Tag: INDvsAUS

  • ಬುಮ್ರಾ ಬಹುಪರಾಕ್‌, ಪರ್ತ್‌ನಲ್ಲಿ ಪವರ್‌ ಶೋ – ಭಾರತಕ್ಕೆ 295 ರನ್‌ಗಳ ಭರ್ಜರಿ ಜಯ

    ಬುಮ್ರಾ ಬಹುಪರಾಕ್‌, ಪರ್ತ್‌ನಲ್ಲಿ ಪವರ್‌ ಶೋ – ಭಾರತಕ್ಕೆ 295 ರನ್‌ಗಳ ಭರ್ಜರಿ ಜಯ

    ಪರ್ತ್‌: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ (Border Gavaskar Trophy) ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲೇ ಭಾರತ (Team India), ಆಸ್ಟ್ರೇಲಿಯಾ ವಿರುದ್ಧ 295 ರನ್‌ಗಳ ಭರ್ಜರಿ ಗೆಲುವು ಕಂಡಿದೆ. ಇದರೊಂದಿಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನಕ್ಕೆ ಜಿಗಿದಿದೆ.

    ಜಸ್ಪ್ರೀತ್‌ ಬುಮ್ರಾ (Jasprit Bumrah), ಸಿರಾಜ್‌, ಹರ್ಷಿತ್‌ ರಾಣಾ ಅವರ ಉರಿ ಚೆಂಡಿನ ವೇಗ ಒಂದುಕಡೆಯಾದ್ರೆ ಯಶಸ್ವಿ ಜೈಸ್ವಾಲ್‌, ಕಿಂಗ್‌ ಕೊಹ್ಲಿ, ಕೆ.ಎಲ್‌ ರಾಹುಲ್‌ ಅವರ ಬ್ಯಾಟಿಂಗ್‌ ದರ್ಬಾರ್‌ನಿಂದ ಭಾರತ, ಆಸೀಸ್‌ಗೆ ಪವರ್‌ ಪಂಚ್‌ ಕೊಟ್ಟಿದೆ. ಈ ಮೂಲಕ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಮೊದಲ ಗೆಲುವು ಸಾಧಿಸಿ 1-0 ಮುನ್ನಡೆ ಕಾಯ್ದುಕೊಂಡಿದೆ.

    ಮುಂಬರುವ ಐಸಿಸಿ ಟೆಸ್ಟ್‌ ಚಾಂಪಿಯನ್‌ ಶಿಪ್‌ನಲ್ಲಿ (WTC) ಫೈನಲ್‌ ಪ್ರವೇಶಿಸಬೇಕಾದರೆ ಸರಣಿಯಲ್ಲಿ 4-0 ಅಂತರದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿರುವ ಟೀಮ್‌ ಇಂಡಿಯಾ, ಮೊದಲ ಟೆಸ್ಟ್‌ನಲ್ಲಿ ಸರ್ವಾಂಗೀಣ ಪ್ರದರ್ಶನ ನೀಡುವ ಮೂಲಕ ಬಲಿಷ್ಠ ಆಸ್ಪ್ರೇಲಿಯಾ (Australia) ತಂಡವನ್ನು ದಿಗ್ಭ್ರಮೆಗೊಳಿಸಿದೆ.

    238ಕ್ಕೆ ಆಸೀಸ್‌ ಆಲೌಟ್:
    534 ರನ್‌ಗಳ ಅಸಾಧಾರಣ ಗುರಿ ಬೆನ್ನಟಿದ ಆಸೀಸ್‌ 3ನೇ ದಿನದ ಅಂತ್ಯಕ್ಕೆ 12 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡಿತ್ತು. 522 ರನ್‌ಗಳ ಹಿನ್ನಡೆಯೊಂದಿಗೆ 4ನೇ ದಿನ ಕ್ರೀಸ್‌ ಆರಂಭಿಸಿತು. ಮಧ್ಯಮ ಕ್ರಮಾಂಕದಲ್ಲಿ ಟ್ರಾವಿಸ್‌ ಹೆಡ್‌, ಮಿಚೆಲ್‌ ಮಾರ್ಷ್‌, ಅಲೆಕ್ಸ್‌ ಕ್ಯಾರಿ ಅವರ ಹೋರಾಟದ ಹೊರತಾಗಿಯೂ ಆಸೀಸ್‌ 238 ರನ್‌ಗಳಿಗೆ ಸರ್ವಪತಕ ಕಂಡಿತು. ಇದರಿಂದ ಭಾರತ 295 ರನ್‌ಗಳ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಅಂತಿಮವಾಗಿ ಟ್ರಾವಿಸ್‌ ಹೆಡ್‌ 89 ರನ್‌, ಮಿಚೆಲ್‌ ಮಾರ್ಷ್‌ 47 ರನ್‌, ಅಲೆಕ್ಸ್‌ ಕ್ಯಾರಿ 36 ರನ್‌ ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟರ್‌ಗಳು ಅಲ್ಪಮೊತ್ತಕ್ಕೆ ಔಟಾಗಿ ಪೆವಿಲಿಯನ್‌ ಸೇರಿಕೊಂಡರು.

    ಬುಮ್ರಾ ನಾಯಕನ ಆಟ, ಮಿಂಚಿದ ಯುವ ಬೌಲರ್ಸ್‌:
    ನಾಯಕ ಆಟವಾಡಿದ ವೇಗಿ ಜಸ್ಪ್ರೀತ್‌ ಬುಮ್ರಾ ತಮ್ಮ ಉರಿ ಚೆಂಡಿನಿಂದ ಪ್ರಮುಖ ವಿಕೆಟ್‌ಗಳನ್ನು ಕಿತ್ತು ಸೈ ಎನಿಸಿಕೊಂಡರು. ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌, 2ನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ ಸೇರಿ 10 ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಇದರೊಂದಿಗೆ ಯುವ ವೇಗಿಗಳಾದ ಹರ್ಷಿತ್‌ ರಾಣಾ, ಆಲ್‌ರೌಂಡರ್‌ ನಿತೀಶ್‌ ರೆಡ್ಡಿ, ವಾಷಿಂಗ್ಟನ್‌ ಸುಂದರ್‌ ಪ್ರಮುಖ ವಿಕೆಟ್‌ ಕಿತ್ತು ಮಿಂಚಿದರು.

    ಜೈಸ್ವಾಲ್ 4 ಬಾರಿ 150+
    ಆಸೀಸ್‌ ಬೌಲರ್‌ಗಳನ್ನ ಆಕ್ರಮಣವನ್ನು ದಿಟ್ಟವಾಗಿ ಎದುರಿಸಿದ ಎಡಗೈ ಬ್ಯಾಟರ್‌ ಜೈಸ್ವಾಲ್‌, 2ನೇ ಇನ್ನಿಂಗ್ಸ್‌ನಲ್ಲಿ 161 ರನ್‌ಗಳಿಗೆ ಔಟಾದರು. ಈ ಮೂಲಕ 23 ವರ್ಷಕ್ಕೆ ಕಾಲಿಡುವ ಮುನ್ನ ನಾಲ್ಕು ಬಾರಿ 150ಕ್ಕೂ ಅಧಿಕ ರನ್‌ ಗಳಿಸಿದ ಭಾರತದ 2ನೇ ಆಟಗಾರ ಎಂಬ ಶ್ರೇಯಕ್ಕೆ ಜೈಸ್ವಾಲ್‌ ಪಾತ್ರರಾದರು. ಜೈಸ್ವಾಲ್‌ಗೂ ಮುನ್ನ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಇಂಥ ಸಾಧನೆ ಮಾಡಿದ್ದರು.

    ತವರಿನಲ್ಲಿ ಕಿವೀಸ್‌ ವಿರುದ್ಧ ರನ್‌ ಬರ ಎದುರಿಸಿದ್ದ ವಿರಾಟ್‌ ಕೊಹ್ಲಿ, ಆಕರ್ಷಕ ಶತಕ ಸಿಡಿಸುವ ಮೂಲಕ ಲಯ ಕಂಡುಕೊಂಡರು. 16 ತಿಂಗಳ ಬಳಿಕ ಟೆಸ್ಟ್‌ ಶತಕ ಸಿಡಿಸಿದರು. ಒಟ್ಟಾರೆ 81ನೇ ಶತಕ ಗಳಿಸಿ ತಮ್ಮದೇ ಶೈಲಿಯಲ್ಲಿ ಸಂಭ್ರಮಿಸಿದರು. ಈ ವೇಳೆ ಆಸ್ಟ್ರಲಿಯಾ ನೆಲದಲ್ಲಿ ಸಚಿನ್‌ ದಾಖಲಿಸಿದ್ದ 6 ಶತಕಗಳ ದಾಖಲೆಯನ್ನು ಹಿಂದಿಕ್ಕಿದರು. ಜೊತೆಗೆ ಯುವ ಆಟಗಾರರಾದ ವಾಷಿಂಗ್ಟನ್‌ ಸುಂದರ್‌ 29 ರನ್‌, ಪದಾರ್ಪಣೆ ಆಟಗಾರ ನಿತೀಶ್‌ ಕುಮಾರ್‌ ರೆಡ್ಡಿ ಅಜೇಯ 38 ರನ್‌ಗಳಿಸಿದರು. ಇದರಿಂದ ಭಾರತ 2ನೇ ಇನ್ನಿಂಗ್ಸ್‌ ಅಂತ್ಯಕ್ಕೆ 6 ವಿಕೆಟ್‌ ನಷ್ಟಕ್ಕೆ 487 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು.

  • ರಾಹುಲ್‌-ಯಶಸ್ವಿ ದಾಖಲೆಯ ಶತಕದ ಜೊತೆಯಾಟ – ಭಾರತಕ್ಕೆ 218 ರನ್‌ಗಳ ಮುನ್ನಡೆ

    ರಾಹುಲ್‌-ಯಶಸ್ವಿ ದಾಖಲೆಯ ಶತಕದ ಜೊತೆಯಾಟ – ಭಾರತಕ್ಕೆ 218 ರನ್‌ಗಳ ಮುನ್ನಡೆ

    – 2 ಸಿಕ್ಸರ್‌ ಸಿಡಿಸಿ ವಿಶೇಷ ದಾಖಲೆ ಬರೆದ ಜೈಸ್ವಾಲ್‌

    ಪರ್ತ್: ಯಶಸ್ವಿ ಜೈಸ್ವಾಲ್‌ (Yashasvi Jaiswal) ಹಾಗೂ ಕೆ.ಎಲ್‌ ರಾಹುಲ್‌ (KL Rahul) ಅವರ ದಾಖಲೆಯ ಶತಕದ ಜೊತೆಯಾಟ ನೆರವಿನಿಂದ ಟೀಂ ಇಂಡಿಯಾ (Team India) ಆಸೀಸ್‌ ವಿರುದ್ಧ 218 ರನ್‌ಗಳ ಭರ್ಜರಿ ಮುನ್ನಡೆ ಸಾಧಿಸಿದೆ.

    ಪರ್ತ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾರ್ಡರ್‌ ಗವಾಸ್ಕರ್‌ ಟ್ರೋಫಿ (Border Gavaskar Trophy) ಟೆಸ್ಟ್‌ ಸರಣಿಯ 2ನೇ ದಿನದ ಅಂತ್ಯಕ್ಕೆ ಯಾವುದೇ ವಿಕೆಟ್‌ ನಷ್ಟವಿಲ್ಲದೇ ಭಾರತ 172 ರನ್‌ ಕಲೆಹಾಕಿದೆ. ಈ ಮೂಲಕ ಆಸ್ಟ್ರೇಲಿಯಾ (Australia) ವಿರುದ್ಧ 218 ರನ್‌ಗಳ ಮುನ್ನಡೆ ಸಾಧಿಸಿದೆ. ಯಶಸ್ವಿ ಜೈಸ್ವಾಲ್‌ ಅಜೇಯ 90 ರನ್‌ (193 ಎಸೆತ, 7 ಬೌಂಡರಿ, 2 ಸಿಕ್ಸರ್‌), ಕೆ.ಎಲ್‌ ರಾಹುಲ್‌ 62 ರನ್‌ (153 ಎಸೆತ, 4 ಬೌಂಡರಿ) ಗಳಿಸಿದ್ದು, ಭಾನುವಾರ 3ನೇ ದಿನದ ಆಟ ಮುಂದುವರಿಸಲಿದ್ದಾರೆ.

    67 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡಿದ್ದ ಆಸೀಸ್‌ ಇಂದು 2ನೇ ದಿನದ ಆಟ ಆರಂಭಿಸಿತು. ಆದ್ರೆ 104 ರನ್‌ ಗಳಿಸುವಷ್ಟರಲ್ಲೇ ಉಳಿದ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಬಳಿಕ 46 ರನ್‌ಗಳ ಮುನ್ನಡೆಯೊಂದಿಗೆ ತನ್ನ 2ನೇ ಇನ್ನಿಂಗ್ಸ್‌ ಆರಂಭಿಸಿದ ಭಾರತ 2ನೇ ದಿನ ವಿಕೆಟ್‌ ಬಿಟ್ಟುಕೊಡದೇ ಆಸೀಸ್‌ ವಿರುದ್ಧ ಹಿಡಿತ ಸಾಧಿಸಿದೆ.

    ʻಯಶಸ್ವಿʼಸಿಕ್ಸರ್‌ ದಾಖಲೆ:
    ಆರಂಭಿಕರಾಗಿ ಕಣಕ್ಕಿಳಿದ ಕೆ.ಎಲ್‌ ರಾಹುಲ್‌ ಹಾಗೂ ಯಶಸ್ವಿ ಜೈಸ್ವಾಲ್‌ ನಿಧಾನಗತಿಯ ಬ್ಯಾಟಿಂಗ್‌ ಮಾಡಿದರೂ, ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ದಿನದ ಅಂತ್ಯಕ್ಕೆ 57 ಓವರ್‌ಗಳಲ್ಲಿ 172 ರನ್‌ಗಳ ಜೊತೆಯಾಟ ನೀಡಿದರು. ಈ ಮೂಲಕ ಕಳೆದ 20 ವರ್ಷಗಳಲ್ಲಿ ಪರ್ತ್‌ ಕ್ರೀಡಾಂಗಣದಲ್ಲಿ ಅತಿದೊಡ್ಡ ಜೊತೆಯಾಟ ನೀಡಿದ ಜೋಡಿ ಎಂಬ ದಾಖಲೆಗೆ ಪಾತ್ರರಾದರು. ಇದೇ ವೇಳೆ 193 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 90 ರನ್‌ ಸಿಡಿಸಿದ ಜೈಸ್ವಾಲ್‌ ಒಂದೇ ವರ್ಷದಲ್ಲಿ ಅತಿಹೆಚ್ಚು (34) ಸಿಕ್ಸರ್‌ ಸಿಡಿಸಿದ ವಿಶೇಷ ದಾಖಲೆಯನ್ನೂ ಹೆಗಲಿಗೇರಿಸಿಕೊಂಡರು.

    150ಕ್ಕೆ ಭಾರತ ಆಲೌಟ್:
    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಮೊದಲ ದಿನ 150 ರನ್‌ಗಳಿಗೆ ಆಲೌಟ್‌ ಆಗಿತ್ತು. ನಿತೀಶ್ ಕುಮಾರ್ ರೆಡ್ಡಿ 41 ರನ್ (59 ಎಸೆತ, 6 ಬೌಂಡರಿ, 1 ಸಿಕ್ಸರ್), ರಿಷಬ್ ಪಂತ್ 37 ರನ್ (78 ಎಸೆತ, 3 ಬೌಂಡರಿ, 1 ಸಿಕ್ಸರ್), ರನ್ ಕೆ.ಎಲ್ ರಾಹುಲ್ 26 ರನ್ (74 ಎಸೆತ, 3 ಬೌಂಡರಿ) ಗಳಿಸಿದ್ದು ಬಿಟ್ಟರೆ, ಉಳಿದವರು ಅಲ್ಪ ಮೊತ್ತಕ್ಕೆ ಆಲೌಟ್ ಆದರು. ಆರಂಭಿಕ ಯಶಸ್ವಿ ಜೈಸ್ವಾಲ್, ದೇವದತ್ ಪಡಿಕಲ್ ಶೂನ್ಯ ಸುತ್ತಿದ್ದರು.

    ಆಸೀಸ್‌ 104ಕ್ಕೆ ಆಲೌಟ್‌:
    ಮೊದಲ ದಿನದಾಟದಲ್ಲಿ 67 ರನ್‌ಗಳಿಗೆ 7 ವಿಕೆಟ್‌ ಕಳೆದಿಕೊಂಡಿದ್ದ ಆಸೀಸ್‌ 2ನೇ ದಿನ 104 ರನ್‌ಗಳಿಗೆ ಆಲೌಟ್‌ ಆಯಿತು. ಆರಂಭಿಕ ಉಸ್ಮಾನ್ ಖವಾಜ (8 ರನ್), ನಾಥನ್ ಮೆಕ್‌ಸ್ವೀನಿ (10 ರನ್), ಮಾರ್ನಸ್ ಲಾಬುಶೇನ್ (2 ರನ್), ಟ್ರಾವಿಸ್ ಹೆಡ್ (11 ರನ್), ಸ್ಟೀವ್ ಸ್ಮಿತ್ (0), ಮಿಚೆಲ್ ಮಾರ್ಷ್ (6 ರನ್), ನಾಯಕ ಪ್ಯಾಟ್ ಕಮ್ಮಿನ್ಸ್ (3 ರನ್) ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಇನ್ನುಳಿದಂತೆ ಅಲೆಕ್ಸ್‌ ಕ್ಯಾರಿ 21 ರನ್‌, ಮಿಚೆಲ್‌ ಸ್ಟಾರ್ಕ್‌ 26 ರನ್‌, ನಥಾನ್‌ ಲಿಯಾನ್‌ 5 ರನ್‌ ಗಳಿಸಿದ್ರೆ, ಜೋಶ್‌ ಹೇಜಲ್ವುಡ್‌ 7 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

  • ಬೌಲರ್‌ಗಳ ಆಟದಲ್ಲಿ ಮೊದಲ ದಿನವೇ 17 ವಿಕೆಟ್‌ ಪತನ!

    ಬೌಲರ್‌ಗಳ ಆಟದಲ್ಲಿ ಮೊದಲ ದಿನವೇ 17 ವಿಕೆಟ್‌ ಪತನ!

    ಪರ್ತ್‌: ಆಸ್ಟ್ರೇಲಿಯಾ-ಭಾರತದ (Aus vs Ind) ನಡುವೆ ನಡೆಯುತ್ತಿರುವ ಬಾರ್ಡರ್‌ ಗವಾಸ್ಕರ್‌ ಟ್ರೋಫಿ (Border Gavaskar Trophy) ಟೆಸ್ಟ್‌ ಸರಣಿಯ ಮೊದಲ ದಿನವೇ 17 ವಿಕೆಟ್‌ ಪತನವಾಗಿದೆ. 1952ರ ಬಳಿಕ ಆಸ್ಟ್ರೇಲಿಯಾದಲ್ಲಿ ಇದೇ ಮೊದಲ ಬಾರಿಗೆ ಟೆಸ್ಟ್‌ ಪಂದ್ಯದ ಮೊದಲ ದಿನವೇ ಅತಿಹೆಚ್ಚು ವಿಕೆಟ್‌ ಪತನವಾಗಿದೆ. ಸಹಜವಾಗಿಯೇ ಅನುಕೂಲಕರ ಪಿಚ್‌ನಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸಿದ್ದಾರೆ. ಮೊದಲ ದಿನದ ಅಂತ್ಯಕ್ಕೆ 67 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡಿರುವ ಆಸೀಸ್‌ ಶನಿವಾರ 2ನೇ ದಿನದ ಆಟ ಮುಂದುವರಿಸಲಿದೆ.

    ಪರ್ತ್‌ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ (Team India), ಮೊದಲ ಇನ್ನಿಂಗ್ಸ್‌ನಲ್ಲಿ 150 ರನ್‌ಗಳಿಗೆ ಆಲೌಟ್‌ ಆಯಿತು. ಆದ್ರೆ ಅಲ್ಪ ಮೊತ್ತ ಎಂದು ಭಾವಿಸಿದ್ದ ಆಸೀಸ್‌ ಬ್ಯಾಟರ್‌ಗಳಿಗೆ ಭಾರತೀಯ ಬೌಲರ್‌ಗಳು ಮಣ್ಣುಮುಕ್ಕಿಸಿದರು. ನಾಯಕ ಜಸ್ಪ್ರೀತ್‌ ಬುಮ್ರಾ (Jasprit Bumrah), ಮೊಹಮ್ಮದ್‌ ಸಿರಾಜ್‌ ಹಾಗೂ ಹರ್ಷಿತ್‌ ರಾಣಾ ಅವರ ವೇಗದ ದಾಳಿಗೆ ಆಸೀಸ್‌ ಟಾಪ್‌ ಬ್ಯಾಟರ್‌ಗಳು ಧೂಳಿಪಟವಾದರು. ಇದನ್ನೂ ಓದಿ: IND vs Aus Test| ವಿವಾದಾತ್ಮಕ ತೀರ್ಪಿಗೆ ರಾಹುಲ್‌ ಔಟ್‌

    ಆರಂಭಿಕ ಉಸ್ಮಾನ್‌ ಖವಾಜ (8 ರನ್‌), ನಾಥನ್ ಮೆಕ್‌ಸ್ವೀನಿ (10 ರನ್‌), ಮಾರ್ನಸ್‌ ಲಾಬುಶೇನ್‌ (2 ರನ್‌), ಟ್ರಾವಿಸ್‌ ಹೆಡ್‌ (11 ರನ್‌), ಸ್ಟೀವ್‌ ಸ್ಮಿತ್‌ (0), ಮಿಚೆಲ್‌ ಮಾರ್ಷ್‌ (6 ರನ್‌), ನಾಯಕ ಪ್ಯಾಟ್‌ ಕಮ್ಮಿನ್ಸ್‌ (3 ರನ್‌) ಬ್ಯಾಕ್‌ ಟು ಬ್ಯಾಕ್‌ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಆದ್ರೆ ಕ್ರೀಸ್‌ನಲ್ಲಿ ಸುಧಾರಿತ ಪ್ರದರ್ಶನ ನೀಡಿದ ಮಧ್ಯಮ ಕ್ರಮಾಂಕದ ಬ್ಯಾಟರ್‌ ಅಲೆಕ್ಸ್‌ ಕ್ಯಾರಿ 28 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 19 ರನ್‌, ಮಿಚೆಲ್‌ ಸ್ಟಾರ್ಕ್‌ 6 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದಿದ್ದಾರೆ.

    ನಾಯಕನಾಗಿ ಮಿಂಚಿದ ಬುಮ್ರಾ:
    ನಾಯಕನಾಗಿ ಕಣಕ್ಕಿಳಿದ ಬುಮ್ರಾ 10 ಓವರ್‌ಗಳಲ್ಲಿ 3 ಮೇಡಿನ್‌ ಸೇರಿದಂತೆ ಕೇವಲ 17 ರನ್‌ ಬಿಟ್ಟುಕೊಟ್ಟು ಪ್ರಮುಖ ನಾಲ್ಕು ವಿಕೆಟ್‌ ಕಿತ್ತರೆ, ಮೊಹಮ್ಮದ್‌ ಸಿರಾಜ್‌ 2 ವಿಕೆಟ್‌ ಹಾಗೂ ಹರ್ಷಿತ್‌ ರಾಣಾ 1 ವಿಕೆಟ್‌ ಪಡೆದು ಮಿಂಚಿದ್ದಾರೆ. ಇದನ್ನೂ ಓದಿ: ಮುಂದಿನ 3 ಐಪಿಎಲ್ ಸೀಸನ್‌ಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

    150ಕ್ಕೆ ಭಾರತ ಆಲೌಟ್‌:
    ಇದಕ್ಕೂ ಮುನ್ನ ಬ್ಯಾಟ್‌ ಬೀಸಿದ ಭಾರತ 150 ರನ್‌ಗಳಿಗೆ ಆಕೌಟ್‌ ಆಯಿತು. ನಿತೀಶ್‌ ಕುಮಾರ್‌ ರೆಡ್ಡಿ 41 ರನ್‌ (59 ಎಸೆತ, 6 ಬೌಂಡರಿ, 1 ಸಿಕ್ಸರ್)‌, ರಿಷಬ್‌ ಪಂತ್‌ 37 ರನ್‌ (78 ಎಸೆತ, 3 ಬೌಂಡರಿ, 1 ಸಿಕ್ಸರ್)‌, ರನ್‌ ಕೆ.ಎಲ್‌ ರಾಹುಲ್‌ 26 ರನ್‌ (74 ಎಸೆತ, 3 ಬೌಂಡರಿ) ಗಳಿಸಿದ್ದು ಬಿಟ್ಟರೆ, ಉಳಿದವರು ಅಲ್ಪ‌ ಮೊತ್ತಕ್ಕೆ ಆಲೌಟ್‌ ಆದರು. ಆರಂಭಿಕ ಯಶಸ್ವಿ ಜೈಸ್ವಾಲ್‌, ದೇವದತ್‌ ಪಡಿಕಲ್‌ ಶೂನ್ಯ ಸುತ್ತಿದ್ದರು.

    ಆಸೀಸ್‌ ಪರ ಜೋಶ್‌ ಹೇಜಲ್ವುಡ್‌ 4 ವಿಕೆಟ್‌ ಕಿತ್ತರೆ, ಮಿಚೆಲ್‌ ಸ್ಟಾರ್ಕ್‌, ಪ್ಯಾಟ್‌ ಕಮ್ಮಿನ್ಸ್‌ ಹಾಗೂ ಮಿಚೆಲ್‌ ಮಾರ್ಷ್‌ ತಲಾ 2 ವಿಕೆಟ್‌ ಕಿತ್ತರು. ಇದನ್ನೂ ಓದಿ: ICC Champions Trophy 2025 | ಈ ವಾರವೇ ವೇಳಾಪಟ್ಟಿ ಬಿಡುಗಡೆ ಸಾಧ್ಯತೆ

    ವಿವಾದಾತ್ಮಕ ತೀರ್ಪಿಗೆ ರಾಹುಲ್‌ ಔಟ್‌:
    ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ (Test Cricket) ಕೆಎಲ್‌ ರಾಹುಲ್‌ (KL Rahul) ಅವರು ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದಾರೆ. ಟಾಸ್‌ ಗೆದ್ದು ಮೊದಲ ಬ್ಯಾಟ್‌ ಮಾಡಿದ ಭಾರತ (Team India) 32 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿತ್ತು. ಪರಿಸ್ಥಿತಿ ಹೀಗಿದ್ದರೂ ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ರಾಹುಲ್‌ ನಿಧಾನವಾಗಿ ಬ್ಯಾಟ್‌ ಬೀಸಿ ಇನ್ನಿಂಗ್ಸ್‌ ಕಟ್ಟುತ್ತಿದ್ದರು. ಭಾರತ ಇನ್ನಿಂಗ್ಸ್‌ನ 23 ಓವರ್‌ ಅನ್ನು ಸ್ಟ್ರಾಕ್‌ ಎಸೆಯುತ್ತಿದ್ದರು. ಎರಡನೇ ಎಸೆತದ ವೇಳೆ ಸ್ಟೈಕ್‌ನಲ್ಲಿ ರಾಹುಲ್‌ ಬಾಲನ್ನು ತಡೆಯಲು ಯತ್ನಿಸಿದರು. ಆದರೆ ಬಾಲ್‌ ಬ್ಯಾಟ್‌ನ ಎಡ್ಜ್‌ ಬಳಿ ಸಾಗಿ ವಿಕೆಟ್‌ ಕೀಪರ್‌ ಕೈ ಸೇರಿತು.

    ಆಸ್ಟ್ರೇಲಿಯಾದ (Australia) ಆಟಗಾರರು ಔಟ್‌ ಮನವಿ ಸಲ್ಲಿಸಿದರೂ ಫೀಲ್ಡ್‌ ಅಂಪೈರ್‌ ಔಟ್‌ ನೀಡಿರಲಿಲ್ಲ. ಹೀಗಾಗಿ ಆಸೀಸ್‌ ಆಟಗಾರರು ಡಿಆರ್‌ಎಸ್‌ (DRS) ಮನವಿ ಮಾಡಿದರು. ರಿಪ್ಲೈ ವೇಳೆ ಚೆಂಡು ಬ್ಯಾಟ್‌ಗೆ ತಾಗಿದೆಯೇ ಅಥವಾ ಪ್ಯಾಡ್‌ಗೆ ತಾಗಿದೆಯೇ ಎಂಬುದು ಸ್ಪಷ್ಟವಾಗಿರಲಿಲ್ಲವಾದರೂ, ಸ್ನಿಕ್ಕೋಮೀಟರ್ ಏರಿಳಿತವನ್ನು ಆಧರಿಸಿ ರಾಹುಲ್ ಔಟ್ ಎಂದು ತೀರ್ಪು ಪ್ರಕಟಿಸಲಾಯಿತು. ಹೀಗಾಗಿ ಫೀಲ್ಡ್ ಅಂಪೈರ್ ಕೂಡ ತಮ್ಮ ನಿರ್ಧಾರ ಬದಲಿಸಿ ಔಟ್‌ ತೀರ್ಪು ನೀಡಿದರು. 26 ರನ್‌ ಗಳಿಸಿದ ಕೆಎಲ್‌ ರಾಹುಲ್‌ ಅಸಮಾಧಾನದಿಂದಲೇ ಪೆವಿಲಿಯನ್‌ ಕಡೆಗೆ ಹೆಜ್ಜೆ ಹಾಕಿದರು.

    ನಂತರ ರಿಪ್ಲೈ ನೋಡಿದಾಗ ಪ್ಯಾಡಿಗೆ ಬ್ಯಾಟ್‌ ಬಡಿದಿರುವುದು ಗೊತ್ತಾಗಿದೆ. ಮೂರನೇ ಅಂಪೈರ್‌ ಸ್ವಲ್ಪ ಪರಿಶೀಲನೆ ಮಾಡಿ ಇನ್ನೊಂದು ಕೋನದಿಂದ ನೋಡಿದ್ದರೆ ತೀರ್ಪು ಬದಲಾಗುವ ಸಾಧ್ಯತೆ ಇತ್ತು. ಈಗ ಈ ವಿಚಾರವನ್ನು ಅಭಿಮಾನಿಗಳು ಪ್ರಸ್ತಾಪಿಸಿ  ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತಪಡಿಸುತ್ತಿದ್ದಾರೆ.

  • ಶುಕ್ರವಾರದಿಂದ ಭಾರತ-ಆಸೀಸ್‌ ನಡುವೆ ಹೈವೋಲ್ಟೇಜ್‌ ಟೆಸ್ಟ್‌ ಸರಣಿ – ಕ್ಯಾಪ್ಟನ್‌ ಬುಮ್ರಾ ಏನ್‌ ಹೇಳಿದ್ರು?

    ಶುಕ್ರವಾರದಿಂದ ಭಾರತ-ಆಸೀಸ್‌ ನಡುವೆ ಹೈವೋಲ್ಟೇಜ್‌ ಟೆಸ್ಟ್‌ ಸರಣಿ – ಕ್ಯಾಪ್ಟನ್‌ ಬುಮ್ರಾ ಏನ್‌ ಹೇಳಿದ್ರು?

    ಪರ್ತ್‌: ಟೆಸ್ಟ್‌ ಕ್ರಿಕೆಟ್‌ನಲ್ಲೇ ಹೈವೋಲ್ಟೇಜ್‌ ಸರಣಿಯಾಗಿ ಗುರುತಿಸಿಕೊಂಡಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್‌ ಗವಾಸ್ಕರ್‌ ಟ್ರೋಫಿ (Border Gavaskar Trophy) ಟೆಸ್ಟ್‌ ಸರಣಿ ಇದೇ ಶುಕ್ರವಾರ (ನ.22)ದಿಂದ ಆರಂಭವಾಗುತ್ತಿದೆ. ನ.22ರಿಂದ 2025ರ ಜನವರಿ 7ರ ವರೆಗೆ ಒಟ್ಟು 5 ಪಂದ್ಯಗಳ ಸರಣಿ ನಡೆಯಲಿದೆ. ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ವೇಗಿ ಜಸ್ಪ್ರೀತ್‌ ಬುಮ್ರಾ (Jasprit Bumrah) ಮೊದಲ ಟೆಸ್ಟ್‌ ಪಂದ್ಯವನ್ನು ಮುನ್ನಡೆಸಲಿದ್ದಾರೆ.

    ಮೊದಲ ಟೆಸ್ಟ್‌ಗೂ ಮುನ್ನ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿರುವ ಅವರು, ನಾನು ರೋಹಿತ್‌ (Rohit Sharma) ಅವರೊಂದಿಗೆ ಮಾತನಾಡಿದ್ದೇನೆ. ಆಸ್ಟ್ರೇಲಿಯಾಗೆ ಬರುವವರೆಗೂ ಕ್ಯಾಪ್ಟನ್‌ ಆಗುವ ಬಗ್ಗೆ ನನಗೆ ಸ್ಪಷ್ಟತೆ ಇರಲಿಲ್ಲ. ಇಲ್ಲಿಗೆ ಬಂದ ನಂತರ ಕೋಚ್‌ ಗೌತಮ್‌ ಗಂಭೀರ್‌ ಹಾಗೂ ಆಡಳಿತ ಮಂಡಳಿಯಿಂದ ಸ್ಪಷ್ಟತೆ ಸಿಕ್ಕಿತು. ಈಗಾಗಲೇ ಆಡುವ 11ರ ಬಳಗ (ಪ್ಲೇಯಿಂಗ್‌- XI) ಅಂತಿಮಗೊಳಿಸಲಾಗಿದೆ. ಆದರೂ ಶುಕ್ರವಾರ ಬೆಳಗ್ಗೆ ಟಾಸ್‌ ಮುಗಿದ ಬಳಿಕವೇ ಬಹಿರಂಗಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.

    ಇದೇ ವೇಳೆ ಸ್ಟಾರ್‌ ವೇಗಿ ಮೊಹಮ್ಮದ್‌ ಶಮಿ (Mohammed Shami) ಸಹ ಸರಣಿ ಸೇರಿಕೊಳ್ಳುವ ಬಗ್ಗೆ ಸುಳಿವು ನೀಡಿದ್ದಾರೆ. ಶಮಿ ಅವರು ಈ ಟೆಸ್ಟ್ ಸರಣಿಯ ವೇಳೆಗೆ ಭಾರತ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಆದ್ರೆ ಎಷ್ಟನೇ ಟೆಸ್ಟ್ ಪಂದ್ಯಕ್ಕೆ ಲಭ್ಯರಾಗುತ್ತಾರೆ ಎಂಬುದು ಸದ್ಯದಲ್ಲೇ ತಿಳಿಯಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ICC Champions Trophy 2025 | ಈ ವಾರವೇ ವೇಳಾಪಟ್ಟಿ ಬಿಡುಗಡೆ ಸಾಧ್ಯತೆ

    ಶಮಿ ಮತ್ತೆ ಕ್ರಿಕೆಟ್ ಆಡಲು ಶುರು ಮಾಡಿದ್ದಾರೆ. ಖಂಡಿತವಾಗಿಯೂ ಅವರು ತಂಡದ ಆಂತರಿಕ ಭಾಗವಾಗಿದ್ದಾರೆ. ಆಡಳಿತ ಮಂಡಳಿ ಅವರ ಮೇ ಒಂದು ಕಣ್ಣಿಟ್ಟಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶಮಿ ಇಲ್ಲಿ ಆಡುವುದನ್ನು ನೀವು ನೋಡುತ್ತೀರಿ ಎಂದು ಬುಮ್ರಾ ಹೇಳಿದ್ದಾರೆ. ಇದನ್ನೂ ಓದಿ: 20 ವರ್ಷಗಳ ಬಳಿಕ ರಿಂಗ್‌ನಲ್ಲಿ ಘರ್ಜಿಸಿದ ಮೈಕ್‌ ಟೈಸನ್‌ – ಜೇಕ್ ಪಾಲ್ ವಿರುದ್ಧ ಸೋಲು

    ಇನ್ನು ಭಾರತ ತಂಡದ ಬೌಲಿಂಗ್ ಕೋಚ್ ಆಗಿರುವ ಮಾರ್ನೆ ಮಾರ್ಕೆಲ್ ಅವರು ಇತ್ತೀಚೆಗೆ ನ್ಯೂಜಿಲೆಂಡ್ ಸರಣಿ ವೇಳೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಯಲ್ಲಿ ತರಬೇತಿ ಪಡೆಯುತ್ತಿದ್ದ ಶಮಿ ಅವರನ್ನು ಹತ್ತಿರದಿಂದ ವೀಕ್ಷಿಸಿದ್ದರು. ಜೊತೆಗೆ ಅವರ ಪ್ರಗತಿಯನ್ನು ತಂಡದ ಮ್ಯಾನೇಜ್ಮೆಂಟ್‌ ಹತ್ತಿರದಿಂದ ಗಮನಿಸುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಕ್ಯಾಪ್ಟನ್‌ ರೋಹಿತ್‌ ಶರ್ಮಾ ದಂಪತಿಗೆ ಗಂಡು ಮಗು ಜನನ

    ಕಳೆದ ವರ್ಷ ಮಾರ್ಚ್‌ನಲ್ಲಿ ನಡೆದ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಸರಣಿ ಗೆದ್ದುಕೊಂಡಿತ್ತು. ಆ ಬಳಿಕ ನಡೆದ ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಪ್ಯಾಟ್‌ ಕಮ್ಮಿನ್ಸ್‌ ನಾಯಕತ್ವದ ಆಸೀಸ್‌ ವಿರುದ್ಧವೇ ಸೋತಿತ್ತು.

    ಶಮಿಗೆ ಏನಾಗಿತ್ತು?
    2023ರ ವಿಶ್ವಕಪ್ ಫೈನಲ್ ಪಂದ್ಯದ ಬಳಿಕ ಮೊಹಮ್ಮದ್ ಶಮಿ ಮೊಣಕಾಲಿನ ಗಾಯದ ಸಮಸ್ಯೆಯಿಂದಾಗಿ ಟೀಂ ಇಂಡಿಯಾದಿಂದ ಹೊರಗುಳಿದಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಶಮಿ ಬೆಂಗಳೂರಿನ ಎನ್‌ಸಿಎನಲ್ಲಿ ತರಬೇತಿಯೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಬಂಗಾಳ ಪರವಾಗಿ ರಣಜಿ ಪಂದ್ಯವನ್ನಾಡುತ್ತಿದ್ದಾರೆ. ಹಿಂದಿನ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ 156 ರನ್ ನೀಡಿ 7 ವಿಕೆಟ್ ಕಬಳಿಸುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದರು. ಹೀಗಾಗಿ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ 2ನೇ ಅಥವಾ 3ನೇ ಪಂದ್ಯದ ವೇಳೆಗಾದರೂ ಅವರು ಭಾರತ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಗಳಿವೆ ಎಂದು ವರದಿಗಳಿಂದ ತಿಳಿದುಬಂದಿದೆ.

  • World Cup 2023: ರಾಹುಲ್‌, ವಿರಾಟ ಶತಕದ ಹೋರಾಟ – ಭಾರತಕ್ಕೆ 6 ವಿಕೆಟ್‌ಗಳ ಅಮೋಘ ಜಯ

    World Cup 2023: ರಾಹುಲ್‌, ವಿರಾಟ ಶತಕದ ಹೋರಾಟ – ಭಾರತಕ್ಕೆ 6 ವಿಕೆಟ್‌ಗಳ ಅಮೋಘ ಜಯ

    ಚೆನ್ನೈ: ಟೀಂ ಇಂಡಿಯಾ ಸ್ಟಾರ್‌ ಆಟಗಾರರಾದ ವಿರಾಟ್‌ ಕೊಹ್ಲಿ (Virat kohli) ಮತ್ತು ಕೆ.ಎಲ್‌ ರಾಹುಲ್‌ (KL Rahul) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶನದಿಂದ ಟೀಂ ಇಂಡಿಯಾ (Team India), ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‌ಗಳ‌ ಅಮೋಘ ಜಯ ಸಾಧಿಸಿದೆ. ಈ ಮೂಲಕ ವಿಶ್ವಕಪ್‌ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.

    ಆಸೀಸ್‌ ನೀಡಿದ 200 ರನ್‌ಗಳ ಗುರಿ ಬೆನ್ನತ್ತಿದ್ದ ಭಾರತ 41.2 ಓವರ್‌ನಲ್ಲೇ 4 ವಿಕೆಟ್‌ ನಷ್ಟಕ್ಕೆ 201 ರನ್‌ ಬಾರಿಸಿ ಗೆಲುವು ಸಾಧಿಸಿದೆ. ಇದನ್ನೂ ಓದಿ: World Cup 2023: ಕೆ.ಎಲ್‌ ರಾಹುಲ್‌, ಕೊಹ್ಲಿ ಶತಕದ ಜೊತೆಯಾಟ – ಭಾರತಕ್ಕೆ 6 ವಿಕೆಟ್‌ಗಳ ಅಮೋಘ ಜಯ

    ಚೇಸಿಂಗ್‌ ಆರಂಭಿಸಿದ ಭಾರತ 2ನೇ ಓವರ್‌ನಲ್ಲೇ ಕೇವಲ 2 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ತೀವ್ರ ಸಂಕಷ್ಟ ಅನುಭವಿಸಿತ್ತು. ಇದರಿಂದ 4ನೇ ವಿಕೆಟ್‌ಗೆ ಜೊತೆಯಾದ ವಿರಾಟ್‌ ಕೊಹ್ಲಿ, ಕೆ.ಎಲ್‌ ರಾಹುಲ್‌ ಜೋಡಿ ನಿಧಾನಗತಿಯ ಬ್ಯಾಟಿಂಗ್‌ ಆರಂಭಿಸಿತ್ತು. 15 ಓವರ್‌ ಪೂರ್ಣಗೊಂಡರೂ ಭಾರತ 49 ರನ್‌ ಗಳಿಸಿದ್ದರಿಂದ ಗೆಲವು ಅಸಾಧ್ಯವೆಂದೇ ಭಾವಿಸಲಾಗಿತ್ತು. ಬಳಿಕ ಸಮಯೋಚಿತ ಬ್ಯಾಟಿಂಗ್‌ ನಿಂದ ಒಂದೊಂದೇ ಬೌಂಡರಿಗಳನ್ನ ಸಿಡಿಸುತ್ತಾ ತಂಡವನ್ನು ಗೆಲುವಿನ ಹಾದಿಯತ್ತ  ಮುನ್ನಡೆಸಿದರು. ಇದನ್ನೂ ಓದಿ: World Cup 2023: ಸ್ಪಿನ್‌ ಪಿಚ್‌ನಲ್ಲಿ ತಿಣುಕಾಡಿದ ಆಸೀಸ್‌ – ಭಾರತಕ್ಕೆ 200 ರನ್‌ಗಳ ಗುರಿ

    ಇವರಿಬ್ಬರ ಜೊತೆಯಾಟದಿಂದ ಭಾರತ 35 ಓವರ್‌ಗಳಲ್ಲಿ 151 ರನ್‌ ಬಾರಿಸಿತ್ತು. 4ನೇ ವಿಕೆಟ್‌ಗೆ ಕೆ.ಎಲ್‌ ರಾಹುಲ್‌ ಹಾಗೂ ಕೊಹ್ಲಿ 215 ಎಸೆತಗಳಲ್ಲಿ 165 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು. ಕೊಹ್ಲಿ 116 ಎಸೆತಗಳಲ್ಲಿ 6 ಬೌಂಡರಿಯೊಂದಿಗೆ 85 ರನ್‌ ಚಚ್ಚಿ ಶತಕ ವಂಚಿರಾದರು. ಇನ್ನೂ ಕೊನೆಯವರೆಗೂ ಹೋರಾಡಿದ ಕೆ.ಎಲ್‌ ರಾಹುಲ್‌ 115 ಎಸೆತಗಳಲ್ಲಿ 97 ರನ್‌ (8 ಬೌಂಡರಿ, 2 ಸಿಕ್ಸರ್) ಚಚ್ಚಿ ಅಜೇರಾಗುಳಿದರು. ಕೊನೆಯಲ್ಲಿ ಹಾರ್ದಿಕ್‌ ಪಾಂಡ್ಯ 11 ರನ್‌ ಕೊಡುಗೆ ನೀಡಿದರು.

    ಆಸೀಸ್‌ ಪರ ಆರಂಭದಲ್ಲಿ ಮಾರಕ ದಾಳಿ ನಡೆಸಿದ ಜೋಶ್ ಹ್ಯಾಜಲ್‌ವುಡ್‌ 3 ವಿಕೆಟ್‌ ಕಿತ್ತರೆ, ಮಿಚೆಲ್‌ ಸ್ಟಾರ್ಕ್‌ 1 ವಿಕೆಟ್‌ ಪಡೆದರು. ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಆಸೀಸ್‌ 49.3 ಓವರ್‌ಗಳಲ್ಲಿ 199ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಇದನ್ನೂ ಓದಿ: Asian Games 2023: ಏಷ್ಯನ್‌ ಗೇಮ್ಸ್‌ನಲ್ಲೂ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ಸಾತ್ವಿಕ್‌ಸಾಯಿರಾಜ್, ಚಿರಾಗ್‌ ಜೋಡಿ  

    ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್‌ ವಾರ್ನರ್‌ ಹಾಗೂ ಮಚೆಲ್‌ ಮಾರ್ಷ್‌ ಜೋಡಿ ಉತ್ತಮ ಆರಂಭ ನೀಡುವಲ್ಲಿ ವಿಫಲವಾಯಿತು. 2.2 ಓವರ್‌ನಲ್ಲೇ 5 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡ ಆಸೀಸ್‌ ಸಂಕಷ್ಟಕ್ಕೀಡಾಯಿತು. ಈ ವೇಳೆ 2ನೇ ವಿಕೆಟ್‌ಗೆ ಡೇವಿಡ್‌ ವಾರ್ನರ್‌ ಮತ್ತು ಸ್ಟೀವ್‌ ಸ್ಮಿತ್‌ ಜೋಡಿ, 85 ಎಸೆತಗಳಲ್ಲಿ 69 ರನ್‌ ಹಾಗೂ ಸ್ಟೀವ್‌ ಸ್ಮಿತ್‌ ಮತ್ತು ಮಾರ್ನಸ್‌ ಲಾಬುಶೇನ್‌ ಜೋಡಿ 64 ಎಸೆತಗಳಲ್ಲಿ 36 ರನ್‌ಗಳ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿತ್ತು. ಈ ವೇಳೆ ಟೀಂ ಇಂಡಿಯಾ ಸ್ಪಿನ್ನರ್‌ಗಳು ಆಸೀಸ್‌ ಅಗ್ರ ಕ್ರಮಾಂಕದ ಬ್ಯಾಟರ್‌ಗಳನ್ನ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಆಸೀಸ್‌ 49.3 ಓವರ್‌ಗಳಲ್ಲಿ 199ರನ್‌ಗಳಿಗೆ ಸರ್ವಪತನ ಕಂಡಿತು.

    ಆಸೀಸ್‌ ಪರ ಡೇವಿಡ್‌ ವಾರ್ನರ್‌ 41 ರನ್‌ (52 ಎಸೆತ, 6 ಬೌಂಡರಿ), ಸ್ಟೀವ್‌ ಸ್ಮಿತ್‌ 46 ರನ್‌ (71 ಎಸೆತ 5 ಬೌಂಡರಿ), ಮಾರ್ನಸ್‌ ಲಾಬುಶೇನ್‌ 27 ರನ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌ 15 ರನ್‌, ಕ್ಯಾಮರೂನ್‌ ಗ್ರೀನ್‌ 8 ರನ್‌, ಪ್ಯಾಟ್‌ ಕಮ್ಮಿನ್ಸ್‌ 15 ರನ್‌, ಮಿಚೆಲ್‌ ಸ್ಟಾರ್ಕ್‌ 28 ರನ್‌, ಆಡಂ ಝಂಪಾ 6 ರನ್‌, ಜೋಶ್ ಹ್ಯಾಜಲ್‌ವುಡ್‌ 1 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರೆ, ಮಿಚೆಲ್‌ ಮಾರ್ಷ್‌ ಹಾಗೂ ಅಲೆಕ್ಸ್‌ ಕ್ಯಾರಿ ಶೂನ್ಯಕ್ಕೆ ನಿರ್ಗಮಿಸಿದರು.

    ಜಡೇಜಾ ಸ್ಪಿನ್‌ ಜಾದು: ಟೀಂ ಇಂಡಿಯಾ ಪರ ಬೌಲಿಂಗ್‌ನಲ್ಲಿ ಮೋಡಿ ಮಾಡಿದ ರವೀಂದ್ರ ಜಡೇಜಾ 10 ಓವರ್‌ಗಳಲ್ಲಿ 28 ರನ್‌ ನೀಡಿ 3 ವಿಕೆಟ್‌ ಕಿತ್ತರೆ, ಜಸ್ಪ್ರೀತ್‌ ಬುಮ್ರಾ ಹಾಗೂ ಕುಲ್ದೀಪ್‌ ಯಾದವ್‌ ತಲಾ 2 ವಿಕೆಟ್‌, ಹಾರ್ದಿಕ್‌ ಪಾಂಡ್ಯ, ರವಿಚಂದ್ರನ್‌ ಅಶ್ವಿನ್‌ ಹಾಗೂ ಮೊಹಮ್ಮದ್‌ ಸಿರಾಜ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • World Cup 2023: ಸ್ಪಿನ್‌ ಪಿಚ್‌ನಲ್ಲಿ ತಿಣುಕಾಡಿದ ಆಸೀಸ್‌ – ಭಾರತಕ್ಕೆ 200 ರನ್‌ಗಳ ಗುರಿ

    World Cup 2023: ಸ್ಪಿನ್‌ ಪಿಚ್‌ನಲ್ಲಿ ತಿಣುಕಾಡಿದ ಆಸೀಸ್‌ – ಭಾರತಕ್ಕೆ 200 ರನ್‌ಗಳ ಗುರಿ

    ಚೆನ್ಹೈ: ಚೆಪಾಕ್‌ನ ಚಿದಂಬರಂ ಕ್ರೀಡಾಂಗಣದಲ್ಲಿ ಭಾರತದ (India) ವಿರುದ್ಧ ನಡೆಯುತ್ತಿರುವ ವಿಶ್ವಕಪ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು (Australia) 49.3 ಓವರ್‌ಗಳಲ್ಲಿ 199 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಭಾರತಕ್ಕೆ 200 ರನ್‌ಗಳ ಗುರಿ ನೀಡಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಆಸೀಸ್‌ ಸ್ಪಿನ್‌ ಪಿಚ್‌ನಲ್ಲಿ ರನ್‌ ಕದಿಯಲು ತಿಣುಕಾಡಿತು. ಭಾರತದ ಸ್ಪಿನ್‌ ಮಾಂತ್ರಿಕರ ದಾಳಿ ಹೊರತಾಗಿಯೂ 199 ರನ್‌ ಗಳಿಸಿ, ಟೀಂ ಇಂಡಿಯಾಕ್ಕೆ (Team India) 200 ರನ್‌ಗಳ ಗುರಿ ನೀಡಿತು. ಇದನ್ನೂ ಓದಿ: ಪ್ರಧಾನಿ ಮೋದಿ ಹತ್ಯೆ, ಮೋದಿ ಸ್ಟೇಡಿಯಂ ಸ್ಫೋಟ ಬೆದರಿಕೆ – ಮುಂಬೈ ಪೊಲೀಸರಿಗೆ ಸಂದೇಶ

    ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್‌ ವಾರ್ನರ್‌ ಹಾಗೂ ಮಚೆಲ್‌ ಮಾರ್ಷ್‌ ಜೋಡಿ ಉತ್ತಮ ಆರಂಭ ನೀಡುವಲ್ಲಿ ವಿಫಲವಾಯಿತು. 2.2 ಓವರ್‌ನಲ್ಲೇ 5 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡ ಆಸೀಸ್‌ ಸಂಕಷ್ಟಕ್ಕೀಡಾಯಿತು. ಈ ವೇಳೆ 2ನೇ ವಿಕೆಟ್‌ಗೆ ಡೇವಿಡ್‌ ವಾರ್ನರ್‌ ಮತ್ತು ಸ್ಟೀವ್‌ ಸ್ಮಿತ್‌ (Steve Smith) ಜೋಡಿ, 85 ಎಸೆತಗಳಲ್ಲಿ 69 ರನ್‌ ಹಾಗೂ ಸ್ಟೀವ್‌ ಸ್ಮಿತ್‌ ಮತ್ತು ಮಾರ್ನಸ್‌ ಲಾಬುಶೇನ್‌ ಜೋಡಿ 64 ಎಸೆತಗಳಲ್ಲಿ 36 ರನ್‌ಗಳ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿತ್ತು. ಈ ವೇಳೆ ಟೀಂ ಇಂಡಿಯಾ ಸ್ಪಿನ್ನರ್‌ಗಳು ಆಸೀಸ್‌ ಅಗ್ರ ಕ್ರಮಾಂಕದ ಬ್ಯಾಟರ್‌ಗಳನ್ನ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಆಸೀಸ್‌ 49.3 ಓವರ್‌ಗಳಲ್ಲಿ 199 ರನ್‌ಗಳಿಗೆ ಸರ್ವಪತನ ಕಂಡಿತು.

    ಆಸೀಸ್‌ ಪರ ಡೇವಿಡ್‌ ವಾರ್ನರ್‌ 41 ರನ್‌ (52 ಎಸೆತ, 6 ಬೌಂಡರಿ), ಸ್ಟೀವ್‌ ಸ್ಮಿತ್‌ 46 ರನ್‌ (71 ಎಸೆತ 5 ಬೌಂಡರಿ), ಮಾರ್ನಸ್‌ ಲಾಬುಶೇನ್‌ 27 ರನ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌ 15 ರನ್‌, ಕ್ಯಾಮರೂನ್‌ ಗ್ರೀನ್‌ 8 ರನ್‌, ಪ್ಯಾಟ್‌ ಕಮ್ಮಿನ್ಸ್‌ (Pat Cummins) 15 ರನ್‌, ಮಿಚೆಲ್‌ ಸ್ಟಾರ್ಕ್‌ 28 ರನ್‌, ಆಡಂ ಝಂಪಾ 6 ರನ್‌, ಜೋಶ್ ಹ್ಯಾಜಲ್‌ವುಡ್‌ 1 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರೆ, ಮಿಚೆಲ್‌ ಮಾರ್ಷ್‌ ಹಾಗೂ ಅಲೆಕ್ಸ್‌ ಕ್ಯಾರಿ ಶೂನ್ಯಕ್ಕೆ ನಿರ್ಗಮಿಸಿದರು. ಇದನ್ನೂ ಓದಿ: Asian Games 2023: ಏಷ್ಯನ್‌ ಗೇಮ್ಸ್‌ನಲ್ಲೂ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ಸಾತ್ವಿಕ್‌ಸಾಯಿರಾಜ್, ಚಿರಾಗ್‌ ಜೋಡಿ

    ಜಡೇಜಾ ಸ್ಪಿನ್‌ ಜಾದು: ಟೀಂ ಇಂಡಿಯಾ ಪರ ಬೌಲಿಂಗ್‌ನಲ್ಲಿ ಮೋಡಿ ಮಾಡಿದ ರವೀಂದ್ರ ಜಡೇಜಾ 10 ಓವರ್‌ಗಳಲ್ಲಿ 28 ರನ್‌ ನೀಡಿ 3 ವಿಕೆಟ್‌ ಕಿತ್ತರೆ, ಜಸ್ಪ್ರೀತ್‌ ಬುಮ್ರಾ ಹಾಗೂ ಕುಲ್ದೀಪ್‌ ಯಾದವ್‌ ತಲಾ 2 ವಿಕೆಟ್‌, ಹಾರ್ದಿಕ್‌ ಪಾಂಡ್ಯ, ರವಿಚಂದ್ರನ್‌ ಅಶ್ವಿನ್‌ ಹಾಗೂ ಮೊಹಮ್ಮದ್‌ ಸಿರಾಜ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶುಕ್ರವಾರದಿಂದ ಭಾರತ-ಆಸೀಸ್‌ ಏಕದಿನ ಸರಣಿ ಆರಂಭ; ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

    ಶುಕ್ರವಾರದಿಂದ ಭಾರತ-ಆಸೀಸ್‌ ಏಕದಿನ ಸರಣಿ ಆರಂಭ; ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

    – ಎರಡು ಪಂದ್ಯಗಳಿಗೆ ಕೆ.ಎಲ್ ರಾಹುಲ್ ನಾಯಕ, ಜಡೇಜಾ ಉಪನಾಯಕ

    ಮುಂಬೈ: 2023ರ ಏಕದಿನ ಏಷ್ಯಾಕಪ್  (Asia Cup 2023) ಮುಡಿಗೇರಿಸಿಕೊಂಡ ಭಾರತ ತಂಡ ಇದೀಗ ವಿಶ್ವಕಪ್‌ಗೂ (WorldCup) ಮುನ್ನ ಆಸ್ಟ್ರೇಲಿಯಾ (Australia) ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕಾದಾಟ ನಡೆಸಲಿದೆ.

    ಸೆಪ್ಟೆಂಬರ್ 22ರಂದು ಮೊದಲ ಪಂದ್ಯ ಮೊಹಾಲಿಯಲ್ಲಿ, ಸೆಪ್ಟೆಂಬರ್ 24ರಂದು 2ನೇ ಪಂದ್ಯ ಇಂದೋರ್‌ನಲ್ಲಿ ಹಾಗೂ ಸೆಪ್ಟೆಂಬರ್ 27ರಂದು ಅಂತಿಮ ಪಂದ್ಯ ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಪ್ರತಿ ಪಂದ್ಯವು ಮಧ್ಯಾಹ್ನ 1:30 ಗಂಟೆಗೆ ಆರಂಭವಾಗಲಿದೆ. ಇದನ್ನೂ ಓದಿ: ಏಷ್ಯನ್ ಗೇಮ್ಸ್: ಭಾರತ-ಮಲೇಷ್ಯಾ ಪಂದ್ಯ ರದ್ದು, ಕ್ವಾರ್ಟರ್ ಫೈನಲ್‍ಗೆ ಜಿಗಿದ ಟೀಂ ಇಂಡಿಯಾ

    ಈ ಸರಣಿಯ ನಿಮಿತ್ತ ಅಜಿತ್ ಅಗರ್ಕರ್ ಸಾರಥ್ಯದ ಬಿಸಿಸಿಐ (BCCI) ಅಯ್ಕೆ ಸಮಿತಿಯು ಬಲಿಷ್ಠ ತಂಡವನ್ನ ಆಯ್ಕೆ ಮಾಡಿದ್ದು, ಮೊದಲೆರಡು ಪಂದ್ಯಗಳಿಗೆ ಕೆ.ಎಲ್ ರಾಹುಲ್‌ಗೆ (KL Rahul) ನಾಯಕತ್ವ ನೀಡಲಾಗಿದೆ. ರವೀಂದ್ರ ಜಡೇಜಾ ಉಪನಾಯಕನಾಗಿ ಕಣಕ್ಕಿಳಿಯಲಿದ್ದಾರೆ.

    ಅಲ್ಲದೇ ಮೊದಲ ಎರಡು ಪಂದ್ಯಗಳಿಗೆ ಯುವ ಬ್ಯಾಟರ್ ಋತುರಾಜ್ ಗಾಯಕ್ವಾಡ್‌ಗೂ ಅವಕಾಶ ನೀಡಲಾಗಿದೆ. ಜೊತೆಗೆ ಏಕದಿನ ಕ್ರಿಕೆಟ್‌ನಲ್ಲಿ ಸತತ ಫ್ಲಾಪ್ ಪ್ರದರ್ಶನ ಮುಂದುವರಿಸಿರುವ ಸೂರ್ಯಕುಮಾರ್ ಯಾದವ್‌ಗೂ (Suryakumar Yadav) ಅವಕಾಶ ನೀಡಲಾಗಿದೆ. ಆರಂಭಿಕ ಎರಡು ಪಂದ್ಯಗಳಿಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ತಂಡವನ್ನ ಕೆ.ಎಲ್ ರಾಹುಲ್ ಮುನ್ನಡೆಸಲಿದ್ದಾರೆ.

    ಸೆಪ್ಟಂಬರ್ 22 ರಂದು ಉಭಯ ತಂಡಗಳ ನಡುವಣ ಏಕದಿನ ಸರಣಿ ಆರಂಭವಾಗಲಿದೆ. ಅಕ್ಟೋಬರ್ 5 ರಂದು ಆರಂಭವಾಗುವ 2023ರ ಏಕದಿನ ವಿಶ್ವಕಪ್ ಟೂರ್ನಿಗೆ ತಯಾರಿ ನಡೆಸಲು ಈ ಸರಣಿ ಈ ಎರಡೂ ತಂಡಗಳಿಗೆ ಕೊನೆಯ ಅವಕಾಶವಾಗಿದೆ. ಭಾರತದಲ್ಲಿಯೇ 50 ಓವರ್‌ಗಳ ವಿಶ್ವಕಪ್ ನಡೆಯುವ ಕಾರಣ ಆಸ್ಟ್ರೇಲಿಯಾ ತಂಡಕ್ಕೆ ಈ ಸರಣಿ ಅತ್ಯಂತ ಮಹತ್ವವನ್ನ ಪಡೆದುಕೊಂಡಿದೆ. ಇದನ್ನೂ ಓದಿ: ಏಕದಿನ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ನಂ.1 – ಅಗ್ರಸ್ಥಾನಕ್ಕೇರಲು ಭಾರತಕ್ಕಿದೆಯಾ ಚಾನ್ಸ್‌?

    ಅಯ್ಯರ್, ಅಕ್ಷರ್ ಪಟೇಲ್‌ಗೆ ಸ್ಥಾನ
    ಏಷ್ಯಾ ಕಪ್ ಟೂರ್ನಿಯ ವೇಳೆ ಮತ್ತೆ ಗಾಯಕ್ಕೆ ತುತ್ತಾಗಿದ್ದ ಶ್ರೇಯಸ್ ಅಯ್ಯರ್ ಅವರು ಆಸ್ಟ್ರೇಲಿಯಾ ತವರು ಏಕದಿನ ಸರಣಿಯ ಭಾರತ ತಂಡಕ್ಕೆ ಮರಳಿದ್ದಾರೆ. ಇನ್ನು ಬಾಂಗ್ಲಾದೇಶ ವಿರುದ್ಧ ಏಷ್ಯಾ ಕಪ್ ಸೂಪರ್-4ರ ಕೊನೆಯ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಅಕ್ಷರ್ ಪಟೇಲ್ ಅವರು 3ನೇ ಹಾಗೂ ಅಂತಿಮ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ. ಆದ್ರೆ ಅವರ ಫಿಟ್ ಪರಿಣಾಮದ ಮೇಲೆ ಕಣಕ್ಕಿಳಿಯುವುದು ನಿರ್ಧಾರವಾಗುತ್ತದೆ.

    1 ಮತ್ತು 2ನೇ ಏಕದಿನ ಪಂದ್ಯಕ್ಕೆ ಭಾರತ ತಂಡ:
    ಕೆ.ಎಲ್ ರಾಹುಲ್ (ನಾಯಕ ಹಾಗೂ ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪನಾಯಕ), ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶಾರ್ದುಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಆರ್.ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿಧ್ ಕೃಷ್ಣ.

    3ನೇ ODIಗೆ ಭಾರತ ತಂಡ:
    ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದುಲ್ ಠಾಕೂರ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್‌ದೀಪ್ ಯಾದವ್, ಆರ್. ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.

    ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡ:
    ಪ್ಯಾಟ್ ಕಮ್ಮಿನ್ಸ್ (ನಾಯಕ), ಶೇನ್ ಅಬಾಟ್, ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಕ್ಯಾಮರೂನ್ ಗ್ರೀನ್, ಜಾಶ್ ಹೇಝಲ್‌ವುಡ್, ಜಾಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಮಾರ್ನಸ್ ಲಾಬುಶೇನ್, ಮಿಚೆಲ್ ಮಾರ್ಷ್, ಗ್ಲೇನ್ ಮ್ಯಾಕ್ಸ್ವೆಲ್, ತನ್ವೀರ್ ಸಂಘ, ಮ್ಯಾಟ್ ಶಾರ್ಟ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್ ಹಾಗೂ ಆಡಮ್ ಝಂಪಾ.

    ಏಕದಿನ ಸರಣಿ ಎಲ್ಲಿ – ಯಾವಾಗ?
    1ನೇ ಪಂದ್ಯ: ಸೆ.22, 2023- ಮಧ್ಯಾಹ್ನ: 01:30ಕ್ಕೆ (ಮೊಹಾಲಿ)
    2ನೇ ಪಂದ್ಯ: ಸೆ.24, 2023- ಮಧ್ಯಾಹ್ನ: 01:30ಕ್ಕೆ (ಇಂದೋರ್)
    3ನೇ ಏಕದಿನ ಪಂದ್ಯ: ಸೆ.27- ಮಧ್ಯಾಹ್ನ: 01:30ಕ್ಕೆ (ರಾಜ್‌ಕೋಟ್)

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತ ತಂಡ ಪ್ರಕಟ – ಕೆ.ಎಲ್‌ ರಾಹುಲ್‌ಗೆ ನಾಯಕತ್ವ, ಸೂರ್ಯನಿಗೂ ಚಾನ್ಸ್‌

    ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತ ತಂಡ ಪ್ರಕಟ – ಕೆ.ಎಲ್‌ ರಾಹುಲ್‌ಗೆ ನಾಯಕತ್ವ, ಸೂರ್ಯನಿಗೂ ಚಾನ್ಸ್‌

    ಮುಂಬೈ: 2023ರ ಏಕದಿನ ಏಷ್ಯಾಕಪ್‌ (Asia Cup 2023) ಮುಡಿಗೇರಿಸಿಕೊಂಡ ಭಾರತ ತಂಡ ಇದೀಗ ವಿಶ್ವಕಪ್‌ಗೂ (W0rld Cup) ಮುನ್ನ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕಾದಾಟ ನಡೆಸಲಿದೆ.

    ಈ ಸರಣಿಯ ನಿಮಿತ್ತ ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ (BCCI) ಅಯ್ಕೆ ಸಮಿತಿಯು ಭಾರತ ತಂಡವನ್ನು ಸೋಮವಾರ ಪ್ರಕಟಿಸಿದೆ. ಹಿರಿಯ ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ಗೆ ಅವಕಾಶ ನೀಡಿದೆ. ವಿಶೇಷವೆಂದರೆ ಇದರಲ್ಲಿ ಮೊದಲೆರಡು ಪಂದ್ಯಗಳಿಗೆ ಕೆ.ಎಲ್‌ ರಾಹುಲ್‌ಗೆ (KL Rahul) ನಾಯಕತ್ವ ನೀಡಲಾಗಿದ್ದು, ರವೀಂದ್ರ ಜಡೇಜಾ (Ravindra Jadeja) ಉಪನಾಯಕನಾಗಿ ಕಣಕ್ಕಿಳಿಯಲಿದ್ದಾರೆ. ಇದನ್ನೂ ಓದಿ: ಏಕದಿನ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ನಂ.1 – ಅಗ್ರಸ್ಥಾನಕ್ಕೇರಲು ಭಾರತಕ್ಕಿದೆಯಾ ಚಾನ್ಸ್‌?

    ಅಲ್ಲದೇ ಮೊದಲ ಎರಡು ಪಂದ್ಯಗಳಿಗೆ ಯುವ ಬ್ಯಾಟರ್‌ ಋತುರಾಜ್‌ ಗಾಯಕ್ವಾಡ್‌ ಹಾಗೂ ಸೂರ್ಯಕುಮಾರ್‌ ಯಾದವ್‌ಗೂ ಅವಕಾಶ ನೀಡಲಾಗಿದೆ. ಆರಂಭಿಕ ಎರಡು ಪಂದ್ಯಗಳಿಗೆ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಹಾರ್ದಿಕ್‌ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಆರಂಭಿಕ ಎರಡು ಪಂದ್ಯಗಳಲ್ಲಿ ತಂಡವನ್ನು ಕೆ.ಎಲ್‌ ರಾಹುಲ್‌ ಮುನ್ನಡೆಸಲಿದ್ದಾರೆ. ಇದನ್ನೂ ಓದಿ: ಮೊಹಮ್ಮದ್ ಸಿರಾಜ್ ಟೀಂ ಇಂಡಿಯಾದ ಬೆಂಕಿ ಚೆಂಡು – ಜೈಹೋ ಟೀಂ ಇಂಡಿಯಾ ಎಂದ ಡಿಕೆಶಿ

    ಸೆಪ್ಟಂಬರ್‌ 22 ರಂದು ಉಭಯ ತಂಡಗಳ ನಡುವಣ ಏಕದಿನ ಸರಣಿ ಆರಂಭವಾಗಲಿದೆ. ಅಕ್ಟೋಬರ್ 5 ರಂದು ಆರಂಭವಾಗುವ 2023ರ ಏಕದಿನ ವಿಶ್ವಕಪ್‌ ಟೂರ್ನಿಗೆ ತಯಾರಿ ನಡೆಸಲು ಈ ಸರಣಿ ಈ ಎರಡೂ ತಂಡಗಳಿಗೆ ಕೊನೆಯ ಅವಕಾಶವಾಗಿದೆ. ಭಾರತದಲ್ಲಿಯೇ 50 ಓವರ್‌ಗಳ ವಿಶ್ವಕಪ್‌ ನಡೆಯುವ ಕಾರಣ ಆಸ್ಟ್ರೇಲಿಯಾ ತಂಡಕ್ಕೆ ಈ ಸರಣಿ ಅತ್ಯಂತ ಮಹತ್ವವನ್ನ ಪಡೆದುಕೊಂಡಿದೆ.

    ಅಯ್ಯರ್‌, ಅಕ್ಷರ್‌ ಪಟೇಲ್‌ಗೆ ಸ್ಥಾನ


    ಏಷ್ಯಾ ಕಪ್‌ ಟೂರ್ನಿಯ ವೇಳೆ ಮತ್ತೆ ಗಾಯಕ್ಕೆ ತುತ್ತಾಗಿದ್ದ ಶ್ರೇಯಸ್‌ ಅಯ್ಯರ್‌ ಅವರು ಆಸ್ಟ್ರೇಲಿಯಾ ತವರು ಏಕದಿನ ಸರಣಿಯ ಭಾರತ ತಂಡಕ್ಕೆ ಮರಳಿದ್ದಾರೆ. ಇನ್ನು ಬಾಂಗ್ಲಾದೇಶ ವಿರುದ್ಧ ಏಷ್ಯಾ ಕಪ್‌ ಸೂಪರ್‌-4ರ ಕೊನೆಯ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಅಕ್ಷರ್‌ ಪಟೇಲ್‌ ಅವರು 3ನೇ ಹಾಗೂ ಅಂತಿಮ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ. ಆದ್ರೆ ಅವರ ಫಿಟ್‌ ಪರಿಣಾಮದ ಮೇಲೆ ಕಣಕ್ಕಿಳಿಯುವುದು ನಿರ್ಧಾರವಾಗುತ್ತದೆ.

    1 ಮತ್ತು 2ನೇ ಏಕದಿನ ಪಂದ್ಯಕ್ಕೆ ಭಾರತ ತಂಡ:
    ಕೆ.ಎಲ್ ರಾಹುಲ್ (ನಾಯಕ ಹಾಗೂ ವಿಕೆಟ್‌ ಕೀಪರ್‌), ರವೀಂದ್ರ ಜಡೇಜಾ (ಉಪನಾಯಕ), ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶಾರ್ದುಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಆರ್.ಅಶ್ವಿನ್, ಜಸ್ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿಧ್‌ ಕೃಷ್ಣ.

    3ನೇ ಒಡಿಐಗೆ ಭಾರತ ತಂಡ:
    ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದುಲ್ ಠಾಕೂರ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್‌ದೀಪ್ ಯಾದವ್, ಆರ್. ಅಶ್ವಿನ್, ಜಸ್ಪ್ರೀತ್‌ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.

    ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡ:
    ಪ್ಯಾಟ್ ಕಮ್ಮಿನ್ಸ್ (ನಾಯಕ), ಶೇನ್‌ ಅಬಾಟ್, ಅಲೆಕ್ಸ್ ಕ್ಯಾರಿ, ನಾಥನ್‌ ಎಲ್ಲಿಸ್, ಕ್ಯಾಮರೂನ್‌ ಗ್ರೀನ್, ಜಾಶ್ ಹೇಝಲ್‌ವುಡ್, ಜಾಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಮಾರ್ನಸ್ ಲಾಬುಶೇನ್‌, ಮಿಚೆಲ್ ಮಾರ್ಷ್, ಗ್ಲೇನ್‌ ಮ್ಯಾಕ್ಸ್‌ವೆಲ್, ತನ್ವೀರ್ ಸಂಘ, ಮ್ಯಾಟ್ ಶಾರ್ಟ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್ ಹಾಗೂ ಆಡಮ್ ಝಂಪಾ.

    ಏಕದಿನ ಸರಣಿ ಎಲ್ಲಿ – ಯಾವಾಗ?
    1ನೇ ಪಂದ್ಯ: ಸೆ.22, 2023- ಮಧ್ಯಾಹ್ನ: 01:30ಕ್ಕೆ (ಮೊಹಾಲಿ)
    2ನೇ ಪಂದ್ಯ: ಸೆ.24, 2023- ಮಧ್ಯಾಹ್ನ: 01:30ಕ್ಕೆ (ಇಂದೋರ್‌)
    3ನೇ ಏಕದಿನ ಪಂದ್ಯ: ಸೆ.27- ಮಧ್ಯಾಹ್ನ: 01:30ಕ್ಕೆ (ರಾಜ್‌ಕೋಟ್‌)

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • WTC Final: 3ನೇ ದಿನದಲ್ಲಿ ಜಡೇಜಾ ಜಾದು – ಆಸ್ಟ್ರೇಲಿಯಾಕ್ಕೆ 296 ರನ್‌ಗಳ ಮುನ್ನಡೆ

    WTC Final: 3ನೇ ದಿನದಲ್ಲಿ ಜಡೇಜಾ ಜಾದು – ಆಸ್ಟ್ರೇಲಿಯಾಕ್ಕೆ 296 ರನ್‌ಗಳ ಮುನ್ನಡೆ

    ಲಂಡನ್‌: ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ (WTC Final) ಪಂದ್ಯದ 3ನೇ ದಿನದಾಟದಲ್ಲಿ ಭಾರತದ ಬೌಲರ್‌ಗಳು ಹಿಡಿತ ಸಾಧಿಸಿದ್ದಾರೆ. ರವೀಂದ್ರ ಜಡೇಜಾ (Ravindra Jadeja), ಉಮೇಶ್‌ ಯಾದವ್‌ ಹಾಗೂ ಮೊಹಮ್ಮದ್‌ ಸಿರಾಜ್‌ ಬೌಲಿಂಗ್‌ ಕಮಾಲ್‌ನಿಂದಾಗಿ ಆಸ್ಟ್ರೇಲಿಯಾದ (Australia) ಟಾಪ್‌ ಬ್ಯಾಟ್ಸ್‌ಮ್ಯಾನ್‌ಗಳು ನೆಲ ಕಚ್ಚಿದ್ದಾರೆ. ಇದರ ಹೊರತಾಗಿಯೂ ಭಾರತ 296 ರನ್‌ಗಳ ಹಿನ್ನಡೆಯಲ್ಲಿದೆ.

    2ನೇ ದಿನದ ಅಂತ್ಯಕ್ಕೆ 38 ಓವರ್‌ಗಳಲ್ಲಿ 151 ರನ್‌ ಗಳಿಗೆ 5 ವಿಕೆಟ್‌ ಕಳೆದುಕೊಂಡಿದ್ದ ಭಾರತ 3ನೇ ದಿನ ಅಜಿಂಕ್ಯಾ ರಹಾನೆ ಹಾಗೂ ಆಲ್‌ರೌಂಡರ್‌ ಶಾರ್ದೂಲ್‌ ಬ್ಯಾಟಿಂಗ್‌ ನೆರವಿನಿಂದ 296 ರನ್‌ ಗಳಿಸುಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: ಆಸೀಸ್‌ ಮಾರಕ ಬೌಲಿಂಗ್‌ಗೆ ಟಾಪ್‌ ಬ್ಯಾಟರ್‌ಗಳು ಪಲ್ಟಿ – 318 ರನ್‌ಗಳ ಹಿನ್ನಡೆಯಲ್ಲಿ ಭಾರತ

    3ನೇ ದಿನದ ಇನ್ನಿಂಗ್ಸ್‌ ಆರಂಭಿಸಿದ ಅಜಿಂಕ್ಯಾ ರಹಾನೆ (Ajinkya Rahane) ಹಾಗೂ ಶ್ರೀಕಾರ್‌ ಭರತ್‌ ಜೋಡಿ ಉತ್ತಮ ರನ್‌ ಕಲೆಹಾಕುವಲ್ಲಿ ವಿಫಲವಾಯಿತು. ಭರತ್‌ 5 ರನ್‌ ಗಳಿಸಿ ಔಟಾದರು. ನಂತರ ಜೊತೆಗೂಡಿದ ಶಾರ್ದೂಲ್‌ ಠಾಕೂರ್‌ (Shardul Thakur) ಹಾಗೂ ರಹಾನೆ ಜೋಡಿ 7ನೇ ವಿಕೆಟ್‌ಗೆ 145 ಎಸೆತಗಳಲ್ಲಿ 109 ರನ್‌ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ರಹಾನೆ 89 ರನ್‌ (129 ಎಸೆತ, 11 ಬೌಂಡರಿ, 1 ಸಿಕ್ಸರ್‌), ಶಾರ್ದೂಲ್‌ ಠಾಕೂರ್‌ 51 ರನ್‌ (109 ಎಸೆತ, 6 ಬೌಂಡರಿ) ಗಳಿಸಿ ಔಟಾದರು. ಕೊನೆಯಲ್ಲಿ ಬೌಲರ್‌ಗಳ ಉತ್ತಮ ಪ್ರದರ್ಶನವಿಲ್ಲದೇ ಭಾರತ 69.4 ಓವರ್‌ಗಳಲ್ಲಿ 296 ರನ್‌ಗಳಿಗೆ ಆಲೌಟ್‌ ಆಯಿತು.

    ಇನ್ನೂ ತನ್ನ 2ನೇ ಇನ್ನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾದ ಟಾಪ್‌ ಬ್ಯಾಟರ್‌ಗಳು ಭಾರತೀಯ ಬೌಲರ್‌ಗಳ ದಾಳಿಗೆ ಮಕಾಡೆ ಮಲಗಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಅಬ್ಬರಿಸಿದ ಸ್ಟೀವ್‌ ಸ್ಮಿತ್‌ ಹಾಗೂ ಟ್ರಾವಿಸ್‌ ಹೆಡ್‌ ಜಡೇಜಾ ಸ್ಪಿನ್‌ ದಾಳಿಗೆ ವಿಕೆಟ್‌ ಒಪ್ಪಿಸಿದರು. ಅಂತಿಮವಾಗಿ 3ನೇ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ 44 ಓವರ್‌ಗಳಲ್ಲಿ 4 ಪ್ರಮುಖ ವಿಕೆಟ್‌ ಕಳೆದುಕೊಂಡು 123 ರನ್‌ ಗಳಿಸಿದೆ.

    ಉಸ್ಮಾನ್‌ ಖವಾಜ 13 ರನ್‌, ಸ್ಟೀವ್‌ ಸ್ಮಿತ್‌ (Steve Smith) 34 ರನ್‌, ಟ್ರಾವಿಸ್‌ ಹೆಡ್‌ (Travis Head) 18 ರನ್‌ ಹಾಗೂ ಡೇವಿಡ್‌ ವಾರ್ನರ್‌ ಕೇವಲ 1 ರನ್‌ ಗಳಿಸಿ ಔಟಾದರು. ಮಾರ್ಕಸ್‌ ಲಾಬುಶೇನ್‌ 41 ರನ್‌ (118 ಎಸೆತ, 3 ಬೌಂಡರಿ), ಕ್ಯಾಮರೂನ್‌ ಗ್ರೀನ್‌ 7 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದು, ಶನಿವಾರ ಬ್ಯಾಟಿಂಗ್‌ ಮುಂದುವರಿಸಲಿದ್ದಾರೆ. ಇದನ್ನೂ ಓದಿ: ಮೊಬೈಲ್ ಆ್ಯಪ್ ಬಳಕೆದಾರರಿಗೆ ಗುಡ್‌ನ್ಯೂಸ್ ಕೊಟ್ಟ Hotstar – ವಿಶ್ವಕಪ್, ಏಷ್ಯಾಕಪ್ ಟೂರ್ನಿ ವೀಕ್ಷಣೆ ಫ್ರೀ

    2ನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶಿಸಿದ ರವೀಂದ್ರ ಜಡೇಜಾ 2 ಪ್ರಮುಖ ವಿಕೆಟ್‌ ಕಿತ್ತರೆ, ಸಿರಾಜ್‌ ಹಾಗೂ ಉಮೇಶ್‌ ಯಾದವ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಸಂಕ್ಷಿಪ್ತ ಸ್ಕೋರ್‌
    ಮೊದಲ ಇನ್ನಿಂಗ್ಸ್‌ ಆಸ್ಟ್ರೇಲಿಯಾ – 469/10
    ಮೊದಲ ಇನ್ನಿಂಗ್ಸ್‌ ಭಾರತ – 296/10

  • WTCಗೂ ಮುನ್ನವೇ ನಂ.1 ಪಟ್ಟಕ್ಕೇರಿದ ಭಾರತ

    WTCಗೂ ಮುನ್ನವೇ ನಂ.1 ಪಟ್ಟಕ್ಕೇರಿದ ಭಾರತ

    ದುಬೈ: ಐಸಿಸಿ (ICC) ವಿಶ್ವ ಟೆಸ್ಟ್ ರ‍್ಯಾಂಕಿಗ್‌ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡ (Team India) ಆಸ್ಟ್ರೇಲಿಯಾ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ.

    ಜೂನ್‌ 7 ರಿಂದ 11ರ ವರೆಗೆ ಲಂಡನ್‌ನಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ನಡೆಯಲಿದೆ. ಡಬ್ಲ್ಯೂಟಿಸಿಗೆ ಕೆಲವೇ ದಿನಗಳು ಬಾಕಿಯಿರುವ ಹೊತ್ತಿನಲ್ಲೇ ಭಾರತ ಕ್ರಿಕೆಟ್ ತಂಡ ಟೆಸ್ಟ್ ರ‍್ಯಾಂಕಿಗ್‌ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. ಇದನ್ನೂ ಓದಿ: ಲಂಕಾ ವಿರುದ್ಧ ಕಿವೀಸ್‌ಗೆ ರೋಚಕ ಜಯ – 2ನೇ ಬಾರಿ WTC ಫೈನಲ್‌ಗೆ ಭಾರತ

    ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮುಕ್ತಾಯವಾದ ಒಂದು ವಾರಗಳ ನಂತರ ಇಂಗ್ಲೆಂಡ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ನಡೆಯಲಿದೆ.

    ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ. ಈವರೆಗೆ ಆಸ್ಟ್ರೇಲಿಯಾ ತಂಡವೇ ಟೆಸ್ಟ್ ಮಾದರಿಯಲ್ಲಿ ನಂ.1 ತಂಡ ಎನಿಸಿಕೊಂಡಿತ್ತು. ಆದರೀಗ ಈಗ ಭಾರತ ಆಸ್ಟ್ರೇಲಿಯಾವನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ. ಮೇ 2 ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಬಿಡುಗಡೆ ಮಾಡಿದ ರ‍್ಯಾಂಕಿಗ್‌ ಪಟ್ಟಿಯಲ್ಲಿ ಭಾರತಕ್ಕೆ ನಂ.1 ಸ್ಥಾನ ದೊರೆತಿದೆ. ಇದನ್ನೂ ಓದಿ: WTCಗೆ ಟೀಂ ಇಂಡಿಯಾ ಆಯ್ಕೆ ಪ್ರಕಟ – ರಹಾನೆ ಇನ್‌, ಸೂರ್ಯಕುಮಾರ್‌ ಔಟ್‌

    ಟೀಂ ಇಂಡಿಯಾ ಫೈನಲ್‌ ಪ್ರವೇಶಿಸಿದ್ದು ಹೇಗೆ?
    ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಭಾರತ 3-0 ಅಥವಾ 3-1 ಅಂತರದಲ್ಲಿ ಗೆಲ್ಲಬೇಕಾಗಿತ್ತು. ಆದ್ರೆ ಭಾರತ 2-1 ರಲ್ಲಿ ಮುನ್ನಡೆ ಸಾಧಿಸಿತ್ತು. ಅಹಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲುವು ಅಗತ್ಯವಿತ್ತು. ಅಂತಿಮ ಪಂದ್ಯ ಡ್ರಾ ನಲ್ಲಿ ಅಂತ್ಯಗೊಂಡಿದ್ದರಿಂದ ಫೈನಲ್‌ ಪ್ರವೇಶಿಸುವ ಹಾದಿ ಕಠಿಣವಾಗಿತ್ತು.

    ಮತ್ತೊಂದೆಡೆ ಶ್ರೀಲಂಕಾ ತಂಡ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲು ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಅಗತ್ಯವಿತ್ತು. ಆದರೆ ಮೊದಲ ಟೆಸ್ಟ್ ಪಂದ್ಯದಲ್ಲೇ ನ್ಯೂಜಿಲೆಂಡ್ ಎದುರು ಕೇವಲ 2 ವಿಕೆಟ್‌ಗಳ ವಿರೋಚಿತ ಸೋಲು ಅನುಭವಿಸುವ ಮೂಲಕ ಫೈನಲ್ ರೇಸ್‌ನಿಂದ ಹೊರ ಬಿದ್ದಿತು. ಭಾರತ 60.29 ಪಿಸಿಟಿಯೊಂದಿಗೆ (Percentage Of Points Earned) ಫೈನಲ್‌ ಪ್ರವೇಶಿಸಿತು.

    ಐಸಿಸಿ ಟೆಸ್ಟ್ – ಯಾವ ತಂಡಕ್ಕೆ ಎಷ್ಟು ಶ್ರೇಯಾಂಕ
    1. ಭಾರತ – 121
    2. ಆಸ್ಟ್ರೇಲಿಯಾ – 116
    3. ಇಂಗ್ಲೆಂಡ್‌ – 114
    4. ದಕ್ಷಿಣ ಆಫ್ರಿಕಾ – 104
    5. ನ್ಯೂಜಿಲೆಂಡ್ – 100
    6. ಪಾಕಿಸ್ತಾನ – 86
    7. ಶ್ರೀಲಂಕಾ – 84
    8. ವೆಸ್ಟ್ ಇಂಡೀಸ್ – 76
    9. ಬಾಂಗ್ಲಾದೇಶ – 45
    10. ಜಿಂಬಾಬ್ವೆ – 32