Tag: INDvsBAN

  • ಬೌಲರ್‌ಗಳ ದಾಳಿಗೆ ಬಾಂಗ್ಲಾ ಧೂಳಿಪಟ – ಪಾಂಡ್ಯ ಸೂಪರ್‌ ಸಿಕ್ಸರ್; ಭಾರತಕ್ಕೆ 7 ವಿಕೆಟ್‌ಗಳ ಜಯ

    ಬೌಲರ್‌ಗಳ ದಾಳಿಗೆ ಬಾಂಗ್ಲಾ ಧೂಳಿಪಟ – ಪಾಂಡ್ಯ ಸೂಪರ್‌ ಸಿಕ್ಸರ್; ಭಾರತಕ್ಕೆ 7 ವಿಕೆಟ್‌ಗಳ ಜಯ

    ಗ್ವಾಲಿಯರ್‌: ಅರ್ಷ್‌ದೀಪ್‌, ಮಯಾಂಕ್‌, ವರುಣ್‌ ಮಾರಕ ಬೌಲಿಂಗ್‌ ದಾಳಿ ಹಾಗೂ ಸಂಘಟಿತ ಬ್ಯಾಟಿಂಗ್‌ ಪ್ರದರ್ಶನದೊಂದಿಗೆ ಟೀಂ ಇಂಡಿಯಾ (Team India), ಬಾಂಗ್ಲಾದೇಶದ ವಿರುದ್ಧ 7 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

    ಇಲ್ಲಿನ ಶ್ರೀಮಂತ್ ಮಾಧವರಾವ್ ಸಿಂಧಿಯಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ (Bangladesh) 19.5 ಓವರ್‌ಗಳಲ್ಲಿ 127 ರನ್‌ಗಳಿಗೆ ಆಲೌಟ್‌ ಆಯಿತು. ಅಲ್ಪಮೊತ್ತದ ಗುರಿ ಪಡೆದ ಭಾರತ ತಂಡ ಕೇವಲ 11.5 ಓವರ್‌ಗಳಲ್ಲೇ 3 ವಿಕೆಟ್‌ ನಷ್ಟಕ್ಕೆ 132 ರನ್‌ ಚಚ್ಚಿ ಗೆಲುವಿನ ನಗೆ ಬೀರಿತು.

    ಸುಲಭ ಮೊತ್ತದ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ಬ್ಯಾಟರ್‌ಗಳು ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿದರು. ಸಂಜು ಸ್ಯಾಮ್ಸನ್‌ ಹಾಗೂ ಅಭಿಷೇಕ್‌ ಶರ್ಮಾ ಜೋಡಿ ಮೊದಲ ವಿಕೆಟ್‌ಗೆ 2 ಓವರ್‌ಗಳಲ್ಲಿ 25 ರನ್‌ ಚಚ್ಚಿತ್ತು. ಈ ವೇಳೆ ಅಭಿಷೇಕ್‌ ಶರ್ಮಾ ರನೌಟ್‌ಗೆ ತುತ್ತಾಗಿ ನಿರಾಸೆ ಅನುಭವಿಸಿದ್ರು.

    ನಂತರ ಸಂಜು ಸ್ಯಾಮ್ಸನ್‌, ಕ್ಯಾಪ್ಟನ್‌ ಸೂರ್ಯಕುಮಾರ್‌ ಯಾದವ್‌ (Suryakumar Yadav), ಹಾರ್ದಿಕ್‌ ಪಾಂಡ್ಯ (Hardik Pandya) ಭರ್ಜರಿ ಸಿಕ್ಸರ್‌, ಬೌಂಡರಿಗಳ ಸುರಿಮಳೆ ಸುರಿಸಿ ಗೆಲುವಿನ ಹಾದಿಯನ್ನು ಸುಗಮವಾಗಿಸಿದರು. 243.75 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಹಾರ್ದಿಕ್‌ ಪಾಂಡ್ಯ ಕೇವಲ 16 ಎಸೆತಗಳಲ್ಲಿ 39 ರನ್‌ (5 ಬೌಂಡರಿ, 2 ಸಿಕ್ಸರ್)‌ ಚಚ್ಚಿದರೆ, ಸೂರ್ಯಕುಮಾರ್‌ ಯಾದವ್‌ 14 ಎಸೆತಗಳಲ್ಲಿ 29 ರನ್‌, ಸಂಜು ಸ್ಯಾಮ್ಸನ್‌ 19 ಎಸೆತಗಳಲ್ಲಿ 29 ರನ್‌, ಅಭಿಷೇಕ್‌ ಶರ್ಮಾ 7 ಎಸೆತಗಳಲ್ಲಿ 16 ರನ್‌ ಹಾಗೂ ನಿತೀಶ್‌ ಕುಮಾರ್‌ ರೆಡ್ಡಿ 16 ರನ್‌ ಗಳಿಸಿ ಮಿಂಚಿದರು.

    ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ ಭಾರತದ ಬೌಲರ್‌ಗಳ ದಾಳಿಗೆ ಧೂಳಿಪಟವಾಯಿತು. ಮೊದಲ ಓವರ್‌ನಿಂದಲೇ ಬಾಂಗ್ಲಾ ಪೆವಿಲಿಯನ್‌ ಪರೇಡ್‌ ನಡೆಸಿತು. ವೇಗಿ ಅರ್ಷ್‌ದೀಪ್‌ ಸಿಂಗ್‌, ಮಯಾಂಕ್‌ ಯಾದವ್‌, ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಬಾಂಗ್ಲಾ ಬ್ಯಾಟರ್‌ಗಳ ವಿರುದ್ಧ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. ನಾಯಕ ಜನ್ಮುಲ್ಲಾ ಹೊಸೈನ್‌ ಸ್ಯಾಂಟೋ ಹಾಗೂ ಮೆಹಿದಿ ಹಸನ್ ಮಿರಾಜ್ ಹೊರತುಪಡಿಸಿದ್ರೆ, ಉಳಿದ ಆಟಗಾರರು ಸಂಪೂರ್ಣ ಮಕಾಡೆ ಮಲಗಿದರು. ಬಾಂಗ್ಲಾ ಪರ ಮೆಹಿದಿ ಹಸನ್ ಮಿರಾಜ್ 32 ಎಸೆತಗಳಲ್ಲಿ 35 ರನ್‌ ಗಳಿಸಿದ್ರೆ, ಸ್ಯಾಂಟೋ 25 ಎಸೆತಗಳಲ್ಲಿ 27 ರನ್‌ ಬಾರಿಸಿದರು. ಉಳಿದ ಆಟಗಾರರು ಅಲ್ಪಮೊತ್ತಕ್ಕೆ ಪೆವಿಲಿಯನ್‌ ಸೇರಿದರು.

    ಇನ್ನೂ ಬಾಂಗ್ಲಾ ಬ್ಯಾಟರ್‌ಗಳ ವಿರುದ್ಧ ಪ್ರಾಬಲ್ಯ ಮೆರೆದ ಭಾರತದ ಪರ ಅರ್ಷ್‌ದೀಪ್‌ ಸಿಂಗ್‌, ವರುಣ್‌ ಚಕ್ರವರ್ತಿ ತಲಾ 3 ವಿಕೆಟ್‌ ಕಿತ್ತರೆ, ಹಾರ್ದಿಕ್‌ ಪಾಂಡ್ಯ, ಮಯಾಂಕ್‌ ಯಾದವ್‌, ವಾಷಿಂಗ್ಟನ್‌ ಸುಂದರ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಚೊಚ್ಚಲ ಪಂದ್ಯದಲ್ಲೇ ದಾಖಲೆ ಬರೆದ ಮಯಾಂಕ್‌:
    ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ರಾಕೆಟ್‌ ವೇಗಿ ಮಯಾಂಕ್‌ ದಾಖಲೆಯ ಪುಟ ತೆರೆದಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಪವರ್‌ ಪ್ಲೇನಲ್ಲಿ ಮೇಡಿನ್‌ ಓವರ್‌ ಮಾಡಿ ದಾಖಲೆ ಪುಟ ಸೇರಿದ್ದಾರೆ.

  • ಭಾರತಕ್ಕೆ 188 ರನ್‌ಗಳ ಗೆಲುವು – ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆ

    ಭಾರತಕ್ಕೆ 188 ರನ್‌ಗಳ ಗೆಲುವು – ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆ

    ಢಾಕಾ: ಟೀಂ ಇಂಡಿಯಾದ ಕುಲ್‌ದೀಪ್ ಯಾದವ್ (Kuldeep Yadav), ಅಕ್ಷರ್ ಪಟೇಲ್ (Axar Patel) ಸ್ಪಿನ್ ಬೌಲಿಂಗ್ ದಾಳಿ ಹಾಗೂ ಶುಭಮನ್‌ಗಿಲ್ (Shubman Gill), ಚೇತೇಶ್ವರ್ ಪೂಜಾರ (Cheteshwar Pujara) ಭರ್ಜರಿ ಶತಕದ ಕಮಾಲ್‌ನಿಂದ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ (Test Cricket) ಪಂದ್ಯದಲ್ಲಿ ಭಾರತ 188 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

    ಭಾರತದ ಬೌಲರ್‌ಗಳ ಸಂಘಟಿತ ದಾಳಿಯ ಫಲವಾಗಿ 4ನೇ ದಿನದಾಟದ ಅಂತ್ಯಕ್ಕೆ 102 ಓವರ್‌ಗಳಲ್ಲಿ ಬಾಂಗ್ಲಾ 6 ವಿಕೆಟ್ ನಷ್ಟಕ್ಕೆ 272 ಗಳಿಸಿ 241 ರನ್‌ಗಳ ಹಿನ್ನಡೆಯಲ್ಲಿತ್ತು. ಇಂದು ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ 113.2 ಓವರ್‌ಗಳಲ್ಲಿ 324 ರನ್‌ಗಳಿಗೆ ಸರ್ವಪತನಕಂಡಿದೆ. ಭಾರತ ಭರ್ಜರಿ 188 ರನ್‌ಗಳ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಇದನ್ನೂ ಓದಿ: ಗಿಲ್ ಚೊಚ್ಚಲ 100, ಪೂಜಾರ ವೇಗದ ಶತಕ – ಬಾಂಗ್ಲಾಗೆ ಬೃಹತ್ ಟಾರ್ಗೆಟ್

    4ನೇ ದಿನದಾಟದ ಅಂತ್ಯಕ್ಕೆ ಬಾಂಗ್ಲಾ 6 ವಿಕೆಟ್ ನಷ್ಟಕ್ಕೆ 272 ರನ್ ಬಾರಿಸಿತ್ತು, ನಾಯಕ ಶಕೀಬ್ ಅಲ್ ಹಸನ್ (Shakib Al Hasan) ಅಜೇಯ 40 ರನ್ (69 ಎಸೆತ, 3 ಬೌಂಡರಿ, 2 ಸಿಕ್ಸ್) ಮತ್ತು ಮೆಹಿದಿ ಹಸನ್ ಮಿರಾಜ್ 9 ರನ್ ಸಿಡಿಸಿ 5ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಬಾಂಗ್ಲಾ (Bangladesh) ಗೆಲುವಿಗೆ 241 ರನ್ ಬಾಕಿಯಿತ್ತು. ಇಂದು ಬಾಂಗ್ಲಾದೇಶ ಗೆಲುವಿನ ಭರವಸೆಯೊಂದಿಗೆ ಕ್ರೀಸ್‌ಗಿಳಿದಿತ್ತು. ಆದರೆ ಟೀಂ ಇಂಡಿಯಾ ಬೌಲರ್‌ಗಳ ಸ್ಪಿನ್ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ತಂಡ 113.2 ಓವರ್‌ಗಳಿಗೆ ಸರ್ವಪತನ ಕಂಡಿತು.

    ಕೊನೆಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ 11.2 ಓವರ್‌ಗಳಲ್ಲಿ 52 ರನ್ ಗಳಿಸುವ ವೇಳೆಗೆ ಭಾರತ ಎದುರಾಳಿಗಳನ್ನು ಕಟ್ಟಿಹಾಕಿತು. 2ನೇ ಇನ್ನಿಂಗ್ಸ್‌ನಲ್ಲಿ ಜಾಕಿರ್ ಹಸನ್ 224 ಎಸೆತಗಳಲ್ಲಿ 100 ರನ್ (13 ಬೌಂಡರಿ, 1 ಸಿಕ್ಸರ್) ಸಿಡಿದರು. ನಾಯಕ ಶಕೀಬ್ ಅಲ್ ಹಸನ್ 108 ಎಸೆತಗಳಲ್ಲಿ ಸ್ಫೋಟಕ 84 ರನ್ (6 ಬೌಂಡರಿ, 6 ಸಿಕ್ಸರ್) ಚಚ್ಚಿ ಔಟಾದರು. ನಂತರದಲ್ಲಿ ಕ್ರೀಸ್‌ಗಿಳಿದ ಆಟಗಾರರು ಸ್ಥಿರವಾಗಿ ನಿಲ್ಲದ ಕಾರಣ ಬಾಂಗ್ಲಾದೇಶ ಸೋಲಿಗೆ ಶರಣಾಯಿತು. ಇದನ್ನೂ ಓದಿ: ಬಾಂಗ್ಲಾದ ಭಾರ ಹೊತ್ತ ಜಾಕಿರ್ – ಜಯದ ಹೊಸ್ತಿಲಲ್ಲಿ ಭಾರತ

    ಕುಲ್‌ದೀಪ್, ಅಕ್ಷರ್ ಸ್ಪಿನ್ ಕಮಾಲ್:
    ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ನಲ್ಲಿ 40 ರನ್ ಗಳಿಸಿ, ಬೌಲಿಂಗ್‌ನಲ್ಲಿ 5 ವಿಕೆಟ್ ಕಬಳಿಸಿದ ಕುಲ್‌ದೀಪ್ 2ನೇ ಇನ್ನಿಂಗ್ಸ್ನಲ್ಲೂ 3 ವಿಕೆಟ್ ಕಬಳಿಸುವ ಮೂಲಕ ಕಮಾಲ್ ಮಾಡಿದರು. ಇನ್ನೂ ಮೊದಲ ಇನ್ನಿಂಗ್ಸ್‌ನಲ್ಲಿ ಒಂದು ವಿಕೆಟ್‌ಗೆ ತೃಪ್ತಿ ಪಡೆಕೊಂಡಿದ್ದ ಅಕ್ಷರ್‌ಪಟೇಲ್ 2ನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದು ಮಿಂಚಿದರು.

    ಬಾಂಗ್ಲಾ ವಿರುದ್ಧ 2ನೇ ಇನ್ನಿಂಗ್ಸ್‌ನಲ್ಲೂ ಭಾರತದ ಬ್ಯಾಟ್ಸ್‌ಮ್ಯಾನ್‌ ತಮ್ಮ ಉತ್ತಮ ಲಯ ಮುಂದುವರಿಸಿದ್ದರು. ಭಾರತ ಪರ ಶುಭಮನ್ ಗಿಲ್ 110 ರನ್ (152 ಎಸೆತ, 10 ಬೌಂಡರಿ, 3 ಸಿಕ್ಸ್) ಚಚ್ಚಿ ತಮ್ಮ ಚೊಚ್ಚಲ ಶತಕ ಪೂರೈಸಿದರು. ಇನ್ನೊಂದೆಡೆ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ವಂಚಿತರಾಗಿದ್ದ ಪೂಜಾರ 2ನೇ ಇನ್ನಿಂಗ್ಸ್‌ನಲ್ಲಿ 102 ರನ್ (130 ಎಸೆತ, 13 ಬೌಂಡರಿ) ಬಾರಿಸಿ ಶತಕ ಪೂರೈಸಿಕೊಂಡರು. ಇದು ಪೂಜಾರ ಅವರ ಟೆಸ್ಟ್ ವೃತ್ತಿ ಜೀವನದ ವೇಗದ ಹಾಗೂ 19ನೇ ಶತಕವಾಗಿದೆ. ಪೂಜಾರ ಶತಕ ಸಿಡಿಸುತ್ತಿದ್ದಂತೆ 61.4 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 258 ರನ್ ಬಾರಿಸಿದ್ದಾಗ ಭಾರತ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.

    Live Tv
    [brid partner=56869869 player=32851 video=960834 autoplay=true]

  • ವಿರಾಟ್ ಶತಕದ ಸರದಾರ – ಸಚಿನ್ ನಂತರ 2ನೇ ಸ್ಥಾನದಲ್ಲಿ ಕೊಹ್ಲಿ

    ವಿರಾಟ್ ಶತಕದ ಸರದಾರ – ಸಚಿನ್ ನಂತರ 2ನೇ ಸ್ಥಾನದಲ್ಲಿ ಕೊಹ್ಲಿ

    ಢಾಕಾ: ಬಾಂಗ್ಲಾದೇಶ (BanglaDesh) ವಿರುದ್ಧ ನಡೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಟೀಂ ಇಂಡಿಯಾ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (International Cricket) ಅತಿಹೆಚ್ಚು ಶತಕ ಸಿಡಿಸಿದ ವಿಶ್ವದ ಹಾಗೂ ಭಾರತದ 2ನೇ ಆಟಗಾರನಾಗಿದ್ದಾರೆ.

    ಬಾಂಗ್ಲಾದೇಶ ವಿರುದ್ಧದ ರಣರೋಚಕ ಪಂದ್ಯದಲ್ಲಿ 91 ಎಸೆತಗಳನ್ನು ಎದುರಿಸಿದ ಕಿಂಗ್ ಕೊಹ್ಲಿ 2 ಸಿಕ್ಸರ್ ಹಾಗೂ 11 ಬೌಂಡರಿಗಳು ಸೇರಿ 113 ರನ್ ಕಲೆಹಾಕಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ತಂಡದ ಕೋಚ್ ರಿಕಿ ಪಾಂಟಿಂಗ್ (Ricky Ponting) ಅವರ ದಾಖಲೆಯನ್ನ ಪುಡಿ ಮಾಡಿದ್ದಾರೆ. ಇದನ್ನೂ ಓದಿ: T20 ವಿಶ್ವಕಪ್‍ನಲ್ಲಿ ಕೊಹ್ಲಿ ಕಿಂಗ್ – ನೂತನ ವಿಶ್ವದಾಖಲೆ

    ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಶತಕ ಬಾರಿಸಿದ ಬ್ಯಾಟ್ಸ್‌ಮ್ಯಾನ್‌ಗಳ ಪಟ್ಟಿಯಲ್ಲಿ ಇದೀಗ ವಿರಾಟ್ ಕೊಹ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ (ODI Cricket) 100 ಶತಕಗಳನ್ನು (ಟೆಸ್ಟ್‌ನಲ್ಲಿ 51, ಏಕದಿನ 49) ಗಳಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ವಿಶ್ವದ ನಂ.1 ಸ್ಥಾನದಲ್ಲಿದ್ದಾರೆ. ಇನ್ನೂ 71 ಶತಕ (ಟೆಸ್ಟ್‌ನಲ್ಲಿ  41, ಏಕದಿನ 30) ಬಾರಿಸಿದ್ದ ರಿಕಿ ಪಾಂಟಿಂಗ್ 2ನೇ ಸ್ಥಾನದಲ್ಲಿದ್ದರು. ಇದೀಗ 72 ಶತಕ (ಟೆಸ್ಟ್ 27, ಏಕದಿನದಲ್ಲಿ 44) ಬಾರಿಸಿ ವಿರಾಟ್ ಕೊಹ್ಲಿ ರಿಕಿ ಪಾಂಟಿಂಗ್ ದಾಖಲೆಯನ್ನ ಸರಿಗಟ್ಟಿದ್ದಾರೆ. ಅಲ್ಲದೇ ಈವರೆಗೆ 1,172 ಬೌಂಡರಿಗಳನ್ನು ಸಿಡಿಸಿ ಅತ್ಯಧಿಕ ಬೌಂಡರಿ ಬಾರಿಸಿದ ವಿಶ್ವದ 5ನೇ ಆಟಗಾರನಾಗಿದ್ದಾರೆ. ಇದನ್ನೂ ಓದಿ: India vs Bangladesh 3rd ODI – ಭಾರತಕ್ಕೆ 227 ರನ್‌ಗಳ ಭರ್ಜರಿ ಜಯ

    ಬಾಂಗ್ಲಾದೇಶ ವಿರುದ್ಧ ನಡೆದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಟಾಸ್ ಸೋತು ಕ್ರೀಸ್‌ಗಿಳಿದ ಟೀಂ ಇಂಡಿಯಾ (Team India) 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 409 ರನ್ ಗಳಿಸಿತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಬಾಂಗ್ಲಾ ತಂಡ 34 ಓವರ್‌ಗಳಲ್ಲಿ 182 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತ 227 ರನ್‌ಗಳ ಬೃಹತ್ ಮೊತ್ತದ ಅಂತರದಲ್ಲಿ ಜಯ ಸಾಧಿಸಿತು.

    Live Tv
    [brid partner=56869869 player=32851 video=960834 autoplay=true]

  • ಇಶಾನ್ ಕಿಶನ್ ಒಂದೇ ದ್ವಿಶತಕಕ್ಕೆ ಹಲವು ದಾಖಲೆಗಳು ಉಡೀಸ್ – ಕೊಹ್ಲಿಗೆ ಥ್ಯಾಂಕ್ಸ್

    ಇಶಾನ್ ಕಿಶನ್ ಒಂದೇ ದ್ವಿಶತಕಕ್ಕೆ ಹಲವು ದಾಖಲೆಗಳು ಉಡೀಸ್ – ಕೊಹ್ಲಿಗೆ ಥ್ಯಾಂಕ್ಸ್

    ಢಾಕಾ: ಬಾಂಗ್ಲಾದೇಶ (Bangladesh) ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ 227 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಟೀಂ ಇಂಡಿಯಾ ಆಟಗಾರರಾದ ಇಶಾನ್ ಕಿಶನ್ (Ishan Kishan) ಹಾಗೂ ವಿರಾಟ್ ಕೊಹ್ಲಿ (Virat Kohli) ಅವರ ಸಿಡಿಲಬ್ಬರದ ಬ್ಯಾಟಿಂಗ್‌ಗೆ ಅನೇಕ ವಿಶ್ವದಾಖಲೆಗಳು ನುಚ್ಚುನೂರಾಗಿವೆ. ಆದ್ರೆ ಇಶಾನ್ ಕಿಶನ್ ತನ್ನ ದಾಖಲೆಯ ಕ್ರೆಡಿಟ್ ಕಿಂಗ್ ಕೊಹ್ಲಿಗೆ ಸಲ್ಲಬೇಕು ಎಂದಿದ್ದಾರೆ.

    ಚೊಚ್ಚಲ ಶತಕವೇ ದ್ವಿಶತಕ:
    ಬಾಂಗ್ಲಾ ವಿರುದ್ಧ ಇಶಾನ್ 85 ಎಸೆತಗಳಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ಬಳಿಕ ತಮ್ಮ ಬ್ಯಾಟಿಂಗ್ ಅಬ್ಬರ ಮುಂದುವರಿಸಿದ ಕಿಶನ್ ಚೊಚ್ಚಲ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಈ ಮೊದಲು ಜಿಂಬಾಬ್ವೆ ಕ್ರಿಕೆಟಿಗ ಚಾರ್ಲ್ಸ್ ಕೊವೆಂಟ್ರಿ ಚೊಚ್ಚಲ ಶತಕದಲ್ಲೇ ಅಜೇಯ 194 ರನ್ ಬಾರಿಸಿದ್ದು ಇಲ್ಲಿಯವರೆಗಿನ ಗರಿಷ್ಠ ಸ್ಕೋರ್ ಆಗಿತ್ತು. ಇದನ್ನೂ ಓದಿ: ಸಿಕ್ಸರ್, ಬೌಂಡರಿಗಳ ಸುರಿಮಳೆ – ಇಶಾನ್ ಕಿಶನ್ ಸ್ಫೋಟಕ ದ್ವಿಶತಕ

    ಶರವೇಗದ ದ್ವಿಶತಕ:
    ಇಶಾನ್ ಕಿಶನ್ ಕೇವಲ 126 ಎಸೆತಗಳಲ್ಲಿ ದ್ವಿಶತಕ ಬಾರಿಸುವ ಮೂಲಕ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ಅತಿವೇಗದ ದ್ವಿಶತಕದ ದಾಖಲೆಯನ್ನು ಉಡೀಸ್ ಮಾಡಿದ್ದಾರೆ. ಈ ಮೊದಲು ಕ್ರಿಸ್ ಗೇಲ್ 2015ರ ಏಕದಿನ ವಿಶ್ವಕಪ್‌ನಲ್ಲಿ (ODI WorldCup) ಜಿಂಬಾಬ್ವೆ ಎದುರು 138 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ್ದರು. ಇದನ್ನೂ ಓದಿ: ರೋಹಿತ್ ಶರ್ಮಾ ಈಗ ಸಿಕ್ಸರ್ ವೀರ – ಟಾಪ್ 2 ಸ್ಥಾನದಲ್ಲಿ ಹಿಟ್‌ಮ್ಯಾನ್

    ಅತ್ಯಂತ ಕಿರಿಯ ಕ್ರಿಕೆಟಿಗ:
    24 ವರ್ಷದ ಇಶಾನ್ ಕಿಶನ್ ಏಕದಿನ ಕ್ರಿಕೆಟ್‌ನಲ್ಲಿ (Cricket) ದ್ವಿಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಈ ಮೊದಲು ರೋಹಿತ್ ಶರ್ಮಾ 26 ವರ್ಷ ಇದ್ದಾಗ 2013ರಲ್ಲಿ ಆಸ್ಟ್ರೇಲಿಯಾ ಎದುರು ಮೊದಲ ದ್ವಿಶತಕ ಬಾರಿಸಿದ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದರು. ಆ ದಾಖಲೆಯಲ್ಲು ಇಶಾನ್ ಶೈನ್ ಆಗಿದ್ದಾರೆ. ಇದನ್ನೂ ಓದಿ: ಗಾಯವನ್ನೂ ಲೆಕ್ಕಿಸದೇ ಆಡಿದ ಹಿಟ್‌ಮ್ಯಾನ್‌ ಹೋರಾಟ ವ್ಯರ್ಥ – ಬಾಂಗ್ಲಾದೇಶಕ್ಕೆ ಏಕದಿನ ಸರಣಿ

    ಒಂಭತ್ತೇ ಇನ್ನಿಂಗ್ಸ್‌ನಲ್ಲಿ ದಾಖಲೆ:
    ಇಶಾನ್ ಕಿಶನ್ ಭಾರತ ಪರ ಅತಿ ಕಡಿಮೆ 09 ಇನ್ನಿಂಗ್ಸ್ಗಳನ್ನಾಡಿ ಚೊಚ್ಚಲ ದ್ವಿಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಈ ಮೊದಲು ರೋಹಿತ್ ಶರ್ಮಾ 103ನೇ ಇನಿಂಗ್ಸ್‌ನಲ್ಲಿ ಮೊದಲ ಏಕದಿನ ದ್ವಿಶತಕ ಸಿಡಿಸಿದ್ದರು. ಆದರೆ ಇದೀಗ ಇಶಾನ್ ಕಿಶನ್ ಕೇವಲ 9ನೇ ಇನ್ನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ್ದಾರೆ.

    290 ರನ್‌ಗಳ ಜೊತೆಯಾಟದ ದಾಖಲೆ:
    ಬಾಂಗ್ಲಾದೇಶ ವಿರುದ್ಧ ಅಂತಿಮ ಪಂದ್ಯದಲ್ಲಿ ಇಶಾನ್ ಕಿಶನ್ ಹಾಗೂ ವಿರಾಟ್ ಕೊಹ್ಲಿ ಜೋಡಿ 290 ರನ್‌ಗಳ ಜೊತೆಯಾಟವಾಡುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಬಾಂಗ್ಲಾ ವಿರುದ್ಧ ಗರಿಷ್ಠ ರನ್ ಜೊತೆಯಾಟವಾಡಿದ ವಿಶ್ವದ ಟಾಪ್-10 ಜೋಡಿಯಲ್ಲಿ ಒಂದಾಗಿದೆ. ಕ್ರಿಸ್‌ಗೇಲ್ ಹಾಗೂ ಎಂ.ಎನ್ ಸ್ಯಾಮುವೆಲ್ ಜಿಂಬಾಬ್ವೆ ವಿರುದ್ಧ 2015ರ ಪಂದ್ಯದಲ್ಲಿ ಆಡಿದ 372 ರನ್‌ಗಳ ಜೊತೆಯಾಟ ಈವರೆಗಿನ ವಿಶ್ವದಾಖಲೆಯಾಗಿದೆ. ಭಾರತೀಯ ಆಟಗಾರರ ಪೈಕಿ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ 331 ರನ್, ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ 318 ರನ್‌ಗಳ ಜೊತೆಯಾಟವಾಡಿದ್ದು ವಿಶ್ವದಾಖಲೆಯಾಗಿದೆ. ಇದೀಗ ಈ ಸಾಲಿನ ಟಾಪ್-10 ಜೋಡಿಯಲ್ಲಿ ವಿರಾಟ್‌ಕೊಹ್ಲಿ ಹಾಗೂ ಇಶಾನ್ ಕಿಶನ್ ಸ್ಥಾನ ಪಡೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿಕ್ಸರ್, ಬೌಂಡರಿಗಳ ಸುರಿಮಳೆ – ಇಶಾನ್ ಕಿಶನ್ ಸ್ಫೋಟಕ ದ್ವಿಶತಕ

    ಸಿಕ್ಸರ್, ಬೌಂಡರಿಗಳ ಸುರಿಮಳೆ – ಇಶಾನ್ ಕಿಶನ್ ಸ್ಫೋಟಕ ದ್ವಿಶತಕ

    ಢಾಕಾ: ಸಿಕ್ಸರ್, ಬೌಂಡರಿಗಳ ಸುರಿಮಳೆಯೊಂದಿಗೆ ಟೀಂ ಇಂಡಿಯಾ (Team India) ಆಟಗಾರ ಇಶಾನ್ ಕಿಶನ್ (Ishan Kishan) ಸ್ಫೋಟಕ ದ್ವಿಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ.

    ಬಾಂಗ್ಲಾದೇಶ (Banglasesh) ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಅಬ್ಬರಿಸಿದ ಇಶಾನ್ ಕಿಶನ್ ಅತೀ ಕಡಿಮೆ ಎಸೆತಗಳಲ್ಲಿ ದ್ವಿತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ರೋಹಿತ್ ಶರ್ಮಾ ಈಗ ಸಿಕ್ಸರ್ ವೀರ – ಟಾಪ್ 2 ಸ್ಥಾನದಲ್ಲಿ ಹಿಟ್‌ಮ್ಯಾನ್

    ಟಾಸ್ ಸೋತು ಕೆ.ಎಲ್. ರಾಹುಲ್ (Kl Rahul) ನಾಯಕತ್ವದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಉತ್ತಮ ಶುಭಾರಂಭ ನೀಡಿತು. ಆರಂಭಿಕನಾಗಿ ಕಣಕ್ಕಿಳಿದ ಇಶಾನ್ ಕಿಶನ್ ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿದ್ರು. ಸಿಕ್ಸರ್ ಬೌಂಡರಿಗಳ ಮಳೆ ಸುರಿಸುತ್ತಾ ಬಾಂಗ್ಲಾ ಬೌಲರ್‌ಗಳ ಬೆವರಿಳಿಸಿದರು. ಇದನ್ನೂ ಓದಿ: ಬೆರಳಲ್ಲಿ ರಕ್ತಸುರಿಯುತ್ತಿದ್ದರೂ ಕೊನೆವರೆಗೆ ಹೋರಾಡಿದ ಹಿಟ್‌ಮ್ಯಾನ್ – ರಾಹುಲ್ ಸಲಾಂ

    160.30 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಇಶಾನ್ ಕಿಶನ್ 131 ಎಸೆತಗಳಲ್ಲಿ ಬರೋಬ್ಬರಿ 24 ಬೌಂಡರಿ ಹಾಗೂ 10 ಸಿಕ್ಸರ್ ಗಳೊಂದಿಗೆ 210 ರನ್ ಸಿಡಿಸಿ (126 ಎಸೆತಗಳಲ್ಲಿ 200 ರನ್‌) ಮಿಂಚಿದರು. ಇದಕ್ಕೆ ಉತ್ತಮ ಸಾತ್ ನೀಡಿದ ವಿರಾಟ್ ಕೊಹ್ಲಿ (Virat Kohli) ಶತಕ ಬಾರಿಸಿ ಶೈನ್ ಆಗಿದ್ದಾರೆ.

    ಟಾಪರ್ಸ್ ಲಿಸ್ಟ್‌ನಲ್ಲಿ ಇಶಾನ್ ಶೈನ್: ಇಶಾನ್ ಕಿಶನ್ ಭರ್ಜರಿ ದ್ವಿಶತಕ ಸಿಡಿಸುವ ಜೊತೆಗೆ ಟಾಪರ್ಸ್ ಲಿಸ್ಟ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 2014ರಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) 173 ಎಸೆತಗಳಲ್ಲಿ 264 ರನ್ ಸಿಡಿಸಿದ್ದು ಈವರೆಗಿನ ದಾಖಲೆಯಾಗಿದೆ. ಇದಕ್ಕೂ ಮುನ್ನ ರೋಹಿತ್ ಶರ್ಮಾ 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ 158 ಎಸೆತಗಳಲ್ಲಿ 209 ರನ್ ಹಾಗೂ 2017ರಲ್ಲಿ ಶ್ರೀಲಂಕಾ ವಿರುದ್ಧ 153 ಎಸೆತಗಳಲ್ಲಿ 208 ರನ್‌ಗಳನ್ನು ಸಿಡಿಸಿದ್ದರು. ನಂತರದಲ್ಲಿ ಮಾರ್ಟೀನ್ ಗಪ್ಟಿಲ್ 163 ಎಸೆತಗಳಲ್ಲಿ 237ರನ್, ವೀರೇಂದ್ರ ಸೆಹ್ವಾಗ್ 149 ಎಸೆತಗಳಲ್ಲಿ 219, ಕ್ರಿಸ್ ಗೇಲ್ 147 ಎಸೆತಗಳಲ್ಲಿ 215, ಫಖರ್ ಜಮಾನ್ 156 ಎಸೆತಗಳಲ್ಲಿ 210 ರನ್, ಸಚ್ಚಿನ್ ತೆಂಡೂಲ್ಕರ್ 147 ಎಸೆತಗಳಲ್ಲಿ ಅಜೇಯ 200ರನ್ ಚಚ್ಚಿದ್ದರು. ಇದೀಗ 131 ಎಸೆತಗಳಲ್ಲಿ 210 ರನ್‌ ಸಿಡಿಸಿದ್ದು ಇಶಾನ್ ದಾಖಲೆಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರೋಹಿತ್ ಶರ್ಮಾ ಈಗ ಸಿಕ್ಸರ್ ವೀರ – ಟಾಪ್ 2 ಸ್ಥಾನದಲ್ಲಿ ಹಿಟ್‌ಮ್ಯಾನ್

    ರೋಹಿತ್ ಶರ್ಮಾ ಈಗ ಸಿಕ್ಸರ್ ವೀರ – ಟಾಪ್ 2 ಸ್ಥಾನದಲ್ಲಿ ಹಿಟ್‌ಮ್ಯಾನ್

    ಢಾಕಾ: ಟೀಂ ಇಂಡಿಯಾ (Team India) ವಿರುದ್ಧ ಬಾಂಗ್ಲಾದೇಶ (Bangladesh) ಐತಿಹಾಸಿಕ ಗೆಲುವು ಸಾಧಿಸುವ ಮೂಲಕ 2-0 ಅಂತರದಲ್ಲಿ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿತು. ಆದರೆ ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ನಾಯಕ ರೋಹಿತ್ ಶರ್ಮಾ (Rohit Sharma) ಪಂದ್ಯ ಸೋತರು ಹೊಸ ದಾಖಲೆ ಬರೆಯುವ ಮೂಲಕ ತಾನು ಗೆದ್ದಿದ್ದಾರೆ.

    ಕೈಬೆರಳಿನಿಂದ ರಕ್ತ ಸುರಿಯುತ್ತಿದ್ದರೂ ಡೆತ್ ಓವರ್‌ಗಳಲ್ಲಿ (DeathOver) ಹೋರಾಡಿದ ರೋಹಿತ್ ಶರ್ಮಾ ಟೀಂ ಇಂಡಿಯಾ ಗೆಲ್ಲಿಸಲು ಸತತವಾಗಿ ಪ್ರಯತ್ನಿಸಿದರು. 28 ಎಸೆತಗಳಲ್ಲಿ 5 ಸಿಕ್ಸರ್, 3 ಬೌಂಡರಿಯೊಂದಿಗೆ 51 ರನ್ ಗಳಿಸಿದರು. ಸ್ಫೋಟಕ ಸಿಕ್ಸರ್ ಬೌಂಡರಿಗಳ ಆಟದಲ್ಲಿ 182.14 ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್ ಬೀಸಿದ ಹಿಟ್‌ಮ್ಯಾನ್ ಹೊಸ ದಾಖಲೆ ಸಹ ಬರೆದರು. ಇದನ್ನೂ ಓದಿ: ಗಾಯವನ್ನೂ ಲೆಕ್ಕಿಸದೇ ಆಡಿದ ಹಿಟ್‌ಮ್ಯಾನ್‌ ಹೋರಾಟ ವ್ಯರ್ಥ – ಬಾಂಗ್ಲಾದೇಶಕ್ಕೆ ಏಕದಿನ ಸರಣಿ

    ಹೌದು.. ರೋಹಿತ್ ಶರ್ಮಾ ಈಗ ಟಾಪ್ ಸಿಕ್ಸರ್ ವೀರರ ಪಟ್ಟಿಯಲ್ಲಿದ್ದಾರೆ. 500 ಸಿಕ್ಸರ್ ಸಿಡಿಸಿದ ವಿಶ್ವದ 2ನೇ ಹಾಗೂ ಭಾರತದ ನಂ.1 ಆಟಗಾರರಾಗಿದ್ದಾರೆ. ಇದನ್ನೂ ಓದಿ: ಬೆರಳಲ್ಲಿ ರಕ್ತಸುರಿಯುತ್ತಿದ್ದರೂ ಕೊನೆವರೆಗೆ ಹೋರಾಡಿದ ಹಿಟ್‌ಮ್ಯಾನ್ – ರಾಹುಲ್ ಸಲಾಂ

    483 ಪಂದ್ಯಗಳನ್ನಾಡಿರುವ ಕ್ರಿಸ್‌ಗೇಲ್ (Chris Gayle) 553 ಸಿಕ್ಸರ್ ಸಿಡಿಸಿ ಮೊದಲ ಸ್ಥಾನದಲ್ಲಿದ್ದರೆ, 428 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ 502 ಸಿಕ್ಸರ್ ಚಚ್ಚಿ 2ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಇನ್ನೂ 525 ಪಂದ್ಯಗಳನ್ನಾಡಿರುವ ಪಾಕಿಸ್ತಾನದ (Pakistan) ಆಲ್‌ರೌಂಡರ್ ಶಾಹಿದ್ ಅಫ್ರಿದಿ 476 ಸಿಕ್ಸರ್, 432 ಪಂದ್ಯಗಳನ್ನಾಡಿರುವ ಕೀವಿಸ್ ಪಡೆಯ ಬ್ರಿಂಡನ್ ಮೆಕಲಂ 398 ಸಿಕ್ಸರ್, 367 ಪಂದ್ಯಗಳನ್ನಾಡಿರುವ ಮಾರ್ಟೀನ್ ಗಪ್ಟಿಲ್ 383 ಸಿಕ್ಸರ್ ಸಿಡಿಸಿ ಕ್ರಮವಾಗಿ 3, 4 ಮತ್ತು 5ನೇ ಸ್ಥಾನಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೆರಳಲ್ಲಿ ರಕ್ತಸುರಿಯುತ್ತಿದ್ದರೂ ಕೊನೆವರೆಗೆ ಹೋರಾಡಿದ ಹಿಟ್‌ಮ್ಯಾನ್ – ರಾಹುಲ್ ಸಲಾಂ

    ಬೆರಳಲ್ಲಿ ರಕ್ತಸುರಿಯುತ್ತಿದ್ದರೂ ಕೊನೆವರೆಗೆ ಹೋರಾಡಿದ ಹಿಟ್‌ಮ್ಯಾನ್ – ರಾಹುಲ್ ಸಲಾಂ

    ಢಾಕಾ: ಬಾಂಗ್ಲಾದೇಶದ (Bangladesh) ವಿರುದ್ಧ ಸರಣಿ ಸೋಲಿನ ಹೊರತಾಗಿಯೂ ತಮ್ಮ ಗಾಯವನ್ನೂ ಲೆಕ್ಕಿಸದೇ, ಬೆರಳಲ್ಲಿ ರಕ್ತ ಸುರಿಯುತ್ತಿದ್ದರೂ ಕೊನೆಯವರೆಗೂ ಹೋರಾಡಿ ಸ್ಫೋಟಕ ಅರ್ಧಶತಕ ಸಿಡಿಸಿದ ನಾಯಕ ರೋಹಿತ್ ಶರ್ಮಾ (Rohit Sharma) ಅವರನ್ನು ಕೋಚ್ ರಾಹುಲ್ ದ್ರಾವಿಡ್ ಹಾಡಿಹೊಗಳಿದ್ದಾರೆ.

     

    View this post on Instagram

     

    A post shared by Team India (@indiancricketteam)

    ಟೀಂ ಇಂಡಿಯಾ (Team India) ವಿರುದ್ಧ ಬಾಂಗ್ಲಾದೇಶ ಐತಿಹಾಸಿಕ ಗೆಲುವು ಸಾಧಿಸುವ ಮೂಲಕ 2-0 ಅಂತರದಲ್ಲಿ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿತು. ಇದನ್ನೂ ಓದಿ: ಗಾಯವನ್ನೂ ಲೆಕ್ಕಿಸದೇ ಆಡಿದ ಹಿಟ್‌ಮ್ಯಾನ್‌ ಹೋರಾಟ ವ್ಯರ್ಥ – ಬಾಂಗ್ಲಾದೇಶಕ್ಕೆ ಏಕದಿನ ಸರಣಿ

    ಬುಧವಾರ ಬಾಂಗ್ಲಾದೇಶದ ಢಾಕಾದ ಶೇರ್-ಇ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 2ನೇ ಏಕದಿನ ಪಂದ್ಯದ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ ತಮ್ಮ ಕೈಗೆ ಪೆಟ್ಟಾಗಿಸಿಕೊಂಡರು. ಸ್ಲಿಪ್‌ನಲ್ಲಿ ಕ್ಯಾಚ್ ಹಿಡಿಯುವ ವೇಳೆ ತಮ್ಮ ಹೆಬ್ಬೆರಳಿಗೆ ಚೆಂಡನ್ನು ತಗುಲಿಸಿಕೊಂಡು ಗಾಯ ಮಾಡಿಕೊಂಡರು. ಈ ಹಿನ್ನೆಲೆಯಲ್ಲಿ ಅವರು ಮೈದಾನ ತೊರೆದಿದ್ದರು. ರೋಹಿತ್ ಶರ್ಮಾ ಅಲಭ್ಯತೆಯಿಂದಾಗಿ ಶಿಖರ್ ಧವನ್ ಜೊತೆ ವಿರಾಟ್ ಕೊಹ್ಲಿ (Virat Kohli) ಇನ್ನಿಂಗ್ಸ್‌ ಆರಂಭಿಸಿದ್ದರು. ಸತತ ಹೋರಾಟದ ಹೊರತಾಗಿಯೂ ಟೀಂ ಇಂಡಿಯಾ 5 ರನ್‌ಗಳಿಂದ ಸೋಲನ್ನುಕಂಡಿತು. ಈ ಮೂಲಕ ಬಾಂಗ್ಲಾದೇಶ ಸರಣಿ (ODI Series) ಗೆದ್ದುಕೊಂಡಿತು.

    ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದ್ರಾವಿಡ್, ರೋಹಿತ್ ಶರ್ಮಾ ಅವರ ಗುಣಗಾನ ಮಾಡಿದರು. ರೋಹಿತ್ ಶರ್ಮಾ ಅವರು ಆಸ್ಪತ್ರೆಗೆ ತೆರಳಿದ್ದರೂ ಕೂಡ ಪಂದ್ಯದಲ್ಲಿ ಬ್ಯಾಟ್ ಮಾಡಲೇಬೇಕೆಂದು ಇಂಜೆಕ್ಷನ್ ಚುಚ್ಚಿಕೊಂಡು ಮತ್ತೆ ಮೈದಾನಕ್ಕೆ ಮರಳಿದರು. ಅವರ ಬೆರಳಿಗೆ ಗಂಭೀರ ಗಾಯವಾಗಿದ್ದರಿಂದ ಅವರು ಹೋಗಲೇಬೇಕಾಗಿತ್ತು. ಅವರಿಗೆ ಶ್ರೇಯಸ್ಸು ಸಲ್ಲಬೇಕು ಎಂದು ಹೊಗಳಿದ್ದಾರೆ. ಇದನ್ನೂ ಓದಿ: ಕೈಯಲ್ಲಿ ರಕ್ತ ಸುರಿಸಿಕೊಂಡು ಮೈದಾನ ತೊರೆದ ರೋಹಿತ್

    ಕೈಬೆರಳಿನಿಂದ ರಕ್ತ ಸುರಿಯುತ್ತಿದ್ದರೂ ಡೆತ್ ಓವರ್‌ಗಳಲ್ಲಿ ಹೋರಾಡಿದ ರೋಹಿತ್ ಶರ್ಮಾ ಟೀಂ ಇಂಡಿಯಾ ಗೆಲ್ಲಿಸಲು ಸತತವಾಗಿ ಪ್ರಯತ್ನಿಸಿದರು. 28 ಎಸೆತಗಳಲ್ಲಿ 182.14 ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್ ಬೀಸಿದ ರೋಹಿತ್ 5 ಸಿಕ್ಸರ್, 3 ಬೌಂಡರಿಯೊಂದಿಗೆ 51 ರನ್ ಗಳಿಸಿದರು. ಆದರೆ ಮೊಹಮ್ಮದ್ ಸಿರಾಜ್ ನಾಯಕನಿಗೆ ಸರಿಯಾಗಿ ಸಾಥ್ ನೀಡದ ಕಾರಣ ಸೋಲನ್ನು ಒಪ್ಪಿಕೊಳ್ಳಬೇಕಾಯಿತು. 47 ಮತ್ತು 48ನೇ ಓವರ್‌ಗಳಿಂದ ಕೇವಲ ಒಂದೇ ಒಂದು ರನ್ ತಂಡಕ್ಕೆ ಸೇರ್ಪಡೆಯಾಯಿತು. ಇದು ಪಂದ್ಯದ ಮೇಲೆ ಗಂಭೀರ ಪರಿಣಾಮ ಬೀರಿತು.

    Live Tv
    [brid partner=56869869 player=32851 video=960834 autoplay=true]

  • ರಾಹುಲ್ ಅರ್ಧ ಶತಕದ ಅಬ್ಬರ – ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರಕೊಟ್ಟ ಕನ್ನಡಿಗ

    ರಾಹುಲ್ ಅರ್ಧ ಶತಕದ ಅಬ್ಬರ – ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರಕೊಟ್ಟ ಕನ್ನಡಿಗ

    ಕ್ಯಾನ್ಬೆರಾ: ಟೀಂ ಇಂಡಿಯಾ (Team India) ಆರಂಭಿಕ ಕನ್ನಡಿಗ ಕೆ.ಎಲ್.ರಾಹುಲ್ (KL Rahul) ತಮ್ಮ ವಿರುದ್ಧದ ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರ ಕೊಟ್ಟಿದ್ದಾರೆ.

    ಆಸ್ಟ್ರೇಲಿಯಾದ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶದ (Bangladesh) ವಿರುದ್ಧದ ಪಂದ್ಯದಲ್ಲಿ ಅರ್ಧ ಶತಕ ಸಿಡಿಸುವ ಮೂಲಕ ಅಬ್ಬರಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಅಬ್ಬರಿಸೋದನ್ನ ನೀವು ನೋಡ್ತೀರಾ – ಕನ್ನಡಿಗನ ಬೆಂಬಲಕ್ಕೆ ನಿಂತ ದ್ರಾವಿಡ್

    ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸುತ್ತಿದ್ದ ಕೆ.ಎಲ್ ರಾಹುಲ್ (KL Rahul) ಪಾಕಿಸ್ತಾನ (Pakistan), ನೆದರ್‌ಲ್ಯಾಂಡ್ ಹಾಗೂ ದಕ್ಷಿಣ ಆಫ್ರಿಕಾದ (South Africa) ವಿರುದ್ಧ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ಟೀಕೆಗಳಿಗೆ ಗುರಿಯಾಗಿದ್ದರು. ಮೂರು ಪಂದ್ಯಗಳಲ್ಲಿ 34 ಎಸೆತಗಳನ್ನು ಎದುರಿಸಿದ್ದ ರಾಹುಲ್ 22 ರನ್‌ಗಳನ್ನಷ್ಟೇ ಗಳಿಸಿದ್ದರು. ರಾಹುಲ್ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಟೀಂ ಇಂಡಿಯಾದ (Team India) ಅಭಿಮಾನಿಗಳು ರಾಹುಲ್ ವಿರುದ್ಧ ಮುಗಿಬಿದ್ದಿದ್ದರು. ಸಾಕಷ್ಟು ಟ್ರೋಲ್‌ಗಳಿಗೆ ಗುರಿ ಮಾಡಿದ್ದರು.

    ಇದೀಗ ಟೀಕೆಗಳಿಗೆ ರಾಹುಲ್ ಬ್ಯಾಟ್ ಮೂಲಕವೇ ಉತ್ತರ ಕೊಟ್ಟಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಅಬ್ಬರಿಸಿದ ರಾಹುಲ್ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ. ಇದರಲ್ಲಿ 4 ಸಿಕ್ಸರ್ ಹಾಗೂ 3 ಬೌಂಡರಿಗಳು ಸೇರಿವೆ. ಇದನ್ನೂ ಓದಿ: ನಾನ್‍ ಸ್ಟ್ರೈಕರ್ ರನೌಟ್‍ನಿಂದ ಪಾರಾಗಲು ಹೊಸ ಐಡಿಯಾ ಹುಡುಕಿದ ಗ್ಲೆನ್ ಫಿಲಿಪ್ಸ್  

    ನಿನ್ನೆಯಷ್ಟೇ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ (Rahul Dravid), ಕೆ.ಎಲ್.ರಾಹುಲ್ ಬೆಂಬಲಿಸಿ, ಮೆಚ್ಚುಗೆಯ ಮಾತುಗಳನ್ನಾಡಿದ್ದರು. ನನ್ನ ಪ್ರಕಾರ ಕೆ.ಎಲ್ ರಾಹುಲ್ ಅವರೊಬ್ಬ ಅತ್ಯದ್ಭುತ ಕ್ರಿಕೆಟಿಗ. ಅವರು ಈಗಾಗಲೇ ತಮ್ಮ ಸಾಮರ್ಥ್ಯವೇನು ಎಂಬುದನ್ನು ಸಾಬೀತು ಮಾಡಿದ್ದಾರೆ. ಮುಂದಿನ ಪಂದ್ಯಗಳಲ್ಲಿ ರಾಹುಲ್ ಅಬ್ಬರಿಸೋದನ್ನ ನೀಡವು ನೋಡುತ್ತೀರಿ ಎಂದು ದ್ರಾವಿಡ್ ಹೇಳಿದ್ದರು.

    Live Tv
    [brid partner=56869869 player=32851 video=960834 autoplay=true]

  • ರಾಹುಲ್ ಅಬ್ಬರಿಸೋದನ್ನ ನೀವು ನೋಡ್ತೀರಾ – ಕನ್ನಡಿಗನ ಬೆಂಬಲಕ್ಕೆ ನಿಂತ ದ್ರಾವಿಡ್

    ರಾಹುಲ್ ಅಬ್ಬರಿಸೋದನ್ನ ನೀವು ನೋಡ್ತೀರಾ – ಕನ್ನಡಿಗನ ಬೆಂಬಲಕ್ಕೆ ನಿಂತ ದ್ರಾವಿಡ್

    ಕ್ಯಾನ್ಬೆರಾ: ಟಿ20 ವಿಶ್ವಕಪ್ (T20 WorldCup) ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸುತ್ತಿದ್ದ ಟೀಂ ಇಂಡಿಯಾ (Team India) ಆರಂಭಿಕ ಕನ್ನಡಿಗೆ ಕೆ.ಎಲ್.ರಾಹುಲ್ (KL Rahul) ಇದೀಗ ಫಾರ್ಮ್ ಕಳೆದುಕೊಂಡಿದ್ದು, ಬಾರೀ ಟೀಕೆಗಳಿಗೆ ಗುರಿಯಾಗಿದ್ದಾರೆ.

    ಕಳೆದ ಮೂರು ಪಂದ್ಯಗಳಲ್ಲಿ ಕೇವಲ 34 ಎಸೆತಗಳನ್ನು ಎದುರಿಸಿರುವ ರಾಹುಲ್ 22 ರನ್‌ಗಳನ್ನಷ್ಟೇ ಗಳಿಸಿದ್ದಾರೆ. ರಾಹುಲ್ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಟೀಂ ಇಂಡಿಯಾದ ಅಭಿಮಾನಿಗಳು (Team India Fans) ರಾಹುಲ್ ವಿರುದ್ಧ ಮುಗಿಬಿದ್ದಿದ್ದಾರೆ. ಆದರೆ ಕೆ.ಎಲ್.ರಾಹುಲ್ ಅವರಿಗೆ ಬೆಂಬಲ ವ್ಯಕ್ತಪಡಿಸಿರುವ ಟೀಂ ಇಂಡಿಯಾ ಕೋಚ್ ರಾಹುಲ್ ಡ್ರಾವಿಡ್ (Rahul Dravid) ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಇದನ್ನೂ ಓದಿ: ವಿಶ್ವಕಪ್ ಗೆಲ್ಲಲು ಭಾರತ ಬಂದಿದೆ, ನಾವಲ್ಲ – ಭಾರತವನ್ನು ಸೋಲಿಸುತ್ತೇವೆ ಎಂದ ಹಸನ್

    `ನನ್ನ ಪ್ರಕಾರ ಕೆ.ಎಲ್ ರಾಹುಲ್ (KL Rahul) ಅವರೊಬ್ಬ ಅತ್ಯದ್ಭುತ ಕ್ರಿಕೆಟಿಗ. ಅವರು ಈಗಾಗಲೇ ತಮ್ಮ ಸಾಮರ್ಥ್ಯವೇನು ಎಂಬುದನ್ನು ಸಾಬೀತು ಮಾಡಿದ್ದಾರೆ. ಅವರು ತುಂಬಾ ಚೆನ್ನಾಗಿ ಆಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ (T20 Cricket) ಈ ರೀತಿ ಆಗುವುದು ಸಹಜ, ಏಕೆಂದರೆ ಅಗ್ರಕ್ರಮಾಂಕದ ಬ್ಯಾಟರ್‌ಗಳ ಸವಾಲು ಸುಲಭವಾಗಿರುವುದಿಲ್ಲ. ಈ ಟೂರ್ನಿಯು ಸಾಕಷ್ಟು ಸವಾಲಿನಿಂದ ಕೂಡಿದೆ. ಅವರು ಅಭ್ಯಾಸ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಅವರಂತಹ ಬೌಲರ್‌ಗಳೆದುರು ಅದ್ಭುತ ಆಟವಾಡಿದ್ದಾರೆ. ಅಭ್ಯಾಸ ಪಂದ್ಯದಲ್ಲಿ 60-70 ರನ್ ಬಾರಿಸಿದ್ದರು. ಮುಂದಿನ ಕೆಲ ಪಂದ್ಯಗಳಲ್ಲಿ ಅವರು ಫಾರ್ಮ್‌ಗೆ ಮರಳುವ ವಿಶ್ವಾಸವಿದೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ. ಇದನ್ನೂ ಓದಿ: ನಾನ್‍ ಸ್ಟ್ರೈಕರ್ ರನೌಟ್‍ನಿಂದ ಪಾರಾಗಲು ಹೊಸ ಐಡಿಯಾ ಹುಡುಕಿದ ಗ್ಲೆನ್ ಫಿಲಿಪ್ಸ್

    ನಮಗೆ ಅವರ ಸಾಮರ್ಥ್ಯವೇನು ಅನ್ನೋದರ ಅರಿವಿದೆ. ಈ ರೀತಿಯ ವಾತಾವರಣಕ್ಕೆ ಅವರು ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಅವರು ಫಾರ್ಮ್‌ಗೆ ಬಂದು ಅಬ್ಬರಿಸೋದನ್ನ ಎದುರು ನೋಡ್ತಿದ್ದೇವೆ. ಮುಂದಿನ ದಿನಗಳಲ್ಲಿ ರಾಹುಲ್ ಅಬ್ಬರಿಸೋದನ್ನ ನೀವು ನೋಡ್ತಿರಾ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

    ಕೆ.ಎಲ್ ರಾಹುಲ್ ಬಗ್ಗೆ ಹೊರಗಡೆ ಏನು ಮಾತನಾಡುತ್ತಾರೆಂಬ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಆಟಗಾರರ ಬಗ್ಗೆ ನಮಗೆ ನಂಬಿಕೆ ಇದೆ. ನಮ್ಮ ಮನಸಿನಲ್ಲೂ ಅನೇಕ ಉಪಾಯಗಳಿವೆ. ಆಟಗಾರ ಎಂದ ಮೇಲೆ ಏರಿಳಿತಗಳು ಇದ್ದೇ ಇರುತ್ತವೆ ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಎಲ್ಲಾ ಆಟಗಾರರ ಗುಣಮಟ್ಟದ ಬಗ್ಗೆ ನಮಗೆ ತಿಳಿದಿದೆ. ಹಾಗಾಗಿ ಎಲ್ಲರನ್ನೂ ಬೆಂಬಲಿಸುತ್ತೇವೆ. ಹಾಗೆಯೇ ಇಂತಹ ಪರಿಸ್ತಿತಿಯಲ್ಲಿ ರಾಹುಲ್‌ಗೆ ಸ್ವಲ್ಪ ವಿರಾಮ ನೀಡುತ್ತೇವೆ ಎಂದು ಹೇಳಿದ್ದಾರೆ.

    Live Tvಅ
    [brid partner=56869869 player=32851 video=960834 autoplay=true]

  • ವಿಶ್ವಕಪ್ ಗೆಲ್ಲಲು ಭಾರತ ಬಂದಿದೆ, ನಾವಲ್ಲ – ಭಾರತವನ್ನು ಸೋಲಿಸುತ್ತೇವೆ ಎಂದ ಹಸನ್

    ವಿಶ್ವಕಪ್ ಗೆಲ್ಲಲು ಭಾರತ ಬಂದಿದೆ, ನಾವಲ್ಲ – ಭಾರತವನ್ನು ಸೋಲಿಸುತ್ತೇವೆ ಎಂದ ಹಸನ್

    ಕ್ಯಾನ್ಬೆರಾ: ವಿಶ್ವಕಪ್ (T20 WorldCup) ಗೆಲ್ಲಲು ನಾವು ಬಂದಿಲ್ಲ, ಭಾರತ ಬಂದಿದೆ. ಒಂದು ವೇಳೆ ನಾವು ಭಾರತದ (Team India) ವಿರುದ್ಧ ಗೆದ್ದರೆ ಅದು ಅಸಮಾಧಾನಕ್ಕೆ ಕಾರಣವಾಗಬಹುದು. ಭಾರತಕ್ಕೆ ಅಸಮಾಧಾನ ಮಾಡಲು ನಾವು ಉತ್ತಮವಾಗಿ ಆಡಲು ಪ್ರಯತ್ನಿಸುತ್ತೇವೆ ಎಂದು ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ (Shakib Al Hasan) ಭವಿಷ್ಯ ನುಡಿದಿದ್ದಾರೆ.

    ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ (T20 WorldCup) ರಣರೋಚಕತೆಯಿಂದ ಕೂಡಿದೆ. ಸೂಪರ್ 12 ಅರ್ಹತಾ ಸುತ್ತಿನಲ್ಲಿ ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲಿದ್ದರೇ, ತಲಾ 2 ಪಂದ್ಯಗಳನ್ನು ಗೆದ್ದಿರುವ ಭಾರತ (Team India) ಹಾಗೂ ಬಾಂಗ್ಲಾದೇಶ (Bangladesh) 4 ಅಂಕಗಳನ್ನು ಪಡೆದು ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಅಕ್ಟೋಬರ್ 2ರಂದು ಭಾರತ ಮತ್ತು ಬಾಂಗ್ಲಾದೇಶ ಸೆಣಸಲಿವೆ. ಅಲ್ಲದೇ ಭಾರತ ಹಾಗೂ ಬಾಂಗ್ಲಾದೇಶಕ್ಕೆ ಈ ಪಂದ್ಯ ನಿರ್ಣಾಯಕವಾಗಿದ್ದು, ಇದರ ಗೆಲುವು ಸೆಮಿಫೈನಲ್ ಕನಸನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತದೆ. ಇದನ್ನೂ ಓದಿ: ನಾನ್‍ ಸ್ಟ್ರೈಕರ್ ರನೌಟ್‍ನಿಂದ ಪಾರಾಗಲು ಹೊಸ ಐಡಿಯಾ ಹುಡುಕಿದ ಗ್ಲೆನ್ ಫಿಲಿಪ್ಸ್

    ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಶಕಿಬ್ ಅಲ್ ಅಸನ್ (Shakib Al Hasan), ನಮಗೆ ಪ್ರತಿ ಪಂದ್ಯವೂ ಮುಖ್ಯವಾಗಿದೆ. ಅದರಂತೆ ನಾವು ಆಡಲು ಬಯಸುತ್ತೇವೆ. ನಾವು ನಮ್ಮ ಯೋಜನೆಗಳಿಗೆ ಬದ್ಧರಾಗಿದ್ದೇವೆ. ಸ್ಟ್ರೈಕ್‌ರೇಟ್‌ಗಳ ಬಗ್ಗೆಯೂ ಚಿಂತಿಸುವಂತಿಲ್ಲ. ನಮ್ಮ ಮುಂದಿನ ಎಲ್ಲ ಪಂದ್ಯಗಳಲ್ಲೂ ಉತ್ತಮವಾಗಿ ಆಡಲು ಬಯಸುತ್ತೇವೆ. ಆದರೆ ಭಾರತ ಮತ್ತು ಪಾಕಿಸ್ತಾನದ ವಿರುದ್ಧ ಗೆಲ್ಲಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇವೆ. ಏಕೆಂದರೆ ಐರ್ಲೆಂಡ್ ಹಾಗೂ ಜಿಂಬಾಬ್ವೆಯಂತಹ ತಂಡಗಳೂ ಪಾಕಿಸ್ತಾನ (Pakistan) ಹಾಗೂ ಇಂಗ್ಲೆಂಡ್ ನಂತಹ ಬಲಿಷ್ಠ ತಂಡಗಳನ್ನೇ ಸೋಲಿಸಿರುವುದನ್ನು ನೋಡಿದ್ದೇವೆ. ಸಾಧ್ಯವಾದರೆ ನಾವು ಅದೇ ರೀತಿ ಆಡಲು ಪ್ರಯತ್ನಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸತತ ಸೋಲಿನ ರುಚಿ – ಭಾರತದ ಗೆಲುವಿಗಾಗಿ ಪಾಕ್ ತಂಡ ಪ್ರಾರ್ಥನೆ

    ಭಾರತ ಎಲ್ಲಿ ಆಡಿದರೂ ಉತ್ತಮ ಬೆಂಬಲ ಸಿಗುತ್ತದೆ. ಟೀಂ ಇಂಡಿಯಾ (Team India) ವಿಶ್ವಕಪ್ ಗೆಲ್ಲಲ್ಲು ಇಲ್ಲಿಗೆ ಬಂದಿದೆಯೇ ಹೊರತು ನಾವಲ್ಲ. ನೀವು ಪರಿಸ್ಥಿತಿ ಅರ್ಥ ಮಾಡಿಕೊಳ್ಳಬಹುದು. ಭಾರತದ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಅಮೋಘ ಫಾರ್ಮ್ನಲ್ಲಿದ್ದಾರೆ. ಇಲ್ಲಿಯವರೆಗೆ 2 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ನಾವು ಭಾರತದ ವಿರುದ್ಧ ಗೆದ್ದರೇ ಅದು ಅಸಮಾಧಾನವಾಗುತ್ತದೆ. ನಾವು ಭಾರತವನ್ನು ಸೋಲಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]