Tag: INDvsWI

  • ಭಾರತಕ್ಕೆ 9 ವಿಕೆಟ್‌ಗಳ ಯಶಸ್ವಿ ಜಯ ತಂದ ಗಿಲ್‌, ಜೈಸ್ವಾಲ್‌ – ಇಂದು ರೋಚಕ ಹಣಾಹಣಿ

    ಭಾರತಕ್ಕೆ 9 ವಿಕೆಟ್‌ಗಳ ಯಶಸ್ವಿ ಜಯ ತಂದ ಗಿಲ್‌, ಜೈಸ್ವಾಲ್‌ – ಇಂದು ರೋಚಕ ಹಣಾಹಣಿ

    ಲಾಡರ್ಹಿಲ್‌: ಯುವತಾರೆ ಯಶಸ್ವಿ ಜೈಸ್ವಾಲ್‌ (Yashasvi Jaiswal) ಹಾಗೂ ಶುಭಮನ್‌ ಗಿಲ್‌ (Shubman Gill) ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಟೀಂ ಇಂಡಿಯಾ, ವೆಸ್ಟ್‌ ಇಂಡೀಸ್‌ (West Indies) ವಿರುದ್ಧ ಟಿ20 ಸರಣಿಯ 4ನೇ ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ 2-2 ಅಂತರದಲ್ಲಿ ಸಮಬಲ ಸಾಧಿಸಿದೆ. ಇಂದು (ಆ.13) ಲಾಡರ್ಹಿಲ್‌ನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಕ್ರೀಡಾಂಗಣದಲ್ಲಿ ನಿರ್ಣಾಯಕ ಪಂದ್ಯ ನಡೆಯಲಿದ್ದು, ರಾತ್ರಿ 8ಕ್ಕೆ ಪಂದ್ಯ ಆರಂಭವಾಗಲಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ವೆಸ್ಟ್‌ ಇಂಡೀಸ್‌ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 178 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಭಾರತ (Team India) 17 ಓವರ್‌ಗಳಲ್ಲೇ ಕೇವಲ 1 ವಿಕೆಟ್‌ ನಷ್ಟಕ್ಕೆ 179 ರನ್‌ ಗಳಿಸಿ ಭರ್ಜರಿ ಜಯ ಸಾಧಿಸಿತು. ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್‌ ಹಾಗೂ ಶುಭಮನ್‌ ಗಿಲ್‌ ಆರಂಭದಿಂದಲೇ ವಿಂಡೀಸ್‌ ಬೌಲರ್‌ಗಳನ್ನ ಬೆಂಡೆತ್ತಲು ಶುರು ಮಾಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 94 ಎಸೆತಗಳಲ್ಲಿ 165 ರನ್‌ ಕಲೆಹಾಕಿತ್ತು.

    ಶುಭಮನ್‌ ಗಿಲ್‌ 47 ಎಸೆತಗಳಲ್ಲಿ 77 ರನ್‌ (3 ಬೌಂಡರಿ, 5 ಸಿಕ್ಸರ್)‌ ಗಳಿಸಿ ಔಟಾದರು. ಆದ್ರೆ ಕೊನೆಯವರೆಗೂ ಅಬ್ಬರಿಸಿದ ಯಶಸ್ವಿ 51 ಎಸೆತಗಳಲ್ಲಿ 84 ರನ್‌ (3 ಸಿಕ್ಸರ್‌, 11 ಬೌಂಡರಿ) ಚಚ್ಚಿ ಅಜೇಯರಾಗುಳಿದರು. ಕೊನೆಯಲ್ಲಿ ತಿಲಕ್‌ ವರ್ಮಾ 7 ರನ್‌ ಗಳಿಸಿದರು. ಇದನ್ನೂ ಓದಿ: Asian Championship Trophy Hockey final: ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಗೆದ್ದ ಭಾರತ; ಮಲೇಷ್ಯಾ ವಿರುದ್ಧ 4-3 ಅಂತರದ ರೋಚಕ ಜಯ

    ಮೊದಲು ಬ್ಯಾಟಿಂಗ್‌ ಮಾಡಿದ ವಿಂಡೀಸ್‌ ಪರ ಶಿಮ್ರಾನ್‌ ಹೆಟ್ಮೇಯರ್‌ ಭರ್ಜರಿ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. 156.41 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಹೆಟ್ಮೇಯರ್‌ 39 ಎಸೆತಗಳಲ್ಲಿ 61 ರನ್‌ (4 ಸಿಕ್ಸರ್‌, 3 ಬೌಂಡರಿ) ಗಳಿಸಿದರು. ಇದರೊಂದಿಗೆ ಶಾಯ್‌ ಹೋಪ್‌ 29 ಎಸೆತಗಳಲ್ಲಿ 45 ರನ್‌ (2 ಸಿಕ್ಸರ್‌, 3 ಬೌಂಡರಿಗಳ ಕೊಡುಗೆ ನೀಡಿದರು. ಅಂತಿಮವಾಗಿ ವಿಂಡೀಸ್‌ 178 ರನ್‌ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಆದ್ರೆ ಕಳಪೆ ಬೌಲಿಂಗ್‌ನಿಂದಾಗಿ ಹೀನಾಯ ಸೋಲು ಅನುಭವಿಸಿತು. ಇದನ್ನೂ ಓದಿ: ಟೀಂ ಇಂಡಿಯಾ ವಿನಾಶದತ್ತ ಸಾಗುತ್ತಿದೆ – ನಾಲಿಗೆ ಹರಿಬಿಟ್ಟ ಪಾಕ್‌ ಮಾಜಿ ಕ್ರಿಕೆಟಿಗ, ಅಭಿಮಾನಿಗಳು ಕೆಂಡ

    ಟೀಂ ಇಂಡಿಯಾ ಪರ ಅರ್ಷ್‌ದೀಪ್‌ ಸಿಂಗ್‌ 4 ಓವರ್‌ಗಳಲ್ಲಿ 38 ರನ್‌ ನೀಡಿ 3 ವಿಕೆಟ್‌, ಕುಲ್‌ದೀಪ್‌ ಯಾದವ್‌ 2 ವಿಕೆಟ್‌ ಕಿತ್ತರೆ, ಅಕ್ಷರ್‌ ಪಟೇಲ್‌, ಯಜುವೇಂದ್ರ ಚಾಹಲ್‌, ಮುಕೇಶ್‌ ಕುಮಾರ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು. ವಿಂಡೀಸ್‌ ಪರ ರೊಮಾರಿಯೋ ಶೆಫರ್ಡ್ ಒಂದೇ ಒಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಿಲಕ್ ವರ್ಮಾ ಫಿಫ್ಟಿ ತಪ್ಪಿಸಿ ಹಿಗ್ಗಾಮುಗ್ಗ ಟ್ರೋಲ್‌ಗೆ ಗುರಿಯಾದ ಪಾಂಡ್ಯ – ಅಭಿಮಾನಿಗಳು ಕೆಂಡ

    ತಿಲಕ್ ವರ್ಮಾ ಫಿಫ್ಟಿ ತಪ್ಪಿಸಿ ಹಿಗ್ಗಾಮುಗ್ಗ ಟ್ರೋಲ್‌ಗೆ ಗುರಿಯಾದ ಪಾಂಡ್ಯ – ಅಭಿಮಾನಿಗಳು ಕೆಂಡ

    -ನಾಯಕನ ಸ್ಥಾನಕ್ಕೆ ಪಾಂಡ್ಯ ಅರ್ಹನಲ್ಲ, ಮಹಿ ಸ್ಥಾನ ತುಂಬೋಕಾಗಲ್ಲ ಅಂತಾ ಟ್ರೋಲ್‌

    ಜಾರ್ಜ್ಟೌನ್ (ಗಯಾನ): ವೆಸ್ಟ್ ಇಂಡೀಸ್ (West Indies) ವಿರುದ್ಧ ನಡೆದ T20 ಸರಣಿಯ 3ನೇ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಆದ್ರೆ ಕೊನೆಯಲ್ಲಿ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಮಾಡಿದ ಎಡವಟ್ಟಿನಿಂದ ಭಾರೀ ಟೀಕೆಗೆ ಗುರಿಯಾಗಿದ್ದಾರೆ.

    ಬ್ಯಾಟಿಂಗ್ ವೈಫಲ್ಯ ಕಾರಣ ಸತತ ಸೋಲುಂಡಿದ್ದ ಟೀಂ ಇಂಡಿಯಾ (Team India), ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ 3ನೇ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ, ಸರಣಿ ಜಯದ ಕನಸು ಜೀವಂತವಾಗಿರಿಸಿಕೊಂಡಿದೆ. ಸೂರ್ಯಕುಮಾರ್ ಯಾದವ್ (Suryakumar Yadav) ಭರ್ಜರಿ ಬ್ಯಾಟಿಂಗ್‌ನೊಂದಿಗೆ 83 ರನ್ ಗಳಿಸಿದರು. ಇನ್ನೂ ಉತ್ತಮ ಬ್ಯಾಟಿಂಗ್ ಫಾರ್ಮ್‌ನಲ್ಲಿರುವ ಯುವ ಬ್ಯಾಟರ್ ತಿಲಕ್ ವರ್ಮಾ 37 ಎಸೆತಗಳಲ್ಲಿ 49 ರನ್ ಗಳಿಸಿ ಅಜೇಯರಾಗಿ ಉಳಿದರು. ಆದ್ರೆ ಕೊನೆಯಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಅರ್ಧಶತಕ ತಪ್ಪಿಸಿದ್ದು ಟ್ರೋಲ್‌ಗೆ ಗುರಿಯಾಗಿದ್ದಾರೆ.

    ಕೊನೆಯ 14 ಎಸೆತಗಳಲ್ಲಿ ಟೀಂ ಇಂಡಿಯಾ ಗೆಲುವಿಗೆ 2 ರನ್‌ಗಳ ಅಗತ್ಯವಿತ್ತು. ಈ ವೇಳೆ 49 ರನ್‌ಗಳಿಸಿದ್ದ ತಿಲಕ್ ವರ್ಮಾ ನಾನ್ ಸ್ಟ್ರೈಕ್‌ನಲ್ಲಿದ್ದರು. 14 ಎಸೆತಗಳಲ್ಲಿ 14 ರನ್‌ಗಳಿಸಿ ಸ್ಟ್ರೈಕ್‌ನಲ್ಲಿದ್ದ ಪಾಂಡ್ಯ ತಿಲಕ್ ವರ್ಮಾಗೆ ಫಿಫ್ಟಿ ಮಾಡುವ ಅವಕಾಶ ಮಾಡಿಕೊಡ್ತಾರೆ ಎಂದು ಭಾವಿಸಲಾಗಿತ್ತು. ಆದ್ರೆ ಪಾಂಡ್ಯ, ರೋವ್ಮನ್ ಪೋವೆಲ್ ಬೌಲಿಂಗ್‌ಗೆ ಸಿಕ್ಸರ್ ಬಾರಿಸುವುದರೊಂದಿಗೆ ವಿನ್ನಿಂಗ್ ಶಾಟ್ ಬಾರಿಸಿದ್ರು. ಇದರಿಂದ ಅಭಿಮಾನಿಗಳು ಪಾಂಡ್ಯ ವಿರುದ್ಧ ಕೆಂಡ ಕಾರಿದ್ದಾರೆ.

    ಎಂ.ಎಸ್ ಧೋನಿ, ರೋಹಿತ್ ಶರ್ಮಾ, ಸಂಜು ಸ್ಯಾಮ್ಸನ್ ಹಾಗೂ ಸೂರ್ಯಕುಮಾರ್ ಯಾದವ್‌ ಅವರನ್ನ ಉದಾಹರಣೆ ನೀಡಿ ಪಾಂಡ್ಯ ಅವ್ರನ್ನ ಹಿಗ್ಗಾಮುಗ್ಗ ಟ್ರೋಲ್ ಮಾಡಿದ್ದಾರೆ. ಇದನ್ನೂ ಓದಿ: ಸೂರ್ಯನ ಆರ್ಭಟಕ್ಕೆ ವಿಂಡೀಸ್‌ ಕಂಗಾಲು, ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ – ಸರಣಿ ಜಯದ ಕನಸು ಜೀವಂತ

    ರೋಹಿತ್ ನೋಡಿ ಕಲಿಯಿರಿ ಪಾಂಡ್ಯ:
    ವರ್ಷಾರಂಭದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಲಂಕಾ ತಂಡದ ನಾಯಕ ದಸುನ್ ಶನಕ ಶತಕ ಪೂರೈಸಲಿ ಎಂದು ಮೊಹಮ್ಮದ್ ಶಮಿ ಅವರ ಮಂಕಡಿಂಗ್ ಮನವಿಯನ್ನು ಕ್ಯಾಪ್ಟನ್ ರೋಹಿತ್ ಶರ್ಮಾ ಹಿಂಪಡೆದಿದ್ದರು. ರೋಹಿತ್ ಮೆರೆದ ಔದಾರ್ಯದಿಂದ ದಸುನ್ ಶನಕಗೆ ಶತಕ ಲಭ್ಯವಾಯಿತು. ಭಾರತ ಪಂದ್ಯ ಗೆದ್ದಿತ್ತು. ಈಗ ಹಾರ್ದಿಕ್ ಪಾಂಡ್ಯ ತಮ್ಮದೇ ತಂಡದ ಆಟಗಾರನ ಜೊತೆಗೆ ನಡೆದುಕೊಂಡ ರೀತಿ ಗಮನಿಸಿದರೆ ಭಯವಾಗುತ್ತದೆ. ಪಾಂಡ್ಯ ಎಷ್ಟು ಕೆಟ್ಟ ವ್ಯಕ್ತಿ ಎಂಬುದನ್ನು ಅಂದಾಜಿಸಿ ಎಂದು ಅಭಿಮಾನಿಯೊಬ್ಬ ತನ್ನ ಟ್ವೀಟ್ ಮೂಲಕ ಕಿಡಿ ಕಾರಿದ್ದಾರೆ.

    ಕೊಹ್ಲಿಗಾಗಿ ಡಿಫೆನ್ಸ್ ಮಾಡಿದ್ದ ಮಹಿ:
    ಹಿಂದೆ ವಿರಾಟ್ ಕೊಹ್ಲಿ ಅವರನ್ನ ಎಂ.ಎಸ್ ಧೋನಿ ನಡೆಸಿಕೊಂಡ ರೀತಿಯ ವಿಡಿಯೋ ಹಂಚಿಕೊಂಡಿರುವ ಅಭಿಮಾನಿಯೊಬ್ಬ, ಅಂದು ವಿರಾಟ್ ಶತಕ ಸಲುವಾಗಿ ಎಂ.ಎಸ್ ಧೋನಿ ಓವರ್‌ನ ಅಂತಿಮ ಎಸೆತದಲ್ಲಿ ಮ್ಯಾಚ್ ಮುಗಿಸುವ ಅವಕಾಶ ಇದ್ದರೂ ಡಿಫೆನ್ಸ್ ಮಾಡಿದ್ದರು. ಇದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಇದನ್ನೂ ಓದಿ: ನಮ್ಮ ಬ್ಯಾಟಿಂಗ್‌ ಕಳಪೆಯಾಗಿತ್ತು – ಅಗ್ರಕ್ರಮಾಂಕದ ಬ್ಯಾಟರ್‌ಗಳ ವಿರುದ್ಧ ಪಾಂಡ್ಯ ಬೇಸರ

    ಅಲ್ಲದೇ 2023ರ ಐಪಿಎಲ್‌ನಲ್ಲಿ ಯಶಸ್ವಿ ಜೈಸ್ವಾಲ್ ಶತಕ ಪೂರೈಸಲು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವಕಾಶ ಮಾಡಿಕೊಟ್ಟಿದ್ದರು. ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಕ್ಯಾಮರೂನ್ ಗ್ರೀನ್ ಚೊಚ್ಚಲ ಐಪಿಎಲ್ ಶತಕ ದಾಖಲಿಸಲು ಸೂರ್ಯಕುಮಾರ್ ಯಾದವ್ ಒಂದು ರನ್ ತೆಗೆದುಕೊಂಡು ಅವಕಾಶ ಮಾಡಿಕೊಂಡಿದ್ದರು. ಆದ್ರೆ ಈಗ ಪಾಂಡ್ಯ ನಡೆದುಕೊಂಡ ರೀತಿ ಅಭಿಮಾನಿಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೂರ್ಯನ ಆರ್ಭಟಕ್ಕೆ ವಿಂಡೀಸ್‌ ಕಂಗಾಲು, ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ – ಸರಣಿ ಜಯದ ಕನಸು ಜೀವಂತ

    ಸೂರ್ಯನ ಆರ್ಭಟಕ್ಕೆ ವಿಂಡೀಸ್‌ ಕಂಗಾಲು, ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ – ಸರಣಿ ಜಯದ ಕನಸು ಜೀವಂತ

    ಜಾರ್ಜ್‌ಟೌನ್ (ಗಯಾನಾ): ಸೂರ್ಯಕುಮಾರ್‌ ಯಾದವ್‌ (Suryakumar Yadav), ತಿಲಕ್‌ ವರ್ಮಾ ಭರ್ಜರಿ ಬ್ಯಾಟಿಂಗ್‌ ಹಾಗೂ ಕುಲ್‌ದೀಪ್‌ ಯಾದವ್‌ ಸ್ಪಿನ್‌ ಬೌಲಿಂಗ್‌ ದಾಳಿ ನೆರವಿನಿಂದ ಟೀಂ ಇಂಡಿಯಾ, ವೆಸ್ಟ್‌ ಇಂಡೀಸ್‌ (West Indies) ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯನ್ನು 1-2 ಅಂತರದಲ್ಲಿ ಕಾಯ್ದುಕೊಂಡಿದ್ದು ಸರಣಿ ಜಯದ ಕನಸು ಜೀವಂತವಾಗಿಸಿಕೊಂಡಿದೆ.

    ವಿಂಡೀಸ್‌ ನೀಡಿದ 159 ರನ್‌ಗಳ ಗುರಿ ಬೆನ್ನತ್ತಿದ್ದ ಭಾರತ 17.5 ಓವರ್‌ಗಳಲ್ಲೇ 3 ವಿಕೆಟ್‌ ನಷ್ಟಕ್ಕೆ 164 ರನ್‌ ಚಚ್ಚಿ ಗೆಲುವು ಸಾಧಿಸಿತು. ಸ್ಫೋಟಕ ಆರಂಭ ಪಡೆದ ಟೀಂ ಇಂಡಿಯಾ ಪವರ್‌ ಪ್ಲೇನಲ್ಲೇ ಭರ್ಜರಿ ಬ್ಯಾಟಿಂಗ್‌ನೊಂದಿಗೆ 6 ಓವರ್‌ಗಳಲ್ಲಿ 60 ರನ್‌ ಬಾರಿಸಿತ್ತು. ಆರಂಭಿಕರಾದ ಯಶಸ್ವಿ ಜೈಸ್ವಾಲ್‌ ಹಾಗೂ ಶುಭಮನ್‌ ಗಿಲ್‌ ಕಳಪೆ ಪ್ರದರ್ಶನ ನೀಡಿ ಕೈಚೆಲ್ಲಿದರೂ, 3ನೇ ವಿಕೆಟ್‌ಗೆ ಜೊತೆಯಾದ ಸೂರ್ಯಕುಮಾರ್‌ ಯಾದವ್‌ ಹಾಗೂ ತಿಲಕ್‌ ವರ್ಮಾ (Tilak Varma) ಜೋಡಿ ವಿಂಡೀಸ್‌ ಬೌಲರ್‌ಗಳನ್ನ ಹಿಗ್ಗಾಮುಗ್ಗ ಚೆಂಡಾಡಿತು. 51 ಎಸೆತಗಳಲ್ಲಿ ಈ ಜೋಡಿ 87 ರನ್‌ ಬಾರಿಸಿತ್ತು.

    188.63 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಯಾದವ್‌ ಸೂರ್ಯಕುಮಾರ್‌ ಯಾದವ್‌ 44 ಎಸೆತಗಳಲ್ಲಿ 83 ರನ್‌ (4 ಸಿಕ್ಸರ್‌, 10 ಬೌಂಡರಿ) ಚಚ್ಚಿ ಔಟಾದರು. ನಂತರ ತಿಲಕ್‌ ವರ್ಮಾ 49 ರನ್‌ (37 ಎಸೆತ, 1 ಸಿಕ್ಸರ್‌, 4 ಬೌಂಡರಿ) ಬಾರಿಸಿದರೆ, ಕೊನೆಯಲ್ಲಿ ಹಾರ್ದಿಕ್‌ ಪಾಂಡ್ಯ 15 ಎಸೆತಗಳಲ್ಲಿ 20 ರನ್‌ ಬಾರಿಸಿ ಅಜೇಯರಾಗುಳಿದರು.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ವೆಸ್ಟ್‌ ಇಂಡೀಸ್‌ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕ ಜೋಡಿ ಮೊದಲ ವಿಕೆಟ್‌ಗೆ 7.4 ಓವರ್‌ಗಳಲ್ಲಿ 55 ರನ್‌ ಕಲೆ ಹಾಕಿತು. ಬ್ರೆಂಡನ್‌ ಕಿಂಗ್‌ 42 ರನ್‌ ಗಳಿಸಿದ್ರೆ, ಕೇಲ್‌ ಮೇಯರ್ಸ್‌ 25 ರನ್‌ ಗಳಿಸಿ ಔಟಾದರು. ಈ ಬೆನ್ನಲ್ಲೇ ಜಾನ್ಸನ್ ಜಾರ್ಲ್ಸ್ 12 ರನ್‌ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ಇದನ್ನೂ ಓದಿ: ನಮ್ಮ ಬ್ಯಾಟಿಂಗ್‌ ಕಳಪೆಯಾಗಿತ್ತು – ಅಗ್ರಕ್ರಮಾಂಕದ ಬ್ಯಾಟರ್‌ಗಳ ವಿರುದ್ಧ ಪಾಂಡ್ಯ ಬೇಸರ

    ಇನ್ನೂ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ನಿಕೋಲಸ್‌ ಪೂರನ್‌ ಭರ್ಜರಿ ಬ್ಯಾಟಿಂಗ್‌ ನಡೆಸುತ್ತಿದ್ದರು. 12 ಎಸೆತಗಳಲ್ಲಿ 20 ರನ್‌ ಗಳಿಸಿದ್ದಾಗ ಕುಲ್‌ದೀಪ್‌ ಬೌಲಿಂಗ್‌ಗೆ ಸಿಕ್ಸರ್‌ ಬಾರಿಸಲು ಮುಂದಾಗಿ ಸ್ಟಂಪ್‌ಔಟ್‌ ಆದರು. ಭರವಸೆಯ ಆಟಗಾರ ಶಿಮ್ರಾನ್‌ ಹೆಟ್ಮೇಯರ್‌ 9 ರನ್‌ ಗಳಿಸಿ ಕೈಚೆಲ್ಲಿದರೆ ನಾಯಕ ರೋವ್ಮನ್‌ ಪೋವೆಲ್‌ 19 ಎಸೆತಗಳಲ್ಲಿ 40 ರನ್‌ (3 ಸಿಕ್ಸರ್‌, 1 ಬೌಂಡರಿ) ಸಿಡಿಸಿ ಅಜೇಯರಾಗುಳಿದರು.

    ಇನ್ನೂ 4 ಓವರ್‌ಗಳಲ್ಲಿ 28 ರನ್‌ ನೀಡಿದ ಕುಲ್‌ದೀಪ್‌ ಯಾದವ್‌ ಪ್ರಮುಖ 3 ವಿಕೆಟ್‌ ಪಡೆದರೆ ಮುಕೇಶ್‌ ಕುಮಾರ್‌, ಅಕ್ಷರ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಪಾಕಿಸ್ತಾನ ತಂಡದಲ್ಲಿ ಎಲ್ಲರೂ ಉತ್ತಮ ಬೌಲರ್‌ಗಳೇ – ರೋಹಿತ್‌ ಶರ್ಮಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಮ್ಮ ಬ್ಯಾಟಿಂಗ್‌ ಕಳಪೆಯಾಗಿತ್ತು – ಅಗ್ರಕ್ರಮಾಂಕದ ಬ್ಯಾಟರ್‌ಗಳ ವಿರುದ್ಧ ಪಾಂಡ್ಯ ಬೇಸರ

    ನಮ್ಮ ಬ್ಯಾಟಿಂಗ್‌ ಕಳಪೆಯಾಗಿತ್ತು – ಅಗ್ರಕ್ರಮಾಂಕದ ಬ್ಯಾಟರ್‌ಗಳ ವಿರುದ್ಧ ಪಾಂಡ್ಯ ಬೇಸರ

    ಜಾರ್ಜ್‌ಟೌನ್ (ಗಯಾನಾ): ವೆಸ್ಟ್‌ ಇಂಡೀಸ್‌ (West Indies) ವಿರುದ್ಧದ ಎರಡೂ ಪಂದ್ಯಗಳಲ್ಲಿ ಸತತ ಸೋಲಿನ ಬಳಿಕ ಟೀಂ ಇಂಡಿಯಾ (Team India) ಟಿ20 ತಂಡದ ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ತೀವ್ರ ಬೇಸರ ಹೊರಹಾಕಿದ್ದಾರೆ.

    ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಮ್ಮ ತಂಡದ ಬ್ಯಾಟಿಂಗ್‌ ಕಳಪೆಯಾಗಿತ್ತು. ಒಂದೆಡೆ ವಿಕೆಟ್‌ ಬೀಳುತ್ತಿದ್ದರೆ ರನ್‌ ಟ್ರ್ಯಾಕ್‌ ನಿಧಾನಗತಿಯಲ್ಲಿ ಸಾಗಿತ್ತು. ನಾವು ಇನ್ನೂ ಉತ್ತಮವಾಗಿ ಬ್ಯಾಟಿಂಗ್‌ ಮಾಡಬಹುದಿತ್ತು. ಕನಿಷ್ಠ 160-170 ರನ್‌ ಗಳಿಸಬಹುದಿತ್ತು. ಆದ್ರೆ ನಮ್ಮ ತಂಡ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಮುಂದಿನ ಪಂದ್ಯಗಳಲ್ಲಿ ಬ್ಯಾಟ್ಸ್‌ಮ್ಯಾನ್‌ಗಳು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

    ಅಗ್ರಕ್ರಮಾಂಕದ ಬ್ಯಾಟರ್‌ಗಳಾದ ಶುಭಮನ್ ಗಿಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ರನ್ ಗಳಿಸುವಲ್ಲಿ ವಿಫಲರಾದರು. ಇದರಿಂದ ವಿಂಡೀಸ್‌ಗೆ ಸತತ 2ನೇ ಗೆಲುವು ಲಭಿಸಿದೆ. ಬೌಲರ್‌ಗಳು ಸಮತೋಲನ ಕಾಯ್ದುಕೊಂಡಿದ್ದಾರೆ. ಆದ್ರೆ ಬ್ಯಾಟರ್‌ಗಳು ಉತ್ತಮ ಪ್ರದರ್ಶನ ನೀಡುವುದು ಅವಶ್ಯಕವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಕೊನೆಯಲ್ಲಿ ಸಿಕ್ಸರ್‌, ಬೌಂಡರಿ ಸಿಡಿಸಿ ಗೆದ್ದ ವಿಂಡೀಸ್‌ – ಭಾರತಕ್ಕೆ ವಿರೋಚಿತ ಸೋಲು

    ತಿಲಕ್‌ ವರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಅರ್ಧ ಶತಕ ದಾಖಲಿಸಿದ್ದಾರೆ. 4ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬರುತ್ತಿರುವ ತಿಲಕ್‌ ವರ್ಮಾ ಆತ್ಮವಿಶ್ವಾಸದಿಂದ ಆಟವಾಡುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: WorldCup ಟೂರ್ನಿಗೆ ಆಸೀಸ್‌ ಬಲಿಷ್ಠ ತಂಡ ಪ್ರಕಟ – ಸ್ಟಾರ್‌ ಆಲ್‌ರೌಂಡರ್‌ಗೆ T20 ನಾಯಕತ್ವದ ಹೊಣೆ

    ಭಾನುವಾರ ನಡೆದ ಟಿ20 ಸರಣಿಯ 2ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 152 ರನ್‌ ಗಳಿಸಿತ್ತು. ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ್ದ ವೆಸ್ಟ್‌ ಇಂಡೀಸ್‌ ನಿಗದಿತ 18.5 ಓವರ್‌ಗಳಲ್ಲೇ 8 ವಿಕೆಟ್‌ ನಷ್ಟಕ್ಕೆ 155 ರನ್‌ ಬಾರಿಸಿ ರೋಚಕ ಗೆಲುವು ಸಾಧಿಸಿದೆ. ಆರಂಭದಲ್ಲಿ ಕಳಪೆ ಬೌಲಿಂಗ್‌ ಪ್ರದರ್ಶಿಸಿದರೂ ಮಧ್ಯಮ ಕ್ರಮಾಂಕದಲ್ಲಿ ಹಿಡಿತ ಸಾಧಿಸಿದ ಟೀಂ ಇಂಡಿಯಾ ಕೊನೆಯ ಎರಡು ಓವರ್‌ಗಳಲ್ಲಿ ರನ್‌ ಕೊಟ್ಟು ಸೋಲನುಭವಿಸಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊನೆಯಲ್ಲಿ ಸಿಕ್ಸರ್‌, ಬೌಂಡರಿ ಸಿಡಿಸಿ ಗೆದ್ದ ವಿಂಡೀಸ್‌ – ಭಾರತಕ್ಕೆ ವಿರೋಚಿತ ಸೋಲು

    ಕೊನೆಯಲ್ಲಿ ಸಿಕ್ಸರ್‌, ಬೌಂಡರಿ ಸಿಡಿಸಿ ಗೆದ್ದ ವಿಂಡೀಸ್‌ – ಭಾರತಕ್ಕೆ ವಿರೋಚಿತ ಸೋಲು

    ಜಾರ್ಜ್‌ಟೌನ್ (ಗಯಾನಾ): ಕೊನೆಯಲ್ಲಿ ಅಕೇಲ್ ಹೊಸೈನ್ (Akeal Hosein) ಹಾಗೂ ಅಲ್ಜರಿ ಜೋಸೆಫ್‌ (Alzarri Joseph) ಬ್ಯಾಟಿಂಗ್‌ ನೆರವಿನಿಂದ ವೆಸ್ಟ್‌ ಇಂಡೀಸ್‌ (West Indies) ಭಾರತದ ವಿರುದ್ಧ ಸತತ 2ನೇ ಜಯ ಸಾಧಿಸಿತು. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಇನ್ನೂ ಮೊದಲ ಸೋಲಿನ ಸೇಡು ತೀರಿಸಿಕೊಳ್ಳುವ ಕಾತುರದಲ್ಲಿದ್ದ ಟೀಂ ಇಂಡಿಯಾ ವಿರೋಚಿತ ಸೋಲನುಭವಿಸಿದೆ.

    ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ (Team India) 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 152 ರನ್‌ ಗಳಿಸಿತ್ತು. ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ್ದ ವೆಸ್ಟ್‌ ಇಂಡೀಸ್‌ ನಿಗದಿತ 18.5 ಓವರ್‌ಗಳಲ್ಲೇ 8 ವಿಕೆಟ್‌ ನಷ್ಟಕ್ಕೆ 155 ರನ್‌ ಬಾರಿಸಿ ರೋಚಕ ಗೆಲುವು ಸಾಧಿಸಿದೆ.

    ಬೌಲಿಂಗ್‌ನಲ್ಲಿ ಶುಭಾರಂಭ ಮಾಡಿದ ಭಾರತ ಮೊದಲ ಓವರ್‌ನಲ್ಲಿ ಕೇವಲ 2 ರನ್‌ಗಳಿಗೆ 2 ವಿಕೆಟ್‌ ಉರುಳಿಸಿತ್ತು. ಬ್ರ್ಯಾಂಡನ್ ಕಿಂಗ್ ಹಾಗೂ ಬ್ರ್ಯಾಂಡನ್ ಕಿಂಗ್ ಶೂನ್ಯಕ್ಕೆ ಔಟಾಗಿ ಪೆವಿಲಿಯನ್‌ಗೆ ಮರಳಿದರು. ಬಳಿಕ 3ನೇ ವಿಕೆಟ್‌ಗೆ ಜೊತೆಯಾದ ಕೇಲ್‌ ಮೇಯರ್ಸ್‌ ಹಾಗೂ ನಿಕೋಲಸ್‌ ಪೂರನ್‌ (Nicholas Pooran) ಸ್ಫೋಟಕ ಪ್ರದರ್ಶನ ನೀಡಿದರು. ಟೀಂ ಇಂಡಿಯಾ ಬೌಲರ್‌ಗಳನ್ನ ಹಿಗ್ಗಾಮುಗ್ಗಾ ದಂಡಿಸಿದ ಈ ಜೋಡಿ 37 ಎಸೆತಗಳಲ್ಲಿ 57 ರನ್‌ ಬಾರಿಸಿತು. ಇದರಿಂದ ಭಾರತದ ಸೋಲು ಖಚಿತವಾಗಿತ್ತು.

    ನಿಕೋಲಸ್‌ ಪೂರನ್‌ 67 ರನ್‌ (40 ಎಸೆತ, 6 ಬೌಂಡರಿ, 4 ಸಿಕ್ಸರ್‌) ಗಳಿಸಿ ಔಟಾದರು. ಈ ಬೆನ್ನಲ್ಲೇ ನಾಯಕ ರೋವ್ಮನ್‌ ಪೋವೆಲ್‌ (Rovman Powell) 21 ರನ್‌, ಆಲ್‌ರೌಂಡರ್‌ ಶಿಮ್ರಾನ್‌ ಹೆಟ್ಮೇಯರ್‌ 22 ರನ್‌ ಗಳಿಸಿ ಔಟಾದರು. 15 ನೇ ಓವರ್‌ನಲ್ಲಿ ವಿಂಡೀಸ್‌ ಮೂರು ವಿಕೆಟ್‌ ಕಳೆದುಕೊಂಡಾಗ ಪಂದ್ಯಕ್ಕೆ ರೋಚಕ ತಿರುವು ಸಿಕ್ಕಿತ್ತು. ಕೊನೆಯಲ್ಲಿ ಬೌಲರ್‌ಗಳಾದ ಅಕೇಲ್ ಹೊಸೈನ್ (16 ರನ್‌) ಹಾಗೂ ಅಲ್ಜರಿ ಜೋಸೆಫ್‌ (10 ರನ್‌) ಸಿಕ್ಸರ್‌, ಬೌಂಡರಿ ಬಾರಿಸುವ ಮೂಲಕ ಜಯದ ದಡ ಸೇರಿಸಿದರು.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಟೀಂ ಇಂಡಿಯಾ ಆರಂಭದಲ್ಲಿ ಆಘಾತ ಅನುಭವಿಸಿತು. ಮೊದಲ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದ ಭಾರತಕ್ಕೆ ನಿರಾಸೆಯಾಗಿತ್ತು. ಏಕೆಂದರೆ ಆರಂಭಿಕ ಶುಭಮನ್‌ ಗಿಲ್‌ (Shubman Gill)  ಮತ್ತೆ ಕಳಪೆ ಪ್ರದರ್ಶನ ತೋರಿದರು. ಗಿಲ್ ಈ ಪಂದ್ಯದಲ್ಲಿ ಕೇವಲ 7 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು.

    ಈ ಬೆನ್ನಲ್ಲೇ ಸೂರ್ಯಕುಮಾರ್‌ ಯಾದವ್‌ (Suryakumar Yadav) ಅನಗತ್ಯ ರನ್‌ ಕದಿಯಲು ಯತ್ನಿಸಿ ರನೌಟ್‌ಗೆ ತುತ್ತಾಗಿ ಆಘಾತ ನೀಡಿದರು. ನಂತರ ಇಶಾನ್ ಕಿಶನ್ ಹಾಗೂ ತಿಲಕ್ ವರ್ಮಾ ಜವಾಬ್ಧಾರಿಯುತ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. 3ನೇ ವಿಕೆಟ್‌ಗೆ ಈ ಜೋಡಿ 36 ಎಸೆತಗಳಲ್ಲಿ 42 ರನ್‌ ಕಲೆಹಾಕಿತು. ಅಷ್ಟರಲ್ಲೇ ಇಶಾನ್ 27 ರನ್‌ (2 ಸಿಕ್ಸರ್‌, 2 ಬೌಂಡರಿ, 23 ಎಸೆತ) ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ನಂತರ ಸಂಜು ಸ್ಯಾಮ್ಸನ್ ಸಿಕ್ಸ್‌ ಬಾರಿಸುವ ಯತ್ನದಲ್ಲಿ 7 ರನ್‌ಗೆ ಸ್ಟಂಪ್ ಔಟ್ ಆದರು.

    ತಿಲಕ್ ವರ್ಮಾ ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು ಜವಾಬ್ದಾರಿ ಆಟ ನೀಡಿದರು. 41 ಎಸೆತಗಳಲ್ಲಿ ತಿಲಕ್ 51 ರನ್‌ (1 ಸಿಕ್ಸರ್‌, 5 ಬೌಂಡರಿ) ಬಾರಿಸಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಅರ್ಧಶತಕ ದಾಖಲಿಸಿದರು. ನಾಯಕ ಹಾರ್ದಿಕ್‌ ಪಾಂಡ್ಯ 24 ರನ್‌, ಅಕ್ಷರ್‌ ಪಟೇಲ್‌ 14 ರನ್‌, ರವಿ ಬಿಷ್ಣೋಯಿ 8 ರನ್‌ ಹಾಗೂ ಅರ್ಷ್‌ದೀಪ್‌ ಸಿಂಗ್‌ 6 ರನ್‌ಗಳ ಕೊಡುಗೆ ನೀಡುವ ಮೂಲಕ ತಂಡದ ಮೊತ್ತ 150ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • `ಮಹಿ’ಯಂತೆ ಸಕ್ಸಸ್‌ಫುಲ್ ಕ್ಯಾಪ್ಟನ್ ಆಗ್ತಾರಾ `ಪಾಂಡ್ಯ’?

    `ಮಹಿ’ಯಂತೆ ಸಕ್ಸಸ್‌ಫುಲ್ ಕ್ಯಾಪ್ಟನ್ ಆಗ್ತಾರಾ `ಪಾಂಡ್ಯ’?

    ಈತ ಎಂಟ್ರಿ ಕೊಟ್ರೆ ಸಾಕು ಯಾವಾಗ ಸಿಕ್ಸ್ ಬಾರಿಸ್ತಾನೋ? ಅರ್ಧಕ್ಕೆ ಕೈಕೋಡ್ತಾನೋ? ಅನ್ನೂ ಟೆನ್ಷನ್, ಒಮ್ಮೆ ಇದ್ದಕ್ಕಿದ್ದಂತೆ ಸಿಕ್ಸರ್-ಬೌಂಡರಿ ಬಾರಿಸೋದು ಮತ್ತೊಮ್ಮೆ ಬೇಗನೇ ಔಟಾಗಿ ನಿರಾಸೆ ಮೂಡಿಸುತ್ತಿದ್ದ ಕ್ರಿಕೆಟಿಗ ಈಗ ಟೀಂ ಇಂಡಿಯಾ ತಂಡಕ್ಕೆ ನಾಯಕನಾಗುವ ರೇಸ್‌ನಲ್ಲಿದ್ದಾರೆ. ಹೌದು. ವೆಸ್ಟ್ ಇಂಡೀಸ್ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಟೀಂ ಇಂಡಿಯಾಕ್ಕೆ ಸರಣಿ ಜಯ ತಂದುಕೊಟ್ಟ ಹಾರ್ದಿಕ್ ಪಾಂಡ್ಯ (Hardik Pandya), ಎಂ.ಎಸ್ ಧೋನಿಯಂತೆ (MS Dhoni) ಸಕ್ಸಸ್‌ಫುಲ್ ಕ್ಯಾಪ್ಟನ್ ಆಗ್ತಾರೆ ಅನ್ನೋ ಕೂಗು ಕೇಳಿಬರ್ತಿದೆ.

    ಟೀಂ ಇಂಡಿಯಾದಲ್ಲಿ (Team India) ಸಂಪೂರ್ಣವಾಗಿ ಟಿ20 ನಾಯಕತ್ವ ವಹಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ವೆಸ್ಟ್ ಇಂಡೀಸ್ (West Indies) ವಿರುದ್ಧ ಕೊನೆಯ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು ಬ್ಯಾಟಿಂಗ್ ಮಾಡಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹಾಗಾಗಿ ಕೊಹ್ಲಿ, ರೋಹಿತ್ ಶರ್ಮಾ ಬಳಿಕ ಹೊಸ ನಾಯಕತ್ವಕ್ಕೆ ಹುಡುಕಾಟ ನಡೆಸಿರುವ ಬಿಸಿಸಿಐಗೆ ಹಾರ್ದಿಕ್ ಪಾಂಡ್ಯ ಪರ ಕೂಗು ಕೇಳಿಬಂದಿದೆ. ಇದನ್ನೂ ಓದಿ: 200 ರನ್‌ಗಳ ಭರ್ಜರಿ ಗೆಲುವು – ವಿಂಡೀಸ್‌ ವಿರುದ್ಧ ಸತತ 13ನೇ ಏಕದಿನ ಸರಣಿ ಗೆದ್ದ ಭಾರತ

    2016ರ ಜನವರಿಯಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ನಡೆದ ಅಂತಾರಾಷ್ಟ್ರೀಯ ಟಿ20 ಸರಣಿ ಮೂಲಕ ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟ ಹಾರ್ದಿಕ್ ಪಾಂಡ್ಯ, ಅದೇ ವರ್ಷ ಅಕ್ಟೋಬರ್‌ನಲ್ಲಿ ಏಕದಿನ ತಂಡಕ್ಕೂ ಪದಾರ್ಪಣೆ ಮಾಡಿದ್ರು. 2017ರಲ್ಲಿ ಟೆಸ್ಟ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೂ ಫಾರ್ಮ್ ಕಂಡುಕೊಳ್ಳದ ಕಾರಣ 2018ರ ಆಗಸ್ಟ್ ನಂತ್ರ ಟೆಸ್ಟ್ ಕ್ರಿಕೆಟ್‌ನಿಂದ ಹೊರಗುಳಿದರು. ಈವರೆಗೆ 11 ಟೆಸ್ಟ್, 77 ಏಕದಿನ ಪಂದ್ಯ, 87 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ಪಾಂಡ್ಯ 123 ಐಪಿಎಲ್ ಪಂದ್ಯಗಳನ್ನಾಡಿದ್ದಾರೆ.

    2022ರಲ್ಲಿ ಐಪಿಎಲ್‌ಗೆ ಸೇರ್ಪಡೆಯಾದ ಗುಜರಾತ್ ಟೈಟಾನ್ಸ್ (Gujarat Taitans) ತಂಡದ ಮೂಲಕ ನಾಯಕತ್ವದ ಜವಾಬ್ದಾರಿ ಹೊತ್ತ ಪಾಂಡ್ಯ ಚೊಚ್ಚಲ ಆವೃತ್ತಿಯಲ್ಲೇ ಟ್ರೋಫಿ ಗೆದ್ದು ನಂಬಿಕೆ ಉಳಿಸಿಕೊಂಡರು. 2023ರ ಆವೃತ್ತಿಯಲ್ಲಿ ಸತತ 2ನೇ ಬಾರಿಗೆ ತಂಡವನ್ನ ಫೈನಲ್ ಹಾದಿಗೆ ಕೊಂಡೊಯ್ದರು. ಪ್ರಸಕ್ತ ವರ್ಷದ ಆರಂಭದಿಂದಲೂ ಸಂಪೂರ್ಣ ಟಿ20 ನಾಯಕತ್ವ ವಹಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಸರಣಿ ಜಯ ತಂದುಕೊಟ್ಟಿದ್ದರು. ಇದೀಗ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ವಿಂಡೀಸ್ ಪರ ಜವಾಬ್ದಾರಿಯುತ ಆಟವಾಡಿದ ಪಾಂಡ್ಯ ಗೆಲುವು ತಂದುಕೊಡುವ ಮೂಲಕ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ಐಷಾರಾಮಿ ಬೇಡ, ಕನಿಷ್ಠ ಸೌಲಭ್ಯವನ್ನು ವೆಸ್ಟ್ ಇಂಡೀಸ್ ಮಾಡಿಲ್ಲ – ಹಾರ್ದಿಕ್ ಪಾಂಡ್ಯ ಗರಂ

    ಮಹಿಯಂತೆ ಮೈಂಡ್‌ಗೇಮ್ ಆಡಿದ್ರಾ ಪಾಂಡ್ಯ?
    ಹಾರ್ದಿಕ್ ಪಾಂಡ್ಯ ಬೆಳವಣಿಗೆಯಿಂದ ಟೀಂ ಇಂಡಿಯಾದಲ್ಲಿ ಹೊಸ ಅಲೆ ಶುರುವಾಗಿದೆ. 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್, 2010ರಲ್ಲಿ ಏಷ್ಯಾಕಪ್ ಹಾಗೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ತಂದುಕೊಟ್ಟ ಮಹಿ ಅವರ ಸ್ಥಾನ ತುಂಬಲು ಪಾಂಡ್ಯ ಸೂಕ್ತ ಅನ್ನೋ ಅಭಿಪ್ರಾಯಗಳೂ ಕೇಳಿ ಬರ್ತಿವೆ. ಏಕೆಂದರೆ ವಿಂಡೀಸ್ ಕೊನೆಯ ಪಂದ್ಯದಲ್ಲಿ ಮೈಂಡ್‌ಗೇಮ್ ಆಡಿದ ಪಾಂಡ್ಯ ಹೊಸ ಮುಖಗಳಿಗೆ ಅವಕಾಶ ಮಾಡಿಕೊಟ್ಟರು. ಆರಂಭಿಕ ಇಶಾನ್ ಕಿಶನ್ ಔಟಾಗುತ್ತಿದ್ದಂತೆ ಋತುರಾಜ್ ಗಾಯಕ್ವಾಡ್‌ಗೆ ಚಾನ್ಸ್ ಕೊಟ್ಟರು. ನಂತರ 4ನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್‌ರನ್ನ ಕಣಕ್ಕಿಳಿಸಿದರು. ನಂತ್ರ ಪಕ್ಕಾ ಪ್ಲ್ಯಾನ್‌ನೊಂದಿಗೆ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಪಾಂಡ್ಯ ಅದ್ಭುತ ಪ್ರದರ್ಶನ ನೀಡಿದರು. ಇದರಿಂದ ಪಾಂಡ್ಯ ಸಹ ಮಹಿಯಂತೆ ಸಕ್ಸಸ್‌ಫುಲ್ ಕ್ಯಾಪ್ಟನ್ ಆಗ್ತಾರೆ ಎನ್ನಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಂಡೀಸ್‌ ವಿರುದ್ಧ ಭಾರತಕ್ಕೆ ಹೀನಾಯ ಸೋಲು – ನಾಯಕತ್ವದ ಹೊಣೆ ಹೊತ್ತ ಪಾಂಡ್ಯ ರಿಯಾಕ್ಷನ್‌ ಏನು?

    ವಿಂಡೀಸ್‌ ವಿರುದ್ಧ ಭಾರತಕ್ಕೆ ಹೀನಾಯ ಸೋಲು – ನಾಯಕತ್ವದ ಹೊಣೆ ಹೊತ್ತ ಪಾಂಡ್ಯ ರಿಯಾಕ್ಷನ್‌ ಏನು?

    ಬ್ರಿಡ್ಜ್‌ಟೌನ್‌: ಟೆಸ್ಟ್‌ ಪಂದ್ಯ ಹಾಗೂ ಮೊದಲ ಏಕದಿನ ಪಂದ್ಯದಲ್ಲಿ ಬಾಳೆಹಣ್ಣು ಸುಲಿದಂತೆ ವಿಂಡೀಸ್‌ (West Indies) ವಿರುದ್ಧ ಜಯ ಸಾಧಿಸಿದ್ದ ಟೀಂ ಇಂಡಿಯಾಕ್ಕೆ (Team India) 2ನೇ ಏಕದಿನ ಪಂದ್ಯದಲ್ಲಿ ಹೀನಾಯ ಸೋಲಾಗಿದೆ. ಈ ಮೂಲಕ ಸತತ 3 ಪಂದ್ಯಗಳಲ್ಲಿ ನೀರಸ ಪ್ರದರ್ಶನ ತೋರಿದ್ದ ವೆಸ್ಟ್ ಇಂಡೀಸ್ ತಂಡ ಕೊನೆಗೂ ಭಾರತದ ವಿರುದ್ಧ ಮೊದಲ ಗೆಲುವು ದಾಖಲಿಸಿ ಸರಣಿಯಲ್ಲಿ 1-1 ರ ಸಮಬಲ ಸಾಧಿಸಿದೆ.

    ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 40.5 ಓವರ್‌ಗಳಲ್ಲಿ 181 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತ್ತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ್ದ ವೆಸ್ಟ್‌ ಇಂಡೀಸ್‌ 36.4 ಓವರ್‌ಗಳಲ್ಲೇ 4 ವಿಕೆಟ್‌ ನಷ್ಟಕ್ಕೆ 182 ರನ್‌ಗಳಿಸಿ 6 ವಿಕೆಟ್‌ಗಳ ಜಯ ಸಾಧಿಸಿತು. ಇದನ್ನೂ ಓದಿ: T20 WorldCup-2024 ಟೂರ್ನಿಯ ದಿನಾಂಕ ಬಹಿರಂಗ – USA, ವಿಂಡೀಸ್‌ ಆತಿಥ್ಯ

    ರೋಹಿತ್‌ ಶರ್ಮಾ (Rohit Sharm) ಹಾಗೂ ವಿರಾಟ್‌ ಕೊಹ್ಲಿ 2ನೇ ಪಂದ್ಯದಲ್ಲಿ ಹೊರಗುಳಿದಿದ್ದರಿಂದ ಹಾರ್ದಿಕ್‌ ಪಾಂಡ್ಯ (Hardik Pandya) ತಂಡದ ನಾಯಕತ್ವ ವಹಿಸಿಕೊಳ್ಳಬೇಕಾಯಿತು. ಆರಂಭಿಕರಾಗಿ ಕಣಕ್ಕಿಳಿದ ಶುಭಮನ್‌ ಗಿಲ್‌ ಹಾಗೂ ಇಶಾನ್‌ ಕಿಶನ್‌ ಜೋಡಿ 16.5 ಓವರ್‌ಗಳಲ್ಲಿ 90 ರನ್‌ಗಳ ಜೊತೆಯಾಟ ನೀಡಿತು. ನಂತರ ಕ್ರೀಸ್‌ಗಿಳಿದವರಲ್ಲಿ ಯಾರೊಬ್ಬರು ಸ್ಥಿರವಾಗಿ ಉಳಿಯದ ಕಾರಣ ಟೀಂ ಇಂಡಿಯಾ ಹೀನಾಯ ಸೋಲಿಗೆ ತುತ್ತಾಯಿತು.

    50 ಓವರ್ ಪೂರ್ಣ ಆಡಲಿಲ್ಲ:
    ಮೊದಲ ಪಂದ್ಯದಲ್ಲೂ ರೋಹಿತ್ ಮತ್ತು ಕೊಹ್ಲಿ ಅವರ ಬ್ಯಾಟಿಂಗ್ ಇಲ್ಲದೇ ಟೀಂ ಇಂಡಿಯಾ 115 ರನ್​ಗಳ ಗುರಿ ತಲುಪಲು ಸಾಕಷ್ಟು ಕಷ್ಟ ಪಡಬೇಕಾಯಿತು. ಮೊದಲ ಪಂದ್ಯದಲ್ಲಿ‌ ರೋಹಿತ್‌ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಇಳಿದಿದ್ದು ವಿಶೇಷವಾಗಿತ್ತು. 2ನೇ ಏಕದಿನ ಪಂದ್ಯದಲ್ಲೂ ಭಾರತದ ಬ್ಯಾಟಿಂಗ್ ಮತ್ತೆ ಕಳಪೆ ಪ್ರದರ್ಶನ ನೀಡಿತು. ಈ ಬಾರಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 40.5 ಓವರ್‌ಗಳಲ್ಲಿ 181 ರನ್‌ಗಳಿಗೆ ಆಲೌಟ್ ಆಯಿತು. ಆದ್ರೆ ಆರಂಭಿಕ ಇಶಾನ್‌ ಕಿಶನ್‌ ಮಾತ್ರ ಬ್ಯಾಕ್‌ ಟು ಬ್ಯಾಕ್‌ ಅರ್ಧಶತಕ ಸಿಡಿಸಿ ಮಿಂಚಿದರು. ಇದನ್ನೂ ಓದಿ: ವಿಶ್ವಕಪ್‌ಗೆ ಅರ್ಹತೆ ಪಡೆಯದ ವಿಂಡೀಸ್‌ ವಿರುದ್ಧ ತಿಣುಕಾಡಿ ಗೆದ್ದ ಭಾರತ

    ಟೀಂ ಇಂಡಿಯಾ ಪರ ಇಶಾನ್‌ ಕಿಶನ್‌ 55 ರನ್‌ (55 ಎಸೆತ, 6 ಬೌಂಡರಿ, 1 ಸಿಕ್ಸರ್)‌, ಶುಭಮನ್‌ ಗಿಲ್‌ 34 ರನ್‌ (49 ಎಸೆತ, 5 ಬೌಂಡರಿ) ಸೂರ್ಯಕುಮಾರ್‌ ಯಾದವ್‌ 24 ರನ್‌ ಗಳಿಸಿದರು. ಇನ್ನೂ ವಿಂಡೀಸ್‌ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಶಾಯ್‌ ಹೋಪ್‌ (Shai Hope) ಅಜೇಯ 63 ರನ್‌ (80 ಎಸೆತ, 2 ಬೌಂಡರಿ, 2 ಸಿಕ್ಸ್‌), ಕೈಲ್‌ ಮೇಯರ್ಸ್‌ 36 ರನ್‌ (28 ಎಸೆತ, 4 ಬೌಂಡರಿ, 2 ಸಿಕ್ಸರ್‌) ಗಳಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.

    ಈ ಪಂದ್ಯದಲ್ಲಿ ಎರಡೂ ತಂಡಗಳಲ್ಲಿಯೂ ಬೌಲರ್‌ಗಳು ಉತ್ತಮ ಹಿಡಿತ ಸಾಧಿಸಿದ್ದರು ವಿಂಡೀಸ್‌ ಪರ ಗುಡಾಕೇಶ್ ಮೋತಿ, ರೊಮಾರಿಯೋ ಶೆಫರ್ಡ್ ತಲಾ ಮೂರು ವಿಕೆಟ್‌ ಪಡೆದರೆ, ಟೀಂ ಇಂಡಿಯಾ ಪರ ಆಲ್‌ರೌಂಡರ್‌ ಶಾರ್ದೂಲ್‌ ಠಾಕೂರ್‌ 3 ವಿಕೆಟ್‌ ಪಡೆದು ಮಿಂಚಿದರು.

    ಪಂದ್ಯದ ಬಳಿಕ ಮಾತನಾಡಿದ ಹಾರ್ದಿಕ್‌ ಪಾಂಡ್ಯ, ನಾವು ಅಂದುಕೊಂಡ ರೀತಿಯಲ್ಲಿ ಬ್ಯಾಟಿಂಗ್ ಮಾಡಲಿಲ್ಲ. ಮೊದಲ ಇನಿಂಗ್ಸ್‌ ಬಳಿಕ 2ನೇ ಇನ್ನಿಂಗ್ಸ್​ಗೆ ವಿಕೆಟ್‌ ಉತ್ತಮವಾಗಿತ್ತು. ಈ ಸೋಲಿನಿಂದ ನಿರಾಸೆಯಾಗಿದೆ. ಆದ್ರೆ ಅನೇಕ ವಿಷಯಗಳನ್ನ ಕಲಿತಿದ್ದೇವೆ. ವಿಶ್ವಕಪ್‌ಗೆ ಸಿದ್ಧವಾಗಲು ನಾನು ಇನ್ನಷ್ಟು ಹೆಚ್ಚು ಓವರ್‌ಗಳನ್ನ ಬೌಲ್ ಮಾಡಬೇಕಾಗಿದೆ. ವಿಶ್ವಕಪ್‌ ವೇಳೆಗೆ ಎಲ್ಲವೂ ಸರಿ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇದು ಯಾವ್ ಶಾಟ್ ಗುರು – ಪಂತ್ ಕಾಲೆಳೆದ ನೆಟ್ಟಿಗರು

    ಇದು ಯಾವ್ ಶಾಟ್ ಗುರು – ಪಂತ್ ಕಾಲೆಳೆದ ನೆಟ್ಟಿಗರು

    ಫ್ಲೋರಿಡಾ: ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ರಿಷಭ್ ಪಂತ್ ಬಾರಿಸಿದ ಬೌಂಡರಿ ಶಾಟ್ ಒಂದು ಗಮನ ಸೆಳೆಯುತ್ತಿದೆ.

    ಪಂತ್ ಹೊಡಿಬಡಿ ದಾಂಡಿಗ. ಕ್ರೀಸ್‌ಗೆ ಬಂದ ನಂತರ ಅಬ್ಬರ ಬ್ಯಾಟಿಂಗ್ ಮೂಲಕ ರನ್ ಹೆಚ್ಚಿಸುವ ಆಕ್ರಮಣ ಶೈಲಿಯ ಆಟಕ್ಕೆ ಪಂತ್ ಫೇಮಸ್. ವಿಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ 61 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡ ಬಳಿಕ ಕ್ರೀಸ್‌ಗೆ ಆಗಮಿಸಿದ ಪಂತ್ ಆರಂಭದಿಂದಲೇ ಅಬ್ಬರದಾಟ ಆರಂಭಿಸಿದರು. ವಿಂಡೀಸ್ ಬೌಲರ್‌ಗಳಿಗೆ ಬೌಂಡರಿಗಳ ರುಚಿ ತೋರಿಸುತ್ತ ಸಾಗಿದ ಪಂತ್, ಮೆಕಾಯ್ ಎಸೆದ ಎಸೆತ ಒಂದಕ್ಕೆ ಎಕ್ಸ್ಟ್ರ ಕವರ್ ಶಾಟ್ ಬೌಂಡರಿ ಪ್ರೇಕ್ಷಕರ ಮನಗೆದ್ದಿತ್ತು. ಪಂತ್ ಒಂದು ಕಾಲೆತ್ತಿ ಒಂಟಿ ಕಾಲಿನಲ್ಲಿ ನಿಂತು ಬೌಂಡರಿ ಬಾರಿಸಿದ ಭಂಗಿ ಕಂಡು ಪ್ರೇಕ್ಷಕರು ಬೆರಗಾದರು. ಇತ್ತ ನೆಟ್ಟಿಗರು ಇದು ಯಾವ್ ಶಾಟ್ ಗುರು, ಬ್ಯಾಟಿಂಗ್‍ನಲ್ಲಿ ಯೋಗ ಮಾಡಿದ ಪಂತ್ ಹೀಗೆ ಬಗೆ ಬಗೆಯ ಕಾಮೆಂಟ್ ಮೂಲಕ ಕಾಲೆಳೆದಿದ್ದಾರೆ. ಇದನ್ನೂ ಓದಿ: ಸಿಕ್ಸ್‌ ಸಿಡಿಸಿ ಅಫ್ರಿದಿಯನ್ನು ಹಿಂದಿಕ್ಕಿದ ಹಿಟ್‌ಮ್ಯಾನ್‌ – ಭಾರತಕ್ಕೆ ಸರಣಿ ಜಯ

    https://twitter.com/__memeheist__/status/1556123248256897024

    ಇತ್ತ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್‍ಗಳಿಸಿತು. 192 ರನ್‍ಗಳ ಗುರಿಯನ್ನು ಪಡೆದ ವಿಂಡೀಸ್ 19.1 ಓವರ್‌ಗಳಲ್ಲಿ 132 ರನ್‍ಗಳಿಗೆ ಆಲೌಟ್ ಆಯ್ತು. ಈ ಮೂಲಕ ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ ಟೀಂ ಇಂಡಿಯಾ ವಿಂಡೀಸ್ ವಿರುದ್ಧ 59 ರನ್‍ಗಳ ಜಯ ಸಾಧಿಸಿ 5 ಪಂದ್ಯಗಳ ಟಿ20 ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿದೆ. ಇದನ್ನೂ ಓದಿ: CWG 2022: ಚಿನ್ನಕ್ಕೆ ಮುತ್ತಿಟ್ಟ ರವಿ ಕುಮಾರ್ ದಹಿಯಾ, ವಿನೇಶ್ ಫೋಗಟ್ – ಪೂಜಾ ಗೆಹ್ಲೋಟ್‍ಗೆ ಕಂಚು

    Live Tv
    [brid partner=56869869 player=32851 video=960834 autoplay=true]