Tag: influential

  • ಟ್ವಿಟ್ಟರ್ ಪ್ರಭಾವಿಗಳ ಪೈಕಿ ಮೋದಿ ನಂಬರ್ 2

    ಟ್ವಿಟ್ಟರ್ ಪ್ರಭಾವಿಗಳ ಪೈಕಿ ಮೋದಿ ನಂಬರ್ 2

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್‌ನಲ್ಲಿ ಅತ್ಯಂತ ಪ್ರಭಾವಿಗಳ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿದ್ದಾರೆ.

    ಟ್ವಿಟ್ಟರ್‌ನಲ್ಲಿ ಈ ವರ್ಷದ 50 ಅತ್ಯಂತ ಪ್ರಭಾವಿ ವ್ಯಕ್ತಿಗಳ ಸಾಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಸ್ಥಾನದಲ್ಲಿದ್ದಾರೆ ಎಂದು ಬ್ರಾಂಡ್‌ವಾಚ್ ಕಂಪನಿ ತಿಳಿಸಿದೆ. ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು 35ನೇ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ:  ಅಪ್ಪು ಸರ್ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದೇವೆ: ರಾಧಿಕಾ ಪಂಡಿತ್

    ಬ್ರಾಂಡ್‍ವಾಚ್ ಸಂಸ್ಥೆ ತನ್ನ ಗ್ರಾಹಕರ ಅಭಿಪ್ರಾಯವನ್ನು ಆಧರಿಸಿ ಈ ಪಟ್ಟಿ ತಯಾರಿಸಿದೆ. ಇದರಲ್ಲಿ ಅಮೆರಿಕಾದ ಖ್ಯಾತ ಗಾಯಕಿ ಟೈಲರ್ ಸ್ವಫ್ಟ್‍ಂ ನಂಬರ್ 1ನೇ ಸ್ಥಾನ ಪಡೆದುಕೊಂಡಿದ್ದಾರೆ. ಭಾತರ ಕ್ರೆಕೆಟ್ ದಂತಕಥೆ ಸಚಿನ್ ತೆಂಡೂಲಕ್ಕರ್ ಅವರು 35 ನೇ ಸ್ಥಾನಕ್ಕೆ ಭಾಜನರಾಗಿದ್ದಾರೆ.

    ಅಮೆರಿಕಾದ ನಟರಾದ ಡ್ವಾಯ್ನೆ ಜಾನ್ಸನ್, ಲಿಯೋನಾರ್ಡೋ ಡಿ ಕ್ಯಾಪ್ರಿಯೋ, ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಪತ್ನಿ ಮಿಶೆಲ್ ಒಬಾಮಾ ಸೇರಿದಂರೆ ಇನ್ನಿತರರು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.