ಬ್ರಿಟನ್‌ನ (Britain) ಮಾಜಿ ಪ್ರಧಾನಿ ಹಾಗೂ ಇನ್ಫೋಸಿಸ್ (Infosis) ಸಂಸ್ಥಾಪಕ ನಾರಾಯಣ ಮೂರ್ತಿ (Narayana murthy) ಅವರ ಅಳಿಯ ರಿಷಿ ಸುನಕ್ (Rishi Sunak) ಮತ್ತೆ ಉದ್ಯೋಗಕ್ಕೆ ಮರಳಿದ್ದಾರೆ.
ರಿಷಿ ಸುನಕ್ ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಸುನಕ್ ಗೋಲ್ಡ್‌ಮನ್ ಸ್ಯಾಚ್ಸ್‌ನಲ್ಲಿಯೇ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಇದೀಗ ಮತ್ತೆ ಉದ್ಯೋಗಕ್ಕೆ ಮರಳಿ ಗೋಲ್ಡ್‌ಮನ್ ಸ್ಯಾಚ್ಸ್ ಗ್ರೂಪ್‌ನ ಹಿರಿಯ ಸಲಹೆಗಾರರಾಗಿದ್ದಾರೆ.
ಸ್ವಲ ಸಮಯದ ಹಿಂದೆ ನಾರಾಯಣ ಮೂರ್ತಿ ಅವರು, ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿಕೆ ನೀಡಿದ್ದರು. ಸದ್ಯ ಅವರ ಹೇಳಿಕೆಯನ್ನೇ ಗುರಿಯಾಗಿಟ್ಟುಕೊಂಡು ನೆಟ್ಟಿಗರು ಟಾರ್ಗೆಟ್ ಮಾಡಿದ್ದಾರೆ. `ರಿಷಿ ಸುನಕ್ ವಾರಕ್ಕೆ 70 ಗಂಟೆಗಳ ಕೆಲಸದ ಕೋಟಾವನ್ನು ಪೂರ್ಣಗೊಳಿಸಲು ಗೋಲ್ಡ್‌ಮನ್ ಸ್ಯಾಚ್ಸ್ ಸೇರಿದ್ದಾರೆ’ ಅಂತ ಕೆಲವರು ಅಪಹಾಸ್ಯ ಮಾಡಿದ್ದಾರೆ. ಇನ್ನೂ ಕೆಲವರು ಮಾವನ ಇಚ್ಛೆಯನ್ನು ಪೂರೈಸಲು ರಿಷಿ ಕೆಲಸಕ್ಕೆ ಸೇರಿದ್ದಾರೆ ಅಂತ ಕಾಲೆಳೆದಿದ್ದಾರೆ.
ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕೇಂದ್ರದಲ್ಲಿ ವಿದೇಶಾಂಗ ಸಚಿವರು, ಮಹಾರಾಷ್ಟç ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ ಹಿರಿಯ ಮುತ್ಸದ್ಧಿ ಎಸ್.ಎಂ.ಕೃಷ್ಣ (SM Krishna) ಇಂದು ಬೆಳಿಗ್ಗೆ ನಮ್ಮನ್ನಗಲಿದ್ದಾರೆ. ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವಂತಹ ಶಕ್ತಿಯನ್ನು ನೀಡಲಿ ಎಂದು ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಸಂತಾಪ ಸೂಚಿಸಿದರು.
ಎಸ್‌ಎಂ ಕೃಷ್ಣ ಅವರು ಕರ್ನಾಟಕಕ್ಕೆ ಐಟಿ-ಬಿಟಿ ದೃಷ್ಟಿಯಲ್ಲಿ ಒಂದು ದಿಕ್ಕು ದೆಸೆಯನ್ನು ತೋರಿದವರು, ಹೀಗಾಗಿ ನಮ್ಮ ರಾಜ್ಯ ಯಾವತ್ತಿಗೂ ಕೂಡ ಅವರಿಗೆ ಚಿರಋಣಿಯಾಗಿರಬೇಕು. ಭೂದಾಖಲೆಗಳ ಡಿಜಿಟಲೀಕರಣದ ಮೂಲ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಲಿಕ್ಕರ್ ಲಾಬಿ ಮಾಫಿಯಾ ತಡೆಗೆ ಶ್ರಮಪಟ್ಟವರು. ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು ಜಾರಿಗೆ ತಂದವರು. ಎಸ್‌ಎಂಕೆ ಅವರಿಂದಲೇ ಮೈಸೂರು, ಹುಬ್ಬಳ್ಳಿ, ಮಂಗಳೂರಿನಲ್ಲಿ ಇನ್‌ಫೋಸಿಸ್ ಟ್ರೈನಿಂಗ್ ಸೆಂಟರ್ ಪ್ರಾರಂಭವಾಯಿತು. ಜೊತೆಗೆ ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಅಡಿಪಾಯ ಹಾಕಿದರು ಎಂದು ತಿಳಿಸಿದರು.ಇದನ್ನೂ ಓದಿ: ನಾಳೆ ಸರ್ಕಾರಿ ರಜೆ ಘೋಷಣೆ – 3 ದಿನ ಶೋಕಾಚರಣೆ
ದೇಶದ ಅತ್ಯಂತ ಸಂಪದ್ಭರಿತ ಮತ್ತು ಜಿಡಿಪಿ ಬೆಳವಣಿಗೆ ವಿಚಾರದಲ್ಲಿ ಪ್ರತಿ ವರ್ಷ 2 ಅಥವಾ 3ನೇ ಸ್ಥಾನದಲ್ಲಿ ಬರುತ್ತದೆ. ಜೊತೆಗೆ ರಾಜ್ಯದ ಆದಾಯದ ಪೈಕಿ ಶೇ.56-57ರಷ್ಟು ಬೆಂಗಳೂರಿನಿಂದ ಬರುತ್ತದೆ. ಕರ್ನಾಟಕದ ಪಾಲಿಗೆ ಬೆಂಗಳೂರು ಕಾಮಧೇನು ಇದ್ದಂತೆ. ಇದಕ್ಕೆ ಎಸ್‌ಎಂಕೆ ಅವರ ಕೊಡುಗೆ ಸಾಕಷ್ಟಿದೆ. ಒಬ್ಬ ಒಳ್ಳೆಯ ಮುಖ್ಯಮಂತ್ರಿಯಾಗಿ, ಒಳ್ಳೆಯ ಆಡಳಿತವನ್ನು ನೀಡಿದ್ದರು. ಎಸ್.ಎಂ ಕೃಷ್ಣ ಅವರು ನನ್ನ ಒಬ್ಬ ಇಷ್ಟದ ಸಿಎಂ ಆಗಿದ್ದರು ಎಂದು ಸ್ಮರಿಸಿದರು.
ರಾಜ್ಯದ ಧೀಮಂತ ನಾಯಕ,ರಾಜ್ಯದ ಶ್ರೇಷ್ಠ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿ ಗುರುತಿಸಲ್ಪಡುವ ಮಾನ್ಯ ಶ್ರೀ ಎಸ್.ಎಂ ಕೃಷ್ಣ ಅವರ ನಿಧನದ ಸುದ್ದಿ ಕೇಳಿ ಅತ್ಯಂತ ದುಃಖವಾಗಿದೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ .
ಓಂ ಶಾಂತಿ#SMKrishnapic.twitter.com/09NnE67FaU
ಯಾವ ಊರಿಗೆ ಹೋದರೂ ಅವರ ಕೊಡುಗೆ ಇದೆ. ಅಮೂಲಾಗ್ರ ಬದಲಾವಣೆಗಾಗಿ ಹೊರಟವರು. ಬೆಂಗಳೂರಿನಲ್ಲಿ 6,500 ಐಟಿ 92 ಬಿಟಿ ಕಂಪನಿಗಳ ಸ್ಥಾಪನೆಗೆ ಮೂಲ ಕಾರಣೀಕರ್ತರು. ಹೀಗಾಗಿ ಪಕ್ಷಾತೀತವಾಗಿ ಎಲ್ಲರೂ ಗೌರವಿಸುವಂತಹ ವ್ಯಕ್ತಿತ್ವ ಅವರದ್ದು. ಸಭ್ಯತೆಯ ಗೆರೆಯನ್ನು ದಾಟದೇ ಬೆಳೆದು, ಅಳೆದು ತೂಗಿ ಮಾತನಾಡಿದವರು. ರಾಜ್ಯಕ್ಕೆ ಮಾದರಿಯಾಗಿದ್ದ ಸಿಎಂ ಆಗಿ ಅಭಿವೃದ್ಧಿಯೇ ಮೂಲ ಗುರಿಯಾಗಿ ಮುನ್ನಡೆದವರು ಎಂದು ಹೇಳಿದರು.
ಮೈಸೂರು: ಇನ್ಫೋಸಿಸ್ ಮಹಿಳಾ ಉದ್ಯೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆ ಮೈಸೂರಿನ ಹೆಬ್ಬಾಳ್‍ನಲ್ಲಿ ನಡೆದಿದೆ.
ಕಲಬುರಗಿ ಮೂಲದವರಾದ ಹಾಲಿ ಮೈಸೂರಿನ ಹೆಬ್ಬಾಳ್ ಮೂರನೇ ಹಂತದಲ್ಲಿ ವಾಸವಿದ್ದ 21 ವರ್ಷದ ಮೀನಾಕ್ಷಿ ಮೃತ ಯುವತಿ. ಈಕೆ ಇನ್ಫೋಸಿಸ್‍ನಲ್ಲಿ ಟ್ರೈನಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಮೂರ್ನಾಲ್ಕು ದಿನಗಳಿಂದ ಕೆಲಸಕ್ಕೆ ತೆರಳಿರಲಿಲ್ಲ. ಇದರಿಂದ ಆಕೆಯ ಸ್ನೇಹಿತೆಯರು ಆಕೆಗೆ ಫೋನ್ ಮಾಡಿದ್ರೆ ಕರೆಯನ್ನೂ ಸ್ವೀಕರಿಸಿರಲಿಲ್ಲ. ನಂತರ ಅಕ್ಕಪಕ್ಕದ ಮನೆಯವರಿಗೆ ಕೊಳೆತ ವಾಸನೆ ಬರತೊಡಗಿತ್ತು. ಹೀಗಾಗಿ ಅವರು ಹೆಬ್ಬಾಳ್ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ರು.
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಇನ್ಸ್ ಪೆಕ್ಟರ್ ತಿಮ್ಮೇಗೌಡ, ಎಎಸ್‍ಐ ಕೃಷ್ಣೇಗೌಡ ಪರಿಶೀಲನೆ ನಡೆಸಿದ್ದು, ಯುವತಿ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ. ಮೃತದೇಹ ಸಂಪೂರ್ಣ ಕೊಳೆತುಹೋಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.