Tag: Infosys Foundation

  • ದಸರಾ ವೇಳೆ ಮಾರುಕಟ್ಟೆಗೆ ಭೇಟಿ ನೀಡಿ ಸರಳತೆ ಮೆರೆದ ಸುಧಾಮೂರ್ತಿ

    ದಸರಾ ವೇಳೆ ಮಾರುಕಟ್ಟೆಗೆ ಭೇಟಿ ನೀಡಿ ಸರಳತೆ ಮೆರೆದ ಸುಧಾಮೂರ್ತಿ

    ಮೈಸೂರು: ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿಯವರು ನಗರದ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುವ ಮೂಲಕ ಸರಳತೆಯನ್ನು ಮೆರೆದಿದ್ದಾರೆ.

    ಹೌದು, ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿಯವರು ಇಂದು ನಗರದ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿದ್ದರು. ಮಾರುಕಟ್ಟೆಯಲ್ಲಿ ಸರಳವಾಗಿ ನಡೆದುಕೊಂಡು ಬಂದ ಅವರನ್ನು ನೋಡಿದ ಜನ ಅಚ್ಚರಿಗೊಂಡರು.

    ಸುಧಾಮೂರ್ತಿಯವರು ನಡೆದುಕೊಂಡು ಹೋಗುತ್ತಿದ್ದಾಗ ಸಾರ್ವಜನಿಕರು ಕೈ ಮುಗಿದು ಗೌರವ ಸೂಚಿಸಿದರು. ಸಾಮಾನ್ಯರಂತೆ ಮಾರುಕಟ್ಟೆಯಲ್ಲಿ ಓಡಾಡಿ, ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದ ಅವರ ಸರಳತೆಗೆ ಜನ ಮಾರುಹೋದರು. 2018ರ ಮೈಸೂರು ದಸರಾಗೆ ಚಾಲನೆ ನೀಡಿದ್ದ ಅವರನ್ನು ಜನ ವಂದಿಸುತ್ತಾ ಹರ್ಷ ವ್ಯಕ್ತಪಡಿಸಿದರು.

    ಸುಧಾಮೂರ್ತಿ ಮೊದಲಿನಿಂದಲೂ ಸರಳತೆ ಬೆಳೆಸಿಕೊಂಡು ಬಂದಿದ್ದಾರೆ. ಕೆಲ ದಿನಗಳ ಹಿಂದೆ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಬಳಿಕ ಛಾಯಾಗ್ರಾಹರೊಬ್ಬರು ಸುಧಾಮೂರ್ತಿ ಅವರಿಗೆ ಪುಸ್ತಕವನ್ನು ಕೊಟ್ಟಿದ್ದರು. ಈ ವೇಳೆ ಸುಧಾಮೂರ್ತಿ “ಈ ಪುಸ್ತಕ ನನಗೆ ಉಚಿತವಾಗಿ ನೀಡುತ್ತಿದ್ದೀರಾ” ಎಂದು ಪ್ರಶ್ನಿಸಿದರು. ಇದಕ್ಕೆ ಛಾಯಾಗ್ರಾಹಕರು ಹೌದು ಎಂದು ಉತ್ತರಿಸಿದಾಗ ಸುಧಾಮೂರ್ತಿ,”ನೀವು ಇಷ್ಟು ಕಷ್ಟಪಟ್ಟು ಸಿದ್ಧಪಡಿಸಿದ ಪುಸ್ತಕವನ್ನು ಉಚಿತವಾಗಿ ಪಡೆಯುವುದು ನನಗೆ ಶೋಭೆ ತರುವುದಿಲ್ಲ. ಉಚಿತವಾಗಿ ಪಡೆದರೆ ಪುಸ್ತಕಕ್ಕೆ ನಾನು ಮಾಡಿದ ಅವಮಾನವಾಗುತ್ತದೆ” ಎಂದು ಹೇಳಿದರು. ಅಷ್ಟೇ ಅಲ್ಲದೇ ಪುಸ್ತಕದ ಬೆಲೆಯಾದ 4,500 ರೂ. ಅನ್ನು ಛಾಯಾಗ್ರಾಹಕರ ಬ್ಯಾಂಕ್ ಖಾತೆಗೆ ಹಾಕಿ ಎಂದು ತನ್ನ ಸಿಬ್ಬಂದಿಗೆ ಸೂಚಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇನ್ಫಿ ಫೌಂಡೇಶನ್‍ನಿಂದ ಜೀರ್ಣೋದ್ಧಾರಗೊಂಡ ವಸಂತಪುರ ಕಲ್ಯಾಣಿ ಉದ್ಘಾಟನೆ

    ಇನ್ಫಿ ಫೌಂಡೇಶನ್‍ನಿಂದ ಜೀರ್ಣೋದ್ಧಾರಗೊಂಡ ವಸಂತಪುರ ಕಲ್ಯಾಣಿ ಉದ್ಘಾಟನೆ

    ಬೆಂಗಳೂರು: ಇನ್ಫೋಸಿಸ್ ಫೌಂಡೇಷನ್ ಸಂಸ್ಥೆಯು ಜೀರ್ಣೋದ್ಧಾರ ಮಾಡಿದ್ದ ಐತಿಹಾಸಿಕ ವಸಂತಪುರ ಕಲ್ಯಾಣಿಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟನೆ ಮಾಡಿದ್ದಾರೆ.

    ಉತ್ತರಹಳ್ಳಿಯ ವಸಂತಪುರದಲ್ಲಿರುವ ಐತಿಹಾಸಿಕ ಕಲ್ಯಾಣಿಯನ್ನು ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕರಾದ ಶ್ರೀಮತಿ ಸುಧಾಮೂರ್ತಿಯವರ ಸಹಾಯ ಹಸ್ತದಿಂದ ಅಭಿವೃದ್ಧಿ ಪಡಿಸಲಾಗಿತ್ತು. ಈ ಐತಿಹಾಸಿಕ ಕಲ್ಯಾಣಿಗೆ ಮರುಜೀವ ನೀಡಲು ಇನ್ಫೋಸಿಸ್ ಫೌಂಡೇಷನ್ ಸುಮಾರು 8.5 ಕೋಟಿ ರೂಪಾಯಿ ವೆಚ್ಚ ಮಾಡಿತ್ತು.

    ಸಂಸ್ಥೆಯು ಜೀರ್ಣೋದ್ಧಾರ ಮಾಡಿದ ಕಲ್ಯಾಣಿಯನ್ನು ಸೋಮವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಉದ್ಘಾಟನೆ ಮಾಡಿದ್ದಾರೆ. ಈ ಸಮಾರಂಭದಲ್ಲಿ ಸಂಸದ ಡಿ.ಕೆ.ಸುರೇಶ್, ಶಾಸಕ ಎಂ.ಕೃಷ್ಣಪ್ಪ, ಡಿಸಿ ಶೈಲಜಾ ಸೇರಿದಂತೆ ಸುಧಾಮೂರ್ತಿಯವರು ಪಾಲ್ಗೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೆಟ್ರೋ ಕಾಮಗಾರಿಗೆ ಇನ್ಫೋಸಿಸ್ ಫೌಂಡೇಷನ್ ನಿಂದ 200ಕೋಟಿ ರೂ. ನೆರವು

    ಮೆಟ್ರೋ ಕಾಮಗಾರಿಗೆ ಇನ್ಫೋಸಿಸ್ ಫೌಂಡೇಷನ್ ನಿಂದ 200ಕೋಟಿ ರೂ. ನೆರವು

    ಬೆಂಗಳೂರು: ಇನ್ಫೋಸಿಸ್ ಫೌಂಡೇಷನ್ ಅನೇಕ ಜನಪರ ಕಾರ್ಯಕ್ರಮಕ್ಕೆ ಸರ್ಕಾರದ ಜೊತೆ ಕೈ ಜೋಡಿಸುತ್ತಾ ಬಂದಿದೆ. ಈಗ ಮೆಟ್ರೋ ಕಾಮಗಾರಿಗೆ ಕೂಡ ಸಹಾಯ ಮಾಡಲು ಮುಂದಾಗಿದೆ.

    ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾಮೂರ್ತಿ ಅವರು ಇಂದು ಮುಖ್ಯಮಂತ್ರಿಗಳ ಕೃಷ್ಣಾ ನಿವಾಸಕ್ಕೆ ಭೇಟಿ ನೀಡಿದ್ರು. ಇದೇ ವೇಳೆ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಕೋನಪ್ಪನ ಅಗ್ರಹಾರ ಮೆಟ್ರೋ ಕಾಮಗಾರಿಗೆ ಸಹಾಯ ಮಾಡುವ ಕುರಿತು ಚರ್ಚೆ ನಡೆಸಿದರು.

    ಚರ್ಚೆಯ ಬಳಿಕ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಕೋನಪ್ಪನ ಅಗ್ರಹಾರ ಮೆಟ್ರೋ ಹಳಿ ನಿರ್ಮಾಣಕ್ಕೆ 100 ಕೋಟಿ ರೂ. ಹಾಗೂ ನಿಲ್ದಾಣಕ್ಕೆ 100 ಕೋಟಿ ರೂ. ಸಹಾಯ ನೀಡುವುದಾಗಿ ಸುಧಾಮೂರ್ತಿ ಅವರು ತಿಳಿಸಿದ್ದಾರೆ. ಇದೇ ತಿಂಗಳ 19 ರಂದು ವಿಧಾನಸೌಧದಲ್ಲಿ ಸರ್ಕಾರ ಮತ್ತು ಇನ್ಫೋಸಿಸ್ ನಡುವೆ ತಿಳವಳಿಕೆಯ ಸ್ಮರಣಿಕೆ (ಎಂಓಯು) ಒಪ್ಪಂದ ನಡೆಯಲಿದೆ. ಇನ್ಫೋಸಿಸ್ ಸಂಸ್ಥೆ ಅನೇಕ ಒಳ್ಳೆ ಕೆಲಸ ಮಾಡ್ತಿದೆ. ಈ ಮೂಲಕ ಇನ್ಫೋಸಿಸ್ ಫೌಂಡೇಷನ್ ಇತರ ಕಂಪೆನಿಗಳಿಗೆ ಮಾದರಿ ಆಗಿದೆ ಎಂದು ಹೇಳಿದರು.

     

    ಸಹಾಯದ ಬಗ್ಗೆ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಪ್ರತಿಕ್ರಿಯಿಸಿ, ಆಡದೇ ಮಾಡುವವನು ರೂಢಿಯೊಳಗೆ ಉತ್ತಮನು, ಆಡಿ ಮಾಡುವವನು ಮಧ್ಯಮನು, ಆಡಿಯೂ ಮಾಡದವನು ಅದಮನು. ಜನರಿಗೆ ಅನುಕೂಲವಾಗಲು ಈ ಸಹಾಯ ಮಾಡುತ್ತಿದ್ದೇವೆ. ನಮ್ಮಲ್ಲಿ ಇರುವುದನ್ನು ಇನ್ನೊಬ್ಬರಿಗೆ ನೀಡಿ ಸಹಾಯ ಮಾಡಬೇಕು. ಹೀಗಾಗಿ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣವನ್ನು ಉತ್ತಮವಾಗಿ ನಿರ್ಮಾಣ ಮಾಡಿ, 30 ವರ್ಷ ನಾವೇ ನಿರ್ವಹಣೆ ಮಾಡುತ್ತೇವೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ರು.