Tag: Inflation

  • ಚಿಲ್ಲರೆ ಹಣದುಬ್ಬರ| 2019ರ ಬಳಿಕ ಕನಿಷ್ಠ ಮಟ್ಟಕ್ಕೆ ಇಳಿಕೆ

    ಚಿಲ್ಲರೆ ಹಣದುಬ್ಬರ| 2019ರ ಬಳಿಕ ಕನಿಷ್ಠ ಮಟ್ಟಕ್ಕೆ ಇಳಿಕೆ

    – ತೆಂಗಿನ ಎಣ್ಣೆ, ತೆಂಗಿನಕಾಯಿ, ದ್ರಾಕ್ಷಿ ದುಬಾರಿ

    ನವದೆಹಲಿ: ದೇಶದ ಚಿಲ್ಲರೆ ಹಣದುಬ್ಬರವು (Retail Inflation) ಮಾರ್ಚ್‌ ತಿಂಗಳಿನಲ್ಲಿ 2019ರ ಬಳಿಕ ಕನಿಷ್ಠ ಮಟ್ಟವಾದ 3.34%ಕ್ಕೆ ಇಳಿಕೆಯಾಗಿದೆ.

    ಈ ವರ್ಷದ ಫೆಬ್ರವರಿಯಲ್ಲಿ ಚಿಲ್ಲರೆ ಹಣದುಬ್ಬರ 3.61%ಗೆ ಇಳಿಕೆಯಾಗಿತ್ತು. ಮಾರ್ಚ್‌ನಲ್ಲಿ 27 ಬೇಸಿಸ್‌ ಅಂಕ ಕಡಿಮೆಯಾಗುವ ಮೂಲಕ ಚಿಲ್ಲರೆ ಹಣದುಬ್ಬರ ಮತ್ತಷ್ಟು ಇಳಿಕೆಯಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ (Ministry of Commerce and Industry) ತಿಳಿಸಿದೆ. 2019ರ ಮಾರ್ಚ್‌ನಲ್ಲಿ 3.28% ದಾಖಲಾಗಿತ್ತು.

    ಫೆಬ್ರವರಿಯಲ್ಲಿ ಗ್ರಾಮೀಣ (Rural) ಭಾಗದಲ್ಲಿ ಚಿಲ್ಲರೆ ಹಣದುಬ್ಬರ 3.79% ಇದ್ದರೆ ಮಾರ್ಚ್‌ನಲ್ಲಿ 3.25%ಕ್ಕೆ ತಗ್ಗಿದೆ. ಫೆಬ್ರವರಿಯಲ್ಲಿ ನಗರದಲ್ಲಿ (Urban) 3.32% ದಾಖಲಾಗಿದ್ದರೆ ಮಾರ್ಚ್‌ನಲ್ಲಿ 3.43ಕ್ಕೆ ಏರಿಕೆಯಾಗಿದೆ.  ಇದನ್ನೂ ಓದಿ : ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯ ಸಾಧ್ಯತೆ – ಮುಂಗಾರು ಮಳೆ ಬಗ್ಗೆ ಹವಾಮಾನ ಇಲಾಖೆ ಮಾಹಿತಿ

     

    ಆಹಾರದ ಹೊರತಾಗಿ, ನಗರ ಪ್ರದೇಶಗಳಲ್ಲಿ ವಸತಿ ಹಣದುಬ್ಬರವು 2.91% ರಿಂದ 3.03% ಕ್ಕೆ ಸ್ವಲ್ಪ ಏರಿಕೆಯಾಗಿದೆ. ಶಿಕ್ಷಣ ಮತ್ತು ಆರೋಗ್ಯ ವಿಭಾಗಗಳು ಕ್ರಮವಾಗಿ 3.98% ಮತ್ತು 4.26% ನಷ್ಟು ಹಣದುಬ್ಬರ ದರಗಳನ್ನು ದಾಖಲಿಸಿವೆ. ಸಾರಿಗೆ ಮತ್ತು ಸಂವಹನ ಹಣದುಬ್ಬರವು ಸಹ ಏರಿಕೆಯಾಗಿದ್ದು, ಹಿಂದಿನ ತಿಂಗಳ 2.93% ಕ್ಕೆ ಹೋಲಿಸಿದರೆ 3.30% ರಷ್ಟು ಏರಿಕೆಯಾಗಿದೆ

    ವೈಯಕ್ತಿಕ ವಸ್ತುಗಳ ಪೈಕಿ, ತೆಂಗಿನ ಎಣ್ಣೆ (56.81%), ತೆಂಗಿನಕಾಯಿ (42.05%), ಚಿನ್ನ (34.09%), ಬೆಳ್ಳಿ (31.57%), ಮತ್ತು ದ್ರಾಕ್ಷಿಗಳು (25.55%) ನಲ್ಲಿ ವರ್ಷದಿಂದ ವರ್ಷಕ್ಕೆ ತೀವ್ರ ಬೆಲೆ ಏರಿಕೆಯಾಗುತ್ತಿದೆ. ಇದನ್ನೂ ಓದಿ: ನವಜಾತ ಶಿಶುಗಳ ಕಳ್ಳಸಾಗಣೆ ಮಾಡಿದರೆ ಆಸ್ಪತ್ರೆಗಳ ಪರವಾನಿಗೆ ಕೂಡಲೇ ಅಮಾನತುಗೊಳಿಸಿ: ಸುಪ್ರೀಂ

    ತರಕಾರಿಗಳು, ಆಲೂಗಡ್ಡೆ ಮತ್ತು ಇತರ ಆಹಾರ ಪದಾರ್ಥಗಳ ಬೆಲೆಗಳು ಕಡಿಮೆಯಾಗಿರುವುದರಿಂದ ಮಾರ್ಚ್‌ನಲ್ಲಿ ಸಗಟು ಬೆಲೆ ಹಣದುಬ್ಬರವು ಆರು ತಿಂಗಳ ಕನಿಷ್ಠ ಮಟ್ಟವಾದ 2.05% ಕ್ಕೆ ಇಳಿದಿದೆ ಎಂ

    ಸಗಟು ಬೆಲೆ ಸೂಚ್ಯಂಕ (Wholesale Price Index ) ಆಧಾರಿತ ಹಣದುಬ್ಬರವು ಫೆಬ್ರವರಿಯಲ್ಲಿ 2.38% ರಷ್ಟಿತ್ತು. ಕಳೆದ ವರ್ಷ ಮಾರ್ಚ್‌ನಲ್ಲಿ ಇದು 0.26% ರಷ್ಟಿತ್ತು.

  • ಇಂಗ್ಲೆಂಡ್‌ನಲ್ಲಿ ಆರ್ಥಿಕ ಬಿಕ್ಕಟ್ಟು – ತೆರಿಗೆ ಹೆಚ್ಚಿಸಿ ವೆಚ್ಚ ಕಡಿತಕ್ಕೆ ಮುಂದಾದ ಸರ್ಕಾರ

    ಇಂಗ್ಲೆಂಡ್‌ನಲ್ಲಿ ಆರ್ಥಿಕ ಬಿಕ್ಕಟ್ಟು – ತೆರಿಗೆ ಹೆಚ್ಚಿಸಿ ವೆಚ್ಚ ಕಡಿತಕ್ಕೆ ಮುಂದಾದ ಸರ್ಕಾರ

    ಲಂಡನ್‌: ಬ್ರಿಟನ್(UK) ಇಂದು ಭಾರೀ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಬ್ರಿಟನ್ ದೇಶ ಆರ್ಥಿಕ ಆರ್ಥಿಕ ಹಿಂಜರಿತಕ್ಕೆ(Recession) ಸಿಲುಕಿದೆ ಎಂದು ಆ ದೇಶದ ವಿತ್ತ ಸಚಿವ ಜೆರೆಮಿ ಹಂಟ್ ಘೋಷಿಸಿದ್ದಾರೆ.

    ಇದೀಗ ದೇಶವನ್ನು ಆರ್ಥಿಕ ಹಿಂಜರಿತದಿಂದ ಮೇಲೆತ್ತಲು ತೆರಿಗೆ ಹೆಚ್ಚಳ ಮತ್ತು ವೆಚ್ಚ ಕಡಿತದ ನಿರ್ಧಾರವನ್ನು ರಿಷಿ ಸುನಾಕ್(Rishi Sunak) ಸರ್ಕಾರ ಪ್ರಕಟಿಸಿದೆ. ಹದಗೆಟ್ಟಿರುವ ಸಾರ್ವಜನಿಕ ಹಣಕಾಸು ವ್ಯವಸ್ಥೆಗೆ ಪುನಶ್ಚೇತನ ನೀಡಲು 66 ಶತಕೋಟಿ ಡಾಲರ್‌  ಮೊತ್ತದ ವಿತ್ತೀಯ ಯೋಜನೆಯನ್ನು ಘೋಷಿಸಿದೆ. ಇದನ್ನೂ ಓದಿ: ಬ್ರಿಟನ್‌ನಲ್ಲಿ ಹಿಂದೂ-ಮುಸ್ಲಿಂ ಉದ್ವಿಗ್ನತೆಗೆ ಭಾರತದ 500 ಟ್ವಿಟ್ಟರ್‌ ಖಾತೆಗಳು ಕಾರಣ!

    ಸಾರ್ವಜನಿಕ ವೆಚ್ಚ ನಿಯಂತ್ರಣ ಮತ್ತು ತೆರಿಗೆ ಏರಿಕೆಯನ್ನು ಇದು ಒಳಗೊಂಡಿದೆ. ಈ ಯೋಜನೆಯ ಭಾಗವಾಗಿ ಸಿರಿವಂತರಿಗೆ ಮತ್ತು ಇಂಧನ ಕಂಪನಿಗಳಿಗೆ ತೆರಿಗೆ ಹೆಚ್ಚಳ ಮಾಡಿದೆ. ಮತ್ತೊಂದು ಕಡೆ ಅಲ್ಲಿನ ಜನ ವೆಚ್ಚ ನಿಯಂತ್ರಣದ ಮೊರೆ ಹೋಗಿದ್ದಾರೆ.

    ಬ್ರಿಟನ್‍ನಲ್ಲಿ ಕಳೆದ ತಿಂಗಳು ಹಣದುಬ್ಬರ(Inflation) ಪ್ರಮಾಣ ಶೇ.11.1ರಷ್ಟಿತ್ತು. ಇದು ಕಳೆದ 41 ವರ್ಷಗಳಲ್ಲಿಯೇ ಗರಿಷ್ಠ. ಈ ವರ್ಷ ಶೇ. 9.1ರಷ್ಟು, 2023ರಲ್ಲಿ 7.4ರಷ್ಟು ಹಣದುಬ್ಬರ ನಿರೀಕ್ಷಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರಿಷಿ ಸುನಾಕ್‌ಗೆ ಸಿಗುತ್ತಾ ಬ್ರಿಟನ್ ಪ್ರಧಾನಿ ಹುದ್ದೆ?

    ರಿಷಿ ಸುನಾಕ್‌ಗೆ ಸಿಗುತ್ತಾ ಬ್ರಿಟನ್ ಪ್ರಧಾನಿ ಹುದ್ದೆ?

    ಲಂಡನ್‌: ಭಾರತ ಮೂಲದ ರಿಷಿ ಸುನಾಕ್(Rishi Sunak) ಮುಂದೆ ಬ್ರಿಟನ್‌ ಪ್ರಧಾನಿಯಾಗುತ್ತಾರಾ ಹೀಗೊಂದು ಪ್ರಶ್ನೆ ಎದ್ದಿದೆ.

    ಅಧಿಕಾರಕ್ಕೆ ಏರಿದ ಕೆಲ ದಿನದಲ್ಲೇ ತಮ್ಮ ಪಕ್ಷದ ಸಂಸದರ ವಿಶ್ವಾಸವನ್ನು ಕಳೆದುಕೊಂಡಿರುವ ಬ್ರಿಟನ್ ಪ್ರಧಾನಿ ಲಿಜ್ ಟ್ರಸ್(Liz Truss) ಅವರ ಬದಲು ರಿಷಿ ಸುನಾಕ್‌ ಪ್ರಧಾನಿಯಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

    ಪ್ರಧಾನಿ ಹುದ್ದೆಯನ್ನು ಏರುವ ಮೊದಲು ಲಿಜ್‌ ಟ್ರಸ್‌ ಹಲವು ಅಶ್ವಾಸನೆ ನೀಡಿದ್ದರು. ಆದರೆ ಅಧಿಕಾರಕ್ಕೆ ಏರಿದ ಬಳಿಕ ಟ್ರಸ್ಟ್‌ ಉಲ್ಟಾ ಹೊಡೆದ ಹಿನ್ನೆಲೆಯಲ್ಲಿ ರಿಷಿ ಸುನಾಕ್ ಈಗ ಬುಕ್ಕಿಗಳ ಫೇವರಿಟ್ ಆಗಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಅಪಾಯಕಾರಿ ಅಲ್ಲ, ಜವಾಬ್ದಾರಿಯುತ ರಾಷ್ಟ್ರ: ಶೆಹಬಾಜ್ ಷರೀಫ್

    ಅಧಿಕಾರಕ್ಕೆ ಬಂದ ಬಳಿಕವೂ ಹಣದುಬ್ಬರ(Inflation) ನಿಯಂತ್ರಣಕ್ಕೆ ಬಂದಿಲ್ಲ. ಸಚಿವೆಯಾಗಿದ್ದಾಗ ಟ್ರಸ್‌ ಅವರ ಆಪ್ತರಾಗಿದ್ದ ಕ್ಯಾಸಿ ಕ್ವಾರ್ಟೆಂಗ್‌ರನ್ನು ಹುದ್ದೆಯಿಂದ ತೆಗೆದುಹಾಕಿದ್ದಕ್ಕೆ ಸಂಸದರು ಟ್ರಸ್‌ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದರು. ಆರ್ಥಿಕತೆಯನ್ನು ಸರಿ ಮಾಡುವ ನಿಟ್ಟಿನಲ್ಲಿ ಟ್ರಸ್‌ ಕೈಗೊಂಡ ಹಠಾತ್‌ ನಿರ್ಧಾರಗಳಿಗೆ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದಾರೆ.

    ರಿಷಿ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿಯವರ ಪುತ್ರಿ ಅಕ್ಷತಾ ಮೂರ್ತಿಯ ಪತಿಯಾಗಿದ್ದು, ಬ್ರಿಟನ್‌ನಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿ ಎಂದೇ ಹೆಸರು ಪಡೆದಿದ್ದಾರೆ. ಇವರನ್ನು ಬೋರಿಸ್ ಜಾನ್ಸನ್ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಗೃಹ, ವಾಹನ ಸಾಲ ಬಡ್ಡಿ ದರ ಏರಿಕೆ – ಸತತ 4ನೇ ಬಾರಿಗೆ RBI Repo Rate ಏರಿಕೆ

    ಗೃಹ, ವಾಹನ ಸಾಲ ಬಡ್ಡಿ ದರ ಏರಿಕೆ – ಸತತ 4ನೇ ಬಾರಿಗೆ RBI Repo Rate ಏರಿಕೆ

    ನವದೆಹಲಿ: ಸತತ ನಾಲ್ಕನೇ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಶುಕ್ರವಾರದಿಂದ ತಕ್ಷಣದಿಂದ ಜಾರಿಗೆ ಬರುವಂತೆ ರೆಪೊ ದರವನ್ನು(Repo Rate) 50 ಬೇಸಿಸ್ ಪಾಯಿಂಟ್‌ (ಬಿಪಿಎಸ್) ಹೆಚ್ಚಿಸಿದೆ. ಈ ನಿರ್ಧಾರದಿಂದ ರೆಪೋ ದರ ಶೇ. 5.9ಕ್ಕೆ ಏರಿಕೆಯಾದಂತಾಗಿದೆ.

    ಗವರ್ನರ್‌ ಶಕ್ತಿಕಾಂತ ದಾಸ್‌ (RBI Governor Shaktikanta Das) ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು (MPC) ಮೂರು ದಿನಗಳ ಸಭೆ ನಡೆಸಿ ರೆಪೋ ದರವನ್ನು ಏರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಆಗಸ್ಟ್‌ನಲ್ಲಿ 50 ಬೇಸಿಸ್ ಪಾಯಿಂಟ್‌ ಏರಿಕೆ ಮಾಡಿದ್ದರಿಂದ ರೆಪೋ ದರ ಶೇ.5.4ಕ್ಕೆ ಏರಿತ್ತು.

    ರೆಪೋ ದರ ಏರಿಕೆಯಾದ ಕಾರಣ ಗೃಹ, ವಾಹನ ಸಾಲದ ಬಡ್ಡಿ ದರ ಏರಿಕೆಯಾಗಲಿದೆ. ಈ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ(GDP) ಶೇ.7.2 ರಷ್ಟು ಬೆಳವಣಿಗೆಯಾಗಲಿದೆ ಎಂದು ಆರ್‌ಬಿಐ ಅಂದಾಜಿಸಿತ್ತು. ಆದರೆ ಈಗ ಶೇ.7 ರಷ್ಟು ಅಭಿವೃದ್ಧಿಯಾಗಬಹುದು ಎಂದು ಅಂದಾಜಿಸಿದೆ.  ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ಹೂಡಿಕೆದಾರರಿಗೆ ಒಂದೇ ದಿನ 7 ಲಕ್ಷ ಕೋಟಿ ನಷ್ಟ

    ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಫೆಡರಲ್‌ ರಿಸರ್ವ್‌(US Federal Reserve ) ಸತತ ಮೂರನೇ ಬಡ್ಡಿದರದ ಹೆಚ್ಚಳ ಮಾಡಿದ ಬೆನ್ನಲ್ಲೇ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದೆ. ಮಿತಿಮೀರಿದ ಹಣದುಬ್ಬರವನ್ನು(Inflation) ನಿಯಂತ್ರಿಸಲು ಕಳೆದ ವಾರ ಫೆಡರಲ್‌ ರಿಸರ್ವ್‌ ಶೇ. 0.75ರಷ್ಟು ಬಡ್ಡಿದರವನ್ನು ಹೆಚ್ಚಳ ಮಾಡಿತ್ತು.

    ರೆಪೋ ರೇಟ್ ಎಂದರೇನು?
    ವಾಣಿಜ್ಯ ಬ್ಯಾಂಕ್‌ಗಳ ರಿಸರ್ವ್ ಬ್ಯಾಂಕ್‍ನಿಂದ ಪಡೆಯುವ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರಕ್ಕೆ ರೆಪೋ ದರ ಎನ್ನುತ್ತಾರೆ. ರೆಪೋ ದರ ಕಡಿಮೆಯಾದರೆ ಬ್ಯಾಂಕ್‌ಗಳು ಕಡಿಮೆ ದರದಲ್ಲಿ ಹೆಚ್ಚಿನ ಹಣವನ್ನು ಪಡೆಯಬಹುದು. ಬ್ಯಾಂಕ್‍ಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತಿರುತ್ತವೆ.

    Live Tv
    [brid partner=56869869 player=32851 video=960834 autoplay=true]

  • ಮಕ್ಕಳಿಗೆ ಊಟ ಹಾಕ್ಲೋ, ಸಾಯಿಸ್ಲೋ – ಬೆಲೆ ಏರಿಕೆ ಖಂಡಿಸಿ ಪಾಕ್ ಪ್ರಧಾನಿಗೆ ಮಹಿಳೆಯಿಂದ ಕ್ಲಾಸ್

    ಮಕ್ಕಳಿಗೆ ಊಟ ಹಾಕ್ಲೋ, ಸಾಯಿಸ್ಲೋ – ಬೆಲೆ ಏರಿಕೆ ಖಂಡಿಸಿ ಪಾಕ್ ಪ್ರಧಾನಿಗೆ ಮಹಿಳೆಯಿಂದ ಕ್ಲಾಸ್

    ಇಸ್ಲಾಮಾಬಾದ್: ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ನಡುವೆ ಕರಾಚಿಯಲ್ಲಿ ಔಷಧಿಗಳು, ದಿನಸಿ ಮತ್ತು ವಿದ್ಯುತ್ ಬೆಲೆ ಗಗನಕ್ಕೇರುತ್ತಿರುವ ಬಗ್ಗೆ ವಿವರಿಸುತ್ತಾ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಪಿಎಂಎಲ್-ಎನ್ ನಾಯಕಿ ಮರ್ಯಮ್ ನವಾಜ್ ವಿರುದ್ಧ ಪಾಕಿಸ್ತಾನಿ ಮಹಿಳೆಯೊಬ್ಬರು ವಾಗ್ದಾಳಿ ನಡೆಸಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

    Shehbaz Sharif

    ಪಾಕಿಸ್ತಾನವು ಆರ್ಥಿಕ ಬಿಕ್ಕಟ್ಟಿನ ನಡುವೆ ಹೋರಾಟ ನಡೆಸುತ್ತಿದೆ. ರಾಜಕೀಯವಾಗಿ ಸರ್ಕಾರ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಎಲ್ಲೆಡೆ ಆತಂಕವನ್ನು ಸೃಷ್ಟಿಸುತ್ತಿದೆ. ಪಾಕ್ ನಾಗರಿಕರು ಸಾಮಾಜಿಕ ಜಾಲತಾಣ ಮೂಲಕ ತಮ್ಮ ಆರ್ಥಿಕತೆಯನ್ನು ಸುಧಾರಿಸುವ ಕೆಲಸವನ್ನು ಪ್ರಧಾನಿ ಮಾಡುತ್ತಿಲ್ಲ ಎಂದು ಟೀಕಿಸುತ್ತಿದ್ದಾರೆ. ಇದನ್ನೂ ಓದಿ: ನೈಟ್ ಕ್ಲಬ್​ನಲ್ಲಿ ಯುವತಿಗೆಯೊಂದಿಗೆ ಅಸಭ್ಯ ವರ್ತನೆ – ಪ್ರಶ್ನಿಸಿದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಬೌನ್ಸರ್ಸ್!

    ಸದ್ಯ ಮಹಿಳೆಯೊಬ್ಬರ ವೀಡಿಯೋವನ್ನು ಪಾಕಿಸ್ತಾನಿ ಪತ್ರಕರ್ತ ಹಮೀದ್ ಮಿರ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಬಗ್ಗೆ ಕರಾಚಿ ಮಹಿಳೆಯೊಬ್ಬರು ಇನ್ನೂ ಮುಂದೆ ಮಕ್ಕಳಿಗೆ ಊಟ ನೀಡದೇ ಅವರ ಜೀವನವನ್ನು ಕೊನೆಗೊಳಿಸಬೇಕೇ ಎಂದು ಪ್ರಶ್ನಿಸುವ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಹೌದು, ರಾಬಿಯಾ ಅವರು, ಬೆಲೆ ಏರಿಕೆಯಿಂದಾಗಿ ತಾವು ಎದುರಿಸುತ್ತಿರುವ ಕಷ್ಟವನ್ನು ಕ್ಯಾಮೆರಾ ಮುಂದೆ ತೊಡಿಕೊಂಡಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ತಮಗೆ ಆಗುತ್ತಿರುವ ಖರ್ಚುಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ತಿಳಿಸಬೇಕು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ನಾನು ಏನು ಮಾಡಬೇಕು, ಮನೆ ಬಾಡಿಗೆ ಕಟ್ಟಬೇಕೋ, ದುಬಾರಿ ವಿದ್ಯುತ್ ಬಿಲ್‍ಗಳನ್ನು ಪಾವತಿಸಬೇಕೋ, ನನ್ನ ಮಕ್ಕಳಿಗೆ ಹಾಲು ಮತ್ತು ಔಷಧಿಗಳನ್ನು ಖರೀದಿಸಬೇಕೋ, ನನ್ನ ಮಕ್ಕಳಿಗೆ ಊಟ ಹಾಕಬೇಕೋ ಅಥವಾ ಅವರನ್ನು ಕೊಲ್ಲಬೇಕೋ? ಎಂದು ಪ್ರಶ್ನಿಸುತ್ತಾ ಕಣ್ಣೀರು ಹಾಕಿದ್ದಾರೆ.  ಇದನ್ನೂ ಓದಿ: ಕಾಂಗ್ರೆಸ್ಸಿಗರ ಮನಸ್ಥಿತಿಯಲ್ಲಿ ಅತಂತ್ರವಿದೆ, ನಾನು ಮತ್ತಷ್ಟು ಗಟ್ಟಿಯಾಗಿದ್ದೇನೆ: ಬೊಮ್ಮಾಯಿ

    ನನ್ನ ಮಕ್ಕಳಲ್ಲಿ ಒಬ್ಬರಿಗೆ ಫಿಟ್ಸ್ ಇದೆ. ಆದರೆ ನಾಲ್ಕು ತಿಂಗಳಿನಿಂದ ಅವರಿಗೆ ನೀಡಲಾಗುತ್ತಿರುವ ಔಷಧಿ ಬೆಲೆ ಏರಿಕೆಯಾಗಿದೆ. ಹಾಗಂತ ನನ್ನ ಮಕ್ಕಳಿಗೆ ಔಷಧಿ ನೀಡದೇ ಇರುವುದಕ್ಕೆ ಆಗುತ್ತಾ? ಸರ್ಕಾರ ಈಗಾಗಲೇ ಬಹುತೇಕ ಬಡವರನ್ನು ಕೊಂದಿದೆ. ಸರ್ವಶಕ್ತನಾದ ಅಲ್ಲಾಹನಿಗೆ ಈ ಬಗ್ಗೆ ಪ್ರಶ್ನಿಸಲು ನೀವು ಭಯಪಡುತ್ತೀರೋ ಅಥವಾ ಇಲ್ಲವೋ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಈ ವೀಡಿಯೋಗೆ ಪ್ರತಿಕ್ರಿಯಿಸಿದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಅವರು, ದೇಶದ ಆರ್ಥಿಕ ಪರಿಸ್ಥಿತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಸರ್ಕಾರ ಜೂನ್‍ನಲ್ಲಿ ವಿದ್ಯುತ್ ದರವನ್ನು ಹೆಚ್ಚಿಸಿಲ್ಲ ಅಥವಾ ಔಷಧಿಗಳ ಮೇಲೆ ಹೊಸ ತೆರಿಗೆಯನ್ನು ವಿಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 2022ರ ಏಪ್ರಿಲ್‍ನಲ್ಲಿ ಅಧಿಕಾರ ವಹಿಸಿಕೊಂಡ ಪಿಎಂ ಶೆಹಬಾಜ್ ಷರೀಫ್ ಅವರ ಸಮ್ಮಿಶ್ರ ಸರ್ಕಾರವು ಸಾಕಷ್ಟು ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಅಹಂಕಾರದಿಂದ ಕುರುಡಾಗಿರುವ ಸರ್ಕಾರಕ್ಕೆ ಹಣದುಬ್ಬರ ಎಲ್ಲಿ ಕಾಣಿಸುತ್ತದೆ: ರಾಹುಲ್ ಕಿಡಿ

    ಅಹಂಕಾರದಿಂದ ಕುರುಡಾಗಿರುವ ಸರ್ಕಾರಕ್ಕೆ ಹಣದುಬ್ಬರ ಎಲ್ಲಿ ಕಾಣಿಸುತ್ತದೆ: ರಾಹುಲ್ ಕಿಡಿ

    ನವದೆಹಲಿ: ಅಹಂಕಾರದಿಂದ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ದೇಶದ ಆಸ್ತಿಯನ್ನು ತಮ್ಮ ಸ್ನೇಹಿತರಿಗೆ ಮುಕ್ತ ನಿಧಿಯಾಗಿ ಮಾರಾಟ ಮಾಡುತ್ತಿರುವ ಬಿಜೆಪಿ ಸರ್ಕಾರಕ್ಕೆ ದೇಶದ ಹಣದುಬ್ಬರ ಕಾಣಿಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಲೋಕಸಭೆಯಲ್ಲಿ ನಡೆದ ಬೆಲೆ ಏರಿಕೆ ಕುರಿತ ಚರ್ಚೆಯ ಬಳಿಕ ಟ್ವೀಟ್ ಮಾಡಿದ ರಾಹುಲ್ ಗಾಂಧಿ, ಅವರಿಗೆ ಹಣದುಬ್ಬರ ಕಾಣಿಸಲು ಹೇಗೆ ಸಾಧ್ಯ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಮಂಕಿಪಾಕ್ಸ್ ಬಗ್ಗೆ ಆತಂಕ ಬೇಡ, ಗಡಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ನಿಗಾ: ಸುಧಾಕರ್

    ಬಿಜೆಪಿ ಸರ್ಕಾರ ದೇಶದಲ್ಲಿ ಹಣದುಬ್ಬರ ಇಲ್ಲ ಎಂದು ಸಂಸತ್ತಿನಲ್ಲಿ ಹೇಳಿದೆ. ಅವರು ತಮ್ಮ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದಾರೆ. ಇದರಿಂದ ಅವರಿಗೆ ಹಣದುಬ್ಬರ ಹೇಗೆ ಕಾಣಿಸಲು ಸಾಧ್ಯ? ಅಹಂಕಾರದಿಂದ ಕೂಡಿದ ಸರ್ಕರ ದೇಶದ ಆಸ್ತಿಯನ್ನು ತಮ್ಮ ಸ್ನೇಹಿತರಿಗೆ ಫ್ರೀ ಫಂಡ್‌ನಲ್ಲಿ ಮಾರಾಟ ಮಾಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಲಾನ್‌ ಬಾಲ್ಸ್‌ನಲ್ಲಿ ಇತಿಹಾಸ ಸೃಷ್ಟಿ – ಚಿನ್ನ ಗೆದ್ದ ವನಿತೆಯರು

    ಇದರೊಂದಿಗೆ ರಾಹುಲ್ ಗಾಂಧಿ 2019 ಹಾಗೂ ಈಗ ಇರುವ ಪೆಟ್ರೋಲ್, ಡೀಸೆಲ್ ಮತ್ತು ಇತರ ಸರಕುಗಳ ಬೆಲೆಗಳನ್ನು ಹೋಲಿಕೆ ಮಾಡಿ ಟ್ವೀಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶಿವ, ಪಾರ್ವತಿ ವೇಷ ಧರಿಸಿ ಹಣದುಬ್ಬರದ ಬಗ್ಗೆ ನಾಟಕ- ಶಿವ ವೇಷಧಾರಿಯ ಬಂಧನ

    ಶಿವ, ಪಾರ್ವತಿ ವೇಷ ಧರಿಸಿ ಹಣದುಬ್ಬರದ ಬಗ್ಗೆ ನಾಟಕ- ಶಿವ ವೇಷಧಾರಿಯ ಬಂಧನ

    ದಿಸ್ಪುರ್: ನಿರ್ದೇಶಕಿ ಲೀನಾ ಮಣಿಮೇಕಲೈ ಅವರ ಕಾಳಿ ಸಾಕ್ಷ್ಯಚಿತ್ರದ ಪೋಸ್ಟರ್‌ಗೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ಇದರ ನಡುವೆಯೇ ಶಿವ-ಪಾರ್ವತಿಯ ವೇಷ ಧರಿಸಿ ಬೀದಿ ನಾಟಕದ ಮೂಲಕ ಪ್ರತಿಭಟನೆ ನಡೆಸಿರುವ ಕಲಾವಿದರ ಮೇಲೆ ಕೇಸ್ ದಾಖಲಾಗಿದೆ. ಈಶ್ವರ ಪಾತ್ರಧಾರಿಯ ಬಂಧನವೂ ಆಗಿದೆ.

    ಅಸ್ಸಾಂನ ನಾಗಾಂವ್‌ನಲ್ಲಿ ಇಬ್ಬರು ಶಿವ ಹಾಗೂ ಪಾರ್ವತಿ ದೇವಿಯ ವೇಷ ಧರಿಸಿ ದೇಶದ ಹಣದುಬ್ಬರದ ಬಗ್ಗೆ ನಾಟಕವಾಡಿದ್ದಾರೆ. ಇದು ಹಿಂದೂ ಸನಾತನ ಧರ್ಮದವರ ಭಾವನೆಗೆ ಧಕ್ಕೆ ಉಂಟುಮಾಡಿದೆ ಎಂದು ನಾಗಾಂವ್ ಜಿಲ್ಲೆಯ ಹಿಂದೂ ಪರಿಷತ್ ಹಾಗೂ ಭಜರಂಗದಳ ಆರೋಪಿಸಿ, ತೀವ್ರವಾಗಿ ಖಂಡಿಸಿದೆ.

    ಘಟನೆ ಏನು?
    ಶನಿವಾರ ಸಂಜೆ ನಾಟಕ ಕಲಾವಿದರಾದ ಬಿರಿಂಚಿ ಬೋರಾ ಮತ್ತು ಕರಿಷ್ಮಾ, ಶಿವ ಮತ್ತು ಪಾರ್ವತಿ ವೇಷ ಧರಿಸಿ, ರಸ್ತೆಗಿಳಿದು ಇಂಧನ, ಆಹಾರ ಪದಾರ್ಥ ಹಾಗೂ ಇತರ ವಸ್ತುಗಳ ಬೆಲೆ ಏರಿಕೆಯನ್ನು ಪ್ರತಿಭಟಿಸಿದ್ದಾರೆ. ಇಬ್ಬರೂ ಬೈಕ್‌ನಲ್ಲಿ ನಾಗಾಂವ್‌ನ ಕಾಲೇಜು ಚೌಕ್‌ಗೆ ಆಗಮಿಸಿ, ವಾಹನದಲ್ಲಿ ಇಂಧನ ಖಾಲಿಯಾಗುತ್ತಿರುವ ಬಗ್ಗೆ ನಾಟಕವಾಡಿದ್ದಾರೆ. ಇದನ್ನೂ ಓದಿ: ಮಧ್ಯಾಹ್ನದ ಊಟ ಇಲ್ಲ, ಶಿಕ್ಷಕರಿಗೆ ಮಸಾಜ್ ಬೇಕಂತೆ – ವಿದ್ಯಾರ್ಥಿಗಳಿಂದಲೇ ಶಾಲೆಯ ಆಸ್ತಿ ಧ್ವಂಸ

    ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಶಿವ ವೇಷಧಾರಿ, ಸರ್ಕಾರ ಕೇವಲ ಬಂಡವಾಳಶಾಹಿಗಳ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ. ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನು ಸ್ಥಳದಲ್ಲಿ ನೆರೆದವರು ಕುತೂಹಲದಿಂದ ನೋಡಿದ್ದಾರೆ ಹಾಗೂ ಪಾತ್ರಧಾರಿಗಳು ಏರುತ್ತಿರುವ ಹಣದುಬ್ಬರವನ್ನು ಪ್ರತಿಭಟಿಸುವಂತೆ ಒತ್ತಾಯಿಸಿದ್ದಾರೆ.

    ಇದಾದ ಬಳಿಕ ಬಡಾ ಬಜಾರ್ ಪ್ರದೇಶಕ್ಕೂ ಆಗಮಿಸಿದ ಕಲಾವಿದರು ಇದೇ ರೀತಿ ಬೀದಿ ನಾಟಕ ಪ್ರದರ್ಶಿಸಿದರು. ಇದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಗಮನಕ್ಕೆ ಬಂದಿದ್ದು, ಅವರಿಬ್ಬರೂ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪೊಲೀಸ್ ವಾಹನದಲ್ಲಿ ಕುರಿ ದರ್ಬಾರ್ – ಮುಗ್ದ ಪ್ರಾಣಿಯ ಜಾಲಿ ರೈಡ್ ನೋಡಿ ನೆಟ್ಟಿಗರು ಫಿದಾ

    ಶಿವ-ಪಾರ್ವತಿ ಪಾತ್ರಧಾರಿಗಳಾದ ಬಿರಿಂಚಿ ಬೋರಾ ಹಾಗೂ ಕರೀಶ್ಮಾ ವಿರುದ್ಧ ನಾಗೋನ್ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇದರ ಬೆನ್ನಲ್ಲೇ ಶಿವ ಪಾತ್ರಧಾರಿ ಬೋರಾನನ್ನು ಬಂಧಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • 30 ವರ್ಷಗಳಲ್ಲೇ ಬ್ರಿಟನ್‌ನಲ್ಲಿ ಅತಿ ದೊಡ್ಡ ರೈಲು ಮುಷ್ಕರ

    30 ವರ್ಷಗಳಲ್ಲೇ ಬ್ರಿಟನ್‌ನಲ್ಲಿ ಅತಿ ದೊಡ್ಡ ರೈಲು ಮುಷ್ಕರ

    ಲಂಡನ್: 30 ವರ್ಷಗಳಲ್ಲೇ ಕಂಡಿರದ ಅತ್ಯಂತ ದೊಡ್ಡ ರೈಲು ಮುಷ್ಕರ ಮಂಗಳವಾರ ಬ್ರಿಟನ್‌ನಲ್ಲಿ ಪ್ರಾರಂಭವಾಗಿದೆ. ಬ್ರಿಟನ್ ಆರ್ಥಿಕತೆಯಲ್ಲಿ ವ್ಯಾಪಕವಾದ ಕೈಗಾರಿಕಾ ಕ್ರಮದಿಂದ ವೇತನ ಹಾಗೂ ಉದ್ಯೋಗಿಗಳ ವಿವಾದದಿಂದ 10 ಸಾವಿರ ಸಿಬ್ಬಂದಿ ಹೊರ ನಡೆದಿದ್ದಾರೆ. ಈ ಹಿನ್ನೆಲೆ ಬ್ರಿಟನ್‌ನಲ್ಲಿ ಬೃಹತ್ ಮುಷ್ಕರ ನಡೆಯುತ್ತಿದ್ದು, ಸ್ತಬ್ಧವಾದಂತೆ ತೋರುತ್ತಿದೆ.

    ಮಂಗಳವಾರದ ಮುಷ್ಕರದಿಂದಾಗಿ 40 ಸಾವಿರಕ್ಕೂ ಅಧಿಕ ರೈಲು ಕಾರ್ಮಿಕರು ಸ್ಟೇಷನ್‌ಗಳಲ್ಲಿ ಸಾಲುಗಟ್ಟಿದ್ದಾರೆ. ಇದರಿಂದ ರೈಲ್ವೇ ಸಂಚಾರ ಸ್ಥಗಿತಗೊಂಡಿದೆ. ಪ್ರತ್ಯೇಕ ಮುಷ್ಕರದಿಂದ ಲಂಡನ್‌ನ ಅಂಡರ್‌ಗ್ರೌಂಡ್ ಮೆಟ್ರೋ ಸಂಚಾರ ಕೂಡಾ ಹೆಚ್ಚಾಗಿ ಮುಚ್ಚಲ್ಪಟ್ಟಿದೆ. ಇದನ್ನೂ ಓದಿ: ಹಾನಿಯಾದ ಸರ್ಕಾರಿ ಆಸ್ತಿಗೆ ಅಗ್ನಿಪಥ್ ಪ್ರತಿಭಟನಾಕಾರರಿಂದಲೇ ವಸೂಲಿ: ವಾರಣಾಸಿ ಆಡಳಿತ

    ಕೋವಿಡ್‌ನಿಂದ ತತ್ತರಿಸಿ ಹೋಗಿರುವ ಸಂದರ್ಭ ಬ್ರಿಟಿಷ್ ಕುಟುಂಬಗಳಿಗೆ ಸಹಾಯದ ಅಗತ್ಯವಿದೆ. ಬದಲಿಗೆ ಕೈಗಾರಿಕಾ ಕ್ರಮ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ಘಾಸಿಗೊಳಿಸಬಹುದು ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಿಳಿಸಿದ್ದಾರೆ.

    ರೈಲು ಮುಷ್ಕರದಿಂದ ಅಲ್ಲಿನ ಶಿಕ್ಷಕರು, ವೈದ್ಯರು, ತ್ಯಾಜ್ಯ ವಿಲೇವಾರಿ ಕೆಲಸಗಾರರು ಹೀಗೆ ಮೊದಲಾದವರನ್ನು ಬಲವಂತವಾಗಿ ಕೈಗಾರಿಕಾ ಕ್ರಮದತ್ತ ದೂಡಿದಂತಾಗುತ್ತಿದ್ದು, ಅವರ ಅಸಮಾಧಾನಕ್ಕೂ ಕಾರಣವಾಗಬಹುದು ಎಂದು ಒಕ್ಕೂಟಗಳು ತಿಳಿಸಿವೆ.

    ಕೋವಿಡ್ ಆರಂಭಕ್ಕೂ ಮೊದಲು ಬ್ರಿಟನ್ ಆರ್ಥಿಕತೆ ಚೇತರಿಕೆಯಲ್ಲಿತ್ತು. ಆದರೆ ಬಳಿಕ ಕಾರ್ಮಿಕರ ಕೊರತೆ, ಪೂರೈಕೆ ಸರಪಳಿಗೆ ಅಡ್ಡಿ, ಹಣದುಬ್ಬರಗಳಂತಹ ವ್ಯಾಪಾರ ಸಮಸ್ಯೆಗಳಿಂದ ಆರ್ಥಿಕತೆ ಕುಸಿತಕ್ಕೆ ಕಾರಣವಾಯಿತು. ಲಕ್ಷಾಂತರ ಬಡ ಕುಟುಂಬಗಳಿಗೆ ಹೆಚ್ಚುವರಿ ಬೆಂಬಲ ನೀಡುತ್ತದೆ ಎಂದು ಬ್ರಿಟನ್ ಸರ್ಕಾರ ಹೇಳುತ್ತದೆ. ಆದರೆ ಹಣದುಬ್ಬರದ ನಡುವೆಯೂ ವೇತನದ ಹೆಚ್ಚಳ ಆರ್ಥಿಕತೆಯನ್ನು ಇನ್ನಷ್ಟು ಹಾನಿಗೊಳಿಸಲು ಕಾರಣವಾಗಿದೆ. ಇದನ್ನೂ ಓದಿ: ಮುಂಬೈನಲ್ಲಿ ರಮೇಶ್ ಜಾರಕಿಹೊಳಿ – ಗುರುವಿನ ಋಣ ತೀರಿಸಲು ಮುಂದಾದ್ರಾ?

    ಬೇಡಿಕೆಯೇನು?
    ಕಾರ್ಮಿಕರಿಗೆ ಶೇ.3 ರಷ್ಟು ವೇತನವನ್ನು ಹೆಚ್ಚಳಗೊಳಿಸಬೇಕೆಂಬ ಬೇಡಿಕೆಯನ್ನು ಒಕ್ಕೂಟಗಳು ತಿರಸ್ಕರಿಸಿವೆ. ಇದರೊಂದಿಗೆ ಬೃಹತ್ ಉದ್ಯೋಗಿಗಳ ವಜಾ ಕೂಡಾ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ರೈಲು ಮುಷ್ಕರವನ್ನು ನಡೆಸಲಾಗುತ್ತಿದೆ. ಸದ್ಯ ಶೇ.20 ರಷ್ಟು ಸೇವೆಗಳು ಮಾತ್ರವೇ ಚಾಲನೆಯಲ್ಲಿರುವ ಕಾರಣ ಹಿಂದೆ ಗದ್ದಲದಿಂದ ಕೂಡಿದ್ದ ನಿಲ್ದಾಣಗಳು ಈಗ ಬಣಗುಟ್ಟುತ್ತಿವೆ. ಗುರುವಾರ ಹಾಗೂ ಶನಿವಾರವೂ ಮುಷ್ಕರ ನಡೆಸಲು ಯೋಜಿಸಲಾಗಿದೆ.

    Live Tv

  • ಮಹಿಳೆಯರು, ಮಕ್ಕಳು ಭವಿಷ್ಯದ ಆತಂಕದಲ್ಲಿ ಬದುಕುತ್ತಿದ್ದಾರೆ: ವತ್ಸಲಾ ವರತ್ತನ

    ಮಹಿಳೆಯರು, ಮಕ್ಕಳು ಭವಿಷ್ಯದ ಆತಂಕದಲ್ಲಿ ಬದುಕುತ್ತಿದ್ದಾರೆ: ವತ್ಸಲಾ ವರತ್ತನ

    ಕೊಲಂಬೋ: ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿನ ಈಗಾಗಲೇ ಆರ್ಥಿಕ ಅರಾಜಕತೆ ಉಂಟಾಗಿದೆ. ವಿದ್ಯುತ್ ಪೂರೈಕೆ ಇಲ್ಲ, ತೈಲ ಲಭಿಸುತ್ತಿಲ್ಲ. ಕೈಗೆಟುವ ಬೆಲೆಯಲ್ಲಿ ಆಹಾರ ಪದಾರ್ಥಗಳು ಸಿಗುತ್ತಿಲ್ಲ. ಪರಿಸ್ಥಿತಿ ಎದುರಿಸಲು ಸಾಧ್ಯವಾಗದೇ ಅನೇಕ ಜನರು ವಲಸೆ ಹೋಗಿದ್ದಾರೆ ಎನ್ನುವ ಮಾಹಿತಿ ಈಗಾಗಲೇ ತಿಳಿದು ಬಂದಿದೆ. ಈ ನಡುವೆ ಪ್ರಸ್ತುತ ಶ್ರೀಲಂಕಾ ಸ್ಥಿತಿಗತಿಯ ಕುರಿತು ಶ್ರೀಲಂಕಾ ರಕ್ಷಣಾ ಸಚಿವಾಲಯದ ಅಭಿವೃದ್ಧಿ ಅಧಿಕಾರಿ ವತ್ಸಲಾ ವರತ್ತನ ಅವರು ಅಲ್ಲಿನ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ.

    ಪಬ್ಲಿಕ್ ಟಿವಿ ಡಿಜಿಟಲ್‌ಗೆ ಪ್ರತಿಕ್ರಿಯಿಸಿದ ಅವರು, ಶ್ರೀಲಂಕಾ ಪ್ರಸ್ತುತ ದೊಡ್ಡ ಮಟ್ಟದ ಆರ್ಥಿಕ ಹಿಂಜರಿತ ಎದುರಿಸುತ್ತಿದೆ. ದಿನದಿಂದ ದಿನಕ್ಕೆ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇಂಧನ ಕೊರತೆಯಿಂದಾಗಿ ಸಾರ್ವಜನಿಕ ಸಾರಿಗೆ ದರಗಳು ಹೆಚ್ಚಾಗಿವೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಮುಸ್ಲಿಮರ ಮೇಲಿನ ಹಿಂಸಾಚಾರ ನೋಡಿ ಬೇಸರವಾಗಿದೆ: ಸೂಪರ್‌ ಮಾಡೆಲ್‌ ಪದ್ಮಾ ಲಕ್ಷ್ಮೀ

    srilanka

    ಮಹಿಳೆಯರು, ಮಕ್ಕಳು ಸೇರಿದಂತೆ ಇಡೀ ಶ್ರೀಲಂಕಾ ಜನತೆ ಭವಿಷ್ಯದ ಆತಂಕದಲ್ಲಿ ಬದುಕುತ್ತಿದ್ದಾರೆ. ಸಿಗುವ ಕೂಲಿಯಿಂದ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಬಡವರು ಆಹಾರ ಕೊಳ್ಳಲು ಕಷ್ಟಪಡುತ್ತಿದ್ದರೆ, ಇತರರು ಹೆಚ್ಚಿನ ಹಣ ವ್ಯಯಿಸಿ ಆಹಾರ ಕೊಂಡುಕೊಳ್ಳುತ್ತಿದ್ದಾರೆ. ಅನೇಕ ಜನರು ದೇಶವನ್ನೇ ತೊರೆಯುತ್ತಿದ್ದಾರೆ. ನಮ್ಮ ಸುಂದರ ದೇಶಕ್ಕೆ ಏನಾಯಿತು ಎಂಬ ಪ್ರಶ್ನೆಗೆ ಉತ್ತರವೂ ನಮಗೆ ತಿಳಿದಿಲ್ಲ. ಇದು ತುಂಬಾ ದುಃಖವಾಗಿದೆ. ಸದ್ಯಕ್ಕೆ ಜನರಿಗೆ ತೊಂದರೆಯಾಗದ ರೀತಿಯಲ್ಲಿ ಆಂದೋಲನ ನಡೆಯುತ್ತಿದೆ. ಮುಂದೆ ಏನಾಗುತ್ತದೆ ಎನ್ನುವುದು ಗೊತ್ತಿಲ್ಲ.. ಎಂದೂ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಕಲಿ ಶಸ್ತ್ರಾಸ್ತ್ರ ಪರವಾನಗಿ ದಂಧೆ – ನಾಲ್ವರು ಅರೆಸ್ಟ್

  • ದೇಶದಲ್ಲಿ ಹಣದುಬ್ಬರ ಮತ್ತಷ್ಟು ಏರಿಕೆ: ರಾಹುಲ್ ಗಾಂಧಿ ಎಚ್ಚರಿಕೆ

    ದೇಶದಲ್ಲಿ ಹಣದುಬ್ಬರ ಮತ್ತಷ್ಟು ಏರಿಕೆ: ರಾಹುಲ್ ಗಾಂಧಿ ಎಚ್ಚರಿಕೆ

    ನವದೆಹಲಿ: ಹಣದುಬ್ಬರವು ಮತ್ತಷ್ಟುಕ್ಕೂ ಏರಿಕೆಯಾಗಲಿದ್ದು, ದೇಶದ ಜನರನ್ನು ರಕ್ಷಿಸಲು ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಒತ್ತಾಯಿಸಿದರು.

    ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹಣದುಬ್ಬರವು ಎಲ್ಲಾ ಭಾರತೀಯರ ಮೇಲಿನ ತೆರಿಗೆಯಾಗಿದೆ. ರಷ್ಯಾ- ಉಕ್ರೇನ್ ಯದ್ಧ ಪ್ರಾರಂಭವಾಗುವ ಮೊದಲೇ ದಾಖಲೆಯ ಮಟ್ಟದಲ್ಲಿ ಬೆಲೆ ಏರಿಕೆಯಾಗಿತ್ತು. ಇದರಿಂದಾಗಿ ಬಡವರು ಹಾಗೂ ಮಧ್ಯಮ ವರ್ಗದವರು ಸಾಕಷ್ಟು ಸಂಕಷ್ಟ ಎದುರಿಸಿದ್ದರು ಎಂದು ತಿಳಿಸಿದರು.

    ಈಗ ಹಣದುಬ್ಬರ ಮತ್ತಷ್ಟು ಏರಿಕೆಯಾಗಲಿದ್ದು, ಕಚ್ಚಾತೈಲ 1ಬ್ಯಾರಲ್‍ಗೆ 100 ಡಾಲರ್(7594 ರೂ.), ಆಹಾರದ ಬೆಲೆಗಳು ಶೇ.22 ಏರಿಕೆಯಾಗುವ ನಿರೀಕ್ಷೆಯಿದೆ. ಕೊರೊನಾದಿಂದಾಗಿ ಜಾಗತಿಕ ಪೂರೈಕೆ ಸರಪಳಿಯನ್ನು ಅಡ್ಡಿಪಡಿಸುತ್ತಿದೆ. ಕೇಂದ್ರ ಸರ್ಕಾರವು ಈಗ ಕಾರ್ಯ ನಿರ್ವಹಿಸಿ ಜನರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂ ದೇಗುಲದ ಮೇಲೆ ದಾಳಿ

    ಸೋಮವಾರ ಬಿಡುಗಡೆಯಾದ ಸರ್ಕಾರದ ಅಂಕಿಅಂಶಗಳ ಪ್ರಕಾರ ಕಚ್ಚಾ ತೈಲ ಹಾಗೂ ಆಹಾರೇತರ ವಸ್ತುಗಳ ಬೆಲೆ ಶೇ. 13.11ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಸೋಮವಾರ ಬೆಳಗ್ಗೆ 9.30ಕ್ಕೆ ಮೃತದೇಹ ಮನೆಗೆ ಬರಲಿದೆ: ನವೀನ್ ತಂದೆ

    ಫೆಬ್ರವರಿ 24 ರಂದು ಪ್ರಾರಂಭವಾದ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ನಂತರ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಬೆಲೆ ಏರಿಕೆಯು ಸಗಟು ಬೆಲೆ ಸೂಚ್ಯಂಕದ ಮೇಲೆ ಒತ್ತಡವನ್ನು ಉಂಟುಮಾಡಿದೆ.