Tag: inflow

  • 34 ದಿನಗಳ ಬಳಿಕ 100 ಅಡಿಯ ಗಡಿ ದಾಟಿದ ಕೆಆರ್‌ಎಸ್ ನೀರಿನ ಮಟ್ಟ

    34 ದಿನಗಳ ಬಳಿಕ 100 ಅಡಿಯ ಗಡಿ ದಾಟಿದ ಕೆಆರ್‌ಎಸ್ ನೀರಿನ ಮಟ್ಟ

    ಮಂಡ್ಯ: ಕಳೆದ 3 ದಿನಗಳ ಹಿಂದೆ ಕಾವೇರಿ (Cauvery) ಜಲಾನಯನ ಪ್ರದೇಶದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆ ಬಿದ್ದ ಹಿನ್ನೆಲೆ 34 ದಿನಗಳ ಬಳಿಕ ಕೆಆರ್‌ಎಸ್ ಡ್ಯಾಂನ (KRS Dam) ನೀರಿನ ಮಟ್ಟ 100 ಅಡಿಗಳ ಗಡಿ ದಾಟಿದೆ. ಈ ಮೂಲಕ ಆತಂಕ ಮೂಡಿದ ರೈತರಿಗೆ ಸ್ವಲ್ಪ ಪ್ರಮಾಣದ ಸಮಾಧಾನ ತಂದಿದೆ.

    ಈ ಬಾರಿ ಮುಂಗಾರು ಮಳೆ ಕೈ ಕೊಟ್ಟ ಪರಿಮಾಣ ಕೆಆರ್‌ಎಸ್ ನೀರಿನ ಮಟ್ಟ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಕಳೆದ ಸೆಪ್ಟೆಂಬರ್ 1 ರಿಂದ 100 ಅಡಿಗಿಂತ ಕಡಿಮೆ ಪ್ರಮಾಣದಲ್ಲಿ ಡ್ಯಾಂನ ನೀರಿನ ಮಟ್ಟ ಇತ್ತು. ಇದೀಗ ಕಳೆದ 3 ದಿನಗಳ ಹಿಂದೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ಬಿದ್ದ ಹಿನ್ನೆಲೆ ಇಂದು 100.36 ಅಡಿಗೆ ಡ್ಯಾಂ ನೀರಿನ ಮಟ್ಟ ಏರಿಕೆಯಾಗಿದೆ.

    ಮಳೆ ಬಿದ್ದ ಹಿನ್ನೆಲೆ ಕೆಆರ್‌ಎಸ್ ಡ್ಯಾಂ ಒಳಹರಿವಿನಲ್ಲಿ ಹೆಚ್ಚಳವಾಗಿದ್ದು, ಇದರಿಂದ ಡ್ಯಾಂ ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ. ತಮಿಳುನಾಡು ನೀರಿನ ಕ್ಯಾತೆಯ ನಡುವೆ ಕೆಆರ್‌ಎಸ್ 100 ಅಡಿ ಭರ್ತಿಯಾಗಿರೋದು ಸಮಾಧಾನಕರ ಸಂಗತಿಯಾಗಿದೆ. ಇದನ್ನೂ ಓದಿ: ಹುಬ್ಬಳ್ಳಿ, ಉತ್ತರ ಕನ್ನಡ, ಬೆಳಗಾವಿ ಅರಣ್ಯದಲ್ಲಿ ತರಬೇತಿ: ಉಗ್ರರಿಂದ ಸ್ಫೋಟಕ ಮಾಹಿತಿ

    ನಿನ್ನೆ 11,800 ಕ್ಯೂಸೆಕ್ ಒಳಹರಿವು ಇತ್ತು. ಇದೀಗ ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ಮಳೆ ನಿಂತಿರುವ ಪರಿಣಾಮ ಡ್ಯಾಂಗೆ ಇಂದು 9,052 ಕ್ಯೂಸೆಕ್ ಒಳಹರಿವು ಇದೆ. ನಾಳೆ ಇನ್ನಷ್ಟು ಪ್ರಮಾದಲ್ಲಿ ಒಳಹರಿವು ಕಡಿಮೆಯಾಗಲಿದೆ. ಇತ್ತ ಡ್ಯಾಂನಿಂದ ತಮಿಳುನಾಡಿಗೆ 1,482 ಕ್ಯೂಸೆಕ್ ಬಿಡುಗಡೆ ಮಾಡಲಾಗಿದೆ.

    ಕೆಆರ್‌ಎಸ್ ಡ್ಯಾಂನ ಇಂದಿನ ನೀರಿನ ಮಟ್ಟ:
    ಗರಿಷ್ಠ ಮಟ್ಟ – 124.80 ಅಡಿಗಳು
    ಇಂದಿನ ಮಟ್ಟ – 100.36 ಅಡಿಗಳು
    ಗರಿಷ್ಠ ಸಾಂದ್ರತೆ – 49.452 ಟಿಎಂಸಿ
    ಇಂದಿನ ಸಾಂದ್ರತೆ – 23.095 ಟಿಎಂಸಿ
    ಒಳ ಹರಿವು – 9,052 ಕ್ಯೂಸೆಕ್
    ಹೊರ ಹರಿವು – 1,482 ಕ್ಯೂಸೆಕ್ ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಉದ್ಯಮಿಗಳಿಗೆ ಐಟಿ ಶಾಕ್‌ – ಬೆಂಗಳೂರಿನ 30 ಕಡೆ ದಾಳಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • KRS ಡ್ಯಾಂಗೆ ಒಳಹರಿವಿನ ಪ್ರಮಾಣ ಹೆಚ್ಚಳ

    KRS ಡ್ಯಾಂಗೆ ಒಳಹರಿವಿನ ಪ್ರಮಾಣ ಹೆಚ್ಚಳ

    ಮಂಡ್ಯ: ಕಾವೇರಿ ಜಲನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಿರುವ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣ ಹೆಚ್ಚಿದ್ದು, ಸದ್ಯ 13,418 ಕ್ಯೂಸೆಕ್ ನೀರು ಡ್ಯಾಂಗೆ ಹರಿದು ಬರುತ್ತಿದೆ.

    ಕೆಆರ್‌ಎಸ್ ಡ್ಯಾಂನ ಗರಿಷ್ಠ ಮಟ್ಟ 124.80 ಅಡಿಗಳಿದ್ದು, ಸದ್ಯ 109.52 ಅಡಿ ಭರ್ತಿಯಾಗಿದೆ. ಟಿಎಂಸಿ ಪ್ರಮಾಣದಲ್ಲಿ ಕೆಆರ್‌ಎಸ್ ಗರಿಷ್ಠ ಸಾಂದ್ರತೆ 49.452 ಟಿಎಂಸಿ ಇದ್ರೆ, ಪ್ರಸ್ತುತ 31.242 ಟಿಎಂಸಿಯಷ್ಟು ನೀರು ತುಂಬಿದೆ. ಇದನ್ನೂ ಓದಿ: ನಮ್ಮ ರಕ್ತದಲ್ಲಿ ಕಾಂಗ್ರೆಸ್‌ ಇದೆ: JDS ತೊರೆದು ಕಾಂಗ್ರೆಸ್‌ ಸೇರಿದ ಹೆಚ್‌.ಆರ್.ಶ್ರೀನಾಥ್‌

    ಡ್ಯಾಂನಿಂದ 1,258 ಕ್ಯೂಸೆಕ್ ನೀರನ್ನು ಹೊರಗಡೆ ಬಿಡುಗಡೆ ಮಾಡಲಾಗುತ್ತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಇದೇ ರೀತಿ ಮಳೆ ಮುಂದುವರಿದರೆ ಆಗಸ್ಟ್ ಎರಡನೇ ವಾರಕ್ಕೆ ಕೆಆರ್‌ಎಸ್ ಡ್ಯಾಂ ಭರ್ತಿಯಾಗಲಿದೆ. ಇದರಿಂದ ಹಳೆ ಮೈಸೂರು ಭಾಗದ ರೈತರು ಹಾಗೂ ಜನರಿಗೆ ಸಂತಸದ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ನೂತನ ಕದ್ರಿ ರೋಲರ್ಸ್ ಸ್ಕೇಟಿಂಗ್ ಕ್ಲಬ್ ಆರಂಭ – ಅಧ್ಯಕ್ಷರಾಗಿ ಡಾ.ರಾಜೇಶ್ ಹುಕ್ಕೇರಿ ಆಯ್ಕೆ

    Live Tv