Tag: Inflation

  • ಬೆಲೆ ಏರಿಕೆ ಉತ್ತುಂಗದಲ್ಲಿದೆ, ಇದು ತಮಾಷೆಯ ವಿಚಾರವಲ್ಲ: ರಾಹುಲ್ ಗಾಂಧಿ

    ಬೆಲೆ ಏರಿಕೆ ಉತ್ತುಂಗದಲ್ಲಿದೆ, ಇದು ತಮಾಷೆಯ ವಿಚಾರವಲ್ಲ: ರಾಹುಲ್ ಗಾಂಧಿ

    ನವದೆಹಲಿ: ಪೆಟ್ರೋಲ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಸರ್ಕಾರದ ವಿರುದ್ಧ ಟ್ವೀಟ್ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

    RAHUL GANDHI

    ಈಗ ದೀಪಾವಳಿ ಹಬ್ಬ ಬಂದಿದೆ. ಬೆಲೆ ಏರಿಕೆ ಉತ್ತುಂಗದಲ್ಲಿದೆ. ಇದು ತಮಾಷೆಯ ವಿಚಾರವಲ್ಲ. ಸಾಮಾನ್ಯ ಜನರ ಪರಿಸ್ಥಿತಿ ಬಗ್ಗೆ ನರೇಂದ್ರ ಮೋದಿ ಸರ್ಕಾರ ಸ್ವಲ್ಪವಾದರೂ ಸಂವೇದನೆ ತೋರಬೇಕು ಎಂಬುದು ನನ್ನ ಆಶಯ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಸೋಲು ಗೆಲುವನ್ನು ಸಮವಾಗಿ ಸ್ವೀಕರಿಸುವ ದೃಷ್ಟಿಕೋನ ನಮ್ಮದು: ಬೊಮ್ಮಾಯಿ

    ಪೆಟ್ರೋಲ್, ಡೀಸೆಲ್, ಎಲ್‍ಪಿಜಿ ಬೆಲೆಯಷ್ಟೇ ಅಲ್ಲದೆ, ಬಹುತೇಕ ಅಗತ್ಯ ವಸ್ತುಗಳ ಬೆಲೆ ಹೆಚ್ಚುತ್ತಿದೆ. ಅಡುಗೆ ಎಣ್ಣೆ, ತರಕಾರಿಗಳ ಬೆಲೆಯೂ ಏರಿಕೆಯಾಗಿದೆ. ಅದರಲ್ಲೂ ಇಂಧನ ದರವಂತೂ ಐತಿಹಾಸಿಕ ಹೆಚ್ಚಳಕಂಡಿದ್ದು, ಸಾಮಾನ್ಯ ಜನರಿಗೆ ಬಹುದೊಡ್ಡ ಹೊರೆಯಾಗಿದೆ. ಎಲ್‍ಪಿಜಿ ಸಿಲಿಂಡರ್ ಬೆಲೆ 266ರೂ.ಏರಿಕೆಯಾಗಿದ್ದು, ದೆಹಲಿಯಲ್ಲಿ 2000 ರೂ.ಗಡಿ ದಾಟಿದೆ. ಇದನ್ನೂ ಓದಿ:  ಕಡಿಮೆ ಲಸಿಕೆ ವಿತರಣೆ – 40ಕ್ಕೂ ಹೆಚ್ಚು ಡಿಸಿಗಳ ಜೊತೆ ಮೋದಿ ಸಭೆ

  • ತರಕಾರಿ ಹಾರ ಧರಿಸಿ ಅಸೆಂಬ್ಲಿಗೆ ಸೈಕಲ್‍ನಲ್ಲಿ ತೆರಳಿದ ಪಾಕ್ ಸಚಿವ – ಫೋಟೋ ವೈರಲ್

    ತರಕಾರಿ ಹಾರ ಧರಿಸಿ ಅಸೆಂಬ್ಲಿಗೆ ಸೈಕಲ್‍ನಲ್ಲಿ ತೆರಳಿದ ಪಾಕ್ ಸಚಿವ – ಫೋಟೋ ವೈರಲ್

    ಇಸ್ಲಾಮಾಬಾದ್: ಪಾಕಿಸ್ತಾನದ ಸಚಿವರೊಬ್ಬರು ಅಧಿವೇಶನದಲ್ಲಿ ಪಾಲ್ಗೊಳ್ಳಲು ಕುತ್ತಿಗೆಗೆ ಆಲೂಗಡ್ಡೆ, ಟೊಮ್ಯಾಟೋ ಮತ್ತು ಇತರ ತರಕಾರಿಗಳಿಂದ ತಯಾರಿಸಿದ ಹಾರವನ್ನು ಧರಿಸಿ ಪಂಜಾಬ್ ವಿಧಾನಸಭೆಗೆ ಸೈಕಲ್‍ನಲ್ಲಿ ತೆರಳುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಪಾಕಿಸ್ತಾನ್ ಮುಸ್ಮಿಂ ಲೀಗ್-ಎನ್(ಪಿಎಂಎಲ್-ಎನ್) ಸದಸ್ಯ ತಾರಿಕ್ ಮಸಿಹ್ ಅವರು ದೇಶದಲ್ಲಿ ಹೆಚ್ಚಾಗುತ್ತಿರುವ ಹಣದುಬ್ಬರನ್ನು ವಿರೋಧಿಸಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ:  ಕಡಿಮೆ ಆಹಾರ ತಿನ್ನಿ: ಕಿಮ್ ಜಾಂಗ್ ಉನ್ ಮನವಿ

    ಈ ಕುರಿತಂತೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಏರುತ್ತಿರುವ ಹಣದುಬ್ಬರದ ವಿರುದ್ಧ ಪ್ರತಿಭಟನೆ ಮುಂದುವರಿಸುತ್ತೇನೆ ಎಂದು ತಿಳಿಸಿ, ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸೈಕಲ್‍ನಲ್ಲಿ ಸವಾರಿ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ಬಿರುಗಾಳಿ – 10 ಸಾವಿರ ಕೋಟಿ ರೂ. ಹಗರಣ!

    ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಕಳೆದ 70 ವರ್ಷಗಳಲ್ಲಿ ಹಣದುಬ್ಬರ ಗರಿಷ್ಟ ಮಟ್ಟ ತಲುಪಿದೆ. ಆಹಾರ ಪದಾರ್ಥಗಳ ಬೆಲೆ ದ್ವಿಗುಣಗೊಳ್ಳುವುದರೊಂದಿಗೆ ತುಪ್ಪ, ಎಣ್ಣೆ, ಸಕ್ಕರೆ, ಹಿಟ್ಟು ಮತ್ತು ಕೋಳಿ ಮಾಂಸದ ಬೆಲೆ ಹೆಚ್ಚಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರಿದಿ ಮಾಡಿದೆ. ಇದನ್ನೂ ಓದಿ: ದೆಹಲಿಯಲ್ಲಿ ಡೆಂಗ್ಯೂ ಉಲ್ಬಣ – ಆಸ್ಪತ್ರೆಗಳಲ್ಲಿ ಬೆಡ್‍ಗಳ ಕೊರತೆ

    ಇತ್ತೀಚೆಗೆ ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಪಾಕಿಸ್ತಾನದಲ್ಲಿರುವ ವಿರೋಧ ಪಕ್ಷಗಳು ಮತ್ತು ನಾಗರಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ನೇತೃತ್ವದ ಸರ್ಕಾರದ ಆರ್ಥಿಕ ನೀತಿಗಳ ವೈಫಲ್ಯದ ಬಗ್ಗೆ ಟೀಕಿಸುತ್ತಿದ್ದಾರೆ.