Tag: Infosys Foundation

  • Exclusive – 1 ನಿಮಿಷದ ಮೊದಲು ಗೊತ್ತಾಯಿತು: ಸುಧಾಮೂರ್ತಿ

    Exclusive – 1 ನಿಮಿಷದ ಮೊದಲು ಗೊತ್ತಾಯಿತು: ಸುಧಾಮೂರ್ತಿ

    ಬೆಂಗಳೂರು: ನಾನು ರಾಜ್ಯಸಭೆಗೆ (Rajya Sabha) ನಾಮನಿರ್ದೇಶನವಾಗಿರುವ ವಿಚಾರ 1 ನಿಮಿಷದ ಮೊದಲು ತಿಳಿಯಿತು ಎಂದು ಇನ್ಫೋಸಿಸ್‌ ಫೌಂಡೇಶನ್‌ (Infosys Foundation) ಅಧ್ಯಕ್ಷೆ ಸುಧಾಮೂರ್ತಿ (Sudha Murty) ಹೇಳಿದ್ದಾರೆ.

    ಸಮಾಜ ಸೇವೆ ಮತ್ತು ಶಿಕ್ಷಣಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗೆ ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ನಾಮನಿರ್ದೇಶನ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮಧ್ಯಾಹ್ನ 12:57ಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸುಧಾಮೂರ್ತಿ ಅವರನ್ನು ನಾಮನಿರ್ದೇಶನ ಮಾಡಿದ ವಿಷಯವನ್ನು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ ಸೇವೆ ರದ್ದು

     

    ನಾಮನಿರ್ದೇಶನಗೊಂಡ ಹಿನ್ನೆಲೆಯಲ್ಲಿ ಪಬ್ಲಿಕ್‌ ಟಿವಿ ಮಧ್ಯಾಹ್ನ 1 ಗಂಟೆಯ ತನ್ನ ನ್ಯೂಸ್‌ ಬುಲೆಟಿನ್‌ನಲ್ಲಿ ಸುಧಾಮೂರ್ತಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿತು. ಈ ವೇಳೆ ಮಾತನಾಡಿದ ಅವರು, ಸದ್ಯ ನಾನು ವಿದೇಶದಲ್ಲಿ ಇದ್ದೇನೆ. 1 ನಿಮಿಷದ ಹಿಂದೆ ನಾಮನಿರ್ದೇಶನಗೊಂಡ ವಿಷಯ ತಿಳಿಯಿತು ಎಂದು ಹೇಳಿದರು. ಇದನ್ನೂ ಓದಿ: PublicTV Explainer: ಬೆಂಗಳೂರಿಗೆ ಬಂತು ಮೊದಲ ಚಾಲಕ ರಹಿತ ಮೆಟ್ರೋ ರೈಲು – ವಿಶೇಷತೆಗಳು ನಿಮಗೆಷ್ಟು ಗೊತ್ತು?

    ರಾಜಕಾರಣದಲ್ಲಿ ಸೇವೆ ಮಾಡುವಂತಹ ಅವಕಾಶ ಸಿಗುತ್ತೆ ಎಂದು ನಿರೀಕ್ಷೆ ಮಾಡಿದ್ರಾ ಎಂಬ ಪ್ರಶ್ನೆಗೆ, ರಾಜಾಕರಣದಲ್ಲಿ ಸೇವೆ ಮಾಡುವಂತ ಅವಕಾಶ ಸಿಗುತ್ತೆ ಅಂತ ನಾನು ಯೋಚನೆ ಮಾಡಿರಲಿಲ್ಲ. ಇವತ್ತು ಪ್ರಧಾನಿ ಮೋದಿಯವರು ಟ್ವೀಟ್‌ ಮಾಡಿದ ನಂತರ ವಿಚಾರ ತಿಳಿಯಿತು. ನಮ್ಮ ಕುಟುಂಬದವರಿಗೂ ಯಾರಿಗೂ ವಿಷಯ ಗೊತ್ತಿಲ್ಲ. ನನ್ನ ಕೈಯಲ್ಲಿ ಆಗುವಷ್ಟು ಕೆಲಸ ಮಾಡುತ್ತೇನೆ. ನನ್ನಿಂದ ಏನಾದರೂ ಸಹಾಯವಾಗಲಿ ಅಷ್ಟೇ ನಾನು ಬಯಸುತ್ತೇನೆ ಎಂದು ಉತ್ತರಿಸಿದರು.

    ಎಕ್ಸ್‌ನಲ್ಲಿ ಮೋದಿ, ಭಾರತದ ರಾಷ್ಟ್ರಪತಿಗಳು ರಾಜ್ಯಸಭೆಗೆ ಸುಧಾಮೂರ್ತಿ ಅವರನ್ನು ನಾಮನಿರ್ದೇಶನ ಮಾಡಿರುವುದು ನನಗೆ ಖುಷಿ ತಂದಿದೆ. ಸಮಾಜಸೇವೆ, ಲೋಕೋಪಕಾರ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸುಧಾ ಮೂರ್ತಿಯವರ ಕೊಡುಗೆ ಅಪಾರ ಮತ್ತು ಸ್ಪೂರ್ತಿದಾಯಕವಾಗಿದೆ. ರಾಜ್ಯಸಭೆಯಲ್ಲಿ ಅವರ ಉಪಸ್ಥಿತಿಯು ನಮ್ಮ ‘ನಾರಿ ಶಕ್ತಿ’ಗೆ ಪ್ರಬಲವಾದ ಸಾಕ್ಷಿಯಾಗಿದೆ. ಇದು ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಮಹಿಳೆಯರ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಉದಾಹರಣೆ. ಅವರ ಸಂಸದೀಯ ಅವಧಿ ಫಲಪ್ರದವಾಗಲಿ ಎಂದು ಹಾರೈಸಿದ್ದಾರೆ.

  • ರಾಯಚೂರಿನಲ್ಲಿ ತಯಾರಾಗೋ ವಿಶೇಷ ಕೌದಿ – ಸುಧಾಮೂರ್ತಿಯಿಂದ ರಾಷ್ಟ್ರಪತಿಗೆ ಉಡುಗೊರೆ

    ರಾಯಚೂರಿನಲ್ಲಿ ತಯಾರಾಗೋ ವಿಶೇಷ ಕೌದಿ – ಸುಧಾಮೂರ್ತಿಯಿಂದ ರಾಷ್ಟ್ರಪತಿಗೆ ಉಡುಗೊರೆ

    ರಾಯಚೂರು: ರಾಜ್ಯಕ್ಕೆ ಭೇಟಿ ನೀಡಿದ್ದ ರಾಷ್ಟ್ರಪತಿಗಳಿಗೆ ಇನ್ಫೋಸಿಸ್ ಫೌಂಡೇಶನ್ (Infosys Foundation) ಮುಖ್ಯಸ್ಥೆ ಸುಧಾಮೂರ್ತಿ ( Sudhamurthy) ಕೌದಿ ಉಡುಗೊರೆ ನೀಡಿದ್ದು, ಇದೀಗ ಈ ವಿಚಾರ ಭಾರೀ ಚರ್ಚೆಯಾಗುತ್ತಿದೆ.

    ಧಾರವಾಡದಲ್ಲಿ ಐಐಐಟಿ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಆಗಮಿಸಿದ್ದ ವೇಳೆ ಕೌದಿ (Kaudi Blanket) ಉಡುಗೊರೆ ನೀಡಿದ್ದರು. ಉಡುಗೊರೆ ಹಿಂದಿನ ಕತೆಯಲ್ಲಿ 3 ಸಾವಿರ ದೇವದಾಸಿಯರ ಪಾತ್ರ ಪ್ರಮುಖವಾಗಿದೆ. ರಾಯಚೂರು ಜಿಲ್ಲೆಯ ದೇವದಾಸಿ ಮಹಿಳೆಯರು ತಯಾರಿಸಿದ ಕೌದಿಯನ್ನು ಸುಧಾಮೂರ್ತಿ ಉಡುಗೊರೆಯಾಗಿ ನೀಡಿದ್ದಾರೆ. ದೇವದಾಸಿ ಪದ್ಧತಿಯಿಂದ (Devadasi system) ಹೊರತಂದು ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟಿರುವ ಸುಧಾಮೂರ್ತಿ, ಅದೇ ಮಹಿಳೆಯರು ತಯಾರಿಸಿದ ಕೌದಿ ಹಾಗೂ ಸೀರೆ ಮತ್ತು ಪುಸ್ತಕವನ್ನು ನೆನಪಿನ ಕಾಣಿಕೆಯಾಗಿ ನೀಡಿದ್ದರು.  ಇದನ್ನೂ ಓದಿ: RSS ಬ್ಯಾನ್ ವಿಚಾರ – ಸಿದ್ದರಾಮಯ್ಯಗೆ ತಲೆಕೆಟ್ಟಿದೆ ಎಂದು ಅಪ್ಪಚ್ಚು ರಂಜನ್ ಕಿಡಿ

    ಈ ಕೌದಿಗಳು ಫುಲ್ ಡಿಮ್ಯಾಂಡ್ ಹೊಂದಿವೆ. ಈ ಕೌದಿಗಳ ಬಗ್ಗೆಯೇ ಇಂಗ್ಲೀಷ್, ಹಿಂದಿ ಭಾಷೆಯಲ್ಲಿ ಸುಧಾಮೂರ್ತಿ ಪುಸ್ತಕ ಬರೆದಿದ್ದಾರೆ. ‘ತ್ರೀ ತೌಸಂಡ್ ಸ್ಟಿಚ್ಚಸ್'(Three Thousand Stitches), ‘ತೀನ್ ಹಜಾರ್ ಟಾಕಿ'(Teen Hazar Talkie) ಎಂಬ ಹೆಸರಿನ ಪುಸ್ತಕ ಬಿಡುಗಡೆಯಾಗಿವೆ. ಒಬ್ಬೊಬ್ಬ ದೇವದಾಸಿಯ ಒಂದೊಂದು ಹೊಲಿಗೆ ಸೇರಿ ಮೂರು ಸಾವಿರ ಹೊಲಿಗೆಗಳಿಂದ ಹೊಲಿದ ವಿಶೇಷ ಕೌದಿ ಸುಧಾಮೂರ್ತಿಗೆ ಉಡುಗೊರೆ ನೀಡಿದ್ದರು. ಕೌದಿ ಹೊಲಿದು ಸ್ವಯಂ ದುಡಿಮೆ ಮಾಡುವ ಸಂಸ್ಥೆ ನಿರ್ಮಿಸಿ ಸುಧಾಮೂರ್ತಿ ಅವರು ದೇವದಾಸಿಯರಿಗೆ ಬದುಕು ಕಟ್ಟಿಕೊಟ್ಟಿದ್ದಾರೆ. ಇದನ್ನೂ ಓದಿ: ತಾನು ಎರಡನೇ ಪತ್ನಿ ಅಂತಾ ಗೊತ್ತಾಗ್ತಿದ್ದಂತೆಯೇ ಮುಂಜಾನೆ ನೇಣಿಗೆ ಶರಣಾದ ನವವಧು!

    Live Tv
    [brid partner=56869869 player=32851 video=960834 autoplay=true]

  • ಇನ್ಫೋಸಿಸ್ ಫೌಂಡೇಶನ್‍ನಿಂದ ರಾಯರ ಮಠಕ್ಕೆ ಒಂದು ಲಾರಿ ಆಹಾರ ಪದಾರ್ಥ

    ಇನ್ಫೋಸಿಸ್ ಫೌಂಡೇಶನ್‍ನಿಂದ ರಾಯರ ಮಠಕ್ಕೆ ಒಂದು ಲಾರಿ ಆಹಾರ ಪದಾರ್ಥ

    ರಾಯಚೂರು: ಕೊರೊನಾ ಲಾಕ್‍ಡೌನ್ ಬಳಿಕ ರಾಯರ ಭಕ್ತರಿಗೆ ಅನುಕೂಲವಾಗಲಿ ಅಂತ ಇನ್ಫೋಸಿಸ್ ಫೌಂಡೇಶನ್ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಒಂದು ಲಾರಿ ಆಹಾರ ಪದಾರ್ಥಗಳನ್ನ ವಿತರಣೆ ಮಾಡಿದೆ.

    ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ, ಸುಧಾಮೂರ್ತಿ ದಂಪತಿಗಳಿಂದ ಆಹಾರ ಧಾನ್ಯ ವಿತರಣೆಯಾಗಿದ್ದು, ಅಕ್ಕಿ ,ಬೇಳೆ, ಅಡುಗೆ ಎಣ್ಣೆ ಸೇರಿ ಆಹಾರ ಧಾನ್ಯ ಹಾಗೂ ಅಗತ್ಯ ವಸ್ತುಗಳನ್ನ ಬೆಂಗಳೂರಿನಿಂದ ರವಾನೆ ಮಾಡಿದ್ದಾರೆ.

    ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಇನ್ಫೋಸಿಸ್ ಫೌಂಡೇಶನ್ ಗೆ ಅಭಿನಂದನೆ ಸಲ್ಲಿಸಿದ್ದಾರೆ. ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ ಅವರ ಕಾರ್ಯಕ್ಕೆ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ಫೋಸಿಸ್ ನೀಡಿದ ಆಹಾರ ಧಾನ್ಯಗಳನ್ನ ಮಠ ಭಕ್ತರ ಪ್ರಸಾದಕ್ಕೆ ಬಳಕೆ ಮಾಡಲಿದೆ. ಇದನ್ನೂ ಓದಿ: ಸುನಂದಾ ಪುಷ್ಕರ್ ಪ್ರಕರಣ – 7 ವರ್ಷಗಳ ಬಳಿಕ ಶಶಿ ತರೂರ್​​​ಗೆ ರಿಲೀಫ್

    https://www.youtube.com/watch?v=XwmWvnmsHmY

  • ಅಸಹಾಯಕ ಸಿನಿಮಾ ಕಾರ್ಮಿಕರಿಗೆ ಇನ್ಫೋಸಿಸ್ ಫೌಂಡೇಷನ್ ಆಸರೆ

    ಅಸಹಾಯಕ ಸಿನಿಮಾ ಕಾರ್ಮಿಕರಿಗೆ ಇನ್ಫೋಸಿಸ್ ಫೌಂಡೇಷನ್ ಆಸರೆ

    -ನಿರ್ಮಾಪಕ ರಮೇಶ್ ರೆಡ್ಡಿ ಸಮ್ಮುಖದಲ್ಲೊಂದು ಸಾರ್ಥಕ ಕಾರ್ಯ

    ಬೆಂಗಳೂರು: ಕೊರೊನಾ ವೈರಸ್ ಅಟಾಟೋಪದಿಂದಾಗಿ ಹೆಚ್ಚೂ ಕಡಿಮೆ ಇಡೀ ವಿಶ್ವವೇ ಸ್ತಬ್ಧವಾಗಿದೆ. ಅದರಲ್ಲಿ ನಮ್ಮ ದೇಶ, ರಾಜ್ಯವೂ ಹೊರತಾಗಿಲ್ಲ. ಮೇಲ್ನೋಟಕ್ಕೆ ಲಾಕ್‍ಡೌನ್ ಈ ಕ್ಷಣದ ಅನಿವಾರ್ಯತೆಯಾಗಿ ಕಂಡರೂ ಕೂಡಾ ದಿನದ ತುತ್ತನ್ನು ಆ ದಿನವೇ ಸಂಪಾದಿಸಿಕೊಂಡು ಜೀವನ ಸಾಗಿಸುತ್ತಿದ್ದ ಕೋಟಿ ಕೋಟಿ ಜೀವಗಳು ತೀವ್ರತರನಾದ ಸಂಕಷ್ಟಕ್ಕೀಡಾಗಿವೆ. ಆ ಸಾಲಿನಲ್ಲಿ ಕನ್ನಡ ಚಿತ್ರರಂಗದ ಭಾಗವಾಗಿರುವ ಕಾರ್ಮಿಕರೂ ಕೂಡ ಸೇರಿಕೊಂಡಿದ್ದಾರೆ. ಅಂಥವರಿಗೆಲ್ಲ ನೆರವಾಗುವಂಥ ಸಾರ್ಥಕ ಕಾರ್ಯವನ್ನು ಸುಧಾ ಮೂರ್ತಿ ಸಾರಥ್ಯದ ಇನ್ಫೋಸಿಸ್ ಫೌಂಡೇಷನ್ ಕೈಗೊಂಡಿದೆ. ಅದು ಕನ್ನಡ ಚಿತ್ರರಂಗದಲ್ಲಿ ಯಶಸ್ವೀ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ರಮೇಶ್ ರೆಡ್ಡಿಯವರ ಇರುವಿಕೆಯಲ್ಲಿ ನಡೆಯುತ್ತಿದೆ.

    ಯಾವುದೇ ಸಂಕಷ್ಟದ ಕಾಲದಲ್ಲಿ ನೊಂದವರ ನೆರವಿಗೆ ನಿಲ್ಲುವಂಥಾ ತಾಯ್ತನವನ್ನು ಸುಧಾಮೂರ್ತಿ ಸದಾ ಕಾಲವೂ ಕಾಯ್ದುಕೊಳ್ಳುತ್ತಾರೆ. ಅವರ ನೆರಳಿನಲ್ಲಿಯೇ ಬೆಳೆದು ಬಂದಿರುವ ರಮೇಶ್ ರೆಡ್ಡಿಯವರು ಕೂಡಾ ಅಂಥಾದ್ದೇ ಮನಸ್ಥಿತಿಯನ್ನು ರೂಢಿಸಿಕೊಂಡಿದ್ದಾರೆ. ಅಷ್ಟಕ್ಕೂ ಅವರೂ ಕೂಡಾ ಕಾರ್ಮಿಕರ ಬದುಕಿನ ಅನಿವಾರ್ಯತೆಗಳನ್ನು, ಸಂಕಟಗಳನ್ನು ತಾವೇ ಕಂಡು ಬೆಳೆದು ಬಂದವರು. ಆದ್ದರಿಂದಲೇ ಬಹು ಬೇಗನೆ ಚಿತ್ರರಂಗದ ಕಾರ್ಮಿಕರ ಸಂಕಷ್ಟಗಳಿಗೆ ಕಣ್ಣಾಗಿದ್ದಾರೆ. ಇದರ ಭಾಗವಾಗಿಯೇ ಸುಧಾಮೂರ್ತಿಯವರ ನೆರವು ಕನ್ನಡ ಚಿತ್ರರಂಗದ ಕಾರ್ಮಿಕ ಸಂಘಟನೆಗಳ ಸಮ್ಮುಖದಲ್ಲಿ ಹಲವಾರು ಕಾರ್ಮಿಕರಿಗೆ ಜೀವನಾವಶ್ಯಕ ಸಾಮಾಗ್ರಿಗಳನ್ನು ತಲುಪಿಸಲಾಗಿದೆ.

    ನಿರ್ಮಾಪಕ ರಮೇಶ್ ರೆಡ್ಡಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಲ್ಯಾಣ ನಿಧಿ ಅಧ್ಯಕ್ಷರಾದ ಸಾ.ರಾ ಗೋವಿಂದು, ಕಾರ್ಮಿಕ ಸಂಘಟನೆಯ ಉಪಾಧ್ಯಕ್ಷರಾದ ರವಿಶಂಕರ್ ಮುಂತಾದ ಹಲವರ ಉಪಸ್ಥಿತಿಯಲ್ಲಿ ಇನ್ಫೋಸಿಸ್ ಫೌಂಡೇಷನ್ನಿನ ನೆರವನ್ನು ಕಾರ್ಮಿಕರಿಗೆ ತಲುಪಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಹೀಗೆ ಚಾಲನೆ ಪಡೆದುಕೊಂಡಿರುವ ಈ ನೆರವಿನ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳ ಮೂಲಕ ಮುಂದುವರೆಯಲಿದೆ. ಇದೇ ಸಂದರ್ಭದಲ್ಲಿ ಕಾರ್ಮಿಕರಿಗೆ ನೆರವಾಗಿರುವ ಸುಧಾಮೂರ್ತಿಯವರ ಕಾರ್ಯವನ್ನು ಮೆಚ್ಚಿಕೊಂಡು ಮಾತಾಡಿರುವ ರಮೇಶ್ ರೆಡ್ಡಿಯವರು `ಸುಧಾಮೂರ್ತಿಯವರ ಕಡೆಯಿಂದ ದೇಶ ಮತ್ತು ರಾಜ್ಯದಲ್ಲಿ ಅನೇಕ ಒಳ್ಳೆ ಕೆಲಸಗಳಾಗುತ್ತಿವೆ. ಈ ಕಷ್ಟ ಕಾಲದಲ್ಲಿ ಅವರು ಚಲನಚಿತ್ರ ಕಾರ್ಮಿಕರ ಬಗ್ಗೆ ಕಾಳಜಿ ತೋರಿಸಿರುವುದು ಸ್ವಾಗತಾರ್ಹ’ ಎಂದಿದ್ದಾರೆ.

    ಸುಧಾ ಮೂರ್ತಿಯವರ ಈ ಮಾನವೀಯ ನೆರವನ್ನು ಸಾ.ರಾ.ಗೋವಿಂದು ಕೂಡಾ ಮನದುಂಬಿ ಮೆಚ್ಚಿಕೊಂಡಿದ್ದಾರೆ. `ಈ ಕೊರೋನಾ ಕರ್ಫ್ಯೂನಿಂದಾಗಿ ಸಾವಿರಾರು ಚಲನಚಿತ್ರ ಕಾರ್ಮಿಕ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ದಿನನಿತ್ಯದ ಜೀವನಕ್ಕೂ ಪರದಾಡುವ ಸ್ಥಿತಿ ತಲುಪಿಕೊಂಡಿರುವ ಅಂಥವರಿಗೆಲ್ಲ ಸುಧಾಮೂರ್ತಿಯವರ ನೆರವು ನೀಡುತ್ತಿರೋದು ಸಂತಸದ ವಿಷಯ’ ಎಂದಿದ್ದಾರೆ.

    ಒಟ್ಟಾರೆಯಾಗಿ ಇದೊಂದು ಸಾರ್ಥಕ ಕಾರ್ಯಕ್ರಮ. ಅದು ಇದೀಗ ಗಾಳಿಪಟ-2 ಚಿತ್ರದ ನಿರ್ಮಾಪಕರೂ ಆಗಿರುವ ರಮೇಶ್ ರೆಡ್ಡಿಯವರ ಸಮ್ಮುಖದಲ್ಲಿಯೇ ನಡೆದಿರೋದು ನಿಜಕ್ಕೂ ಖುಷಿಯ ಸಂಗತಿ. ಯಾಕೆಂದರೆ, ರಮೇಶ್ ರೆಡ್ಡಿಯವರೂ ಕೂಡಾ ನಾನಾ ಪಡಿಪಾಟಲುಗಳನ್ನು ಅನುಭವಿಸುತ್ತಾ, ಗಾರೆ ಕಾರ್ಮಿಕರಾಗಿಯೂ ದುಡಿದು ಅನುಭವ ಹೊಂದಿರುವವರು. ಆ ಕಷ್ಟದ ದಿನಗಳ ನೆನಪಿನ ಪಸೆಯನ್ನು ಇನ್ನೂ ಮನಸಲ್ಲಿಟ್ಟುಕೊಂಡಿರುವ ಅವರೀಗ ಇಂಥಾದ್ದೊಂದು ಮಾನವೀಯ ಕಾರ್ಯಕ್ರಮದ ಭಾಗವಾಗಿರೋದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

  • ಇನ್ಫೋಸಿಸ್ ಫೌಂಡೇಶನ್‍ನಿಂದ 220ಕ್ಕೂ ಅಧಿಕ ಕಾರ್ಮಿಕರಿಗೆ ಆಹಾರದ ಕಿಟ್

    ಇನ್ಫೋಸಿಸ್ ಫೌಂಡೇಶನ್‍ನಿಂದ 220ಕ್ಕೂ ಅಧಿಕ ಕಾರ್ಮಿಕರಿಗೆ ಆಹಾರದ ಕಿಟ್

    ಹುಬ್ಬಳ್ಳಿ: ಸುಧಾಮೂರ್ತಿ ಅವರ ಇನ್ಫೋಸಿಸ್ ಫೌಂಡೇಶನ್ ನೀಡಿರುವ ಆಹಾರ ಧಾನ್ಯಗಳ ಕಿಟ್‍ಗಳನ್ನು ಭಾನುವಾರ 220ಕ್ಕೂ ಹೆಚ್ಚು ಕಾರ್ಮಿಕರಿಗೆ ವಿತರಿಸಲಾಯಿತು.

    ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿನ ಕರ್ನಾಟಕ ರಾಜ್ಯ ಆಹಾರ ನಿಗಮ (ಕೆಎಸ್‍ಸಿಎಫ್‍ಸಿ) 8 ಗೋದಾಮುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 220ಕ್ಕೂ ಹೆಚ್ಚು ಕಾರ್ಮಿಕರು, ಲಾರಿ ಚಾಲಕರು, ಕ್ಲೀನರ್‌ಗಳಿಗೆ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ಮರ್ಜಿ, ಇಸ್ಕಾನ್‍ನ ಸಾಯಿನಾಥ್ ವಿತರಿಸಿದರು.

    ಇನ್ಫೋಸಿಸ್ ಫೌಂಡೇಶನ್ ನೀಡಿರುವ ಆಹಾರ ಧಾನ್ಯಗಳ ಪ್ರತಿ ಕಿಟ್‍ನಲ್ಲಿ 5 ಕೆ.ಜಿ. ಅಕ್ಕಿ, ಅಡುಗೆ ಎಣ್ಣೆ, ತೊಗರಿಬೇಳೆ ಸೇರಿದಂತೆ ಸುಮಾರು 17 ಆಹಾರ ಪದಾರ್ಥಗಳು ಇವೆ. ಒಂದು ಕಿಟ್‍ನ ಬೆಲೆ ಸುಮಾರು 750 ರೂ. ಮೌಲ್ಯದ್ದಾಗಿದೆ.

    ವೃತ್ತಿ ನಾಟಕ ಕಂಪನಿಯ ಕಲಾವಿದರಿಗೂ ಕಲಘಟಗಿಯ ಜಾತ್ರೆಯಲ್ಲಿ ಬಿಡಾರ ಹೂಡಿ ಈಗ ಲಾಕ್‍ಡೌನ್‍ನಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಅವರಿಗೂ ಈ ಆಹಾರ ಧಾನ್ಯಗಳ ಕಿಟ್ ವಿತರಿಸಲು ವ್ಯವಸ್ಥೆ ಮಾಡಲಾಗಿದೆ.

  • 28 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಾಮಗ್ರಿ ತಲುಪಿವೆ: ಸುಧಾ ಮೂರ್ತಿಗೆ ಹರ್ಷ ಧನ್ಯವಾದ

    28 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಾಮಗ್ರಿ ತಲುಪಿವೆ: ಸುಧಾ ಮೂರ್ತಿಗೆ ಹರ್ಷ ಧನ್ಯವಾದ

    ಮಂಗಳೂರು: ಇನ್ಫೋಸಿಸ್ ಫೌಂಡೇಶನ್‍ನ ಸುಧಾ ಮೂರ್ತಿ ಅವರು ಕಳುಹಿಸಿಕೊಟ್ಟ ವೈದ್ಯಕೀಯ ಸಾಮಗ್ರಿಗಳು ಮಂಗಳೂರಿಗೆ ತಲುಪಿವೆ. ನಿಮಗೆ ಧನ್ಯವಾದ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷ ಹೇಳಿದ್ದಾರೆ.

    ಟ್ವೀಟ್ ಮಾಡಿರುವ ಹರ್ಷ ಅವರು, ದಕ್ಷಿಣ ಕನ್ನಡ ಜಿಲ್ಲಾಡಳಿತದ ಪರವಾಗಿ ಮಂಗಳೂರು ಪೊಲೀಸರ ಕರೆಗೆ ಸುಧಾ ಮೂರ್ತಿ ಅವರು ಸ್ಪಂದಿಸಿದ್ದಾರೆ. ನಾವು ಮನವಿ ಸಲ್ಲಿಸಿದ 36 ಗಂಟೆಗಳಲ್ಲಿ 28 ಲಕ್ಷ ರೂ.ಗಳ ಮೌಲ್ಯದ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅವರು ಕಳುಹಿಸಿದ ವೈದ್ಯಕೀಯ ಸಾಮಗ್ರಿಗಳು ಮಂಗಳೂರಿಗೆ ತಲುಪಿವೆ. ಮೇಡಂ ಸುಧಾ ಮೂರ್ತಿ, ಇನ್ಫೋಸಿಸ್ ಫೌಂಡೇಶನ್‍ನ ರಾಮದಾಸ್ ಕಾಮತ್ ಹಾಗೂ ಅವರ ತಂಡಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

    https://twitter.com/compolmlr/status/1243746901616295937

    ಸುಧಾ ಮೂರ್ತಿ ಅವರು ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಲೇ ಬಂದಿದ್ದಾರೆ. ಅವರು ಸದ್ಯ ಮಂಗಳೂರಿಗೆ 28 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಾಮಗ್ರಿ ಕಳುಹಿಸಿದ್ದಕ್ಕೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಧನ್ಯವಾದ ತಿಳಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ತಿಂಗಳ ಹೆಣ್ಣು ಮಗುವು ಸೇರಿದಂತೆ ಒಟ್ಟು 7 ಜನರಿಗೆ ಕೊರೊನಾ ಸೋಂಕು ತಗುಲಿದೆ. ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗುತ್ತಲೇ ಇದೆ. ಕೇರಳದಲ್ಲಿ ಶುಕ್ರವಾರ ಒಂದೇ ದಿನದಲ್ಲಿ 39 ಹೊರ ಪ್ರಕರಣಗಳು ಪತ್ತೆಯಾಗಿದ್ದು, ಕೊರೊನಾ ಸೋಂಕಿತರ ಸಂಖ್ಯೆ 176ಕ್ಕೆ ಏರಿಕೆಯಾಗಿದೆ.

    ಕೇರಳದಲ್ಲಿ 39 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಸಂಖ್ಯೆ 164ಕ್ಕೆ ಏರಿಕೆಯಾಗಿದೆ. 39ರ ಪೈಕಿ 34 ಪ್ರಕರಣಗಳು ಕಾಸರಗೋಡಿನಲ್ಲೇ ದಾಖಲಾಗಿದೆ. ಕೊರೋನಾ ವೈರಸ್ ಸೋಂಕಿತರ ಕಾಸರಗೋಡಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಕಂಪ್ಲೀಟ್ ಲಾಕ್‍ಡೌನ್‍ಗೆ ಪೊಲೀಸ್ ಆಯುಕ್ತ ಐಪಿಎಸ್ ಹರ್ಷ ಆದೇಶಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರೂ, ಶಾಸಕರೂ, ಸಂಸದರೊಂದಿಗೆ ಶುಕ್ರವಾರ ಸಭೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.

    ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಲ್ಫ್ ದೇಶ ಮತ್ತು ದುಬೈನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇಳಿದ ಪರಿಣಾಮ ಕಾಸರಗೋಡಿನಲ್ಲೂ ಸೋಂಕಿತರ ಸಂಖ್ಯೆ ಅತಿವೇಗದಲ್ಲಿ ಏರಿಕೆಯಾಗುತ್ತಿದೆ.

  • ಪ್ರೀತಿಯ ಶ್ವಾನದ ಬಗ್ಗೆ ಬರೆದ ಪುಸ್ತಕವನ್ನು ಗೋಪಿ ಕೈಯಲ್ಲೇ ಬಿಡುಗಡೆ ಮಾಡಿಸಿದ ಸುಧಾಮೂರ್ತಿ

    ಪ್ರೀತಿಯ ಶ್ವಾನದ ಬಗ್ಗೆ ಬರೆದ ಪುಸ್ತಕವನ್ನು ಗೋಪಿ ಕೈಯಲ್ಲೇ ಬಿಡುಗಡೆ ಮಾಡಿಸಿದ ಸುಧಾಮೂರ್ತಿ

    ಬೆಂಗಳೂರು: ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರು ಏನಾದರೊಂದು ಸಾಮಾಜಿಕ ಕಾರ್ಯಗಳಿಗೆ ಸುದ್ದಿಯಾಗುತ್ತಿರುತ್ತಾರೆ. ಈ ಬಾರಿ ತಮ್ಮ ಪ್ರೀತಿಯ ಶ್ವಾನದ ಕೈಯಲ್ಲಿ ತಾವು ಬರೆದ ಪುಸ್ತಕವನ್ನು ಬಿಡುಗಡೆ ಮಾಡಿಸಿ ಪ್ರಾಣಿ ಪ್ರೇಮ ತೋರಿದ್ದಾರೆ.

    ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ತಮ್ಮ ಮೆಚ್ಚಿನ ಸಾಕು ನಾಯಿ ಗೋಪಿ ಬಗ್ಗೆ ಬರೆದಿರುವ ‘ದ ಗೋಪಿ ಡೈರೀಸ್ – ಕಮಿಂಗ್ ಹೋಮ್’ ಪುಸ್ತಕವನ್ನು ಇಂದು ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳಿಸಿದರು. ತಮ್ಮ ಮತ್ತು ತಮ್ಮ ಪ್ರೀತಿಯ ಶ್ವಾನ ಗೋಪಿ ಜೊತೆ ಇರುವ ಒಡನಾಟ, ಮನೆಯಲ್ಲಿ ಗೋಪಿ ಕಿತಾಪತಿಗಳನ್ನು ಈ ಪುಸ್ತಕದಲ್ಲಿ ಸುಧಾ ಮೂರ್ತಿಯವರು ನೆನಪಿಸಿಕೊಂಡು ಪದಗಳನ್ನಾಗಿಸಿದ್ದಾರೆ.

    ವಿಶೇಷ ಏನೆಂದರೆ ತಮ್ಮ ನೆಚ್ಚಿನ ಸಾಕು ನಾಯಿ ಗೋಪಿಯಿಂದಲೇ ಈ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಪ್ರೀತಿಯ ಶ್ವಾನಗಳ ಬಗ್ಗೆ ಹಲವರು ಹಲವು ರೀತಿಯ ಒಡನಾಟ, ಪ್ರೀತಿಯನ್ನು ಬೆಳೆಸಿಕೊಂಡಿರುತ್ತಾರೆ. ಸುಧಾಮೂರ್ತಿಯವರು ಕೂಡ ಅದೇ ಶ್ವಾನದ ಬಗ್ಗೆ ಬರೆದ ಪುಸ್ತಕವನ್ನು ಅದರ ಕೈಯಿಂದಲೇ ಬಿಡುಗಡೆ ಮಾಡಿಸುವ ಮೂಲಕ ನಾಯಿ ಮೇಲಿನ ಪ್ರೀತಿಯನ್ನು ತೋರಿಸಿದ್ದಾರೆ.

  • 10 ಕೋಟಿ ರೂ. ವೆಚ್ಚದಲ್ಲಿ ಸಂತ್ರಸ್ತರಿಗೆ ಮನೆ ಕಟ್ಟಿಕೊಡಲು ನಿರ್ಧಾರ – ಸುಧಾಮೂರ್ತಿ

    10 ಕೋಟಿ ರೂ. ವೆಚ್ಚದಲ್ಲಿ ಸಂತ್ರಸ್ತರಿಗೆ ಮನೆ ಕಟ್ಟಿಕೊಡಲು ನಿರ್ಧಾರ – ಸುಧಾಮೂರ್ತಿ

    ಬೆಂಗಳೂರು: ಸಾಕಷ್ಟು ಅಗತ್ಯ ವಸ್ತುಗಳನ್ನು ನೆರೆ ಸಂತ್ರಸ್ತರಿಗೆ ಕಳುಹಿಸಿ, ಸಿಎಂ ಪರಿಹಾರ ನಿಧಿಗೆ 50 ಲಕ್ಷ ರೂ. ನೀಡಿರುವುದು ಮಾತ್ರವಲ್ಲದೆ, ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಮನೆಗಳನ್ನು ಕಟ್ಟಿಸಿಕೊಡಲು ಸಹ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಅವರು ನಿರ್ಧರಿಸಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾ ಮೂರ್ತಿ ಅವರು, ಈಗಾಗಲೇ ಸಂತ್ರಸ್ತರಿಗೆ ಸಾಕಷ್ಟು ಅಗತ್ಯ ವಸ್ತುಗಳನ್ನು ಕಳುಹಿಸಿ ಕೊಡಲಾಗಿದೆ. ಅಲ್ಲದೆ, ಮಳೆಯ ಅಬ್ಬರ ಹಾಗೂ ಪ್ರವಾಹ ಕಡಿಮೆಯಾದ ಬಳಿಕ ಮನೆ ಕಟ್ಟಿಕೊಡಲೂ ಸಹ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

    ತುಂಬಾ ಪ್ರವಾಹ ಪೀಡಿತ ಹಾಗೂ ಕಾನೂನಿನ ದೃಷ್ಟಿಯಿಂದ ಸರಿಯಾಗಿರುವ ಜಾಗವನ್ನು ಹುಡುಕಿ ಮನೆ ಕಟ್ಟಿಕೊಡಲು ನಿರ್ಧರಿಸಲಾಗಿದೆ. ಈ ಅಗತ್ಯ ವಸ್ತುಗಳನ್ನು ಸಾಗಿಸುವ ತುರ್ತು ಸೇವೆಯನ್ನು ಹೊರತು ಪಡಿಸಿ ಸುಮಾರು 10 ಕೋಟಿ ರೂ.ಗಳ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲಾಗುವುದು. ಪ್ರವಾಹದಿಂದ ಯಾವ ಜಾಗದಲ್ಲಿ ಹೆಚ್ಚು ಹಾನಿಯಾಗಿದೆ ಹಾಗೂ ಯಾವುದು ಸೂಕ್ತ ಜಾಗ ಎಂಬುದನ್ನು ನೋಡಿಕೊಂಡು ಅಲ್ಲಿ ಸಂತ್ರಸ್ತರಿಗೆ ಮನೆ ಕಟ್ಟಿಕೊಡುತ್ತೇವೆ ಎಂದರು.

    ಮನೆ ನಿರ್ಮಿಸಿಕೊಡಲು ಸುಮಾರು 10 ಕೋಟಿ ರೂ. ಮೀಸಲಿರಿಸಿದ್ದೇವೆ. ಕಳೆದ ಬಾರಿ ಕೊಡಗಿನಲ್ಲಿ ಪ್ರವಾಹ ಸಂಭವಿಸಿದಾಗ 2,500 ಮನೆಗಳನ್ನು ನಿರ್ಮಿಸಿದ್ದೆವು. ಆಂಧ್ರದಲ್ಲಿ ಪ್ರವಾಹ ಸಂಭವಿಸಿದಾಗ 250 ಮನೆ ನಿರ್ಮಾಣ ಮಾಡಿದ್ದೇವು. ಹೀಗೆ ಹಾನಿಯ ಪ್ರಮಾಣವನ್ನು ನೋಡಿಕೊಂಡು ಅಗತ್ಯವಿದ್ದಷ್ಟು ಮನೆಗಳನ್ನು ನಿರ್ಮಿಸಲಾಗುವುದು. ಇದಕ್ಕಾಗಿ ನಮ್ಮ ಗುತ್ತಿಗೆದಾರ ರಮೇಶ್ ರೆಡ್ಡಿ ಅವರ ತಂಡ ಸಿದ್ಧವಾಗಿದೆ. ಅವರ ನೇತೃತ್ವದಲ್ಲೇ ಮನೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

    ಈಗಾಗಲೇ ಸಿದ್ಧ ಆಹಾರ ಪದಾರ್ಥವನ್ನು ಹೊರತುಪಡಿಸಿ ಎಲ್ಲವನ್ನೂ ಕಳುಹಿಸಿ ಕೊಡುತ್ತಿದ್ದೇವೆ. ನಮ್ಮ ತಂಡ ಯಾವಾಗಲೂ ಇಂತಹ ಕಾರ್ಯಗಳಿಗೆ ಸದಾ ಸಿದ್ಧವಿರುತ್ತದೆ. ಪ್ರವಾಹ ಕೈ ಮೀರಿ ಹೋಗುತ್ತಿದೆ ಎನ್ನುವಷ್ಟರಲ್ಲಿ ನಾವು 50 ಲಕ್ಷ ರೂ. ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಂದಾಯ ಮಾಡಿದ್ದೇವೆ. ಉತ್ತಮ ಗುಣಮಟ್ಟದ ವಸ್ತುಗಳನ್ನೇ ನೀಡಲಾಗುತ್ತಿದ್ದು, ನಾವು ಬಳಸುವ ರೀತಿಯ ವಸ್ತುಗಳನ್ನೇ ಕಳುಹಿಸುತ್ತೇವೆ ಎಂದು ತಿಳಿಸಿದ್ದಾರೆ.

    ಒಂದು ಕುಟುಂಬಕ್ಕೆ ಒಂದು ಚೀಲದಂತೆ ಅದರಲ್ಲಿ ಬಟ್ಟೆ ಸೇರಿದಂತೆ ಕುಟುಂಬಕ್ಕೆ ಬೇಕಾದ ಎಲ್ಲ ಬಗೆಯ ವಸ್ತಗಳನ್ನು ಪ್ಯಾಕ್ ಮಾಡಿ ವಿತರಿಸುತ್ತೇವೆ. ಈ ಕಿಟ್‍ನಲ್ಲಿ ಉಪ್ಪು, ಸಕ್ಕರೆ, ಮೇಣದ ಬತ್ತಿ, ಬೆಂಕಿ ಪೊಟ್ಟಣ, ಸೋಪ್, ಪೇಸ್ಟ್, ಸ್ಯಾನಿಟರಿ ಪ್ಯಾಡ್, ಮಕ್ಕಳ ಫ್ರಾಕ್, ದೊಡ್ಡವರ ಬಟ್ಟೆಗಳು, ಔಷಧಿ, ಸೊಳ್ಳೆ ಬತ್ತಿ ಸೇರಿದಂತೆ ಒಂದು ಕುಟುಂಬಕ್ಕೆ ಅಗತ್ಯವಿರುವ ಎಲ್ಲ ರೀತಿಯ ವಸ್ತುಗಳನ್ನು ನೀಡುತ್ತೇವೆ. ವಿತರಿಸಲೂ ಸಹ ನಮ್ಮದೇ ಸ್ವಯಂ ಸೇವಕರಿದ್ದು, ಅವರ ಮೂಲಕವೇ ಎಲ್ಲ ವಸ್ತುಗಳು ಹಂಚಲಾಗುತ್ತದೆ. ಹೀಗಾಗಿ ಯಾವುದೇ ರೀತಿಯ ದುರ್ಬಳಕೆಯಾಗುವ ಸಂದರ್ಭ ಬರುವುದಿಲ್ಲ ಎಂದು ವಿವರಿಸಿದರು.

    ವಸ್ತುಗಳನ್ನು ಸಾಗಿಸಲು ಟ್ರಕ್ ಸಮಸ್ಯೆ ಉಂಟಾಗಿತ್ತು. ಆಗ ಜಪಾನಂದ ಸ್ವಾಮೀಜಿಯವರೊಂದಿಗೆ ಮಾತನಾಡಿಕೊಂಡು ಟ್ರಕ್ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಆ ಟ್ರಕ್‍ಗಳ ಮೂಲಕ ಸಂತ್ರಸ್ತರಿಗೆ ವಸ್ತುಗಳನ್ನು ತಲುಪಿಸಲಾಗುತ್ತಿದೆ ಎಂದು ತಿಳಿಸಿದರು.

  • ಇನ್ಫೋಸಿಸ್ ವತಿಯಿಂದ ಹುತಾತ್ಮ ಯೋಧರ ಕುಟುಂಬಕ್ಕೆ ತಲಾ 10 ಲಕ್ಷ ರೂ. ನೆರವು: ಸುಧಾಮೂರ್ತಿ

    ಇನ್ಫೋಸಿಸ್ ವತಿಯಿಂದ ಹುತಾತ್ಮ ಯೋಧರ ಕುಟುಂಬಕ್ಕೆ ತಲಾ 10 ಲಕ್ಷ ರೂ. ನೆರವು: ಸುಧಾಮೂರ್ತಿ

    ಬೆಂಗಳೂರು: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ಯೋಧರ ಕುಟುಂಬಕ್ಕೆ ದೇಶಾದ್ಯಂತ ಸಾರ್ವಜನಿಕರು ಕಂಬನಿ ಮಿಡಿದಿದ್ದು, ಇನ್ಫೋಸಿಸ್ ಫೌಂಡೇಶನ್ ವತಿಯಿಂದಲೂ ಎಲ್ಲಾ ಯೋಧರ ಕುಟುಂಬಗಳಿಗೆ 10 ಲಕ್ಷ ರೂ. ನೆರವು ನೀಡುವುದಾಗಿ ಸಂಸ್ಥೆಯ ಅಧ್ಯಕ್ಷೆ ಸುಧಾಮೂರ್ತಿಯವರು ತಿಳಿಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಯೋತ್ಪಾದಕರ ದಾಳಿಗೆ ತುತ್ತಾದ ವೀರ ಯೋಧರ ಕುಟುಂಬಕ್ಕೆ ನೆರವು ನೀಡಲು ನಿರ್ಧರಿಸಲಾಗಿದೆ. ಯೋಧರ ಸಾವಿನ ಸುದ್ದಿ ಕೇಳಿದ ತಕ್ಷಣ ನನ್ನ ಸಂಬಂಧಿಕರೇ ಸಾವಿಗೀಡಾದಂತೆ ದುಃಖ ಆಯ್ತು. ಬಾಳಿ ಬದುಕಬೇಕಾದ ಯುವಕರು ಸಾವನ್ನಪ್ಪಿದ್ದಾರೆ. ಆದ್ದರಿಂದ ಕುಟುಂಬಕ್ಕೆ ನೆರವುರ್ಮಾನ ಮಾಡಿದ್ದೇವೆ. ಆದರೆ ಇದು ಅವರ ಜೀವಕ್ಕೆ ಕೊಟ್ಟ ಬೆಲೆ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು, ಯೋಧ ಸಾವನ್ನಪ್ಪಿದ ವೇಳೆ ನಮ್ಮ ಕುಟುಂಬವನ್ನು ಯಾರು ಕೈ ಹಿಡಿಯಲಿಲ್ಲ ಎಂಬ ಭಾವನೆ ಬರದಂತೆ ಮಾಡಬೇಕು. ಅದ್ದರಿಂದಲೇ ಈ ನಿರ್ಧಾರ ಮಾಡಿದ್ದೇವೆ ಎಂದರು.

    ನಾವು ಈಗಾಗಲೇ ಬಿಎಸ್‍ಎಫ್ ಸೈನಿಕರೊಂದಿಗೆ ಕೆಲಸ ಮಾಡುತ್ತಾ ಬಂದಿದ್ದೇವೆ. ಇಂತಹ ದಾಳಿಗಳಲ್ಲಿ ಹುತಾತ್ಮರಾದ ಯೋಧರ ಕುಟುಂಬ ಒಂದೆಡೆ ಆದರೆ ಮತ್ತೊಂದೆಡೆ ಘಟನೆಯಲ್ಲಿ ಗಾಯಗೊಂಡು ಬಳಿಕ ಜೀವನ ನಡೆಸಲು ಕಷ್ಟಪಡುವ ಯೋಧರ ಬಗ್ಗೆಯೂ ಹೆಚ್ಚಿನ ಗಮನ ಹರಿಸಿದ್ದೇವೆ. ನಮ್ಮ ಈ ಪ್ರಯತ್ನ ಇಲ್ಲಿಯೇ ನಿಲ್ಲುವುದಿಲ್ಲ ಮುಂದುವರಿಯುತ್ತದೆ ಎಂದರು.

    ಮಂಡ್ಯದ ಗುರು ಅವರ ಸುದ್ದಿಯೂ ಕೇಳಿ ನನಗೆ ಭಾರೀ ಅಘಾತ ಆಗಿತ್ತು. ಈ ವೇಳೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದೆ. ಆದರೆ ಈಗ ಯೋಧನ ಕುಟುಂಬಸ್ಥರ ಮನಸ್ಥಿತಿ ಹೊಂದಾಣಿಕೆ ಆಗಲು ಸಮಯ ಬೇಕಿದೆ. ಹೆಚ್ಚಿನ ಜನರು ಕೂಡ ಇದೇ ಸಮಯದಲ್ಲಿ ಭೇಟಿ ನೀಡುತ್ತಾರೆ. ಇದರಿಂದ ಅವರಿಗೂ ಹೆಚ್ಚಿನ ಸಮಸ್ಯೆ ಆಗುತ್ತದೆ. ಆದ್ದರಿಂದ ಮಾರ್ಚ್ 15 ರ ಬಳಿಕ ಸ್ವತಃ ನಾವೇ ಭೇಟಿ ನೀಡಿ ಸಾಂತ್ವಾನ ಹೇಳುತ್ತೇನೆ ಎಂದು ಸ್ಪಷ್ಟಪಡಿಸಿದರು.

    ದೇಶದ ಯೋಧರ ಸಾವಿನ ಬಗ್ಗೆ ಜನರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಎಚ್ಚರಿಕೆ ಹೆಜ್ಜೆ ಮುಂದಿಡುವ ಅಗತ್ಯವಿದೆ. ನಮಗೇ ಕಾಣುವುದು ಮಾತ್ರ ಸತ್ಯವೂ ಅಲ್ಲ. ದೇಶದ ರಕ್ಷಣಾ ಅಂಶಗಳನ್ನು ಸಾರ್ವಜನಿಕವಾಗಿ ಹೇಳಲು ಕೂಡ ಸಾಧ್ಯವಿಲ್ಲ. ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಕೂಡ ಆಗಲ್ಲ. ಉನ್ನತ ಅಧಿಕಾರಿಗಳು ಚರ್ಚೆ ನಡೆಸಿದ ಇದಕ್ಕೆ ಯುದ್ಧವೇ (ಸರ್ಜಿಕಲ್ ಸ್ಟ್ರೈಕ್) ಸರಿ ಎನಿಸಿದರೆ ಅದನ್ನೇ ಮಾಡಲಿ. ಅಥವಾ ಮಾತುಕತೆ ಮೂಲಕ ಸಾಧ್ಯವಾದರೆ ಅದನ್ನು ಮಾಡಲಿ. ಇಂತಹ ಘಟನೆ ಮತ್ತೆ ನಡೆದಂತೆ ಕ್ರಮಕೈಗೊಂಡು ವಿಳಂಬ ಆಗದಂತೆ ನೋಡಿಕೊಳ್ಳಬೇಕು ಎಂದು ಸ್ಟಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ನಂದಿಗಿರಿಧಾಮಕ್ಕೆ ಕೊಡುಗೆ ನೀಡಿದ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ

    ನಂದಿಗಿರಿಧಾಮಕ್ಕೆ ಕೊಡುಗೆ ನೀಡಿದ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ

    ಚಿಕ್ಕಬಳ್ಳಾಪುರ: ಸಮಾಜಸೇವೆಯಲ್ಲಿ ಸದಾ ಮುಂದಿರುವ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿಯವರು ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಪ್ರವಾಸಿಗರ ಕಾಲು ದಾರಿ ಹಾಗೂ ತಡೆಗೋಡೆಗಳ ಕಾಮಾಗಾರಿಗಳನ್ನು ಲೋಕಾರ್ಪಣೆ ಮಾಡಿದ್ದಾರೆ.

    ಸುಧಾಮೂರ್ತಿಯವರು ತಮ್ಮ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಅಭಿವೃದ್ಧಿ ಕಾರ್ಯಕೈಗೊಂಡಿದ್ದರು. ಸುಮಾರು 70 ರಿಂದ 60 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಕಾಲುದಾರಿಗಳು ಹಾಗೂ ತಡೆಗೋಡೆಯ ನವೀಕರಣ ಸೇರಿದಂತೆ ಇತರೆ ಕಾಮಗಾರಿಗಳನ್ನು ಇಂದು ಲೋಕಾರ್ಪಣೆ ಮಾಡಿದ್ದಾರೆ. ಸುಧಾಮೂರ್ತಿಯವರಿಗೆ ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ಹಾಗೂ ಅರಣ್ಯ ಸಚಿವ ಶಂಕರ್ ಸಾಥ್ ನೀಡಿದ್ದರು.

    ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಹಿಂದೆ ನಾನು ನಂದಿಗಿರಿಧಾಮಕ್ಕೆ ಭೇಟಿ ನೀಡಿದ್ದೇ. ಈ ವೇಳೆ ನಂದಿಗಿರಿಧಾಮದ ವಾಕಿಂಗ್ ಫುಟ್‍ಪಾತ್ ನ ಸ್ಥಿತಿ ನೋಡಿ ಬೇಸರವಾಗಿತ್ತು. ಅಲ್ಲದೇ ನಮ್ಮ ಫೌಂಡೇಷನ್ ವತಿಯಿಂದಲೇ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ನಿರ್ಧಾರ ಮಾಡಿದ್ದೆ. ಈಗ 70 ರಿಂದ 80 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಲು ದಾರಿ ಹಾಗೂ ತಡೆಗೋಡೆಗಳ ನವೀಕರಣ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ಹೇಳಿದರು.

    ಬೆಂಗಳೂರಿಗೆ ಹತ್ತಿರವಿರುವ ಈ ನಂದಿಗಿರಿಧಾಮ ಊಟಿ ಎಂದೇ ಪ್ರಖ್ಯಾತಿ ಪಡೆದಿದೆ. ಹೀಗಾಗಿ ನಾನು ಬಹಳಷ್ಟು ಬಾರಿ ಇಲ್ಲಿಗೆ ಭೇಟಿ ನೀಡಿದ್ದೇನೆ. ವಿಕೇಂಡ್‍ನಲ್ಲಿ ಇಲ್ಲಿ ಕಾಲಿಡೋಕೆ ಜಾಗ ಇರಲ್ಲ. ಹೀಗಾಗಿ ಸರ್ಕಾರ ಸುತ್ತಮುತ್ತಲೂ ಇರುವ ಇತರೆ ಬೆಟ್ಟಗಳನ್ನ ಇದೇ ರೀತಿ ಅಭಿವೃದ್ಧಿಪಡಿಸಿದರೆ ಎಷ್ಟು ಚೆನ್ನಾಗಿರುತ್ತದೆಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv