ್ ನಲ್ಲಿ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್  (ಎಪಿಸಿಆರ್) ಮನವಿ ಸಲ್ಲಿಸಿತ್ತು. ಭಾರತ ಸ್ವಾತಂತ್ರ್ಯ ನಂತರ ರಜಾಕಾರರು ನಡೆಸಿದ ದೌರ್ಜನ್ಯವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ ಎಂದು ಉಲ್ಲೇಖಿಸಿದ್ದರು.

    ಸಿನಿಮಾ ತಯಾರಕರೇ ಕಥೆ ಬಗ್ಗೆ ಹೇಳಿದ್ದರಿಂದ ಚಿತ್ರವು ಮುಸ್ಲಿಂ ಮತ್ತು ಹಿಂದುಗಳ ಭಾವನೆಗೆ ಧಕ್ಕೆ ತರಬಹುದು. ಎರಡೂ ಸಮುದಾಯಗಳ ನಡುವೆ ವಿಷ ಬೀಜ ಬಿತ್ತಬಹುದು. ಹಾಗಾಗಿ ಚಿತ್ರ ಪ್ರದರ್ಶನವನ್ನು ತಡೆಯುವಂತೆ ಎಪಿಸಿಆರ್ ನ ತೆಲಂಗಾಣ ಚಾಪ್ಟರ್ ನ ಉಪಾಧ್ಯಕ್ಷ, ಅಡ್ವೋಕೇಟ್ ಅಫ್ಸರ್ ಜಹಾನ್ ಹೈಕೋರ್ಟ್ ನಲ್ಲಿ ಸಂಘಟನೆಯ ಹಿತಾಸಕ್ತಿಗಳನ್ನು ಪ್ರತಿನಿಧಿಸಿದ್ದರು.

     

    ಈ ವಾದಗಳನ್ನು ಆಲಿಸಿದ ಮಾನ್ಯ ನ್ಯಾಯಾಲಯವು ಚಿತ್ರಕ್ಕೆ ನೀಡಿರುವ ಸೆನ್ಸಾರ್ ಪತ್ರದ ಕುರಿತು ಮಾತನಾಡಿದೆ. ಜೊತೆಗೆ ಸಿಬಿಎಫ್ಸಿನಲ್ಲೇ ಇರುವ ಮೇಲ್ಮನವಿ ಪರಿಹಾರವನ್ನು ಸೂಚಿಸಿ, ತಡೆಯನ್ನು ನಿರಾಕರಿಸಿದೆ. ಈ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರ ಸಿಕ್ಕಿದ್ದು, ವಯಸ್ಕರಷ್ಟೇ ಚಿತ್ರವನ್ನು ನೋಡಬಹುದು. ಮತ್ತು ಸೆನ್ಸಾರ್ ಮಂಡಳಿಯಲ್ಲೇ ಮೇಲ್ಮನವಿಯ ಪರಿಹಾರ ಇದೇ ಎಂದು ಉಲ್ಲೇಖಿಸಿದೆ ಮಾನ್ಯ ನ್ಯಾಯಾಲಯ.

  • ತೆಲುಗಿನಲ್ಲಿ ‘ಲಿಯೋ’ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ

    ತೆಲುಗಿನಲ್ಲಿ ‘ಲಿಯೋ’ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ

    ಹು ನಿರೀಕ್ಷಿತ ಲಿಯೋ (Leo) ಸಿನಿಮಾ ಅಕ್ಟೋಬರ್ 19ರಂದು ವಿಶ್ವದಾದ್ಯಂತ ರಿಲೀಸ್ ಗೆ ಸಿದ್ಧತೆ ಮಾಡಿಕೊಂಡಿದೆ. ಆದರೆ, ತೆಲುಗಿನಲ್ಲಿ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಕನ್ನಡ, ಮಲಯಾಳಂ, ಹಿಂದಿ, ತಮಿಳಿನಲ್ಲಿ ಈ ಸಿನಿಮಾ ಏಕಕಾಲದಲ್ಲಿ ಬಿಡುಗಡೆಯಾದರೆ, ತೆಲುಗಿನಲ್ಲಿ ಅಕ್ಟೋಬರ್ 20ರವರೆಗೂ ಕಾಯುವುದು ಅನಿವಾರ್ಯವಾಗಿದೆ.

    ಲಿಯೋ ಸಿನಿಮಾದ ಶೀರ್ಷಿಕೆಯ ಕುರಿತಂತೆ ಸಿತಾರಾ ಎಂಟರ್ ಟೈನ್ಮೆಂಟ್ ನಿರ್ಮಾಪಕ ನಾಗ ವಂಶಿ ಕೋರ್ಟು ಮೆಟ್ಟಿಲು ಏರಿದ್ದರು. ಈ ಟೈಟಲ್ ನಾಗ ವಂಶಿ ಅವರಿಗೆ ಸೇರಿದ್ದು ಆಗಿದ್ದು. ಹಾಗಾಗಿ ಈ ಟೈಟಲ್ ನಲ್ಲಿ ಸಿನಿಮಾ ರಿಲೀಸ್ ಮಾಡದಂತೆ ಮನವಿ ಮಾಡಿಕೊಂಡಿದ್ದರು. ನಿನ್ನೆ ಹೈದರಾಬಾದ್ ನ ಸಿಟಿ ಸಿವಿಲ್ ನ್ಯಾಯಾಲಯವು ತೆಲುಗಿನಲ್ಲಿ ಲಿಯೋ ಶೀರ್ಷಿಕೆ ಬಳಕೆ ಕುರಿತಂತೆ ತಡೆಯಾಜ್ಞೆ (Injunction) ನೀಡಿದೆ.

     

    ಅಕ್ಟೋಬರ್ 20ನೇ ತಾರೀಖಿನವರೆಗೂ ತೆಲುಗು ಭಾಷೆಯಲ್ಲಿ ಬಿಡುಗಡೆ ಮಾಡದಂತೆ ಮಾನ್ಯ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಹೀಗಾಗಿ ಸಹಜವಾಗಿಯೇ ದಳಪತಿ ವಿಜಯ್ (Dalpati Vijay) ಅಭಿಮಾನಿಗಳಿಗೆ ನಿರಾಸೆ ಆಗಿದೆ. ಅಕ್ಟೋಬರ್ 20ರಂದು ನ್ಯಾಯಾಲಯ ಏನು ಹೇಳಲಿದೆ ಎಂದು ಅಭಿಮಾನಿಗಳು ಕಾದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಶಾಂತ್ ಸಂಬರಗಿ ವಿರುದ್ಧ ನಟಿ ಶೃತಿ ಹರಿಹರನ್ ದಾಖಲಿಸಿದ್ದ ಕೇಸ್ ಗೆ ತಡೆಯಾಜ್ಞೆ

    ಪ್ರಶಾಂತ್ ಸಂಬರಗಿ ವಿರುದ್ಧ ನಟಿ ಶೃತಿ ಹರಿಹರನ್ ದಾಖಲಿಸಿದ್ದ ಕೇಸ್ ಗೆ ತಡೆಯಾಜ್ಞೆ

    ವಿಸ್ಮಯ ಸಿನಿಮಾ ಶೂಟಿಂಗ್ ವೇಳೆ ತಮ್ಮ ಮೇಲೆ ಲೈಂಗಿಕ ಕಿರುಕುಳ ಮಾಡಲಾಗಿದೆ ಎಂದು ಹೆಸರಾಂತ ನಟರೊಬ್ಬರ ಮೇಲೆ ನಟಿ ಶ್ರುತಿ ಹರಿಹರನ್ ಆರೋಪ ಮಾಡಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ ನಟನ ಪರವಾಗಿ ಪ್ರಶಾಂತ್ ಸಂಬರ್ಗಿ ನಾನಾ ಹೇಳಿಕೆಗಳನ್ನು ನೀಡಿದ್ದರು. ಮಾಧ್ಯಮಗಳ ಜೊತೆ ಈ ಪ್ರಕರಣದ ಬಗ್ಗೆ ಮಾತನಾಡುವಾಗ ಪ್ರಶಾಂತ್ ಸಂಬರ್ಗಿ ತಮ್ಮ ಚಾರಿತ್ರ್ಯ ಹರಣ ಮಾಡುತ್ತಿದ್ದಾರೆ ಎಂದು ನಟಿ ಶ್ರುತಿ ಹರಿಹರನ್ ಆರೋಪಿಸಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್ ನಲ್ಲಿ ನಡೆಯುತ್ತಿರುವ ಈ ಪ್ರಕರಣವನ್ನು ರದ್ದು ಕೋರಿ ಪ್ರಶಾಂತ್ ಸಂಬರಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠ, ಸಂಬರಗಿ ವಿರುದ್ಧ ಪ್ರಕರಣಕ್ಕೆ ಮುಂದಿನ ವಿಚಾರಣೆವರೆಗೂ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಈ  ವಿಚಾರಣೆಯನ್ನು 2023ರ ಫೆಬ್ರುವರಿ 1ಕ್ಕೆ ಮುಂದೂಡಿದೆ. ಇದನ್ನೂ ಓದಿ: IMDB 2022ರ ಜನಪ್ರಿಯ ಭಾರತೀಯ ಸಿನಿಮಾ ಪಟ್ಟಿಯಲ್ಲಿ ಕನ್ನಡದ ಟಾಪ್‌ 3 ಚಿತ್ರಗಳು

    ಶ್ರುತಿ ಹರಿಹರನ್ ಮಾಡಿದ್ದ ಆರೋಪದ ಕುರಿತಂತೆ  2018ರ ಅಕ್ಟೋಬರ್ 25ರಂದು ವಾಣಿಜ್ಯ ಮಂಡಳಿಯಲ್ಲಿ ಸಂಧಾನ ಸಭೆ ನಡೆದಿತ್ತು. ಹಿರಿಯ ನಟ ಅಂಬರೀಶ್ ಅವರ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಶ್ರುತಿ ಹರಿಹರನ್ ಮತ್ತು ನಟನಿಗೆ ಆಪ್ತರಾಗಿದ್ದ ಸಂಬರಗಿ ಹಾಜರಿದ್ದರು. ನಂತರ ತನ್ನ ವಿರುದ್ಧ ಮಾಧ್ಯಮಗಳಲ್ಲಿ ಸಂಬರಗಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದು, ಚಾರಿತ್ರ್ಯಕ್ಕೆ ಧಕ್ಕೆ ತರುತ್ತಿದ್ದಾರೆಂದು ಆರೋಪಿಸಿದ್ದರು. ಸಂಬರಗಿ ವಿರುದ್ಧ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸಮಂತಾ ಸಿನಿಮಾಗೆ ಸಂಕಷ್ಟ: ಕೋರ್ಟ್ ನಿಂದ ತಡೆಯಾಜ್ಞೆ

    ಸಮಂತಾ ಸಿನಿಮಾಗೆ ಸಂಕಷ್ಟ: ಕೋರ್ಟ್ ನಿಂದ ತಡೆಯಾಜ್ಞೆ

    ಸಮಂತಾ ನಟನೆಯ ಯಶೋದಾ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಉತ್ತಮ ರೀತಿಯಲ್ಲೇ ಜನರು ಕೂಡ ಸಿನಿಮಾವನ್ನು ಸ್ವೀಕರಿಸಿದ್ದಾರೆ. ಮೊದಲ ಬಾರಿಗೆ ಸಮಂತಾ ಕೂಡ ಆ ರೀತಿಯ ಪಾತ್ರ ಮಾಡಿದ್ದರಿಂದ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಅನಾರೋಗ್ಯದ ನಡುವೆಯೂ ಸಮಂತಾ ಈ ಸಿನಿಮಾಗೆ ಡಬ್ಬಿಂಗ್ ಮಾಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಇದೆಲ್ಲದರ ಪರಿಣಾಮ ಬಾಕ್ಸ್ ಆಫೀಸಿನಲ್ಲೂ ಚಿತ್ರ ಸದ್ದು ಮಾಡುತ್ತಿದೆ.

    ಸಿನಿಮಾ ರಿಲೀಸ್ ಆದ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಈ ನಡುವೆ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಈ ಚಿತ್ರವನ್ನು ಒಟಿಟಿಗೆ ರಿಲೀಸ್ ಮಾಡಬಾರದು ಎಂದು ಇವಾ ಆಸ್ಪತ್ರೆಯ ಮ್ಯಾನೇಜ್ ಮೆಂಟ್ ಕೋರ್ಟ್ ಮೆಟ್ಟಿಲು ಏರಿದೆ. ಇವಾ ಮಾತುಗಳನ್ನು ಆಲಿಸಿರುವ ಕೋರ್ಟ್ ಕೂಡ ಆಸ್ಪತ್ರೆಯ ಪರವಾಗಿಯೇ ಆದೇಶ ನೀಡಿದೆ. ಒಟಿಟಿಯಲ್ಲಿ ಈ ಸಿನಿಮಾವನ್ನು ಪ್ರದರ್ಶನ ಮಾಡದಂತೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಇದನ್ನೂ ಓದಿ: ರಿಷಬ್‌ ನಟನೆಯ ʻಕಾಂತಾರʼ ಚಿತ್ರಕ್ಕೆ ಗೋವಾ ಸಿಎಂ ಮೆಚ್ಚುಗೆ

    ಈ ಸಿನಿಮಾದಲ್ಲಿ ಸಮಂತಾ ಬಾಡಿಗೆ ತಾಯಿ ಪಾತ್ರ ಮಾಡಿದ್ದಾರೆ. ಹಾಗಾಗಿ ಸಿನಿಮಾದಲ್ಲಿ ಇವಾ ಆಸ್ಪತ್ರೆಯನ್ನು ತೋರಿಸಲಾಗಿದೆ. ಅದು ಆಸ್ಪತ್ರೆಯ ಘನತೆಗೆ ಧಕ್ಕೆ ಬರುವ ರೀತಿಯಲ್ಲಿ ಆಸ್ಪತ್ರೆಯನ್ನು ತೋರಿಸಲಾಗಿದೆ ಎನ್ನುವುದು ಮ್ಯಾನೇಜ್ ಮೆಂಟ್ ಆರೋಪ. ಆಸ್ಪತ್ರೆಯನ್ನು ಕೆಟ್ಟ ರೀತಿಯಲ್ಲಿ ತೋರಿಸಿದ್ದರಿಂದ ತಮ್ಮ ಆಸ್ಪತ್ರೆಯ ಮೇಲೆ ಅದು ಪರಿಣಾಮ ಬೀರುತ್ತದೆ ಎಂದು ಕೋರ್ಟ್ ಮೆಟ್ಟಿಲು ಏರಿತ್ತು ಮ್ಯಾನೇಜ್ ಮೆಂಟ್.

    ಯಶೋದಾ ಯಶಸ್ಸಿನ ಬೆನ್ನಲ್ಲೇ ಸಮಂತಾ ಖುಷಿಯಲ್ಲಿದ್ದರು. ಪಾತ್ರವನ್ನು ಮೆಚ್ಚಿಕೊಂಡಿದ್ದ ಅಭಿಮಾನಿಗಳು ಧನ್ಯವಾದಗಳನ್ನೂ ಅವರು ತಿಳಿಸಿದ್ದರು. ಈ ಸಿನಿಮಾದ ಗೆಲುವು ಚಿತ್ರೋದ್ಯಮಕ್ಕೂ ಚೈತನ್ಯ ತುಂಬಿತ್ತು. ಅಷ್ಟರಲ್ಲಿ ಇಂಥದ್ದೊಂದು ಕಹಿ ಸುದ್ದಿ ಅಭಿಮಾನಿಗಳಿಗೆ ಸಿಕ್ಕಿದೆ. ಚಿತ್ರಮಂದಿರದಲ್ಲಿ ಸಿನಿಮಾ ಓಡುತ್ತಿದ್ದರೂ, ಒಟಿಟಿಯಲ್ಲಿ ಮಾತ್ರ ಅದು ತಡವಾಗಿ ಬರಬಹುದು.

    Live Tv
    [brid partner=56869869 player=32851 video=960834 autoplay=true]

  • ‘ವರಾಹ ರೂಪಂ’ ಮ್ಯೂಸಿಕ್ ಕದ್ದಿಲ್ಲ: ಧರ್ಮಸ್ಥಳದಲ್ಲಿ ರಿಷಬ್ ಶೆಟ್ಟಿ ಪ್ರತಿಕ್ರಿಯೆ

    ‘ವರಾಹ ರೂಪಂ’ ಮ್ಯೂಸಿಕ್ ಕದ್ದಿಲ್ಲ: ಧರ್ಮಸ್ಥಳದಲ್ಲಿ ರಿಷಬ್ ಶೆಟ್ಟಿ ಪ್ರತಿಕ್ರಿಯೆ

    ಕಾಂತಾರ (Kantara) ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ನಲ್ಲಿ ಬರುವ ವರಾಹ ರೂಪಂ ಮ್ಯೂಸಿಕ್ ನಾವು ಕದ್ದಿಲ್ಲ. ಸುಖಾಸುಮ್ಮನೆ ಜನರನ್ನು ಹಾದಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಯಾರೇ ಕೇಳಿದರೂ, ನಾವು ಅದನ್ನು ಕದ್ದಿಲ್ಲ ಎಂದು ಸಾಬೀತು ಪಡಿಸುತ್ತೇವೆ ಎಂದು ರಿಷಬ್ ಶೆಟ್ಟಿ (Rishabh Shetty) ಪ್ರತಿಕ್ರಿಯೆ ನೀಡಿದ್ದಾರೆ. ಧರ್ಮಸ್ಥಳದ ಮಂಜುನಾಥನ ದರ್ಶನಕ್ಕೆ ಆಗಮಿಸಿದ್ದ ರಿಷಬ್ ಶೆಟ್ಟಿ ದಂಪತಿ, ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ, ಯಾವುದೇ ಕಾರಣಕ್ಕೂ ಅದು ಕದ್ದ ಮ್ಯೂಸಿಕ್ ಅಲ್ಲ ಎಂದು ನುಡಿದಿದ್ದಾರೆ.

    ಕಾಂತಾರ ಸಿನಿಮಾ ಅಂದಾಕ್ಷಣ ಥಟ್ಟನೆ ನೆನಪಾಗುವ ಹಾಡು ‘ವರಾಹ ರೂಪಂ’ (Varaha Rupam) ಗೀತೆ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಬರುವ ಈ ಗೀತೆಯು ಸಿನಿಮಾದ ಗಟ್ಟಿತನವನ್ನು ಮತ್ತಷ್ಟು ಹೆಚ್ಚಿಸಿತ್ತು. ಕ್ಲೈಮ್ಯಾಕ್ಸ್ ಜನರ ಮನಸ್ಸಿನಲ್ಲಿ ಉಳಿದುಕೊಳ್ಳಲು ಕಾರಣವೂ ಆಗಿತ್ತು. ಈ ಹಾಡಿನ ವಿರುದ್ಧ ಟ್ಯೂನ್ ಕದ್ದ ಆರೋಪ ಕೇಳಿ ಬಂದಿತ್ತು. ಇತ್ತೀಚೆಗಷ್ಟೇ ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್‍ ನ ಸದಸ್ಯರು ಕೋರ್ಟಿಗೆ ಮೊರೆ ಹೋಗಿದ್ದರು. ಹಾಗಾಗಿ ಕೋಯಿಕ್ಕೋಡ್ ಕೋರ್ಟ್ ಸಿನಿಮಾದಲ್ಲಿ ಈ ಹಾಡು ಬಳಸದಂತೆ ತಡೆಯಾಜ್ಞೆ ನೀಡಿತ್ತು.

    ಆದರೂ, ಕಾಂತರ ಸಿನಿಮಾದ ತಂಡ ನಾವು ಯಾವುದೇ ರೀತಿಯಲ್ಲಿ ಹಾಡನ್ನು ಕಾಪಿ ಮಾಡಿಲ್ಲ. ಹಾಗಾಗಿ ಚಿತ್ರದಲ್ಲಿ ಆ ಹಾಡು ಇರತ್ತೆ ಎಂದು ಈವರೆಗೂ ಥಿಯೇಟರ್ ನಲ್ಲಿ ಅದನ್ನು ಮುಂದುವರೆಸಿಕೊಂಡು ಬಂದಿದ್ದರು. ಇದೀಗ ಮತ್ತೊಂದು ಕೇಸ್ ದಾಖಲಾಗಿದ್ದು, ಮಾತೃಭೂಮಿ ಮ್ಯೂಸಿಕ್ ಸಂಸ್ಥೆಯು ಮತ್ತೆ ಕೋರ್ಟ್ ಮೊರೆ ಹೋಗಿದೆ. ಹಾಗಾಗಿ ಅರ್ಜಿಯ ವಿಚಾರಣೆ ನಡೆಸಿರುವ ಪಾಲಕ್ಕಾಡ್ ಕೋರ್ಟ್ (Palakkad Court) ಮುಂದಿನ ಆದೇಶ ಬರುವವರೆಗೂ ಈ ಹಾಡನ್ನು ಎಲ್ಲಿಯೂ ಹಂಚಿಕೆ ಮಾಡುವಂತಿಲ್ಲ ಎಂದು ತಡೆಯಾಜ್ಞೆ (Injunction) ನೀಡಿದೆ.

    ಇನ್ನೂ ಕೋರ್ಟ್ ಆದೇಶದ ಪ್ರತಿ ಚಿತ್ರತಂಡಕ್ಕೆ ಸಿಗದೇ ಇರುವ ಕಾರಣದಿಂದಾಗಿ ಥಿಯೇಟರ್ ನಲ್ಲಿ ಈ ಹಾಡು ಕೇಳಿ ಬರುತ್ತಿದೆ. ಆದೇಶ ಪ್ರತಿ ಸಿಕ್ಕ ನಂತರ ಯಾವ ನಿರ್ಧಾರ ತಗೆದುಕೊಳ್ಳುತ್ತಾರೋ ಕಾದು ನೋಡಬೇಕು. ಅಷ್ಟೇ ಅಲ್ಲದೇ, ಮೊನ್ನೆಯಷ್ಟೇ ಬ್ಯಾಂಡ್ ನ ಸದಸ್ಯರೊಬ್ಬರು ಫೇಸ್ ಬುಕ್ ನಲ್ಲಿ ಬರೆದುಕೊಂಡು, ‘ಕ್ರೆಡಿಟ್ ಕೊಟ್ಟು ಈ ಹಾಡನ್ನು ಬಳಸಿಕೊಳ್ಳಬಹುದು ಎಂದು ಹೇಳಿದ್ದರು. ಆದರೆ, ಮ್ಯೂಸಿಕ್ ಸಂಸ್ಥೆ ಆ ರೀತಿಯ ಯಾವುದೇ ಹೇಳಿಕೆ ನೀಡಿಲ್ಲ.

    ಎರಡೆರಡು ಕೋರ್ಟಿನಿಂದ ಈ ಹಾಡಿಗೆ ತಡೆಯಾಜ್ಞೆ ನೀಡಿದೆ. ಆದರೂ, ಕನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ಈ ಸಿನಿಮಾ ಪ್ರದರ್ಶನವಾಗುತ್ತಿದೆ. ಮುಂದಿನ ದಿನಗಳಲ್ಲಿ ಕೋರ್ಟ್ ಮಾತಿಗೆ ಚಿತ್ರತಂಡ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತದೆಯೋ ಕಾದು ನೋಡಬೇಕು. ಅಷ್ಟರಲ್ಲಿ ಸಂಧಾನ ಏನಾದರೂ ನಡೆದರೂ ಅಚ್ಚರಿ ಪಡಬೇಕಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಕಾಂತಾರದ ‘ವರಾಹ ರೂಪಂ’ ಹಾಡಿಗೆ ಮತ್ತೊಂದು ತಡೆಯಾಜ್ಞೆಯ ಸಂಕಷ್ಟ

    ಕಾಂತಾರದ ‘ವರಾಹ ರೂಪಂ’ ಹಾಡಿಗೆ ಮತ್ತೊಂದು ತಡೆಯಾಜ್ಞೆಯ ಸಂಕಷ್ಟ

    ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾ ಅಂದಾಕ್ಷಣ ಥಟ್ಟನೆ ನೆನಪಾಗುವ ಹಾಡು ‘ವರಾಹ ರೂಪಂ’ (Varaha Rupam) ಗೀತೆ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಬರುವ ಈ ಗೀತೆಯು ಸಿನಿಮಾದ ಗಟ್ಟಿತನವನ್ನು ಮತ್ತಷ್ಟು ಹೆಚ್ಚಿಸಿತ್ತು. ಕ್ಲೈಮ್ಯಾಕ್ಸ್ ಜನರ ಮನಸ್ಸಿನಲ್ಲಿ ಉಳಿದುಕೊಳ್ಳಲು ಕಾರಣವೂ ಆಗಿತ್ತು. ಈ ಹಾಡಿನ ವಿರುದ್ಧ ಟ್ಯೂನ್ ಕದ್ದ ಆರೋಪ ಕೇಳಿ ಬಂದಿತ್ತು. ಇತ್ತೀಚೆಗಷ್ಟೇ ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್‍ ನ ಸದಸ್ಯರು ಕೋರ್ಟಿಗೆ ಮೊರೆ ಹೋಗಿದ್ದರು. ಹಾಗಾಗಿ ಕೋಯಿಕ್ಕೋಡ್ ಕೋರ್ಟ್ ಸಿನಿಮಾದಲ್ಲಿ ಈ ಹಾಡು ಬಳಸದಂತೆ ತಡೆಯಾಜ್ಞೆ  ನೀಡಿತ್ತು.

    ಆದರೂ, ಕಾಂತರ ಸಿನಿಮಾದ ತಂಡ ನಾವು ಯಾವುದೇ ರೀತಿಯಲ್ಲಿ ಹಾಡನ್ನು ಕಾಪಿ ಮಾಡಿಲ್ಲ. ಹಾಗಾಗಿ ಚಿತ್ರದಲ್ಲಿ ಆ ಹಾಡು ಇರತ್ತೆ ಎಂದು ಈವರೆಗೂ ಥಿಯೇಟರ್ ನಲ್ಲಿ ಅದನ್ನು ಮುಂದುವರೆಸಿಕೊಂಡು ಬಂದಿದ್ದರು. ಇದೀಗ ಮತ್ತೊಂದು ಕೇಸ್ ದಾಖಲಾಗಿದ್ದು, ಮಾತೃಭೂಮಿ ಮ್ಯೂಸಿಕ್ ಸಂಸ್ಥೆಯು ಮತ್ತೆ ಕೋರ್ಟ್ ಮೊರೆ ಹೋಗಿದೆ. ಹಾಗಾಗಿ ಅರ್ಜಿಯ ವಿಚಾರಣೆ ನಡೆಸಿರುವ ಪಾಲಕ್ಕಾಡ್ ಕೋರ್ಟ್ (Palakkad Court) ಮುಂದಿನ ಆದೇಶ ಬರುವವರೆಗೂ ಈ ಹಾಡನ್ನು ಎಲ್ಲಿಯೂ ಹಂಚಿಕೆ ಮಾಡುವಂತಿಲ್ಲ ಎಂದು ತಡೆಯಾಜ್ಞೆ  (Injunction)ನೀಡಿದೆ. ಇದನ್ನೂ ಓದಿ:`ಬಾಹುಬಲಿ’ ಪ್ರಭಾಸ್‌ಗೆ ಶಾಕ್ ಕೊಟ್ಟ ಜಿಎಸ್‌ಟಿ ಅಧಿಕಾರಿಗಳು

    ಇನ್ನೂ ಕೋರ್ಟ್ ಆದೇಶದ ಪ್ರತಿ ಚಿತ್ರತಂಡಕ್ಕೆ ಸಿಗದೇ ಇರುವ ಕಾರಣದಿಂದಾಗಿ ಥಿಯೇಟರ್ ನಲ್ಲಿ ಈ ಹಾಡು ಕೇಳಿ ಬರುತ್ತಿದೆ. ಆದೇಶ ಪ್ರತಿ ಸಿಕ್ಕ ನಂತರ ಯಾವ ನಿರ್ಧಾರ ತಗೆದುಕೊಳ್ಳುತ್ತಾರೋ ಕಾದು ನೋಡಬೇಕು. ಅಷ್ಟೇ ಅಲ್ಲದೇ, ಮೊನ್ನೆಯಷ್ಟೇ ಬ್ಯಾಂಡ್ ನ ಸದಸ್ಯರೊಬ್ಬರು ಫೇಸ್ ಬುಕ್ ನಲ್ಲಿ ಬರೆದುಕೊಂಡು, ‘ಕ್ರೆಡಿಟ್ ಕೊಟ್ಟು ಈ ಹಾಡನ್ನು ಬಳಸಿಕೊಳ್ಳಬಹುದು ಎಂದು ಹೇಳಿದ್ದರು. ಆದರೆ, ಮ್ಯೂಸಿಕ್ ಸಂಸ್ಥೆ ಆ ರೀತಿಯ ಯಾವುದೇ ಹೇಳಿಕೆ ನೀಡಿಲ್ಲ.

    ಎರಡೆರಡು ಕೋರ್ಟಿನಿಂದ ಈ ಹಾಡಿಗೆ ತಡೆಯಾಜ್ಞೆ ನೀಡಿದೆ. ಆದರೂ, ಕನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ಈ ಸಿನಿಮಾ ಪ್ರದರ್ಶನವಾಗುತ್ತಿದೆ. ಮುಂದಿನ ದಿನಗಳಲ್ಲಿ ಕೋರ್ಟ್ ಮಾತಿಗೆ ಚಿತ್ರತಂಡ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತದೆಯೋ ಕಾದು ನೋಡಬೇಕು. ಅಷ್ಟರಲ್ಲಿ ಸಂಧಾನ ಏನಾದರೂ ನಡೆದರೂ ಅಚ್ಚರಿ ಪಡಬೇಕಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಕಾಂತಾರ ‘ವರಾಹ ರೂಪಂ’  ಹಾಡಿಗೆ ಕೊಯಿಕ್ಕೋಡು ಕೋರ್ಟ್ ತಡೆಯಾಜ್ಞೆ

    ಕಾಂತಾರ ‘ವರಾಹ ರೂಪಂ’ ಹಾಡಿಗೆ ಕೊಯಿಕ್ಕೋಡು ಕೋರ್ಟ್ ತಡೆಯಾಜ್ಞೆ

    ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾದ ಹಾಡೊಂದು ಕಾನೂನು ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಬರುವ ‘ವರಾಹ ರೂಪಂ’ (Varaha Rupam) ಹಾಡನ್ನು ಸಿನಿಮಾದಲ್ಲಿ ಬಳಸದಂತೆ ತಡೆಯಾಜ್ಞೆ ನೀಡಲಾಗಿದ್ದು, ಇದರಿಂದಾಗಿ ಚಿತ್ರಕ್ಕೆ ಕಾನೂನು ತೊಡಕು ಎದುರಾಗಿದೆ. ಈ ಹಾಡನ್ನು ನಾನು ಯಾವುದರಿಂದಲೂ ಕದ್ದಿಲ್ಲ ಎಂದು ಈಗಾಗಲೇ ನಿರ್ದೇಶಕ ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದರು. ಆದರೂ, ಕೇರಳದ ಕೊಯಿಕ್ಕೋಡು  ಕೋರ್ಟ್ ಈ ಹಾಡಿನ ಬಳಕೆಗೆ ತಡೆಯಾಜ್ಞೆ ನೀಡಿದೆ.

    ಕೇರಳದ ತೈಕುಡಂ ಬಿಡ್ಜ್ ಬ್ಯಾಂಡ್ (Thaikudam Bidge Band) ಕಾಂತಾರ ಸಿನಿಮಾದ ವರಾಹ ರೂಪಂ ಹಾಡನ್ನು ತಮ್ಮ ಬ್ಯಾಂಡ್ ನ ಹಾಡಿನಿಂದ ಕದಿಯಲಾಗಿದೆ ಎಂದು ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿತ್ತು. ಕಾನೂನು ರೀತಿಯಲ್ಲಿ ಹೋರಾಟ ಮಾಡುವುದಾಗಿಯೂ ತಿಳಿಸಿತ್ತು. ಹಾಗಾಗಿ ತಂಡವು ಕೊಯಿಕ್ಕೋಡು ಕೋರ್ಟ್ ಗೆ ಮೊರೆ ಹೋಗಿತ್ತು. ಈ ಕುರಿತು ಶುಕ್ರವಾರ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೈಕ್ಕುಡಂ ಬ್ರಿಡ್ಜ್ ನ ಅನುಮತಿ ಇಲ್ಲದೇ ಈ ಹಾಡನ್ನು ಬಳಸುವಂತಿಲ್ಲ ಎಂದು ತಡೆಯಾಜ್ಞೆ ನೀಡಿದೆ. ಇದನ್ನೂ ಓದಿ: ‘ಹೆಂಡ್ತಿ ಮಕ್ಳನ್ನು ಬಿಟ್ ಬಂದಿದ್ದೀನಿ, ಸೇಫ್ ಆಗಿ ಮನೆಗೆ ಹೋಗ್ತೀನಾ?’: ಗಂಧದ ಗುಡಿಯಲ್ಲಿ ಕಣ್ಣೀರು ತರಿಸುತ್ತೆ ಅಪ್ಪು ಡೈಲಾಗ್

    ಈ ಕುರಿತು ಸ್ವತಃ ತೈಕುಡಂ ಬ್ರಿಡ್ಜ್ ಬ್ಯಾಂಡ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ. ‘ನಮ್ಮ ನವರಸಂ (Navarasam) ಮತ್ತು ವರಾಹ ರೂಪಂ ಹಾಡು ಅದೊಂದು ಹೋಲಿಕೆಯಲ್ಲಿ ನಮ್ಮ ಸಂಗೀತವನ್ನು ಕದಿಯಲಾಗಿದೆ’ ಎಂದು ಈ ಹಿಂದೆ ಬ್ಯಾಂಡ್ ಆರೋಪ ಮಾಡಿತ್ತು. ಕಾಂತಾರ ಟೀಮ್ ಹಾಡನ್ನು ಪ್ರೇರಿತವಾಗಿ ತಗೆದುಕೊಂಡಿಲ್ಲ, ಕೃತಿಚೌರ್ಯ ಮಾಡಿದೆ ಎಂದೂ ಹೇಳಿದ್ದರು. ಇದೀಗ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಮಾ ಇಷ್ಟಂ’ ಸಿನಿಮಾಗೆ ತಡೆಯಾಜ್ಞೆ ತಂದವರ ವಿರುದ್ಧವೇ ನಕಲಿ ಸಹಿ ದೂರು ನೀಡಿದ ವರ್ಮಾ

    ‘ಮಾ ಇಷ್ಟಂ’ ಸಿನಿಮಾಗೆ ತಡೆಯಾಜ್ಞೆ ತಂದವರ ವಿರುದ್ಧವೇ ನಕಲಿ ಸಹಿ ದೂರು ನೀಡಿದ ವರ್ಮಾ

    ಕ್ಷಿಣದ ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ‘ಮಾ ಇಷ್ಟಂ’ ಸಿನಿಮಾ ಅಂದುಕೊಂಡಂತೆ ಆಗಿದ್ದರೆ ಮೂರು ವಾರಗಳ ಹಿಂದೆಯೇ ರಿಲೀಸ್ ಆಗಬೇಕಿತ್ತು. ಆದರೆ, ನಿರ್ಮಾಪಕರಾದ ಕ್ರಾಂತಿ ಹಾಗೂ ನಟ್ಟಿ ಕರುಣಾ ಎನ್ನುವವರು ಈ ಚಿತ್ರಕ್ಕೆ ತಡೆಯಾಜ್ಞೆ ತಂದಿದ್ದರು. ತಮಗೆ ರಾಮ್ ಗೋಪಾಲ್ ವರ್ಮಾ ಹಣ ಕೊಡದೇ ವಂಚಿಸಿದ್ದಾರೆ ಎಂದು ದೂರು ದಾಖಲಿಸಿದ್ದರು. ಇದನ್ನೂ ಓದಿ : ಕರಣ್ ಜೋಹಾರ್ ಬರ್ತಡೇ ಪಾರ್ಟಿಗೆ ‘ಬಾಡಿಗಾರ್ಡ್ಸ್ ‘ ನಿರ್ಬಂಧ

    ನಟ್ಟಿಸ್ ಎಂಟರ್ ಟೈನ್ಮೆಂಟ್ ಗೆ ರಾಮ್ ಗೋಪಾಲ್ ವರ್ಮಾ ವಂಚಿಸಿದ್ದಾರೆ ಎಂದು ಈ ಇಬ್ಬರೂ ನಿರ್ಮಾಪಕರು ದೂರು ಕೊಟ್ಟ ಹಿನ್ನೆಲೆಯಲ್ಲಿ ಮತ್ತು ಕೋರ್ಟ್ನಿಂದ ತಡೆಯಾಜ್ಞೆ ತಂದ ಕಾರಣದಿಂದಾಗಿ ಚಿತ್ರ ರಿಲೀಸ್ ಆಗಿರಲಿಲ್ಲ. ಇದೀಗ ರಾಮ್ ಗೋಪಾಲ್ ವರ್ಮಾ ಆ ನಿರ್ಮಾಪಕರ ಮೇಲೆ ಮತ್ತೊಂದು ದೂರು ದಾಖಲಿಸಿದ್ದಾರೆ. ಈ ದೂರಿನಲ್ಲಿ ನಟ್ಟಿ ಕ್ರಾಂತಿ ಮತ್ತು ನಟ್ಟಿ ಕರುಣಾ ಅವರು ತಮ್ಮ ಸಹಿ ಫೋರ್ಜರಿ ಮಾಡಿದ್ದಾರೆ ಎಂದು ಹೈದರಾಬಾದ್ ನ ಪಂಗಗುಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ : ರಜನಿಕಾಂತ್ ಮನೆಯಲ್ಲಿ ಕಾಣಿಸಿಕೊಂಡ ಕಮಲ್ ಹಾಸನ್: ಕುತೂಹಲ ಮೂಡಿಸಿದ ಭೇಟಿ

    ನಟ್ಟಿಸ್ ಎಂಟರ್ ಟೈನ್ಮೆಂಟ್ ನಿರ್ಮಾಪಕರು ನನ್ನ ಸಹಿ ಮತ್ತು ನನ್ನ ಲೆಟರ್ ಹೆಡ್ ಅನ್ನು ನಕಲು ಮಾಡಿ, ದುರುಪಯೋಗ ಮಾಡಿಕೊಂಡಿದ್ದಾರೆ. ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಲೆಟರ್ ಹೆಡ್ ನನ್ನದಲ್ಲ ಮತ್ತು ಸಹಿ ಕೂಡ ನಾನು ಮಾಡಿಲ್ಲ. ಅವರೇ ಫೋರ್ಜರಿ ಮಾಡಿದ್ದಾರೆ ಎಂದು ಪ್ರತಿದೂರು ನೀಡಿದ್ದಾರೆ. ಇದರ ಬಗ್ಗೆ ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ : ಐಪಿಎಲ್ ಫಿನಾಲೆಯಲ್ಲಿ ಅಮೀರ್ ಖಾನ್ ಸಿನಿಮಾ ‘ಲಾಲ್ ಸಿಂಗ್ ಛಡ್ಡಾ’ ಟ್ರೈಲರ್ ರಿಲೀಸ್

    ನಟ್ಟಿ ಸಹೋದರರಿಂದ ರಾಮ್ ಗೋಪಾಲ್ ವರ್ಮಾ 56 ಲಕ್ಷ ರೂಪಾಯಿಯನ್ನು ಸಾಲ ಪಡೆದುಕೊಂಡಿದ್ದರಂತೆ. ಸಾಲ ಮರಳಿಸದೇ ವಂಚಿಸಿದ್ದಾರೆ ಎಂದು ಮಿಯಾಪೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿತ್ತು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 12ಕ್ಕೆ ನಡೆಯಲಿದೆ.

  • ಕೆಸಿ ವ್ಯಾಲಿ ಯೋಜನೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದ ಸುಪ್ರೀಂ

    ಕೆಸಿ ವ್ಯಾಲಿ ಯೋಜನೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದ ಸುಪ್ರೀಂ

    ನವದೆಹಲಿ: ಬರ ಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆಗಳಿಗೆ ಬೆಂಗಳೂರಿನ ಕಲುಷಿತ ನೀರನ್ನು ಶುದ್ಧಿಕರಿಸಿ ನೀರು ಹರಿಸುವ ಕೆಸಿ ವ್ಯಾಲಿ(ಕೋರಮಂಗಲ- ಚಲ್ಲಘಟ್ಟ ವ್ಯಾಲಿ) ಯೋಜನೆಗೆ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ. ಅಲ್ಲದೇ ಹೈಕೊರ್ಟ್ ನಲ್ಲಿ ಈ ಸಂಬಂಧ ವಿಚಾರಣೆ ನಡೆಸುವಂತೆ ಸೂಚನೆ ನೀಡಿ, ವಿಚಾರಣೆ ಮುಗಿಯುವವರೆಗೂ ಯೋಜನೆ ಮುಂದುವರಿಸಬಹುದು ಎಂದು ತಿಳಿಸಿದೆ.

    ಶಾಶ್ವತ ನೀರಾವರಿ ಯೋಜನೆ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಅವರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠದಿಂದ ವಿಚಾರಣೆ ನಡೆಸಿ ಯೋಜನೆ ಮುಂದುವರಿಸಲು ಗ್ರೀನ್ ಸಿಗ್ನಲ್ ನೀಡಿದೆ. ಯೋಜನೆ ಮುಂದುವರಿಸಲು ಹೈಕೋರ್ಟ್ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಅಂಜನೇಯ ರೆಡ್ಡಿ ಸಲ್ಲಿಸಿದ್ದರು.

    ವಿಚಾರಣೆ ವೇಳೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಬರ ಪೀಡಿತ ಜಿಲ್ಲೆಗಳಾಗಿದ್ದು, ಇಲ್ಲಿ ಬೇರೆ ನೀರಿನ ಮೂಲ ಇಲ್ಲ. ಕೆ.ಸಿ ವ್ಯಾಲಿ ನೀರು ಭೂಮಿ ಒಳಗೆ ಸೇರಿದ ಮೇಲೆ ನೈಸರ್ಗಿಕವಾಗಿ ಸ್ವಚ್ಛವಾಗಲಿದೆ. ಹಾಗಾಗಿ ಯೋಜನೆ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದ ರಾಜ್ಯ ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದರು. ರಾಜ್ಯ ಸರ್ಕಾರದ ಪರ ವಕೀಲರ ವಾದ ಮನ್ನಿಸಿದ ಸುಪ್ರೀಂ ಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದೆ. ಈ ಪ್ರಕರಣದ ಸಂಬಂಧ ಹೈಕೋರ್ಟ್ ನಲ್ಲಿ ವಿಚಾರಣೆಗೆ ತುರ್ತು ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.